ವಿಷಯಕ್ಕೆ ಹೋಗು

ಸುನೀತಾ ಲಾಕ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುನೀತಾ ಲಕ್ರಾ
Personal information
ಜನನ (1991-06-11) ೧೧ ಜೂನ್ ೧೯೯೧ (ವಯಸ್ಸು ೩೩)
ರಾಜ್‌ಗಂಗ್‌ಪುರ, ಒಡಿಶಾ, ಭಾರತ
ಎತ್ತರ ೧.೫೮ ಮೀ
ತೂಕ ೫೭ ಕೆಜಿ
Playing position ರಕ್ಷಕ
ರಾಷ್ಟ್ರೀಯ ತಂಡ
೨೦೦೯–೨೦೧೯ ಭಾರತ ೧೫೫ (೨)

ಸುನೀತಾ ಲಾಕ್ರಾ (ಜನನ ೧೧ ಜೂನ್ ೧೯೯೧) ಒಬ್ಬರು ಭಾರತೀಯ ಫೀಲ್ಡ್ ಹಾಕಿ ಆಟಗಾರ್ತಿ.[] ಲಕ್ರಾ ಅವರು ಭಾರತದ ಮಹಿಳಾ ರಾಷ್ಟ್ರೀಯ ಫೀಲ್ಡ್ ಹಾಕಿ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ತಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ.[] ೨೦೨೦ ರ ಜನವರಿ ೨ ರಂದು ಹಾಕಿ ಇಂಡಿಯಾ ಮೂಲಕ ಹಾಕಿಯಿಂದ ನಿವೃತ್ತಿಯಾಗುವುದಾಗಿ ಲಕ್ರಾ ಅವರು ಘೋಷಿಸಿದರು.[]

ಆರಂಭಿಕ ಜೀವನ

[ಬದಲಾಯಿಸಿ]

ಲಕ್ರಾ ಅವರ ತಂದೆ ಒಬ್ಬ ರೈತರಾಗಿದ್ದರು. ಲಕ್ರಾ ಅವರನ್ನು ಆರು ವರ್ಷದವಳಾಗಿದ್ದಾಗ ಹಾಕಿ ಕಲಿಯಲು ರೂರ್ಕೆಲಾದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್. ಎ. ಐ.) ಸೇರಲು ಕಳುಹಿಸಿದರು. ಲಕ್ರಾ ಅವರ ತಂದೆ ತಮ್ಮ ಮಗಳಿಗೆ ಹಾಕಿಯಲ್ಲಿ ತರಬೇತಿ ನೀಡಿದರು.[] ಅವರು ಒಡಿಸಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ದೀಪಕ್ ಟೋಪ್ಪೋ ಅವರನ್ನು ವಿವಾಹವಾದರು.[]

ವೃತ್ತಿಜೀವನ

[ಬದಲಾಯಿಸಿ]

ಸುನೀತಾ ಲಕ್ರಾ ಅವರು ೨೦೦೯ ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು ೧೭ ನೇ ಏಷ್ಯನ್ ಗೇಮ್ಸ್ ಮತ್ತು ಮಹಿಳಾ ಹಾಕಿ ವಿಶ್ವ ಲೀಗ್ ರೌಂಡ್ ೨ ತಂಡದ ಭಾಗವಾಗಿದ್ದರು.[] ೨೦೧೫ ರ ಹಾಕ್ಸ್ ಬೇ ಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಪಂದ್ಯವು ಲಕ್ರಾ ಅವರ ೫೦ ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

ಅವರು ತಂಡದಲ್ಲಿ ರಕ್ಷಣಾ ಆಟವನ್ನು ಆಡುತ್ತಿದ್ದರು.[] ೨೦೧೭ ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ, ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಲಕ್ರಾ ತನ್ನ ೧೦೦ ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಪೂರ್ಣಗೊಳಿಸಿದರು.[] ೧೭ನೇ ಏಷ್ಯನ್ ಗೇಮ್ಸ್ ಮತ್ತು ೨೦೧೬ ರ ರಿಯೊ ಒಲಿಂಪಿಕ್ಸ್‌ನಲ್ಲಿ ಗಮನಾರ್ಹ ಪ್ರದರ್ಶನಗಳೊಂದಿಗೆ ಲಕ್ರಾ ಭಾರತೀಯ ಹಾಕಿಯಲ್ಲಿ ಶ್ರೇಯಾಂಕಗಳ ಏಣಿಯನ್ನೇ ಏರಿದರು. ಅವರು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಇದರಲ್ಲಿ ತಂಡವು ಚೀನಾ ವಿರುದ್ಧದ ಅಂತಿಮ ಪಂದ್ಯವನ್ನು ಗೆದ್ದುಕೊಂಡಿತು. ೨೦೧೭ ರ ಆಗಸ್ಟ್‌ನಲ್ಲಿ, ೨೦೧೭ರ ಸೆಪ್ಟೆಂಬರ್ ೫ ರಿಂದ ಪ್ರಾರಂಭವಾಗುವ ಭಾರತದ ಮಹಿಳಾ ರಾಷ್ಟ್ರೀಯ ಫೀಲ್ಡ್ ಹಾಕಿ ತಂಡದ ೧೫ ದಿನಗಳ ಯುರೋಪಿಯನ್ ಪ್ರವಾಸದ ಭಾಗವಾಗಿ ಅವರನ್ನು ಆಯ್ಕೆ ಮಾಡಲಾಯಿತು.[]

೨೦೧೮ ರ ಮೇ ತಿಂಗಳಲ್ಲಿ ಕೊರಿಯಾ ಡೊಂಗ್ಹೆ ನಗರದಲ್ಲಿ ಪ್ರಾರಂಭವಾದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮಹಿಳಾ ಹಾಕಿಯಲ್ಲಿ ನಾಯಕಿಯಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಲಕ್ರಾ ಅವರಿಗೆ ಹಸ್ತಾಂತರಿಸಲಾಯಿತು. ಅವರು ತಂಡವನ್ನು ಎರಡನೇ ಸ್ಥಾನಕ್ಕೆ ಕೊಂಡೊಯ್ದರು.[೧೦]

ಉಲ್ಲೇಖಗಳು

[ಬದಲಾಯಿಸಿ]
  1. Sunita, lakra. "Sunita Lakra: Latest News & Videos, Photos about Sunita Lakra | The Economic Times". The Economic Times. The Economic Times. Retrieved 17 ಮೇ 2017.
  2. Sunita LAKRA. Gold Coast 2018. Retrieved 2 August 2018.
  3. PTI. "Injured India defender Sunita Lakra retires from international hockey". Sportstar (in ಇಂಗ್ಲಿಷ್). Retrieved 2 ಜನವರಿ 2020.
  4. Sarkar, Sujata (25 ಮೇ 2017). "Indian woman hockey player Sunita Lakra idolises former captain Sardar Singh". www.mykhel.com (in ಇಂಗ್ಲಿಷ್).
  5. Lakra, Sunita (29 ಡಿಸೆಂಬರ್ 2018). "Odisha Hockey-player Sunita Lakra ties the knot". Reporters Today. Reporters today. Archived from the original on 21 ಮಾರ್ಚ್ 2023. Retrieved 6 ಫೆಬ್ರವರಿ 2025.
  6. "Asian Champions Trophy 2018: Indian girls script dream return for Sjoerd Marijne with 4–1 thrashing of Japan". 13 ಮೇ 2018. Retrieved 28 ಜುಲೈ 2018.
  7. "Hockey India | Sunita Lakra played her 50th International match against New Zealand yesterday at the Hawke's Bay Cup 2015". hockeyindia.org (in ಅಮೆರಿಕನ್ ಇಂಗ್ಲಿಷ್). Archived from the original on 26 ಆಗಸ್ಟ್ 2017. Retrieved 28 ಜುಲೈ 2018.
  8. "Defender Sunita Lakra completes a century". The Hindu (in Indian English). PTI. 17 ಮೇ 2017. ISSN 0971-751X. Retrieved 28 ಜುಲೈ 2018.
  9. Desk, Odisha Sun Times Editorial. "Five from Odisha in Indian women's hockey team for Europe trip | OdishaSunTimes.com". Archived from the original on 28 ಆಗಸ್ಟ್ 2017. Retrieved 26 ಆಗಸ್ಟ್ 2017. {{cite web}}: |last= has generic name (help)
  10. "Odisha players on cusp of history – Orissa POST". www.orissapost.com (in ಅಮೆರಿಕನ್ ಇಂಗ್ಲಿಷ್). Retrieved 28 ಜುಲೈ 2018.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]