ಸೋನು ಸೂದ್
ಸೋನು ಸೂದ್ | |
---|---|
ಸೋನು | |
Born | ಸೋನು ಸೂದ್ ೩೦ ಜುಲೈ ೧೯೭೩ |
Nationality | ಭಾರತೀಯ |
Other names | ಸೋನು |
Alma mater | ಯಶವಂತ್ರಾವ್ ಚವಾಣ್ ಕಾಲೇಜ್ ಆಫ್ ಇಂಜಿನಿಯರಿಂಗ್[೨] |
Occupation(s) | ನಟ, ನಿರ್ಮಾಪಕ, ರೂಪದರ್ಶಿ |
Years active | ೧೯೯೯ ರಿಂದ |
Spouse |
ಸೊನಾಲಿ ಸೂದ್ |
ಸೋನು ಸೂದ್ ಹಿಂದಿ, ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುವ ಭಾರತೀಯ ನಟ. ಅವರು ನಿರ್ಮಾಪಕ ಮತ್ತು ರೂಪದರ್ಶಿಯಾಗಿದ್ದರೆ.[೪] ಅವರು ಕೆಲವು ಕನ್ನಡ ಮತ್ತು ಪಂಜಾಬಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜುಲೈ ೨೦೧೬ ರಲ್ಲಿ ಅವರು ಶಕ್ತಿ ಸಾಗರ್ ಪ್ರೊಡಕ್ಷನ್ಸ್ ಎಂಬ ಚಲನಚಿತ್ರ ನಿರ್ಮಾಣ ಕಂಪೆನಿಯನ್ನು ಸ್ಥಾಪಿಸಿದರು. ಇದಕ್ಕೆ ಅವರ ತಂದೆ ಶಕ್ತಿ ಸಾಗರ್ ಅವರ ಹೆಸರನ್ನು ಇಡಲಾಗಿದೆ.
ಅವರು ಪಂಜಾಬ್ ಸರ್ಕಾರದಿಂದ ಪಂಜಾಬ್ ರತನ್ ಪ್ರಶಸ್ತಿ ಪಡೆದಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ಸೋನು ಸೂದ್ ಜುಲೈ ೩೦ ೧೯೭೩ರಲ್ಲಿ ಪಂಜಾಬಿನ ಮೋಗದಲ್ಲಿ ಜನಿಸಿದರು.[೫] ಅವರ ತಂದೆ ಶಕ್ತಿ ಸಾಗರ್ ಉದ್ಯಮಿ, ತಾಯಿ ಸರೋಜ್ ಸೂದ್ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದಾರೆ.[೬] ಇವರಿಗೆ ಮೊನಿಕಾ ಸೂದ್ ಮತ್ತು ಮಾಲ್ವಿಕಾ ಸೂದ್ ಇಬ್ಬರು ಸಹೋದರಿದ್ದಾರೆ.[೭] ಸೋನು ಅವರು ಪಂಜಾಬಿನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು ಮತ್ತು ನಂತರ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನಾಗ್ಪುರಕ್ಕೆ ತೆರಳಿದರು. ಯಶವಂತ್ರಾವ್ ಚವಾಣ್ ಕಾಲೇಜ್ ಆಫ್ ಇಂಜಿನಿಯರಿಂಗ್, ನಾಗ್ಪುರದಲ್ಲಿ ಪದವಿ ಪಡೆದರು.[೮] ನಾಗಪುರದ ಎಂಜಿನಿಯರಿಂಗ್ ಅಧ್ಯಯನದಲ್ಲಿ ಅವರ ಅಂತಿಮ ವರ್ಷದಲ್ಲಿ ಇದ್ದಾಗ ಸೋನು ಸೂದ್ ಗ್ರ್ಯಾಸಿಮ್ ಮಿಸ್ಟೆರ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಂಡರು, ಹಾಗೂ ಅಗ್ರ ಐದನೇ ಸ್ಥಾನದಲ್ಲಿದ್ದರು. ಸೋನು ಸೂದ್ ಸೋನಾಲಿ ಸೂದ್ ರೊಡನೆ ಮದುವೆಯಾಗಿದ್ದಾರೆ. ಅವರಿಗೆ ಇಶಾನ್ ಎಂಬ ಮಗನಿದ್ದಾನೆ.[೯]
ವೃತ್ತಿಜೀವನ
[ಬದಲಾಯಿಸಿ]೧೯೯೯ ರಲ್ಲಿ, ಕಲ್ಲಾಜ್ಹಾಗರ್ ಮತ್ತು ನೆನ್ಜಿಂಜೈಲೆಯೊಂದಿಗೆ ತಮಿಳು ಭಾಷೆಯ ಚಲನಚಿತ್ರಗಳಿಗೆ ಸೂದ್ ಪರಿಚಯಿಸಲ್ಪಟ್ಟಿದರು. ನಂತರ ೨೦೦೦ ರಲ್ಲಿ ನಂತರ ಅವರು ತೆಲುಗು ಚಲನಚಿತ್ರ ಹ್ಯಾಂಡ್ಸ್ ಅಪ್! ಚಲನಚಿತ್ರದಲ್ಲಿ ಕಾಣಿಸಿಕೊಂಡರು. ೨೦೦೧ ರಲ್ಲಿ ಅವರು ಮಜುನು ಚಲನಚಿತ್ರದಲ್ಲಿ ಕಾಣಿಸಿಕೊಂಡರು. 2002 ರಲ್ಲಿ ಅವರು ಹಿಂದಿ ಚಲನಚಿತ್ರ ಶಹೀದ್-ಇ-ಅಜಮ್ನಲ್ಲಿ ಭಗತ್ ಸಿಂಗ್ ಆಗಿ ಅಭಿನಯಿಸಿದರು. ೨೦೦೪ ರಲ್ಲಿ ಮಣಿ ರತ್ನಂ ಅವರ ಯುವ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅವರ ಸಹೋದರರಾಗಿ ನಟಿಸಿದರು. ೨೦೦೫ ರಲ್ಲಿ ಆಶಿಕ್ ಬನಯಾ ಆಪ್ನೆ ಎಂಬ ಚಿತ್ರದಲ್ಲಿ ಸೂದ್ ನಟಿಸಿ ಮೆಚ್ಚುಗೆ ಗಳಿಸಿದರು.
2005 ರಲ್ಲಿ ಬಿಡುಗಡೆಯಾದ ಟೋಲಿವುಡ್ನಲ್ಲಿ ಸೂಪರ್ ಚಲನಚಿತ್ರದಲ್ಲಿ ನಟಿಸಿದರು. ಅವರ ಈ ಕೆಲಸಕ್ಕೆ ಹೆಚ್ಚಿನ ಮನ್ನಣೆ ದೊರೆಯಿತು. ಈ ಚಿತ್ರದಲ್ಲಿ, ಅವರ ಸಹ-ನಟ ನಾಗಾರ್ಜುನ ಹೈಟೆಕ್ ಕಳ್ಳನಾಗಿದ್ದರು. ಅವರ ಮುಂದಿನ ಚಿತ್ರ ಅದಾಡು. 2006 ರಲ್ಲಿ, ಅವರು ಅಶೋಕ್ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದರಿಂದ ಅವರು ತೆಲುಗು ಚಿತ್ರಗಳಲ್ಲಿ ಜನಪ್ರಿಯರಾದರು. ಅವರು ಯುವ (2004), ಅದಾಡು (2005), ಆಶಿಕ್ ಬನಯಾ ಆಪ್ನೆ (2005), ಜೊಧಾ ಅಕ್ಬರ್ (2008), ದೂಕುಡು (2011) ಮತ್ತು ಶೂಟ್ಔಟ್ ಅಟ್ ವಡಾಲಾ [೧೦](2013) ಮುಂತಾದ ಬ್ಲಾಕ್ಬಸ್ಟರ್ ಚಲನಚಿತ್ರಗಳಲ್ಲಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
ರಾಯಭಾರಿ
[ಬದಲಾಯಿಸಿ]ಅವರು ಅಪೊಲೊ ಟೈರ್, ಏರ್ಟೆಲ್ ಇತ್ಯಾದಿಗಳಿಗೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಅವರು ಫಿಟ್ ಇಂಡಿಯಾ ಮೂಮೆಂಟ್ ನ ರಾಯಭಾರಿ ಆಗಿದ್ದಾರೆ.[೧೧]
ಪ್ರಶಸ್ತಿಗಳು
[ಬದಲಾಯಿಸಿ]2009 ರಲ್ಲಿ ಅವರು ತೆಲುಗು ಚಲನಚಿತ್ರ ಅರುಂಧತಿಗಾಗಿ ಆಂಧ್ರಪ್ರದೇಶ ರಾಜ್ಯದಿಂದ ಅತ್ಯುತ್ತಮ ಖಳನಾಯಕ ನಂದಿ ಪ್ರಶಸ್ತಿಯನ್ನು ಮತ್ತು ಅತ್ಯುತ್ತಮ ಪೋಷಕ ನಟ ಫಿಲಂಫೇರ್ ಪ್ರಶಸ್ತಿ ಪಡೆದರು.[೧೨] 2010 ರಲ್ಲಿ ಅವರ ದಬಂಗ್ ಚಲನಚಿತ್ರದ ನಕಾರಾತ್ಮಕ ಪಾತ್ರಕ್ಕೆ ಅಪ್ಸಾರ ಪ್ರಶಸ್ತಿಯ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಐಐಎಫ್ಎ ಪ್ರಶಸ್ತಿ ಪಡೆದರು.[೧೩][೧೪] 2012 ರಲ್ಲಿ, ಅವರು ಜುಲೈಚಲನಚಿತ್ರದ ನಕಾರಾತ್ಮಕ ಪಾತ್ರಕ್ಕೆ ಅತ್ಯುತ್ತಮ ನಟನಿಗಾಗಿ ಸೀಮಾ ಪ್ರಶಸ್ತಿ ಪಡೆದರು.
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://www.hindustantimes.com/chandigarh/sonu-sood-moga-to-mumbai-non-stop/story-C4LZ5u3JvBhGyEfwg0FsiI.html
- ↑ https://celebswikis.com/sonu-sood-wiki-age-height/
- ↑ https://starsunfolded.com/sonu-sood/
- ↑ https://celebswikis.com/sonu-sood-wiki-age-height/
- ↑ https://www.imdb.com/name/nm1399243/bio?ref_=nm_ov_bio_sm
- ↑ https://www.filmibeat.com/celebs/sonu-sood/biography.html
- ↑ http://indianexpress.com/article/entertainment/bollywood/sonu-soods-father-passes-away-actor-says-he-is-shattered/
- ↑ "ಆರ್ಕೈವ್ ನಕಲು". Archived from the original on 2012-03-17. Retrieved 2018-05-24.
- ↑ https://www.filmibeat.com/celebs/sonu-sood/biography.html
- ↑ https://www.getcelebbio.com
- ↑ http://www.dnaindia.com/bollywood/report-sonu-sood-is-the-brand-ambassador-of-fit-india-movement-2609310
- ↑ http://telugucinemass.blogspot.in/2009/01/sonu-soods-another-hit-arundhati.html
- ↑ "ಆರ್ಕೈವ್ ನಕಲು". Archived from the original on 2012-03-17. Retrieved 2018-05-24.
- ↑ http://www.thehindu.com/todays-paper/tp-national/sonu-sood-turns-producer-with-lucky-unlucky/article2587236.ece