ಸುಪಾರ್ಶ್ವನಾಥ ಸ್ವಾಮಿ
ವೈರಾಗ್ಯ
[ಬದಲಾಯಿಸಿ]ಪೂರ್ವವಿದೇಹದ ಸೀತಾನದಿಯ ಉತ್ತರ ದಡದಲ್ಲಿ ಸುಕಚ್ಛವೆಂಬ ದೇಶವಿದೆ. ಅಲ್ಲಿ ರಾಜ್ಯವಾಳುತ್ತಿದ್ದ ನಂದಿಕ್ಷೀಣ ರಾಜನಿಗೆ ವೈರಾಗ್ಯ ಉದಿಸಲು ತನ್ನ ಮಗ ಧನಪತಿಗೆ ರಾಜ್ಯವನ್ನು ಕೊಟ್ಟು ಸನ್ಯಾಸಿಯಾದನು.
ಪದವಿ
[ಬದಲಾಯಿಸಿ]ಸಮಾಧಿಮರಣದಿಂದ ಆತನಿಗೆ ಸುಭದ್ರವೆಂಬ ಗ್ರೈವೇಯಕ ವಿಮಾನದಲ್ಲಿ ಅಹಮಿಂದ್ರ ಪದವಿ ದೊರೆಯಿತು.ಪುಣ್ಯಸುಖವನ್ನೆಲ್ಲ ಅನುಭವಿಸಿ ಆತನು ಕಳೀನಗರದಲ್ಲಿ ವೃಷಭಸ್ವಾಮಿಯ ವಂಶದವನಾದ ಸುಪ್ರತಿಷ್ಠ ಮಹರಾಜನ ರಾಣಿ ಪೃಥೀಷೇಣಾ ದೇವಿಯ ಗರ್ಭಕ್ಕೆ ಭಾದ್ರಪದ ಶುಕ್ಲ ಷಷ್ಠಿಯ ದಿನ ವಿಶಾ ನಕ್ಷತ್ರದಂದು ಪ್ರವೇಶಿಸಿದನು.
ಜನನ
[ಬದಲಾಯಿಸಿ]ಜ್ಯೇಷ್ಗಠ ಶುಕ್ಲ ದ್ವಾದಶಿಯಂದು ಚರಮ ದೇಹಧಾರಿಯಾಗಿ ಆತನು ಜನಿಸಿದ.ಜನ್ಮಾಭಿಷೇಕವನ್ನು ನೆರವೇರಿಸಿದ ದೇವೇಂದ್ರನು ಆತನಿಗೆ ಸುಪಾರ್ಶ್ವನೆಂದು ನಾಮಕರಣ ಮಾಡಿದನು. ಇದು ನಡೆದುದು ಪದ್ಮಪ್ರಭತೀರ್ಥಂಕರನು ಮುಕ್ತನಾದ ಒಂಭತ್ತು ಕೋಟಿ ಸಹಸೃ ಸಾಗರ ವರ್ಷಗಳಾದಮೇಲೆ. ನೀಲವರ್ನನಾದ ಈತನ ಆಯಸ್ಸು ಎರಡುನೂರು ಬಿಲ್ಲುಗಳಷ್ಟು ಎತ್ತರವಾಗಿದ್ದನು. [೧]
ಪರಿನಿಷ್ಕ್ರಮಣಕಲ್ಯಾಣ
[ಬದಲಾಯಿಸಿ]ಬಹುಕಾಲ ದಕ್ಷತೆಯಿಂದ ಧರ್ಮಪರನಾಗಿ ರಾಜ್ಯಭಾರವನ್ನು ನಡೆಸಿದ ಈತನಿಗೆ ಖತು ಪರಿವರ್ತನೆಯನ್ನು ಕಂಡುವೈರಾಗ್ಯವನ್ನು ದ್ರಢಪಡಿಸಿದ ಮೇಲೆ ದೇವತೆಗಳು ಆತನನ್ನು ಮನೋಗತಿ ಯೆಂಬ ಪಲ್ಲಕ್ಕಿಯಲ್ಲಿ ಸಹೇತುಕ ಎಂಬ ವನಕ್ಕೆ ಕರೆದೊಯ್ದು ಪರಿನಿಷ್ಕ್ರಮಣಕಲ್ಯಾಣ ನೆರವೇರಿಸಿದರು. ದೀಕ್ಷೆವಹಿಸಿದ ಆತನಿಗೆ ಮನಃಪರ್ಯಾಯ ಜ್ಙಾನವಾದ ಮೇಲೆ, ಸೋಮಖೇಟ ನಗರದ ಮಹೇಂದ್ರದತ್ತ ರಾಜನಿಂದ ಆಹಾರ ದಾನ ದೊರೆಯಿತು.
ವೈರಾಗ್ಯ ಜೀವನ
[ಬದಲಾಯಿಸಿ]ಆನಂತರ ಮೌನಧಾರಿನಿಯಾದ ಸುಪಾರ್ಶ್ವ ಸ್ವಾಮಿಯ ಒಂಭತ್ತು ವರ್ಷಗಳಾದ ಮೇಲೆ ಸಹೇತುಕ ವನದ ಬಾಗೆಯ ಮರದ ಬುಡದಲ್ಲಿ ಫಾಲ್ಗುಣ ಬಹಲ ಷಷ್ಠಿಯ ದಿನ ವಿಶಾಖಾ ನಕ್ಷತ್ರದಲ್ಲಿ ಕೇವಲಜ್ಞಾನವನ್ನು ಪಡೆದನು. ಒಡನೆಯೆ ಸಮವಸರಣಮಂಟಪ ಸಿದ್ಧವಾಯಿತು. ಆತನು ತನ್ನ ತೊಂಬತ್ತೊಂದು ಗಣಧರರೊಡನೆ ವಿಹಾರವನ್ನು ಕ್ಯೆಗೊಂಡು, ಕೊನೆಯಲ್ಲಿ ಸಮ್ಮೇದಪರ್ವತಕ್ಕೆ ಬಂದು ತಂಗಿದನು. ಅಲ್ಲಿ ಒಂದು ತಿಂಗಳು ಪ್ರತಿಮಾಯೋಗವನ್ನು ಧಾರಣ ಮಾಡಿ, ಫಾಲ್ಗುಣ ಕ್ರಷ್ಣ ಸಪ್ತಮಿಯ ದಿನ ವಿಶಾಖಾ ನಕ್ಷತ್ರದಲ್ಲಿ ಮುಕ್ತಿಯನ್ನು ಪಡೆದನು.
ಲಾಂಛನ
[ಬದಲಾಯಿಸಿ]ಸ್ವಸ್ತಿಕವು ಈತನ ಲಾಂಛನ. ಈತನ ಯಕ್ಷ-ಯಕ್ಷಿನಿಯರು ವರನಂದಿ ಮತ್ತು ಕಾಳಿ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. pp. ೪೩೦.