ಸೋಮೇಶ್ವರ ದೇವಸ್ಥಾನ, ಬೈಂದೂರು
ಸೋಮೇಶ್ವರ ದೇವಸ್ಥಾನವು ಉಡುಪಿ ಜಿಲ್ಲೆಯ ಕುಂದಾಪುರದ ಬೈಂದೂರಿನಲ್ಲಿದೆ. ಇದು ಸೋಮೇಶ್ವರ ಕಡಲತೀರಕ್ಕೆ ಸಮೀಪದಲ್ಲಿರುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.[೧] ಇದು ಬೈಂದೂರು ನದಿ ಮತ್ತು ಅರಬ್ಬೀ ಸಮುದ್ರದ ಪಕ್ಕದಲ್ಲಿದೆ.
ವಿಶೇಷತೆ
[ಬದಲಾಯಿಸಿ]ಈ ದೇವಾಲಯವು ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾಗಿದೆ.[೨] ಇಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ ಮತ್ತು ಅನೇಕ ಅದ್ಭುತ ಶಿಲ್ಪಗಳಿವೆ. ಈ ದೇವಸ್ಥಾನವನ್ನು ಬಂಡೆಯ ಮೇಲೆ ನಿರ್ಮಿಸಲಾಗಿದೆ. ದೇವಸ್ಥಾನದ ಹೊರಗಡೆ ಕೆಲವು ಕಲ್ಲಿನ ಶಾಸನಗಳಿವೆ.[೩] ಇವು ಪ್ರಾಚೀನ ದೇವಾಲಯದ ಕಥೆಗಳನ್ನು ಹೇಳುತ್ತವೆ. ದೇವಸ್ಥಾನದ ಆವರಣದಲ್ಲಿ ನಾಗತೀರ್ಥ ಎಂಬ ಸಿಹಿನೀರಿನ ದೀರ್ಘಕಾಲಿಕ ಭೂಗತ ಮೂಲವನ್ನು ಹೊಂದಿರುವ ಕೊಳವಿದೆ.
ದೇವಾಲಯದ ಪಕ್ಕದಲ್ಲಿರುವ ಬಂಡೆಯ ಮೇಲೆ ಸಿಹಿ ನೀರಿನ ಹೊಳೆ ನಿರಂತರವಾಗಿ ಹರಿಯುತ್ತದೆ.[೩] ಈ ಹೊಳೆ ಬಂಡೆಗಳೊಳಗೆ ಕಣ್ಮರೆಯಾಗುತ್ತದೆ ಮತ್ತು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಸಮುದ್ರದ ಅಲೆಗಳು ಭಗವಂತನ ಪಾದಗಳನ್ನು ತೊಳೆಯುತ್ತಿರುವಂತೆ ತೋರುತ್ತದೆ. ಸೋಮೇಶ್ವರ ದೇವಸ್ಥಾನವು ತೀರ್ಥಕ್ಷೇತ್ರವಾಗಿರುವುದರ ಜೊತೆಗೆ ಅಪೂರ್ವ ಪ್ರವಾಸಿ ತಾಣವು ಆಗಿದೆ.
ಮಾರ್ಗಸೂಚಿ
[ಬದಲಾಯಿಸಿ]ಈ ದೇವಸ್ಥಾನವು ಉಡುಪಿಯಿಂದ ಸುಮಾರು ೭೪.೬ ಕಿ.ಮೀ ಹಾಗೂ ಕುಂದಾಪುರದಿಂದ ೩೯.೩ ಕಿ.ಮೀ ದೂರದಲ್ಲಿದೆ.
ಹತ್ತಿರದ ಸ್ಥಳಗಳು
[ಬದಲಾಯಿಸಿ]- ಕ್ಷಿತಿಜ ನೇಸರ ಧಾಮ - ೧.೨ ಕಿ.ಮೀ
- ಒತ್ತಿನೆಣೆ ಕಡಲತೀರ - ೧.೫ ಕಿ.ಮೀ
- ಮರವಂತೆ ಕಡಲತೀರ - ೨೨.೬ ಕಿ.ಮೀ
- ತ್ರಾಸಿ ಕಡಲತೀರ - ೨೩.೧ ಕಿ.ಮೀ