ವಿಷಯಕ್ಕೆ ಹೋಗು

ಹಾರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೂಪಾದ ಮತ್ತು ಮೊಂಡಾದ ತುದಿಗಳಿರುವ ಹಾರೆ

ಹಾರೆಯು ಒಂದು ಉದ್ದನೆಯ, ನೇರವಾದ ಲೋಹದ ತುಂಡಾಗಿದ್ದು, ಕಂಬ ನೆಡಲು ರಂಧ್ರ ತೋಡುವುದು, ಮಣ್ಣು, ಕಲ್ಲು, ಕಾಂಕ್ರೀಟ್ ಹಾಗೂ ಮಂಜುಗಡ್ಡೆಯಂತಹ ಗಟ್ಟಿ ಅಥವಾ ಅಡಕವಾಗಿರುವ ವಸ್ತುಗಳನ್ನು ಮುರಿಯಲು ಅಥವಾ ಸಡಿಲಗೊಳಿಸುವುದು, ಅಥವಾ ವಸ್ತುಗಳನ್ನು ಚಲಿಸಲು ಮೀಟುಗೋಲಾಗಿ ಸೇರಿದಂತೆ, ವಿವಿಧ ಉದ್ದೇಶಗಳಿಗೆ ಬಳಸಲ್ಪಡುತ್ತದೆ.

ಬಂಡೆಗಳನ್ನು ಸರಿಸಲು ಹಾರೆಗಳನ್ನು ಬಳಸುತ್ತಿರುವುದು

ಹಾರೆಗಳ ಇತರ ಉಪಯೋಗಗಳೆಂದರೆ ಮರದ ಬೇರುಗಳು ಹಾಗೂ ಅಡೆತಡೆಗಳನ್ನು ಚಲಿಸುವುದು ಅಥವಾ ಮುರಿಯುವುದು ಮತ್ತು ಬೇಲಿ ಕಂಬಗಳಿಗೆ ನೆಲದಲ್ಲಿ ರಂಧ್ರಗಳನ್ನು ತೋಡುವುದು. ಅನೇಕವೇಳೆ ಸ್ಥಳದ ಅಭಾವದಿಂದ ಪಿಕಾಸಿಯ ಬಳಕೆಗೆ ಅವಕಾಶವಾಗದ ಕಡೆ ಇವನ್ನು ಬಳಸಲಾಗುತ್ತದೆ.

ಹಾರೆಯ ತುದಿಗಳನ್ನು ವಿವಿಧ ಉದ್ದೇಶಗಳಿಗಾಗಿ ರೂಪುಕೊಡಲಾಗಿರುತ್ತದೆ.[] ಸಾಮಾನ್ಯವಾಗಿ, ಒಂದೇ ಉಪಕರಣದಲ್ಲಿ ಎರಡು ವಿಭಿನ್ನ ಉಪಕರಣ ಕಾರ್ಯಗಳನ್ನು ಒದಗಿಸಲು ಪ್ರತಿ ತುದಿಯು ಭಿನ್ನವಾದ ಆಕಾರವನ್ನು ಹೊಂದಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Griffith, Nathan. Husbandry: the surest, cheapest way to leisure, plenty prosperity, and contentment, plainly illustrated. Trout Valley, W. Va.: Cobblemead Publications, 1998. 30. Print.


"https://kn.wikipedia.org/w/index.php?title=ಹಾರೆ&oldid=987651" ಇಂದ ಪಡೆಯಲ್ಪಟ್ಟಿದೆ