ಸ್ತನ ಕ್ಷೀಣತೆ
ಸ್ತನ ಕ್ಷೀಣತೆ | |
---|---|
ಸ್ತನ ಕ್ಷೀಣತೆಯನ್ನು ಬಿಂಬಿಸುವ ೧೫ನೇ ಶತಮಾನದ ಶಿಲ್ಪ |
ಸ್ತನ ಕ್ಷೀಣತೆ ಒಂದು ಸಾಮಾನ್ಯ ಅಥವಾ ಸ್ವಾಭಾವಿಕ ಕ್ಷೀಣತೆ ಅಥವಾ ಸ್ತನಗಳ ಕುಗ್ಗುವಿಕೆಯಾಗಿದೆ.
ಸ್ತನ ಕ್ಷೀಣತೆಗೆ ಕಾರಣ
[ಬದಲಾಯಿಸಿ]ಸಾಮಾನ್ಯವಾಗಿ ಮಹಿಳೆಯರ ಋತುಬಂಧದ ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾದಾಗ ಸ್ತನದ ಕ್ಷೀಣತೆ ಕಂಡುಬರುತ್ತದೆ. ಸಾಮಾನ್ಯವಾಗಿ ಹೈಪೋಸ್ಟ್ರೊಜೆನಿಸಮ್ ಅಥವಾ ಹೈಪರ್ ಆಂಡ್ರೋಜೆನಿಸಂ ಕೂಡ ಇದಕ್ಕೆ ಕಾರಣವಾಗಬಹುದು;[೧] ಅವುಗಳಲ್ಲಿ, ಸ್ತನ ಕ್ಯಾನ್ಸರ್ ಗಾಗಿ ಆಂಟಿಈಸ್ಟ್ರೋಜನ್ ಚಿಕಿತ್ಸೆ, ಪಾಲಿಸಿಸ್ಟಿಕ್ ಒವರಿ ಸಿಂಡ್ರೋಮ್ (PCOS) ತಿನ್ನುವ ಅಸ್ವಸ್ಥತೆಗಳನ್ನೊಳಗೊಂಡ ಅಪೌಷ್ಟಿಕತೆ ಮುಂತಾದವುಗಳು ಮಾತ್ರವಲ್ಲದೆ ಇದು ತೂಕ ನಷ್ಟದ ಪರಿಣಾಮವೂ ಆಗಿರಬಹುದು.[೨][೩]
ಚಿಕಿತ್ಸೆ
[ಬದಲಾಯಿಸಿ]ಪುರುಷರಿಗೆ ಗೈನೆಕೊಮಾಸ್ಟಿಯಾ, ಮಹಿಳೆಯರಿಗೆ ಮ್ಯಾಕ್ರೋಮಾಸ್ಟಿಯಾ ಮತ್ತು ಟ್ರಾನ್ಸ್ ಮೆನ್ ಗಳಿಗೆ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (HRT) ಚಿಕಿತ್ಸೆಗಳು ಸ್ತನ ಕ್ಷೀಣತೆಗೆ ಅಪೇಕ್ಷಿತ ಪರಿಣಾಮ ಬೀರಬಹುದು.
ಉದಾಹರಣೆಗಳು
[ಬದಲಾಯಿಸಿ]ಸ್ತನದ ಕ್ಷೀಣತೆಯ ಚಿಕಿತ್ಸೆ ಮಾಡುವಲ್ಲಿನ ಕೆಲವು ಉದಾಹರಣೆಗಳು ಇಲ್ಲಿವೆ: ಸೂಕ್ತವಾದ ಸನ್ನಿವೇಶವನ್ನು ಗಮನಿಸಿ, ಈಸ್ಟ್ರೊಜೆನ್, ಆಂಟಿ ಆಂಡ್ರೋಜನ್ ಸರಿಯಾದ ಪೌಷ್ಟಿಕತೆ ಮತ್ತು ತೂಕ ಹೆಚ್ಚಳ ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಉಲ್ಲೇಖಗಳು
[ಬದಲಾಯಿಸಿ]