ವಿಷಯಕ್ಕೆ ಹೋಗು

ಹರಿಹರ (ಕವಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಯ್ಸಳ ಸಾಮ್ರಾಜ್ಯದ ಕನ್ನಡ ಕವಿಗಳು ಮತ್ತು ಬರಹಗಾರರು
(1100-1343 CE)
ನಾಗಚಂದ್ರ 1105
ಕಾಂತಿ 1108
ರಾಜಾದಿತ್ಯ 12th. c
ಹರಿಹರ 1160–1200
ಉದಯಾದಿತ್ಯ 1150
ವೃತ್ತ ವಿಲಾಸ 1160
ಕೆರೆಯ ಪದ್ಮರಸ 1165
ನೇಮಿಚಂದ್ರ 1170
ಸುಮನೋಬನ 1175
ರುದ್ರಭಟ್ಟ 1180
ಅಗ್ಗಳ 1189
ಪಾಲ್ಕುರಿಕಿ ಸೋಮನಾಥ 1195
ಬೊಪ್ಪಣ 1180
ಕವಿ ಕಾಮ 12th c.
ದೇವಕವಿ 1200
ರಾಘವಾಂಕ 1200–1225
ಭಂದುವರ್ಮ 1200
ಬಾಲಚಂದ್ರ ಕವಿ 1204
ಪಾರ್ಶ ಪಂಡಿತ 1205
ಮಹಾನಂದಿ ಆಚಾರ್ಯ 1209
ಜನ್ನ 1209–1230
ಪುಲಿಗೆರೆ ಸೋಮನಾಥ 13th c.
ಹಸ್ತಿಮಲ್ಲ 13th c.
ಚಂದ್ರಮ 13th c.
ಸೋಮರಾಜ 1222
ಗುಣವರ್ಮ II 1235
ಪೊಳಲ್ವದಂತನಾಥ 1224
ಆಂಡಯ್ಯ 1217–1235
ಸಿಸುಮಯಣ 1232
ಮಲ್ಲಿಕಾರ್ಜುನ 1245
ನರಹರಿತೀರ್ಥ 1281
ಕುಮಾರ ಪದ್ಮರಸ 13th c.
ಮಹಾಬಲ ಕವಿ 1254
ಕೇಶಿರಾಜ 1260
ಕುಮುದೇಂದು 1275
ನಾಚಿರಾಜ 1300
ರಟ್ಟ ಕವಿ 1300
ನಾಗರಾಜ 1331
ಸೇವುಣ ಯಾದವ ಆಳ್ವಿಕೆಯಲ್ಲಿ ಪ್ರಸಿದ್ಧ ಕನ್ನಡ ಕವಿಗಳು ಮತ್ತು ಬರಹಗಾರರು
ಕಮಲಭವ 1180
ಅಚ್ಚಣ್ಣ 1198
ಅಮುಗಿದೇವ 1220
ಚಾವುಂಡರಸ 1300

ಹರಿಹರ : ೧೨ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಶೈವ ಕವಿ.ಈತನ ಸೋದರಳಿಯನೆ ರಾಘವಾಂಕ.ಹರಿಹರನು ಕೆಲವು ಕಾಲ ನರಸಿಂಹ ಬಲ್ಲಾಳ ರಾಜನಲ್ಲಿ ಕರಣಿಕನಾಗಿದ್ದ.ಹುಟ್ಟಿದ್ದು ಹಂಪೆಯಲ್ಲಿ. ತಂದೆ ಮಹದೇವ ಭಟ್ಟ, ತಾಯಿ ಶರ್ವಾಣಿ,ತಂಗಿ ರುದ್ರಾಣಿ. ಈಕೆ ರಾಘವಾಂಕನ ತಾಯಿ. ಗುರು ಮಾಯಿದೇವ.ಆರಾಧ್ಯ ದೈವ ಹಂಪೆಯ ವಿರೂಪಾಕ್ಷ.

ಪರಿಚಯ

[ಬದಲಾಯಿಸಿ]

ಈತ "ರಗಳೆಗಳ ಕವಿ" ಎಂದೆ ಪ್ರಸಿದ್ಧನಾಗಿದ್ದಾನೆ. ಹನ್ನೆರಡನೆಯ ಶತಮಾನದ ಬಹು ಮಹತ್ವದ ಶರಣ ಚಳವಳಿ ಮತ್ತು ವಚನ ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ. ಮೂಲತಃ ಆತನು ಭಕ್ತ ಕವಿ. ಆತನ ಕಾವ್ಯದ ತುಂಬ ಭಕ್ತಿಯು ಓತಪ್ರೋತವಾಗಿ ಹರಿದಿದೆ. ಹರಿಹರನ ಎರಡೂ ಶತಕಗಳಲ್ಲಿ ಆತನು ಹಂಪೆಯ ಶ್ರೀ ವಿರೂಪಾಕ್ಷನಲ್ಲಿ ತಳೆದಿರುವ ಭಕ್ತಿಯು ಎದ್ದು ಕಾಣುತ್ತದೆ. ಅಂತೆಯೇ ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ.
ಹರಿಹರನ ಶತಕದ್ವಯವು ಪ್ರಮುಖವಾಗಿ ಆತನ ಆತ್ಮಕಥನಗಳೇ ಆಗಿವೆ. ಗಿರಿಜಾ ಕಲ್ಯಾಣವು ಹರಿಹರನ ಮಹೋನ್ನತ ಚಂಪೂ ಕಾವ್ಯವಾಗಿದೆ. ಆವರೆಗಿನ ಕನ್ನಡ ಚಂಪೂ ಕೃತಿಗಳಲ್ಲಿ ಕಾಣದ ಕಥಾ ವಿಷಯವು ಇಲ್ಲಿದೆ. ಶೈವ ಪುರಾಣ ಗಳಲ್ಲಿ ಕಂಡು ಬರುವ ಶಿವಪಾವ೯ತಿಯರ ವಿವಾಹದ ಕಥೆ ಗಿರಿಜಾ ಕಲ್ಯಾಣದ ವಸ್ತು. ಗಿರಿಜೆಯ ಜನನದಿಂದ ಶಿವನೊಡನೆ ಅವಳ ವಿವಾಹದವರೆಗೆ ಮನೋಜ್ಞವಾಗಿ ಅವಳ ಸೌಂದಯ೯, ಸೊಬಗು, ಭಕ್ತಿಯ ಕಠೋರತೆ ಇವುಗಳನ್ನು ಸೂಕ್ಷ್ಮವಾಗಿ ಕವಿಯು ಚಿತ್ರಿಸಿದ್ದಾನೆ.

ಹರಿಹರನ ಕೃತಿಗಳು

[ಬದಲಾಯಿಸಿ]
  1. ಗಿರಿಜಾ ಕಲ್ಯಾಣ ಎಂಬ ಚಂಪೂಕಾವ್ಯ,
  2. ಪಂಪಾಶತಕ,
  3. ರಕ್ಷಾಶತಕ,
  4. ಮುಡಿಗೆಯ ಅಷ್ಟಕ .
  5. ಶಿವ ಶರಣರ ರಗಳೆಗಳನ್ನೂ ರಚಿಸಿದ್ದಾರೆ.ಇವುಗಳಲ್ಲಿ ಅರುವತ್ತಮೂರು ಪುರಾತನರು ಶಿವ ಶರಣರ ರಗಳೆಗಳು ಇವೆ.

ಹರಿಹರನ ರಗಳೆಗಳು

[ಬದಲಾಯಿಸಿ]

ಹರಿಹರನ ರಗಳೆಗಳಂತೂ ಆತನ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರಗೊಳಿಸಿರುವ ಅಮರ ಕೃತಿಗಳು. ಹರಿಹರನ ನೈಜಪ್ರತಿಭೆಯು ಇಲ್ಲಿ ಗೋಚರಿಸುತ್ತದೆ. ಅವನ ರಗಳೆಗಳ ಸಂಖ್ಯೆಗಳ ಬಗ್ಗೆ ಗೊಂದಲವಿದೆಯಾದರೂ, ಅವುಗಳ ಸಂಖ್ಯೆಯು ೧೦೬ ಎಂದು ಬಹುತೇಕರ ಅಭಿಪ್ರಾಯವಾಗಿದೆ. ವಿವಿಧ ಗಾತ್ರದ, ಬೇರೆ ಬೇರೆ ಶಿವಶರಣರ ಕಥೆಗಳನ್ನು ಈ ರಗಳೆಗಳಲ್ಲಿ ಹೇಳಲಾಗಿದೆ. ಮುಖ್ಯವಾಗಿ ೬೩ ಪುರಾತನರ, ಅಂದರೆ ತಮಿಳಿನ 'ಪೆರಿಯ ಪುರಾಣ'ದಲ್ಲಿ ಹೇಳಲಾಗಿರುವ ೬೩ ಶಿವಭಕ್ತರ ಕಥೆಗಳು ಇಲ್ಲಿವೆ.

  1. 'ಬಸವರಾಜದೇವರ ರಗಳೆ',
  2. 'ತಿರುನೀಲಕಂಠದೇವರ ರಗಳೆ',
  3. 'ನಂಬಿಯಣ್ಣನ ರಗಳೆ',
  4. 'ಮಹಾದೇವಿಯಕ್ಕನ ರಗಳೆ',
  5. 'ಪ್ರಭುದೇವರ ರಗಳೆ',
  6. 'ಕುಂಬಾರ ಗುಂಡಯ್ಯನ ರಗಳೆ',
  7. 'ಮಾದಾರ ಚೆನ್ನಯ್ಯ'ನ ರಗಳೆ
  8. 'ಇಳೆಯಾಂಡ ಗುಡಿಮಾರ'ನ ರಗಳೆ ಮತ್ತು
  9. 'ರೇವಣಸಿದ್ಧೇಶ್ವರ ರಗಳೆಗಳು' ಹರಿಹರನ ಪ್ರಮುಖ ರಗಳೆಗಳು.

ಉಲ್ಲೇಖಗಳು

[ಬದಲಾಯಿಸಿ]
  • Kamath, Suryanath U. (2001) [1980]. A concise history of Karnataka : from pre-historic times to the present. Bangalore: Jupiter books. LCCN 80905179.
  • Nagaraj, D.R. (2003) [2003]. "Critical Tensions in the History of Kannada Literary Culture". In Sheldon I. Pollock (ed.). Literary Cultures in History: Reconstructions from South Asia. Berkeley and London: University of California Press. pp. 323–383. ISBN 0-520-22821-9.
  • Narasimhacharya, R (1988) [1934]. History of Kannada Literature. Mysore: Government Press. Reprinted by Asian Educational Services, New Delhi. ISBN 81-206-0303-6.
  • Rice, E.P. (1982) [1921]. A History of Kanarese Literature. New Delhi: Asian Educational Services. ISBN 81-206-0063-0.
  • Sastri, K.A. Nilakanta (2002) [1955]. A history of South India from prehistoric times to the fall of Vijayanagar. New Delhi: Indian Branch, Oxford University Press. ISBN 0-19-560686-8.
  • Shiva Prakash, H.S. (1997). "Kannada". In Ayyappapanicker (ed.). Medieval Indian Literature:An Anthology. Sahitya Akademi. ISBN 81-260-0365-0.
  • Various (1987) [1987]. Encyclopaedia of Indian literature – vol 1. Sahitya Akademi. ISBN 81-260-1803-8.
  • Various (1988) [1988]. Encyclopaedia of Indian literature – vol 2. Sahitya Akademi. ISBN 81-260-1194-7.
  • Various (1992) [1996]. Encyclopaedia of Indian literature – vol 5. Sahitya Akademi. ISBN 81-260-1221-8.