ವಿಷಯಕ್ಕೆ ಹೋಗು

ಸ್ಟ್ರಾಬೆರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Garden strawberry
Garden strawberries grown hydroponically
Scientific classification
ಸಾಮ್ರಾಜ್ಯ:
Plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
F. × ananassa
Binomial name
Fragaria × ananassa

ಗಾರ್ಡನ್ ಸ್ಟ್ರಾಬೆರಿ ಯು ಫ್ರಗೇರಿಯ ವರ್ಗಕ್ಕೆ ಸೇರಿದ ಸಾಮಾನ್ಯ ಸಸ್ಯವಾಗಿದೆ.(ಸಾಮಾನ್ಯವಾಗಿ)ಸ್ಟ್ರಾಬೆರಿ ಎಂದು ಕರೆಯಲ್ಪಡುವ ಇದರ ಹಣ್ಣಿಗಾಗಿ ಪ್ರಪಂಚದಾದ್ಯಂತ ಇದನ್ನು ಬೆಳೆಯಲಾಗುತ್ತದೆ. ಈ ಹಣ್ಣು ಮುಖ್ಯವಾಗಿ ಅದರ ವಾಸನೆಗಾಗಿ ಹಾಗೂ ಗಾಢವಾದ ಕೆಂಪು ಬಣ್ಣಕ್ಕಾಗಿಯೂ ಕೂಡ ಹೆಚ್ಚಾಗಿ ಪ್ರಸಿದ್ಧಿಯಾಗಿದೆ.ಅಲ್ಲದೇ ತಾಜಾ ಹಣ್ಣುಗಳ ರೂಪದಲ್ಲಿ ಅಥವಾ ತಯಾರಿಸಲ್ಪಡುವ ಆಹಾರಗಳಲ್ಲಿ ಉದಾಹರಣೆಗೆ ಸಂರಕ್ಷಿತಗಳಲ್ಲಿ, ಹಣ್ಣಿನ ರಸಗಳಲ್ಲಿ, ಆಕೃತಿಗಳಲ್ಲಿ, ಐಸ್ ಕ್ರೀಮ್ಗಳಲ್ಲಿ ಹಾಗೂ ಮಿಲ್ಕ್ ಶೇಕ್ ಇತ್ಯಾದಿಗಳಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಸ್ಟ್ರಾಬೆರಿಯ ಕೃತಕ ಪರಿಮಳವನ್ನು ಕೈಗಾರಿಕೀಕರಿಸಲ್ಪಟ್ಟ ಎಲ್ಲಾ ರೀತಿಯ ಆಹಾರ ಉತ್ಪನ್ನಗಳಲ್ಲಿಯೂ ಕೂಡ ಹೆಚ್ಚಾಗಿ ಬಳಸಲಾಗುತ್ತದೆ.

ಗಾರ್ಡನ್ ಸ್ಟ್ರಾಬೆರಿ ಯನ್ನು ಮೊಟ್ಟ ಮೊದಲನೆಯ ಬಾರಿಗೆ 1740 ರಲ್ಲಿ ಫ್ರಾನ್ಸ್ಬ್ರಿಟನಿ ಪೂರ್ವೋತ್ತರ ಅಮೇರಿಕಾದಿಂದ ತೆಗೆದುಕೊಳ್ಳಲಾದ ಫ್ರಗೇರಿಯ ವರ್ಗಿನಿನ ಎಂಬ ಮಿಶ್ರ ತಳಿಯ ಮೂಲಕ ಬೆಳೆಯಲಾಯಿತು.ಈ ತಳಿಯು ಅದರ ರುಚಿಗೆ ಹಾಗೂ ಅಮೆಡೆ-ಫ್ರ್ಯಾಕೋಸಿಸ್ ಫ್ರೆಜಿಯರ್ ಎಂಬುವವನು ಚಿಲೆ ಮತ್ತು ಅರ್ಜೆಂಟೈನ ದಿಂದ ತರಲಾದ ಫ್ರಗೇರಿಯ ಸಿಲೋನ್ಸಿಸ್ ಗೆ ಅತ್ಯಂತ ಹೆಸರುವಾಸಿಯಾಗಿತ್ತು. ಅಲ್ಲದೆ ಅದರ ದೊಡ್ಡ ಗಾತ್ರದಿಂದಲೂ ಕೂಡ ಜನಪ್ರಿಯವಾಗಿತ್ತು.[]

ಫ್ರಗೇರಿಯ × ಅನನಾಸಾ ಕೃಷಿ ಪ್ರಭೇದವನ್ನು ವಾಣಿಜ್ಯ ಉತ್ಪಾದನೆಗೆ ಬದಲಾಯಿಸಲಾಯಿತು. ವುಡ್ ಲ್ಯಾಂಡ್ ಸ್ಟ್ರಾಬೆರಿಮೊಟ್ಟ ಮೊದಲನೆಯ ಸ್ಟ್ರಾಬೆರಿ ತಳಿಯಾಗಿದ್ದು 17ನೇ ಶತಮಾನದ ಮೊದಲಿಗೆ ಬೆಳೆಯಲಾಯಿತು.[]

ತಾಂತ್ರಿಕವಾಗಿ ಸ್ಟ್ರಾಬೆರಿ ಉಪ ಹಣ್ಣಾಗಿದೆ.ಇದರ ತಾಜಾ ಭಾಗವು ಸಸ್ಯಗಳ ಅಂಡಾಶಯದಲ್ಲಿ (ಆಕೀನ್ ಗಳು) ಅಲ್ಲದೆ ಅಂಡಾಶವನ್ನು ಹಿದಿದುಕೊಂಡಿರುವ ಪುಷ್ಪ ಪಾತ್ರೆ ಯಿಂದ ರಚಿಸಲ್ಪಟ್ಟಿರುತ್ತದೆ.[] ಹಿಂದೆ, ಚಿಕ್ಕ ಹಣ್ಣುಗಳು ಕೆಲವೊಮ್ಮೆ "ಸುಳ್ಳು" ಅಥವಾ "ಹುಸಿ" ಹಣ್ಣುಗಳನ್ನು ಸೂಚಿಸುತ್ತಿದ್ದವು,ಆದರೆ ಆ ಪದಗಳು "ಅಸಿಂಧು"[] ವೆಂದು ಟೀಕಿಸಲಾಯಿತು.ಅಲ್ಲದೇ ಆ ಪದಗಳನ್ನು ಈಗ ಸಸ್ಯವಿಜ್ಞಾನಿಗಳು ಬಳಸುತ್ತಿಲ್ಲ.

Closeup of a healthy, red strawberry
ಫ್ರಗೇರಿಯ × ಅನನಾಸಾ 'ಗಾರಿಗ್ಯೂಟ್ಟೆ,' ದಕ್ಷಿಣ ಫ್ರಾನ್ಸ್ ನಲ್ಲಿ ಬೆಳೆದಂತಹ ಕೃಷಿ ತಳಿ
ಸ್ಟ್ರಾಬೆರಿಸ್ ಟೆಮ್ ಲ್ಯಾಪ್ಸ್ (ಹೆಬ್ಬೆರಳಿನ ಗಾತ್ರದ ಬೇಗನೆ ಬಾಡುವ ಸ್ಟ್ರಾಬೆರಿ)

ಸ್ಟ್ರಾಬೆರಿಯ [] ಕೃಷಿ ತಳಿಗಳು ಗಾತ್ರದಲ್ಲಿ , ಬಣ್ಣದಲ್ಲಿ, ರುಚಿಯಲ್ಲಿ, ಆಕಾರದಲ್ಲಿ, ಫಲವತ್ತತೆಯ ಗುಣಮಟ್ಟದಲ್ಲಿ ,ಹಣ್ಣಾಗುವ ಕಾಲಗಳಲ್ಲಿ, ಕಾಯಿಲೆಯನ್ನು ಹೊಂದುವುದರಲ್ಲಿ ಹಾಗೂ ಸಸ್ಯಗಳ ರಚನಾಕ್ರಮದಲ್ಲಿಯೂ ಕೂಡ ಗಣನೀಯ ವ್ಯತ್ಯಾಸವನ್ನು ಹೊಂದಿರುತ್ತದೆ.[] ಕೆಲವು ಎಲೆಗಳಲ್ಲಿ ವ್ಯತ್ಯಾಸವನ್ನು ಹೊಂದಿದ್ದರೆ , ಇನ್ನೂ ಕೆಲವು ವಾಸ್ತವವಾಗಿ ಅವುಗಳ ಸಂತಾನೋತ್ಪತ್ತಿ ಭಾಗಗಳ ಬೆಳವಣಿಗೆಗೆ ಸಂಬಂಧ ಪಟ್ಟಂತೆ ವ್ಯತ್ಯಾಸವನ್ನು ಹೊಂದಿರುತ್ತವೆ. ಹೆಚ್ಚು ಸಂದರ್ಭದಲ್ಲಿ ಹೂ ಗಳು ರಚನೆಯಲ್ಲಿ ಉಭಯಲಿಂಗಿಯಾಗಿರುತ್ತವೆ,ಆದರೆ ಗಂಡು ಅಥವಾ ಹೆಣ್ಣಾಗಿ ಕಾರ್ಯ ನಿರ್ವಹಿಸುತ್ತವೆ.[]

ವಾಣಿಜ್ಯ ಉತ್ಪಾದನೆಯ ಉದ್ದೇಶದಿಂದಾಗಿ ಸಸ್ಯಗಳನ್ನು ಉಪಕಾಂಡಗಳಿಂದ ಹೊಸ ಸಸ್ಯವನ್ನು ಹುಟ್ಟಿಸುವುದು ಹಾಗೂ ಸಹಜವಾಗಿ ಕೇವಲ ಬೇರಿರುವ ಸಸ್ಯಗಳ ರೂಪದಲ್ಲಿ ಅಥವಾ ಪಾತ್ರೆಯ ರೂಪದಲ್ಲಿ ವಿತರಿಸಲಾಗುವುದು. ಕೃಷಿಯು ಒಂದು ಅಥವಾ ಎರಡು ಸಾಮಾನ್ಯ ಮಾದರಿಗಳನ್ನು ಅನುಸರಿಸುತ್ತದೆ.ಆ ಮಾದರಿಗಳು ವಾರ್ಷಿಕಪ್ಲ್ಯಾಸ್ಟಿಕಲ್ಚರ್[] ಅಥವಾ ನಿಶಕ್ತ ಸಸ್ಯಗಳ ಸಾಲಿನ ಅಥವಾ ದಿಬ್ಬಗಳ ಬಹುವಾರ್ಷಿಕ ವ್ಯವಸ್ಥೆ ಆಗಿದೆ.[] ಬೆಳೆ ಬೆಳೆಯದ ಋತುವಿನಲ್ಲೂ ಕೂಡ ಗ್ರೀನ್ ಹೌಸ್ ನಲ್ಲಿ ಅಲ್ಪ ಪ್ರಮಾಣದ ಸ್ಟ್ರಾಬೆರಿಯನ್ನು ಬೆಳೆಯಲಾಗುತ್ತದೆ.[]

A large strawberry field with plastic covering the earth around the strawberry plants.
ಪ್ಲ್ಯಾಸ್ಟಿಕಲ್ಚರ್ ವಿಧಾನವನ್ನು ಬಳಸುವ ಗಾರ್ಡನ್

ಬೃಹತ್ ಪ್ರಮಾಣದ ಆಧುನಿಕ ವಾಣಿಜ್ಯ ಉತ್ಪಾದನೆಯಲ್ಲಿ ಪ್ಲ್ಯಾಸ್ಟಿಕಲ್ಚರ್ ವಿಧಾನವನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಪ್ರತಿವರ್ಷ ಬೆಳೆಯನ್ನು ಬೆಳೆಯಲಾಗುವುದು, ಆ ಬೆಳೆಯನ್ನು ಹೊಗೆ ಹಾಗುವುದರ ಮೂಲಕ ಶುದ್ಧೀಕರಿಸಲಾಗುವುದು. ಅಲ್ಲದೇ ಕಳೆ ಹೆಚ್ಚಾಗದಂತೆ ಹಾಗೂ ಕ್ಷರಣವನ್ನು ತಡೆಗಟ್ಟಲು ಪ್ಲ್ಯಾಸ್ಟಿಕ್ ನಿಂದ ಮುಚ್ಚಲಾಗಿರುತ್ತದೆ. ಉತ್ತರದ ಸಸಿತೋಟಗಳಿಂದ (ನರ್ಸರಿ) ತಂದ ಸಸ್ಯಗಳನ್ನು ರಂಧ್ರ ಮಾಡಿರುವ ಪ್ಲ್ಯಾಸ್ಟಿಕ್ ಗಳಲ್ಲಿ ನೆಡಲಾಗುತ್ತದೆ. ಅಲ್ಲದೇ ಸಸ್ಯದ ಅಡಿಯಲ್ಲಿ ಕೊಳವೆಯ ಮೂಲಕ ನೀರನ್ನು ಹಾಯಿಸಲಾಗುತ್ತದೆ. ಸಸ್ಯ ಅದರ ಹಣ್ಣಿನ ಮೇಲೆ ಹೆಚ್ಚು ಶಕ್ತಿಯನ್ನು ವಿನಿಯೋಗಿಸಲು, ಸಸ್ಯಗಳಲ್ಲಿ ಉಪಕಾಂಡಗಳನ್ನು ಕಾಣಿಸಿಕೊಂಡ ಕೂಡಲೆ ಅವುಗಳನ್ನು ತೆಗೆದುಹಾಕಲಾಗುತ್ತದೆ. ಸುಗ್ಗಿ ಕಾಲದ ಕೊನೆಯಲ್ಲಿ ಪ್ಲ್ಯಾಸ್ಟಿಕ್ ಅನ್ನು ತೆಗೆದುಹಾಗಿ ಸಸ್ಯಗಳನ್ನು ನೆಲದಲ್ಲಿ ನಾಟಿ ಮಾಡಲಾಗುತ್ತದೆ.[][೧೦] ಒಂದು ಅಥವಾ ಎರಡು ವರ್ಷಗಳ ನಂತರ ಸ್ಟ್ರಾಬೆರಿ ಸಸ್ಯಗಳು ಅವುಗಳ ಫಲವತ್ತತೆಯನ್ನು ಹಾಗೂ ಹಣ್ಣಿನ ಗುಣಮಟ್ಟವನ್ನು ಕಳೆದುಕೊಳ್ಳಲು ಪ್ರಾರಂಭವಾಗುವ ಕಾರಣ , ಪ್ರತಿವರ್ಷ ಸಸ್ಯಗಳನ್ನು ಬದಲಾಯಿಸಲ್ಪಡುವುದರಿಂದ ಈ ವ್ಯವಸ್ಥೆ ಫಲವತ್ತತೆಯನ್ನು ಹಾಗೂ ಬೆಳೆಯಲು ಸಾಂದ್ರತೆಯನ್ನು ಹೆಚ್ಚಿಸುತ್ತದೆ.[][೧೦] ಆದರೂ, ಪ್ರತಿವರ್ಷ ಸಸ್ಯಗಳು ಬೇರೂರಲು ದೀರ್ಘವಾದ ಅವಧಿಯನ್ನು ತೆಗೆದುಕೊಳ್ಳುವುದರಿಂದ ಹಾಗೂ ಅದನ್ನು ಕೃಷಿಮಾಡಲು , ದಿಬ್ಬಗಳನ್ನು ಮುಚ್ಚಲು ಮತ್ತು ಪ್ರತಿವರ್ಷ ಸಸ್ಯಗಳನ್ನು ಕೊಂಡುಕೊಳ್ಳಲು ಹೆಚ್ಚು ಹಣ ಖರ್ಚಾಗುವುದರಿಂದ ಎಲ್ಲಾ ಪ್ರದೇಶಗಳಲ್ಲಿ ಈ ವಿಧಾನದವನ್ನು ಅನುಸರಿಸುವುದು ಸಾಧ್ಯವಿಲ್ಲ.[೧೦]

ಅದೇ ಸಸ್ಯವನ್ನು ವರ್ಷದಿಂದ ವರ್ಷಕ್ಕೆ ಸಸ್ಯಸಾಲುಗಳಲ್ಲಿ ಅಥವಾ ದಿಬ್ಬಗಳ ಮೇಲೆ ಬೆಳೆಸುವುದು ಇನ್ನೊಂದು ಪ್ರಮುಖ ವಿಧಾನವಾಗಿದೆ. ಈ ವಿಧಾನವನ್ನು ಸಾಮಾನ್ಯವಾಗಿ ಥಂಡಿ ಹವಾಮಾನವಿರುವಾಗ ಅನುಸರಿಸಲಾಗುತ್ತದೆ.[][] ಈ ವಿಧಾನವು ಕಡಿಮೆ ಬಂಡವಾಳವನ್ನು ಹಿಡಿಯುತ್ತದೆ ಅಲ್ಲದೇ ಕಡಿಮೆ ಖರ್ಚಿನಲ್ಲಿ ಎಲ್ಲಾವು ಮುಗಿಯುತ್ತದೆ .[] ಫಲವತ್ತತೆಯು ಪ್ಲ್ಯಾಸ್ಟಿಕಲ್ಚರ್ ವಿಧಾನದಲ್ಲಿ ಇರುವುದಕ್ಕಿಂತ ಕಡಿಮೆಯಿರುತ್ತದೆ.[]

ಮೂರನೆಯ ವಿಧಾನವು ಕಾಂಪೋಸ್ಟ್ ಸಾಕ್ಸ್ (ಮಿಶ್ರಗೊಬ್ಬರದ ಟ್ಯೂಬುಗಳು)ಅನ್ನು ಬಳಸುತ್ತದೆ. ಕಾಂಪೋಸ್ಟ್ ಸಾಕ್ಸ್ ನಲ್ಲಿ ಬೆಳೆಯುವ ಸಸ್ಯಗಳಿಗೆ ಕಪ್ಪು ಪ್ಲ್ಯಾಸ್ಟಿಕ್ ವಿಧಾನಕ್ಕಿಂತ ಹಾಗೂ ದಿಬ್ಬ ಸಾಲುಗಳ ವಿಧಾನಕ್ಕಿಂತ ಹೆಚ್ಚು ಅಧಿಕ ಆಮ್ಲಜನಕವನ್ನು ಮೂಲಜ ಹೀರಿಕೊಳ್ಳುವ ಸಾಮರ್ಥ್ಯವನ್ನು (ORAC), ಫ್ಯಾವೋನಾಯ್ಡಸ್ , ಆಂತೋಸಿಯಾನ್ಸಿಸ್, ಫಲಭರಿತ, ಗ್ಲೂಕೋಸ್, ಸೂಕ್ರೋಸ್, ಮ್ಯಾಲಿಕ್ ಆಮ್ಲ, ಮತ್ತು ಸಿಟ್ರಿಕ್ ಆಮ್ಲ ವನ್ನು ಒದಗಿಸಬೇಕಾಗುತ್ತದೆ.[೧೧] US ನ ಡಿಪಾರ್ಟ್ ಮೆಂಟ್ ಆಫ್ ಅಗ್ರಿಕಲ್ಚರ್ 2003ರಲ್ಲಿ ಬೆಸ್ಟ್ ವಿಲ್ ಮೇರಿ ಲ್ಯಾಂಡ್ ನಲ್ಲಿರುವ ಕೃಷಿ ಸಂಶೋಧನ ಸಂಸ್ಥೆಯಲ್ಲಿ ನಡೆಸಿದಂತಹ ಅಧ್ಯಾನ , ಹೇಗೆ ಮಿಶ್ರಗೊಬ್ಬರ ಎರಡು ಸ್ಟ್ರಾಬೆರಿ ಕೃಷಿ ತಳಿಗಳ ಬಯೋಆಕ್ಟಿವ್ ಗುಣದಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.[೧೨]

A closeup view of hundreds of red strawberries.
ಫ್ರಗೇರಿಯ × ಅನನಾಸಾ 'ಚಲ್ಯಾಂಡರ್, ಕ್ಯಾಲಿಫೋರ್ನಿಯದಲ್ಲಿ ಬೆಳೆದ ಅಲ್ಪ ಕಾಲದ ವಾಣಿಜ್ಯ ಕೃಷಿತಳಿ

ಸ್ಟ್ರಾಬೆರಿಗಳು ಅವುಗಳ ವಿಕಸನ ಕ್ರಿಯೆಯಿಂದ ಯಾವಾಗಲೂ ವಿಂಗಡಿಸಲ್ಪಡುತ್ತವೆ.[][೧೩] ಸಾಂಪ್ರದಾಯಿಕವಾಗಿ ಇದು "ಜೂನ್ ನಲ್ಲಿ ಬೆಳೆಯ " ಸ್ಟ್ರಾಬೆರಿಗಳು,ಅಂದರೆ ಬೇಸಿಗೆಗಿಂತ ಮೊದಲು ಬೆಳೆಯುವ ಹಣ್ಣುಗಳು. "ಯಾವಾಗಲೂ-ಬೆಳೆಯುವ" ಸ್ಟ್ರಾಬೆರಿಗಳು,ಅಂದರೆ ಯಾವಾಗಲೂ ವಾರ್ಷಪೂರ್ತಿ ಬೆಳೆಯುವಂತಹ ಹಣ್ಣುಗಳನ್ನು ವಿಂಗಡಿಸುತ್ತದೆ.[೧೩] ಸ್ಟ್ರಾಬೆರಿಗಳು ಮೂರು ವಿಕಸನ ಕ್ರಿಯೆಗಳಲ್ಲಿ ಕಂಡುಬರುತ್ತವೆ ಎಂದು ಇತ್ತೀಚಿನ ಸಂಶೋಧನೆಗಳು ಸ್ಪಷ್ಟಪಡಿಸಿವೆ: ಅಲ್ಪದಿನದ, ದೀರ್ಘದಿನದ ಹಾಗೂ ತಟಸ್ಥದಿನದ. ಇವು ದಿನವಿಡಿ ನಡೆಯುವಂತಹ ಸಸ್ಯಗಳ ಸಂವೇದತ್ವವನ್ನು ಹಾಗೂ ಹೂ ಬಿಡುವ ಕ್ರಿಯೆಯನ್ನು ಒಳಗೊಳ್ಳುವಂತಹ ದ್ಯುತ್ಯವಧಿ(ನಿತ್ಯವು ಜೀವಿಯೊಂದಕ್ಕೆ ದೊರಕುವ ಬೆಳಕಿನ ಅವಧಿ) ಯ ವಿಧವನ್ನು ಸೂಚಿಸುತ್ತವೆ. ತಟಸ್ಥ ಕೃಷಿ ತಳಿಗಳು ದ್ಯುತ್ಯವಧಿಯನ್ನು ಪರಿಗಣಿಸದೆಯೇ ಹೂಗಳನ್ನು ಬಿಡುತ್ತವೆ.[೧೪]

ಸ್ಟ್ರಾಬೆರಿಗಳನ್ನು ಬೀಜಗಳ ಮೂಲಕವೂ ಬೆಳೆಯಬಹುದು. ಆದರೆ ಈ ವಿಧಾನ ಹವ್ಯಾಸಕ್ಕಾಗಿ ಮಾಡುವಂತಹದ್ದೆ ಹೊರತು ಇದನ್ನು ವಾಣಿಜ್ಯವಾಗಿ ಹೆಚ್ಚು ಅನುಸರಿಸುವುದಿಲ್ಲ. ಕೃಷಿ ತಳಿಗಳಿಂದ ಬೆಳೆದ ಕೆಲವು ಬೀಜಗಳನ್ನು ಗೃಹ ಬಳಕೆಗಾಗಿ ಹಾಗೂ ಬೀಜಗಳ ಮೂಲಕ ವಾಣಿಜ್ಯವಾಗಿ ಬೆಳೆಯುವುದರ ಬಗ್ಗೆ ನಡೆಯುತ್ತಿರುವ ಸಂಶೋಧನೆಗಾಗಿ ಇದನ್ನು ಬೆಳೆಸಲಾಗುತ್ತಿದೆ.[೧೫] ಬೀಜ(ಅಕೀನ್ ಗಳು)ಗಳನ್ನು ವಾಣಿಜ್ಯಾ ಬೀಜಗಳ ಸರಬರಾಜೂದಾರರಿಂದ ಅಥವಾ ಹಣ್ಣಿನಿಂದ ತೆಗೆದು ಸಂಗ್ರಹಿಸಿಡುವುದರ ಮೂಲಕ ಪಡೆಯಲಾಗುತ್ತದೆ.

ಸ್ಟ್ರಾಬೆರಿಗಳನ್ನು ಸ್ಟ್ರಾಬೆರಿ ಪಾಟ್ ಗಳಲ್ಲಿ ಮನೆಯ ಒಳಗೂ ಬೆಳೆಸಬಹುದು.

ಗೊಬ್ಬರ ಹಾಕುವುದು ಹಾಗೂ ಕಟಾವು ಮಾಡುವುದು

[ಬದಲಾಯಿಸಿ]

ಬಹುಮಟ್ಟಿನ ಸ್ಟ್ರಾಬೆರಿ ಗಿಡಗಳನ್ನು ಕೃತಕ ಗೊಬ್ಬರ ಹಾಕುವುದರ ಮೂಲಕ ಬೆಳೆಸಲಾಗುತ್ತದೆ. ಈ ಕೃತಕ ಗೊಬ್ಬರವನ್ನು ಕಟಾವು ಮಾಡುವ ಮೊದಲು ಹಾಗೂ ನಂತರ ಹಾಗೂ ಪ್ಲ್ಯಾಸ್ಟಿಕಲ್ಚರ್ ವಿಧಾನದ ಮೂಲಕ ಬೆಳೆಯುವ ಮೊದಲು ಯಾವಾಗಲೂ ಹಾಕಲಾಗುತ್ತದೆ .[೧೬]

ಮುಖ್ಯವಾಗಿ ಕಟಾವು ಮಾಡುವುದು ಹಾಗೂ ಸ್ವಚ್ಛಗೊಳಿಸುವ ಕ್ರಿಯೆ ಹೆಚ್ಚು ಸಮಯಗಳ ಕಾಲ ಬದಲಾಗುವುದಿಲ್ಲ. ಸೂಕ್ಷ್ಮವಾಗಿರುವ ಸ್ಟ್ರಾಬೆರಿಗಳನ್ನು ಈಗಲೂ ಕೈಗಳ ಮೂಲಕವೆ ಶೇಖರಿಸಿಡಲಾಗುತ್ತದೆ.[೧೭] ಗ್ರೇಡಿಂಗ್ (ಗುಣಮಟ್ಟವನ್ನು ನಿರ್ಧರಿಸುವುದು) ಮಾಡುವುದು ಹಾಗೂ ಅವುಗಳನ್ನು ಪ್ಯಾಕ್ ಮಾಡುವುದು ಪ್ರೋಸೆಸಿಂಗ್ ಫೆಸಿಲಿಟಿಗಿಂತ ಯಾವಾಗಲೂ ಅವುಗಳನ್ನು ಬೆಳೆದ ಭೂಮಿಯಲ್ಲೇ ನಡೆಯುತ್ತದೆ.[೧೭] ಬೃಹತ್ ಪ್ರಮಾಣದಲ್ಲಿ ಇವುಗಳ ನಿರ್ವಹಣೆ ಮಾಡುವಾಗ ಸ್ಟ್ರಾಬೆರಿಗಳನ್ನು ನೀರಿನಿಂದ, ಹಬೆಯಿಂದ ಹಾಗೂ ಸಾಗಣೆಪಟ್ಟಿಯಿಂದ ಸ್ವಚ್ಛಗೊಳಿಸಲಾಗುತ್ತದೆ.[೧೮]

ಕ್ರಿಮಿಕೀಟಗಳು

[ಬದಲಾಯಿಸಿ]

ಸ್ಟ್ರಾಬೆರಿಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಾಳುಮಾಡಲು ಸುಮಾರು 200 ವರ್ಗದ ಕ್ರಿಮಿಕೀಟಗಳು ಹೆಸರುವಾಸಿಯಾಗಿವೆ.[೧೯] ಈ ಕ್ರಿಮಿಕೀಟಗಳು ಬಸವನಹುಳು, ನುಸಿಹುಳು, ಹಣ್ಣಿನ ಮೇಲೆ ಕೂರುವ ನೊಣ, ದೊಡ್ಡಜೀರುಂಡೆ, ಸ್ಟ್ರಾಬೆರಿ ಬೇರನ್ನು ತಿನ್ನುವ ವಾಡೆಹುಳು, ಸ್ಟ್ರಾಬೆರಿ ಕೀಟ, ಸ್ಟ್ರಾಬೆರಿಯ ರಸವನ್ನು ಹೀರಿಕೊಳ್ಳುವ ದುಂಬಿ, ಸ್ಟ್ರಾಬೆರಿ ಕೀರಿಟ ನೊಣ, ಪುಟ್ಟಹುಳು, ಗಿಡಹೇನು, ಮತ್ತು ಇತ್ಯಾದಿಗಳನ್ನು ಒಳಕೊಂಡಿದೆ.[೧೯][೨೦]

ಸ್ಟ್ರಾಬೆರಿ ಸಸ್ಯಗಳ ಮೇಲಿರುವ ಅನೇಕ ಲೆಪಿಡೊಪೆಟ್ರ ವರ್ಗಕ್ಕೆ ಸೇರಿರುವ ಕೀಟಗಳು; ಇದರ ಸಂಕ್ಷಿಪ್ತ ಮಾಹಿತಿಗಾಗಿ ಈ ಪಟ್ಟಿಯನ್ನು ನೋಡಿ.

ರೋಗಗಳು

[ಬದಲಾಯಿಸಿ]

ಸ್ಟ್ರಾಬೆರಿ ಸಸ್ಯಗಳು ಅನೇಕ ರೋಗಗಳಿಗೆ ಬಲಿಯಾಗಿವೆ.[೨೧] ಎಲೆಗಳು , ಪುಡಿಯಂಥಹ ಶಿಲೀಂಧ್ರ, ಎಲೆ ಚುಕ್ಕೆ (ಸ್ಪ್ಯಾರಲ ಫ್ರಗೇರಿಯಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ), ಎಲೆ ರೋಗ (ಫೋಮೋಸಿಸ್ ಆಬ್ಸ್ಯೂರೆನ್ಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ), ಹಾಗು ವಿವಿಧ ಲೊಳೆ ಜೀವಿಗಳಿಂದ ಹಾನಿಗೊಳಗಾಗುತ್ತವೆ.[೨೧] ಮೇಲಿನ ಭಾಗ ಹಾಗು ಬೇರು ಕೆಂಪು ಅಕ್ಷಿಯದಿಂಡು, ವರ್ಟಿಸಿಲಮ್ ಸಸ್ಯರೋಗ, ಕಪ್ಪು ಬೇರು ಕೊಳೆತ, ಮತ್ತು ನೆಮ್ ಟೋಡ್ ಗಳಿಗೆ ಬಲಿಯಾಗುತ್ತವೆ.[೨೧] ಹಣ್ಣುಗಳು ಗ್ರೇನೋಣಗಳಿಂದ, ಬೇರುಗಳ ರಿಜೊಫಸ್ , ಮತ್ತು ಗಟ್ಟಿಚರ್ಮದ ಕೊಳೆಯುವಿಕೆಯಿಂದ ಹಾನಿಗೊಳಗಾಗುತ್ತವೆ.[೨೧] ಚಳಿಗಾಲದಲ್ಲಿ ಹೆಚ್ಚಾದಂತಹ ಚಳಿಯಿಂದಲು ಸಸ್ಯಗಳು ರೋಗಗಳನ್ನು ಹೆಚ್ಚಿಸಬಹುದು.[೨೧] ನೀವು ಸ್ಟ್ರಾಬೆರಿಗಳಿಗೆ ನೀರು ಹಾಯಿಸುವಾಗ ಕೇವಲ ಬೇರುಗಳಿಗೆ ಮಾತ್ರ ನೀರು ತಾಕುವಂತೆ ಗಮನವಹಿಸಿ. ಏಕೆಂದರೆ ಎಲೆಗಳಿಗೆ ನೀರು ತಾಕುವುದರಿಂದ ಅವುಗಳು ಶಿಲೀಂಧ್ರಗಳನ್ನು ಬೆಳೆಸುತ್ತವೆ. ಶಿಲೀಂಧ್ರಗಳ ಉತ್ಪತ್ತಿಯನ್ನು ತಡೆಯಲು ಸ್ಟ್ರಾಬೆರಿಗಳನ್ನು ವಿಶಾಲವಾದ ಜಾಗದಲ್ಲಿಟ್ಟಿರುವಿರಾ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಉತ್ಪಾದನೆಯ ರೀತಿ

[ಬದಲಾಯಿಸಿ]
Map of world showing most strawberry output in Europe.
2005 ರಲ್ಲಿ ಸ್ಟ್ರಾಬೆರಿಯ ಉತ್ಪಾದನೆ
ಟನ್ ಲೆಕ್ಕದಲ್ಲಿ ಪ್ರಪಂಚಾದ್ಯಂತ ಸ್ಟ್ರಾಬೆರಿಯ ಉತ್ಪಾದನೆ
[೨೨]
ರಾಷ್ಟ್ರ 2005 2006 2007
ಈಜಿಪ್ಟ್ 100,000 100,000 104,000
ಜರ್ಮನಿ 146,500 173,230 158,658
ಇಟಲಿ 146,769 131,305 57,670
ಜಪಾನ್‌ 196,200 190,700 193,000
ಮೆಕ್ಸಿಕೊ 162,627 191,843 176,396
ಮೊರಾಕೊ 118,600 112,000 100,000
ಪೊಲಂಡ್ 184,627 193,666 174,578
ರಷ್ಯಾ 221,000 227,000 230,400
ಕೊರಿಯ, ದಕ್ಷಿಣ 201,995 205,307 203,227
ಸ್ಪೇನ್‌ 320,853 333,485 263,900
ಟರ್ಕಿ 200,000 211,127 250,316
ಯುನೈಟೆಡ್ ಕಿಂಗ್ಡಮ್ 68,600 73,900 87,200
ಯುಎಸ್‌ಎ 1,053,242 1,090,436 1,133,703
ಪ್ರಪಂಚದ ಒಟ್ಟು 3,782,906 3,917,140 3,824,678

ಬೆಳೆವಿಜ್ಞಾನ

[ಬದಲಾಯಿಸಿ]

ಸ್ಟ್ರಾಬೆರಿ ಸಸ್ಯಗಳು ಸುಲಭವಾಗಿ ಬೆಳೆಯಬಹುದಾದ ಸಸ್ಯಗಳಾಗಿವೆ. ಅಲ್ಲದೇ ಇವುಗಳನ್ನು ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಬೆಳೆಯಬಹುದು. ಇವುಗಳನ್ನು ಬೆಳೆಯುವ ಉತ್ತಮ ಮಾರ್ಗವೆಂದರೆ ವಸಂತ ಋತುವಿನ ಮಧ್ಯದ ಮೊದಲು ಸಸ್ಯಗಳನ್ನು ಕೊಂಡುಕೊಳ್ಳುವುದು. ಸಸ್ಯಗಳನ್ನು ಸರಿಯಾಗಿ ಸಂಪೂರ್ಣ ಸೂರ್ಯನ ಬೆಳಕುಬೀಳುವ ಸ್ಥಳದಲ್ಲಿ ಹಾಗು ಮರಳಿನಂಥಹ ಮಣ್ಣಿನಲ್ಲಿ ನೆಡುವುದು . ಸ್ಟ್ರಾಬೆರಿ ಅನೇಕ ಸ್ಥಿತಿಗಳಲ್ಲೂ ಚೆನ್ನಾಗಿ ಬೆಳೆಯುವಂತಹ ಗಟ್ಟಿಯಾದ ಸಸ್ಯವಾಗಿದೆ, ಆದರೆ ಸಸ್ಯಗಳು ಹಣ್ಣನ್ನು ಬಿಡಲು ಪ್ರಾರಂಭಿಸಿದ ಸಮಯದಲ್ಲಿ ಅವುಗಳಿಗೆ ಚೆನ್ನಾಗಿ ನೀರುಹಾಯಿಸುವುದು ಅತಿಮುಖ್ಯವಾಗಿದೆ. ಸ್ಟ್ರಾಬೆರಿಗಳು ಪಾಟ್ ನಲ್ಲಿ ಬೆಳೆಸುವ ಸಸ್ಯಗಳಂತೆ ಕೂಡ ಬೆಳೆಸಬಹುದು.ಅಲ್ಲದೇ ಅವು ಹಣ್ಣುಗಳನ್ನು ಕೂಡ ಬಿಡುತ್ತವೆ.

ಸ್ಟ್ರಾಬೆರಿ ಗಳನ್ನು ಹೊಸ ಸಸ್ಯಗಳಿಗಾಗಿ ಚಿಗುರೊಡೆಸಲಾಗುವುದು. ಅಲ್ಲದೇ ಅದನ್ನು ಹಾಗೇ ಬಿಡಲಾಗುವುದು. ಹೀಗೆ ಮಾಡುವುದರಿಂದ ಅವು ಚೆನ್ನಾಗಿ ಚಿಗುರೊಡೆಯುತ್ತವೆ, ಹೊಸ ಸಸ್ಯಕ್ಕಾಗಿ ನಂತರ ಆ ಚಿಗುರನ್ನು ಕತ್ತರಿಸಿ ನಿಮಗೆ ಎಲ್ಲಿ ಬೇಕೊ ಅಲ್ಲಿ ನೆಡಬಹುದು.

ಬಳಕೆಗಳು

[ಬದಲಾಯಿಸಿ]
Whole strawberries in jam.
ಸ್ಟ್ರಾಬೆರಿ ಜಾಮ್

ಸ್ಟ್ರಾಬೆರಿಯನ್ನು ತಾಜಾವಾಗಿರಿಸಲು ಅದನ್ನು ಶೀತವಾತಾವರಣದಲ್ಲಿಟ್ಟು ಹಾಗೂ ಶುಷ್ಕವಾಗಿಸಿ ಕೆಡದಂತೆ ರಕ್ಷಿಸಿಡಲಾಗುತ್ತದೆ.ಹೀಗೆ ರಕ್ಷಿಸಿಡಲಾದ ಸ್ಟ್ರಾಬೆರಿಗಳನ್ನು ಏಕದಳ ಧಾನ್ಯಗಳಿಂದ ತಯಾರಿಸಲ್ಪಡುವ ತಿಂಡಿಗಳಲ್ಲಿ ಬಳಸಲಾಗುವುದು. ಸ್ಟ್ರಾಬೆರಿಗಳು ಹಾಲಿನ ಉತ್ಪನ್ನದಲ್ಲಿ ಸೇರಿಸುವುದಕ್ಕೆ ಪ್ರಸಿದ್ಧವಾಗಿವೆ. ಉದಾಹರಣೆಗೆ ; ಸ್ಟ್ರಾಬೆರಿ ರುಚಿಯಿರುವ ಐಸ್ ಕ್ರೀಮ್ ಗಳು , ಮಿಲ್ಕ್ ಶೇಕ್ಸ್ , ಸ್ಮೂದಿಗಳು, ಮೊಸರಿನಲ್ಲಿ ಬಳಲಾಗುವುದು. ವಿಮ್ ಬಲ್ಡನ್ ನಲ್ಲಿ ಅತ್ಯಂತ ಹೆಚ್ಚಾಗಿ ತಿಂದಿರುವಂತಹ ಸ್ಟ್ರಾಬೆರಿಗಳು ಮತ್ತು ಕ್ರೀಮ್ ಗಳು ಜನಪ್ರಿಯ ಸಿಂಹಿತಿಂಡಿಗಳಾಗಿವೆ. ಸ್ಟ್ರಾಬೆರಿ ಪೈ(ಬೆರಕೆ) ಕೂಡ ಅತ್ಯಂತ ಜನಪ್ರಿಯವಾಗಿದೆ. ಚಾಕೋಲೇಟ್ ತಿನ್ನುವ ಉತ್ತಮ ವಿಧಾನದಂತೆ ಸ್ಟ್ರಾಬೆರಿಗಳನ್ನು ಕರಗಿಸಲ್ಪಟ್ಟ ಚಾಕೋಲೆಟ್ ಫಾಂಡ್ಯೂ ಗಳಲ್ಲಿ ಮುಳುಗಿಸಿಡಲಾಗುತ್ತದೆ. .[೨೩]

ಸಂಯುಕ್ತ ಆಮ್ಲಗಳ ವಿವಿಧ ಬಣ್ಣಗಳಿಂದ ಹಾಗೂ ಸಂಯುಕ್ತ ಆಧಾರದ ವರ್ಣ ದ್ರವ್ಯಗಳ ಕಾರಣ ,ಸ್ಟ್ರಾಬೆರಿ ರಸವನ್ನು ತೆಗೆದುಕೊಂಡು ಮಾಡಲಾದ ವರ್ಣದ್ರವ್ಯವನ್ನು ಸಹಜ ಆಮ್ಲವಾಗಿ /ಬೇಸ್ ಸೂಚಯವಾಗಿ ಬಳಸಲಾಗುತ್ತದೆ.[೨೪]

ಫೋಷಕ ವಸ್ತು

[ಬದಲಾಯಿಸಿ]

ಒಂದು ಕಪ್ (144 g) ಸ್ಟ್ರಾಬೆರಿ ಸರಿಸುಮಾರು 45 ಕ್ಯಾಲೊರಿಗಳನ್ನು(188 kJ) ಒಳಗೊಂಡಿರುತ್ತದೆ . ಅಲ್ಲದೇ ಇದು ವಿಟಮಿನ್ C ಹಾಗು ಫ್ಲ್ಯಾವೊನೈಡ್ಸ್ ಗಳನ್ನು ಒದಗಿಸುವ ಅತ್ಯಂತ ಉತ್ತಮ ಮೂಲವಾಗಿದೆ.[೨೫][೨೬][೨೭][೨೮]

ವಿಭಾಗ ಪೌಷ್ಟಿಕ ಏಕಮಾನಗಳು (ಘಟಕಗಳು) 1 ಕಪ್ (144 g) ಪೂರ್ಣ
ಅತ್ಯಂತ ಹತ್ತಿರದ ನೀರು g 132
ಶಕ್ತಿ kcal 43
ಶಕ್ತಿ kJ 181
ಪ್ರೋಟೀನ್‌ g 0.88
ಒಟ್ಟು ಮೇದಸ್ಸು (ಕೊಬ್ಬು) 0.53
ಕಾರ್ಬೋಹೈಡ್ರೇಟ್, ವ್ಯತ್ಯಾಸಗಳಿಂದ 10.1
ನಾರು, ಒಟ್ಟು ಆಹಾರಕ್ರಮ 3.0
ಬೂದಿ 0.62
ಖನಿಜಗಳು ಕ್ಯಾಲ್ಸಿಯಂ mg 20
ಕಬ್ಬಿಣ 0.55
ಮ್ಯಾಗ್ನೇಸಿಯಂ 14
ಫಾಸ್ಫರಸ್ 27
ಪೊಟಾಸಿಯಂ 240
ಸೋಡಿಯಂ 1.44
ತವರ 0.19
ತಾಮ್ರ 0.07
ಮ್ಯಾಂಗನೀಸ್ 0.42
ಸಿಲೀನಿಯಂ µg 1.01
ಜೀವಸತ್ವಗಳು ಜೀವಸತ್ವ C ಅಸ್ಕಾರ್ಬಿಕ್ ಆಮ್ಲ mg 82
ತೈಅಮೀನ್(ಅನ್ನಾಂಗ) 0.03
ರಿಬೋಫ್ಲೇವಿನ್ 0.1
ನಿಕೊಟಿನ್ 0.33
ಪ್ಯಾನ್ ತೋ ತೆನಿಕ್ ಆಮ್ಲ 0.49
ಜೀವಸತ್ವ B-6 0.09
ಪೊಲೇಟ್ µg 25
ಜೀವಸತ್ವ B-12 µg 0
ಜೀವಸತ್ವ A, IU IU 39
ಜೀವಸತ್ವ A, RE µg RE 4.3
ಜೀವಸತ್ವ E mg ATE 0.20
ಮೇದಸ್ಸುಗಳು (ಕೊಬ್ಬು) ನೆಣಾಮ್ಲ, ಸ್ಯಾಚುರೇಟೆಡ್ g 0.03
16:0 0.02
18:0 0.006
ನೆಣಾಮ್ಲ, ಮೊನೊಅನ್ ಸ್ಯಾಚುರೇಟೆಡ್ 0.075
16:1 0.001
18:1 0.073
ನೆಣಾಮ್ಲ, ಪೊಲಿಅನ್ ಸ್ಯಾಚುರೇಟೆಡ್ 0.27
18:2 0.16
18:3 0.11
ಕೊಲೆಸ್ಟರಾಲ್ mg 0
ಪಿಟೋಸಿಟಿರೋಲ್ಸ್ 17
ಅಮೀನೊ ಅಮ್ಲ ಟ್ರಿಪ್ಟೊಫ್ಯಾನ್ g 0.01
ಥ್ರೆಯೊನೈನ್ 0.027
ಐಸೊಲುಸೀನ್‌ 0.02
ಲುಸೀನ್ 0.045
ಲೈಸಿನ್ 0.036
ಮೆಥಿಯೊನೈನ್ 0.001
ಸೈಸ್ತಿನ್ 0.007
ಫಿನೈಲ್ಯಾಲನೀನ್ 0.026
ಟೈರೊಸಿನ್ 0.030
ವೇಲಿನ್ 0.026
ಅರ್ಜಿನೈನ್ 0.037
ಹಿಸ್ಟಿಡಿನ್ 0.017
ಅಲನೈನ್ 0.045
ಅಸ್ಪಾರ್ಟಿಕ್ ಅಮ್ಲ 0.20
ಗ್ಲುಟಮಿಕ್ ಅಮ್ಲ 0.13
ಗ್ಲೈಸಿನ್ 0.035
ಪ್ರೊಲೈನ್ 0.027
ಸೇರೀನ್ 0.033

ಅಲರ್ಜಿ

[ಬದಲಾಯಿಸಿ]

ಸ್ಟ್ರಾಬೆರಿಗಳ ಬಳಕೆಯಿಂದ ಕೆಲವರು ಅನಫಿಲೋಕ್ಟಾಯ್ಡ್ ಪ್ರತಿಕ್ರಿಯೆ ಯಂತಹ ಅನುಭವವನ್ನು ಪಡೆದಿದ್ದಾರೆ.[೨೯] ಒರಲ್ ಅಲರ್ಜಿ ಸಿಂಡ್ರೋಮ್ಈ ಪ್ರತಿಕ್ರಿಯೆಗೆ ಕಾರಣವಾಗಿರುವ ಸಾಮಾನ್ಯ ರೂಪವಾಗಿದೆ , ಆದರೆ ಇದರ ಗುಣಲಕ್ಷಣಗಳನ್ನು ಬೇಸಿಗೆ ಗೂರಲು ಅಥವಾ include ಚರ್ಮದ ಉರಿ ಅಥವಾ ತುರುಚಿ ದದ್ದುಗಳಿಗೆ ಹೋಲಿಸಬಹುದು. ಅಲ್ಲದೇ ಕೆಲವು ಕಠಿಣ ಪರಿಸ್ಥಿತಿಯಲ್ಲಿ ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದು. ಹಣ್ಣನ್ನು ಮಾಗಿಸುವಾಗ Fra a1 (ಫ್ರಗೇರಿಯ ಅಲರ್ಜಿಕ1) ಎಂದು ಕರೆಯಲ್ಪಡುವ ಪ್ರೋಟಿನ್ ಅನ್ನು ಬಳಸಲಾಗುತ್ತದೆ , ಈ ಪ್ರೋಟಿನ್ ನಿಂದ ಅಲರ್ಜಿ ಉಂಟಾಗುತ್ತಿದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಬರ್ಚ್ ಮರದಲ್ಲಿ ಹಾಗು ಆಪಲ್ ನಲ್ಲಿ ಕಂಡುಬರುವ ಸಜಾತೀಯ ಪ್ರೋಟೀನ್ ಗಳು , ಜನರು ಮೂರು ವರ್ಗಗಳಿಗು ಅಡ್ಡ-ಪ್ರತಿಕ್ರಿಯಾಶೀಲತೆಯನ್ನು ಅಭಿವೃದ್ಧಿಪಡಿಸಬಹುದು.

ಬಿಳಿ-ಹಣ್ಣಿನ ಸ್ಟ್ರಾಬೆರಿ ಕೃಷಿ ತಳಿಗಳಲ್ಲಿನ , Fra a1 ಕೊರತೆ , ಸ್ಟ್ರಾಬೆರಿ ಅಲರ್ಜಿಗಳಿಂದ ಉಂಟಾಗುವ ಅನೇಕ ತೊಂದರೆಗಳಿಗೆ ಕಾರಣವಾಗಬಹುದು. ಅವರು ಸಹಜವಾಗಿ ಹಣ್ಣನ್ನು ಪಕ್ವ ಗೊಳಿಸುವ ಕ್ರಿಯೆಗೆ ಬೇಕಾಗಿರುವ ಪ್ರೋಟೀನ್ ಅನ್ನು ಕಡಿಮೆಮಾಡಬಹುದು, ಹಾಗು ಅವರು ಫ್ಲ್ಯಾವೊನಾಯ್ಡ್ ಅನ್ನು ಒದಗಿಸದೆ ಇರುವುದರಿಂದ ಇತರ ಕೃಷಿ ತಳಿಗಳ ಪಕ್ವಗೊಂಡ ಬೆರಿಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಅವುಗಳು ಹಣ್ಣಾಗುತ್ತವೆ ಆದರೆ ಬಿಳಿ, ಮಂಕಾದ ಹಳದಿ ಅಥವಾ "ಬಂಗಾರದಂತಹ" ಬಣ್ಣದಲ್ಲಿ ಉಳಿದುಕೊಳ್ಳುತ್ತವೆ .ಅಲ್ಲದೇ ಸರಿಯಾಗಿ ಹಣ್ಣಾಗದೇ ಇರುವ ಬೆರಿಗಳಂತೆ ಕಾಣಿಸುತ್ತವೆ; ಇದರಿಂದ ಹಕ್ಕಿಗಳು ಅವುಗಳ ಕಡೆಗೆ ಹೆಚ್ಚು ಆಕರ್ಷಿತವಾಗದಂತೆ ತಡೆಯಬಹುದು. ವಾಸ್ತವಿಕವಾಗಿ ಅಲರ್ಜಿಕದಿಂದ -ಮುಕ್ತವಾಗಿರುವ 'ಸೋಫರ' ಎಂದು ಕರೆಯಲ್ಪಡುವ ಕೃಷಿ ತಳಿ ಲಭ್ಯವಿದೆ.[೩೦][೩೧]

ಗ್ಯಾಲರಿ

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "Strawberry, The Maiden With Runners". Botgard.ucla.edu. Archived from the original on 2010-07-06. Retrieved 2009-12-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. "Strawberries by Martin Welsh, history, variety and cultivation of strawberries". Nvsuk.org.uk. Archived from the original on 2008-08-02. Retrieved 2009-12-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. ೩.೦ ೩.೧ ಇಸೌ, K. 1977. ಬೀಜ ಸಸ್ಯಗಳ ಅಂಗವಿಚ್ಛೇಧನ . ಜಾನ್ ವಿಲ್ಲೆ ಹಾಗೂ ಸನ್ಸ್, ನ್ಯೂಯಾರ್ಕ್.
  4. ಸ್ಟ್ರಾಬೆರಿ ಪ್ರಯೋಜನಗಳನ್ನು ಆರೋಗ್ಯಕ್ಕೆ
  5. ೫.೦ ೫.೧ "G6135 Home Fruit Production: Strawberry Cultivars and Their Culture | University of Missouri Extension". Extension.missouri.edu. Archived from the original on 2017-07-02. Retrieved 2009-12-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  6. ಸ್ಟ್ರಾಬೆರಿ ಗ್ರೋಯಿಂಗ್ , ಸ್ಟಿವನ್ ಸನ್ ವೈಟ್ ಕಾಂಬ್ ಫ್ಲೆಚ್ಚರ್, ದಿ ಮ್ಯಾಕ್ ಮಿಲನ್ ಕೋ., ನ್ಯೂಯಾರ್ಕ್, 1917. https://books.google.com/books?id=uQA2AAAAMAAJ&pg=PA127&lpg=PA127&dq=strawberry+hermaphrodite&source=bl&ots=3LwJQvTZnr&sig=CHAv8CX22dgBJkMEXUg8Kr8kfYw&hl=en&ei=PagASrWaIIvAM6Wd1d4H&sa=X&oi=book_result&ct=result&resnum=3#PPR3,M1
  7. ೭.೦ ೭.೧ ೭.೨ ೭.೩ "Strawberry Plasticulture Offers Sweet Rewards". Ag.ohio-state.edu. 2002-06-28. Archived from the original on 2010-01-19. Retrieved 2009-12-05.
  8. ೮.೦ ೮.೧ ೮.೨ ೮.೩ "ಆರ್ಕೈವ್ ನಕಲು" (PDF). Archived from the original (PDF) on 2016-04-03. Retrieved 2010-06-25. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  9. "Pritts Greenhouse Berried Treasures". Hort.cornell.edu. Retrieved 2009-12-05.
  10. ೧೦.೦ ೧೦.೧ ೧೦.೨ "Strawberry Fields Forever". Noble.org. Archived from the original on 2005-11-26. Retrieved 2009-12-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  11. Wang SW., Millner P. (2009). "Effect of Different Cultural Systems on Antioxidant Capacity, Phenolic Content, and Fruit Quality of Strawberries (Fragaria × aranassa Duch.)". Journal of Agricultural and Food Chemistry. ACS Publications. 57 (20): 9651–9657. {{cite journal}}: Unknown parameter |month= ignored (help)
  12. Wang SY, Lin HS (2003). "Compost as a soil supplement increases the level of antioxidant compounds and oxygen radical absorbance capacity in strawberries". Journal of Agricultural and Food Chemistry. 51 (23): 6844–50. doi:10.1021/jf030196x. PMID 14582984. {{cite journal}}: Unknown parameter |month= ignored (help)
  13. ೧೩.೦ ೧೩.೧ "Proper Cultivation Yields Strawberry Fields Forever". Larrysagers.com. 1992-04-15. Archived from the original on 2007-04-20. Retrieved 2009-12-05.
  14. S. C. ಹಾಕ್ಸನ್, J. L. ಮಾಸ್, 2001. ಸ್ಟ್ರಾಬೆರಿ ಬಯೋಟೆಕ್ನಾಲಜಿ, ಪ್ಲಾಂಟ್ ಬ್ರೀಡಿಂಗ್ ರಿವ್ಯೂಸ್ 21:139–179
  15. "Journal Article". SpringerLink. Retrieved 2009-12-05.[ಶಾಶ್ವತವಾಗಿ ಮಡಿದ ಕೊಂಡಿ]
  16. "HS1116/HS370: Nitrogen Fertilization of Strawberry Cultivars: Is Preplant Starter Fertilizer Needed?". Edis.ifas.ufl.edu. 2007-08-06. Archived from the original on 2009-01-21. Retrieved 2009-12-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  17. ೧೭.೦ ೧೭.೧ "Commercial Postharvest Handling of Strawberries (Fragaria spp.)". Extension.umn.edu. Archived from the original on 2013-07-08. Retrieved 2009-12-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  18. "Article: Conveyors improve the fruits of processor's labors.(Frexport S.A. de... | AccessMyLibrary - Promoting library advocacy". AccessMyLibrary. 2000-01-01. Archived from the original on 2012-07-21. Retrieved 2009-12-05.
  19. ೧೯.೦ ೧೯.೧ "Insect Pests of Strawberries and Their Management". Virginiafruit.ento.vt.edu. 2000-05-03. Retrieved 2009-12-05.
  20. "Radcliffe's IPM World Textbook | CFANS | University of Minnesota". Ipmworld.umn.edu. 2009-11-20. Archived from the original on 2009-06-26. Retrieved 2009-12-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  21. ೨೧.೦ ೨೧.೧ ೨೧.೨ ೨೧.೩ ೨೧.೪ "Strawberry Diseases". Extension.umn.edu. Archived from the original on 2009-03-23. Retrieved 2009-12-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  22. "FAO stat". Archived from the original on 2012-06-19. Retrieved 2010-06-25.
  23. "ಚಾಕ್ಲೆಟ್ ಅನ್ನು ಸವಿಯುವ ಆರೋಗ್ಯಕರ ಮಾರ್ಗ". Archived from the original on 2010-06-14. Retrieved 2010-06-25. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  24. "ಆರ್ಕೈವ್ ನಕಲು". Archived from the original on 2009-03-19. Retrieved 2010-06-25. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  25. "Nutrition Facts and Analysis for Strawberries, raw". Nutritiondata.com. Retrieved 2009-12-05.
  26. BonkeurInternet. "Strawberry Nutrition Facts. Health, Food, Diet". Thefruitpages.com. Retrieved 2009-12-05.
  27. "Strawberry Nutrition". Sweetdarling.com. 1997-07-14. Retrieved 2009-12-05.
  28. ಸ್ಟ್ರಾಬೆರಿಗಳು ಅಚ್ಚರಿ ಜೊತೆಗೆ ಅದ್ಭುತ ಪ್ರಯೋಜನಗಳನ್ನು ಕೊಡುವುದು ಕೆಲವು ರುಚಿಕರವಾದ ಹಣ್ಣುಗಳು ಕೆಲವು
  29. Robinson, Kerry. "Food Safety, Healthy Eating and Nutrition Information". IFIC. Archived from the original on 2009-04-16. Retrieved 2009-12-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  30. Hjernø K, Alm R, Canbäck B; et al. (2006). "Down-regulation of the strawberry Bet v 1-homologous allergen in concert with the flavonoid biosynthesis pathway in colorless strawberry mutant". Proteomics. 6 (5): 1574–87. doi:10.1002/pmic.200500469. PMID 16447153. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  31. ಸ್ಟ್ರಾಬೆರಿ ಅಲರ್ಜಿಯ ಕ್ರಿಯೆ ('Sofar' ಉಲ್ಲೇಖನವನ್ನು ಒಳಗೊಂಡಂತೆ)

ಬಾಹ್ಯ ಕೊಂಡಿಗಳು

[ಬದಲಾಯಿಸಿ]