ಹಸಿರು ಮೆಣಸಿನ ಕಾಯಿಯ ಚಟ್ನಿ
ಹಸಿರು ಮೆಣಸಿನ ಕಾಯಿಯ ಚಟ್ನಿ ಹಸಿರು ಮೆಣಸಿನ ಕಾಯಿಯ ಚಟ್ನಿ ಅನ್ನ,ರೊಟ್ಟಿ, ಇಡ್ಲಿ ಮುಂತಾದರೊಂದಿಗೆ ನೆಚ್ಚಿಕೊಳ್ಳುವುದಕ್ಕೆ ಯೊಗ್ಯವಾಗಿದೆ. ಇದನ್ನು ಮುಂಚಿತವಾಗಿಯೇ ತಯಾರಿಸಿ ಒಂದು ವಾರದವರೆಗೆ ಉಪಯೋಗಿಸಬಹುದಾಗಿದೆ.ನಮ್ಮ ರುಚಿಗೆ ತಕ್ಕಂತೆ, ಮೆಣಸಿನಕಾಯಿಯ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಬಹುದು.[೧]
ಹಸಿರು ಮೆಣಸಿನ ಕಾಯಿಯ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
[ಬದಲಾಯಿಸಿ]ಮಸಾಲೆ ಪುಡಿ ಮಾಡಲು: 2 ಚಮಚ ಕಡಲೆ ಬೇಳೆ 2 ಚಮಚ ಉದ್ದಿನ ಬೇಳೆ 1 ಚಮಚ ಜೀರಿಗೆ ¼ ಚಮಚ ಮೆಂತ್ಯ 1 ಚಮಚ ಸಾಸಿವೆ 2 ಚಮಚ ಎಣ್ಣೆ 8 ಬೆಳ್ಳುಳ್ಳಿ (ಜಜ್ಜಿದ) 6 ಬಾಳೆ ಮೆಣಸಿನಕಾಯಿ 4 ಮಸಾಲೆಯುಕ್ತ ಮೆಣಸಿನಕಾಯಿ ½ ಲೋಟ ಕೊತ್ತಂಬರಿ ಸ್ವಲ್ಪಬೇವಿನ ಎಲೆಗಳು ಸ್ವಲ್ಪ ಹುಣಸೆಹಣ್ಣು 1 ಚಮಚ ಉಪ್ಪು ಒಗ್ಗರಣೆಗೆ 2 ಚಮಚ ಎಣ್ಣೆ 1 ಚಮಚ ಸಾಸಿವೆ 1 ಚಮಚ ಉದ್ದಿನ ಬೇಳೆ 2 ಒಣಗಿದ ಕೆಂಪು ಮೆಣಸಿನಕಾಯಿ ಸ್ಚಲ್ಪ ಕರಿಬೇವಿನ ಎಲೆಗಳು ಚಿಟಿಕೆ ಹಿಂಗ್ 5 ಬೆಳ್ಳುಳ್ಳಿ (ಜಜ್ಜಿದ) [೨]
ಹಸಿರು ಮೆಣಸಿನ ಕಾಯಿಯ ಚಟ್ನಿ ಮಾಡುವ ಕ್ರಮ
[ಬದಲಾಯಿಸಿ]ಹಸಿರು ಮೆಣಸಿನ ಕಾಯಿಯನ್ನು ಹುರಿಯುದು
[ಬದಲಾಯಿಸಿ]ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ 8 ಬೆಳ್ಳುಳ್ಳಿ, 6 ಬಾಳೆ ಮೆಣಸಿನಕಾಯಿ ಮತ್ತು 4 ಮಸಾಲೆಯುಕ್ತ ಮೆಣಸಿನಕಾಯಿಯನ್ನು ಸೇರಿಸಿ, ಮಧ್ಯಮ ಉರಿಯಲ್ಲಿ ಉರಿಸಬೇಕು. ಬಾಣಲೆಯನ್ನು ಮುಚ್ಚಿ 10 ನಿಮಿಷ ಬೇಯಿಸಬೇಕು, ನಡು ನಡುವೆ ಬೆರೆಸುತ್ತಾ ಇರಬೇಕು. ಮೆಣಸಿನಕಾಯಿಯ ಮೇಲೆ ಕಂದು ಕಲೆಗಳು ಕಾಣಿಸಿಕೊಳ್ಳುವವರೆಗೆ ಹುರಿಯಬೇಕು. ಅದಕ್ಕೆ ½ ಲೋಟ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವಿನ ಎಲೆಗಳನ್ನು ಸೇರಿಸಿ ಮತ್ತು ಎಲೆಗಳು ಸ್ವಲ್ಪ ಕಪ್ಪು ಆಗುವವರೆಗೆ ಹುರಿಯಿರಿ.[೨]
ಮಸಾಲೆ ಪುಡಿ ತಯಾರಿಕೆ
[ಬದಲಾಯಿಸಿ]ಒಂದು ಬಾಣಲೆಯಲ್ಲಿ 2 ಚಮಚ ಕಡಲೆ ಬೇಳೆ, 2 ಚಮಚ ಉದ್ದಿನ ಬೇಳೆ, 1 ಚಮಚ ಜೀರಿಗೆ, ¼ ಚಮಚ ಮೆಂತ್ಯ ಮತ್ತು 1 ಚಮಚ ಸಾಸಿವೆ ತೆಗೆದುಕೊಳ್ಳಿ. ಮಸಾಲೆಗಳು ಸುವಾಸನೆಯುಕ್ತ ಮತ್ತು ಬಂಗಾರದ ಕಂದು ಬಣ್ಣಕ್ಕೆ ತಿರುಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.ಸಂಪೂರ್ಣವಾಗಿ ತಣ್ಣಗಾಗಿಸಿ, ಮತ್ತು ನುಣ್ಣನೆಯ ಪುಡಿಗೆ ರುಬ್ಬಿಕೊಳ್ಳಿ.
ಹುರಿದ ಹಸಿರು ಮೆಣಸಿನ ಕಾಯಿ ಹಾಗೂ ಮಸಾಲೆ ಪುಡಿಯೊಂದಿಗೆ ಮಿಶ್ರಣ
[ಬದಲಾಯಿಸಿ]ಹುರಿದ ಮೆಣಸಿನಕಾಯಿಗೆ ರುಬ್ಬಿದ ಮಸಾಲೆ ಪುಡಿಯನ್ನು ಸೇರಿಸಿ.ಅಲ್ಲದೆ, ಸ್ವಲ್ಪ ಹುಣಸೆಹಣ್ಣು ಮತ್ತು 1 ಚಮಚ ಉಪ್ಪು ಸೇರಿಸಿ.ಎಲ್ಲವನ್ನೂ ಚೆನ್ನಾಗಿ ಬೆರೆಸಿದೆ ಎಂದು ಖಚಿತಪಡಿಸಿಕೊಳ್ಳಲು ಚೆನ್ನಾಗಿ ಮಿಶ್ರಣ ಮಾಡಿ. ಸಂಪೂರ್ಣವಾಗಿ ತಣ್ಣಗಾಗಿಸಿ ಮತ್ತು ಚೆನ್ನಾಗಿ ರುಬ್ಬಿಕೊಳ್ಳಿ.
ಒಗ್ಗರಣೆಗೆ
[ಬದಲಾಯಿಸಿ]ಒಗ್ಗರಣೆ ತಯಾರಿಸಲು, 2 ಚಮಚ ಎಣ್ಣೆಯನ್ನು ಬಿಸಿ ಮಾಡಿ. 1 ಚಮಚ ಸಾಸಿವೆ, 1 ಚಮಚ ಉದ್ದಿನ ಬೇಳೆ, 2 ಒಣಗಿದ ಕೆಂಪು ಮೆಣಸಿನಕಾಯಿ, ಸ್ವಲ್ಪ ಕರಿಬೇವಿನ ಎಲೆಗಳು, ಚಿಟಿಕೆ ಹಿಂಗ್ ಮತ್ತು 5 ಬೆಳ್ಳುಳ್ಳಿಯನ್ನು ಸೇರಿಸಿ. ಒಗ್ಗರಣೆಯನ್ನು ಸಿಡಿಯಲು ಬಿಡಿ. ತಯಾರಾದ ಮೆಣಸಿನಕಾಯಿಗೆ ಬೆಳ್ಳುಳ್ಳಿ ಜಜ್ಜಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಎಣ್ಣೆ ಬೇರ್ಪಡುವವರೆಗೆ ಬೇಯಿಸಿ.ಹಸಿ ಮೆಣಸಿನಕಾಯಿ ಚಟ್ನಿ ಸವಿಯಲು ಸಿಧ್ಧ. ಇದನ್ನು ಅನ್ನದ ಜೊತೆ ಊಟ ಮಾಡಲು ಅಥವಾ ಇಡ್ಲಿ, ದೋಸೆ ಯೊಂದಿಗೆ ತಿನ್ನಲು ಉಪಯೋಗಿಸಬಹುದು. [೨]
ಬೇಕಾದಲ್ಲಿ ಮಾತ್ರ
[ಬದಲಾಯಿಸಿ]ಮಸಾಲೆ ಮಟ್ಟವನ್ನು ಅವಲಂಬಿಸಿ ಮೆಣಸಿನಕಾಯಿಯ ಮಸಾಲೆಯನ್ನು ಸರಿಹೊಂದಿಸಬೇಕು. ಹುಣಸೆಹಣ್ಣಿನ ಬದಲಿಗೆ ನಿಂಬೆ ರಸವನ್ನು ಬಳಸಬಹುದು. ಕೊತ್ತಂಬರಿ ಸೊಪ್ಪನ್ನು ಸೇರಿಸುವುದರಿಂದ ಚಟ್ನಿಗೆ ಉತ್ತಮವಾದ ಪರಿಮಳವನ್ನು ನೀಡುತ್ತದೆ. ಹಸಿ ಮೆಣಸಿನಕಾಯಿ ಚಟ್ನಿಯನ್ನು ರೆಫ್ರಿಜರೇಟ್ ಒಂದು ತಿಂಗಳವರೆಗೆ ಕೆಡದೆ ಇಡಬಹುದು. [೨]
ಔಷಧೀಯ ಗುಣಗಳು
[ಬದಲಾಯಿಸಿ]ವಿಟಮಿನ್ ಸಿ ಹಸಿ ಮೆಣಸಿನಕಾಯಿ ಸಮೃದ್ಧವಾಗಿ ವಿಟಮಿನ್ ಸಿ ಅನ್ನು ಒಳಗೊಂಡಿದೆ. ಇದು ಆರೋಗ್ಯಕರ ದೃಷ್ಟಿ, ಚರ್ಮದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಶಾಖ ಮತ್ತು ಬೆಳಕಿನಲ್ಲಿಡಿದರೆ, ಮೆಣಸಿನಕಾಯಿ ವಿಟಮಿನ್ ಸಿ ಅನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ, ತಂಪಾದ ಸ್ಥಳದಲ್ಲಿ ಇಡಬೇಕು.
ಎಂಡಾರ್ಫಿನ್ ಬಿಡುಗಡೆ ಹಸಿ ಮೆಣಸಿನಕಾಯಿ ಸೇವನೆಯಿಂದ ಎಂಡಾರ್ಫಿನ್‍ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದು ಮನಃಸ್ಥಿತಿಯನ್ನು ಉತ್ತಮಗೊಳಿಸುವ ಜೊತೆಗೆ ಕೆಲವೊಂದು ನೋವನ್ನು ಕಡಿಮೆ ಮಾಡುತ್ತದೆ.
ಕಬ್ಬಿಣಾಂಶ ಹಸಿ ಮೆಣಸಿನಕಾಯಿ ಕಬ್ಬಿಣಾಂಶವನ್ನು ಸಮೃದ್ಧವಾಗಿ ಹೊಂದಿದೆ. ಕಬ್ಬಿಣಾಂಶದ ಕೊರತೆ ಹಾಗೂ ರಕ್ತದ ಕೊರತೆಯಿಂದ ಬಳಲುವವರು ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು, ಇದರಿಂದ ಸಮಸ್ಯೆ ಬೇಗ ನಿವಾರಣೆ ಪಡೆಯಬಹುದು.
ಜೀವವಿರೋಧಿ ಗುಣ ಹಸಿ ಮೆಣಸಿನಕಾಯಿ ಜೀವವಿರೋಧಿ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದು ಚರ್ಮದ ಸೋಂಕುಗಳನ್ನು ನಿವಾರಿಸುವುದರ ಜೊತೆಗೆ, ಹೊಸ ಸೋಂಕುಗಳನ್ನು ತಡೆಹಿಡಿಯಲು ಸಹಾಯ ಮಾಡುತ್ತದೆ.
ವಿಟಮಿನ್ ಕೆ ಹಸಿ ಮೆಣಸಿನಕಾಯಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಇದು ಆಸ್ಟಿಯೋಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕತ್ತರಿಸಿದ ಗಾಯ ಅಥವಾ ಬಿದ್ದು ಗಾಯಗೊಂಡಾಗ ಉಂಟಾಗುವ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ "Green chili chutney (Hasi menasinakayi chutney) - Aayi's Recipes". 9 December 2007.
- ↑ ೨.೦ ೨.೧ ೨.೨ ೨.೩ Kitchen, Hebbars (3 August 2022). "ಹಸಿ ಮೆಣಸಿನಕಾಯಿ ಚಟ್ನಿ ರೆಸಿಪಿ | Green Chilli Chutney in kannada". Hebbar's Kitchen.
- ↑ "ಹಸಿ ಮೆಣಸಿನಕಾಯಿ ನಿಮ್ಮ ಆರೋಗ್ಯದ ಮೇಲೆ ಹೇಗೆ ಉತ್ತಮ ಪರಿಣಾಮ ಬೀರುವುದು ಗೊತ್ತೇ?".