ಸುರ್ಜಿತ್ ಪಾಟಾರ್
ಸುರ್ಜಿತ್ ಪಾಟಾರ್ | |
---|---|
ಜನನ | ಪಾಟ್ಟಾರ್ ಕಲಾನ್, ಪಂಜಾಬ್, ಬ್ರಿಟಿಷ್ ಇಂಡಿಯಾ |
ವೃತ್ತಿ | ಬರಹಗಾರ, ಕವಿ, ಶಿಕ್ಷಕ |
ವಿದ್ಯಾಭ್ಯಾಸ | ಸಾಹಿತ್ಯದಲ್ಲಿ ಪಿಎಚ್‌ಡಿ, ಗುರುನಾನಕ್ ದೇವ್ ವಿಶ್ವವಿದ್ಯಾಲಯ (ಅಮೃತ್‌ಸರ್) |
ಸುರ್ಜಿತ್ ಪಾಟಾರ್ ಅವರು ಪಂಜಾಬಿ ಭಾಷೆಯ ಬರಹಗಾರ ಮತ್ತು ಭಾರತದ ಪಂಜಾಬ್‌ನ ಕವಿ. ಅವರ ಕವಿತೆಗಳು ಸಾರ್ವಜನಿಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ ಮತ್ತು ವಿಮರ್ಶಕರಿಂದ ಹೆಚ್ಚಿನ ಮೆಚ್ಚುಗೆಯನ್ನು ಗಳಿಸಿವೆ. [೧]
ಜೀವನಚರಿತ್ರೆ
[ಬದಲಾಯಿಸಿ]ಪಾಟಾರ್ ಅವರು ಜಲಂಧರ್ ಜಿಲ್ಲೆಯ ಪಾಟ್ಟಾರ್ ಕಲಾನ್ ಗ್ರಾಮದವರು. [೨] ಅವರು ಕಪುರ್ತಲಾದ ರಣಧೀರ್ ಕಾಲೇಜಿನಿಂದ ಪದವಿ ಪಡೆದರು, ನಂತರ ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಮೃತ್‌ಸರ್‌ನ ಗುರುನಾನಕ್ ದೇವ್ ವಿಶ್ವವಿದ್ಯಾಲಯದಿಂದ "ಗುರುನಾನಕ್ ವಾಣಿಯಲ್ಲಿ ಜಾನಪದ ರೂಪಾಂತರ" ದ ಕುರಿತು ಸಾಹಿತ್ಯದಲ್ಲಿ ಪಿಎಚ್‌ಡಿ ಪಡೆದರು. ನಂತರ ಅವರು ಶೈಕ್ಷಣಿಕ ವೃತ್ತಿಗೆ ಸೇರಿ, ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಿಂದ ಪಂಜಾಬಿ ಪ್ರಾಧ್ಯಾಪಕರಾಗಿ ನಿವೃತ್ತರಾದರು. [೨] ಅವರು ಅರವತ್ತರ ದಶಕದ ಮಧ್ಯಭಾಗದಲ್ಲಿ ಕವನ ಬರೆಯಲು ಪ್ರಾರಂಭಿಸಿದರು. "ಹವಾ ವಿಚ್ ಲಿಖೆ ಹರ್ಫ್" (ಗಾಳಿಯಲ್ಲಿ ಬರೆದ ಪದಗಳು), ಬಿರ್ಖ್ ಅರ್ಜ಼್ ಕರೇ, ಹನೆರೆ ವಿಚ್ ಸುಲಗ್ಡಿ ವರ್ಣಮಾಲಾ (ಕತ್ತಲೆಯಲ್ಲಿ ಹೊಗೆಯಾಡುವ ಪದಗಳು), ಲಫ್ಜಾನ್ ಡಿ ದರ್ಗಾ (ಪದಗಳ ದೇಗುಲ), ಪಟ್ಜರ್ ಡಿ ಪಜ಼ೆಬ್ ಮತ್ತು ಸುರ್ಜ಼ಮೀನ್ (ಸಂಗೀತ ಭೂಮಿ) ಇವು ಅವರ ಕವನ ಕೃತಿಗಳು. [೨]
ಇವರು ಫೆಡೆರಿಕೊ ಗಾರ್ಸಿಯಾ ಲೋರ್ಕಾ ಅವರ ಮೂರು ದುರಂತಗಳು, ಗಿರೀಶ್ ಕಾರ್ನಾಡ್ ಅವರ ನಾಗಮಂಡಲ ನಾಟಕ, [೩] ಮತ್ತು ಬರ್ಟೋಲ್ಟ್ ಬ್ರೆಕ್ಟ್ ಮತ್ತು ಪ್ಯಾಬ್ಲೋ ನೆರುಡಾ ಅವರ ಕವನಗಳನ್ನು ಪಂಜಾಬಿಗೆ ಅನುವಾದಿಸಿದ್ದಾರೆ. ಅವರು ಶೇಖ್ ಫರೀದ್‌ನಿಂದ ಶಿವ ಕುಮಾರ್ ಬಟಾಲ್ವಿವರೆಗೆ ಪಂಜಾಬಿ ಕವಿಗಳ ಮೇಲೆ ಟೆಲಿ-ಸ್ಕ್ರಿಪ್ಟ್‌ಗಳನ್ನು ಬರೆದಿದ್ದಾರೆ.
ಅವರು ಚಂಡೀಗಢದ ಪಂಜಾಬ್ ಆರ್ಟ್ಸ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದಾರೆ. [೪] ಅವರು ೨೦೧೨ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. [೫]
ಪ್ರಸಿದ್ಧ ಕವನಗಳು
[ಬದಲಾಯಿಸಿ]"ಕ್ಯಾಂಡಲ್ಸ್", [೬] "ಹನೇರೆ ವಿಚ್ ಸುಲಗ್ಡಿ ವರ್ಣಮಾಲಾ", [೭] "ಅಯ್ಯಾ ನಂದ್ ಕಿಶೋರ್", [೮] "ಹನೇರ ಜರೇಗಾ ಕಿವೆನ್", "ಫಸ್ಲಾ", "ಕೋಯಿ ದಾಲಿಯಾ ಚೋ ಲಂಗೇಯ ಹವಾ ಬನ್ ಕೆ" ಇವು ಅವರ ಪ್ರಸಿದ್ದ ಕವನಗಳು.
ಚಿತ್ರಕಥೆ
[ಬದಲಾಯಿಸಿ]ಸುರ್ಜಿತ್ ಪಾಟಾರ್ ಅವರು ಪಂಜಾಬಿ ಚಲನಚಿತ್ರವಾದ ಶಹೀದ್ ಉದ್ಧಮ್ ಸಿಂಗ್ ಮತ್ತು ದೀಪಾ ಮೆಹ್ತಾ ಅವರ ಹೆವನ್ ಆನ್ ಅರ್ಥ್ ಚಿತ್ರದ ಪಂಜಾಬಿ ಆವೃತ್ತಿಯಾದ ವಿದೇಶ್‌ನ ಸಂಭಾಷಣೆಗಳನ್ನು ಬರೆದಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]- ೧೯೭೯: ಪಂಜಾಬ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೧೯೯೩: ಹನೇರೆ ವಿಚ್ ಸುಲಗ್ಡಿ ವರ್ಣಮಾಲಾ [೯] ಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೧೯೯೯: ಭಾರತೀಯ ಭಾಷಾ ಪರಿಷತ್ತು, ಕೋಲ್ಕತ್ತಾದಿಂದ ಪಂಚನಾದ್ ಪುರಸ್ಕಾರ
- ೨೦೦೯: ಕೆಕೆಬಿರ್ಲಾ ಫೌಂಡೇಶನ್‌ನಿಂದ ಸರಸ್ವತಿ ಸಮ್ಮಾನ್ . [೧೦]
- ೨೦೦೯: ಗಂಗಾಧರ ರಾಷ್ಟ್ರೀಯ ಪ್ರಶಸ್ತಿ, ಸಂಬಾಲ್ಪುರ್ ವಿಶ್ವವಿದ್ಯಾಲಯ, ಒರಿಸ್ಸಾ
- ೨೦೧೨: ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ [೧೧]
- ೨೦೧೪: ಕುಸುಮಾಗ್ರಜ್ ಸಾಹಿತ್ಯ ಪ್ರಶಸ್ತಿ [೧೨]
ಉಲ್ಲೇಖಗಳು
[ಬದಲಾಯಿಸಿ]- ↑ Singh, Surjit (Spring–Fall 2006). "Surjit Patar: Poet of the Personal and the Political". Journal of Punjab Studies. 13 (1): 265.
His poems enjoy immense popularity with the general public and have won high acclaim from critics.
- ↑ ೨.೦ ೨.೧ ೨.೨ Singh, Paramjeet (2018-04-07). Legacies of the Homeland: 100 Must Read Books by Punjabi Authors (in ಇಂಗ್ಲಿಷ್). Notion Press. ISBN 978-1-64249-424-2.
- ↑ Vatsyayan, Anupam (2016-12-14). Re-visiting and Re-staging (in ಇಂಗ್ಲಿಷ್). Cambridge Scholars Publishing. ISBN 978-1-4438-5731-4.
- ↑ "Eminent poet Surjit Patar is new Punjab Arts Council chief". The Indian Express (in ಅಮೆರಿಕನ್ ಇಂಗ್ಲಿಷ್). 2017-08-23. Retrieved 2020-01-29.
- ↑ "Punjabi poet Surjit Patar gets Padma Shri". The Indian Express (in ಅಮೆರಿಕನ್ ಇಂಗ್ಲಿಷ್). 2012-01-26. Retrieved 2020-01-29.
- ↑ Patar, Surjit; Translated by Ami P. Shah (Spring–Fall 2006). "Punjabi Poetry – with translations by Randi L. Clary, Gibb Schreffler, and Ami P. Shah". Journal of Punjab Studies. 13 (1).
- ↑ Patar, Surjit; Translated by Gibb Schreffler from Hanere vichch sulagdi Varanmala (1992) (Spring–Fall 2006). "Punjabi Poetry – with translations by Randi L. Clary, Gibb Schreffler, and Ami P. Shah". Journal of Punjab Studies. 13 (1).
{{cite journal}}
: CS1 maint: numeric names: authors list (link) - ↑ Singh, Surjit (Spring–Fall 2006). "Surjit Patar: Poet of the Personal and the Political". Journal of Punjab Studies. 13 (1): 265.
His poems enjoy immense popularity with the general public and have won high acclaim from critics.
Singh, Surjit (Spring–Fall 2006). "Surjit Patar: Poet of the Personal and the Political". Journal of Punjab Studies. 13 (1): 265.His poems enjoy immense popularity with the general public and have won high acclaim from critics.
- ↑ "Eminent poet Surjit Patar is new Punjab Arts Council chief". The Indian Express (in ಅಮೆರಿಕನ್ ಇಂಗ್ಲಿಷ್). 2017-08-23. Retrieved 2020-01-29."Eminent poet Surjit Patar is new Punjab Arts Council chief". The Indian Express. 23 August 2017. Retrieved 29 January 2020.
- ↑ Jatinder Preet (30 April 2010). "Saraswati Samman for Patar". Punjab Panorama. Retrieved 30 April 2010.
- ↑ "Padma Awards". pib. 27 January 2013. Retrieved 27 January 2013.
- ↑ "Punjabi litterateur Surjit Patar conferred Kusumagraj Award". Business Standard India. Business Standard. Press Trust of India. 7 March 2014. Retrieved 8 August 2015.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ Patar
- Surjit Patar ಫೇಸ್ಬುಕ್ನಲ್ಲಿ
- Pages using the JsonConfig extension
- CS1 ಇಂಗ್ಲಿಷ್-language sources (en)
- CS1 ಅಮೆರಿಕನ್ ಇಂಗ್ಲಿಷ್-language sources (en-us)
- CS1 maint: numeric names: authors list
- Articles with FAST identifiers
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with GND identifiers
- Articles with LCCN identifiers
- Articles with NLA identifiers
- Articles with CINII identifiers
- ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ
- ಬರಹಗಾರ
- ಕವಿಗಳು
- ಭಾರತೀಯ ಕವಿಗಳು