ಸೀತಾರಾಮ. ಆರ್. ಶೆಟ್ಟಿ
ಪ್ರಾಧ್ಯಾಪಕ ಸೀತಾರಾಮ.ಆರ್.ಶೆಟ್ಟಿಯವರು,ಮುಂಬಯಿನಗರದ ಕನ್ನಡಿಗರಿಗೆ ಚಿರಪರಿಚಿತರಾದ ಒಬ್ಬ ಸರಳ ವ್ಯಕ್ತಿತ್ವದ ಶಿಕ್ಷಕ, ಒಳ್ಳೆಯ ಸಂಘಟಕ. ಕನ್ನಡ ನುಡಿಯಬಗ್ಗೆ, ಕಲೆ, ಸಂಸ್ಕೃತಿಗಳ ಬಗ್ಗೆ ಕಾಳಜಿ ವಹಿಸುವ ವ್ಯಕ್ತಿಯಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಅವರು ಯಕ್ಷಗಾನಕ್ಕೂ ಹೆಚ್ಚಿನ ಪ್ರೋತ್ಸಾಹ ಕೊಡುತ್ತಾರೆ.
ಜನನ, ಬಾಲ್ಯ, ವಿದ್ಯಾಭ್ಯಾಸ ಮತ್ತು ವೃತ್ತಿಜೀವನ
[ಬದಲಾಯಿಸಿ]ಪ್ರಾಧ್ಯಾಪಕ, ಸೀತಾರಾಮ ಆರ್ ಶೆಟ್ಟಿಯವರ ಜನನ, ಈಗಿನ 'ಉಡುಪಿ'ಜಿಲ್ಲೆಯ ’ಇನ್ನ’ಗ್ರಾಮದಲ್ಲಿ ಸನ್, ೧೯೫೨ ರ, ಜೂನ್ ತಿಂಗಳ, ೧೧ ರಂದು ಆಯಿತು. ತಂದೆ, ಇನ್ನ ಬರಿಮಾರು ರಾಜು ಶೆಟ್ಟಿಯವರು. ತಾಯಿ,ಇನ್ನ ಕಾಚೂರು ಪಡುಮನೆ ಕಲ್ಯಾಣಿ ಶೆಟ್ಟಿಯವರು. ಸ್ವಾತಂತ್ರ್ಯೋತ್ತರದ ನೆಹರೂ ಭಾರತದಲ್ಲಿ ಭಾರತದ ಆದರ್ಶಗ್ರಾಮಗಳಲ್ಲೊಂದೆಂದು ಇನ್ನ ಗ್ರಾಮ ಆಯ್ಕೆಯಾಗಿತ್ತು. ಪ್ರಾಥಮಿಕ ಶಿಕ್ಷಣ ಅವರ ತವರೂರಾದ 'ಇನ್ನ ಹೈಯರ್ ಎಲೆಮೆಂಟರಿ ಶಾಲೆ'ಯಲ್ಲಿ ಜರುಗಿತು. ನಂತರ ಮುಂಬಯಿನಗರದ ಉಪನಗರವಾದ, ಮುಲುಂಡ್ ವಿದ್ಯಾಪ್ರಸಾರಕ್ ಶಾಲೆಯಲ್ಲಿ, ಎಸ್.ಎಸ್.ಎಲ್. ಸಿ. ಮುಗಿಸಿ, ಮುಂಬಯಿನ, ವಿದ್ಯಾವಿಹಾರದ ಸೋಮಯ್ಯಾ ಕಾಲೇಜ್ ನಲ್ಲಿ ಅರ್ಥಶಾಸ್ತ್ರದಲ್ಲಿ ಬಿ.ಎ.ಪದವಿ ಗಳಿಸಿದರು. ೧೯೭೫ ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ 'ಕನ್ನಡ ಎಮ್.ಎ.'ಪಡೆದರು. ’ಘಾಟ್ಕೋಪರ್ ಇನ್ಸ್ಟಿ ಟ್ಯೂಟ್ ಆಫ್ ಮೇನೇಜ್ಮೆಂಟ್' ನಿಂದ ’ಪರ್ಸನಲ್ ಮೇನೇಜ್ಮೆಂಟ್ ವಿಷಯದಲ್ಲಿ ಡಿಪ್ಲೊಮ' ಪಡೆದರು. ಇದಾದ ತರುವಾಯ, 'ಸೀತಾರಾಮ ಶೆಟ್ಟಿ'ಯವರು, ತಮ್ಮ ವೃತ್ತಿಜೀವನವನ್ನು 'ಮುಂಬಯಿನ ಹಿಂದೂಜ ಕಾಲೇಜ್', 'ಆರ್,ಜೆ.ಕಾಲೇಜ್', 'ಸೋಮಯ್ಯ ಕಾಲೇಜ್' ಗಳಲ್ಲಿ ಪ್ರಾಧ್ಯಾಪಕರಾಗಿ ದುಡಿದು, ಮುಂದುವರೆಸಿ, ತಮ್ಮ ಸ್ವಂತ ಆಶೀಷ್ ಪ್ರಿಂಟರ್ಸ್ ಎಂಬ 'ಮುದ್ರಣ ಸಂಸ್ಥೆ'ಯನ್ನು ಹುಟ್ಟುಹಾಕಿದರು.
ಒಳ್ಳೆಯ ಸಂಘಟಕರು
[ಬದಲಾಯಿಸಿ]ಪ್ರವೃತ್ತಿ ಸಾಹಿತ್ಯ ರಚನೆ,ಸಂಘಟನೆ ಮತ್ತು ಸಮಾಜಸೇವೆ. ಇವರ ಕಾರ್ಯ ಕ್ಷೇತ್ರದ ವ್ಯಾಪ್ತಿ ವಿಶಾಲವಾಗಿದೆ.
- 'ಕನ್ನಡ ಕಲಾಭಾರತಿಯ ಅಧ್ಯಕ್ಷ',
- 'ಇನ್ನ ಗ್ರಾಮ ಹಿತವರ್ಧಕ ಸಂಘ, ಮುಂಬಯಿನ ಕಾರ್ಯಾಧ್ಯಕ್ಷ',
- 'ಇನ್ನ ದ ಎಂ.ವಿ.ಶಾಸ್ತ್ರಿ ಹೈಸ್ಕೂಲಿನ ಬೆಟರ್ಮೆಂಟ್ ಸಮಿತಿಯ ಮಾಜಿ ಗೌರವ ಅಧ್ಯಕ್ಷ',
- 'ವಿದ್ಯಾಪ್ರಸಾರಕ ಮಂಡಳಿಯ ಕನ್ನಡ ಹೈಸ್ಕೂಲಿನ ಹಳೆವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ',
- 'ಥಾಣೆ ಬಂಟ್ಸ್ ಅಸೋಸಿಯೇಷನ್'
- 'ಜಯ ಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ',
- 'ಕಲಾಜಗತ್ತು ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ',
- 'ಮುಂಬಯಿ ಕರ್ನಾಟಕಸಂಘ',
- 'ಕನ್ನಡ ಸಾಹಿತ್ಯ ಪರಿಷತ್ತು', 'ಮಹಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿ',
- 'ಕನ್ನಡ ಸಂಘ ಮಾಟುಂಗದ ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ',
- ಹಲವಾರು ವರ್ಷಗಳಿಂದ' ಕಲಾಜಗತ್ತು', 'ಮುಲುಂಡ್ ಫ್ರೆಂಡ್ಸ್','ಥಾಣೆ' ಇವುಗಳ ಸಲಹೆಕಾರರಾಗಿ ಕಾರ್ಯರಥರಾಗಿದ್ದಾರೆ.
- ’ಥಾಣೆ ಬಂಟ್ಸ್ ನ ಅಧ್ಯಕ್ಷ,
- 'ಚಿಣ್ಣರ ಬಿಂಬದ ವಿಶ್ವಸ್ಥ ಸಮಾಜಸೇವೆ'ಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
- 'ಬಂಟರ ವಾಣಿ ಪತ್ರಿಕೆ ಯ ಸಂಪಾದಕಮಂಡಳಿಯ ಸದಸ್ಯ',
- 'ಸ್ನೇಹ ಸೌರಭ ಪತ್ರಿಕೆಯ ಪ್ರಧಾನ ಸಂಪಾದಕ',
ಶೆಟ್ಟಿಯವರು ಸಂಪಾದಿಸಿದ ಪತ್ರಿಕೆಗಳು
[ಬದಲಾಯಿಸಿ]ಇದಕ್ಕೆ ಮೊದಲು, ಶೆಟ್ಟಿಯವರು ಸಂಪಾದಿಸಿದ ಕೆಲವು ಪತ್ರಿಕೆಗಳೆಂದರೆ,
- 'ನಿತ್ಯವಾಣಿ '(ದೈನಿಕ),
- 'ಪತ್ರಪುಷ್ಪ'(ಮಾಸಿಕ),
- 'ಹೋಟೆಲ್ ಪತ್ರಿಕೆ'(ಪಾಕ್ಷಿಕ)
ಪ್ರಕಟಿತ ಕೃತಿಗಳು
[ಬದಲಾಯಿಸಿ]- ಒಂದು ಶಿಶುವಿನ ಅಪಹರಣ,
- ಏನ ಹೇಳಲಿ ಅಂಕಣ, (ಕರ್ನಾಟಕ ಮಲ್ಲದಲ್ಲಿ ನಿರಂತರವಾಗಿ ಬರೆದ ಅಂಕಣ)
- ಬರ್ತೀರಾ ನಮ್ಮೂರಿಗೆ, (ಕವನ ಸಂಕಲನ),
- ಧೂಮಕೇತು (ನಾಟಕ)
- ಒಂದು ಶಾಲೆಯ ಕಥೆ(ನೈಜ ಚಿತ್ರಣ),
- ಡಾ.ಸುನೀತಾಶೆಟ್ಟಿಯವರ ಅಭಿನಂದನಾ ಗ್ರಂಥ,’ನಡೆದ ದಾರಿಯ ಹೂಗಳು’,
- ಡಾ.ಜಿ.ಡಿ.ಜೋಶಿಯವರ ಅಭಿನಂದನಾ ಗ್ರಂಥ,’ಸಾರ್ಥಕತೆಯ ಹೆಜ್ಜೆಗುರುತುಗಳು’
- ’ಇನ್ನ ಜಿಲ್ಲ ಪಂಚಾಯತ್ ಮಾದರಿ ಶಾಲೆಯ ಶತಮಾನೋತ್ಸವ ಸ್ಮರಣ ಸಂಚಿಕೆ' 'ಶತಕವೀರ',ಸಂಪಾದಕರು.
- 'ಪೊಲ್ಯ ಲಕ್ಷ್ಮೀನಾರಾಯಾಯಣ ಶೆಟ್ಟಿ ಅಭಿನಂದನ ಗ್ರಂಥ', ’ನಾದಲೋಕ’
ಪುಸ್ತಕ ಪ್ರಕಟಣೆ
[ಬದಲಾಯಿಸಿ]- ಸುಮಾರು ೧೫ ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಪ್ರಶಸ್ತಿ,ಮನ್ನಣೆಗಳು
[ಬದಲಾಯಿಸಿ]- ಉಡುಪಿ ಜಿಲ್ಲಾ ಸಾಹಿತ್ಯ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿ,
ವೈಜಿ ಶೆಟ್ಟಿ ಪ್ರಶಸ್ತಿ
[ಬದಲಾಯಿಸಿ]ಕಳೆದ ೬ ವರ್ಷಗಳಿಂದ ನೀಡಲಾಗುತ್ತಿರುವ ಪ್ರತಿಷ್ಠಿತ ವೈಜಿ ಶೆಟ್ಟಿ ಪ್ರಶಸ್ತಿಯ ಸನ್,೨೦೧೧ ರ, ವೈಜಿ ಶೆಟ್ಟಿ ಪ್ರಶಸ್ತಿಗೆ 'ಪ್ರಾಚಾರ್ಯ ಸೀತಾರಾಮ ಶೆಟ್ಟಿ'ಯವರು ಆಯ್ಕೆಯಾಗಿದ್ದಾರೆ. ಇದನ್ನು 'ಮುಂಬಯಿನ ಬಂಟರ ಸಂಘ'ದಲ್ಲಿ ಡಿಸೆಂಬರ್ ೬ ರಂದು ಜರುಗುವ 'ವಾರ್ಷಿಕ ಮಹಾಸಭೆಯ ಸಂದರ್ಭ'ದಲ್ಲಿ ಪ್ರದಾನಮಾಡಲಾಗುವುದು. ಮೊದಲ ವರ್ಷದಲ್ಲಿ 'ಬಂಟರ ಸಂಘ ನಡೆಸುತ್ತಿರುವ ಹೈಸ್ಕೂಲ್' ಕಾಲೇಜ್ ಗಳಲ್ಲಿ ಹಾಗೂ 'ಬಂಟರ ವಾಣಿಪತ್ರಿಕೆ'ಗೆ ದುಡಿದವರಿಗೆ ಈ 'ಶ್ರೇಷ್ಠ ಪ್ರಶಸ್ತಿ' ದೊರೆತಿತ್ತು. ಇದರ ವಿವರಗಳು ಕೆಳಗೆ ಕಂಡಂತಿವೆ.
- ಮೊದಲನೆಯ ವರ್ಷದಲ್ಲಿ, 'ಬಂಟರ ವಾಣಿಯ ಸ್ಥಾಪಕ ಕಾರ್ಯಾಧ್ಯಕ್ಷ', ಶ್ರೀಧರ ಶೆಟ್ಟಿಯವರಿಗೆ,
- ಎರಡನೆಯ ವರ್ಷದಲ್ಲಿ, 'ಖ್ಯಾತ ಮಹಿಳಾ ಸಾಹಿತಿ', ಶಾಂತ ಸುಧಾಕರ್,
- ಮೂರನೆಯ ವರ್ಷದಲ್ಲಿ, 'ಕರ್ನಾಟಕ ಫ್ರೀನೈಟ್ ಹೈಸ್ಕೂಲ್ ಪ್ರಾಂಶುಪಾಲ', ಸದಾಶಿವ ಶೆಟ್ಟಿ,
- ನಾಲ್ಕನೆಯ ವರ್ಷದಲ್ಲಿ, 'ಬಂಟರ ವಾಣಿಯ ಪ್ರಧಾನ ಸಂಪಾದಕ', ಕೋಡು ಭೋಜ ಶೆಟ್ಟಿ,
- ಐದನೆಯ ವರ್ಷದಲ್ಲಿ, 'ನಿತ್ಯಾನಂದ ನೈಟ್ ಹೈಸ್ಕೂಲಿನ ಪ್ರಾಂಶುಪಾಲ', ಕುಲಕರ್ಣಿ,
ನಿಧನ
[ಬದಲಾಯಿಸಿ]ಸನ್. ೨೦೧೩ ರ, ಆಗಸ್ಟ್, ೨೫ ರ, ರವಿವಾರ, ಪ್ರೊ. ಸೀತಾರಾಮ ಶೆಟ್ಟಿಯವರು ಮುಂಬಯಿನ ಹಿರಿಯ ಸಾಹಿತಿ, ಡಾ. ಜಿ.ಡಿ.ಜೋಶಿಯವರ ೮೦ ವರ್ಷದ ಸಂಭ್ರಮದ ಪ್ರಯುಕ್ತ,' ಡಾ.ಜಿ.ಡಿ.ಜೋಶಿ ೮೦ : ನಾವು ಕಂಡಂತೆ ' ಎಂಬ ಅಭಿನಂದನಾ ಗೃಂಥವನ್ನು ಜೋಶಿ ಪ್ರತಿಷ್ಠಾನದ ವತಿಯಿಂದ ಬಿಡುಗಡೆ ಗೊಳಿಸುವ ಸಮಾರಂಭದಲ್ಲಿ ನಿರತರಾಗಿದ್ದಾಗ, ಸುಮಾರು ೧೧.೩೦ ರ ಹೊತ್ತಿಗೆ ಸೀತಾರಾಮ ಶೆಟ್ಟಿಯವರು ಕುಸಿದು ಬಿದ್ದು ಅಸು ನೀಗಿದರು. ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲು ಮುಲುಂಡ್ ನ ಅಗರ್ವಾಲ್ ಆಸ್ಪತ್ರೆಗೆ ಕೊಂಡೊಯ್ದಾಗ, ವೈದ್ಯರು ಅವರನ್ನು ಮೃತರಾಗಿದ್ದಾರೆ ಎಂದು ಘೋಶಿಸಿದರು. ೬೧ ವರ್ಷ ಹರೆಯದ ಶೆಟ್ಟಿಯವರಿಗೆ ತಮ್ಮ ಹಲವಾರು ಸಂಘಚಟುವಟಿಕೆಗಳನ್ನು ಸಮರ್ಥವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಪಾದರಸದಂತೆ ಸಾರ್ವಜನಿಕ ಸೇವಾಕಾರ್ಯದಲ್ಲಿ ನಿರತರಾಗಿದ್ದರು. ಮೃತರಿಗೆ ಒಬ್ಬ ಮಗ, (ಅವರು ನ್ಯೂಜಿಲೆಂಡ್ ನಲ್ಲಿ ಕೆಲಸದಲ್ಲಿದ್ದಾರೆ) ಮತ್ತು ಒಬ್ಬ ಮಗಳಿದ್ದಾರೆ. ಪತ್ನಿಯವರು ಮೊದಲೇ ತೀರಿಕೊಂಡಿದ್ದರು. ಪ್ರೊ. ಸೀತಾರಾಮ ಆರ್ ಶೆಟ್ಟಿಯವರ ಪಾರ್ಥಿವ ಶರೀರದ ಅಂತಿಮ ಕ್ರಿಯೆಯನ್ನು ಅವರ ಮಗ ನ್ಯೂಜಿಲೆಂಡ್ ನಿಂದ ಬಂದ ತರುವಾಯ ಆಗಸ್ಟ್, ೨೬ ಸೋಮವಾರದಂದು ಸಾಯಂಕಾಲ, ಅಪಾರ ಗೆಳೆಯರು, ಬಂಧುಬಾಂಧವರು ಮತ್ತು ಸಹೃದಯರ ಸಮ್ಮುಖದಲ್ಲಿ ನೆರೆವೇರಿಸಲಾಯಿತು.