ಹಲ್ದಿರಾಮ್ಸ್
"Haldiram Foods International Limited" ಮುಂಬಯಿ ನಗರದ ಲೋಕಲ್ ರೈಗಾಡಿಗಳ ಒಳಭಾಗದಲ್ಲಿ ಮತ್ತು ಹೊರಗೆಮುಂಬಯಿಕರ್ ಗಳು ಬೇಡವೆಂದರೂ ದೊಡ್ಡ ಜಾಹಿರಾತುಗಳನ್ನು ನೋಡಲೇ ಬೇಕಾಗುತ್ತದೆ. ಅವುಗಳಲ್ಲಿ 'ಹಳದಿರಾಮ್ ಸ್ವೀಟ್ಸ್' ಹೇಗೋ ರೈಲ್ವೆ ನಿಲ್ದಾಣದಲ್ಲಂತೂ ಕಣ್ಣಿಗೆ ಬಿದ್ದೇ ಬೀಳುತ್ತದೆ.
ಮಿಠಾಯಿ ದೊರೆ
[ಬದಲಾಯಿಸಿ]ಮಿಠಾಯಿ ರಾಜ ನೆಂದೇ ಪ್ರಸಿದ್ಧಿಯಾದ ಸಿಹಿತಿಂಡಿ ತಯಾರಕ 'ಹಲ್ದಿರಾಮ್', ೧೯೩೦ ರಲ್ಲಿ, ಮೊದಲು ಪ್ರಾರಂಭಿಸಿದ್ದು, ಖಾರ ತಿಂಡಿತಿನಸುಗಳ ವ್ಯಾಪಾರಿಯಾಗಿ. ಚಿಕ್ಕ ಅಂಗಡಿಯಲ್ಲಿ ಭಜಿಯ, ಸೇವ್, ಮುಂತಾದ ನಮ್ಕಿನ್ ಗಳನ್ನು ತಯಾರಿಸಿ, ರಾಜಾಸ್ಥಾನದ ಬಿಕನೇರ್ ನಲ್ಲಿ ಮಾರುತ್ತಿದ್ದರು. ಈಗಿನ ೬೭ ವರ್ಷದ ಚೇರ್ಮನ್ ಹಲ್ದಿರಾಮ್ ಇನ್ಟರ್ ನ್ಯಾಷನಲ್ ಲಿಮಿಟೆಡ್ ನ ಶಿವ್ ಕಿಸನ್ ಅಗ್ರವಾಲ್, ೧೯೬೦ ರವರೆಗೆ ಬರಿ ನಮ್ ಕೀನ್ ಗಳನ್ನೇ ಮಾಡಿ ಮಾರುತ್ತಾಬಂದರು. ೧೯೬೮ ರಲ್ಲಿ ಒಂದು ಹೊಸ ಅಲೆ ಪ್ರಾರಂಭವಾಯಿತು. ಆಗ ಯುವಕನಾಗಿದ್ದ ಅಗ್ರವಾಲ್ ರನ್ನು ನಾಗ್ ಪುರ್ ಗೆ ಹೊಸ ಅಂಅಗಡಿಯನ್ನು ಸ್ಥಾಪಿಸಲು ಅವರ ತಂಈಯವರು, ಕಳಿಸಿಕೊಟ್ಟರು. ಅಗ್ರವಾಲ್ ಮೊದಲು ಆರೇಂಜ್ ನಗರಕ್ಕೆ (ನಾಗ್ಪುರ್) ಪಾದಾರ್ಪಣೆಮಾಡಿದಾಗ, ಅದೊಂದು ಚಿಕ್ಕಹಳ್ಳಿಯಂತೆ ಕಂಡಿತು. ತಮ್ಮ ಭಾವನವರ ಜೊತೆಗೂಡಿ ಮಿಕ್ಚರ್ ಮಾಡುವ ಅಂಗಡಿ ತೆರೆದರು. ಅದರೆ ಅದೊಂದು ಸೋಲಿನ ಅನುಭವ. ೬ ತಿಂಗಳಿನ ನಂತರ ತಮ್ಮ ತಿಂಡಿ ತಯಾರಿಕೆಯ ಪಟ್ಟಿಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರು. ಅಕ್ಕಪಕ್ಕದಲ್ಲಿ ಸಿಹಿತಿಂಡಿಗಳ ಶಾಪ್ ಬಹಳ ಕಡಿಮೆಇದ್ದವು. ಇದನ್ನು ಸೂಕ್ಷ್ಮವಾಗಿ ಗಮನಿಸಿ, ಅಗ್ರವಾಲ್ ಸಿಹಿ ತಿಂಡಿಗಳ ಶಾಪ್ ನ್ನು ತೆರೆದರು. ೧೯೬೯ ರಲ್ಲಿ, ಮೊದಲು ಕಾಜು-ಕತ್ಲಿ ತಯಾರುಮಾಡಿದರು. ಈ ಸಿಹಿತಿಂಡಿಗೆ ಅತ್ಯಂತ ಬೇಡಿಕೆಬಂತು. ನಂತರ, ರಸ್ ಮಲಾಯ್ ತಯಾರಿಕೆ ಶುರುಮಾಡಿದರು. ಮತ್ತೆ, ಮೈಸೂರ್ ಪಾಕ್, ಪೇಢೆ, ಜಿಲೇಬಿ. ಇಷ್ಟೆ ೩-೪ ಸಿಹಿಗಳು ಸುಮಾರು ಸಮಯ ಬದಲಾಯಿಸದೆ ಹಾಗೆ ಇದ್ದವು.
ವಾಯುಯಾನದಲ್ಲೂ ಆಹಾರದ ಏರ್ಪಾಡು
[ಬದಲಾಯಿಸಿ]ನಾಗ್ ಪುರ್ ಹಲ್ದಿರಾಮ್ಸ್", ಒಂದು ಹೆಸರುವಾಸಿಯಾದ ಅಂತರರಾಷ್ಟ್ರೀಯ ಸಿಹಿ-ತಿಂಡಿಮಾರಾಟಮಾಡುವ, ಸಂಸ್ಥೆಯ ವಾರ್ಷಿಕ ಟರ್ನೋವರ್, ೪೦೦ ಕೋಟಿ ರೂಪಾಯಿ ಮುಟ್ಟಿದೆ. ೧೯೮೧ ರಲ್ಲಿ ದೆಹಲಿ, ಹೊಸ ಶಾಖೆಗಳು ಹಲ್ದಿರಾಮ್ ಗೆ ನಾಗ್ ಪುರ್ ಹೆಸರನ್ನು, ಕೊಲ್ಕತ್ತಾ ಹಾಗೂ ಬಿಕನೇರ್ ನ ಶಾಖೆಗಳೆಗೆ, ಸೇರಿಸಿದರು. ಈಗ ಸಿಹಿತಿಂಡಿ ತಯಾರಕರಲ್ಲಿ, 'ನಾಗ್ ಪುರ್ ಹಲ್ಡಿರಾಮ್ ,'ಮಂಚೂಣಿಯಲ್ಲಿದ್ದಾರೆ. ಹಲ್ದಿರಾಮ್ ೪೦೦ ಕೋಟಿ ವಹಿವಾಟು ನಡೆಸುವ ಕಂಪೆನಿಯಾಗಿ ಬೆಳೆದಿದೆ.
ನಗರದ ಜನರ ಬೇಡಿಕೆಗಳಿಗೆ ಸ್ಪಂದನ
[ಬದಲಾಯಿಸಿ]ಮುಂಬಯಿಕರ್ ಗಳಿಗೆ, ಒದಗುವ ತಿಂಡಿತೀರ್ಥಗಳು, ಕೇವಲ ನಮ್ಕೀನ್ ಅನ್ನುವ ಅಭಿಪ್ರಾಯ ಬಂದಿದೆ. ಕ್ಯಾನ್ಡ್ ಸ್ವೀಟ್ಸ್ ಹಾಗೂ ಥಂಡೈ-ಶರ್ಬತ್ಸ್, ಹಲ್ದಿರಾಮ್ ಅವರ ಇನ್ನಿತರ ವ್ಯಂಜನಗಳು. ದೆಹಲಿ ಅಥವಾ ನಾಗ್ ಪುರ್ ನಂತಹ ಭಾರಿ ಅಂಗಡಿಗಳಿಲ್ಲದ ಕೊರತೆ. ಮುಂಬಯಿ ನ ಜನರ ಸಮಸ್ಯೆಗಳು ಬೇರೆಬೇರೆ. ಅವರು ಮೈಲುಗಟ್ಟಲೆ ಜನಜಂಗುಳಿಯಜೊತೆ ಲೋಕಲ್ ಟ್ರ್ಏನ್ ಗಳಲ್ಲಿ ಸಂಚರಿಸಬೇಕಾಗುತ್ತದೆ. ಜ್ಯೂಸಿ ಸ್ವೀಟ್ಸ್ ತೆಗೆದುಕೊಂಡು ಹೋಗುವುದು ಕಷ್ಟ. ಆದ್ದರಿಂದ ಹೆಚ್ಚು ಮಂದಿ ಮುಂಬಯಿ ಜನರು ತಿಂದು ಕುಡಿದು ಮಾಡುವುದು ಮನೆಯಹತ್ತಿರದ ಫರ್ಶಾನ್ ಶಾಪ್ ಗಳಲ್ಲಿ ಮಾತ್ರ. ಆದರೆ ಮುಂಬಯಿ ನಲ್ಲಿ ನಡೆಯುವ ಭರ್ಜರಿ ವ್ಯಾಪಾರ ಬೇರೆಯೆಲ್ಲೂ ಸಾಧ್ಯವಿಲ್ಲ. 'ಹಲ್ದಿರಾಮ್ಸ್,' ಇದೇ ವಿತ್ತೀಯ ವರ್ಷದಲ್ಲಿ ೪೦೦ ಕೋಟಿ ರೂಪಾಯಿಗಳ (IPO) Initial Public Offering, ಲಾಂಚ್ ಮಾಡುವ ಸಿದ್ಧತೆ ಮಾಡಿಕೊಂಡಿದೆ. ಇನ್ ಕಂ ಟ್ಯಾಕ್ಸ್ ಅಧಿಕಾರಿಗಳ ಜೊತೆ ಇನ್ನೂ ಕೆಲವಾರು ಪತ್ರವ್ಯವಹಾರಗಳನ್ನು ಮುಗಿಸಿ, ಐ.ಪಿ.ಒ ಶುರುಮಾಡುವ ಯೋಜನೆಯಿದೆ.
ಉಲ್ಲೇಖಗಳು
[ಬದಲಾಯಿಸಿ]
- Haldiram's official site for Nagpur region retrieved 9.10.2010
- Haldiram's official site for Kolkata region Archived 2011-02-04 ವೇಬ್ಯಾಕ್ ಮೆಷಿನ್ ನಲ್ಲಿ. retrieved 9.10.2010
- Haldiram's official site for Delhi & NCR region retrieved 9.10.2010