ವಿಷಯಕ್ಕೆ ಹೋಗು

ಸುನೀಲ್ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ
Born
ಸುನೀಲ್ ವೀರಪ್ಪ ಶೆಟ್ಟಿ[]

(1961-08-11) ೧೧ ಆಗಸ್ಟ್ ೧೯೬೧ (ವಯಸ್ಸು ೬೩)
Other namesಅಣ್ಣ
Occupation(s)ನಟ, ಉದ್ಯಮಿ
Years active1992–ರಿಂದ
Spouse

ಮನ ಶೆಟ್ಟಿ (ವಿವಾಹ:1991)

Childrenಅಥಿಯ ಶೆಟ್ಟಿ
ಅಹಾನ್ ಶೆಟ್ಟಿ

ಸುನೀಲ್ ಶೆಟ್ಟಿ, ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಹಾಗೂ ಉದ್ಯಮಿ. ಇವರು ೧೯೬೧ ಆಗಸ್ಟ್ ೧೧ ರಂದು ಮುಲ್ಕಿ, ಮಂಗಳೂರು, ಕರ್ನಾಟಕ, ಭಾರತದಲ್ಲಿ ಜನಿಸಿದ್ದರು. ಇವರ ತಂದೆ ವೀರಪ್ಪ ಶೆಟ್ಟಿ, ಹೋಟೇಲ್ ಉದ್ಯಮಿ.[] ಸುನೀಲ್ ಶೆಟ್ಟಿರವರು ಸಾಮಾನ್ಯವಾಗಿ ಆಕ್ಷನ್ ಚಲನಚಿತ್ರಗಳಲ್ಲಿ ನಟಿಸಿದ್ದರು.[] ಇವರು ಹಿಂದಿ, ಮಲಯಲಂ, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ೧೧೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ವ್ರತ್ತಿ

[ಬದಲಾಯಿಸಿ]

ಸುನೀಲ್ ಶೆಟ್ಟಿ ಚಲನಚಿತಕ್ಕೆ ಪಾದಾರ್ಪಣೆ ೧೯೯೨ರಲ್ಲಿ ದಿವ್ಯಾ ಭಾರತಿಯೊಂದಿಗೆ ಬಲ್ವಾನ್ ಚಿತ್ರದ ಮೂಲಕ ಪ್ರಾರಂಬಿಸಿದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವೊಳ್ಳೆ ಗಳಿಕೆಯನ್ನು ಗಳಿಸಿತು ಹಾಗೂ ಆಕ್ಷನ್ ಹೀರೋ ಅಂತ ಪ್ರಸಿದ್ದರಾದರು. ತದನಂತರ ಅವರು ನಾಯಕನಾಗಿ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ದಿಲ್ವಾಲೆ (1994), ಅಂತ್ (1994), ಮೊಹ್ರಾ (1994), ಗೋಪಿ ಕಿಶನ್ (1994), ಕೃಷ್ಣ (1996), ಸಪುಟ್ (1996), ರಕ್ಷಕ್ (1996), ಬಾರ್ಡರ್ (1997), ಭಾಯಿ (1997), ಹೇರಾ ಫೆರಿ(೨೦೦೦), ಧಡ್ಕನ್ (2000) ಯೆ ತೆರಾ ಘರ್ ಯೆ ಮೇರಾ ಘರ್ (2001), ಮೇನ್ ಹೂ ನಾ (2004) ಹಾಗೂ ದಿ ರೆಡ್ ಅಲರ್ಟ್: ದಿ ವಾರ್ ವಿಥಿನ್ (2010) ಚಿತ್ರಗಳು ಯಶಸ್ವಿಯಾದವು. ೨೦೧೪ರಲ್ಲಿ ಸಂಖ್ಯಾಶಾಸ್ತ್ರದ ಕಾರಣದಿಂದ ಸುನಿಲ್ ಇಂದ ಸುನೀಲ್ ಆದರು.[]

ಶೆಟ್ಟಿಯವರು ೯೦ರ ದಶಕದಲ್ಲಿ ಸಾಮಾನ್ಯವಾಗಿ ನಾಯಕನ ಪಾತ್ರದಲ್ಲಿ ಚಲನಚಿತ್ರ ಮಾಡುತಿದ್ದರು. ೨೦೦೦ರಿಂದ ಬಹು-ನಟರ ಸಿನಿಮದಲ್ಲಿ ನಟಿಸಲು ಆರಂಭಿಸಿದರು. ಇಶಾ ಕೊಪ್ಪಿಕಾರ್ ರವರೋಡನೆ ಅರ್ಜುನ್ ರಾಂಪಾಲ್ ರವರ ಮೊದಲ ಚಿತ್ರ ಪ್ಯಾರ್ ಇಷ್ಕ್ ಔರ್ ಮೊಹಬ್ಬತ್ (೨೦೦೧) ರಲ್ಲಿ ನಟಿಸಿದರು. ಶೆಟ್ಟಿಯವರು 2001 ರಲ್ಲಿ ದಡ್ಕನ್ ಚಲನಚಿತ್ರಕ್ಕೆ ಫಿಲ್ಮ್ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಪಡೆದರು. ಇವರು ಖೇಲ್ - ನೋ ಆರ್ಡಿನರಿ ಗೇಮ್, ರಖ್ತ್ ಮತ್ತು ಭಗಂ ಭಾಗ್ ಚಿತ್ರಗಳನ್ನು ಪಾಪ್ಕಾರ್ನ್ ಮೋಷನ್ ಪಿಕ್ಚರ್ಸ್ ನ ಅಡಿ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಚಲನಚಿತ್ರೇತರ ಕೆಲಸ

[ಬದಲಾಯಿಸಿ]

ದೂರದರ್ಶನ

[ಬದಲಾಯಿಸಿ]

ಸಹರ ೧ ವಾಹಿನಿಯಲ್ಲಿ ಬಿಗ್ಗೆಸ್ಟ್ ಲೂಸರ್ ಜೀತೇಗ ಹಾಗೂ &ಟಿ.ವಿ ಯಲ್ಲಿ ಭಾರತದ ಅಸ್ಲಿ ಚಾಂಪಿಯನ್ ಹೈದಮ್? ಕಾರ್ಯಕ್ರಮವನ್ನು ಆಯೋಜಿಸಿದ್ದರು.[]

ಸೆಲೆಬ್ರಿಟಿ ಕ್ರಿಕೆಟ್ ಲೀಗ್

[ಬದಲಾಯಿಸಿ]

ಸುನೀಲ್ ಶೆಟ್ಟಿಯವರು ಸೆಲೆಬ್ರಿಟಿ ಕ್ರಿಕ್ರೆಟ್ ಲೀಗ್ ನಲ್ಲಿ ಮುಂಬೈ ಹೀರೋಸ್ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಸುನೀಲ್ ಶೆಟ್ಟಿಯವರು ತುಳು ಬಂಟ ಕುಟುಂಬದಲ್ಲಿ ೧೯೬೧, ಆಗಸ್ಟ್ ೧೧ ಮುಲ್ಕಿ, ಮಂಗಳೂರು, ಭಾರತದಲ್ಲಿ ಜನಿಸಿದ್ದರು.[][]

ಅವರು ಮನ ಶೆಟ್ಟಿಯೊಡನೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.[] and Ahan (born 15 January 1996).[೧೦] ಇವರು ಅಥಿಯ ಶೆಟ್ಟಿ ಹಾಗೂ ಅಹಾನ್ ಶೆಟ್ಟಿ. ಅಥಿಯ ಶೆಟ್ಟಿಯವರು ಅವರ ಚಲನಚಿತ್ರ ಪ್ರಯಾಣವನ್ನು ಅದಿತ್ಯ ಪಂಚೊಲಿಯವರ ಮಗ ಸೂರಜ್ ಪಂಚೊಲಿಯೊಡನೆ ಹೀರೊ(೨೦೧೫) ಚಿತ್ರದಂದ ಆರಂಬಿಸಿದರು.

ಮನ ಶೆಟ್ಟಿ ಕಡಿಮೆ ಸವಲತ್ತಿನ ಮಕ್ಕಳಿಗೊಸ್ಕರ ಯನ್.ಜಿ.ಯೊ ವನ್ನು ನಡೆಸುತಿದ್ದಾರೆ.[೧೧] ಸುನೀಲ್ ಅವರು ಕಿಕ್ ಬೊಕ್ಸಿಂಗ್ ನಲ್ಲಿ ಕಪ್ಪು ಬೆಲ್ಟ್ ಅನ್ನು ಪಡೆದಿದ್ದಾರೆ.[೧೨] ಅವರು ಬಟ್ಟೆ ಅಂಗಡಿ ಮತ್ತು ಉಡುಪಿಯ ಖಾದ್ಯವನ್ನು ನೀಡುವ ಹೋಟೆಲ್ ಹೊಂದಿದ್ದಾರೆ.[೧೩]

ಸುನೀಲ್ ಶೆಟ್ಟಿಯವರ ಮಗ ಅಹಾನ್ ಶೆಟ್ಟಿ ಸಾಜಿದ್ ನದಿದ್ವಾಲಾರೊಡನೆ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.[೧೪]

ಪ್ರಶಸ್ತಿಗಳು

[ಬದಲಾಯಿಸಿ]

೨೦೦೧:ಫಿಲ್ಮ್ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ-- ದಡ್ಕನ್.

೨೦೦೧: ಜೀ ಸಿನೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ-- ದಡ್ಕನ್.

೨೦೦೫: ಜಿಫ ಅತ್ಯುತ್ತಮ ಖಳನಾಯಕ ಪ್ರಶಸ್ತಿ-- ಮೈ ಹೂ ನಾ.

೨೦೦೫: ರಾಜಿವ್ ಗಾಂದಿ ಪ್ರಶಸ್ತಿ.

೨೦೦೮: ಸೈಫ಼್ ಅತ್ಯುತ್ತಮ ನಟ ಪ್ರಶಸ್ತಿ-- ರೆಡ್ ಅಲೆರ್ಟ್: ದಿ ವಾರ್ ವಿಧಿನ್.


ಉಲ್ಲೇಖ

[ಬದಲಾಯಿಸಿ]
  1. "Sunil Shetty's father Virappa Shetty passes away". http://mumbaimirror.indiatimes.com. Bennett, Coleman & Co. Ltd. Retrieved 1 March 2017. {{cite web}}: External link in |website= (help)
  2. https://mumbaimirror.indiatimes.com/entertainment/bollywood/suniel-shettys-father-virappa-shetty-passes-away/articleshow/57406652.cms
  3. "ಆರ್ಕೈವ್ ನಕಲು". Archived from the original on 2014-08-12. Retrieved 2018-03-22.
  4. http://webcache.googleusercontent.com/search?q=cache:http://www.rediff.com/movies/2001/nov/13num.htm&gws_rd=cr&dcr=0&ei=4IumWpa1NYHyvAT__aOwDw
  5. "The Telegraph – Calcutta (Kolkata) – Entertainment – Host with the most". telegraphindia.com. Archived from the original on 2018-08-01. Retrieved 2018-03-22.
  6. "Sunil Shetty – Celebrity Cricket League 2011 Photo #335". bollywoodmantra.com. Archived from the original on 2020-07-14. Retrieved 2018-03-22.
  7. Violet Pereira (29 March 2011). "Mangalore: A tete-a-tete with Suniel Shetty". Mangalorean.com. Archived from the original on 16 ನವೆಂಬರ್ 2011. Retrieved 16 December 2011.
  8. TNN (20 December 2002). "World Bunts meet begins Friday". The Times of India. Archived from the original on 21 ಮೇ 2013. Retrieved 16 December 2011.
  9. KBR, Upala (8 November 2010). "Suniel Shetty had a swell Diwali". Mid-Day. Retrieved 8 March 2014.{{cite web}}: CS1 maint: numeric names: authors list (link)
  10. KBE, Upala (3 January 2011). "Suniel Shetty, son Ahaan hit Bangkok". Mid-Day. Retrieved 8 March 2014.{{cite web}}: CS1 maint: numeric names: authors list (link)
  11. "I'm more than just a celeb wife: Mana Shetty". mid-day.com.
  12. IANS (4 January 2011). "Suniel Shetty returns to action". Hindustan Times. Archived from the original on 21 ಜನವರಿ 2011. Retrieved 27 January 2011. A Black Belt in kick boxing, he kept the decade packed with more of muscle power in outings like Waqt Hamara Hai, Bhai, Border, Mohra, Suraksha, Shastra, Rakshak, Krishna, Aakrosh and Dus, to name a few.
  13. "NDTV Movies". ndtv.com. Archived from the original on 2015-07-17. Retrieved 2018-03-22.
  14. "Ahan Shetty goes to London for special training for his debut film". Hindustantimes. 29 Nov 2016. Retrieved 28 June 2017.