ಸೂಜಿ
ಗೋಚರ
ಕೈ ಹೆಣಿಗೆಗಾಗಿ ಬಳಸಲಾಗುವ ಸೂಜಿಯು ಒಂದು ಕೊನೆಯಲ್ಲಿ ಚೂಪಾದ ತುದಿಯನ್ನು ಮತ್ತು ಇನ್ನೊಂದು ಕೊನೆಯಲ್ಲಿ ರಂಧ್ರವನ್ನು (ಅಥವಾ ಕಣ್ಣು) ಹೊಂದಿರುವ ಒಂದು ಉದ್ದನೆಯ, ತೆಳ್ಳಗಿರುವ ಸಾಧನ. ಅತ್ಯಂತ ಮುಂಚಿನ ಸೂಜಿಗಳನ್ನು ಮೂಳೆ ಅಥವಾ ಕಟ್ಟಿಗೆಯಿಂದ ತಯಾರಿಸಲಾಗಿತ್ತು; ಆಧುನಿಕ ಸೂಜಿಗಳನ್ನು ಹೆಚ್ಚಿನ ಪ್ರಮಾಣದ ಇಂಗಾಲದ ಉಕ್ಕಿನ ತಂತಿಯಿಂದ ಉತ್ಪಾದಿಸಲಾಗುತ್ತದೆ ಮತ್ತು ಸವೆತವನ್ನು ತಡೆಯಲು ನಿಕಲ್ ಅಥವಾ ೧೮ ಕ್ಯಾರಟ್ ಚಿನ್ನದ ಲೇಪನ ಹೊಂದಿರುತ್ತವೆ. ಉನ್ನತ ಗುಣಮಟ್ಟದ ಕಸೂತಿ ಸೂಜಿಗಳನ್ನು ಮೂರರಲ್ಲಿ ಎರಡು ಭಾಗ ಪ್ಲಾಟಿನಮ್ ಮತ್ತು ಒಂದು ಭಾಗ ಟೈಟೇನಿಯಮ್ ಮಿಶ್ರಲೋಹದಿಂದ ಲೇಪಿಸಲಾಗುತ್ತದೆ. ಸಾಂಪ್ರದಾಯಿಕವಾಗಿ, ಸೂಜಿಗಳನ್ನು ಸೂಜಿಪೆಟ್ಟಿಗೆಗಳಲ್ಲಿ ಇಡಲಾಗಿದೆ. ಇವು ಶೃಂಗಾರದ ವಸ್ತುಗಳಾಗಿವೆ.[೧] ಸೂಜಿಗಳನ್ನು ಇವನ್ನು ಮತ್ತು ಕತ್ತರಿಗಳು, ಪೆನ್ಸಿಲ್‍ಗಳು ಹಾಗೂ ಚಿಕ್ಕ ಚಿಮುಟಗಳಂತಹ ಇತರ ವಸ್ತುಗಳನ್ನು ಹೊಂದಿರುವ ಸಣ್ಣ ಪೆಟ್ಟಿಗೆಯಾದ ಏಟ್ವೀಯಲ್ಲಿ ಕೂಡ ಇಡಬಹುದು.[೨]
ಟಿಪ್ಪಣಿಗಳು
[ಬದಲಾಯಿಸಿ]- ↑ "Antique Sewing Needle Cases". Collectors Weekly. Retrieved 2012-05-25.
- ↑ "Antique Sewing Needle Cases". Collectors Weekly. Retrieved 2012-05-25.
ಉಲ್ಲೇಖಗಳು
[ಬದಲಾಯಿಸಿ]