ವಿಷಯಕ್ಕೆ ಹೋಗು

ಹಂಬು ಮಲ್ಲಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jasminum arborescens
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: Eudicots
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಓಲಿಯೇಸೀ
ಕುಲ: ಜಾಸ್ಮಿನಮ್
ಪ್ರಜಾತಿ:
J. arborescens
Binomial name
Jasminum arborescens

ಹಂಬು ಮಲ್ಲಿಗೆ (ಟ್ರೀ ಜಾಸ್ಮಿನ್) ಜಾಸ್ಮಿನಮ್ ಆರ್ಬಾರೆಸೆನ್ಸ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಒಂದು ಹೂಬಿಡುವ ಸಸ್ಯ.[][] ಸುಮಾರು 1400 ಮೀ. ಎತ್ತರದವರೆಗಿನ ಬೆಟ್ಟಪ್ರದೇಶಗಳಲ್ಲಿ ಬೆಳೆಯುವ ಇದು ಉಪಹಿಮಾಲಯ ಶ್ರೇಣಿ, ಬಂಗಾಲ, ಒರಿಸ್ಸ, ಆಂಧ್ರದ ವಿಶಾಖಪಟ್ಟಣ ಜಿಲ್ಲೆ ಮುಂತಾದೆಡೆಗಳಲ್ಲಿ ಸಾಮಾನ್ಯ.

ಗುಣಲಕ್ಷಣಗಳು

[ಬದಲಾಯಿಸಿ]

ಎಲೆಗಳು ಸರಳರೀತಿಯವು, ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಹೂಮಂಜರಿ ಸೀಮಾಕ್ಷಿ ಮಾದರಿಯದು, ಒಂದೊಂದು ಮಂಜರಿಯಲ್ಲಿ 15-20 ಅಚ್ಚಬಿಳಿಯ ಹಾಗೂ ಅತ್ಯಂತ್ಯ ಸುವಾಸನೆಯುಳ್ಳ ಹೂಗಳಿರುವುವು.

ಉಪಯೋಗಗಳು

[ಬದಲಾಯಿಸಿ]

ಇದರ ಎಲೆಯ ರಸವನ್ನು ಬೆಳ್ಳುಳ್ಳಿ, ಮೆಣಸು ಮುಂತಾದವುಗಳೊಂದಿಗೆ ಸೇರಿಸಿ ವಮನಕಾರಿಯಾಗಿ ಬಳಸುವುದಿದೆ. ಎಲೆಗಳು ಪ್ರತಿಬಂಧಕ ಹಾಗೂ ರೋಚಕವೆಂದು ಹೆಸರಾಗಿವೆ. ಬರಗಾಲದಲ್ಲಿ ಇದರ ಬೀಜಗಳನ್ನು ತಿನ್ನುವುದಿದೆ.

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: