ವಿಷಯಕ್ಕೆ ಹೋಗು

ಸುರಿನಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುರಿನಾಮ್ ಗಣರಾಜ್ಯ
Republiek Suriname
ರಿಪುಬ್ಲೀಕ್ ಸುರಿನಾಮ್
Flag of ಸುರಿನಾಮ್
Flag
Coat of arms of ಸುರಿನಾಮ್
Coat of arms
Motto: Justitia - Pietas - Fides
(ಲ್ಯಾಟಿನ್ನಲ್ಲಿ: "ನ್ಯಾಯ - ಧಾರ್ಮಿಕತೆ - ನಿಷ್ಠೆ")
Anthem: Opo kondreman
Location of ಸುರಿನಾಮ್
Capital
and largest city
ಪರಮರಿಬೊ
Official languagesಡಚ್
Governmentಸಾಂವಿಧಾನಿಕ ಪ್ರಜಾತಂತ್ರ
ರೊನಾಲ್ಡ್ ವೆನೆಶಿಆನ್
ಸ್ವಾತಂತ್ರ್ಯ 
• ದಿನಾಂಕ
ನವೆಂಬರ್ ೨೫, ೧೯೭೫
• Water (%)
1.1
Population
• ಜುಲೈ ೨೦೦೫ estimate
449,888 (170th)
• ೨೦೦೪ census
487,024
GDP (PPP)2005 estimate
• Total
$2.898 billion (161st)
• Per capita
$5,683 (99th)
HDI (2003)0.759
high · 89th
Currencyಸುರಿನಾಮ್ ಡಾಲರ್ (SRD)
Time zoneUTC-3 (ART)
• Summer (DST)
UTC-3 (ಉಪಯೋಗದಲ್ಲಿಲ್ಲ)
Calling code597
Internet TLD.sr

ಸುರಿನಾಮ್, ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿನ ಒಂದು ದೇಶ. ಮೊದಲು ಡಚ್ ಗಯಾನ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಪೂರ್ವಕ್ಕೆ ಫ್ರೆಂಚ್ ಗಯಾನ ಮತ್ತು ಪಶ್ಚಿಮಕ್ಕೆ ಗಯಾನ ದೇಶಗಳಿವೆ. ವಿಸ್ತಾರ ಮತ್ತು ಜನಸಂಖ್ಯೆಯ ಲೆಕ್ಕದಲ್ಲಿ ದಕ್ಷಿಣ ಅಮೇರಿಕದ ಅತೀ ಚಿಕ್ಕ ದೇಶ ಇದು. ಸುರಿನಾಮ್ ನ ವಿಸ್ತೀರ್ಣ ೧,೬೩,೮೨೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೫ ಲಕ್ಷ. ರಾಷ್ಟ್ರದ ರಾಜಧಾನಿ ಪರಮಾರಿಬೋ. ಕ್ರಿ.ಶ. ೧೫ನೆಯ ಶತಮಾನದ ನಂತರ ಸುರಿನಾಮ್ ಪ್ರದೇಶದ ಮೇಲೆ ಸ್ಪೆಯ್ನ್ , ಇಂಗ್ಲೆಂಡ್ ಹಾಗೂ ನೆದರ್ಲಂಡ್ಸ್ ದೇಶಗಳು ಸ್ವಾಮ್ಯ ಸಾಧಿಸಲು ಪ್ರಯತ್ನಿಸಿದುವು. ಕೊನೆಗೆ ಸುರಿನಾಮ್ ಡಚ್ಚರ ವಸಾಹತಾಯಿತು. ಮಾಮೂಲಿನಂತೆ ಡಚ್ಚರು ಗುಲಾಮಗಿರಿ ವ್ಯವಸ್ಥೆಯನ್ನು ಜಾರಿಯಲ್ಲಿಟ್ಟರು. ಈ ಗುಲಾಮರು ಬಹುತೇಕ ಆಫ್ರಿಕಾ ಮೂಲದವರಾಗಿದ್ದರು. ೧೮೬೩ ರಲ್ಲಿ ಗುಲಾಮಗಿರಿ ವ್ಯವಸ್ಥೆ ರದ್ದಾದ ಬಳಿಕ ಡಚ್ಚರು ಸುರಿನಾಮ್ ನ ಗದ್ದೆ ಹಾಗೂ ತೋಟಗಳಲ್ಲಿ ದುಡಿಯಲು ಇಂಡೋನೇಷ್ಯಾ ಮತ್ತು ಭಾರತದಿಂದ ಕೆಲಸದಾಳುಗಳನ್ನು ಸಾಗಿಸಿದರು. ೧೯೫೩ರಲ್ಲಿ ಸುರಿನಾಮ್ ಜನತೆ ಸ್ವಲ್ಪಮಟ್ಟಿನ ಸ್ವಯಮಾಡಳಿತದ ಅಧಿಕಾರವನ್ನು ಪಡೆದುಕೊಂಡರು. ನಂತರ ನವೆಂಬರ್ ೨೫ ೧೯೭೫ ರಂದು ಸುರಿನಾಮ್ ಪೂರ್ಣವಾಗಿ ಸ್ವತಂತ್ರವಾಯಿತು. ಭಾರತೀಯ ಮೂಲದ ಜನರು ದೇಶದ ಒಟ್ಟು ಜನಸಂಖ್ಯೆಯ ೩೭% ರಷ್ಟಿದ್ದಾರೆ. ಇವರಲ್ಲದೆ ಕ್ರಿಯೋಲ್ ಎಂದು ಕರೆಯಲ್ಪಡುವ ಮಿಶ್ರಜನಾಂಗೀಯ ಜನರು ೩೧% ರಷ್ಟಿದ್ದಾರೆ. ಇವರಲ್ಲದೆ ಸುಮಾರು ೧೫% ದಷ್ಟು ಜಾವಾ ಮೂಲದ ಜನರು ಹಾಗೂ ಕೊಂಚ ಅಮೆರಿಂಡಿಯನ್ನರು ಮತ್ತು ಡಚ್ ಮೂಲದವರು ಸಹ ಇಲ್ಲಿ ನೆಲೆಸಿದ್ದಾರೆ. ಸುರಿನಾಮ್ ನ ಅಧಿಕೃತ ಭಾಷೆ ಡಚ್. ಇದಲ್ಲದೆ ಸ್ರನಮ್ ಟೋಂಗೋ ಎಂಬ ಮಿಶ್ರಭಾಷೆಯು ಸಹ ವ್ಯಾಪಕವಾಗಿ ನುಡಿಯಲ್ಪಡುತ್ತಿದೆ. ಹಿಂದುಸ್ತಾನಿ ಎನ್ನಲ್ಪಡುವ ಹಿಂದಿ ಭಾಷೆಯ ಉಪಭಾಷೆಯೂ ಹೆಚ್ಚಾಗಿ ಬಳಕೆಯಲ್ಲಿದೆ. ಭೂಮಧ್ಯರೇಖೆಯ ಬಳಿಯಿರುವ ಸುರಿನಾಮ್ ದೇಶದ ೮೦% ಭಾಗವು ಉಷ್ಣವಲಯದ ಮಳೆಕಾಡು ಹಾಗೂ ಸವಾನ್ನಾ ಹುಲ್ಲುಗಾವಲುಗಳಿಂದ ಕೂಡಿದೆ. ಉತ್ತರದ ಅಟ್ಲಾಂಟಿಕ್ ಸಾಗರತೀರದ ಪ್ರದೇಶವು ಬಹುಪಾಲು ಕೃಷಿಭೂಮಿಯಾಗಿದ್ದು ನಾಡಿನ ಬಹುವಾಸಿ ಜನರು ಇಲ್ಲಿಯೇ ನೆಲೆಯಾಗಿದ್ದಾರೆ. ಸುರಿನಾಮ್ ಒಂದು ಹಿಂದುಳಿದ ದೇಶವಾಗಿದೆ. ಬಾಕ್ಸೈಟ್ ಉದ್ಯಮ ದೇಶದ ಆರ್ಥಿಕವ್ಯವಸ್ಥೆಯ ಆಧಾರ. ಬತ್ತ ಹಾಗೂ ಬಾಳೆ ಇಲ್ಲಿಯ ಪ್ರಮುಖ ಬೆಳೆಗಳು.