ವಿಷಯಕ್ಕೆ ಹೋಗು

ಹೇಮಲತಾ ಮಹಿಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೇಮಲತಾ ಮಹಿಷಿಯವರು ವೃತ್ತಿಯಲ್ಲಿ ವಕೀಲರು ಮತ್ತು ಪ್ರವೃತ್ತಿಯಲ್ಲಿ ಸಾಹಿತಿಗಳು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಲಕ್ಷ್ಮಣ ರಾವ್ ಸಿರ್ಸಿ ಮತ್ತು ಶಾಂತಾಬಾಯಿ ದಂಪತಿಗಳ ಮಗಳಾಗಿ ದಿನಾಂಕ ೨೩-೧೦-೧೯೪೪ ರಂದು ಜನಿಸಿದರು.ಎ.ಎ ಮತ್ತು ಎಲ್. ಎಲ್.ಬಿ ಪದವಿಗಳನ್ನು ಪಡೆದಿರುವ ಇವರು ಕನ್ನಡ ಕಾನೂನು ಪತ್ರಿಕೆಯ ಸಂಪಾದಕಿ ಕೂಡ. ಶ್ರೀ. ನಾರಾಯಣ ಮಹಿಷಿಯ ಪತ್ನಿಯಾದ ಇವರು ಸಧ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಕೃತಿಗಳು

[ಬದಲಾಯಿಸಿ]

ಕಥಾ ಸಂಕಲನ

[ಬದಲಾಯಿಸಿ]
  • ಜಾಯಮಾನ(೧೯೭೬)
  • ತ್ರಿಶಂಕು(೧೯೮೦)

ಕಿರುನಾಟಕ

[ಬದಲಾಯಿಸಿ]
  • ಅನುಕೂಲಕ್ಕೊಬ್ಬ ಹೆಂಡತಿ (೧೯೭೬)

ಕಾನೂನು ಸಾಹಿತ್ಯ

[ಬದಲಾಯಿಸಿ]

ಕಾನೂನು-ಮಹಿಳೆ(೧೯೮೧) ಹಿಂದೂ ವಿವಾಹ(೧೯೮೫)