ಹಮ್ ಆಪ್ಕೆ ಹೇ ಕೌನ್..! (ಚಲನಚಿತ್ರ)
ಹಮ್ ಆಪ್ಕೆ ಹೇ ಕೌನ್..! | |
---|---|
ನಿರ್ದೇಶನ | ಸೂರಜ್ ಬರ್ಜಾತ್ಯಾ |
ನಿರ್ಮಾಪಕ | ಅಜೀತ್ ಕುಮಾರ್ ಬರ್ಜಾತ್ಯಾ ಕಮಲ್ ಕುಮಾರ್ ಬರ್ಜಾತ್ಯಾ ರಾಜ್‍ಕುಮಾರ್ ಬರ್ಜಾತ್ಯಾ |
ಲೇಖಕ | ಸೂರಜ್ ಬರ್ಜಾತ್ಯಾ |
ಆಧಾರ | ಕೇಶವ್ ಪ್ರಸಾದ್ ಮಿಶ್ರಾರ ಕೊಹ್ಬರ್ ಕೀ ಶರ್ತ್ ಮೇಲೆ ಆಧಾರಿತ |
ಪಾತ್ರವರ್ಗ |
|
ಸಂಗೀತ | ರಾಮ್‍ಲಕ್ಷ್ಮಣ್ |
ಛಾಯಾಗ್ರಹಣ | ರಾಜನ್ ಕಿನಾಗಿ |
ಸಂಕಲನ | ಮುಖ್ತಾರ್ ಅಹಮದ್ |
ಸ್ಟುಡಿಯೋ | ರಾಜ್‍ಶ್ರೀ ಪ್ರೊಡಕ್ಷನ್ಸ್ |
ವಿತರಕರು | ರಾಜ್‍ಶ್ರೀ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | 199 ನಿಮಿಷಗಳು[lower-alpha ೧] |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ಅಂದಾಜು ₹೪೨.೫ million[೨] |
ಬಾಕ್ಸ್ ಆಫೀಸ್ | ಅಂದಾಜು ₹೧.೨೮ billion[೩] |
ಹಮ್ ಆಪ್ಕೆ ಹೇ ಕೌನ್..! (ಅನುವಾದ: ನಾನು ನಿಮಗೆ ಏನು?)[೪] ೧೯೯೪ರ ಒಂದು ಹಿಂದಿ ಪ್ರಣಯಪ್ರಧಾನ ನಾಟಕ ಚಲನಚಿತ್ರ.[೫] ಇದನ್ನು ಸೂರಜ್ ಬರ್ಜಾತ್ಯಾ ಬರೆದು ನಿರ್ದೇಶಿಸಿದ್ದಾರೆ. ರಾಜ್‍ಶ್ರೀ ಪ್ರೊಡಕ್ಷನ್ಸ್ ಇದನ್ನು ನಿರ್ಮಿಸಿದೆ. ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಮಾಧುರಿ ದೀಕ್ಷಿತ್ ಮತ್ತು ಸಲ್ಮಾನ್ ಖಾನ್ ನಟಿಸಿದ್ದಾರೆ. ಒಬ್ಬ ವಿವಾಹಿತ ದಂಪತಿಯ ಕಥೆ ಮತ್ತು ಅವರ ಕುಟುಂಬಗಳ ನಡುವಿನ ಸಂಬಂಧಗಳನ್ನು ಸಂಬಂಧಿಸುವ ಮೂಲಕ ಈ ಚಿತ್ರವು ಭಾರತೀಯ ವಿವಾಹ ಸಂಪ್ರದಾಯಗಳನ್ನು ಪ್ರಶಂಸಿಸುತ್ತದೆ; ಒಬ್ಬರ ಕುಟುಂಬಕ್ಕಾಗಿ ಒಬ್ಬರ ಪ್ರೀತಿಯನ್ನು ತ್ಯಾಗ ಮಾಡುವ ಬಗೆಗಿನ ಕಥೆ. ಈ ಚಿತ್ರವು ಇದೇ ನಿರ್ಮಾಣಶಾಲೆಯ ಒಂದು ಮುಂಚಿನ ಚಲನಚಿತ್ರವಾದ ನದಿಯಾ ಕೇ ಪಾರ್‌ನ (೧೯೮೨) ರೂಪಾಂತರವಾಗಿದೆ.
ವಿಶ್ವಾದ್ಯಂತ ₹128 ಕೋಟಿಗಳಷ್ಟು ಗಳಿಸಿದ ಹಮ್ ಆಪ್ಕೆ ಹೇ ಕೌನ್..! ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಯಿತು. ವಿತರಣೆಯ ಹೊಸ ವಿಧಾನಗಳು ಮತ್ತು ಕಡಿಮೆ ಹಿಂಸಾತ್ಮಕ ಕಥೆಗಳತ್ತ ದಿಕ್ಕು ಬದಲಾವಣೆಯೊಂದಿಗೆ ಇದು ಭಾರತೀಯ ಚಲನಚಿತ್ರೋದ್ಯಮದಲ್ಲಿ ಬದಲಾವಣೆಗೆ ಕೊಡುಗೆ ನೀಡಿತು. ಇದು ₹1 ಬಿಲಿಯನ್‍ಗಿಂತ ಹೆಚ್ಚು ಹಣಗಳಿಸಿದ ಭಾರತದ ಮೊದಲ ಚಲನಚಿತ್ರವಾಗಿತ್ತು ಮತ್ತು ಹಣದುಬ್ಬರಕ್ಕೆ ಸರಿಹೊಂದಿಸಿದಾಗ ೧೯೯೦ರ ದಶಕದ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಗಿದೆ. ಬಾಕ್ಸ್ ಆಫ಼ಿಸ್ ಇಂಡಿಯಾ ಇದನ್ನು "ಆಧುನಿಕ ಯುಗದ ಅತಿ ದೊಡ್ಡ ಬ್ಲಾಕ್‍ಬಸ್ಟರ್" ಎಂದು ವರ್ಣಿಸಿದೆ.[೬] ಚಿತ್ರವನ್ನು ತೆಲುಗಿನಲ್ಲಿ ಪ್ರೇಮಾಲಯಂ ಎಂದು ಡಬ್ ಮಾಡಲಾಯಿತು.[೭] ಧ್ವನಿವಾಹಿನಿಯಲ್ಲಿ, ಅಸಾಧಾರಣವಾಗಿ ದೊಡ್ಡ ಸಂಖ್ಯೆಯಾದ, ೧೪ ಹಾಡುಗಳಿವೆ ಮತ್ತು ಬಾಲಿವುಡ್ ಇತಿಹಾಸದಲ್ಲಿನ ಅತಿ ಜನಪ್ರಿಯ ಧ್ವನಿವಾಹಿನಿಗಳಲ್ಲಿ ಒಂದಾಗಿದೆ. ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ೧೧ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.
ಹಮ್ ಆಪ್ಕೆ ಹೇ ಕೌನ್..! ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಐದು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದಿತು. ಜೊತೆಗೆ ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು. ಇದು ಭಾರತದಲ್ಲಿನ ವಿವಾಹ ಆಚರಣೆಗಳ ಮೇಲೆ ದೀರ್ಘಕಾಲೀನ ಪ್ರಭಾವ ಬೀರಿತು, ವಿವಾಹಗಳು ಹಲವುವೇಳೆ ಈ ಚಲನಚಿತ್ರದ ಹಾಡುಗಳು ಮತ್ತು ಆಟಗಳನ್ನು ಒಳಗೊಳ್ಳುತ್ತವೆ.
ಕಥಾವಸ್ತು
[ಬದಲಾಯಿಸಿ]ಸೋದರರಾದ ಪ್ರೇಮ್ ಮತ್ತು ರಾಜೇಶ್ ತಮ್ಮ ಹೆತ್ತವರನ್ನು ಚಿಕ್ಕವರಿದ್ದಾಗಲೇ ಕಳೆದುಕೊಂಡಿರುತ್ತಾರೆ. ಅವರು ತಮ್ಮ ಚಿಕ್ಕಪ್ಪ ಕೈಲಾಶ್ ನಾಥ್‍ನೊಂದಿಗೆ ವಾಸಿಸುತ್ತಿರುತ್ತಾರೆ. ರಾಜೇಶ್ ಕುಟುಂಬದ ವ್ಯವಹಾರವನ್ನು ನಡೆಸುತ್ತಿರುತ್ತಾನೆ ಮತ್ತು ಅವನ ಕುಟುಂಬ ಅವನಿಗಾಗಿ ಸೂಕ್ತ ವಧುವಿನ ಹುಡುಕಾಟ ನಡೆಸಿರುತ್ತದೆ. ಒಂದು ದಿನ, ಕೈಲಾಶ್ ತನ್ನ ಕಾಲೇಜಿನ ಸ್ನೇಹಿತನಾಗಿದ್ದ, ಈಗ ಪ್ರಾಧ್ಯಾಪಕನಾಗಿರುವ ಸಿದ್ಧಾರ್ಥ್ ಚೌಧರಿಯನ್ನು ಹಲವಾರು ವರ್ಷಗಳ ನಂತರ ಭೇಟಿಯಾಗುತ್ತಾನೆ. ಸಿದ್ಧಾರ್ಥ್ ಮತ್ತು ಅವನ ಹೆಂಡತಿ ಮಧುಕಲಾಗೆ ಪೂಜಾ ಮತ್ತು ನಿಶಾ ಹೆಸರಿನ ಇಬ್ಬರು ಪುತ್ರಿಯರಿರುತ್ತಾರೆ. ಸಿದ್ಧಾರ್ಥ್ ಮತ್ತು ಕೈಲಾಶ್ ರಾಜೇಶ್ ಮತ್ತು ಪೂಜಾರ ನಡುವೆ ವಿವಾಹವನ್ನು ನಿಶ್ಚಯಿಸುತ್ತಾರೆ. ತಮ್ಮ ಮೊದಲ ಭೇಟಿಯಿಂದಲೇ, ನಿಶಾ ಮತ್ತು ಪ್ರೇಮ ಒಬ್ಬರೊಡನೆ ಒಬ್ಬರು ನಿರಾತಂಕವಾಗಿ ಜಗಳವಾಡಲು ಆರಂಭಿಸುತ್ತಾರೆ, ಮತ್ತು ತಮಾಷೆ ಹಾಗೂ ಚೇಷ್ಟೆ ಪೂಜಾ ಹಾಗೂ ರಾಜೇಶ್‍ರ ಮದುವೆಯಾದ್ಯಂತ ಮುಂದುವರಿಯುತ್ತದೆ.
ಪ್ರೇಮ್ ರಾಜೇಶ್‍ನ ಸ್ನೇಹಪೂರ್ಣ ನಾದಿನಿ ನಿಶಾಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರುತ್ತಾನೆ. ಕಾಲ ಕಳೆದಂತೆ, ಪೂಜಾ ಮತ್ತು ರಾಜೇಶ್‍ರಿಗೆ ಒಬ್ಬರಿಗೆ ಒಬ್ಬರ ಪ್ರೀತಿಯ ಅರಿವಾಗುತ್ತದೆ, ಮತ್ತು ಪೂಜಾ ತಾಯಿಯಾಗಲಿದ್ದಾಳೆ ಎಂದು ಬಹಿರಂಗಗೊಳಿಸಲಾಗುತ್ತದೆ. ಶಿಶುವಿನ ಸನ್ನಿಹಿತವಾದ ಆಗಮನವನ್ನು ಗುರುತಿಸುವ ಸಮಾರಂಭಕ್ಕೆ ಕೈಲಾಶ್ ಮನೆಗೆ ಬರಲು ಸಿದ್ಧಾರ್ಥ್ ಮತ್ತು ಮಧುಕಲಾಗೆ ಸಾಧ್ಯವಾಗುವುದಿಲ್ಲ. ಬದಲಾಗಿ ಅವರು ನಿಶಾಳನ್ನು ಕಳಿಸುತ್ತಾರೆ. ಅವಳು ಜನ್ಮದ ವೇಳೆ ಉಪಸ್ಥಿತಳಿರುತ್ತಾಳೆ. ಈ ನಡುವೆ, ನಿಶಾ ಮತ್ತು ಪ್ರೇಮ್ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ, ಆದರೆ ಅದನ್ನು ರಹಸ್ಯವಾಗಿಡುತ್ತಾರೆ. ತಮ್ಮ ಮೊಮ್ಮಗುವಿನ ಜನನವನ್ನು ಆಚರಿಸಲು ಸಿದ್ಧಾರ್ಥ್ ಮತ್ತು ಮಧುಕಲಾ ಕೈಲಾಶ್‍ನ ಮನೆಗೆ ಬರುತ್ತಾರೆ. ಬೇರ್ಪಡುವ ಸಮಯ ಬಂದಾಗ, ಅವರ ಆತಿಥೇಯರು ಖಿನ್ನರಾಗುತ್ತಾರೆ, ವಿಶೇಷವಾಗಿ ಪ್ರೇಮ್. ಅವರು ಬೇಗನೇ ಶಾಶ್ವತವಾಗಿ ಪುನಃ ಒಂದಾಗುವೆವು ಎಂದು ಅವನು ಮತ್ತು ನಿಶಾ ಒಬ್ಬರಿಗೊಬ್ಬರು ಮಾತುಕೊಡುತ್ತಾರೆ.
ತನ್ನ ಹೆತ್ತವರ ಮನೆಗೆ ಬರುವಂತೆ ಪೂಜಾಳನ್ನು ಆಹ್ವಾನಿಸಲಾಗುತ್ತದೆ, ಮತ್ತು ಪ್ರೇಮ್ ಅವಳನ್ನು ಅಲ್ಲಿ ಕರೆದುಕೊಂಡು ಹೋಗುತ್ತಾನೆ. ಅವರು ಆಗಮಿಸಿದಾಗ, ಪ್ರೇಮ್ ಮತ್ತು ನಿಶಾ ಪ್ರೀತಿಸುತ್ತಿದ್ದಾರೆಂದು ಪೂಜಾಳಿಗೆ ಗೊತ್ತಾಗುತ್ತದೆ, ಮತ್ತು ಅವರ ಮದುವೆ ಮಾಡಿಸುವುದಾಗಿ ಮಾತುಕೊಟ್ಟು ನಿಶಾಳಿಗೆ ಒಂದು ಕಂಠಹಾರವನ್ನು ಗುರುತಾಗಿ ಕೊಡುತ್ತಾಳೆ. ಸ್ವಲ್ಪ ಸಮಯದ ನಂತರ, ಪೂಜಾ ಆಕಸ್ಮಿಕವಾಗಿ ಜಾರಿ ಮೆಟ್ಟಿಲುಗಳಿಮ್ದ ಕೆಳ ಬೀಳುತ್ತಾಳೆ, ಮತ್ತು ಅಂತಿಮವಾಗಿ ತಲೆಯ ಪೆಟ್ಟಿನಿಂದ ಸಾಯುತ್ತಾಳೆ. ಎಲ್ಲರೂ ಆ ದುರಂತದಿಂದ ಜರ್ಝರಿತರಾಗುತ್ತಾರೆ.
ಪೂಜಾ ಮತ್ತು ರಾಜೇಶ್‍ರ ಮಗನನ್ನು ಪೂಜಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಹಾಗಾಗಿ, ನಿಶಾ ಆ ಶಿಶುವಿಗೆ ಒಳ್ಳೆ ತಾಯಿಯಾಗುವಳು ಎಂದು ಸಿದ್ಧಾರ್ಥ್ ಮತ್ತು ಕೈಲಾಶ್‍ಗೆ ಅನಿಸುತ್ತದೆ. ಅವರು ನಿಶಾಳನ್ನು ರಾಜೇಶ್‍ಗೆ ಕೊಟ್ಟು ಮದುವೆಮಾಡಲು ನಿರ್ಧರಿಸುತ್ತಾರೆ. ಸಿದ್ಧಾರ್ಥ್ ಮತ್ತು ಮಧುಕಲಾ ಕೈಲಾಶ್ ಕುಟುಂಬದೊಳಗೆ ತನ್ನ ಮದುವೆ ಬಗ್ಗೆ ಮಾತಾಡುತ್ತಿರುವುದನ್ನು ನಿಶಾ ಕದ್ದುಕೇಳುತ್ತಾಳೆ, ಮತ್ತು ಅವರು ತನ್ನ ಮತ್ತು ಪ್ರೇಮ್ ಮದುವೆಯನ್ನು ಚರ್ಚಿಸುತ್ತಿದ್ದರೆಂದು ಭಾವಿಸಿ ಅದಕ್ಕೆ ಒಪ್ಪಿಕೊಳ್ಳುತ್ತಾಳೆ. ನಂತರ, ಒಂದು ವಿವಾಹಪೂರ್ವ ಸಮಾರಂಭದಲ್ಲಿ, ತಾನು ವಾಸ್ತವವಾಗಿ ರಾಜೇಶ್‍ನನ್ನು ಮದುವೆಯಾಗಲಿದ್ದೇನೆ ಎಂದು ಅವಳಿಗೆ ತಿಳಿಯುತ್ತದೆ.
ತಮ್ಮ ಪ್ರೀತಿಯನ್ನು ರಾಜೇಶ್ ಮತ್ತು ಅವನ ಮಗನಿಗಾಗಿ ತ್ಯಾಗ ಮಾಡಲು ಪ್ರೇಮ್ ಮತ್ತು ನಿಶಾ ಪ್ರತಿಜ್ಞೆ ಮಾಡುತ್ತಾರೆ. ವಿವಾಹಕ್ಕೆ ಕೆಲವು ಕ್ಷಣಗಳ ಮುಂಚೆ, ಪೂಜಾ ತನಗೆ ಕೊಟ್ಟ ಕಂಠಹಾರ, ಜೊತೆಗೆ ಪತ್ರವನ್ನು ಪ್ರೇಮ್‍ಗೆ ಕೊಡುವಂತೆ ನಿಶಾ ಪ್ರೇಮ್‍ನ ನಾಯಿ ಟಫ಼ಿಗೆ ಹೇಳುತ್ತಾಳೆ. ಟಫ಼ಿ ನಿಶಾಳ ಕೋಣೆಯಿಂದ ಹೊರಬಂದು ಪತ್ರವನ್ನು ಪ್ರೇಮ್‍ಗೆ ಕೊಡುವ ಬದಲು ರಾಜೇಶ್‍ಗೆ ಕೊಡುತ್ತದೆ. ರಾಜೇಶ್ ಪತ್ರವನ್ನು ಓದಿ ಪ್ರೇಮ್ ಮತ್ತು ನಿಶಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆಂದು ಅರಿತುಕೊಳ್ಳುತ್ತಾನೆ. ತರುವಾಯ, ಅವನು ಮದುವೆಯನ್ನು ನಿಲ್ಲಿಸಿ ನಿಶಾ ಮತ್ತು ಪ್ರೇಮ್ ಇಬ್ಬರನ್ನೂ ಎದುರಾಗುತ್ತಾನೆ. ಕೊನೆಯಲ್ಲಿ, ಪ್ರೇಮ್ ಮತ್ತು ನಿಶಾ ತಮ್ಮ ಕುಟುಂಬಗಳ ಅನುಮತಿಯೊಂದಿಗೆ ಒಬ್ಬರನ್ನೊಬ್ಬರು ಮದುವೆಯಾಗುತ್ತಾರೆ.
ಪಾತ್ರವರ್ಗ
[ಬದಲಾಯಿಸಿ]ಟೆಂಪ್ಲೇಟು:Cast listingಟೆಂಪ್ಲೇಟು:Cast listing
ತಯಾರಿಕೆ
[ಬದಲಾಯಿಸಿ]ನಿರ್ದೇಶಕ/ಬರಹಗಾರ ಸೂರಜ್ ಬರ್ಜಾತ್ಯಾ ಹಮ್ ಆಪ್ಕೆ ಹೇ ಕೌನ್..! ಚಿತ್ರದ ಚಿತ್ರಕಥೆಯನ್ನು ಬರೆಯಲು ಒಂದು ವರ್ಷ ಒಂಭತ್ತು ತಿಂಗಳು ಮೀಸಲಿಟ್ಟರು. ಇವರ ತಂದೆ ರಾಜ್‍ಕುಮಾರ್ ಬರ್ಜಾತ್ಯಾ ತಮ್ಮ ಕುಟುಂಬದ ಕಂಪನಿ ರಾಜ್‍ಶ್ರೀ ಪ್ರೊಡಕ್ಷನ್ಸ್‌ನ ಮುಂಚಿನ ಕೊಡುಗೆಗಳಲ್ಲಿ ಒಂದನ್ನು ಬೇರೆ ರೀತಿಯಲ್ಲಿ ಪ್ರಸ್ತುತಪಡಿಸುವ ಸಲಹೆ ನೀಡಿದರು.[೮] ಆಗ ಹಮ್ ಆಪ್ಕೆ ಹೇ ಕೌನ್..! ಅವರ ೧೯೮೨ರ ನಿರ್ಮಾಣವಾದ ನದಿಯಾ ಕೇ ಪಾರ್‌ನ ಸಡಿಲ ರೂಪಾಂತರವಾಯಿತು.[೯] ಕೆಲವು ಸಂದರ್ಭಗಳನ್ನು ಕ್ಲೀಷೆಯ ರೀತಿಯಲ್ಲಿ ನಿರೂಪಿಸುವುದನ್ನು ತಪ್ಪಿಸಲು ಬರ್ಜಾತ್ಯಾ ಸಂಗೀತಾಭಿನಯಗಳನ್ನು ಬಳಸಿದರು. ಇದರಿಂದಾಗಿ ಬಹಳ ಹಾಡುಗಳಾಗಿ ಚಿತ್ರದ ಆರಂಭಿಕ ಪ್ರದರ್ಶನಗಳ ವೇಳೆ ಚಿತ್ರದ ಉದ್ದ ಮತ್ತು ಹಾಡುಗಳ ಸಂಖ್ಯೆಗೆ ಸಂಬಂಧಿಸಿದಂತೆ ದೂರುಗಳು ಬಂದವು.
ಆ ಸಮಯದಲ್ಲಿ ಏನು ಜನಪ್ರಿಯವಾಗಿತ್ತೊ ಅದಕ್ಕೆ ವಿಭಿನ್ನವಾಗಿ ಕಥೆಯನ್ನು ರಚಿಸಲಾಗಿತ್ತು. ಯಾವುದೇ ಖಳನಾಯಕರಿರಲಿಲ್ಲ, ಹಿಂಸೆಯಿರಲಿಲ್ಲ, ಅಥವಾ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಸಂಘರ್ಷಗಳಿರಲಿಲ್ಲ.[೧೦] ಪರಿಕಲ್ಪನೆಯಿಂದ ಸಿದ್ಧ ಉತ್ಪನ್ನದವರೆಗೆ, ಚಿತ್ರವು ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು.[೮] ನಿಶಾಳ ಪಾತ್ರವಹಿಸಿದ್ದಕ್ಕಾಗಿ ಮಾಧುರಿ ದೀಕ್ಷಿತ್‍ಗೆ ₹೨,೭೫,೪೦,೦೦೦ ರ ಸಂಭಾವನೆ ನೀಡಲಾಯಿತು.[೧೧] ಪ್ರೇಮ್ ಪಾತ್ರವನ್ನು ಮೊದಲು ಆಮಿರ್ ಖಾನ್‌ಗೆ ನೀಡಲಾಗಿತ್ತು. ಆದರೆ ಅವರು ನಿರಾಕರಿಸಿದ ಮೇಲೆ ಅದು ಸಲ್ಮಾನ್‍ರಿಗೆ ಹೋಯಿತು ಮತ್ತು ಅವರು ಸೂಪರ್‌ಸ್ಟಾರ್ ಆಗಲು ನೆರವಾಯಿತು.[೧೨]
ನಿರ್ಮಾಪಕರು/ವಿತರಕರು ತಮ್ಮ ಕೆಲಸದ ಮೇಲೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣವನ್ನು ಚಲಾಯಿಸಿದರು. ಸೀಮಿತ ಬಿಡುಗಡೆ, ಟಿವಿ ಪ್ರಚಾರದ ಹೊಸ ರೂಪ, ವೀಡಿಯೊ ಕೃತಿಚೌರ್ಯದ ವಿರುದ್ಧ ರಕ್ಷಣೆ, ಮತ್ತು ವೀಡಿಯೊ ಟೇಪ್‍ಗಳ ಬಿಡುಗಡೆಯಲ್ಲಿ ವಿಳಂಬವಿತ್ತು.[೧೩][೧೪]
ಧ್ವನಿವಾಹಿನಿ
[ಬದಲಾಯಿಸಿ]ಹಮ್ ಆಪ್ಕೆ ಹೇ ಕೌನ್..! ಚಿತ್ರದ ಧ್ವನಿವಾಹಿನಿಯನ್ನು ರಾಮ್‍ಲಕ್ಷ್ಮಣ್ (ಮೂಲ ಹೆಸರು ವಿಜಯ್ ಪಾಟೀಲ್) ಸಂಯೋಜಿಸಿದ್ದರು. ಹಾಡುಗಳಿಗೆ ಸಾಹಿತ್ಯವನ್ನು ರವೀಂದರ್ ರಾವಲ್ ಮತ್ತು ದೇವ್ ಕೋಹ್ಲಿ ಬರೆದಿದ್ದಾರೆ. ಈ ಧ್ವನಿವಾಹಿನಿಯನ್ನು ಸಾ ರೆ ಗಾ ಮಾ (ಅಂದಿನ ಹೆಸರು ಎಚ್ಎಮ್‍ವಿ) ಹೆಸರುಪಟ್ಟಿ ಅಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಧ್ವನಿವಾಹಿನಿಯಲ್ಲಿ ಲತಾ ಮಂಗೇಶ್ಕರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕುಮಾರ್ ಸಾನು, ಉದಿತ್ ನಾರಾಯಣ್, ಶೈಲೇಂದ್ರ ಸಿಂಗ್, ಶಾರದಾ ಸಿನ್ಹಾ ಮುಂತಾದ ಅನುಭವಿ ಗಾಯಕರು ಹಾಡಿದ್ದಾರೆ. ಕಥೆ ಬರೆಯುವ ವೇಳೆ ರಾಮ್‍ಲಕ್ಷ್ಮಣ್ ನಿರ್ದೇಶಕ ಬರ್ಜಾತ್ಯಾರೊಂದಿಗೆ ಸುಮಾರು ೫೦ ಭೇಟಿಗಳನ್ನು ನಡೆಸಿದರು.[೮] "ದೀದಿ ತೇರಾ ದೇವರ್ ದೀವಾನಾ" ಹಾಡು ನಸ್ರತ್ ಫತೇ ಅಲಿ ಖಾನ್‍ರ ಹಾಡು "ಸಾರೆ ನಬಿಯಾನ್" ದಿಂದ ಸ್ಫೂರ್ತಿಪಡೆದಿದೆ ಎಂದು ಹೇಳಲಾಗಿದೆ.[೧೧][೧೫] ಆ ಹಾಡು ಸಾರ್ವಕಾಲಿಕ ಅತಿ ಜನಪ್ರಿಯ ಹಾಡುಗಳಲ್ಲಿ ಒಂದೆನಿಸಿಕೊಂಡಿತು.[೧೬] ಬಿಡುಗಡೆಯಾದ ನಂತರ ಧ್ವನಿವಾಹಿನಿಯು ಬಹಳ ಯಶಸ್ವಿಯಾಯಿತು ಮತ್ತು ೧೨ ದಶಲಕ್ಷ ಪ್ರತಿಗಳು ಮಾರಾಟವಾದವು.[೧೭]
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
1. | "ಮಾಯಿ ನಿ ಮಾಯಿ" | ದೇವ್ ಕೋಹ್ಲಿ | ಲತಾ ಮಂಗೇಶ್ಕರ್ | 4:21 |
2. | "ದೀದಿ ತೇರಾ ದೇವರ್ ದೀವಾನಾ" | ದೇವ್ ಕೋಹ್ಲಿ | ಲತಾ ಮಂಗೇಶ್ಕರ್, ಎಸ್. ಪಿ. ಬಾಲಸುಬ್ರಮಣ್ಯಂ | 8:05 |
3. | "ಮೌಸಮ್ ಕಾ ಜಾದೂ" | ರವೀಂದರ್ ರಾವಲ್ | ಲತಾ ಮಂಗೇಶ್ಕರ್, ಎಸ್. ಪಿ. ಬಾಲಸುಬ್ರಮಣ್ಯಂ | 5:03 |
4. | "ಚಾಕ್‍ಲೇಟ್ ಲೈಮ್ ಜೂಸ್" | ದೇವ್ ಕೋಹ್ಲಿ | ಲತಾ ಮಂಗೇಶ್ಕರ್ | 4:27 |
5. | "ಜೂತೆ ದೊ, ಪೈಸೆ ಲೊ" | ರವೀಂದರ್ ರಾವಲ್ | ಲತಾ ಮಂಗೇಶ್ಕರ್, ಎಸ್. ಪಿ. ಬಾಲಸುಬ್ರಮಣ್ಯಂ | 4:36 |
6. | "ಪೆಹಲಾ ಪೆಹಲಾ ಪ್ಯಾರ್" | ದೇವ್ ಕೋಹ್ಲಿ | ಎಸ್. ಪಿ. ಬಾಲಸುಬ್ರಮಣ್ಯಂ | 4:25 |
7. | "ಧಿಕ್ತಾನಾ (ಭಾಗ 1)" | ರವೀಂದರ್ ರಾವಲ್ | ಎಸ್. ಪಿ. ಬಾಲಸುಬ್ರಮಣ್ಯಂ | 5:20 |
8. | "ಬಾಬುಲ್" | ರವೀಂದರ್ ರಾವಲ್ | ಶಾರದಾ ಸಿನ್ಹಾ | 3:44 |
9. | "ಮುಝಸೆ ಜುದಾ ಹೋಕರ್" | ದೇವ್ ಕೋಹ್ಲಿ | ಲತಾ ಮಂಗೇಶ್ಕರ್, ಎಸ್. ಪಿ. ಬಾಲಸುಬ್ರಮಣ್ಯಂ | 6:02 |
10. | "ಸಮಧಿ ಸಮಧನ್" | ರವೀಂದರ್ ರಾವಲ್ | ಲತಾ ಮಂಗೇಶ್ಕರ್, ಕುಮಾರ್ ಸಾನು | 5:51 |
11. | "ಹಮ್ ಆಪ್ಕೆ ಹೇ ಕೌನ್" | ದೇವ್ ಕೋಹ್ಲಿ | ಲತಾ ಮಂಗೇಶ್ಕರ್, ಎಸ್. ಪಿ. ಬಾಲಸುಬ್ರಮಣ್ಯಂ | 4:00 |
12. | "ವಾಹ್ ವಾಹ್ ರಾಮ್‍ಜಿ" | ರವೀಂದರ್ ರಾವಲ್ | ಲತಾ ಮಂಗೇಶ್ಕರ್, ಎಸ್. ಪಿ. ಬಾಲಸುಬ್ರಮಣ್ಯಂ | 4:15 |
13. | "ಲೋ ಚಲಿ ಮ್ಞೇ" | ರವೀಂದರ್ ರಾವಲ್ | ಲತಾ ಮಂಗೇಶ್ಕರ್ | 2:53 |
14. | "ಧಿಕ್ತಾನಾ (ಭಾಗ 2)" | ರವೀಂದರ್ ರಾವಲ್ | ಲತಾ ಮಂಗೇಶ್ಕರ್, ಎಸ್. ಪಿ. ಬಾಲಸುಬ್ರಮಣ್ಯಂ, ಉದಿತ್ ನಾರಾಯಣ್, ಶೈಲೇಂದ್ರ ಸಿಂಗ್ | 8:07 |
ಒಟ್ಟು ಸಮಯ: | 71:09 |
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ
[ಬದಲಾಯಿಸಿ]ವಿಮರ್ಶೆಗಳು
[ಬದಲಾಯಿಸಿ]ಹಮ್ ಆಪ್ಕೆ ಹೇ ಕೌನ್..! ಬಹುಮಟ್ಟಿಗೆ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಹಮ್ ಆಪ್ಕೆ ಹೇ ಕೌನ್..! ಹಿತಕರ ಮನೋರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು.[೧೮] ಈ ಚಿತ್ರವು ೧೩ ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಐದು ಪ್ರಶಸ್ತಿಗಳನ್ನು ಗೆದ್ದು ಆ ವರ್ಷದ ಅತಿ ಪ್ರಮುಖ ವಿಜೇತರಲ್ಲಿ ಒಂದೆನಿಸಿಕೊಂಡಿತು.[೧೯][೨೦] "ದೀದಿ ತೇರಾ ದೇವರ್ ದೀವಾನಾ" ಹಾಡಿಗಾಗಿ ಲತಾ ಮಂಗೇಶ್ಕರ್ ಆ ವರ್ಷ ಸಾರ್ವಜನಿಕ ಬೇಡಿಕೆಯ ಕಾರಣ ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಯನ್ನು ಪಡೆದರು.[೨೧]
ವಿಶ್ಲೇಷಣೆ
[ಬದಲಾಯಿಸಿ]ಲೇಖಕ ಕೋವಿದ್ ಗುಪ್ತಾ ಹಮ್ ಆಪ್ಕೆ ಹೇ ಕೌನ್..! ವನ್ನು ಸಾಂಪ್ರದಾಯಿಕತೆ ಮತ್ತು ಆಧುನಿಕತೆ ನಡುವಿನ ಅಂತರವನ್ನು ಕಡಿಮೆಮಾಡುವ ಚಿತ್ರವೆಂದು ವರ್ಗೀಕರಿಸಿದರು. ತೇಜಸ್ವಿನಿ ಗಂಟಿ ಮಕ್ಕಳು ತಮ್ಮ ಕುಟುಂಬಗಳ ಒಳ್ಳೆಯದಕ್ಕಾಗಿ ತಮ್ಮ ಪ್ರೀತಿಯನ್ನು ಹೇಗೆ ತ್ಯಾಗಮಾಡಲು ಸಿದ್ಧರಿರುತ್ತಾರೆ ಎಂಬುದರ ಸಂಬಂಧವಾಗಿ ಚಿತ್ರವನ್ನು ಮಕ್ಕಳ ಕರ್ತವ್ಯದ ಪ್ರಶಂಸಾಗೀತೆಯೆಂದು ಕರೆದರು.[೪] ಚಿತ್ರದಲ್ಲಿನ ಕೌಟುಂಬಿಕ ಸಂಬಂಧಗಳು ಅವುಗಳ ಪರಸ್ಪರ ವಿನಯಶೀಲತೆಯ ಕಾರಣ ಸಾಮಾನ್ಯ ಸಿನಿಮಾ ಕುಟುಂಬಗಳಿಂದ ಭಿನ್ನವಾಗಿವೆ ಎಂದೂ ಗಮನಿಸಲಾಗಿದೆ.[೪]
ಚಿತ್ರದ ಕೊಡುಗೆ ಮತ್ತು ಪ್ರಭಾವ
[ಬದಲಾಯಿಸಿ]ಹಮ್ ಆಪ್ಕೆ ಹೇ ಕೌನ್..! ಚಿತ್ರವನ್ನು ಹಿಂದಿ ಚಲನಚಿತ್ರಗಳ ಬಾಕ್ಸ್ ಆಫ಼ಿಸ್ ಇತಿಹಾಸದಲ್ಲಿ ಭಿನ್ನ ಕ್ಷಣವಾಗಿರುವುದಕ್ಕೆ, ಮತ್ತು ಭಾರತೀಯ ಚಲನಚಿತ್ರ ವಿತರಣಾ ವ್ಯವಸ್ಥೆಯಲ್ಲಿ ಕ್ರಾಂತಿಯ ಆರಂಭವಾಗಿರುವುದಕ್ಕೆ ಗುರುತಿಸಲಾಗಿದೆ.[೨೨][೨೩] ಈ ಚಿತ್ರ ಬಿಡುಗಡೆಯಾದಾಗ, ಸುಧಾರಿತ ಕೇಬಲ್ ಟಿವಿ, ಗೃಹ ವೀಡಿಯೊ ಮತ್ತು ಚಲನಚಿತ್ರ ಕೃತಿಚೌರ್ಯದ ಕಾರಣ ಭಾರತದಲ್ಲಿ ಸಿನಿಮಾ ಪತನವಾಗುತ್ತಿತ್ತು.[೧೦] ಆರಂಭದಲ್ಲಿ ಸೌಲಭ್ಯಗಳನ್ನು ಉನ್ನತೀಕರಿಸಲು ಒಪ್ಪಿಕೊಂಡ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಚಿತ್ರಕ್ಕೆ ವ್ಯಾಪಕ ಬೇಡಿಕೆ ಸಿಕ್ಕಂತೆ, ಚಿತ್ರವನ್ನು ಪಡೆದುಕೊಳ್ಳಲು ಅನೇಕ ಇತರ ಚಿತ್ರಮಂದಿರಗಳು ಸೌಕರ್ಯಗಳಲ್ಲಿ ಸುಧಾರಣೆ ಮಾಡಿಕೊಂಡವು. ಟಿಕೆಟ್ ಬೆಲೆ ಹೆಚ್ಚಿದ್ದರೂ, ಹೆಚ್ಚು ಸೌಕರ್ಯಗಳಿದ್ದ ಕಾರಣ ಜನರು ಚಿತ್ರಮಂದಿರಗಳಿಗೆ ಬಂದರು.[೨೪] ಜೊತೆಗೆ, ಚಿತ್ರದಲ್ಲಿ ಅಶ್ಲೀಲತೆ ಇಲ್ಲದ ಕಾರಣ ಮಧ್ಯಮ ವರ್ಗದ ಕುಟುಂಬ ಗ್ರಾಹಕರಿಗೆ ಇದು ಚಿತ್ರಮಂದಿರಕ್ಕೆ ಮರಳುವುದಕ್ಕೆ ಚಿಹ್ನೆಯಾಯಿತು.[೨೫]
ಹಮ್ ಆಪ್ಕೆ ಹೇ ಕೌನ್..! ನಂತರದ ಅನೇಕ ಹಿಂದಿ ಚಲನಚಿತ್ರಗಳ ಮೇಲೆ ಪ್ರಭಾವಬೀರಿತು. ಈ ಚಿತ್ರವು ಮನಮೋಹಕ ಕೌಟುಂಬಿಕ ನಾಟಕಚಿತ್ರ ಮತ್ತು ಎನ್ಆರ್‌ಐ ಸಂಬಂಧಿತ ಚಲನಚಿತ್ರಗಳಿಗೆ ಮಾರ್ಗ ಪ್ರವರ್ತಕವಾಯಿತು.[೨೬][೨೭] ಯಾವುದೇ ಮದುವೆಯು ಈ ಚಿತ್ರದ ಕೆಲವು ಹಾಡುಗಳಿಲ್ಲದೇ ಪೂರ್ಣವಾಗುವುದಿಲ್ಲ,[೨೮] ಮತ್ತು ವಿವಾಹದ ಯೋಜನೆಗಳನ್ನು ವಿನ್ಯಾಸಗೊಳಿಸಲು ಈ ಚಿತ್ರವನ್ನು ಕಥೆಯಾಗಿ ಬಳಸಲಾಗಿದೆ.[೧೦] ಮುಂದಿನ ಅನೇಕ ವರ್ಷಗಳವರೆಗೆ, "ದೀದಿ ತೇರಾ ದೇವರ್ ದೀವಾನಾ" ಹಾಡಿನಲ್ಲಿ ಮಾಧುರಿ ದೀಕ್ಷಿತ್ ಧರಿಸಿದ ನೇರಳೆಬಣ್ಣದ ಸೀರೆಯಂತಿರುವ ಸೀರೆಯನ್ನು ಧರಿಸಲು ಮಹಿಳೆಯರು ಬಯಸಿದರು.[೨೯]
ಉಲ್ಲೇಖಗಳು
[ಬದಲಾಯಿಸಿ]- ↑ "Hum Aapke Hain Koun! (1994)". British Board of Film Classification. Archived from the original on 14 August 2013. Retrieved 22 April 2013.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedBudget
- ↑ url=https://www.boxofficeindia.com/movie.php?movieid=11
- ↑ ೪.೦ ೪.೧ ೪.೨ Ganti 2013.
- ↑ "Hum Aapke Hain Koun! (1994) – Sooraj R. Barjatya". AllMovie.
- ↑ "Bahubali 2 Is The Biggest Hindi Blockbuster This Century".
- ↑ "Premalayam's Unbeatable Record". CineGoer. Archived from the original on 22 February 2014. Retrieved 17 January 2014.
- ↑ ೮.೦ ೮.೧ ೮.೨ Bhattacharya, Roshmila (25 February 2014). "Didi Tera Devar Deewana- A song for every season". ದಿ ಟೈಮ್ಸ್ ಆಫ್ ಇಂಡಿಯಾ. Retrieved 3 March 2014.
- ↑ Stringer 2013.
- ↑ ೧೦.೦ ೧೦.೧ ೧೦.೨ Lutgendorf, Philip. "Hum Aapke Hain Koun..!". South Asian Studies Program, University of Iowa. Archived from the original on 4 May 2013. Retrieved 26 December 2013.
- ↑ ೧೧.೦ ೧೧.೧ "Hum Aapke Hain Koun @ 20: Lesser Known Facts". The Times of India. 23 October 2015. Archived from the original on 12 February 2015. Retrieved 23 October 2015.
- ↑ "5 Blockbuster films rejected by Aamir Khan – Eastern Eye". Eastern Eye (in ಬ್ರಿಟಿಷ್ ಇಂಗ್ಲಿಷ್). 22 December 2017. Archived from the original on 26 ಫೆಬ್ರವರಿ 2018. Retrieved 25 February 2018.
- ↑ Ganti 2012.
- ↑ Morcom 2007.
- ↑ Kamra, Diksha (16 September 2010). "Folk inspiration for Munni Badnaam". The Times of India. Archived from the original on 3 ನವೆಂಬರ್ 2012. Retrieved 16 September 2010.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Cinema's Biggest Hit Touches Indian Soul". India Abroad. 20 January 1995. Archived from the original on 10 June 2014. Retrieved 25 November 2013.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) – via Highbeam (subscription required) - ↑ Morcom, Anna (2017). Hindi Film Songs and the Cinema. Routledge. p. 198. ISBN 978-1-351-56374-1.
- ↑ "42nd National Film Awards" (PDF). Directorate of Film Festivals. Archived from the original (PDF) on 3 March 2016. Retrieved 22 April 2013.
- ↑ "Filmfare Nominees And Winners" (PDF). The Times Group. Archived from the original (PDF) on 19 October 2015. Retrieved 12 January 2017.
- ↑ "Filmfare Awards 1995". Awardsandshows.com. Archived from the original on 21 March 2016. Retrieved 12 January 2017.
- ↑ "Filmfare Special Award". Rediff.com. Archived from the original on 15 August 2013. Retrieved 22 April 2013.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Sharma, Sanjukta (13 August 2011). "Cinema | Mumbai ka king kaun?". Livemint. Archived from the original on 2 December 2013. Retrieved 14 May 2013.
- ↑ "Top Lifetime Grossers 1990–1999 (Figures in Ind Rs)". Box Office India. Archived from the original on 15 January 2013. Retrieved 20 December 2012.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Ramnath, Nandini (20 April 2013). "Mumbai Multiplex | Liberty cinema is scripting a new ending". Livemint. Archived from the original on 3 December 2013. Retrieved 14 May 2013.
- ↑ Desai 2003.
- ↑ Soumita Sengupta, Shabdita Shrivastav (10 November 2012). "We Are Family". Box Office India. Archived from the original on 4 October 2013. Retrieved 25 November 2013.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Ahuja, Nitin (9 March 2013). "Return Of The Native". Box Office India. Archived from the original on 2 December 2013. Retrieved 25 November 2013.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Lall, Randy. "100 Greatest Bollywood Soundtracks Ever — Part 3". Planet Bollywood. Archived from the original on 27 December 2013. Retrieved 24 December 2013.
- ↑ Doswami, Seema (7 April 2012). "Movie Magic". Hindustan Times. Archived from the original on 21 March 2014. Retrieved 4 March 2014.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)
ಗ್ರಂಥಸೂಚಿ
[ಬದಲಾಯಿಸಿ]- Desai, Jigna (2003). Beyond Bollywood: The Cultural Politics of South Asian Diasporic Film. Routledge. ISBN 978-1-135-88720-9.
{{cite book}}
: Invalid|ref=harv
(help) - Ganti, Tejaswini (2012). Producing Bollywood: Inside the Contemporary Hindi Film Industry. Duke University Press. ISBN 0-8223-5213-3.
{{cite book}}
: Invalid|ref=harv
(help) - Ganti, Tejaswini (2013). Bollywood: A Guidebook to Popular Hindi Cinema. Routledge. ISBN 978-1-136-84929-9.
{{cite book}}
: Invalid|ref=harv
(help) - Juluri, Vamsee (1999). "Global weds local: the reception of Hum Aapke Hain Koun". European Journal of Cultural Studies. European Journal of Cultural Studies. 2 (2): 231–248. doi:10.1177/136754949900200205.
{{cite journal}}
: Invalid|ref=harv
(help) - Mishra, Vijay (2002). Bollywood Cinema: Temples of Desire. Routledge. ISBN 978-0-415-93015-4.
{{cite book}}
: Invalid|ref=harv
(help) - Morcom, Anna (2007). Hindi film songs and the cinema. Ashgate Publishing, Ltd. ISBN 978-0-7546-5198-7.
{{cite book}}
: Invalid|ref=harv
(help) - Stringer, Julian (2013). Movie Blockbusters. Routledge. ISBN 978-1-136-40821-2.
{{cite book}}
: Invalid|ref=harv
(help) - Uberoi, Patricia (2008). "Imagining the family". In Dudrah, Rajinder; Desai, Jigna (eds.). The Bollywood Reader. McGraw-Hill International. ISBN 978-0-335-22212-4.
{{cite book}}
: Invalid|ref=harv
(help)
ಹೊರಗಿನ ಕೊಂಡಿಗಳು
[ಬದಲಾಯಿಸಿ]- Official site at Rajshri Productions
- Hum Aapke Hain Koun..! @ ಐ ಎಮ್ ಡಿ ಬಿ
- ಟೆಂಪ್ಲೇಟು:BFI
- ಟೆಂಪ್ಲೇಟು:Allrovi movie
- Hum Aapke Hain Koun..! at Rotten Tomatoes
- Hum Aapke Hain Koun..! at Bollywood Hungama
- Hum Aapke Hain Koun..!: An Example of the Coding of Emotions in Contemporary Hindi Mainstream Film Projections Issue 2 editorial by Alexandra Schneider
- The Families Of Hindi Cinema: A Socio-Historical Approach To Film Studies Framework Issue 42 editorial by Valentina Vitali
ಉಲ್ಲೇಖ ದೋಷ: <ref>
tags exist for a group named "lower-alpha", but no corresponding <references group="lower-alpha"/>
tag was found
- Pages with non-numeric formatnum arguments
- Pages with reference errors
- CS1 ಬ್ರಿಟಿಷ್ ಇಂಗ್ಲಿಷ್-language sources (en-gb)
- CS1 errors: redundant parameter
- Subscription required using via
- Pages containing links to subscription-only content
- Template film date with 1 release date
- CS1 errors: invalid parameter value
- ಹಿಂದಿ-ಭಾಷೆಯ ಚಿತ್ರಗಳು
- Pages with reference errors that trigger visual diffs