ವಿಷಯಕ್ಕೆ ಹೋಗು

ಸ್ಟಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಟಡ್

ಸ್ಟಡ್(stud) ಎರಡು ಕೊನೆಯಲ್ಲಿ ಸುರುಳಿಯಾಕಾರದ ಏಣು(ಥ್ರೆಡ್) ಇರುವ ಒಂದು ಉದ್ದವಾದ ಸರಳಾಗಿರುತ್ತದೆ; ಸಂಪೂಣ೯ವಾಗಿ ಸರಳಿನ ಉದ್ದಕ್ಕೂ ಏಣು(ಥ್ರೆಡ್) ಇರಬಹುದು.[] ಅವುಗಳನ್ನು ಎಳೆತದಲ್ಲಿ(tension) ಉಪಯೋಗಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಕಂಬಿ ಕಾಂಡದ(ಬಾರ್ ಸ್ಟಾಕ್(bar stock)) ರೂಪದಲ್ಲಿರುವ ಏಣಿನ ಸರಳನ್ನು ಕೆಲವೊಮ್ಮೆ ಆಲ್- ಥ್ರೆಡ್(all-thread) ಎಂದು ಕರೆಯಲಾಗುತ್ತದೆ.[]

ಸ್ಟಡ್ ಗಳು

[ಬದಲಾಯಿಸಿ]
Motore Balilla PSF

ಸ್ಟಡ್ ನ್ನು ಸ್ಕೃಡ್ರೈವರನ್ನು ಉಪಯೋಗಿಸಿ ತಿರುಗಿಸಲು ಅನೂಕೂಲವಾಗುವಂತೆ ಒಂದು ಕೊನೆಯ ತುದಿಯಲ್ಲಿ ಸೀಳು ಇರಬಹುದು.

ವಿಧಗಳು

[ಬದಲಾಯಿಸಿ]
Судовой дизель SKL 6 DV 224, шильда, остров Тузла, август 2007 г

ಸಂಪೂಣ೯ವಾಗಿ ಏಣು(ಥ್ರೆಡ್) ಇಲ್ಲದಿರುವ ಸ್ಟಡ್ ಗಳಲ್ಲಿ ಎರಡು ವಿಧಗಳು.

  • ಪುಲ್ ಬಾಡಿಡ್ ಸ್ಟಡ್(full-bodied studs)
  • ಅಂಡರ್ ಕಟ್ ಸ್ಟಡ್ (undercut studs)

ಪುಲ್ ಬಾಡಿಡ್ ಸ್ಟಡ್ ಗಳ ಕಾಲುಭಾಗವು ಸ್ಟಡ್ ನ ಹಿರಿದಾದ(major diameter) ವ್ಯಾಸಕ್ಕೆ ಸಮಾನವಾಗಿರುತ್ತದೆ. ಅಂಡರ್ ಕಟ್ ಸ್ಟಡ್‍ಗಳು ಪಿಚ್ ವ್ಯಾಸಕ್ಕೆ ಸಮಾನವಾದ ಕಾಲುಭಾಗವನ್ನು ಹೊಂದಿವೆ. ಅಂಡರ್ ಕಟ್ ಸ್ಟಡ್ ಗಳನ್ನು ಅಕ್ಷೀಯ ಬೀಗಿತಗಳನ್ನು(axial stresses) ಉತ್ತಮವಾಗಿ ಹರಡಲು ವಿನ್ಯಾಸಗೊಳಿಸಲಾಗಿರುತ್ತದೆ.ಪುಲ್ ಬಾಡಿಡ್(full-bodied) ಸ್ಟಡ್ ಗಳಲ್ಲಿ, ಬಿಗಿತಗಳು ಕಾಲಿನಭಾಗಕ್ಕಿಂತಲೂ ಏಣು(ಥ್ರೆಡ್)ಗಳಲ್ಲಿ ಹೆಚ್ಚಾಗಿರುತ್ತವೆ.

ಅಂಡರ್ ಕಟ್ ಸ್ಟಡ್‍ಗಳಲ್ಲಿ(Undercut studs (rolled thread))ಲೋಹವನ್ನು(metal) ತೆಗೆದು ಹಾಕಲ್ಪಡುವುದಿಲ್ಲ ಮತ್ತು ಪ್ರಮುಖ ವ್ಯಾಸವರೆಗೆ "ಉರುಳಾಗಿಸಲ್ಪಟ್ಟಿರುವುದರಿಂದ (rolled)" ಶಕ್ತಿಯುತವಾಗಿರುತ್ತದೆ. ಇದು ಉಕ್ಕಿನ ಕಣಗಳನ್ನು ರಕ್ಷಿಸುತ್ತದೆ ಮತ್ತು ಕೆಲವು ಸಂದಭ೯ಗಳಲ್ಲಿ ಹೆಚ್ಚಿಸುತ್ತದೆ. ಪುಲ್ ಬಾಡಿಡ್ ಸ್ಟಡ್ ನ್ನು ನಿಮಿ೯ಸಲು ಲೋಹವು ತೆಗೆದು ಹಾಕಲ್ಪಡುವಾಗ ಉಕ್ಕಿನ ಕಣಗಳು ಕಲಕುವುದರಿಂದ ದುಬ೯ಲವಾಗಿರುತ್ತದೆ.

ಅಂಡರ್ ಕಟ್ ಸ್ಟಡ್ ಗಳು ಶ್ರಮ ಕೆಲಸದಲ್ಲಿ ಒಡ್ಡಲು ಪಡುವ ಬಳಕೆಯಲ್ಲಿ ಮಾತ್ರ ಬೇಕಾಗುತ್ತದೆ. ಉರಿಳಸಲ್ಪ ಥ್ರೆಡ್ ಗಳು ಸ್ವಲ್ಪವೇ ಶಕ್ತಿಯುತವಾದರೂ, ಕತ್ತರಿಸಿರುವ ಸ್ಟಡ್‍ಗಳು ಸಂಪೂರ್ಣವಾಗಿ ಬಹಳ ಬಳಕೆಯಲ್ಲಿ ಸೂಕ್ತವಾಗಿರುತ್ತದೆ. ರಾಶಿಯಾಗಿ ಉತ್ಪಾದಿಸುವ ಬಂಧಕಗಳು(ಪ್ರಮಾಣಿತ ಬೋಲ್ಟ್ ಗಳು ಮತ್ತು ಸ್ಟಡ್‍ಗಳು) ಸಾಮಾನ್ಯವಾಗಿ ಉರುಳಾಗಿಸಲ್ಪಟ್ಟಿರುವವು(rolled), ಬಳಕೆದಾರನಿಗೆ ಅನುಕೂಲಕ್ಕೆ ತಕ್ಕಂತೆ ಚಹರೆಗಳು ಇರುವ ಭಾಗಗಳ ಮತ್ತು ಚಿಕ್ಕ ಗಾತ್ರದ ರಾಶಿಗಳನ್ನು ಕತ್ತರಿಸುವಿಕೆಯಿಂದ(cutting)ಉತ್ಪಾದಿಸುವ ಸಾದ್ಯತೆಗಳು ಕಡಿಮೆ.

ಬಲ(Strength)

[ಬದಲಾಯಿಸಿ]

ಅಮೇರಿಕನ್ ಇನ್ ಸ್ಟಿಟ್ಯೂಷನ್ ಆಫ್ ಸ್ಟೀಲ್ ಕನ್‍ಸ್ಟ್ರಕ್ಷನ್(American Institute of Steel Construction (AISC))ಯಿಂದ ನಿರುಪಿಸಲ್ಪಟ್ಟಿರುವಂತೆ ಅನುಮತಿಸಲಾಗುವ( allowable tensile force) ಎಳೆತದ ಸಾಮರ್ಥ್ಯ ಹೀಗಿದೆ.

ಇಲ್ಲಿ: d = ಅತ್ಯಲ್ಪ ವ್ಯಾಸವಾಗಿರುತ್ತದೆ, Fu = ಅಂತಿಮ ಎಳೆತದ(ಬಿಗುಪು)ಬಲವಾಗಿರುತ್ತದೆ(ultimate tensile strength), ಅಂಡರ್ ಕಟ್ ಸ್ಟಡ್ ಇರುವ ಸರಳುಗಳಿಗೆ ಅನುಮತಿಸಲಾಗುವ ಎಳೆತದ ಸಾಮರ್ಥ್ಯ(allowable tensile stress)ವನ್ನು ಹೀಗೆ ನಿರೂಪಿಸಲಾಗುತ್ತದೆ:

ds = ಕಾಲು ಭಾಗದ ವ್ಯಾಸವಾಗಿರುತ್ತದೆ. Fy = ವಸ್ತುವಿನ ಇಳುವರಿ ಸಾಮರ್ಥ್ಯವಾಗಿರುತ್ತದೆ(yield strength) ಮೇಲಿನ ಎರಡೂ ಸಮೀಕರಣಗಳು(equations) ಬರುವ ಫಲಿತಾಂಶಗಳು ಬಲದ ಮೂಲಮಾನವನ್ನು ಕೊಡುತ್ತದೆ. ಅಂದರೆ ನ್ಯೂಟನ್ ಗಳಲ್ಲಿ ಇರುತ್ತದೆ.

ವರ್ಗ(Class)

[ಬದಲಾಯಿಸಿ]

ಮೆಟ್ರಿಕ್ ಥ್ರೆಡ್ ಇರುವ ಸರಳುಗಳ ಮೇಲೆ ಐಎಸ್ಓ(ISO) ಬಲ ವರ್ಗೀಕರಣದಂತೆ ಕೊನೆಯಲ್ಲಿ ಬಣ್ಣಗಳ ಗುರುತು ಮಾಡಲ್ಪಟ್ಟಿರುತ್ತದೆ. ಬಣ್ಣಗಳ ಚಿಹ್ನೆಗಳು ಯಾವುವೆಂದರೆ:

  • ಗುರುತು ಇಲ್ಲದಿರುವ(Unmarked) — 4.6 class (tensile strength = 400 N/mm2, yield strength 240 N/mm2)
  • ಹಳದಿ(Yellow)— 8.8 class (800 N/mm2, 640 N/mm2)
  • ಹಸಿರು(Green)— A2 stainless steel (304)
  • ಕೆಂಪು(Red) — A4 stainless steel (316)
  • ಬಿಳಿ (White) — 10.9 class (1000 N/mm2, 900 N/mm2)

ಉಲ್ಲೇಖಗಳು

[ಬದಲಾಯಿಸಿ]
  1. Soled, Julius (1957), Fasteners handbook, Reinhold Publishing, p. 90.
  2. Speck, James A. (1997), Mechanical fastening, joining, and assembly, CRC Press, p. 54, ISBN 978-0-8247-9835-2.


ಗ್ರಂಥಸೂಚಿ

[ಬದಲಾಯಿಸಿ]
"https://kn.wikipedia.org/w/index.php?title=ಸ್ಟಡ್&oldid=1046788" ಇಂದ ಪಡೆಯಲ್ಪಟ್ಟಿದೆ