ಹಳದಿ ಮಲ್ಲಿಗೆ
Jasminum humile | |
---|---|
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಲ್ಯಾಮಿಯೇಲ್ಸ್ |
ಕುಟುಂಬ: | ಓಲಿಯೇಸೀ |
ಕುಲ: | ಜಾಸ್ಮಿನಮ್ |
ಪ್ರಜಾತಿ: | J. humile
|
Binomial name | |
Jasminum humile |
ಹಳದಿ ಮಲ್ಲಿಗೆ (ಯೆಲ್ಲೋ ಜಾಸ್ಮಿನ್, ಇಟಾಲಿಯನ್ ಜಾಸ್ಮಿನ್,[೧] ನೇಪಾಳ ಜಾಸ್ಮಿನ್, ಜಾಸ್ಮಿನಮ್ ಹ್ಯೂಮೈಲ್) ಕಾಶ್ಮೀರದಿಂದ ನೇಪಾಳದವರೆಗೆ 3000 ಮೀ ಎತ್ತರದ ಹಿಮಾಲಯ ಪರ್ವತಶ್ರೇಣೆಯಲ್ಲೆಲ್ಲ ಕಾಣದೊರೆಯುತ್ತದೆ. ರಾಜಸ್ಥಾನದ ಆಬು ಬೆಟ್ಟ ಹಾಗೂ ದಕ್ಷಿಣ ಭಾರತದ ಬೆಟ್ಟಸೀಮೆಗಳಲ್ಲೂ ಉಂಟು. ಈ ಪ್ರಭೇದವನ್ನು ವ್ಯಾಪಕವಾಗಿ ಕೃಷಿಮಾಡಲಾಗುತ್ತದೆ ಮತ್ತು ಗ್ರೀಸ್, ಸಿಸಿಲಿ ಮತ್ತು ಹಿಂದಿನ ಯೂಗೊಸ್ಲಾವಿಯಾದಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ.[೨][೩]
ವಿವರಣೆ
[ಬದಲಾಯಿಸಿ]ಮೇಲ್ಮುಖವಾಗಿ ಹಬ್ಬಿ ಬೆಳೆಯುವ ಪೊದೆ ಜಾತಿ ಇದು. ಹೂಗಳು ಹಳದಿ ಬಣ್ಣದವು; ರೆಂಬೆಗಳು ತುದಿಯಲ್ಲಿ ಸ್ಥಿರವಾಗಿರುವ ಸೀಮಾಕ್ಷಿ ಮಂಜರಿಗಳಲ್ಲಿ ಅರಳುವುವು. ಡಾರ್ಜಿಲಿಂಗ್ ಸುತ್ತಣ ಪ್ರದೇಶಗಳಲ್ಲಿ ಈ ಜಾತಿಯದು ಹೆಚ್ಚು ಹುಲುಸಾಗಿ ಬೆಳೆಯುತ್ತಿದ್ದು ದೀರ್ಘಕಾಲ ಹೂ ಬಿಡುವುದಲ್ಲದೆ ಬೀಜಗಳನ್ನೂ ಉತ್ಪಾದಿಸುತ್ತದೆ.
ಕೃಷಿ
[ಬದಲಾಯಿಸಿ]ಇದನ್ನು ಬೀಜ ಇಲ್ಲವೆ ಕಡ್ಡಿಗಳ ಮೂಲಕ ವೃದ್ಧಿಸಲಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]ಇದರ ಬೇರಿನಿಂದ ಹಳದಿ ರಂಗನ್ನು ತಯಾರಿಸುವುದಿದೆ. ಬೇರು ಗಜಕರ್ಣದ ಚಿಕಿತ್ಸೆಗೆ ಒಳ್ಳೆಯದೆನ್ನಲಾಗಿದೆ. ತೊಗಟೆಯ ರಸ ಮೊಳೆರೋಗದ ನಿವಾರಣೆಗೆ ಬಳಕೆಯಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಟೆಂಪ್ಲೇಟು:BSBI 2007
- ↑ RHS A-Z encyclopedia of garden plants. United Kingdom: Dorling Kindersley. 2008. p. 1136. ISBN 978-1405332965.
- ↑ Kew World Checklist of Selected Plant Families, Jasminum humile