ಹ
ಗೋಚರ
|
ಹ, ಕನ್ನಡ ವರ್ಣಮಾಲೆಯ ಒಂಬತ್ತನೇ ಅವರ್ಗೀಯ ವ್ಯಂಜನವಾಗಿದೆ. ಕಾಕಲ್ಯ ಘೋಷ ಸಂಘರ್ಷ ವ್ಯಂಜನ ಧ್ವನಿ.ಠಗ
ಚಾರಿತ್ರಿಕ ಹಿನ್ನೆಲೆ
[ಬದಲಾಯಿಸಿ]ಮೌರ್ಯರ ಕಾಲದ ಅತಿ ಸರಳವಾದ ಈ ಅಕ್ಷರದ ರೂಪ, ಒಂದು ರೇಖೆಯು ಸ್ವಲ್ಪ ಬಲಭಾಗಕ್ಕೆ ಬಗ್ಗಿರುವುದೇ ಆಗಿರುತ್ತದೆ. ಸಾತವಾಹನ ಕಾಲದಲ್ಲಿ ಇದರ ಕೆಳಭಾಗ ಅಗಲವಾಗಿಯೂ ಚಪ್ಪಟೆಯಾಗಿಯೂ ಇರುವುದು. ಕದಂಬರ ಕಾಲದಲ್ಲಿ ಬಲಭಾಗದ ರೇಖೆ ಮೇಲಿನವರೆಗೂ ಹೋಗಿ ಕೆಳಗಿಳಿಯುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆ. ಮುಂದೆ ಇದೇ ರೂಪವೇ ಇದ್ದರೂ ಅಕ್ಷರದ ಮುಖ್ಯಭಾಗ ಅಗಲವಾಗಿರುತ್ತದೆ. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಈ ಅಕ್ಷರ ಸ್ಥಿರಗೊಂಡು ಅದೇ ರೂಪವೇ ಮುಂದೆಯೂ ಉಪಯೋಗಿಸಲ್ಪಡುತ್ತದೆ. ಹದಿನೆಂಟನೆಯ ಶತಮಾನದ ಈ ಅಕ್ಷರದ ಸ್ವರೂಪಕ್ಕೂ ಈಗಿನ ಸ್ವರೂಪಕ್ಕೂ ಇರುವ ಅಲ್ಪ ವ್ಯತ್ಯಾಸವನ್ನು ಗಮನಿಸಬಹುದು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: