ವಿಷಯಕ್ಕೆ ಹೋಗು

ಹರಿ ರಾವ್ಜಿ ಚಿಪ್ಲುಂಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಮಾಜ ಸುಧಾರಕ ಮತ್ತು ಕಾರ್ಯಕರ್ತ, ರಾವ್ ಬಹದ್ದೂರ್ ಹರಿ ರಾವ್ಜಿ ಚಿಪ್ಲುಂಕರ್, ಪುಣೆ ಭಾರತ.

ಹರಿ ರಾವ್ಜಿ ಚಿಪ್ಲುಂಕರ್ (ರಾವ್ ಬಹದ್ದೂರ್)[] (೧೮೪೨-೧೮೯೬) ಇವರು ಗೌರವ ಮ್ಯಾಜಿಸ್ಟ್ರೇಟ್ ಮತ್ತು ಪುಣೆಯ ಭೂಮಾಲೀಕರ ಸಂಘದ ಅಧ್ಯಕ್ಷ, ಸುಧಾರಕ, ಕಾರ್ಯಕರ್ತ, ಲೋಕೋಪಕಾರಿ ಮತ್ತು ಬುದ್ಧಿಜೀವಿ ಮತ್ತು ಸುಧಾರಕ[] ಮತ್ತು ಸತ್ಯಶೋಧಕ ಸಮಾಜದ ಸ್ಥಾಪಕರಾದ ಜ್ಯೋತಿರಾವ್ ಫುಲೆ ಅವರ ಆಪ್ತ ಸ್ನೇಹಿತರಾಗಿದ್ದಾರೆ. ಬಾಂಬೆ ಪ್ರೆಸಿಡೆನ್ಸಿಯ ಸಾಮಾಜಿಕ ಮತ್ತು ಬೌದ್ಧಿಕ ವಲಯಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಚಿಪ್ಲುಂಕರ್‌ರವರು, ಮುಖ್ಯವಾಗಿ ಪೂನಾದ, ತಮ್ಮ ಭೂಮಿ ಮತ್ತು ನಿಧಿಯನ್ನು ದಾನ ಮಾಡಿದರು.[] ಇದರಿಂದಾಗಿ, ಸಾವಿತ್ರಿ ಮತ್ತು ಜ್ಯೋತಿರಾವ್ ಫುಲೆಯವರು ೧೮೫೧ ರಲ್ಲಿ, ಚಿಪ್ಲುಂಕರ್ ಅವರ ಎಸ್ಟೇಟ್‌ನಲ್ಲಿ ಭಾರತದಲ್ಲಿ ಮೊದಲ ಮಹಿಳಾ ಶಾಲೆಗಳನ್ನು ಪ್ರಾರಂಭಿಸಲು ಸಾಧ್ಯವಾಯಿತು. ೧೮೬೪ ರಲ್ಲಿ, ಕೆಳಜಾತಿಯ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕಾಗಿ ಕಟ್ಟಡವನ್ನು ದಾನ ಮಾಡಿದರು. ಇದು ಪ್ರಸ್ತುತ ಭೋಲಗಿರ್ ಶಾಲೆ, ಪುರಸಭೆಯ ಶಾಲೆ ಸಂಖ್ಯೆ ೪ ಆಗಿ ಕಾರ್ಯನಿರ್ವಹಿಸುತ್ತಿದೆ.

ಮಾರ್ಚ್ ೧೯, ೧೮೮೩ ರಂದು, ಚಿಪ್ಲುಂಕರ್ ಅವರನ್ನು ಪೂನಾ ಮುನ್ಸಿಪಲ್ ಕಾರ್ಪೊರೇಶನ್‌ನ ಸದಸ್ಯರಾಗಿ ನೇಮಿಸಲಾಯಿತು. ಅಲ್ಲಿ, ಅವರು ಪ್ರಸ್ತುತ ಅಭ್ಯಾಸ ಮಾಡುತ್ತಿರುವ ಆಡಳಿತಾತ್ಮಕ ಸುಧಾರಣೆಯನ್ನು ಜಾರಿಗೆ ತಂದರು. ಈ ಗೌರವವನ್ನು ಗೋಪಾಲಕೃಷ್ಣ ಗೋಖಲೆ, ಜ್ಯೋತಿರಾವ್ ಫುಲೆ, ಡಾ.ಆರ್.ಪಿ.ಪರಾಂಜಪೆ (ಕೆಸಿಐಇ), ಹರಿ ನಾರಾಯಣ್ ಆಪ್ಟೆ, ಡಾ.ವಿಶ್ರಾಮ್ ರಾಮ್ಜಿ ಘೋಲೆ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಸೇರಿದಂತೆ ಹನ್ನೆರಡು ಗಣ್ಯ ನಾಗರಿಕರಿಗೆ ನೀಡಲಾಯಿತು.

ಚಿಪ್ಲುಂಕರ್‌ರವರು ಪುಣೆಯ ಡೆಕ್ಕನ್ ಎಜುಕೇಶನ್ ಸೊಸೈಟಿ ಮತ್ತು ಫರ್ಗುಸನ್ ಕಾಲೇಜಿನ ಸ್ಥಾಪಕ ಸದಸ್ಯರಾಗಿದ್ದರು ಮತ್ತು ೧೮೫೮ ರಿಂದ ೧೮೮೩ ರವರೆಗೆ ಸತ್ಯಶೋಧಕ ಸಮಾಜದ ಸಕ್ರಿಯ ಸದಸ್ಯರಾಗಿದ್ದರು.

ವರ್ಚಸ್ವಿ ವ್ಯಕ್ತಿತ್ವ ಮತ್ತು ಸ್ನೇಹಪರ ಸ್ವಭಾವಕ್ಕೆ ಹೆಸರುವಾಸಿಯಾದ ಹರಿ ರಾವ್ಜಿ ಚಿಪ್ಲುಂಕರ್ ಅವರು ಡ್ಯೂಕ್ ಆಫ್ ಕೊನಾಟ್ ಅವರೊಂದಿಗೆ ಸ್ನೇಹ ಬೆಳೆಸಿದರು. ಅವರಿಗಾಗಿ ಅವರು ೧೮೮೮ ರಲ್ಲಿ, ಸ್ವಾಗತ ಮತ್ತು ಔತಣಕೂಟವನ್ನು ಆಯೋಜಿಸಿದ್ದರು. ಚಿಪ್ಲುಂಕರ್‌ರವರು ಇಂದು ಸಾಧು ವಾಸ್ವಾನಿ ಚೌಕ್ ಎಂದು ಕರೆಯಲ್ಪಡುವ ಸ್ಥಳದಲ್ಲಿ ಕೊನಾಟ್ ಹೌಸ್ ಅನ್ನು ನಿರ್ಮಿಸಿದರು. ಅಲ್ಲಿ ಡ್ಯೂಕ್ ಮತ್ತು ಡಚೆಸ್ ಆಫ್ ಕೊನಾಟ್ ಅವರಿಗೆ ಕೆಂಪು ಕಾರ್ಪೆಟ್ ಸ್ವಾಗತವನ್ನು ನೀಡಲಾಯಿತು. ೧೮೮೮ ಮಾರ್ಚ್ ೨ ರಂದು ನಡೆದ ಈ ಔತಣಕೂಟದಲ್ಲಿ ಬಾಂಬೆ ಮತ್ತು ಪೂನಾದ ರಾಜಮನೆತನದ ಅತಿಥಿಗಳು, ಗಣ್ಯರು, ಕೈಗಾರಿಕೋದ್ಯಮಿಗಳು ಮತ್ತು ಪ್ರಮುಖ ಕುಟುಂಬಗಳ ನಡುವೆ ಮಹಾತ್ಮಾ ಫುಲೆಯವರು ಚಿಕ್ಕ ಧೋತಿ, ಹಳೆಯ ಅಂಗಿ ಮತ್ತು ಹಾಳಾದ ಬೂಟುಗಳನ್ನು ಮಾತ್ರ ಧರಿಸಿ ಬಡ ರೈತನಾಗಿ ಕಾಣಿಸಿಕೊಂಡರು.[] ಅವರು ಅಸ್ಪೃಶ್ಯರು ಮತ್ತು ಕೆಳವರ್ಗಗಳ ಬಡತನದ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡಲು ಮುಂದಾದರು. ಭಾರತದ ಹಳ್ಳಿಗಳಿಗೆ ಭೇಟಿ ನೀಡಲು ಮತ್ತು ಕಡು ಬಡತನದಲ್ಲಿ ವಾಸಿಸುವ ಸುಮಾರು ಹತ್ತೊಂಬತ್ತು ಕೋಟಿ ಭಾರತೀಯರು ಹಂಚಿಕೊಂಡ ಪರಿಸ್ಥಿತಿಗಳನ್ನು ವೀಕ್ಷಿಸಲು ಡ್ಯೂಕ್ ಅವರನ್ನು ಪ್ರೋತ್ಸಾಹಿಸಿದರು. ಶಿಕ್ಷಣದ ಮೂಲಕ ಜನಸಾಮಾನ್ಯರನ್ನು ವಿಮೋಚನೆಗೊಳಿಸುವ ಬಗ್ಗೆ ತನ್ನ ಸಂದೇಶವನ್ನು ರಾಣಿ ವಿಕ್ಟೋರಿಯಾಗೆ ತಿಳಿಸುವಂತೆ ಅವರು ಡ್ಯೂಕ್ ಅವರನ್ನು ಕೇಳಿದರು.

ಸಮಾಜ ಸುಧಾರಕಿಯಾಗಿದ್ದ, ಸಾವಿತ್ರಿಬಾಯಿ ಫುಲೆಯವರು ೧೮೯೬ ರಲ್ಲಿ, ಹರಿ ರಾವ್ಜಿ ಚಿಪ್ಲುಂಕರ್ ಅವರ ಅಂತ್ಯಕ್ರಿಯೆಯಲ್ಲಿ ಹಾಜರಿದ್ದರು. ೧೯೯೧ ರಲ್ಲಿ, ಪುಣೆ ನಗರವು ಸೋಮವಾರ್ ಪೇತ್‌ನಲ್ಲಿ ಚಿಪ್ಲುಂಕರ್ ಅವರ ನೆನಪಿಗಾಗಿ ಹರಿ ರಾವ್ಜಿ ಚೌಕ್ ಎಂದು ಹೆಸರಿಸಿತು.[]

ಉಲ್ಲೇಖಗಳು

[ಬದಲಾಯಿಸಿ]
  1. Title conferred on 2 January 1888, Poona, India
  2. O'Hanlon, Rosalind (22 August 2002). Caste, Conflict and Ideology: Mahatma Jotirao Phule and Low Caste Protest in Nineteenth-Century Western India. Cambridge University Press. ISBN 0521523087.
  3. Devare, Aparna (2011). History and the Making of a Modern Hindu Self. India: Routledge. ISBN 9780415597500.
  4. "Life And Work of Mahatma Jotirao Phule". University of Pune. Retrieved 26 May 2018.
  5. Mangudkar, M.P. (19 May 1991). "Dr". Sakal Newspaper.