ವಿಷಯಕ್ಕೆ ಹೋಗು

ಸೆರೆನಾ ವಿಲಿಯಮ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆರೆನಾ ವಿಲಿಯಮ್ಸ್ (2008)

ಸೆರೆನಾ ವಿಲಿಯಮ್ಸ್ ಅಮೆರಿಕದ ಸ೦ಯುಕ್ತ ಸ೦ಸ್ಥಾನದ ವೃತ್ತಿಪರ ಟೆನ್ನಿಸ್ (ಹುಟ್ಟು: ಸೆಪ್ಟೆಂಬರ್ ೨೬, ೧೯೭೧) ಆಟಗಾರ್ತಿ. ಸೆರೆನಾ,'ವರ್ಲ್ಡ್ ನಂಬರ್ ೧' ಎಂದು 'ವಿಮೆನ್ಸ್ ಟೆನ್ನಿಸ್ ಅಸೋಸಿಯೇಷನ್' ನಿಂದ ೪ ಪ್ರತ್ಯೇಕ ಸಮಯಗಳಲ್ಲಿ ಘೋಶಿಸಲ್ಪಟ್ಟಿದ್ದಾಳೆ. 'ಏಪ್ರಿಲ್, ೨೦, ೨೦೦೯ ರಲ್ಲಿ ಆಕೆ ಎರಡನೇ ಸ್ಥಾನಕ್ಕಿಳಿದಿದ್ದಳು. 'ಯು. ಎಸ್. ಓಪನ್' ಮತ್ತು 'ಆಸ್ಟ್ರೇಲಿಯನ್ ಓಪನ್' ಸಿಂಗಲ್ಸ್ ನ ಚಾಂಪಿಯನ್ ಆಟಗಾತಿ. ಸೆರೀನಾ ವಿಲಿಯಂಸ್, ಇದುವರೆವಿಗೆ ೨೦ ಗ್ರಾಂಡ್ ಸ್ಲಾಮ್ ಟೈಟಲ್ಸ್ ಗಳನ್ನು ಗಳಿಸಿದ್ದಾಳೆ. ೧೦ ಸಿಂಗಲ್ಸ್ ನಲ್ಲಿ, ಮತ್ತು ೮ ಡಬ್ಬಲ್ಸ್ ನಲ್ಲಿ ಹಾಗೆಯೇ ೨ ಮಿಕ್ಸ್ ಡಬಲ್ಸ್ ನಲ್ಲಿ. ೨ ಒಲಂಪಿಕ್ಸ್ ವಿಮೆನ್ಸ್ ಡಬ್ಬಲ್ಸ್ ನಲ್ಲಿ, 'ಚಿನ್ನದ ಮೆಡಲ್ಸ್' ಕೂಡ ಸಿಕ್ಕಿದೆ.

ಅಕ್ಕ ತಂಗಿಯರ ಸಾಧನೆ

[ಬದಲಾಯಿಸಿ]

ವೀನಸ್ ವಿಲಿಯಮ್ಸ್ ನ ತಂಗಿ. ಸೆರೆನಾ ವಿಲಿಯಂಸ್ ಮತ್ತು ವೀನಸ್ ವಿಲಿಯಂಸ್ ಒಟ್ಟಾಗಿ 'ಟೆನ್ನಿಸ್ ಪ್ರೊಫೆಶನಲ್ ಮ್ಯಾಚ್,' ಗಳನ್ನು ಆಡಿದ್ದಾರೆ, ೧೯೯೮ ನೇ ಇಸವಿಯಿಂದಲೇ, ೨೦ 'ಪ್ರೊಫೆಶನಲ್ ಮ್ಯಾಚ್' ಗಳಲ್ಲಿ ಒಟ್ಟಾಗಿ ಆಡಿದ್ದಾರೆ. ೨೦೦೯, ನೇ, ಮೇ ತಿಂಗಳಿನಲ್ಲಿ ನಡೆದ ಇಬ್ಬರ ನಡುವಿನ ಮ್ಯಾಚ್ ನಲ್ಲಿ, ೧೦-೧೦ ಪಾಯಿಂಟ್ ಗಳಿಂದ ಟೈ ಆಗಿತ್ತು. ೩ 'ಗ್ರಾಂಡ್ ಸ್ಲಾಮ್ ಟೆನ್ನಿಸ್ ಆಟ' ದಲ್ಲಿ ಸತತವಾಗಿ ಆಡಿದ ಸಿಂಗಲ್ ಫೈನಲ್ಸ್ ನ ವುಮನ್-ಕ್ರೀಡಾಳುವಾಗಿ ಭಾಗವಹಿಸಿದ ಶ್ರೇಯಸ್ಸು ಅವರದು.

ಸೆರೆನಾ ಗೆದ್ದ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳು

[ಬದಲಾಯಿಸಿ]
  1. ಆಸ್ಟ್ರೇಲಿಯಾ ಓಪನ್‌ (2003, 2005, 2007, 2009, 2010, 2015),[]
  2. ಫ್ರೆಂಚ್‌ ಓಪನ್‌ ೨ (2002, 2013),
  3. ವಿಂಬಲ್ಢನ್: ೫ (2002, 2003, 2009, 2010, 2012)
  4. ಯು.ಎಸ್. ಓಪನ್: ೬ (1999, 2002, 2008, 2012, 2013, 2014)

ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಕೆಲವು ಪಂದ್ಯಗಳು

[ಬದಲಾಯಿಸಿ]
  • ೨೦೦೯ ರ,ಜುಲೈ,೪ ನೇ ತಾರೀಖಿನಂದು ಆಡಿದ 'ವಿಂಬಲ್ಡನ್ ಪೈನಲ್ಸ್,' ನಲ್ಲಿ ಸೆರೆನಾ ಮೂರನೆಯಬಾರಿ ವಿಜಯಿಯಾದರು. ಅಮೆರಿಕದ ವಿಲಿಯಮ್ ಸಹೋದರಿಯರ ನಡುವಿನ 'ವಿಂಬಲ್ಡನ್ ಫೈನಲ್ಸ್ ಕದನ,' ದಲ್ಲಿ ಅಕ್ಕ ವೀನಸ್ ವಿಲಿಯಂಸ್ ರನ್ನು ೭-೬ (೭-೩),೬-೨ ಪಾಯಿಂಟ್ ಗಳಿಂದ ಮಣಿಸಿ, ೩ ನೆಯಬಾರಿಗೆ, ಸೆರೆನಾ ವಿಲಿಯಂಸ್, 'ಪ್ರತಿಷ್ಠಿತ ವಿಂಬಲ್ದನ್ ಟ್ರೋಫಿ,' ಯನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಂಬಲ್ಡನ್ ಪ್ರತಿಯೋಗಿತೆಯಲ್ಲಿ ಸತತ ೩೪ ಸೆಟ್ ಗಳ ವಿಜಯಗಳ ವಿಶಿಶ್ಠ ದಾಖಲೆ ಸೃಷ್ಟಿಸಿರುವ ವೀನಸ್ ವಿಲಿಯಂಸ್, ಆರಂಭಿಕ ಸೆಟ್ ಸೋಲುವ ಮೂಲಕ ೨೦೦೭ ರ ವಿಂಬಲ್ಡನ್ ೩ ನೆಯ ಸುತ್ತಿನಲ್ಲಿ ಆರಂಭಿಸಿದ್ದ ತಮ್ಮ ದಾಖಲೆಯನ್ನು ಅಳಿಸಿಹಾಕಿದರು. ೨ ನೇ ಶ್ರೇಯಾಂಕಿತ ಸೆರೆನಾ ೩೦೦೨ ಹಾಗೂ ೨೦೦೩ ರ ವಿಂಬಲ್ಡನ್ ಪ್ರತಿಯೋಗಿತೆಯಲ್ಲಿ ವೀನಸ್ ರವರನ್ನು ಮಣಿಸಿದ್ದರು. ಆದರೆ, ಹೋದ ವರ್ಷ ಅಕ್ಕ ವೀನಸ್ ವಿರುದ್ಧ ಸೋಲುಂಡು ಸೆರೆನಾ, ರನ್ನರ್ ಅಪ್ ಸ್ಥಾನಪಡೆದು ತೃಪ್ತಿಹೊಂದಬೇಕಾಯಿತು.
  • ೧೨ ನೆಯ ಬಾರಿಗೆ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ: ೨೦೧೦ ರ, ಜ. ೩೦ ರಂದು ಮೆಲ್ಬೋರ್ನ್ ನಲ್ಲಿ ನಡೆದ ’ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ’ಯಲ್ಲಿ ’೧೨ ನೆಯ ಬಾರಿಗೆ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ’, ಬೆಲ್ಜಿಯಮ್ ನ ’ಜಸ್ಟಿನ್ ಹೆನಿನ್’ ರನ್ನು ೬-೪, ೩-೬, ೬-೨ ರಿಂದ ಸೋಲಿಸಿದ, ಹಾಲಿ ಚ್ಯಾಂಪಿಯನ್ ಮತ್ತು ಅಗ್ರ ಶ್ರೇಯಾಂಕಿತ ಸೆರೆನಾ ವಿಲಿಯಮ್ಸ್, ’೫ ನೆಯ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್-ಪ್ರಶಸ್ತಿ’ ಮತ್ತು ’೧೨ ನೇ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ’ ಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ೨೪ ಗ್ರಾಂಡ್ ಸ್ಲ್ಯಾಮ್' ಗೆದ್ದ ಸಹ ಅಮೆರಿಕನ್ ಆಟಾಗಾರ್ತಿ, 'ಬಿಲ್ಲಿ ಜೀನ್ ಕಿಂಗ್ಸ್,' ರೊಂದಿಗೆ ಸಾರ್ವಕಾಲಿಕ ಮುಖ್ಯಪ್ರಶಸ್ತಿ ಗೆದ್ದ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ದಾಖಲಿಸಿದ್ದಾರೆ. ಬಿಲ್ಲಿ ಜೀನ್ ಕಿಂಗ್ಸ್, ಮತ್ತು ಆಸ್ಟ್ರೇಲಿಯದ ಮಹಾನ್ ಟೆನ್ನಿಸ್ ಆಟಗಾರ್ತಿ, 'ಮಾರ್ಗರೆಟ್ ಸ್ಮಿತ್,' ಸಮ್ಮುಖದಲ್ಲಿ, ಫೈನಲ್ಸ್ ಪಂದ್ಯವಾಡಿ ಈ ಇಬ್ಬರ ದಾಖಲೆಯನ್ನು ಸರಿಗಟ್ಟಿದರು.
  • ೧೩ ನೆಯ ಬಾರಿಗೆಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ: ಹಾಲಿ ಚಾಂಪಿಯನ್, 'ಅಮೆರಿಕದ ಸೆರೆನಾ ವಿಲಿಯಮ್ಸ್,' ೨೦೧೦ ರ ಜುಲೈ, ೩ ರಂದು ಜರುಗಿದ 'ವಿಂಬಲ್ಡನ್ ಟೆನ್ನಿಸ್ ಚಾಂಪಿಯನ್ ಶಿಪ್ ನ ಮಹಿಳೆಯರ ಸಿಂಗಲ್ಸ್' ನಲ್ಲಿ, ೨೧ ನೆಯ ಶ್ರೇಯಾಂಕಿತ, 'ರಷ್ಯಾದೇಶದ ಟೆನ್ನಿಸ್ ಆಟಗಾರ್ತಿ,ವೇರಾ ಜ್ವನಾರೇವಾ' ವಿರುದ್ಧ ೬-೩, ೬-೨ ಪಾಯಿಂಟ್ ಗಳಿಂದ ಗೆದ್ದರು. ಸೆರೆನಾ ೪ ನೆಯ ಬಾರಿಗೆ ಮಹಿಳೆಯರ ಸಿಂಗಲ್ಸ್ ನಲ್ಲಿ, ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ. ಏಕ ಪಕ್ಷೀಯವಾಗಿ ನಡೆದ ಫೈನಲ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಲಿಯಮ್ಸ್ ವೃತ್ತಿಬದುಕಿನಲ್ಲಿ '೧೩ ನೆಯ ಗ್ರಾಂಡ್ ಸ್ಲ್ಯಾಮ್' ಗಳಿಸಿ, ೧.೫ ಮಿ. ಡಾಲರ್ ಬಹುಮಾನ ಗೆದ್ದಿದ್ದಾರೆ. 'ಸಾರ್ವಕಾಲಿಕ ಗ್ಡ್ರಾಂಡ್ ಸ್ಲ್ಯಾಮ್ ವಿನ್ನರ್' ಗಳಲ್ಲಿ ೬ ನೇ ಸ್ಥಾನವನ್ನು ಗಿಟ್ಟಿಸಿದ್ದಾರೆ. ಇದುವರೆಗೆ ನಡೆದ ಎಲ್ಲಾ ೩ ಫೈನಲ್ ನಲ್ಲಿ ಸಹೋದರಿ 'ವೀನಸ್' ವಿರುದ್ಧ ಫೈನಲ್ ಗೆದ್ದು ಪ್ರಶಸ್ತಿಹೊಂದಿದ್ದರು.
  • 19ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವುದಲ್ಲದೆ, ಮೆರಿಯಾ ಶರಪೋವರವರ ಜೊತೆ ಆಡಿ ೧೬ ನೆಯ ಜಯವಾಗಿದೆ. ಇಂತಹ ಅಪೂರ್ವ ಸಾಧನೆ ಮಾಡಿದ 33ರ ಹರೆಯದ ಸೆರೆನಾ ವಿಲಿಯಮ್ಸ್‌ ಆಧುನಿಕ ಟೆನಿಸ್‌ನಲ್ಲಿ ತಾನೇ 'ಗಟ್ಟಿಗಿತ್ತಿ' ಎಂಬುದನ್ನು ಮೆಲ್ಬರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಮತ್ತೊಮ್ಮೆ ತೋರಿಸಿ ಕೊಟ್ಟರು. ಈ ಟೂರ್ನಿ, 'ರಾಡ್‌ ಲೇವರ್ ಅರೆನಾ'ದಲ್ಲಿ ಶನಿವಾರ,31, jan,15, ರಂದು ನಡೆಯಿತು. ಸೆರೆನಾ, 6–3, 7–6 ರಲ್ಲಿ ರಷ್ಯಾದ ಮರಿಯಾ ಶರಪೋವಾ ಅವರನ್ನು ಮಣಿಸಿ ತಮ್ಮ ವೃತ್ತಿಜೀವನದ ‘ಓಪನ್‌ ಯುಗ’ದಲ್ಲಿ ಅತಿಹೆಚ್ಚು ಪ್ರಶಸ್ತಿ ಗೆದ್ದ ಆಟಗಾರ್ತಿಯರ ಪಟ್ಟಿಯಲ್ಲಿ ಸೇರಿದ್ದಾರೆ. ಆಸ್ಟ್ರೇಲಿಯದಲ್ಲಿ ಗೆದ್ದ ೬ ನೆಯ ಸ್ಪರ್ಧೆ.
  • ೨೧ ನೇ ಗ್ರಾಂಡ್ ಸ್ಲಾಮ್ [] ಹಾಗೂ ೬ ನೇ ವಿಂಬಲ್ಡನ್ ಪ್ರಶಸ್ತಿಯನ್ನು 'ಸೆರೆನಾ ವಿಲಿಯಮ್ಸ್', ಆಲ್ ಇಗ್ಲೆಂಡ್ ಟೆನ್ನಿಸ್ ಸೆಂಟರ್ ಕೋರ್ಟ್ ನಲ್ಲಿ ೧೧, ಶನಿವಾರ, ಜುಲೈ ೨೦೧೫ ರಂದು ೨೦ ನೇ ಶ್ರೇಯಾಂಕಿತೆ ಸ್ಪೇನ್ ನ 'ಗಾರ್ಬಿನಾ ಮುಗುರುಜ' ರವರ ವಿರುದ್ಧ ೬-೪ ;೬-೪ ನೇರ ಸೆಟ್ಟುಗಳಿಂದ ಗೆಲ್ಲುವುದರ ಮೂಲಕ, ಇತಿಹಾಸ ರಚಿಸಿದ್ದಾರೆ. ಇದು ಅವರ ಸತತ ೪ ಗ್ರಾಂಡ್ ಗೆಲ್ಲುವುದರ ಮೂಲಕ ಮುನ್ನಡೆದ ಎರಡನೆಯ 'ಸೆರೆನಾ ಸ್ಲಾಮ್,' ಆಗಿದೆ.
  • ೨೨ ನೇ ಗ್ರಾಂಡ್ ಸ್ಲಾಮ್ ಹಾಗೂ [] ೭ ನೇ ವಿಂಬಲ್ಡನ್ ಪ್ರಶಸ್ತಿಯನ್ನು ೩೪ ವರ್ಷದ ಸೆರೆನಾವಿಲಿಯಮ್ಸ್,೯,ಶನಿವಾರ,ಜುಲೈ, ೨೦೧೬ ರಂದು, ವಿಂಬಲ್ಡನ್ ಸೆಂಟರ್ ಕೋರ್ಟ್ ನಲ್ಲಿ, ೭-೫ ೬-೩ ಪಾಯಿಂಟ್ ಗಳಿಂದ ಸ್ಟೆಫಿ ಗ್ರಾಪ್ ಆಟಗಾರ್ತಿಯವರ ಸಾಧನೆಯನ್ನು ಸಮವಾಗಿಸಿದ್ದಾರೆ.

ಈಗ ಸೆರೆನಾ ವಿಲಿಯಮ್ಸ್ ರವರ ರೇಟಿಂಗ್ ಹೀಗಿದೆ

[ಬದಲಾಯಿಸಿ]
  • ಅಮೆರಿಕದ 'ಹೆಲೆನ್‌ ವಿಲ್ಸ್‌ ಮೂಡಿ' ಜತೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
  • ಆಸ್ಟ್ರೇಲಿಯಾದ 'ಮಾರ್ಗರೆಟ್‌ ಕೋರ್ಟ್‌' (24) ಮತ್ತು ಜರ್ಮನಿಯ 'ಸ್ಟೆಫಿ ಗ್ರಾಫ್‌' (22) ಮಾತ್ರ ಸೆರೆನಾ ಅವರಿಗಿಂತ ಮುಂದಿದ್ದಾರೆ.

೨೦೧೬ ರ ಆಸ್ಟ್ರೇಲಿಯಾ ಓಪನ್‌ನ ಮಹಿಳೆಯರ ಸಿಂಗಲ್ಸ್‌

[ಬದಲಾಯಿಸಿ]
  • ಹೊಸ ವರ್ಷ 2016 ರ ಮೊದಲ ಗ್ರ್ಯಾಂಡ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಶನಿವಾರ.ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಎದುರು ಶ್ರೇಷ್ಠ ಸಾಮರ್ಥ್ಯ ತೋರಿದ ಜರ್ಮನಿಯ ಏಂಜಲಿಕ್‌ ಕರ್ಬರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಮೊದಲ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಗೆದ್ದರು.
  • ಆಸ್ಟ್ರೇಲಿಯಾದ ಮೆಲ್ಬರ್ನ್‌ನ ರಾಡ್‌ ಲೇವರ್‌ ಮೈದಾನದಲ್ಲಿ, ಶನಿವಾರ ಏಳನೇ ಶ್ರೇಯಾಂಕಿತೆ ಕರ್ಬರ್ 6–4, 3–6, 6–4ರಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾ ಎದುರು ವಿಜಯ ಸಾಧಿಸಿದರು. ಕರ್ಬರ್‌ ಅವರು 17 ವರ್ಷಗಳ ಬಳಿಕ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಜರ್ಮನಿಯ ಮೊದಲ ಆಟಗಾರ್ತಿ ಎಂಬ ಶ್ರೇಯಕ್ಕೆ ಭಾಜನರಾದರು. ಮೆಲ್ಬರ್ನ್‌ ಪಾರ್ಕ್‌ನಲ್ಲಿ ಈ ಹಿಂದೆ ಆಡಿದ್ದ ಆರೂ ಫೈನಲ್‌ ಪಂದ್ಯಗಳಲ್ಲಿ ಗೆಲುವು ಗಳಿಸಿದ್ದ ಸೆರೆನಾ ಈ ಬಾರಿ ಟ್ರೋಫಿ.ಗೆಲ್ಲಲು ಆಗಲಿಲ್ಲ, ಆದರೆ ಅವರು ಬೆಳ್ಳಿ ಪದಕ ಗಳಿಸಿದರು.
  • ಮುಂಗೈ ಹೊಡೆತ ಬಾರಿಸುವ ಭರದಲ್ಲಿ 34 ವರ್ಷದ ಸೆರೆನಾ 23 ಬಾರಿ ಸ್ವಯಂಕೃತ ತಪ್ಪುಗಳನ್ನು ಮಾಡಿದರು. ವೇಗವಾಗಿ ರಿಟರ್ನ್‌ ಮಾಡುವ ಭರದಲ್ಲಿ ಅವರು ಪದೇ ಪದೇ ಚೆಂಡನ್ನು ನೆಟ್‌ಗೆ ಬಾರಿಸಿ ಗೇಮ್‌ ಕಳೆದುಕೊಂಡರು.. ಎದುರಾಳಿ ಆಟಗಾರ್ತಿ ಮಾಡಿದ ತಪ್ಪಿನ ಲಾಭ ಪಡೆದ 28 ವರ್ಷದ ಏಂಜಲಿಕ್‌ ಕರ್ಬರ್ ಸೊಗಸಾದ ಆಟ ಆಡಿ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಗೆದ್ದುಕೊಂಡರು.
  • ಸೆರೆನಾ ಇದುವರೆಗೆ 21 ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ ವಿಶ್ವ ಓಪನ್‌ ಶ್ರೇಣಿಗಳಲ್ಲಿ ಸ್ಟೆಫಿ ಗ್ರಾಫ್ ಹೆಸರಿನಲ್ಲಿರುವ 22 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಜಯದ ದಾಖಲೆ ಸರಿಗಟ್ಟುವ ಸೆರೆನಾ ಬಯಕೆ ಈಡೇರಲಿಲ್ಲ. ಆದರೆ, ೨೦೧೬ ರಲ್ಲಿ ೨೨ ನೇ ವಿಂಬಲ್ಡನ್ ತಟೂರ್ನಿಯಲ್ಲಿ ಅದನ್ನು ಸಮನಾಗಿಸಿದ್ದಾರೆ. •[][]

ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಟೂರ್ನಿ 2016

[ಬದಲಾಯಿಸಿ]
  • ಆಲ್‌ ಇಂಗ್ಲೆಂಡ್ ಕ್ಲಬ್‌ನ ಹುಲ್ಲಿನ ಅಂಕಣದಲ್ಲಿ 9-7-2016 ಶನಿವಾರ ರಾತ್ರಿ ವಿಂಬಲ್ಡನ್ ಟ್ರೋಫಿ ಗೆದ್ದ ಅವರು, 22ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸಿದ ದಾಖಲೆಯನ್ನು ಮಾಡಿದರು. ಇದರೊಂದಿಗೆ 17 ವರ್ಷಗಳ ಹಿಂದೆ ಜರ್ಮನಿಯ ಸ್ಟೆಫಿ ಗ್ರಾಫ್ ಅವರು ಮಾಡಿದ್ದ ದಾಖಲೆಯನ್ನು ಸರಿಗಟ್ಟಿದರು.
  • ಎರಡು ತಿಂಗಳ ಹಿಂದೆಯಷ್ಟೆ ಆಸ್ಟ್ರೇಲಿಯಾ ಓಪನ್ ಟೂರ್ನಿ ಫೈನಲ್‌ ನಲ್ಲಿಯೂ ಅವರು ಕೆರ್ಬರ್‍ಗೆ ಸೋತಿದ್ದರು. ಆ ಪಂದ್ಯದಲ್ಲಿ ಗೆದ್ದಿದ್ದ ಜರ್ಮನಿಯ ಏಂಜೆಲಿಕ್ ಕೆರ್ಬರ್ ಅವರನ್ನು ಶನಿವಾರ ವಿಂಬಲ್ಡನ್‌ ಫೈನಲ್‌ನಲ್ಲಿ ಸೆರೆನಾ ಮಣಿಸಿದರು. ವಿಜಯ ಸಾಧಿಸಿದ ಸೆರೆನಾ ಸೆಂಟರ್ ಕೋರ್ಟ್‌ನಲ್ಲಿ ಅಂಗಾತವಾಗಿ ಬಿದ್ದು ಸಂಭ್ರಮ ವ್ಯಕ್ತಪಡಿಸಿದರು. ಕೆಲ ಕ್ಷಣಗಳ ನಂತರ ಎದ್ದು ನಿಂತು ಅಭಿಮಾನಿಗಳತ್ತ ಕೈಬೀಸಿದರು. ಎದುರಾಳಿ ಕೆರ್ಬರ್ ಅವರನ್ನು ಬಿಗಿದಪ್ಪಿಕೊಂಡರು.
  • ಅಮೆರಿಕದ 34 ವರ್ಷದ ಆಟಗಾರ್ತಿ ಸೆರೆನಾ ನಡೆದಿದ್ದ 81 ನಿಮಿಷಗಳ ಹಣಾಹಣಿಯಲ್ಲಿ 7–5, 6–3ರಲ್ಲಿ ಏಂಜೆಲಿಕ್ ವಿರುದ್ಧ ಜಯಿಸಿದರು. ಸೆರೆನಾ ಅವರ ಬಲಶಾಲಿ ಸರ್ವ್‌ಗಳನ್ನು ಮೊದಲ ಸೆಟ್‌ನಲ್ಲಿ ಕೆರ್ಬರ್ ದಿಟ್ಟತನದಿಂದ ಎದುರಿಸಿದ್ದರು. ಈ ಸೆಟ್‌ನಲ್ಲಿ ಹೆಚ್ಚುಕಮ್ಮಿ ಸಮಬಲದ ಹೋರಾಟ ನಡೆಯಿತು. ಆದರೆ ಟೈಬ್ರೇಕರ್‌ನಲ್ಲಿ ಸೆರೆನಾ ತಪ್ಪು ಮಾಡಲಿಲ್ಲ. ನಿಖರ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಸೆಟ್‌ ಅನ್ನು ತಮ್ಮದಾಗಿಸಿಕೊಂಡರು. ನಂತರ ಎರಡನೇ ಸೆಟ್‌ನಲ್ಲಿ 34 ವರ್ಷದ ಸೆರೆನಾ ಆರಂಭದಿಂದಲೇ ವೇಗದ ಆಟಕ್ಕೆ ಒತ್ತು ನೀಡಿದರು. ಅವರು ಹಾಕಿದ ಡ್ರಾಪ್‌ಗಳ ಅಂದಾಜು ಸಿಗದೇ ಕೆರ್ಬರ್ ಹತಾಶರಾದರು. ಸೆರೆನಾ ಮಾಡಿದ ನಿಖರ ಸರ್ವ್‌ಗಳಿಗೆ ಉತ್ತರ ಕೊಡುವಲ್ಲಿಯೂ ಎಡವಿದರು
  • ಇದರಿಂದಾಗಿ ಕೆರ್ಬರ್‌ ಅವರಿಗೆ ಮೂರು ಅಂಕಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಪಂದ್ಯದಲ್ಲಿ ಒಟ್ಟು 13 ಏಸ್‌ ಸಿಡಿಸಿದ ಸೆರೆನಾ, 39 ವಿನ್ನರ್‌ಗಳನ್ನು ಹೊಡೆದು ವಿಜೃಂಭಿಸಿದರು. ನಾಲ್ಕನೇ ಶ್ರೇಯಾಂಕದ ಕೆರ್ಬರ್ ಸೆಮಿಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್ ಅವರನ್ನು ಸೋಲಿಸಿದ್ದರು.
  • ಗೆಲವಿನ ಸಂಭ್ರಮ-ಫೋಟೊ:[೧] Archived 2016-08-07 ವೇಬ್ಯಾಕ್ ಮೆಷಿನ್ ನಲ್ಲಿ.

ಮುಖ್ಯಾಂಶಗಳು

[ಬದಲಾಯಿಸಿ]

ತಮ್ಮ ವೃತ್ತಿ ಜೀವನದ 50ನೇ ಪ್ರಶಸ್ತಿ ಗೆದ್ದ ಸೆರೆನಾ ರೂ.17.40 ಕೋಟಿ ಬಹುಮಾನ ಪಡೆದ 34 ವರ್ಷದ ಸೆರೆನಾ

ಸೆರೆನಾ ಗ್ರ್ಯಾಂಡ್‌ಸ್ಲಾಮ್ ಸಾಧನೆ (ಸಿಂಗಲ್ಸ್)
  • ಆಸ್ಟ್ರೇಲಿಯಾ ಓಪನ್ – 2003, 2005, 2007, 2009, 2010, 2015
  • ಫ್ರೆಂಚ್ ಓಪನ್ : 2002, 2013, 2015
  • ವಿಂಬಲ್ಡನ್: 2002, 2003, 2009, 2010, 2012, 2015, 2016
  • ಅಮೆರಿಕ ಓಪನ್: 1999, 2002, 2008, 2012, 2013, 201

[]

ವಿವಾದಗಳು

[ಬದಲಾಯಿಸಿ]

ಸೆರೆನಾ ವಿಲಿಯಮ್ಸ್ ಗೆ, ’ಯುಎಸ್ ಓಪನ್ ಟೆನ್ನಿನ್ ಟೂರ್ನಮೆಂಟ'ನಲ್ಲಿ ತೋರಿಸಿದ ಅಸಭ್ಯ ವರ್ತನೆಗೆ ಆಕೆಗೆ, 'ಯುಎಸ್ಓಪನ್ ಗ್ರಾಂಡ್ ಸ್ಲಾಮ್ ಟೂರ್ನಮೆಂಟ್ ನ ಆಡಳಿತ ಸಮಿತಿ' ೨೦೦೯ ರ ನವೆಂಬರ್ ೯ ರಂದು ೧೭೫,೦೦೦ ಅಮೆರಿಕನ್ ಡಾಲರ್ ತಲೆದಂಡವನ್ನು ವಿಧಿಸಿದ್ದಾರೆ.[] ಮುಂದಿನ ೨ ವರ್ಷಗಳಲ್ಲೂ ಇದೇ ತರಹ ಗ್ರಾಂಡ್ ಸ್ಲಾಮ್ ಆಟಗಳಲ್ಲಿ ಕೆಟ್ಟನಡವಳಿಕೆಯನ್ನು ಪ್ರದರ್ಶಿಸಿದಲ್ಲಿ, ೨೦೧೦, ೨೦೧೧, ಮತ್ತು ೨೦೧೨ ರ ಯುಎಸ್ ಓಪನ್ ಕ್ರೀಡೆಗಳಿಂದ ಹೊರಗೆ ಕೂಡಿಸಲಾಗುವುದೆಂದು ಫೆಡರೇಶನ್ ಕಠಿಣ ಎಚ್ಚರಿಕೆಯನ್ನು ನೀಡಿದೆ. ವರ್ಷ ೨೦೧೧ ರಲ್ಲಿ ಅವರಿಂದ ಯಾವುದೇ ಅಪ್ರಿಯ ನಡವಳಿಕೆ ಕಂಡುಬರದಿದ್ದಲ್ಲಿ, ದಂಡದ ಮೊತ್ತವನ್ನು ೮೨,೫೦೦ ಡಾಲರ್ ಗಳಿಗೆ ಇಳಿಸಲಾಗುವುದು.ಸೆರೆನಾ ತಮ್ಮ ಸೆಮಿಫೈನಲ್ಸ್ ನ ಎದುರಾಳಿ ನಂತರ ಚಾಂಪಿಯನ್ನಾಗಿ ಗೆದ್ದುಬಂದ 'ಕಿಮ್ ಕ್ಲಿಜ್ಟರ್ಸ್' ರವರ ವಿರುದ್ಧ ಆಡಿದ ಪಂದ್ಯದಲ್ಲಿ, ತಾಳ್ಮೆಗೆಟ್ಟು ವಿಪರೀತವಾಗಿ ನಡೆದುಕೊಂಡಿದ್ದರು. ಅದಲ್ಲದೆ, 'ಲೈನ್ಸ್ ವುಮನ್' ರವರ ತೀರ್ಪಿಗೆ ಅಸಮ್ಮತಿ ಸೂಚಿಸಿ ನಿಂದನೆಮಾಡಿ ಬೆದರಿಕೆಯ ಶಬ್ದಗಳ ಪ್ರಯೋಗಮಾಡಿದ್ದರು. 'ಟೆನಿಸ್ ರಾಕೆಟ್' ನ್ನು ನೆಲಕ್ಕೆ ಅಪ್ಪಳಿಸಿ ಕೂಗಿದಾಗ, ಎಚ್ಚರಿಕೆ ನೀಡಿದ ನಂತರವೂ ದಡದಡನೆ ಅಂಗಣದಿಂದ ನಿರ್ಗಮನಿಸಿದ್ದರು. 'ಕ್ರೀಡಾ-ಸ್ಫೂರ್ತಿ' ಮರೆತು ವಿಚಿತ್ರವಾಗಿ ವರ್ತಿಸಿದ ಆಕೆಗೆ, ಟೂರ್ನಮೆಂಟ್ ಸಂಘಟಕರು, ೧೦,೫೦೦ ಡಾಲರ್ ದಂಡವನ್ನು ವಿಧಿಸಿದ್ದರು. ೧೯೯೦ ರ ಬಳಿಕ ಮಹಿಳಾ ಟೆನ್ನಿಸ್ ಆಟಗಾತಿಯೊಬ್ಬರು, ತೆತ್ತ ದಂಡದ ಭಾರೀ ಮೊತ್ತ, ಸೆರೆನಾರವರದೇ ಎಂದು ಮಂಗಳವಾರ, ೧, ಡಿಸೆಂಬರ್, ೨೦೦೯ ರಂದು ಲಂಡನ್ ನ ’ಸ್ಪೋರ್ಟ್ಸ್ ಪತ್ರಿಕೆ’ ಯೊಂದರಲ್ಲಿ ದಾಖಿಸಲಾಗಿದೆ. ೩೦೮ ನೇ ಆಟದಲ್ಲಿ ವಿಜಯ []

ಉಲ್ಲೇಖಗಳು

[ಬದಲಾಯಿಸಿ]
  1. Saturday 31 January 2015 The guardian, Katy Murrels, 'Serena Williams beats Maria Sharapova to win Australian Open–as it happened
  2. BBC Sports, Tennis, Wimbledon 2015: Serena Williams beats Garbine Muguruza in final
  3. www.wimbledon.com, Saturday 9 July 2016 'Serena claims historic 22nd Grand Slam title'Williams beat German fourth seed Angelique Kerber to win a seventh Wimbledon and 22nd Grand Slam title
  4. http://timesofindia.indiatimes.com/sports/tennis/australian-open-2016/top-stories/Angelique-Kerber-stuns-Serena-Williams-to-win-Australian-Open-title/articleshow/50784971.cms
  5. https://en.wikipedia.org/wiki/2016_Australian_Open_%E2%80%93_Women%27s_Singles
  6. "ಸೆರೆನಾ ಚಾಂಪಿಯನ್‌prajavani". Archived from the original on 2016-07-05. Retrieved 2016-07-10. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  7. "ಸೆರೆನಾ ವಿಲಿಯಮ್ಸ್'". Archived from the original on 2015-02-07. Retrieved 2015-02-06.
  8. US Open 2016: Serena Williams beats Yaroslava Shvedova to claim 308th win, 29 August-11 September