ವಿಷಯಕ್ಕೆ ಹೋಗು

ಹೀನಾ ಸಿಧು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೀನಾ ಸಿಧು
ವೈಯುಕ್ತಿಕ ಮಾಹಿತಿ
ರಾಷ್ರೀಯತೆ ಭಾರತ
ಜನಾಂಗಿಯತೆಪಂಜಾಬಿ: ಸಂಸ್ಕೃತಿ
ನಾಗರಿಕತ್ವಭಾರತ
ಜನನ (1989-08-29) ೨೯ ಆಗಸ್ಟ್ ೧೯೮೯ (ವಯಸ್ಸು ೩೫)
ಲುಧಿಯಾನ,ಪಂಜಾಬ್;ಭಾರತ
ನಿವಾಸಮುಂಬಯಿ, India[]
ಶಿಕ್ಷಣಬ್ಯಾಚಲರ್` ಆಪ್ ಡೆಂಟಲ್ ಸರ್ಜರಿ: (BDS)
ಆಲ್ಮ ಮಾಟರ್ಯಾದವೇಂದ್ರ ಪಬ್ಲಿಕ್ ಸ್ಕೂಲ್ ಪಾಟಿಯಾಲ.
Gian Sagar Medical Institute.
ಉದ್ಯೋಗಕ್ರೀಡಾಪಟು (ಗುರಿಕಾರರು)
ಎತ್ತರ163
ತೂಕ50.5kg(111.lb) -April 2013
ಪತ್ನಿ(ಯರು)

ರೋನಕ್ ಪಂಡಿತ್(2013ರಲ್ಲಿ )

ಜಾಲತಾಣwww.facebook.com/HeenaShootingOfficial
Sport
ಸದ್ಯದ ವಿಶ್ವ ಶ್ರೇಯಾಂಕNo.1 (7 ಏಪ್ರಿಲ 2014)

ಶ್ರೀಮತಿ ಹೀನಾ ಸಿಧು ಪಟಿಯಾಲದಲ್ಲಿ ಬೆಳೆದರು ಮತ್ತು ಲುಧಿಯಾನದಲ್ಲಿ, 29 ಆಗಸ್ಟ್ 1989 ರಂದು ಜನಿಸಿದರು. ಅವರು ಒಬ್ಬ ಸಮರ್ಥ ಭಾರತೀಯ ಗುರಿಕಾರರು ಮತ್ತು ಮೊದಲ ಭಾರತೀಯ ಪಿಸ್ತೋಲ್ ಶೂಟರ್[2].ಅವರು ಐಎಸ್ಎಸ್ಎಫ್ ಮೂಲಕ ವರ್ಲ್ಡ್ ನಂ.1 ಸ್ಥಾನವನ್ನು ಗಳಿಸಿದವರು. (7 ಏಪ್ರಿಲ್ 2014 ರಲ್ಲಿ), 2013 ರಲ್ಲಿ ಐಎಸ್ಎಸ್ಎಫ್ ವಿಶ್ವಕಪ್ ಪಿಸ್ತೂಲ್ ಫೈನಲ್ಸ್ ನಲ್ಲಿ 10 ಮೀಟರ್ ಏರ್ ಪಿಸ್ತೋಲ್`ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಗುರಿಕಾರಳು. . ಹೀಗೆ ಅವಳು, ಒಂದು ಬಂದೂಕು / ಪಿಸ್ತೋಲ್ ವಿಶ್ವಕಪ್ ಫೈನಲ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಅಂಜಲಿ ಭಾಗವತ್ (2003) ಮತ್ತು ಗಗನ್ ನಾರಂಗ್ (2008) ನಂತರ ಮೂರನೇ ಭಾರತೀಯ ಶೂಟರ್ ಆದರು. ಅವರು ಅನ್ನುರಾಜ್` ಸಿಂಗ್ ಜೊತೆಗೆ ಮಹಿಳಾ ಜೋಡಿ, 2010 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 10 ಮೀಟರ್ ವ್ಯಾಪ್ತಿಯ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ (384) ಮತ್ತು ಅನ್ನು (375) ಶೂಟಿಂಗ್ ಚಿನ್ನದ ಪದಕ ಜಯಿಸಿದ್ದಾರೆ. [3] ಅದು ಭಾರತಕ್ಕೆ ಸಿಕ್ಕಿದ 14 ನೇ ಚಿನ್ನದ ಪದಕ. ಅವರು ಸಿಂಗಲ್ಸ್ ವಿಭಾಗದಲ್ಲಿಯೂ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು 17 ಎಪ್ರಿಲ್ 1951 ಆರಂಭವಾದ ಭಾರತದ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ನಿಯತಕಾಲಿಕದ ಮುಖಪುಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಭಾರತೀಯ ಗುರಿಕಾರರಾದ ಸಿಧು, 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ಸ್ ವಿಶ್ವ ದಾಖಲೆಯಾದ 203,8 ಅಂತಿಮ ಅಂಕ ಪಡೆದಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಹೀನಾ ಸಿಧು, ವರ್ಷ 2013 ರಲ್ಲಿ ತಮ್ಮ .ಬಿ.ಡಿ.ಎಸ್.ಪದವಿ (ಬ್ಯಾಚುಲರ್ ಡೆಂಟಲ್ ಸರ್ಜರಿ) ಪೂರ್ಣಗಳಿಸಿದರು. ಚಿತ್ರಕಲೆ ಮತ್ತು ನಕ್ಷೆಯನ್ನು ಬಿಡಿಸುವುದರಲ್ಲಿಯೂ ಆಸಕ್ತಿ ಹೊಂದಿದ್ದರು.. ಅವರ ಚಿಕ್ಕಪ್ಪ ಇಂದ್ರೆಜಿತ್ ಸಿಧು ವೃತ್ತಿಪರ ಗನ್-ಸ್ಮಿತ್ ಮತ್ತು ಗನ್ಸ್ ಕಸ್ಟೊಮೈಜರ್. ಇದರಿಂದ ವೃತ್ತಿಪರ ಶೂಟಿಂಗ್ ಕ್ರೀಡೆಯಲ್ಲಿ ತೊಡಗಲು ಕಾರಣವಾಯಿತು.. ಅವರ ತಂದೆ ರಾಜಬೀರ್`ಸಿಂಗ್` ಸ್ವತಃ ರಾಷ್ಟ್ರೀಯ ಶೂಟರ್. ಅವರು ಸಿಧುಗೆ ಯಾವಾಗಲೂ, ಬಹಳವಾಗಿ ಶೂಟಿಂಗ್ ಕ್ರೀಡೆಗೆ ಪ್ರೋತ್ಸಾಹಿಸುತ್ತಿದ್ದರು. ಅವರು ತನ್ನ ದೇಶದ ಹೆಮ್ಮೆ ಪಡುವ ಶೂಟಿಂಗ್ ಪಟುವಾಗಿ / ವೃತ್ತಿಯಾಗಿ ಕೈಗೊಳ್ಳುವ ಸಿಧು ಅವರ ಬಯಕೆಯನ್ನು ಮುಂದುವರಿಸಲು. ತನ್ನ ಬೆಂಬಲ ಕೊಟ್ಟರು. ಜೊತೆಗೆ, ಅವರ ಕಿರಿಯ ಸಹೋದರ ರಾಜ್ಬೀರ್ ಸಿಧು ಸಹ ಇದೇ ಸಂದರ್ಭದಲ್ಲಿ ಶೂಟಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಹೀನಾ ಸಿಧು ಮುಂಬೈನ ಗೋರೆಗಾಂವ್`ನಲ್ಲಿ ವಾಸಿಸುವ ಪ್ರಸಿದ್ಧ ಪಿಸ್ತೂಲ್ ಗುರಿಕಾರನಾದ ರೋನಕ್ ಪಂಡಿತ್`ಅವರನ್ನು ದಿ. 7 ಫೆಬ್ರವರಿ 2013 ರಂದು ವಿವಾಹವಾದರು.

ಕ್ರೀಡಾ ಸಾಧನೆ ವಿವರ

[ಬದಲಾಯಿಸಿ]
  • ಸಿಧು ಅವರು 2006 ರಿಂದ 12 ನೇ ತರಗತಿಲ್ಲಿ ಇದ್ದಾಗಿನಿಂದಲೇ ಶೂಟರ್ ಅಭ್ಯಾಸಮಾಡುತ್ತಿದ್ದರು . ವರ್ಷಾಂತ್ಯದಲ್ಲಿ ಅವರು ರಾಷ್ಟ್ರೀಯ ಜೂನಿಯರ್ ತಂಡ ಸೇರ್ಪಡೆಯಾದರು. ಕೆಲವೇ ತಿಂಗಳಲ್ಲಿ ಹಿರಿಯ ತಂಡ ಕ್ಕೆ ಸೇರಿದರು., ಸಿಧು ಸ್ವಲ್ಪ ತಡವಾಗಿ ಶೂಟಿಂಗ್ ಅಭ್ಯಾಸವನ್ನು ಆರಂಭಿಸಿದರು. ಆದರೆ 2007 ರಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಅವರು ಪಟಿಯಾಲ ಕ್ಲಬ್`ಗಾಗಿ ಆಡಿದರು. ಬಲ ತನ್ನ ಕಣ್ಣಿನ ವಿಶೇಷ ದೃಷ್ಟಿ ಬಲದ ಜೊತೆಗೆ ಬಲಗೈ ಶೂಟರ್. ಹೀನಾ, ಅನ್ನುರಾಜ್ ಸಿಂಗ್ ಮತ್ತು ಸೋನಿಯಾ ರೈ ರೊಂದಿಗೆ, ಚೀನಾದ ಗುವಾಂಗ್ಝೌ,ನಲ್ಲಿ ನಡೆದ 2010 ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮಿ ಏರ್ ಪಿಸ್ತೋಲ್ ತಂಡದಲ್ಲಿದ್ದು ಪಂದ್ಯದಲ್ಲಿ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.
  • ಅವರ ಇತರ ಸಾಧನೆಗಳಲ್ಲಿ ರಾಷ್ಟ್ರೀಯ ಚಾಂಪಿಯನ್ಷಿಪ್ 2009 ರಲ್ಲಿ ಬೀಜಿಂಗ್ [5]ನ ಮಹಿಳೆಯರ 10 ಮಿ ಏರ್ ಪಿಸ್ತೂಲ್ 1 ನೇ ಸ್ಥಾನದಲ್ಲಿದ್ದರು. ಕೇರಳ ಮತ್ತು ಐಎಸ್ಎಸ್ಎಫ್ ವಿಶ್ವಕಪ್ 2009ರಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ
  • ಸಿದ್ದು ಲಂಡನ್ನಲ್ಲಿ 2012 ನಡೆದ ಬೇಸಿಗೆ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ್ದರು; ಭಾರತ ತಂಡಕ್ಕೆ. [6] ಅವರು ಅರ್ಹತಾ ಸುತ್ತಿನಲ್ಲಿ 12 ನೇ ಸ್ಥಾನ ಪಡೆದರು. 2012 ರ ಲಂಡನ್ ಒಲಿಂಪಿಕ್ ಸಿಧು ಅವರಿಗೆ ಮೊದಲ ಒಲಿಂಪಿಕ್ ಆಗಿತ್ತು.
  • ಸಿಧು ಲಂಡನ್ ಗೇಮ್ಸ್`ನಲ್ಲಿ ಅಧಿಕೃತ ಸಹ ಭಾಗವಾಗಿದ್ದರು [7][8]"ಲಂಡನ್ 2012 ಒಲಿಂಪಿಕ್ ಮೊದಲ ಬೇಟಿಯ ಸ್ಟೋರಿ" ಒಲಿಂಪಿಕ್ ಕ್ರೀಡಾಪಟುಗಳು ಒಂದು ಡಜನ್ ಕ್ರೀಡಾ ಪಟುಯಗಳ ಮೊದಲ ಬಾರಿ ಭಾಗವಹಿಸಿದ ಕಥೆಯನ್ನು ಕ್ಯಾರೋಲಿನ್ ರೊಲ್ಯಾಂಡ್ ಅವರ ನಿರ್ಮಾಣದ, ನಿರ್ದೇಶನದ ಮತ್ತು ಬರೆದ, ತಮ್ಮ ವಿಶ್ವದ ವಿವಿಧ ಮೂಲೆಗಳಿಂದ, ತಮ್ಮ ಮನೆಗಳಿಂದ ಪ್ರಯಾಣ ಮಾಡಿ ಲಂಡನ್ [ಒಲಿಂಪಿಕ್]ಗೆ ತಮ್ಮ ಅದೃಷ್ಟ ಭೇಟಿಯ ಕಥೆಯ ಚಿತ್ರದಲ್ಲಿ ಸಿಧು ಸೇರಿದ್ದಾರೆ.
  • 2013 ರಲ್ಲಿ ಅವರು ಐಎಸ್ಎಸ್ಎಫ್ ವಿಶ್ವಕಪ್ ಫೈನಲ್ಸ್ ನಲ್ಲಿ ಚಿನ್ನದ ಗೆಲ್ಲುವ ಮೂಲಕ,ಶೂಟರ್ ಕನಸು ನನಸಾಗಿ ಅತ್ಯುತ್ತಮ ಪದಕ ಗೆದ್ದಿದ್ದಾರೆ -. ಜರ್ಮನಿಯ ಮ್ಯೂನಿಚ್ನ ರೈಫಲ್ / ಪಿಸ್ತೋಲ್ [9] ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಅವರು ಸರ್ಬಿಯಾದ ಹಾಲಿ ವಿಶ್ವ ಚಾಂಪಿಯನ್ ಜೋರೊನಾ ಅರನೋವಿಕ್` ಮತ್ತು ಉಕ್ರೇನ್ ಹಿಂದಿನ ಆವೃತ್ತಿ ಚಾಂಪಿಯನ್ ಓಲೇನಾ ಕೋಸ್ಟೆವಿಚ್` ಅವರನ್ನು ಸೋಲಿಸಿದರು ಮತ್ತು ಕೊನೆಯಲ್ಲಿ ಹೆಚ್ಚು 5 ಅಂಕಗಳ ಬೃಹತ್ ಮುನ್ನಡೆ ಅಂತರದಿಂದ 203,8 ಅಂಕಗಳನ್ನು ಗಳಿಸಿದರು. ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಫೆಡರೆಶನ್ ಶೂಟಿಂಗ್ ತನ್ನ ಅದ್ಭುತ ಗೆಲುವಿಗೆ, ಐಎಸ್ಎಸ್ಎಫ್ ಪತ್ರಿಕೆಯ ಮುಖಪುಟದಲ್ಲಿ ಚಿತ್ರ ಹಾಕುವ . ಮೂಲಕ ಮೆಚ್ಚಗೆ ತೋರಿದೆ[10]. 2014 ರಾಷ್ಟ್ರೀಯ ಶೂಟಿಂಗ್ ಪ್ರಯೋಗಗಳಲ್ಲಿ, ರಾಹಿ ಸಾರನೋಬಾತ ಭಾರತೀಯ ಶೂಟರ್`ನ್ನು 0.1 ಪಾಯಿಂಟ್ ಅಂತರದಲ್ಲಿ ಸಿಧು ಹಿಂದಿಕ್ಕಿ ಇನ್ನೊಂದು ವಿಶ್ವಕಪ್ ಚಿನ್ನದ ಪದಕ ವಿಜೇತರಾದರು[11].
ಸಾಧನೆಗಳು ಮತ್ತು ಪುರಸ್ಕಾರಗಳು
  • ತನ್ನ ಅಂತಾರಾಷ್ಟ್ರೀಯ ಸಾಧನೆಗಳು ಗೌರವಾರ್ಥವಾಗಿ, ಹೀನಾ ಸಿಧು ಅವರಿಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಯವರಿಂದ ಆಗಸ್ಟ್ 2014 28 ರಂದು ರಾಷ್ಟ್ರಪತಿ ಭವನದಲ್ಲಿ 13 ಇತರ ಕ್ರೀಡಾಪಟುಗಳ ಜೊತೆಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. :
  • (ಇಂಗ್ಲಿಷ್ ವಿಕಿ-ಲೇಖನದ ಅನುವಾದ-[[೧]])

ಮುಂದಿನ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ

[ಬದಲಾಯಿಸಿ]
ಸಿಧು ಘೋಷಣೆ
  • ಒಲಿಂಪಿಕ್ ಕೋಟಾ ಮತ್ತು ಪದಕಗಳು ಸುಲಭವಾಗಿ ದಕ್ಕುವುದಿಲ್ಲ. ‘ಭಾರತ ರೈಫಲ್ ಸಂಸ್ಥೆ ಮತ್ತು ನನ್ನ ಕುಟುಂಬದ ಬೆಂಬಲ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಉತ್ತಮವಾಗಿ ಪ್ರದರ್ಶನ ನೀಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದು ಹೀನಾ ಹೇಳಿದರು"

( [೨])

  • ನವದೆಹಲಿಯ ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ 27-1-2016 ಬುಧವಾರ ನಡೆದ ಏಷ್ಯಾ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ಮಹಿಳೆಯರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ 199.4 ಸ್ಕೋರ್‌ ಕಲೆಹಾಕಿ ಮೊದಲ ಸ್ಥಾನ (ಚಿನ್ನ)ಗಳಿಸಿದರು. ಪ್ರಸ್ತುತ ಈ ವಿಭಾಗದಲ್ಲಿ ವಿಶ್ವ ದಾಖಲೆ ಹೊಂದಿರುವ ಸಿಧು ಮುಂಬರುವ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಹೀನಾ ತಮ್ಮ ಸಮೀಪದ ಪ್ರಬಲ ಪ್ರತಿಸ್ಪರ್ಧಿ ಚೀನಾ ತೈಪೆಯ ತಿಯೆನ್‌ ಚಿಯಾ ಚೆನ್‌ ಅವರನ್ನು 1.5 ಪಾಯಿಂಟ್ಸ್‌ನಿಂದ ಹಿಂದಿಕ್ಕಿದರು. ಒಟ್ಟು 198.1 ಪಾಯಿಂಟ್ಸ್‌ ಕಲೆಹಾಕಲು ಶಕ್ತರಾದ ಚಿಯಾ ಚೆನ್‌ ಬೆಳ್ಳಿಯ ಪದಕ ಪಡೆದರು. ದಕ್ಷಿಣ ಕೊರಿಯಾದ ಜಿಮ್‌ ಯುನ್‌ ಮಿ (177.9 ಪಾಯಿಂಟ್ಸ್‌) ಕಂಚಿನ ಪದಕ ಗಳಿಸಿದರು.೧೨

ಪ್ರಮುಖ ಪದಕ ಗಳಿಕೆ ಪಟ್ಟಿ

[ಬದಲಾಯಿಸಿ]

[*ಉ.೧೩]

ಕ್ರ.ಸಂ. ಕ್ರೀಡಾಕೂಟ ವರ್ಷ ಪದಕ ವಿಭಾಗ
1 ಐಎಸ್ಎಸ್ಎಫ್ ವಿಶ್ವಕಪ್ ಪಿಸ್ತೂಲ್ ಫೈನಲ್ಸ್ 2013 ಚಿನ್ನ ವೈಯುಕ್ತಿಕ
2 ಕಾಮನ್ವೆಲ್ತ್ 2010 ಚಿನ್ನ ಮತ್ತು ತಂಡ
3 ಕಾಮನ್ವೆಲ್ತ್ 2010 ಬೆಳ್ಳಿ ವೈಯುಕ್ತಿಕ
4 ಏಷ್ಯನ್ 2010 ಬೆಳ್ಳಿ ವೈಯುಕ್ತಿಕ
5 ಏಷ್ಯನ್ 2014 ಕಂಚು 25 ಮೀ. ತಂಡ
6 ಏಷ್ಯನ್ ಶೂಟಿಂಗ್ ಛಾಂಪಿಯನ್ ಶಿಪ್` 2007 ಕಂಚು ವೈಯುಕ್ತಿಕ
7 ಏಷ್ಯನ್ ಶೂಟಿಂಗ್ 2015 ಚಿನ್ನ ವೈಯುಕ್ತಿಕ
8 ಏಷ್ಯನ್ ಏರ್`ಗನ್ 2009 ಕಂಚು ವೈಯುಕ್ತಿಕ
9 ದಕ್ಷಿಣ ಏಷ್ಯನ್` 2009 ಬೆಳ್ಳಿ ವೈಯುಕ್ತಿಕ ಮತ್ತು ತಂಡ
10 ಐಎಸ್`ಎಸ್`ಎಪ್` ವಿಶ್ವಕಪ್ 2009 ಬೆಳ್ಳಿ ವೈಯುಕ್ತಿಕ
11 ಐಎಸ್`ಎಸ್`ಎಪ್` ವಿಶ್ವಕಪ್ 2014 ಬೆಳ್ಳಿ ವೈಯುಕ್ತಿಕ

ಉಲ್ಲೇಖ

[ಬದಲಾಯಿಸಿ]
  1. Nandakumar Marar (5 ಫೆಬ್ರವರಿ 2014). "ISSF cover girl Heena Sidhu says performance matters". The Hindu. Retrieved 12 ಏಪ್ರಿಲ್ 2014.


  • ೧.Nandakumar Marar (2014-02-05). "ISSF cover girl Heena Sidhu says performance matters". The Hindu. Retrieved 2014-04-12.
  • ೨.Shooter Heena Sidhu claims numero uno spot in 10m Air Pistol Rankings". Post.jagran.com. 2014-04-07. Retrieved 2014-04-12.[೩]
  • ೩. "Heena Sidhu, Anu Raj Singh bag gold in shooting". NDTV. 12 October 2010. Retrieved 13 October 2010.
  • ೪.INFOHTTPS://WWW.FACEBOOK.COM/HEENASHOOTINGOFFICIAL/INFO/?TAB=PAGE_INFO
  • ೫.With World Cup silver, Sidhu comes of age". Indian Express. 2009-04-22. Retrieved 2014-04-12.
  • ೬."Results of 52nd National Shooting Championships in Kerala". Indianshooting.com. Retrieved 2014-04-12.
  • ೭.http://www.imdb.com/title/tt2291230/
  • ೮."London 2012: Caroline Rowland's 'First' to Chronicle 12 Competitors' Stories at the Olympics". The Hollywood Reporter. 2012-07-13. Retrieved 2014-04-12.
  • ೯."Heena Sidhu beats World Champion to clinch Gold in Shooting World Cup finals | India at Sports". Indiaatsports.in. 2013-11-11. Retrieved 2014-04-12.
  • ೧೦"Indian Shooter Heena Sidhu Will Appear On Cover Page of ISSF Journal". Womenpla.net. 2014-01-03. Retrieved 2014-04-12.
  • ೧೧."Heena Sidhu snatches victory". The Hindu. 2014-01-22. Retrieved 2014-04-12.
  • ೧೨.http://www.ibnlive.com/news/sports/heena-sidhu-shoots-gold-at-asia-olympic-shooting-qualifiers-wins-olympic-quota-1195523.html
  • ೧೩.[೪]