ಸುಂಟರಗಾಳಿ
ಗೋಚರ
![](http://upload.wikimedia.org/wikipedia/commons/thumb/3/34/Whirlwind-001.jpg/220px-Whirlwind-001.jpg)
![](http://upload.wikimedia.org/wikipedia/commons/thumb/1/1f/Whirlwind_example.jpg/220px-Whirlwind_example.jpg)
ಸುಂಟರಗಾಳಿಯು ಒಂದು ಹವಾಮಾನ ವಿದ್ಯಮಾನವಾಗಿದೆ. ಇದರಲ್ಲಿ ಬಿಸಿಯಾಗುವಿಕೆ ಹಾಗೂ ಹರಿವಿನ ಪ್ರವಣತೆಯಿಂದ ಸೃಷ್ಟಿಯಾದ ಅಸ್ಥಿರತೆಗಳು ಹಾಗೂ ಕ್ಷೋಭೆಯ ಕಾರಣದಿಂದ ಗಾಳಿಯ ಆವರ್ತವು (ಲಂಬ ದಿಕ್ಕುಗಳಲ್ಲಿ ತಿರುಗುತ್ತಿರುವ ಗಾಳಿಯ ರಚನೆ) ರೂಪಗೊಳ್ಳುತ್ತದೆ. ಸುಂಟರಗಾಳಿಗಳು ವಿಶ್ವಾದ್ಯಂತ ಯಾವುದೇ ಋತುವಿನಲ್ಲಿ ಸಂಭವಿಸುತ್ತವೆ.
ದೊಡ್ಡ ಸುಂಟರಗಾಳಿ
ದೊಡ್ಡ ಸುಂಟರಗಾಳಿಯು ಸೂಪರ್ಸೆಲ್ ಗುಡುಗು ಇರುವ ಬಿರುಗಾಳಿಗಳಿಂದ (ಬಿರುಗಾಳಿಯ ಅತ್ಯಂತ ಶಕ್ತಿಶಾಲಿ ಬಗೆ) ಅಥವಾ ಇತರ ಶಕ್ತಿಶಾಲಿ ಬಿರುಗಾಳಿಗಳಿಂದ ರೂಪಗೊಳ್ಳುತ್ತದೆ. ಬಿರುಗಾಳಿಯು ಗಿರ್ರನೆ ಸುತ್ತಲು ಆರಂಭವಾದಾಗ, ಅವು ಇತರ ಹೆಚ್ಚು ಎತ್ತರದ ಗಾಳಿಗಳೊಂದಿಗೆ ಪ್ರತಿಕ್ರಿಯಿಸಿ, ಲಾಳಿಕೆ ಆಕಾರದಲ್ಲಿ ತಿರುಗುವಂತೆ ಉಂಟುಮಾಡುತ್ತವೆ. ಲಾಳಿಕೆಯ ಮೇಲೆ ಮೋಡವು ರಚನೆಯಾಗಿ, ಅದು ಗೋಚರವಾಗುವಂತೆ ಮಾಡುತ್ತದೆ.