ಹೈಡ್ರೋಪೋನಿಕ್ಸ್ (ಜಲಕೃಷಿ)
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
ಹೈಡ್ರೋಪೋನಿಕ್ಸ್ (ಜಲಕೃಷಿ)(ಗ್ರೀಕ್ ನ ಪದಗಳಾದ ಹೈಡ್ರೋ , ಎಂದರೆ ನೀರು ಹಾಗು ಪಾನಸ್ ಎಂದರೆ ಕೆಲಸ) ಎಂಬುದು ಮಣ್ಣನ್ನು ಬಳಸದೆ, ನೀರಿನಲ್ಲಿ ಖನಿಜ ಪುಷ್ಟಿಕಾರಿ ದ್ರಾವಣವನ್ನು ಬಳಸಿಕೊಂಡು ಸಸ್ಯಗಳನ್ನು ಬೆಳೆಸುವ ವಿಧಾನ. ಭೂಮಿಯ ಮೇಲೆ ಬೆಳೆಯುವ ಸಸ್ಯಗಳನ್ನು ಅವುಗಳ ಬೇರುಗಳೊಂದಿಗೆ ಕೇವಲ ಖನಿಜ ಪುಷ್ಟಿಕಾರಿ ದ್ರಾವಣದಿಂದ ಅಥವಾ ಒಂದು ನಿಷ್ಕ್ರಿಯ ಜೀವಮಾಧ್ಯಮದೊಂದಿಗೆ ಬೆಳೆಸಬಹುದು, ಉದಾಹರಣೆಗೆ ಪರ್ಲೈಟ್, ಜಲ್ಲಿಸ್ತರ, ಖನಿಜ ಉಣ್ಣೆ, ಅಥವಾ ತೆಂಗಿನ ಸಿಪ್ಪೆ.
ಸಸ್ಯಗಳು ಅಗತ್ಯವಿರುವ ಖನಿಜ ಪುಷ್ಟಿಕಾರಿಗಳನ್ನು ನೀರಿನಲ್ಲಿ ಅಜೈವಿಕ ಅಯಾನುಗಳೆಂದು ಹೀರಿಕೊಳ್ಳುತ್ತವೆಂದು 19ನೇ ಶತಮಾನದಲ್ಲಿ ಸಂಶೋಧಕರು ಪತ್ತೆಹಚ್ಚಿದರು. ಸ್ವಾಭಾವಿಕ ಪರಿಸ್ಥಿತಿಗಳಲ್ಲಿ, ಮಣ್ಣು, ಖನಿಜ ಪೌಷ್ಟಿಕ ಭಂಡಾರವಾಗಿ ಕಾರ್ಯ ನಿರ್ವಹಿಸುತ್ತದೆ ಆದರೆ ಕೇವಲ ಮಣ್ಣು ಒಂದೇ ಸಸ್ಯದ ಬೆಳವಣಿಗೆಗೆ ಸಾಕಾಗುವುದಿಲ್ಲ. ಮಣ್ಣಿನಲ್ಲಿರುವ ಖನಿಜ ಪೌಷ್ಟಿಕಗಳು ನೀರಿನಲ್ಲಿ ಕರಗಿದಾಗ, ಸಸ್ಯದ ಬೇರುಗಳು ಅವುಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಕೃತಕವಾಗಿ ಸಸ್ಯಕ್ಕೆ ಸರಬರಾಜಾಗಿರುವ ನೀರಿಗೆ ಅಗತ್ಯವಿದ್ದಷ್ಟು ಖನಿಜ ಪೌಷ್ಟಿಕಗಳನ್ನು ಸೇರಿಸಿದಾಗ, ಸಸ್ಯವು ಹುಲುಸಾಗಿ ಬೆಳೆಯಲು ಮಣ್ಣಿನ ಅಗತ್ಯ ಬೀಳುವುದಿಲ್ಲ. ಜಲಕೃಷಿಯಲ್ಲಿ ಬಹುತೇಕವಾಗಿ ಭೂಮಿಯ ಮೇಲೆ ಬೆಳೆಯುವ ಯಾವುದೇ ಸಸ್ಯವು ಬೆಳವಣಿಗೆಯಾಗುತ್ತದೆ. ಜೀವವಿಜ್ಞಾನದ ಸಂಶೋಧನೆ ಹಾಗು ಕಲಿಕೆಯಲ್ಲಿ ಜಲಕೃಷಿ ಒಂದು ಪ್ರಮಾಣಕ ವಿಧಾನವೂ ಸಹ ಆಗಿದೆ.
ಇತಿಹಾಸ
[ಬದಲಾಯಿಸಿ]ಮಣ್ಣನ್ನು ಬಳಸದೆ ಭೂಮಿಯ ಮೇಲೆ ಬೆಳೆಯುವ ಸಸ್ಯಗಳ ಬಗ್ಗೆ ವಿವರಣೆಯನ್ನು 1627ರಲ್ಲಿ ಪ್ರಕಟಗೊಂಡ ಸರ್ ಫ್ರ್ಯಾನ್ಸಿಸ್ ಬೇಕನ್ ರ ಸಿಲ್ವ ಸಿಲ್ವರಮ್ ನಲ್ಲಿ ನೀಡಲಾಗಿದೆ, ಪುಸ್ತಕವನ್ನು ಅವರ ಮರಣದ ಒಂದು ವರ್ಷದ ನಂತರ ಪ್ರಕಾಶನ ಗೊಳಿಸಲಾಯಿತು. ಇದರ ನಂತರ ನೀರನ್ನು ಬಳಸಿಕೊಂಡು ಕೃಷಿ ಮಾಡುವ ಸಂಸ್ಕೃತಿಯು ಒಂದು ಜನಪ್ರಿಯ ಸಂಶೋಧನಾ ವಿಧಾನವಾಯಿತು. 1699ರಲ್ಲಿ, ಜಾನ್ ವುಡ್ವರ್ಡ್ ಪ್ರಾಯೋಗಿಕವಾಗಿ ನೀರನ್ನು ಬಳಸಿಕೊಂಡು ಪುದೀನಾ ಸೊಪ್ಪನ್ನು ಬೆಳೆದಿದ್ದರ ಬಗ್ಗೆ ಪ್ರಕಟಿಸಿದರು. ಸಸ್ಯಗಳು ಭಟ್ಟಿ ಇಳಿಸಿದ ಶುದ್ದ ನೀರಿಗಿಂತ ಉತ್ತಮವಾಗಿ ಕಡಿಮೆ ಶುದ್ಧತೆಯನ್ನು ಉಳ್ಳ ನೀರಿನ ಮೂಲದಲ್ಲಿ ಬೆಳೆಯುತ್ತದೆ ಎಂಬುದನ್ನು ಪತ್ತೆ ಮಾಡಿದರು. 1842ರ ಸುಮಾರಿಗೆ, ಸಸ್ಯದ ಬೆಳವಣಿಗೆಗೆ ಅತ್ಯಾವಶ್ಯಕವಾಗಿ ಬೇಕಾದುದೆಂದು ಪರಿಗಣಿಸಲಾದ ಒಂಬತ್ತು ಅಂಶಗಳನ್ನು ಪಟ್ಟಿ ಮಾಡಲಾಯಿತು, ಅಲ್ಲದೇ 1859-65ರವರೆಗೂ ಜರ್ಮನ್ ಸಸ್ಯವಿಜ್ಞಾನಿಗಳಾದ ಜೂಲಿಯಸ್ ವೊನ್ ಸಚ್ಸ್ ಹಾಗು ವಿಲ್ಹೆಲ್ಮ್ ಕ್ನೋಪ್ ಕಂಡುಹಿಡಿದ ಅಂಶಗಳು, ಮಣ್ಣುರಹಿತ ಕೃಷಿಯ ವಿಧಾನದ ಅಭಿವೃದ್ಧಿಗೆ ನಾಂದಿ ಹಾಡಿತು.[೧] ಮಣ್ಣನ್ನು ಬಳಸದೆ ಖನಿಜ ಪೌಷ್ಟಿಕ ದ್ರಾವಣಗಳನ್ನು ಬಳಸಿಕೊಂಡು ಭೂಮಿಯ ಮೇಲೆ ಬೆಳೆಯುವ ಸಸ್ಯಗಳ ವಿಧಾನಕ್ಕೆ ದ್ರಾವಣ ಕೃಷಿ ಎಂದು ಕರೆಯಲಾಗುತ್ತದೆ. ಇದು ಶೀಘ್ರದಲ್ಲೇ ಒಂದು ಉತ್ತಮ ಸಂಶೋಧನೆ ಹಾಗು ಬೋಧನಾ ವಿಧಾನವಾಗಿ ಜನಪ್ರಿಯತೆ ಗಳಿಸಿತು. ಅಲ್ಲದೇ ಇಂದಿಗೂ ವ್ಯಾಪಕವಾಗಿ ಬಳಕೆಯಲ್ಲಿದೆ. ದ್ರಾವಣ ಕೃಷಿಯನ್ನು ಇಂದು ಜಲಕೃಷಿಯ ಮಾಧ್ಯಮವೆಂದು ಪರಿಗಣಿಸಲಾಗಿದೆ, ಇದರಲ್ಲಿ ಯಾವುದೇ ನಿಷ್ಕ್ರಿಯವಾದ ಜೀವವಿಧಾನಗಳಿಲ್ಲ.
ಸುಮಾರು 1929ರಲ್ಲಿ, ಬರ್ಕ್ಲೆಯ್ ನಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಲಿಯಂ ಫ್ರೆಡ್ರಿಕ್ ಗೆರಿಕ್, ದ್ರಾವಣ ಕೃಷಿಯಿಂದ, ಕೃಷಿ ಬೆಳೆಯನ್ನು ಬೆಳೆಯಬಹುದೆಂದು ಬಹಿರಂಗವಾಗಿ ಪ್ರಚಾರ ನೀಡಲು ಆರಂಭಿಸಿದರು.[೨] ಅವರು ಮೊದಲ ಬಾರಿಗೆ ಆಕ್ವಾಕಲ್ಚರ್(ಜಲಜೀವಿ ಕೃಷಿ)ಎಂಬ ಪದವನ್ನು ಹುಟ್ಟುಹಾಕಿದರು, ಆದರೆ ಆಕ್ವಾಕಲ್ಚರ್ ಪದವು ಆ ಸಮಯದಲ್ಲಾಗಲೇ ಜಲಜೀವಿಗಳ ಕೃಷಿಗೆ ಬಳಕೆಯಾಗುತ್ತಿತ್ತು. ಗೆರಿಕ್, ತಮ್ಮ ಮನೆಯ ಹಿತ್ತಿಲಿನಲ್ಲಿ ಇಪ್ಪತ್ತೈದು ಅಡಿ ಉದ್ದದ ಟೋಮೋಟೋ ಬಳ್ಳಿಗಳನ್ನು ಮಣ್ಣನ್ನು ಬಳಸದೆ ಕೇವಲ ಖನಿಜ ಪೌಷ್ಟಿಕ ದ್ರಾವಣದಿಂದ ಬೆಳೆದು ತೀವ್ರಾಸಕ್ತಿಯನ್ನು ಕೆರಳಿಸಿದರು.[೩] ಭೂಮಿಯನ್ನು ಕೃಷಿ ಮಾಡುವ ವಿಜ್ಞಾನ ಎಂಬ ಅರ್ಥವನ್ನು ನೀಡುವ ಕೃಷಿಯ ಪ್ರಾಚೀನ ಗ್ರೀಕ್ ಪದವಾದ ಜಿಯೋಪೋನಿಕ್ಸ್ ಗೆ ಹೋಲಿಕೆಯಾಗಿ, ಗೆರಿಕ್ 1937ರಲ್ಲಿ ಜಲಕೃಷಿ ಎಂಬ ಪದವನ್ನು ಪರಿಚಯಿಸಿದರು.(ಆದಾಗ್ಯೂ, ಈ ಪದವನ್ನು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ Dr. W. A. ಸೆಟ್ಚೆಲ್ ಸೂಚಿಸಿದರೆಂದು ಗೆರಿಕ್ ಸಮರ್ಥಿಸುತ್ತಾರೆ). ಇವರು ಸಸ್ಯಗಳನ್ನು ನೀರಿನಲ್ಲಿ ಬೆಳೆಸಲಾಗುವ ವಿಧಾನಕ್ಕೆ ಈ ಪದವನ್ನು ಸೂಚಿಸುತ್ತಾರೆ (ಗ್ರೀಕ್ ನಲ್ಲಿ ಹೈಡ್ರೋಸ್ ಎಂದರೆ "ನೀರು", ಹಾಗು ಪೋನಸ್ ಎಂದರೆ ಕೆಲಸ).[೧] ಜಲಕೃಷಿಯು ಸಸ್ಯ ಕೃಷಿಯಲ್ಲಿ ಕ್ರಾಂತಿಯನ್ನು ತರಬಹುದೆಂಬ ಗೆರಿಕ್ ರ ಸಂಶೋಧನೆ ಹಾಗು ಅವರ ವಾದಗಳು, ಇದರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಅಧಿಕ ಸಂಖ್ಯೆಯಲ್ಲಿ ಬೇಡಿಕೆಗಳು ಬಂದವು. ಗೆರಿಕ್ ತಮ್ಮ ಸಂಶೋಧನಾ ವಿಚಾರಗಳನ್ನು ಬಹಿರಂಗ ಪಡಿಸಲು ತಿರಸ್ಕರಿಸುವುದರ ಜೊತೆಗೆ ತಮ್ಮ ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಸಂಶೋಧನೆ ಮಾಡಿದ್ದಾರೆಂದು ಸಮರ್ಥಿಸಿಕೊಳ್ಳುತ್ತಾರೆ. ಈ ನಿರಾಕರಣೆಯು ಅಂತಿಮವಾಗಿ ಅವರು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯವನ್ನು ತೊರೆಯುವಂತೆ ಮಾಡಿತು. 1940ರಲ್ಲಿ, ಕಂಪ್ಲೀಟ್ ಗೈಡ್ ಟು ಸಾಯಿಲ್ ಲೆಸ್ ಗಾರ್ಡೆನಿಂಗ್ ಎಂಬ ಪುಸ್ತಕ ಬರೆದರು. ಗೆರಿಕ್ ರ ಸಂಶೋಧನೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಇತರ ಇಬ್ಬರು ಸಸ್ಯ ಪೋಷಣ ತಜ್ಞರಿಗೆ ವಹಿಸಲಾಯಿತು. ಡೆನ್ನಿಸ್ R. ಹೊಗ್ಲ್ಯಾಂಡ್ Archived 2011-04-30 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗು ಡೇನಿಯಲ್ I. ಅರ್ನೋನ್ Archived 2011-04-30 ವೇಬ್ಯಾಕ್ ಮೆಷಿನ್ ನಲ್ಲಿ. 1938ರಲ್ಲಿ ದಿ ವಾಟರ್ ಕಲ್ಚರ್ ಮೆಥಡ್ ಫಾರ್ ಗ್ರೋಯಿಂಗ್ ಪ್ಲ್ಯಾಂಟ್ಸ್ ವಿಥೌಟ್ ಸಾಯಿಲ್ ಎಂಬ ಒಂದು ಪ್ರಸಿದ್ಧ ಕೃಷಿ ಪ್ರಕಟಣೆಯನ್ನು ಮಾಡುತ್ತಾರೆ,[೪] ಇವರು ಜಲಕೃಷಿಯ ಬಗ್ಗೆ ಮಾಡಲಾದ ಉತ್ಪ್ರೇಕ್ಷಿತ ವಾದಗಳನ್ನು ನಿರಾಧಾರವೆಂದು ತೋರಿಸುತ್ತಾರೆ. ಹೊಗ್ಲ್ಯಾಂಡ್ ಹಾಗು ಅರ್ನೋನ್, ಜಲಕೃಷಿಯಿಂದ ಬೆಳೆಸಲಾದ ಬೆಳೆಗಳಿಗಿಂತ ಉತ್ತಮ ಗುಣಮಟ್ಟದ ಮಣ್ಣಿನಿಂದ ಬೆಳೆಯಬಹುದಾದ ಬೆಳೆಗಳು ಯಾವುದೇ ರೀತಿಯಲ್ಲೂ ಭಿನ್ನವಾಗಿಲ್ಲವೆಂದು ಗುರುತಿಸುತ್ತಾರೆ. ಖನಿಜ ಪೌಷ್ಟಿಕಗಳು, ಅದರಲ್ಲೂ ವಿಶೇಷವಾಗಿ ಬೆಳಕಿನ ಅಂಶವನ್ನು ಹೊರತುಪಡಿಸಿ ಅಂತಿಮವಾಗಿ ಇಳುವರಿಯು ಸೀಮಿತವೆನಿಸಿತು. ಆದಾಗ್ಯೂ, ಈ ಸಂಶೋಧನೆಯು, ಜಲಕೃಷಿಯು ಇತರ ಅನುಕೂಲಗಳನ್ನು ಹೊಂದಿದೆಯೆಂಬ ವಾಸ್ತವವನ್ನು ಪರಿಗಣಿಸಿತು. ಇದರ ಪ್ರಕಾರವಾಗಿ ಸಸ್ಯದ ಬೇರುಗಳು ಆಮ್ಲಜನಕವನ್ನು ನಿರಂತರವಾಗಿ ಪಡೆಯುತ್ತವೆಂಬ ಅಂಶವೂ ಸೇರಿತ್ತು ಜೊತೆಗೆ ಸಸ್ಯಗಳು ಅವುಗಳ ಅಗತ್ಯಕ್ಕೆ ಅನುಸಾರವಾಗಿ ಅಥವಾ ಕಡಿಮೆ ನೀರನ್ನು ಹೀರಿಕೊಳ್ಳುತ್ತಿದ್ದವು. ಅಧಿಕ ಬೆಳೆಯನ್ನು ಬೆಳೆದ ನಂತರ ಇಲ್ಲಿ ಸಾಮಾನ್ಯವಾಗಿ ಉಂಟಾಗುವ ಈ ಒಂದು ಅಡತಡೆಯು ಬಹಳ ಪ್ರಮುಖವೆನಿಸುತ್ತದೆ. ಅದಲ್ಲದೇ ಕಡಿಮೆ ನೀರನ್ನು ಹಾಯಿಸುವುದು; ಜೊತೆಗೆ ಸಸ್ಯಕ್ಕೆ ಸಾಕಾಗುವಷ್ಟು ಅಧಿಕ ಪ್ರಮಾಣದ ನೀರನ್ನು ಜಲಕೃಷಿಯು ಒದಗಿಸುವುದರ ಜೊತೆಗೆ ಈ ದೋಷವನ್ನು ತಡೆಗಟ್ಟುತ್ತದೆ. ಅಲ್ಲದೇ ಬಳಕೆಯಾಗದ ಯಾವುದೇ ನೀರನ್ನು ಬರಿದುಮಾಡಲಾಗುತ್ತದೆ, ಮರುಬಳಕೆ ಮಾಡಲಾಗುತ್ತದೆ, ಅಥವಾ ಸಕ್ರಿಯವಾಗಿ ರಾಸಾಯನಿಕ ಕ್ರಿಯೆಗೆ ಒಳಪಡಿಸಲಾಗುತ್ತದೆ, ಇದು ಮಣ್ಣಿನಲ್ಲಿ ಮುಳುಗಿದ ಬೇರಿನ ವ್ಯವಸ್ಥೆಗಳಲ್ಲಿರುವ ಆಮ್ಲಜನಕದ ಕೊರತೆಯನ್ನು ನೀಗಿಸುತ್ತದೆ. ಮಣ್ಣಿನಲ್ಲಿ ಬೆಳೆಯುವಾಗ, ಸಸ್ಯಕ್ಕೆ ಖಚಿತವಾಗಿ ಎಷ್ಟು ನೀರನ್ನು ಹಾಕಬೇಕು ಎಂಬುದನ್ನು ತಿಳಿಯಲು ಒಬ್ಬ ಬೆಳೆಗಾರನು ಅನುಭವಿಯಾಗಿರಬೇಕು. ಅಧಿಕ ನೀರನ್ನು ಹಾಯಿಸಿದರೆ ಸಸ್ಯವು ಆಮ್ಲಜನಕವನ್ನು ಹೀರಿಕೊಳ್ಳುವಲ್ಲಿ ಅಸಮರ್ಥವಾಗುತ್ತದೆ; ಕಡಿಮೆ ನೀರನ್ನು ಹಾಯಿಸಿದರೆ ಸಸ್ಯವು ಪೌಷ್ಟಿಕಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ, ಇವುಗಳು ದ್ರಾವಣದ ಏಕರೂಪತೆಯ ಸ್ಥಿತಿಯಲ್ಲಿರುವಾಗ ಬೇರುಗಳಿಗೆ ಚಲಿಸುತ್ತವೆ.ಈ ಇಬ್ಬರು ಸಂಶೋಧಕರು ಖನಿಜ ಪೌಷ್ಟಿಕ ದ್ರಾವಣಗಳಿಗೆ ಹಲವಾರು ಸೂತ್ರಗಳನ್ನು ಅಭಿವೃದ್ದಿಪಡಿಸಿದರು, ಇದು ಹೊಗ್ಲ್ಯಾಂಡ್ ದ್ರಾವಣವೆಂದು ಪ್ರಸಿದ್ಧವಾಗಿದೆ. ಮಾರ್ಪಾಡಾದ ಹೊಗ್ಲ್ಯಾಂಡ್ ದ್ರಾವಣಗಳನ್ನು ಇಂದಿಗೂ ಸಹ ಬಳಸಲಾಗುತ್ತದೆ.(ಹೋಗ್ಲ್ಯಾಂಡ್ ಕಂಡು ಹಿಡಿದ ಪೌಷ್ಟಿಕಾಂಶಯುಳ್ಳ ದ್ರಾವಣ) ಜಲಕೃಷಿಯನ್ನು ವೇಕ್ ದ್ವೀಪದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಮಾಡಲಾಯಿತು, ಇದು ಪೆಸಿಫಿಕ್ ಸಾಗರದ ನಡುವಿನ ಒಂದು ಬಂಡೆಯ ದಿಬ್ಬವಾಗಿತ್ತು. ಇಲ್ಲಿ ಪ್ಯಾನ್ ಅಮೆರಿಕನ್ ಏರ್ ಲೈನ್ಸ್ ಇಂಧನವನ್ನು ತುಂಬಿಸಿಕೊಳ್ಳಲು ನಿಲುಗಡೆ ಮಾಡಲಾಗುತ್ತಿತ್ತು. 1930ರಲ್ಲಿ ಪ್ರಯಾಣಿಕರಿಗೋಸ್ಕರ ತರಕಾರಿಗಳನ್ನು ಬೆಳೆಯಲು ಜಲಕೃಷಿಯನ್ನು ಬಳಸಿಕೊಳ್ಳಲಾಯಿತು. ವೇಕ್ ದ್ವೀಪಕ್ಕೆ ಜಲಕೃಷಿಯು ಅಗತ್ಯವಾಗಿತ್ತು, ಏಕೆಂದರೆ ಅಲ್ಲಿ ಮಣ್ಣು ಇರಲಿಲ್ಲ, ಜೊತೆಗೆ ತಾಜಾ ತರಕಾರಿಗಳನ್ನು ವಿಮಾನದಲ್ಲಿ ಸಾಗಣೆ ಮಾಡುವುದು ಬಹಳ ದುಬಾರಿ ಎನಿಸಿತ್ತು. 1960ರಲ್ಲಿ, ಇಂಗ್ಲೆಂಡ್ ನ ಅಲ್ಲೆನ್ ಕೂಪರ್ ಪೌಷ್ಟಿಕ ಪದರ ವಿಧಾನವನ್ನು ಅಭಿವೃದ್ಧಿಪಡಿಸಿದರು.(ನೀರಿನ ಮೇಲ್ಮೈನ ಪೌಷ್ಟಿಕಾಂಶಗಳ ಪೊರೆ ವಿಧಾನ) ವಾಲ್ಟ್ ಡಿಸ್ನಿಯ ದಿ ಲ್ಯಾಂಡ್ ಪೆವಿಲಿಯನ್ ನಲ್ಲಿ ವಿಶ್ವದ EPCOT ಕೇಂದ್ರವು 1982ರಲ್ಲಿ ಆರಂಭವಾಯಿತು. ಜೊತೆಗೆ ಪ್ರಮುಖವಾಗಿ ವಿವಿಧ ಜಲಕೃಷಿಯ ಮಾದರಿಗಳನ್ನು ಇದು ಒಳಗೊಂಡಿದೆ. ಇತ್ತೀಚಿನ ದಶಕಗಳಲ್ಲಿ, NASA, ತಮ್ಮ ಕಂಟ್ರೋಲ್ಡ್ ಇಕಲಾಜಿಕಲ್ ಲೈಫ್ ಸಪೋರ್ಟ್ ಸಿಸ್ಟಂ (ನೈಸರ್ಗಿಕ ಜೀವಿ ಬೆಂಬಲದ ನಿಯಂತ್ರಣ ಪದ್ದತಿ)ಅಥವಾ CELSSಗಾಗಿ ಜಲಕೃಷಿಗೆ ಸಂಬಂಧಿಸಿದಂತೆ ವ್ಯಾಪಕ ಸಂಶೋಧನೆ ನಡೆಸಿತು. ಜಲಕೃಷಿಯನ್ನು ಮಂಗಳ ಗ್ರಹದ ಮೇಲೆ ನಡೆಸುವ ಉದ್ದೇಶ ಹೊಂದಲಾಗಿತ್ತು. ಇದರಂತೆ ಕಡಿಮೆ ಶಾಖದಿಂದ ಬಣ್ಣದ ವಿವಿಧ ರೋಹಿತಗಳಲ್ಲಿ LED(ಲೈಟ್ ಎಮಿಟಿಂಗ್ ಡಿಯೊಇಡ್ ) ದೀಪಗಳನ್ನು ಬಳಸಿಕೊಂಡು ಬೆಳೆಯಲು ಉದ್ದೇಶಿಸಲಾಗಿತ್ತು.1978ರಲ್ಲಿ, ಜಲಕೃಷಿಯ ಪ್ರವರ್ತಕ ಡಾ. ಹೊವರ್ಡ್ ರೆಶ್ "ಹೈಡ್ರೋಪೋನಿಕ್ಸ್ ಫುಡ್ ಪ್ರೊಡಕ್ಷನ್" ಎಂಬ ತಮ್ಮ ಪುಸ್ತಕದ ಮೊದಲ ಆವೃತ್ತಿಯನ್ನು ಪ್ರಕಟಿಸಿದರು. ಈ ಪುಸ್ತಕವು(ಇದೀಗ ನವೀಕರಣಗೊಂಡಿದೆ), ಮೂರನೇ-ಭಾಗದ ಮೂಲ ಪೌಷ್ಟಿಕ ಸೂತ್ರವೆಂದು ಕರೆಯಲ್ಪಡುವ ಅಂಶಕ್ಕೆ ಉತ್ತೇಜನ ನೀಡಿದೆ, ಇದು ಇಂದಿಗೂ ಜಲಕೃಷಿಗೆ ಒಂದು ಪ್ರಮುಖ ಅಂಶವಾಗಿದೆ. ರೆಶ್ ನಂತರದಲ್ಲಿ ತಮ್ಮ ಇತರ ಪುಸ್ತಕಗಳನ್ನು ಪ್ರಕಟಿಸಿದರು, ಜೊತೆಗೆ ಅತ್ಯಾಧುನಿಕ ಜಲಕೃಷಿ ಸಂಶೋಧನೆ ಹಾಗು ಕೆರೆಬಿಯನ್ ನಲ್ಲಿ ಉತ್ಪನ್ನದ ಸೌಲಭ್ಯದ ಬಗ್ಗೆ ಪ್ರಸಕ್ತದಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಕಳೆದ ಕೆಲವು ವರ್ಷಗಳಲ್ಲಿ, ಜಲಕೃಷಿಯ ಉತ್ಪನ್ನಕ್ಕೆ ಜನಪ್ರಿಯತೆ ದೊರೆಯುವುದರ ಜೊತೆಗೆ ಬೇಡಿಕೆಯೂ ಅಧಿಕಗೊಂಡಿದೆ.[೫]
ಹುಟ್ಟು (ಮೂಲ)
[ಬದಲಾಯಿಸಿ]ಮಣ್ಣುರಹಿತ ಕೃಷಿ
[ಬದಲಾಯಿಸಿ]ಗೆರಿಕ್ ಮೂಲತಃ ಜಲಕೃಷಿಯನ್ನು ಖನಿಜ ಪೌಷ್ಟಿಕ ದ್ರಾವಣಗಳನ್ನು ಬಳಸಿಕೊಂಡು ಬೆಳೆಯನ್ನು ಬೆಳೆಯುವುದು, ಜೊತೆಗೆ ಸಸ್ಯದ ಬೇರುಗಳಿಗೆ ಯಾವುದೇ ಘನ ಮಾಧ್ಯಮವನ್ನು ಬಳಸದಿರುವುದೆಂದು ಅರ್ಥ ನಿರೂಪಣೆ ನೀಡಿದರು. ಜಲಕೃಷಿ ಎಂಬ ಪದವನ್ನು ಮಣ್ಣುರಹಿತ ಕೃಷಿಯಾದ ಮರಳು ಕೃಷಿ ಹಾಗು ಜಲ್ಲಿ ಹರವು ಕೃಷಿಗೆ ಜನರು ಬಳಕೆ ಮಾಡುವುದನ್ನು ಆಕ್ಷೇಪಣೆ ವ್ಯಕ್ತಪಡಿಸಿದರು. ಸಸ್ಯಗಳ ಜಲಕೃಷಿ ಹಾಗು ಮಣ್ಣುರಹಿತ ಕೃಷಿಯ ನಡುವಿನ ವ್ಯತ್ಯಾಸವು ಸಾಮಾನ್ಯವಾಗಿ ಅಸ್ಪಷ್ಟವಾಗಿದೆ. ಮಣ್ಣುರಹಿತ ಕೃಷಿಯು ಜಲಕೃಷಿ ಎಂಬ ಪದಕ್ಕಿಂತ ವ್ಯಾಪಕವಾಗಿ ಬಳಕೆಯಾಗುವ ಪದವಾಗಿದೆ; ಇದಕ್ಕೆ ಜೇಡಿ ಮಣ್ಣು ಅಥವಾ ಮೆಕ್ಕಲು ಮಣ್ಣಿನಿಂದ ಕೂಡಿರದ ಮಣ್ಣನ್ನು ಬಳಕೆಮಾಡಿಕೊಳ್ಳುವ ಅಗತ್ಯವಿರುತ್ತದೆ. ಮರಳನ್ನು ಮಣ್ಣಿನ ಒಂದು ಮಾದರಿಯೆಂದು ಪರಿಗಣಿಸಿರುವುದನ್ನು ಗಮನಿಸಬೇಕು. ಆದಾಗ್ಯೂ ಮರಳು ಕೃಷಿಯನ್ನು ಮಣ್ಣುರಹಿತ ಕೃಷಿಯ ಒಂದು ಮಾದರಿಯೆಂದು ಪರಿಗಣಿಸಲಾಗಿದೆ. ಜಲಕೃಷಿಯು, ಮಣ್ಣುರಹಿತ ಕೃಷಿಯ ಒಂದು ಉಪವಿಧಾನವಾಗಿದೆ. ಮಣ್ಣುರಹಿತ ಸಂಸ್ಕೃತಿಯ ಹಲವು ಮಾದರಿಗಳು ಜಲಕೃಷಿಗೆ ಅಗತ್ಯವಾದ ಖನಿಜ ಪೌಷ್ಟಿಕ ದ್ರಾವಣಗಳನ್ನು ಬಳಸುವುದಿಲ್ಲ.
ವಾರ್ಷಿಕವಾಗಿ ಧಾರಕ ಸಸ್ಯಗಳನ್ನು ಶತಕೋಟಿಗಟ್ಟಲೆ ಉತ್ಪಾದಿಸಲಾಗುತ್ತದೆ, ಇದರಲ್ಲಿ ಹಣ್ಣು, ನೆರಳು ನೀಡುವ ಹಾಗು ಅಲಂಕಾರಿಕ ಸಸ್ಯಗಳು, ಕುರುಚಲು ಗಿಡಗಳು, ಕಾಡಿನಲ್ಲಿ ಬೆಳೆಯುವ ಮೊಳಕೆ ಗಿಡಗಳು, ತರಕಾರಿ ಸಸಿಗಳು, ಪಾತಿ ಗಿಡಗಳು, ಮೂಲಿಕೆಯ ಸಸ್ಯಗಳು ಹಾಗು ಬಳ್ಳಿಗಳು ಸೇರಿವೆ. ಧಾರಕದ ಹಲವು ಸಸ್ಯಗಳು ಮಣ್ಣುರಹಿತ ಮಾಧ್ಯಮದಲ್ಲಿ ಬೆಳೆಯಲಾಗುತ್ತದೆ, ಇವು ಮಣ್ಣುರಹಿತ ಕೃಷಿಯನ್ನು ಪ್ರತಿನಿಧಿಸುತ್ತವೆ. ಆದಾಗ್ಯೂ, ಇದರಲ್ಲಿ ಹಲವು ಜಲಕೃಷಿಯಲ್ಲ ಏಕೆಂದರೆ, ಮಣ್ಣುರಹಿತ ಮಾಧ್ಯಮವು ಸಾಮಾನ್ಯವಾಗಿ ನಿಧಾನವಾಗಿ ಬಿಡುಗಡೆಯಾಗುವ ಗೊಬ್ಬರಗಳು, ಕ್ಯಾಟಯಾನುಗಳ ವಿನಿಮಯ ಹಾಗು ಸ್ವತಃ ಜೈವಿಕ ಮಾಧ್ಯಮದ ವಿಭಜನೆ ಮೂಲಕ ಕೆಲವು ಖನಿಜ ಪೌಷ್ಟಿಕಗಳನ್ನು ಒದಗಿಸುತ್ತದೆ. ಧಾರಕ ಸಸ್ಯಗಳಿಗೆ ಹಲವು ಮಣ್ಣುರಹಿತ ಮಾಧ್ಯಮವೂ ಸಹ ಜೈವಿಕ ಪದಾರ್ಥಗಳಾದ ಸಸ್ಯಾಂಗಾರ ಅಥವಾ ಮಿಶ್ರಗೊಬ್ಬರದ ತೊಗಟೆಯನ್ನು ಒಳಗೊಂಡಿದೆ, ಇದು ಸಸ್ಯಕ್ಕೆ ಸ್ವಲ್ಪಮಟ್ಟಿಗಿನ ಪ್ರಮಾಣಿತ ಸಾರಜನಕ ಒದಗಿಸುತ್ತದೆ. ಸಸ್ಯಾಂಗಾರದ ಚೀಲಗಳಲ್ಲಿ ಸಸ್ಯಗಳ ಹಸಿರುಮನೆ ಬೆಳವಣಿಗೆಯನ್ನು ಸಾಮಾನ್ಯವಾಗಿ ಜಲಕೃಷಿ ಎಂದು ಹೆಸರಿಸಲಾಗುತ್ತದೆ, ಆದರೆ ತಾಂತ್ರಿಕವಾಗಿ ಮಾಧ್ಯಮವು ಕೆಲವು ಖನಿಜ ಪೌಷ್ಟಿಕಗಳನ್ನು ಒದಗಿಸುತ್ತದೆ ಎಂಬ ಕಾರಣಕ್ಕಾಗಿ ಅಲ್ಲ.
ಪ್ರಯೋಜನಗಳು
[ಬದಲಾಯಿಸಿ]ಜಲಕೃಷಿಯನ್ನು ವಿಶ್ವದಾದ್ಯಂತ ಆಹಾರ ತಯಾರಿಕೆಯಲ್ಲಿ ಬಳಸಲಾಗುವುದಕ್ಕೆ ಕೆಲ ಕಾರಣಗಳು ಈ ಕೆಳಕಂಡತಿವೆ:
- ಮಣ್ಣಿನ ಯಾವುದೇ ಅಗತ್ಯವಿರುವುದಿಲ್ಲ
- ನೀರು ವ್ಯವಸ್ಥೆ ಹಾಗೆ ಉಳಿಯುತ್ತದೆ; ಜೊತೆಗೆ ಇದನ್ನು ಮರುಬಳಕೆ ಮಾಡಬಹುದು-ಈ ರೀತಿಯಾಗಿ ಕಡಿಮೆ ನೀರಿನ ವ್ಯಯವಾಗುತ್ತದೆ
- ಸಂಪೂರ್ಣವಾಗಿ ಪೌಷ್ಟಿಕಾಂಶದ ಮಟ್ಟವನ್ನು ನಿಯಂತ್ರಿಸಲು ಸಾಧ್ಯ-ಈ ರೀತಿಯಾಗಿ ಪೌಷ್ಟಿಕಾಂಶದ ವೆಚ್ಚವು ಕಡಿಮೆಯಾಗುತ್ತದೆ
- ನಿಯಂತ್ರಿತ ವ್ಯವಸ್ಥೆಯಿಂದ ಪರಿಸರದಲ್ಲಿ ಯಾವುದೇ ಪೌಷ್ಟಿಕಾಂಶದ ಮಾಲಿನ್ಯವು ಬಿಡುಗಡೆಯಾಗುವುದಿಲ್ಲ.
- ಸ್ಥಿರ ಹಾಗು ಅಧಿಕ ಇಳುವರಿ
- ಧಾರಕದ ಚಲನಶೀಲತೆಯ ಕಾರಣದಿಂದಾಗಿ ಮಣ್ಣಿಗಿಂತ ಹೆಚ್ಚಾಗಿ ಕ್ರಿಮಿಗಳು ಹಾಗು ಕಾಯಿಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಸಾಧ್ಯ.
ಇಂದು, ಜಲಕೃಷಿಯು ಬೆಳೆವಿಜ್ಞಾನದ ಒಂದು ಅಂಗವಾಗಿ ಸ್ಥಾಪಿತವಾಗಿದೆ. ಕ್ಷಿಪ್ರ ಪ್ರಗತಿಯೂ ನಡೆಯುತ್ತಿದೆ, ಜೊತೆಗೆ ಹಲವು ರಾಷ್ಟ್ರಗಳಲ್ಲಿ ಸಾಬಿತಾದ ಪರಿಣಾಮಗಳು ಆಮೂಲಾಗ್ರವಾಗಿ ವಾಸ್ತವಿಕವಾಗಿವೆ. ಅಲ್ಲದೇ ತೋಟಗಾರಿಕೆಯ ಸಾಂಪ್ರದಾಯಿಕ ವಿಧಾನಗಳ ಮೇಲೆ ನಿರ್ದಿಷ್ಟವಾದ ಪ್ರಯೋಜನಗಳನ್ನು ಉಂಟುಮಾಡಿವೆ. ಸಸ್ಯಗಳ ಮಣ್ಣುರಹಿತ ಕೃಷಿಯ ಎರಡು ಪ್ರಮುಖ ಅನುಕೂಲಗಳಲ್ಲಿ ಮೊದಲನೆಯದು, ಅಧಿಕ ಇಳುವರಿ, ಹಾಗು ಎರಡನೆಯದು, ಎಲ್ಲೆಲ್ಲಿ ಭೂಮಿಯ ಮೇಲೆ ಕೃಷಿ ಮಾಡುವುದು ಸಾಧ್ಯವಿಲ್ಲವೋ ಅಲ್ಲಿ ಜಲಕೃಷಿ ಮಾಡಬಹುದು.
ಅನನುಕೂಲಗಳು
[ಬದಲಾಯಿಸಿ]ಜಲಕೃಷಿಯ ಪರಿಸ್ಥಿತಿಗಳು(ಗೊಬ್ಬರ ಹಾಗು ಅಧಿಕ ಆರ್ದ್ರತೆಯ ಉಪಸ್ಥಿತಿ) ಸಾಲ್ಮೊನೆಲ್ಲ ಬೆಳವಣಿಗೆಯನ್ನು ಪ್ರಚೋದಿಸುವ ಪರಿಸರವನ್ನು ಸೃಷ್ಟಿಸುತ್ತದೆ.[೬] ಜಲಕೃಷಿಗೆ ಸಂಬಂಧಿಸಿರುವ ಅಧಿಕ ತೇವಾಂಶದ ಮಟ್ಟಗಳಿಂದ ಉಂಟಾಗುವ ವರ್ಟಿಸಿಲ್ಲಿಯಂ ಸಸ್ಯರೋಗ ಹಾಗು ಮಣ್ಣನ್ನು ಆಧರಿಸಿದ ಸಸ್ಯಗಳಿಗೆ ಅಧಿಕವಾಗಿ ನೀರನ್ನು ಹಾಯಿಸುವುದರಿಂದ ರೋಗಕಾರಕಗಳ ಆಕ್ರಮಣವಾಗುವುದು ಕೂಡಾ ಮತ್ತೊಂದು ಅನನುಕೂಲವಾಗಿದೆ. ಅಲ್ಲದೆ, ಜಲಕೃಷಿಯ ಹಲವು ಸಸ್ಯಗಳಿಗೆ ವಿವಿಧ ಗೊಬ್ಬರಗಳು ಹಾಗು ನಿಯಂತ್ರಣ ವ್ಯವಸ್ಥೆಗಳ ಅಗತ್ಯವಿರುತ್ತದೆ[೭]
ವಿಧಾನಗಳು
[ಬದಲಾಯಿಸಿ]ಜಲಕೃಷಿಯ ಎರಡು ಪ್ರಮುಖ ವಿಧಾನಗಳೆಂದರೆ ದ್ರಾವಣ ಕೃಷಿ ಹಾಗು ಮಾಧ್ಯಮ ಕೃಷಿ. ದ್ರಾವಣ ಕೃಷಿಯಲ್ಲಿ ಸಸ್ಯದ ಬೇರುಗಳಿಗೆ ಯಾವುದೇ ಘನ ಮಾಧ್ಯಮವನ್ನು ಬಳಸಲಾಗುವುದಿಲ್ಲ, ಕೇವಲ ಪೌಷ್ಟಿಕ ದ್ರಾವಣವನ್ನು ಬಳಸಲಾಗುತ್ತದೆ. ದ್ರಾವಣ ಮಾಧ್ಯಮದ ಮೂರು ಪ್ರಮುಖ ಮಾಧ್ಯಮಗಳೆಂದರೆ, ಸ್ಥಿರ ದ್ರಾವಣ ಕೃಷಿ, ನಿರಂತರ ಹರಿಯುವ ದ್ರಾವಣ ಕೃಷಿ ಹಾಗು ಏರೋಪೋನಿಕ್ಸ್. ಮಾಧ್ಯಮ ಕೃಷಿಯು ಸಸ್ಯದ ಬೇರುಗಳಿಗೆ ಘನ ಮಾಧ್ಯಮದ ವಿಧಾನವನ್ನು ಬಳಸುತ್ತವೆ. ಇದನ್ನು ಮಾಧ್ಯಮದ ಮಾದರಿಗೆ ಹೆಸರಿಸಲಾಗಿದೆ, ಉದಾಹರಣೆಗೆ ಮರಳು ಕೃಷಿ, ಜಲ್ಲಿ ಹರವು ಕೃಷಿ ಅಥವಾ ಕಲ್ಲುಉಣ್ಣೆ (ಸಣ್ಣ-ಹಗುರ ಎಳೆಗಳುಳ್ಳ ವಸ್ತು,ಇನ್ಸುಲೇಟರ್ )ಕೃಷಿ. ಪ್ರತಿ ಮಾಧ್ಯಮದಲ್ಲಿ ಎರಡು ಪ್ರಮುಖ ವ್ಯತ್ಯಾಸಗಳಿವೆ, ಉಪನೀರಾವರಿ ಹಾಗು ಮೇಲ್ಭಾಗದ ನೀರಾವರಿ. ಎಲ್ಲ ವಿಧಾನಗಳಿಗೆ, ಜಲಕೃಷಿಯ ಹೆಚ್ಚಿನ ದ್ರವಾಶಯಗಳನ್ನು ಇತ್ತೀಚಿಗೆ ಪ್ಲ್ಯಾಸ್ಟಿಕ್ ನಲ್ಲಿ ನಿರ್ಮಿಸಲಾಗುತ್ತದೆ. ಆದರೆ ಇತರ ಪದಾರ್ಥಗಳನ್ನೂ ಸಹ ಬಳಸಲಾಗುತ್ತದೆ, ಇದರಲ್ಲಿ ಜಲ್ಲಿಗಾರೆಯ, ಗಾಜಿನ, ಲೋಹದ, ತರಕಾರಿ ಘನಗಳ ಹಾಗು ಮರದ ದ್ರವಾಶಯಗಳೂ ಸೇರಿವೆ. ಧಾರಕಗಳು, ಪೌಷ್ಟಿಕ ದ್ರಾವಣದಲ್ಲಿ ಪಾಚಿ ಬೆಳವಣಿಗೆಯಾಗುವುದನ್ನು ತಡೆಗಟ್ಟಲು ಬೆಳಕನ್ನು ವರ್ಜಿಸಬೇಕು.
ಸ್ಥಿರ ದ್ರಾವಣ ಕೃಷಿ
[ಬದಲಾಯಿಸಿ]ಸ್ಥಿರ ದ್ರಾವಣ ಕೃಷಿಯಲ್ಲಿ, ಸಸ್ಯಗಳು ಪೌಷ್ಟಿಕ ದ್ರಾವಣದ ಧಾರಕಗಳಲ್ಲಿ ಬೆಳೆಯುತ್ತವೆ, ಉದಾಹರಣೆಗೆ ಗಾಜಿನ ಮೇಸನ್ ಭರಣಿಗಳು(ಮಾದರಿಯಾಗಿ ಮನೆಗಳಲ್ಲಿ ಬಳಕೆಯಾಗುತ್ತವೆ), ಪ್ಲ್ಯಾಸ್ಟಿಕ್ ಬಕೆಟ್ ಗಳು, ಟಬ್ಬುಗಳು ಅಥವಾ ತೊಟ್ಟಿಗಳು. ದ್ರಾವಣವನ್ನು ಸಾಮಾನ್ಯವಾಗಿ ಸೌಮ್ಯ ಮಟ್ಟದ ಗಾಳಿಗೊಡ್ಡಲಾಗುತ್ತದೆ. ಆದರೆ ಅವುಗಳನ್ನು ಗಾಳಿಗೊಡ್ಡದೆಯೂ ಸಹ ಇರಬಹುದು. ಗಾಳಿಗೊಡ್ಡದಿದ್ದರೆ, ದ್ರಾವಣದ ಮಟ್ಟವನ್ನು ಕಡಿಮೆ ಮಾಡಲಾಗುತ್ತದೆ, ಇದರಿಂದ ದ್ರಾವಣದ ಮೇಲಿರುವ ಬೇರುಗಳು ಸಾಕಷ್ಟು ಆಮ್ಲಜನಕವನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಸಸ್ಯಕ್ಕೆ ದ್ರವಾಶಯದ ಮುಚ್ಚಳದಲ್ಲಿ ಒಂದು ರಂಧ್ರವನ್ನು ಕೊರೆಯಲಾಗುತ್ತದೆ. ಪ್ರತಿ ದ್ರವಾಶಯದಲ್ಲಿ ಒಂದರಿಂದ ಹಿಡಿದು ಹಲವು ಸಸ್ಯಗಳಿರಬಹುದು. ಸಸ್ಯದ ಗಾತ್ರವು ಅಧಿಕವಾಗುತ್ತಿದ್ದಂತೆ ದ್ರವಾಶಯದ ಗಾತ್ರವೂ ಸಹ ದೊಡ್ಡದಾಗಬಹುದು. ಈ ವ್ಯವಸ್ಥೆಯನ್ನು ಮನೆಯಲ್ಲಿ, ಪ್ಲ್ಯಾಸ್ಟಿಕ್ ಆಹಾರ ಧಾರಕಗಳಿಂದ ಅಥವಾ ಗಾಜಿನ ಡಬ್ಬಿಗಳಿಂದ ನಿರ್ಮಿಸಬಹುದು, ಜೊತೆಗೆ ಅಕ್ವೇರಿಯಂ ಪಂಪ್, ಅಕ್ವೇರಿಯಂ ವಾಯುನಾಳ ಕೊಳವೆಗಳು ಹಾಗು ಅಕ್ವೇರಿಯಂ ಕವಾಟಗಳಿಂದ ಇವುಗಳನ್ನು ಗಾಳಿಗೊಡ್ಡಬಹುದು. ಶುಭ್ರವಾದ ಧಾರಕಗಳನ್ನು ಅಲ್ಯೂಮಿನಿಯಂ ರೇಕು, ವೃತ್ತ ಪತ್ರಿಕೆ, ಕಪ್ಪು ಪ್ಲ್ಯಾಸ್ಟಿಕ್ ಅಥವಾ ಇತರ ಪದಾರ್ಥಗಳಿಂದ ಬೆಳಕನ್ನು ತಡೆಗಟ್ಟಲು ಬಳಸಬಹುದು, ಈ ವಿಧಾನಗಳು ಪಾಚಿ ಕಟ್ಟುವುದನ್ನು ತಡೆಗಟ್ಟವಲ್ಲಿ ಸಹಕಾರಿಯಾಗಿದೆ. ಪೌಷ್ಟಿಕ ದ್ರಾವಣವನ್ನು ಕ್ರಮಾನುಗತವಾಗಿ ಬದಲಾವಣೆ ಮಾಡಲಾಗುತ್ತದೆ, ಉದಾಹರಣೆಗೆ ವಾರಕ್ಕೊಮ್ಮೆ, ಅಥವಾ ಒಂದು ವಿದ್ಯುತ್ ವಾಹಕತೆ ಮಾಪಕವು ನಿರ್ಧರಿಸುವ ನಿರ್ದಿಷ್ಟ ಮಟ್ಟಕ್ಕಿಂತ ಸಾರೀಕರಣವು ಕಡಿಮೆಯಾದರೆ ಬದಲಾವಣೆ ಮಾಡಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ದ್ರಾವಣವು ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಿದ್ದರೆ, ನೀರು ಅಥವಾ ತಾಜಾ ಪೌಷ್ಟಿಕ ದ್ರಾವಣವನ್ನು ಸೇರಿಸಲಾಗುತ್ತದೆ, ದ್ರಾವಣದ ಮಟ್ಟವನ್ನು ಕಾಯ್ದುಕೊಳ್ಳಲು ಒಂದು ಮಾರಿಯೊಟ್ಟೆ ಬಾಟಲ್, ಅಥವಾ ಒಂದು ಪ್ಲಾವಕ ಕವಾಟವನ್ನು ಸ್ವಯಂಚಾಲಿತವಾಗಿ ಬಳಕೆ ಮಾಡಬಹುದು. ಬೃಹತ್ ದ್ರಾವಣ ಕೃಷಿಯಲ್ಲಿ, ಪೌಷ್ಟಿಕ ದ್ರಾವಣದ ಮೇಲ್ಮೈಯಲ್ಲಿ ತೇಲಾಡುವ ಪ್ಲಾವಕಶೀಲ ಪ್ಲ್ಯಾಸ್ಟಿಕ್ ಹಾಳೆಯ ಮೇಲೆ ಸಸ್ಯಗಳನ್ನು ಇರಿಸಲಾಗುತ್ತದೆ. ಈ ಮಾದರಿಯಾಗಿ, ದ್ರಾವಣದ ಮಟ್ಟವು ಬೇರುಗಳಿಗಿಂತ ಕಡಿಮೆ ಮಟ್ಟದಲ್ಲಿ ಇರಲಾರವು.
ನಿರಂತರವಾಗಿ ಹರಿಯುವ ದ್ರಾವಣ ಕೃಷಿ
[ಬದಲಾಯಿಸಿ]ನಿರಂತರವಾಗಿ ಹರಿಯುವ ದ್ರಾವಣ ಕೃಷಿಯಲ್ಲಿ, ಪೌಷ್ಟಿಕ ದ್ರಾವಣವು ನಿರಂತರವಾಗಿ ಬೇರುಗಳನ್ನು ಮೀರಿ ಹರಿಯುತ್ತವೆ. ಇದು ಸ್ಥಿರ ದ್ರಾವಣ ಕೃಷಿಗಿಂತ ಸ್ವಯಂಚಾಲನೆಗೊಳಿಸುವುದು ಹೆಚ್ಚು ಸುಲಭ, ಏಕೆಂದರೆ ತಾಪಮಾನಕ್ಕೆ ಅನುಗುಣವಾಗಿ ಮಾದರಿ ಸಂಗ್ರಹ ಹಾಗು ಹೊಂದಾಣಿಕೆಗಳು ಹಾಗು ಪೌಷ್ಟಿಕಗಳ ಸಾರಿಕರಣಗಳನ್ನು ದೊಡ್ಡ ಸಂಗ್ರಹ ತೊಟ್ಟಿಯಲ್ಲಿ ಮಾಡಲಾಗುತ್ತದೆ, ಇದು ಸಾವಿರಾರು ಸಸ್ಯಗಳಿಗೆ ಅಗತ್ಯತೆ ಪೂರೈಸುವ ಸಾಮರ್ಥ್ಯ ಹೊಂದಿದೆ. ಒಂದು ಜನಪ್ರಿಯವಾದ ಬದಲಾವಣೆಯೆಂದರೆ ಪೌಷ್ಟಿಕ ಪದರ ವಿಧಾನ ಅಥವಾ NFT, ಇದರಲ್ಲಿ ಸಸ್ಯದ ಬೆಳವಣಿಗೆಗೆ ಅಗತ್ಯವಾದ ಎಲ್ಲ ದ್ರವೀಕೃತ ಪೌಷ್ಟಿಕಗಳನ್ನು ಒಳಗೊಂಡ ನೀರಿನ ಒಂದು ಬಹಳ ಆಳವಿಲ್ಲದ ಝರಿಯು ಹರಿಯುತ್ತದೆ. ಇದು ಜಲನಿರೋಧಕ, ದಪ್ಪನಾದ ಬೇರಿನ ಹಾಸಿನಲ್ಲಿ ಸಸ್ಯರಹಿತ ಬೇರುಗಳಿಂದ ಆಚೆಗೂ ಮರುಪರಿಚಲಿಸುತ್ತದೆ, ಇದು ನೀರು ಹರಿವಿನ ತಳಭಾಗದಲ್ಲಿ ಬೆಳವಣಿಗೆಯಾಗುತ್ತದೆ, ಇದು ಮೇಲ್ಮುಖ ಮೇಲ್ಮೈ ಹೊಂದಿರುತ್ತದೆ, ಇದು ಆರ್ದ್ರತೆಯನ್ನು ಹೊಂದಿದ್ದರೂ, ಗಾಳಿಯಲ್ಲಿರುತ್ತದೆ. ತರುವಾಯ, ಸಸ್ಯದ ಬೇರುಗಳಿಗೆ ಸಾಕಷ್ಟು ಪ್ರಮಾಣದ ಆಮ್ಲಜನಕದ ಸರಬರಾಜಾಗುತ್ತದೆ. ಸರಿಯಾಗಿ ವಿನ್ಯಾಸಗೊಳಿಸಿದ NFT ವ್ಯವಸ್ಥೆಯು ಸರಿಯಾದ ಹರಿವಿನ ವಾಟ, ಸರಿಯಾದ ಹರಿವಿನ ಪ್ರಮಾಣ ಹಾಗು ಸರಿಯಾದ ಹರಿವಿನ ಉದ್ದಳತೆಯ ಬಳಕೆಯನ್ನು ಅವಲಂಬಿಸಿರುತ್ತದೆ. ಜಲಕೃಷಿಯ ಇತರ ವಿಧಾನಗಳಿಗಿಂತ NFT ವ್ಯವಸ್ಥೆಯ ಒಂದು ಪ್ರಮುಖ ಪ್ರಯೋಜನವೆಂದರೆ, ಸಸ್ಯದ ಬೇರುಗಳಿಗೆ ಸಾಕಷ್ಟು ಪ್ರಮಾಣದ ನೀರು, ಆಮ್ಲಜನಕ ಹಾಗು ಪೌಷ್ಟಿಕಗಳ ಸರಬರಾಜಾಗುತ್ತವೆ. ಉತ್ಪಾದನೆಯ ಇತರ ಎಲ್ಲ ವಿಧಾನಗಳಲ್ಲಿ, ಈ ಅಗತ್ಯಗಳ ಸರಬರಾಜಿನ ನಡುವೆ ಘರ್ಷಣೆಗಳಿರುತ್ತವೆ, ಏಕೆಂದರೆ ಇವುಗಳಲ್ಲಿ ಒಂದರ ಅಧಿಕ ಅಥವಾ ಕಡಿಮೆ ಪ್ರಮಾಣವು ಮತ್ತೊಂದರ ಅಥವಾ ಇತರ ಎರಡು ಅಂಶಗಳಲ್ಲಿ ಅಸಮತೋಲನವನ್ನು ಉಂಟು ಮಾಡುತ್ತದೆ. ತನ್ನ ವಿನ್ಯಾಸದಿಂದಾಗಿ, NFTಯು, ಸಸ್ಯದ ಆರೋಗ್ಯಕರ ಅಭಿವೃದ್ಧಿಗೆ ಏಕಕಾಲಿಕವಾಗಿ ಬೇಕಾದ ಎಲ್ಲ ಮೂರು ಅಗತ್ಯಗಳನ್ನು ಒದಗಿಸುತ್ತದೆ, NFT ಒದಗಿಸುವ ಸರಳ ಅಂಶವನ್ನು ಸದಾಕಾಲ ನೆನಪಿಟ್ಟು ದಾಖಲಿಸಿ ಅಭ್ಯಸಿಸಲಾಗುತ್ತದೆ. ಈ ಪ್ರಯೋಜನಗಳ ಪರಿಣಾಮವೆಂದರೆ ಉತ್ಕೃಷ್ಟ ಮಟ್ಟದ ಅಧಿಕ ಇಳುವರಿಯನ್ನು ಬೆಳೆ ಬೆಳೆದ ಒಂದು ವ್ಯಾಪಕ ಅವಧಿಯ ನಂತರವೂ ಪಡೆಯಬಹುದು. NFTಯ ಒಂದು ಅನನುಕೂಲವೆಂದರೆ, ಹರಿವಿನಲ್ಲಿರುವ ಹಸ್ತಕ್ಷೇಪಕ್ಕೆ ವಿರುದ್ಧವಾಗಿ ಬಹಳ ಕಡಿಮೆ ಪ್ರಮಾಣದ ಸಂಘಟ್ಟನ ರೋಧಕವನ್ನು ಹೊಂದಿರುವುದು. ಉದಾಹರಣೆಗೆ ಶಕ್ತಿಯ ನಿಲುಗಡೆ, ಆದರೆ ಒಟ್ಟಾರೆಯಾಗಿ ಹೇಳುವುದಾದರೆ, ಬಹುಶಃ ಇದೊಂದು ಅಧಿಕ ಉತ್ಪಾದಕ ಮಾದರಿಗಳಲ್ಲಿ ಒಂದೆನಿಸಿದೆ.
ಇದೇ ಮಾದರಿಯ ವಿನ್ಯಾಸಗಳು ಎಲ್ಲ ಸಾಂಪ್ರದಾಯಿಕ NFT ವ್ಯವಸ್ಥೆಗಳಿಗೆ ಅನ್ವಯವಾಗುತ್ತವೆ. ಈ ನಡುವೆ ಹರಿವಿನೊಂದಿಗೆ 1:100 ಅನುಪಾತದ ವಾಟಗಳಿಗೆ ಸಲಹೆ ನೀಡಲಾಗಿದೆ, ವಾಸ್ತವವಾಗಿ, ಸ್ಥಳೀಯ ತಗ್ಗಿದ ಪ್ರದೇಶಗಳಲ್ಲಿ ತಡೆ ಕಟ್ಟದೆ ಪೌಷ್ಟಿಕ ಪದರಗಳಿಗೆ ಸಮರ್ಥವಾದ ಹರಿವಿನ ತಳಭಾಗವನ್ನು ನಿರ್ಮಿಸುವುದು ಬಹಳ ಕಷ್ಟಕರ. ಪರಿಣಾಮವಾಗಿ, 1:30 ರಿಂದ 1:40ರ ಹರಿವಿನ ವಾಟಗಳನ್ನು ಬಳಸಲು ಸೂಚಿಸಲಾಗುತ್ತದೆ. ಇದು ಮೇಲ್ಮೈಯಲ್ಲಿ ಅಲ್ಪ ಪ್ರಮಾಣದ ಅವ್ಯವಸ್ಥೆಗೆ ಕಾರಣವಾಗುತ್ತದೆ, ಆದರೆ ಈ ಹರಿವಿನೊಂದಿಗೆ, ತಡೆಗಟ್ಟುವಿಕೆ ಹಾಗು ನೀರು ನಿಲ್ಲುವುದೂ ಸಹ ಉಂಟಾಗಬಹುದು. ನೀರಿನ ಹರಿವನ್ನು ನೆಲ, ಅಥವಾ ಬೆಂಚು ಅಥವಾ ಪತ್ತಿಗೆಗಳು ನಿರೋಧಿಸಬಹುದು. ಇದಕ್ಕೆ ಅಗತ್ಯವಾದ ಹರಿವನ್ನು ಒದಗಿಸಬಹುದು. ಎರಡೂ ವಿಧಾನಗಳು ಸ್ಥಳೀಯ ಅಗತ್ಯಗಳ ಮೇಲೆ ಬಳಕೆಯಾಗುವುದರ ಜೊತೆಗೆ ಅವಲಂಬಿತವಾಗಿದೆ, ಸಾಮಾನ್ಯವಾಗಿ ಇದು,ಸ್ಥಳ ಹಾಗು ಬೆಳೆಯ ಅಗತ್ಯಗಳಿಂದ ನಿರ್ಧಾರಿತವಾಗುತ್ತದೆ.
ಒಂದು ಸಾಧಾರಣ ಮಾರ್ಗಸೂಚಿಯ ಪ್ರಕಾರ, ಪ್ರತಿ ಕಾಲುವೆಯ ಹರಿವಿನ ಪ್ರಮಾಣವು ಪ್ರತಿ ನಿಮಿಷಕ್ಕೆ ಒಂದು ಲೀಟರ್ ನಂತಿರಬೇಕು. ಸಸ್ಯಗಳನ್ನು ನೆಡುವಾಗಿ, ಇದರ ಪ್ರಮಾಣವು ಅರ್ಧದಷ್ಟಿರಬಹುದು. ಅಲ್ಲದೇ ಗರಿಷ್ಟ ಮಿತಿಯೆಂದರೆ ಪ್ರತಿ ನಿಮಿಷಕ್ಕೆ ಎರಡು ಲೀಟರ್ ಗಳು. ಇದಕ್ಕಿಂತ ಹೆಚ್ಚಿನ ಹರಿವಿನ ಪ್ರಮಾಣವು ಸಾಮಾನ್ಯವಾಗಿ ಪೌಷ್ಟಿಕತೆಯ ಸಮಸ್ಯೆಗಳೊಂದಿಗೆ ಸಂಬಂಧಿಸಿವೆ. ಕಾಲುವೆಗಳು 12 ಮೀಟರ್ ಉದ್ದಕ್ಕಿಂತ ಜಾಸ್ತಿಯಿದ್ದರೆ ಹಲವು ಬೆಳೆಗಳು ಕುಗ್ಗಿದ ಬೆಳವಣಿಗೆ ಪ್ರಮಾಣವನ್ನು ಹೊಂದಿರುತ್ತವೆಂದು ಗಮನಿಸಲಾಗಿದೆ. ಶೀಘ್ರವಾಗಿ ಬೆಳೆಯುವ ಬೆಳೆಗಳ ಮೇಲೆ ನಡೆಸಲಾದ ಪರೀಕ್ಷೆಗಳು, ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕದ ಮಟ್ಟಗಳು ಹಾಗೇ ಉಳಿಯುತ್ತವೆ,ಕಾಲುವೆಯ ಉದ್ದದ ಮೇಲೆ ಸಾರಜನಕವು ಖಾಲಿಯಾಗಬಹುದು. ಇದರ ಪರಿಣಾಮವಾಗಿ, ಕಾಲುವೆಯ ಉದ್ದವು 10-15 ಮೀಟರ್ ಗಿಂತ ಜಾಸ್ತಿ ಇರಬಾರದು. ಇದು ಸಾಧ್ಯವಾಗದಂತಹ ಪರಿಸ್ಥಿತಿಗಳಲ್ಲಿ, ಕಾಲುವೆಯ ಅರ್ಧದವರೆಗೆ ಮತ್ತೊಂದು ಪೌಷ್ಟಿಕವನ್ನು ಹಾಕುವುದರ ಜೊತೆಗೆ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುವುದನ್ನು ತಡೆಗಟ್ಟಬಹುದು. ಅಲ್ಲದೇ ಪ್ರತಿ ಹೊರದಾರಿಯ ಮೂಲಕ ನಿಮಿಷಕ್ಕೆ ಒಂದು ಲೀಟರ್ ನಂತೆ ಹರಿವಿನ ಪ್ರಮಾಣವನ್ನು ತಗ್ಗಿಸಬಹುದು.
ಏರೋಪೋನಿಕ್ಸ್
[ಬದಲಾಯಿಸಿ]ಏರೋಪೋನಿಕ್ಸ್ ಎಂಬ ವ್ಯವಸ್ಥೆಯಲ್ಲಿ ಪೌಷ್ಟಿಕ ದ್ರಾವಣದ ಉತ್ತಮ ಹನಿಯೊಂದಿಗೆ(ಮಂಜು ಅಥವಾ ವಾಯುಕಲಿಲ) ಸಂಪೂರಿತವಾದ ಪರಿಸ್ಥಿತಿಯಲ್ಲಿ ಬೇರುಗಳನ್ನು ನಿರಂತರವಾಗಿ ಅಥವಾ ಸ್ಥಗಿತವಾಗಿ ಇಡಲಾಗುತ್ತದೆ. ಈ ವಿಧಾನದಲ್ಲಿ ಯಾವುದೇ ಸೂಕ್ಷ್ಮ ಜೀವಿಯ ಆಧಾರ ಅಗತ್ಯವಿರುವುದಿಲ್ಲ. ಜೊತೆಗೆ ಮಂದ್ರವಾದ ಗಾಳಿಯಲ್ಲಿ ತಮ್ಮ ಬೇರುಗಳೊಂದಿಗೆ ಸಸ್ಯಗಳು ತೇಲಾಡುವಿಕೆಗೆ ಒಳಪಡುತ್ತವೆ; ಅಥವಾ ಬೇರುಗಳೊಂದಿಗೆ ಬೆಳವಣಿಗೆಯ ಕೋಶವು ಪರಿಮಾಣೀಕರಿತವಾದ ಪೌಷ್ಟಿಕಗಳ ಉತ್ತಮ ಮಂಜಿನೊಂದಿಗೆ ಆವರ್ತಕವಾಗಿ ತೇವಗೊಳ್ಳುತ್ತದೆ. ಏರೋಪೋನಿಕ್ಸ್ ನ ಪ್ರಮುಖ ಅನುಕೂಲವೆಂದರೆ ಅತ್ಯುತ್ತಮವಾಗಿ ಗಾಳಿಗೊಡ್ಡಿಕೊಳ್ಳುವುದು.
ಏರೋಪೋನಿಕ್ ವಿಧಾನವು ನೈಸರ್ಗಿಕ ಪುನರುತ್ಪತ್ತಿಗೆ, ಬೀಜದ ಅಂಕುರಣಕ್ಕೆ, ಆಲೂಗೆಡ್ಡೆ ಬೀಜ ಉತ್ಪನ್ನಕ್ಕೆ, ಟೋಮೋಟೋ ಇಳುವರಿಗೆ, ಎಲೆಗಳುಳ್ಳ ಬೀಜಗಳಿಗೆ ಹಾಗು ಸಣ್ಣ-ಸೊಪ್ಪುಗಳಿಗೆ ವಾಣಿಜ್ಯಕವಾಗಿ ಯಶಸ್ವಿಯಾದುದೆಂದು ಪ್ರಮಾಣಿತವಾಗಿದೆ.[೮] 1983ರಲ್ಲಿ, ಸಂಶೋಧಕ ರಿಚರ್ಡ್ ಸ್ಟೋನರ್ ಏರೋಪೋನಿಕ್ ವಿಧಾನಕ್ಕೆ ವ್ಯಾಪಾರದ ಸ್ವರೂಪ ನೀಡಿದಾಗ, ಏರೋಪೋನಿಕ್ಸ್ ಅನ್ನು ವಿಶ್ವವ್ಯಾಪಿಯಾಗಿ ನೀರಿನ ತೀವ್ರತೆಯುಳ್ಳ ಜಲಕೃಷಿ ವ್ಯವಸ್ಥೆಯ ಒಂದು ಪರ್ಯಾಯವಾಗಿ ಬಳಕೆಗೆ ತರಲಾಯಿತು.[೯] ಜಲಕೃಷಿಯ ಒಂದು ಸೀಮಿತತೆ ಎಂದರೆ ಒಂದು ಕೆಜಿ ನೀರು ಕೇವಲ ಎಂಟು ಮಿಲಿಗ್ರಾಂಗಳಷ್ಟು ಗಾಳಿಯನ್ನು ಹಿಡಿದಿಟ್ಟುಕೊಳ್ಳಬಹುದು, ಇದರಲ್ಲಿ ಗಾಳಿಗೊಡ್ಡಿರುವುದು ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದು ಇಲ್ಲಿ ಪರಿಗಣಿತವಾಗುವುದಿಲ್ಲ.
ಜಲಕೃಷಿಗೆ ಹೋಲಿಸಿದರೆ ಏರೋಪೋನಿಕ್ಸ್ ನ ಮತ್ತೊಂದು ವಿಶಿಷ್ಟ ಪ್ರಯೋಜನವೆಂದರೆ, ಸಸ್ಯದ ಯಾವುದೇ ಜಾತಿಯನ್ನು ನಿಜವಾದ ಏರೋಪೋನಿಕ್ ವ್ಯವಸ್ಥೆಯಲ್ಲಿ ಬೆಳೆಯಬಹುದು; ಏಕೆಂದರೆ ಏರೋಪೋನಿಕ್ ನ ಸಣ್ಣ ಪರಿಸರವನ್ನು ವ್ಯವಸ್ಥಿತವಾಗಿ ನಿಯಂತ್ರಿಸಬಹುದು. ಜಲಕೃಷಿಯ ಪರಿಮಿತಿಯೆಂದರೆ ನಿರ್ದಿಷ್ಟವಾದ ಕೆಲವು ಜಾತಿಯ ಸಸ್ಯಗಳು ಮಾತ್ರ ನೀರಿನಲ್ಲಿರುವಷ್ಟು ಕಾಲ, ನೀರು ನಿಲ್ಲುವ ಮುಂಚೆಯವರೆಗೂ ಉಳಿಯಬಹುದು. ಏರೋಪೋನಿಕ್ಸ್ ನ ಪ್ರಯೋಜನವೆಂದರೆ, ತೇಲಾಡುವ ಏರೋಪೋನಿಕ್ ಸಸ್ಯಗಳು ಬೇರಿನ ವಲಯ, ಕಾಂಡಗಳು ಹಾಗು ಎಲೆಗಳಿಗೆ ಲಭ್ಯವಿರುವ ಆಮ್ಲಜನಕ ಹಾಗು ಇಂಗಾಲದ ಡೈ ಆಕ್ಸೈಡ್ ನಲ್ಲಿ 100%ನಷ್ಟು ಪಡೆದುಕೊಳ್ಳುತ್ತವೆ,[೧೦] ಈ ರೀತಿಯಾಗಿ ಜೀವರಾಶಿಯ ಬೆಳವಣಿಗೆಯನ್ನು ತ್ವರಿತಗೊಳಿಸಿ,ಬೇರು ಬಿಡುವ ಅವಧಿಯನ್ನು ತಗ್ಗಿಸುತ್ತವೆ. NASA ಸಂಶೋಧನೆಯು, ಜಲಕೃಷಿಯ ವಿಧಾನದಿಂದ ಬೆಳೆಯದಾದ ಸಸ್ಯಗಳಿಗೆ ಹೋಲಿಸಿದರೆ ಒಣಗಿದ, ಹಗುರ ತೂಕದ ಜೀವರಾಶಿಗಳು(ಅಗತ್ಯ ಖನಿಜಗಳು) 80% ಅಧಿಕವಾಗಿರುತ್ತದೆಂದು ತೋರಿಸಿದೆ. ಏರೋಪೋನಿಕ್ಸ್, ಜಲಕೃಷಿಗಿಂತ 65%ನಷ್ಟು ಕಡಿಮೆ ನೀರನ್ನು ಬಳಕೆಮಾಡಿಕೊಳ್ಳುತ್ತದೆ. ಜಲಕೃಷಿಗೆ ಹೋಲಿಸಿದರೆ, ಏರೋಪೋನಿಕ್ ಆಗಿ ಬೆಳೆದ ಸಸ್ಯಗಳಿಗೆ ¼ದಷ್ಟು ಪೌಷ್ಟಿಕದ ಅಗತ್ಯವಿದೆಯೆಂದೂ ಸಹ NASA ತೀರ್ಮಾನಕ್ಕೆ ಬಂದಿದೆ. ಜಲಕೃಷಿ ವಿಧಾನದಲ್ಲಿ ಬೆಳೆದ ಸಸ್ಯಗಳಿಗಿಂತ ಭಿನ್ನವಾಗಿ, ಏರೋಪೋನಿಕ್ ವಿಧಾನದಲ್ಲಿ ಬೆಳೆದ ಸಸ್ಯಗಳು, ಮಣ್ಣಿನಲ್ಲಿ ನೆಟ್ಟಾಗ ಕಸಿ ಪರಿಣಾಮವನ್ನು ಎದುರಿಸುವುದಿಲ್ಲ, ಜೊತೆಗೆ ಬೆಳೆಗಾರರಿಗೆ ರೋಗ ಹಾಗು ರೋಗಕಾರಕಗಳ ಹರಡುವಿಕೆಯನ್ನು ತಗ್ಗಿಸುವ ಸಾಮರ್ಥ್ಯ ಒದಗಿಸುತ್ತದೆ.[೧೧] ಏರೋಪೋನಿಕ್ಸ್ ನ್ನು ಸಸ್ಯ ವಿಜ್ಞಾನ ಹಾಗು ಸಸ್ಯ ರೋಗಶಾಸ್ತ್ರದ ಪ್ರಯೋಗಾತ್ಮಕ ಅಧ್ಯಯನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಏರೋಪೋನಿಕ್ ವಿಧಾನಗಳಿಗೆ NASA ವಿಶೇಷವಾದ ಗಮನ ನೀಡಿದೆ, ಏಕೆಂದರೆ ಶೂನ್ಯ ಗುರುತ್ವಾಕರ್ಷಣ ಪರಿಸರದಲ್ಲಿ ದ್ರವವನ್ನು ನಿರ್ವಹಿಸುವುದಕ್ಕಿಂತ ಮಂಜಿನ ನಿರ್ವಹಣೆ ಸುಲಭವಾಗುತ್ತದೆ.
ಅಪ್ರವರ್ತಕ ಉಪನೀರಾವರಿ
[ಬದಲಾಯಿಸಿ]ಅಪ್ರವರ್ತಕ ಉಪನೀರಾವರಿಯನ್ನು, ಅಪ್ರವರ್ತಕ ಜಲಕೃಷಿ ಅಥವಾ ಅರೆ-ಜಲಕೃಷಿ ಎಂದು ಕರೆಯಲಾಗುತ್ತದೆ, ಈ ವಿಧಾನದಲ್ಲಿ ಸಸ್ಯಗಳು ಒಂದು ಅಕ್ರಿಯ(ಮಂದಗತಿಯ) ಸರಂಧ್ರ ಮಾಧ್ಯಮದಲ್ಲಿ ಬೆಳೆಯುತ್ತವೆ. ಇವುಗಳು ಅಗತ್ಯವಿರುವಷ್ಟು ಒಂದು ಪ್ರತ್ಯೇಕ ದ್ರವಾಶಯದಿಂದ ಲೋಮಧಮನಿಯ ಕ್ರಿಯೆಯ ಮೂಲಕ ಬೇರುಗಳಿಗೆ ನೀರು ಹಾಗು ಗೊಬ್ಬರವನ್ನು ವರ್ಗಾವಣೆ ಮಾಡುತ್ತವೆ, ಇದು ಶ್ರಮ ಕಡಿಮೆ ಮಾಡಿ, ಬೇರುಗಳಿಗೆ ಸತತವಾಗಿ ನೀರಿನ ಸರಬರಾಜು ಮಾಡುತ್ತದೆ. ಸರಳ ವಿಧಾನದಲ್ಲಿ, ಮಡಕೆಯು ಗೊಬ್ಬರದ ಒಂದು ಅಲ್ಪ ದ್ರಾವಣದಲ್ಲಿ ಕೂರುತ್ತದೆ. ಜೊತೆಗೆ ನೀರು ಅಥವಾ ಪೌಷ್ಟಿಕ ದ್ರಾವಣದೊಂದಿಗೆ ಕೋಶಹಾಸಿನ ಮೇಲೆ ಸಂಪೂರ್ಣವಾಗುತ್ತದೆ. ಜಲಕೃಷಿಯ ಹಲವಾರು ಮಾಧ್ಯಮಗಳು ಇಂದು ಲಭ್ಯವಿವೆ, ಉದಾಹರಣೆಗೆ ವರ್ಧಿತ ಜೇಡಿಮಣ್ಣು ಹಾಗು ತೆಂಗಿನ ಸಿಪ್ಪೆ, ಇವುಗಳು ಸಾಂಪ್ರದಾಯಿಕವಾದ ಮಡಕೆಯ ಮಿಶ್ರಣಗಳಿಗಿಂತ ಅಧಿಕ ಗಾಳಿಯ ವಿಸ್ತಾರವನ್ನು ಹೊಂದಿರುತ್ತವೆ, ಬೇರುಗಳಿಗೆ ಅಧಿಕ ಆಮ್ಲಜನಕ ಒದಗಿಸುತ್ತವೆ, ಇದು ಆರ್ಕಿಡ್ ಗಳು ಹಾಗು ಬ್ರೋಮೆಲಿಯಾಡ್ ಗಳಂತಹ ಅಧಿಸಸ್ಯಕಗಳಿಗೆ ಬಹಳ ಪ್ರಮುಖವಾಗುತ್ತದೆ. ಇವುಗಳ ಬೇರುಗಳು ನೈಸರ್ಗಿಕವಾಗಿ ಗಾಳಿಗೆ ತೆರೆದುಕೊಳ್ಳುತ್ತದೆ. ಅಪ್ರವರ್ತಕ ಜಲಕೃಷಿಯ ಮತ್ತಷ್ಟು ಪ್ರಯೋಜನವೆಂದರೆ ಬೇರು ಕೊಳೆಯುವಿಕೆಯು ಕಡಿಮೆಯಾಗುತ್ತದೆ. ಅಲ್ಲದೇ ಆವಿಯ ಮೂಲಕ ಅಧಿಕ ಪರಿವೇಷ್ಟಕ ಆರ್ದ್ರತೆಯನ್ನು ಒದಗಿಸುತ್ತದೆ.
ಉಬ್ಬರವಿಳಿತ / ಉಬ್ಬರ ಹಾಗು ಬರಿದಾದ ಉಪನೀರಾವರಿ
[ಬದಲಾಯಿಸಿ]ಸರಳವಾದ ರೂಪದಲ್ಲಿ ಹೇಳುವುದಾದರೆ, ಪೌಷ್ಟಿಕ ದ್ರಾವಣದ ದ್ರವಾಶಯದ ಮೇಲ್ಭಾಗದಲ್ಲಿ ತಟ್ಟೆಗಳಿರುತ್ತವೆ. ತಟ್ಟೆಯಲ್ಲಿ ಬೆಳವಣಿಗೆಯ ಮಾಧ್ಯಮ(ಜೇಡಿಮಣ್ಣಿನ ಸಣ್ಣಕಣ ಬಹಳ ಸಾಮಾನ್ಯವಾದುದು) ಹಾಗು ನೇರವಾಗಿ ನೆಡಲಾಗುತ್ತದೆ, ಅಥವಾ ತಟ್ಟೆಯಲ್ಲಿರುವ ಮಧ್ಯಮ ಗಾತ್ರದ ಮಡಕೆಗಳು. ನಿಯಮಿತವಾದ ಅಂತರಗಳಲ್ಲಿ, ಒಂದು ಸರಳವಾದ ಕಾಲಮಾಪಕವು, ಮೇಲ್ಭಾಗದ ತಟ್ಟೆಗೆ ಪೌಷ್ಟಿಕ ದ್ರಾವಣವನ್ನು ಪಂಪ್ ಮೂಲಕ ತುಂಬಿಸಲು ಕಾರಣವಾಗುತ್ತದೆ, ಇದರ ನಂತರ ದ್ರಾವಣವು ದ್ರವಾಶಯವನ್ನು ಬರಿದುಮಾಡುತ್ತದೆ. ಇದು ಮಾಧ್ಯಮವನ್ನು ಪೌಷ್ಟಿಕಗಳು ಹಾಗು ಗಾಳಿಯೊಂದಿಗೆ ನಿಯಮಿತವಾಗಿ ನಿರ್ಮಲಗೊಳಿಸಲು ಸಾಧ್ಯವಾಗುತ್ತದೆ. ನಿರಾರ್ದ್ರತೆಗಿಂತ ಮೀರಿ ಮೇಲ್ಭಾಗದ ತಟ್ಟೆಯು ತುಂಬಿಕೊಂಡಿದ್ದರೆ, ಪಂಪನ್ನು ತಿರುಗಿಸುವವರೆಗೂ ನೀರನ್ನು ಮರುಪರಿಚಲಿಸಲು ಆರಂಭಿಸುತ್ತದೆ. ಅದಲ್ಲದೇ ಮೇಲ್ಭಾಗದ ತಟ್ಟೆಯಲ್ಲಿರುವ ನೀರು ದ್ರವಾಶಯವನ್ನು ಮತ್ತೆ ಬರಿದು ಮಾಡುತ್ತದೆ.
ರನ್ ಟು ವೇಸ್ಟ್
[ಬದಲಾಯಿಸಿ]ರನ್ ಟು ವೇಸ್ಟ್ ಮಾಧ್ಯಮದಲ್ಲಿ, ಪೌಷ್ಟಿಕಗಳು ಹಾಗು ನೀರಿನ ದ್ರಾವಣವನ್ನು ಕ್ರಮಾನುಗತವಾಗಿ ಮಧ್ಯಮ ಮೇಲ್ಮೈನಲ್ಲಿ ಉಪಯೋಗಿಸಲಾಗುತ್ತದೆ. ಇದನ್ನು ಅತ್ಯಂತ ಸರಳ ವಿಧಾನದಲ್ಲಿ ಮಾಡಬಹುದು, ಕೈಯಿಂದ ಪೌಷ್ಟಿಕವನ್ನು ಲೇಪಿಸುವುದು ಹಾಗು ಅಕ್ರಿಯ ಬೆಳವಣಿಗೆ ಮಾಧ್ಯಮದ ಧಾರಕದಲ್ಲಿ ನೀರಿನ ದ್ರಾವಣವನ್ನು ಪ್ರತಿ ದಿನದಲ್ಲಿ ಒಂದು ಅಥವಾ ಅದಕ್ಕೂ ಅಧಿಕ ಬಾರಿ ಹಾಕುವುದು, ಉದಾಹರಣೆಗೆ ಕಲ್ಲುಉಣ್ಣೆ, ಪರ್ಲೈಟ್, ವರ್ಮಿಕ್ಯುಲೈಟ್(ಸಾಮಾನ್ಯವಾಗಿ ಅಭ್ರಕವು ವ್ಯತ್ಯಾಸಗೊಂಡು, ಕಾಯಿಸಿ ಸ್ಪಂಜಿನಂತೆ ಉಬ್ಬಿಸಿದ ಮತ್ತು ಶಾಖನಿರೋಧಕವಾಗಿ ಬಳಸುವ ಸಿಲಿಕೇಟ್ ಖನಿಜ), ಕೋಕೋ ನಾರು, ಅಥವಾ ಮರಳು. ಇದಕ್ಕಿಂತ ಸ್ವಲ್ಪ ಸಂಕೀರ್ಣವಾದ ವ್ಯವಸ್ಥೆಯು, ಒಂದು ವಿತರಣಾ ಪಂಪ್ ನೊಂದಿಗೆ ಸ್ವಯಂಚಾಲಿತವಾಗಿರುತ್ತದೆ, ಒಂದು ಕಾಲಮಾಪಕ ಹಾಗು ನೀರಾವರಿ ನಾಳ, ವಿತರಣಾ ಆವರ್ತನದೊಂದಿಗೆ ಪೌಷ್ಟಿಕ ದ್ರಾವಣವನ್ನು ವಿತರಣೆ ಮಾಡುವ ಪ್ರಮುಖ ಪ್ರಮಿತಿಗಳಾದ ಸಸ್ಯದ ಗಾತ್ರ, ಸಸ್ಯದ ಬೆಳವಣಿಗೆ ಹಂತ, ಹವಾಮಾನ, ತಲಾಧಾರ, ಹಾಗು ತಲಾಧಾರದ ವಾಹಕತೆ, pH, ಹಾಗು ನೀರಿನ ಅಂಶ.
ಒಂದು ವಾಣಿಜ್ಯಕ ಬಳಕೆಯಲ್ಲಿ, ನೀರಿನ ಆವರ್ತನವು ಬಹು ಅಂಶಗಳಿಂದ ಕೂಡಿದೆ. ಇದು pc ಅಥವಾ plc ಆಧಾರಿತ ನಿಯಂತ್ರಕಗಳಿಂದ ನಿರ್ದೇಶಿತವಾಗಿರುತ್ತವೆ.
ವಾಣಿಜ್ಯಕ ಜಲಕೃಷಿ ಉತ್ಪನ್ನದ ದೊಡ್ಡ ಸಸ್ಯಗಳಾದ ಟೋಮೋಟೋಗಳು, ಸೌತೆಕಾಯಿ ಹಾಗು ಮೆಣಸು, ರನ್ ಟು ವೇಸ್ಟ್ ಜಲಕೃಷಿಯ ಒಂದು ಅಥವಾ ಮತ್ತೊಂದು ವಿಧಾನವನ್ನು ಬಳಕೆಮಾಡಿಕೊಳ್ಳುತ್ತವೆ.
ಜವಾಬ್ದಾರಿಯುತ ಪರಿಸರದ ಬಳಕೆಗಳಲ್ಲಿ, ಪೌಷ್ಟಿಕ ಸಮೃದ್ಧ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ ಜೊತೆಗೆ ಹಲವು ಬಾರಿ ಬಳಕೆ ಮಾಡಿಕೊಳ್ಳಬಹುದಾದ ಅಲ್ಲೇ ಇರುವ ಶೋಧನಾ ವಿಧಾನದ ಮೂಲಕ ಸಂಸ್ಕರಿಸಲಾಗುತ್ತದೆ.[೧೨][೧೩]
ಆಳ ನೀರಿನ ಕೃಷಿ
[ಬದಲಾಯಿಸಿ]ಸಸ್ಯ ಉತ್ಪನ್ನದ ಜಲಕೃಷಿ ವಿಧಾನವೆಂದರೆ ಸಸ್ಯದ ಬೇರುಗಳನ್ನು ಪೌಷ್ಟಿಕ ಸಮೃದ್ಧ ದ್ರಾವಣ, ಆಕ್ಸಿಜನೀಕರಿತ ನೀರಿನ ಮೂಲಕ ತೇಲಾಡುವಂತೆ ಮಾಡುವುದು. ಸಾಂಪ್ರದಾಯಿಕ ವಿಧಾನಗಳು, ಸಸ್ಯಗಳನ್ನು ಒಳಗೊಂಡ ಮಡಕೆಗಳು ಮುಚ್ಚಳದ ಮಧ್ಯಭಾಗದಿಂದ ತೇಲಾಡುವ ಪ್ಲ್ಯಾಸ್ಟಿಕ್ ಬಕೆಟ್ ಗಳು ಹಾಗು ದೊಡ್ಡ ಧಾರಕಗಳ ಬಳಕೆ ಮಾಡಿಕೊಳ್ಳುತ್ತವೆ. ಅಲ್ಲಿ ಬೇರುಗಳು ಪೌಷ್ಟಿಕ ದ್ರಾವಣದಿಂದಾಗಿ ತೇಲಾಡುತ್ತವೆ. ಗಾಳಿಯ ಪಂಪ್ ಜೊತೆಗೂಡಿದ ಸರಂಧ್ರವಾದ ಕಲ್ಲುಗಳೊಂದಿಗೆ ದ್ರಾವಣವು ಅಧಿಕವಾಗಿ ಆಕ್ಸಿಜನೀಕರಣಗೊಂಡಿರುತ್ತದೆ. ಈ ವಿಧಾನದೊಂದಿಗೆ ಸಸ್ಯಗಳು ಹೆಚ್ಚು ವೇಗವಾಗಿ ಬೆಳವಣಿಗೆಯಾಗುತ್ತವೆ, ಏಕೆಂದರೆ ಬೇರುಗಳಿಗೆ ದೊರೆಯುವ ಅಧಿಕ ಪ್ರಮಾಣದ ಆಮ್ಲಜನಕ.[೧೪]
ಬಬ್ಬಲ್ಪೋನಿಕ್ಸ್
[ಬದಲಾಯಿಸಿ]"ಬಬ್ಬಲ್ಪೋನಿಕ್ಸ್" ಎಂಬುದು ಸಸ್ಯದ ಬೇರು ವಲಯಕ್ಕೆ ನೇರವಾಗಿ ಅಧಿಕ ಆಕ್ಸಿಜನೀಕರಣಗೊಂಡ ಪೌಷ್ಟಿಕ ದ್ರಾವಣವನ್ನು ವಿತರಣೆ ಮಾಡುವ ವಿಧಾನ. ಬಬ್ಬಲ್ಪೋನಿಕ್ಸ್ ಎಂಬ ಪದವು ಆಳ ನೀರಿನ ಜಲಕೃಷಿಯ(DWC) ವ್ಯವಸ್ಥೆಯಲ್ಲಿ ಮೇಲ್ಭಾಗದಿಂದ ಪೋಷಿತಗೊಂಡಿರುವುದನ್ನು ವಿವರಿಸುತ್ತದೆ. ಆಳ ನೀರಿನ ಕೃಷಿಯ ಮಾದರಿಯಲ್ಲಿ, ಬಬ್ಬಲ್ಪೋನಿಕ್ಸ್ ನ ಮೂಲ ಉದ್ದೇಶವೆಂದರೆ ಸಸ್ಯಗಳಿಗೆ ಅವುಗಳ ಬೇರುಗಳಿಂದ ಪೋಷಣೆ ನೀಡುವುದು, ಆದರೆ ಬೇರುಗಳು ಯಾವುದೇ ಮಾಧ್ಯಮವನ್ನು ಅವಲಂಬಿಸದೆ ಅಧಿಕ ಪ್ರಮಾಣದ ಆಮ್ಲಜನಕ ಹಾಗು ಪೌಷ್ಟಿಕಾಂಶವನ್ನು ಪಡೆಯುವುದು. ಬೇರುಗಳು ಗಾಳಿಯಲ್ಲಿ ತೇಲಾಡುತ್ತವೆ; ನಂತರ ಅಂತಿಮವಾಗಿ ಆಕ್ಸಿಜನೀಕರಣವಾದ ದ್ರವಾಶಯದಲ್ಲಿ ಕೆಳಗೆ ಬೆಳೆಯುತ್ತವೆ. ಆದಾಗ್ಯೂ, ಬಬ್ಬಲ್ಪೋನಿಕ್ ಜಲಕೃಷಿ ಮಾದರಿಯಲ್ಲಿ, ದ್ರವಾಶಯದಲ್ಲಿ ನೀರಿನ ಪಂಪನ್ನು ಇರಿಸಲಾಗಿರುತ್ತದೆ, ಇದನ್ನು ದ್ರವಾಶಯದಿಂದ ನೀರನ್ನು ಸಸ್ಯಗಳ ಬೇರುಗಳವರೆಗೂ ತೆಗೆದುಕೊಂಡು ಹೋಗಲು ಬಳಸಲಾಗುತ್ತದೆ. ಸಸ್ಯದ ಬೇರುಗಳಿಗೆ ನೀರನ್ನು ಪಂಪ್ ಮಾಡಲಾಗುತ್ತದೆ. ಅಲ್ಲದೇ ದ್ರವಾಶಯಕ್ಕೆ ನೀರು ಮತ್ತೆ ಸತತವಾಗಿ ಮರುಪರಿಚಲನಾ ವ್ಯವಸ್ಥೆಯಲ್ಲಿ ಹಿಂದಕ್ಕೆ ಹರಿಯುತ್ತದೆ. ನೀರನ್ನು ಮತ್ತಷ್ಟು ಆಕ್ಸಿಜನೀಕರಣ ಮಾಡುವ ಸಲುವಾಗಿ, ದ್ರವಾಶಯದಲ್ಲಿ ಒಂದು ಗಾಳಿ ಕಲ್ಲಿರುತ್ತದೆ, ಇದು ದ್ರವಾಶಯದ ಹೊರಭಾಗದಿಂದ ಮೆತುನೀರ್ಕೊಳವಿಯ ಮೂಲಕ ನೀರಿಗೆ ಗಾಳಿಯನ್ನು ಪಂಪ್ ಮಾಡುತ್ತದೆ. ಗಾಳಿಕಲ್ಲು ಹಾಗು ನೀರಿನ ಪಂಪ್ ಎರಡೂ ದಿನದ 24 ಗಂಟೆಯೂ ಚಾಲನೆಯಲ್ಲಿರುತ್ತದೆ.[೧೫]
ಮಾಧ್ಯಮಗಳು
[ಬದಲಾಯಿಸಿ]ಜಲಕೃಷಿ ವಿಧಾನವನ್ನು ಬಳಸುವ ಕೃಷಿಕರು ಮಾಡಬೇಕಾದ ಅತ್ಯಂತ ಸ್ಪಷ್ಟವಾದ ನಿರ್ಧಾರವೆಂದರೆ ಯಾವ ಕೃಷಿ ಮಾಧ್ಯಮವನ್ನು ಬಳಸಬೇಕೆಂಬ ನಿರ್ಣಯ. ಬೆಳೆಯ ವಿವಿಧ ವಿಧಾನಗಳಿಗೆ ವಿವಿಧ ಮಾಧ್ಯಮಗಳು ಸೂಕ್ತವಾಗಿರುತ್ತವೆ.
ಡಯಾಹೈಡ್ರೋ
[ಬದಲಾಯಿಸಿ]ಸಂಚಿತ ಶಿಲಾ ಮಾಧ್ಯಮವು ಡಯಾಟಂಗಳ ಪಳೆಯುಳಿಕೆಯಾದ ಅವಶೇಷಗಳನ್ನು ಒಳಗೊಂಡಿರುತ್ತವೆ. ಡಯಾಹೈಡ್ರೋ, ಸಿಲಿಕನಲ್ಲಿ ಅತ್ಯಂತ ಅಧಿಕವಾಗಿರುತ್ತದೆ (87-94%), ಇದು ಸಸ್ಯದ ಬೆಳವಣಿಗೆಗೆ ಹಾಗು ಕೋಶಭಿತ್ತಿಗಳನ್ನು ಬಲಪಡಿಸುವ ಒಂದು ಅಗತ್ಯದ ಅಂಶವಾಗಿದೆ.
ವಿಸ್ತಾರವಾದ ಜೇಡಿಮಣ್ಣು
[ಬದಲಾಯಿಸಿ]ಸುಡಲಾದ ಜೇಡಿಮಣ್ಣಿನ ಸಣ್ಣ ಉಂಡೆಗಳು, 'ಹೈಡ್ರೋಟನ್' ಅಥವಾ 'ಹೈಡ್ರೋಕೊರ್ರೆಲ್ಸ್' ಅಥವಾ LECA(ಲೈಟ್ ಎಕ್ಸ್ಪ್ಯಾನ್ಡೆಡ್ ಕ್ಲೇ ಅಗ್ರಿಗೇಟ್) ಎಂಬ ವ್ಯಾಪಾರಿ ಮುದ್ರೆಯಡಿಯಲ್ಲಿ ಪರಿಚಿತವಾಗಿದೆ, ಇವುಗಳು ನೀರಿನ ದ್ರಾವಣದಲ್ಲಿ ಎಚ್ಚರಿಕೆಯಿಂದ ನಿಯಂತ್ರಿಸಲಾದ ಎಲ್ಲ ಪೌಷ್ಟಿಕಗಳಿರುವ ಜಲಕೃಷಿ ವಿಧಾನಕ್ಕೆ ಸೂಕ್ತವಾಗಿದೆ. ಜೇಡಿಮಣ್ಣಿನ ಸಣ್ಣ ಉಂಡೆಗಳು ಅಕ್ರಿಯವಾಗಿರುವುದರ ಜೊತೆಗೆ, pH ತಟಸ್ಥವಾಗಿರುತ್ತದೆ. ಜೊತೆಗೆ ಯಾವುದೇ ಪೌಷ್ಟಿಕ ಮೌಲ್ಯವನ್ನು ಹೊಂದಿರುವುದಿಲ್ಲ.
ಜೇಡಿಮಣ್ಣನ್ನು ಗೋಲಾಕಾರದ ಸಣ್ಣ ಉಂಡೆಗಳಾಗಿ ರೂಪಿಸಲಾಗುತ್ತದೆ. ಜೊತೆಗೆ ಇವುಗಳನ್ನು ಆವರ್ತಕ ಒಲೆಗಳಲ್ಲಿ 1,200 °C (2,190 °F)ತಾಪಮಾನದಲ್ಲಿ ಸುಡಲಾಗುತ್ತದೆ. ಇದು ಪಾಪ್ ಕಾರ್ನ್ ಮಾದರಿಯಲ್ಲಿ ಜೇಡಿಮಣ್ಣಿನ ವಿಸ್ತಾರಕ್ಕೆ ಕಾರಣವಾಗುತ್ತದೆ, ಹಾಗು ಸರಂಧ್ರಗಳನ್ನು ಉಳ್ಳದ್ದಾಗಿರುತ್ತದೆ. ಇದು ತೂಕದಲ್ಲಿ ಹಗುರವಾಗಿರುತ್ತದೆ, ಹಾಗು ಕಾಲಾನುಕ್ರಮದಲ್ಲಿ ಬಿಗಿಯಾಗುವುದಿಲ್ಲ. ಬ್ರ್ಯಾಂಡ್ ಹಾಗು ತಯಾರಿಕ ಪ್ರಕ್ರಿಯೆಯನ್ನು ಅವಲಂಬಿಸಿ ಪ್ರತಿಯೊಂದು ಉಂಡೆಯು ಕ್ರಮರಹಿತವಾಗಿರುತ್ತದೆ ಅಥವಾ ಏಕಪ್ರಕಾರವಾಗಿರುತ್ತದೆ. ತಯಾರಕರು, ವಿಸ್ತೃತ ಜೇಡಿಮಣ್ಣು ಪರಿಸರಕ್ಕೆ ಸಮರ್ಥನೀಯವಾದುದೆಂದು ಹಾಗು ಪರಿಶುದ್ಧಗೊಳ್ಳುವ ಹಾಗು ಕ್ರಿಮಿನಾಶನಗೊಳ್ಳುವ ಸಾಮರ್ಥ್ಯದಿಂದ ಮತ್ತೆ ಮರುಬಳಕೆ ಮಾಡಬಹುದಾದ ಮಾಧ್ಯಮವೆಂದು ಪರಿಗಣಿಸುತ್ತಾರೆ. ಇದನ್ನು ಬಿಳಿ ವೆನಿಗರ್, ಕ್ಲೋರಿನ್, ಚಲುವೆಕಾರಿ(ಕ್ಲೊರಿನ್ ಬ್ಲೀಚ್ ) ಅಥವಾ ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣಗಳಿಂದ ಮಾದರಿಯಾಗಿ,(H
2O
2) ಹಾಗು ಸಂಪೂರ್ಣವಾಗಿ ಶುದ್ಧಗೊಳಿಸಬಹುದು.
ಜೇಡಿಮಣ್ಣಿನ ಉಂಡೆಗಳನ್ನು ಶುದ್ಧಗೊಳಿಸಿದ ನಂತರವೂ ಮರುಬಳಕೆ ಮಾಡದಿದ್ದರೆ ಉತ್ತಮವೆಂಬ ಕೆಲ ಅಭಿಪ್ರಾಯಗಳಿವೆ, ಏಕೆಂದರೆ ಬೇರಿನ ಬೆಳವಣಿಗೆಯು ಮಾಧ್ಯಮಕ್ಕೆ ಪ್ರವೇಶಿಸಬಹುದು. ಒಂದು ಬೆಳೆಯು ಬೆಳೆದ ನಂತರ ಜೇಡಿಮಣ್ಣಿನ ಉಂಡೆಗಳನ್ನು ಒಡೆದು ನೋಡಿದಾಗ ಇದು ಎಷ್ಟರ ಮಟ್ಟಿಗೆ ಬೆಳವಣಿಗೆಯಾಗಿದೆಯೆಂದು ತಿಳಿದುಬರುತ್ತದೆ.
ಕಲ್ಲು ಉಣ್ಣೆ
[ಬದಲಾಯಿಸಿ]ಕಲ್ಲು ಉಣ್ಣೆ (ಖನಿಜ ಉಣ್ಣೆ) ಬಹುಶಃ ಜಲಕೃಷಿಯಲ್ಲಿ ಅತ್ಯಂತ ವ್ಯಾಪಕವಾಗಿ ಬಳಸುವ ಮಾಧ್ಯಮವಾಗಿದೆ. ಕಲ್ಲು ಉಣ್ಣೆಯು 'ಸ್ವಾಭಾವಿಕ ನೀರು ನಿರ್ಗಮನ' ಹಾಗು ಮರುಪರಿಚಲನಾ ವ್ಯವಸ್ಥೆ ಎರಡಕ್ಕೂ ಇರುವ ಒಂದು ಅಕ್ರಿಯ ತಲಾಧಾರವಾಗಿದೆ. ಇದನ್ನು ಕರಗಿಸಿದ ಬಂಡೆಯಿಂದ ರೂಪಿಸಿ ಹತ್ತಿಯ ಕ್ಯಾಂಡಿ ಮಾದರಿಯಲ್ಲಿ ಆಕಾರ ನೀಡಲಾಗಿರುತ್ತದೆ-ನಾರಿನಂತೆ, ಇದು ಸೂಕ್ಷ್ಮಜೀವಿಯ ಚಟುವಟಿಕೆಯಿಂದ ಅವನತಿಯನ್ನು ಹೊಂದದೆ ಲೋಮಧಮನಿಯ ಕ್ರಿಯೆಗೆ ಅನುಕೂಲವಾಗುವ ನಾರಿನ ಮಾಧ್ಯಮವನ್ನು ಉಂಟುಮಾಡುತ್ತದೆ. ಕಲ್ಲು ಉಣ್ಣೆಯ ಪ್ರಯೋಜನವೆಂದರೆ ಇದು ಹಗುರವಾಗಿರುತ್ತದೆ, ರೋಗಕಾರಕಗಳಿಂದ ಮುಕ್ತವಾಗಿರುತ್ತದೆ, ಬಹಳ ಕಡಿಮೆ CECಯನ್ನು ಹೊಂದಿರುತ್ತದೆ (ಕ್ಯಾಟಯಾನು ವಿನಿಮಯ ಸಾಮರ್ಥ್ಯ), ಇದು ಪೌಷ್ಟಿಕಗಳು ಹಾಗು ನೀರನ್ನು ಸುಲಭವಾಗಿ ದೊರಕುವಂತೆ ಮಾಡುತ್ತದೆ, ಜೊತೆಗೆ ಇದು ವಿವಿಧ ನಾರಿನ ಗಾತ್ರಗಳು ಹಾಗು ಪೂರ್ವಾಭಿಮುಖತೆಯಲ್ಲಿ ಕಂಡು ಬರುತ್ತವೆ. ಅಧಿಕ ಸಾಂದ್ರತೆಯುಳ್ಳ ಕಲ್ಲು ಉಣ್ಣೆಯು ಹೀರಿಕೊಳ್ಳುವ ಸಾಮರ್ಥ್ಯವನ್ನೂ ಸಹ ಸುಧಾರಿಸುತ್ತದೆ ಹಾಗು ಆರ್ದ್ರತೆ ಹಾಗು ಪೌಷ್ಟಿಕಗಳನ್ನು ಹಂಚಿಕೆ ಮಾಡುತ್ತವೆ, ಮಾಧ್ಯಮದ ಹೆಚ್ಚಿನ ಜಾಗಗಳಿಗೆ ಬೇರುಗಳನ್ನು ಆಕರ್ಷಿಸುತ್ತವೆ, ಜೊತೆಗೆ ಈ ರೀತಿಯಾಗಿ ಅಧಿಕ ಮೌಲ್ಯದ ಸಸ್ಯ ಉತ್ಪಾದನೆಗೆ ಪೌಷ್ಟಿಕ ಉತ್ತೇಜಕ ಸ್ಥಳಗಳನ್ನು ಅಧಿಕಗೊಳಿಸುತ್ತದೆ. ಬಳಕೆಯ ನಂತರ, ಕಲ್ಲು ಉಣ್ಣೆಯನ್ನು ಇಟ್ಟಿಗೆ ಅಥವಾ ಮತ್ತೆ ಹೊಸತಾದ ಕಲ್ಲು ಉಣ್ಣೆಯಾಗಿ ಮರುಬಳಕೆ ಮಾಡಬಹುದು, ಅಥವಾ ನೈಸರ್ಗಿಕ ಬಂಡೆಗಳಿಂದ ರೂಪಿತವಾದ ಕಾರಣಕ್ಕೆ ಇದನ್ನು ಮತ್ತೆ ಮಣ್ಣಿಗೆ ಸೇರಿಸಬಹುದು. ಜೊತೆಗೆ ಇದು ತನ್ನಲ್ಲಿ ಅಧಿಕ ಪ್ರಮಾಣದ ಗೊಬ್ಬರವನ್ನು ಒಳಗೊಂಡಿರುತ್ತದೆ.
ತೆಂಗಿನ ನಾರು
[ಬದಲಾಯಿಸಿ]ತೆಂಗಿನ ನಾರು ಅಥವಾ ಕೋಕೋ ಎಂದು ಕರೆಯಲ್ಪಡುವ ತೆಂಗಿನ ಸಸ್ಯಾಂಗಾರವು, ತೆಂಗಿನಕಾಯಿಯ ಹೊರಭಾಗದಿಂದ ನಾರನ್ನು ತೆಗೆದ ನಂತರ ಉಳಿಯುವ ಪದಾರ್ಥ. ತೆಂಗಿನ ನಾರು 100% ನೈಸರ್ಗಿಕವಾಗಿ ಬೆಳೆಯುತ್ತದೆ; ಇದು ಹೂಬಿಡುವ ಮಾಧ್ಯಮವಾಗಿದೆ. ತೆಂಗಿನ ನಾರಿನಲ್ಲಿ ಟ್ರೈಕೊಡರ್ಮ ಎಂಬ ಉಪಯುಕ್ತ ಬ್ಯಾಕ್ಟೀರಿಯ ಇರುತ್ತದೆ, ಇದು ಬೇರುಗಳನ್ನು ರಕ್ಷಿಸುವುದರ ಜೊತೆಗೆ ಬೇರಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತೆಂಗಿನ ನಾರಿಗೆ ಅಧಿಕ ನೀರನ್ನು ಹಾಯಿಸುವುದು ಬಹಳ ಕಷ್ಟಕರ ಏಕೆಂದರೆ ಇದರ ಪರಿಪೂರ್ಣವಾದ ಗಾಳಿ ಹಾಗು ನೀರಿನ ಅನುಪಾತ. ಸಸ್ಯದ ಬೇರುಗಳು ಈ ಪರಿಸರದಲ್ಲಿ ಹುಲುಸಾಗಿ ಬೆಳೆಯುತ್ತವೆ, ನಾರು ಅಧಿಕ ಕ್ಯಾಟಯಾನು ವಿನಿಮಯವನ್ನು ಹೊಂದಿದೆ, ಅಂದರೆ, ಇದು ಸಸ್ಯಕ್ಕೆ ಅಗತ್ಯವಾದ ಬಳಕೆಯಾಗದ ಖನಿಜಗಳನ್ನು ಸಂಗ್ರಹಿಸಿಟ್ಟುಕೊಂಡು, ಯಾವಾಗ ಅಗತ್ಯವೋ ಆಗ ಬಿಡುಗಡೆ ಮಾಡುತ್ತದೆ. ನಾರು ಹಲವು ಮಾದರಿಗಳಲ್ಲಿ ದೊರಕುತ್ತದೆ, ಇದರಲ್ಲಿ ಸಾಮಾನ್ಯವಾದುದೆಂದರೆ ತೆಂಗಿನ ಸಸ್ಯಾಂಗಾರ, ಇದು ಮಣ್ಣಿನ ರೀತಿ ಕಂಡುಬರುತ್ತದೆ. ಅಲ್ಲದೇ ಅದೇ ಮಾದರಿಯ ವಿನ್ಯಾಸ ಹೊಂದಿದೆ; ಆದರೆ ಇದು ಯಾವುದೇ ಖನಿಜಾಂಶ ಹೊಂದಿರುವುದಿಲ್ಲ.
ಪರ್ಲೈಟ್
[ಬದಲಾಯಿಸಿ]ಪರ್ಲೈಟ್ ಎಂಬುದು ಒಂದು ಜ್ವಾಲಾಮುಖಿಯಂತಹ ಬಂಡೆಯಾಗಿದೆ, ಇದನ್ನು ಹಗುರವಾದ ವಿಸ್ತೃತ ಗಾಜಿನ ಉಂಡೆಗಳಾಗಿ ಮಾಡಲು ಅಧಿತಪಿಸಲಾಗುತ್ತದೆ.(ಹೆಚ್ಚು ಉಷ್ಣತೆ ನೀಡಲಾಗುವ ಪ್ರಕ್ರಿಯೆ) ಇದನ್ನು ನೀರಿನಲ್ಲೂ ಮುಳುಗಿಸಲಾದ ಪ್ಲ್ಯಾಸ್ಟಿಕ್ ಸುತ್ತುಕೊಳವೆಯಾಗಿ ಅಥವಾ ಸಡಿಲವಾಗಿ ಬಳಸಲಾಗುತ್ತದೆ. ಮಣ್ಣಿನ ಸಾಂದ್ರತೆಯನ್ನು ಕಡಿಮೆ ಮಾಡಲು ಇದನ್ನು ಮಣ್ಣಿನ ಮಡಕೆಯ ಮಿಶ್ರಣದಲ್ಲೂ ಸಹ ಬಳಕೆ ಮಾಡಲಾಗುತ್ತದೆ. ಪರ್ಲೈಟ್ ವರ್ಮಿಕ್ಯುಲೈಟ್ ಮಾದರಿ ಸದೃಶವಾದ ಗುಣಗಳನ್ನು ಹೊಂದಿರುತ್ತದೆ. ಆದರೆ ಸಾಮಾನ್ಯವಾಗಿ ಅಧಿಕ ಗಾಳಿ ಹಾಗು ಕಡಿಮೆ ನೀರನ್ನು ಒಳಗೊಳ್ಳುತ್ತದೆ. ಇದನ್ನು ಒಳಗೊಳ್ಳದಿದ್ದರೆ, ಉಬ್ಬರ ಹಾಗು ಬರಿದಾದ ಸರಬರಾಜನ್ನು ಬಳಸಿಕೊಂಡು ಇದು ತೇಲಾಡಬಹುದು. ಇದು ಗ್ರ್ಯಾನೈಟ್, ಕಾರ್ಗಲ್ಲು, ಪಮಿಸ್ ಗಾಜು ಹಾಗು ಲಾವಾ ಪ್ರವಾಹದ ಅಗ್ನಿಶಿಲೆಯ ಮಿಶ್ರಣವಾಗಿದೆ. ಈ ಜ್ವಾಲಾಮುಖಿ ಶಿಲೆಯು "ಫ್ಯುಶನಿಕ್ ಮೆಟಾಮಾರ್ಫಾಸಿಸ್" ಎಂದು ಕರೆಯಲ್ಪಡುವ ಕ್ರಿಯೆಯಲ್ಲಿ ಅಧಿಕ ತಾಪಮಾನದಲ್ಲಿ ಸ್ವಾಭಾವಿಕವಾಗಿ ಸಂಯೋಜನೆಗೊಳ್ಳುತ್ತವೆ.
ವರ್ಮಿಕ್ಯುಲೈಟ್
[ಬದಲಾಯಿಸಿ]ಪರ್ಲೈಟ್ ನಂತೆ, ವರ್ಮಿಕ್ಯುಲೈಟ್ ಎಂಬುದು ಮತ್ತೊಂದು ಖನಿಜವಾಗಿದೆ, ಇದು ಹಗುರ ಉಂಡೆಗಳಾಗಿ ಹಿಗ್ಗುವ ತನಕ ಇದನ್ನು ಅಧಿತಾಪಗೊಳಿಸಲಾಗುತ್ತದೆ. ವರ್ಮಿಕ್ಯುಲೈಟ್, ಪರ್ಲೈಟ್ ಗಿಂತ ಅಧಿಕ ನೀರನ್ನು ತಡೆದುಕೊಳ್ಳುತ್ತದೆ. ಜೊತೆಗೆ ಇದು ಸ್ವಾಭಾವಿಕವಾಗಿ "ಹೀರಿಕೊಳ್ಳುವ" ಲಕ್ಷಣ ಹೊಂದಿದೆ, ಇದು ಜಡ ಜಲಕೃಷಿ ವಿಧಾನದಲ್ಲಿ ನೀರು ಹಾಗು ಪೌಷ್ಟಿಕವನ್ನು ಹೀರಿಕೊಳ್ಳುತ್ತದೆ. ಅಧಿಕ ನೀರು ಹಾಗು ಸಾಕಷ್ಟಿಲ್ಲದ ಗಾಳಿಯು ಸಸ್ಯದ ಬೇರುಗಳನ್ನು ಸುತ್ತುವರಿದರೆ, ಇದು ಪರ್ಲೈಟ್ ನ ಅಧಿಕ ಪ್ರಮಾಣದ ಮಿಶ್ರಣದೊಂದಿಗೆ ಕ್ರಮೇಣವಾಗಿ ಮಾಧ್ಯಮದ ನೀರಿನ ಧಾರಣಾಶಕ್ತಿಯನ್ನು ಕಡಿಮೆ ಮಾಡುತ್ತದೆ.
ಮರಳು
[ಬದಲಾಯಿಸಿ]ಮರಳು ಅಗ್ಗವಾಗಿರುವುದರ ಜೊತೆಗೆ ಸುಲಭವಾಗಿ ದೊರಕುತ್ತದೆ. ಆದಾಗ್ಯೂ, ಇದು ಭಾರವಾಗಿದ್ದು, ನೀರನ್ನು ಸಮರ್ಪಕವಾಗಿ ತಡೆಹಿಡಿಯಲು ಸಾಧ್ಯವಿಲ್ಲ, ಜೊತೆಗೆ ಇದನ್ನು ಬಳಕೆ ನಡುವೆ ಕ್ರಿಮಿನಾಶನಗೊಳಿಸಬೇಕಾಗುತ್ತದೆ.
ಜಲ್ಲಿಕಲ್ಲುಗಳು
[ಬದಲಾಯಿಸಿ]ಇದು ಅಕ್ವೇರಿಯಂಗಳಲ್ಲಿ ಬಳಕೆಯಾಗುವ ಮಾದರಿಯಾಗಿದೆ, ಆದಾಗ್ಯೂ ಯಾವುದೇ ಸಣ್ಣ ಜಲ್ಲಿಕಲ್ಲುಗಳನ್ನು ಬಳಸಿಕೊಳ್ಳಬಹುದು, ಆದರೆ ಇದರ ಬಳಕೆ ಮುಂಚೆ ಇದನ್ನು ಶುದ್ಧವಾಗಿ ತೊಳೆಯಬೇಕು. ವಾಸ್ತವವಾಗಿ, ವಿದ್ಯುತ್ ಪವರ್ ಹೆಡ್ ಪಂಪ್ ಗಳನ್ನು ಬಳಸಿಕೊಂಡು ನೀರನ್ನು ಪರಿಚಲಿಸುವ ಸಾಂಪ್ರದಾಯಿಕವಾಗಿ ಜಲ್ಲಿಸ್ತರದ ಶೋಧಕ ಹಾಸಿನಲ್ಲಿ ಬೆಳೆಯುವ ಸಸ್ಯಗಳನ್ನು, ಜಲ್ಲಿಕಲ್ಲಿನ ಜಲಕೃಷಿ ವಿಧಾನದಲ್ಲಿ ಬೆಳೆದರೆ ಹುಲುಸಾಗಿ ಬೆಳೆಯುತ್ತದೆ. ಜಲ್ಲಿಕಲ್ಲುಗಳು ಅಗ್ಗವಾಗಿದ್ದು, ಶುದ್ಧಗೊಳಿಸುವುದು ಬಹಳ ಸುಲಭ, ಇದರಿಂದ ನೀರನ್ನು ಸಂಪೂರ್ಣವಾಗಿ ತೆಗೆಯಬಹುದು ಜೊತೆಗೆ ಇದು ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಆದಾಗ್ಯೂ, ಇದು ಬಹಳ ಭಾರವಾಗಿದ್ದು, ಜೊತೆಗೆ ವಿಧಾನದಲ್ಲಿ ಸಾಕಷ್ಟು ನೀರು ಒದಗದಿದ್ದರೆ ಸಸ್ಯದ ಬೇರುಗಳು ಒಣಗಿ ಹೋಗಬಹುದು.
ಇಟ್ಟಿಗೆ ಚೂರುಗಳು
[ಬದಲಾಯಿಸಿ]ಜಲ್ಲಿಸ್ತರದ ಮಾದರಿಯಲ್ಲಿ ಇಟ್ಟಿಗೆ ಚೂರುಗಳು ಸದೃಶವಾದ ಲಕ್ಷಣಗಳನ್ನು ಹೊಂದಿವೆ. ಇದು ಸಂಭಾವ್ಯವಾಗಿ pHನ್ನು ವ್ಯತ್ಯಾಸಗೊಳಿಸುವ ಅಧಿಕ ಅನನುಕೂಲತೆಯನ್ನು ಹೊಂದಿದೆ. ಜೊತೆಗೆ ಇದರ ಮರುಬಳಕೆಗೆ ಮುಂಚೆ ಹೆಚ್ಚಿಗೆ ಶುದ್ಧಗೊಳಿಸುವ ಅಗತ್ಯವಿರುತ್ತದೆ.
ಪಾಲಿಸ್ಟೈರಿನ್ ಪ್ಯಾಕಿಂಗ್ ಪೀನಟ್ ಗಳು
[ಬದಲಾಯಿಸಿ]ಪಾಲಿಸ್ಟೈರಿನ್ ಪ್ಯಾಕಿಂಗ್ ಪೀನಟ್ ಗಳು ಅಗ್ಗವಾಗಿದ್ದು, ಸುಲಭವಾಗಿ ದೊರಕುತ್ತವೆ, ಜೊತೆಗೆ ಉತ್ತಮವಾಗಿ ನೀರನ್ನು ಹೊರಹಾಕಬಹುದು. ಆದಾಗ್ಯೂ, ಕೆಲವು ಬಳಕೆಗಳಲ್ಲಿ ಇದು ಬಹಳ ಹಗುರವೆನಿಸಬಹುದು. ಇವುಗಳನ್ನು ಮುಚ್ಚಿದ ನಾಳ ವ್ಯವಸ್ಥೆಗಳಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ. ಪಾಲಿಸ್ಟೈರಿನ್ ಪೀನಟ್ ಗಳನ್ನು ಬಳಸಬೇಕೆಂಬುದನ್ನು ಗಮನಿಸಿ; ಜೈವಿಕ ವಿಘಟನೀಯ ಪ್ಯಾಕಿಂಗ್ ಪೀನಟ್ ಗಳು ಗೋಡುಮಣ್ಣಾಗಿ ಕೊಳೆಯುತ್ತವೆ. ಸಸ್ಯಗಳು ಸ್ಟೈರಿನ್ ನನ್ನು ಹೀರಿಕೊಳ್ಳಬಹುದು ಜೊತೆಗೆ ತನ್ನ ಇತರ ಉಪಭೋಗಿಗಳಿಗೆ ವರ್ಗಾಯಿಸಬಹುದು; ಇದು ಆರೋಗ್ಯದ ಮೇಲೆ ಅಪಾಯವನ್ನುಂಟು ಮಾಡುವ ಸಂಭವವಿರುತ್ತದೆ.
ಮರದ ನಾರು
[ಬದಲಾಯಿಸಿ]ಮರದ ನಾರು, ಮರದ ಆವಿ ಘರ್ಷಣದಿಂದ ಉಂಟಾಗುತ್ತದೆ, ಇದು ಜಲಕೃಷಿಯ ಬಹಳ ಸಮರ್ಥವಾದ ಜೈವಿಕ ತಲಾಧಾರವಾಗಿದೆ. ಇದರ ಒಂದು ಅನುಕೂಲವೆಂದರೆ, ಇದು ದೀರ್ಘಕಾಲದವರೆಗೂ ತನ್ನ ರಚನೆಯನ್ನು ಹಾಗೆ ಉಳಿಸಿಕೊಂಡಿರುತ್ತದೆ.
ಪೌಷ್ಟಿಕ ದ್ರಾವಣಗಳು
[ಬದಲಾಯಿಸಿ]ಜಲಕೃಷಿಯಲ್ಲಿ ಬಳಸಲಾಗುವ ಸಸ್ಯದ ಪೌಷ್ಟಿಕಗಳು ನೀರಿನಲ್ಲಿ ಕರಗುತ್ತವೆ; ಜೊತೆಗೆ ಇವುಗಳು ಬಹುತೇಕವಾಗಿ ಅಜೈವಿಕವಾಗಿ, ಅಯಾನುಗಳ ರೂಪದಲ್ಲಿರುತ್ತವೆ. ಕರಗುವ ಪ್ರಾಥಮಿಕ ಕ್ಯಾಟಯಾನುಗಳೆಂದರೆ(ಧನಾತ್ಮಕವಾದ ವಿದ್ಯುತ್ ಅಯಾನುಗಳು) Ca2+(ಕ್ಯಾಲ್ಸಿಯಂ), Mg2+
(ಮೆಗ್ನಿಶಿಯಂ), ಹಾಗು K+
(ಪೊಟ್ಯಾಷಿಯಂ); ಪೌಷ್ಟಿಕ ದ್ರಾವಣಗಳಲ್ಲಿರುವ ಪ್ರಮುಖ ಪೌಷ್ಟಿಕ ಅಯಾನುಗಳೆಂದರೆ NO−
3 (ನೈಟ್ರೇಟ್), SO2−
4 (ಸಲ್ಫೇಟ್), ಹಾಗು H
2PO−
4 (ಡೈಹೈಡ್ರೋಜನ್ ಫಾಸ್ಫೇಟ್).ಜಲಕೃಷಿ ದ್ರಾವಣಗಳ ಹಲವಾರು 'ಸೂತ್ರಗಳು' ಲಭ್ಯವಿವೆ. ಇದೇ ರೀತಿಯಾದ ಒಟ್ಟಾರೆ ಅಂತಿಮ ಸಂಯುಕ್ತಗಳನ್ನು ನೀಡುವ ವಿವಿಧ ರಾಸಾಯನಿಕ ಸಂಯೋಜನೆಗಳನ್ನು ಬಳಸಲಾಗುತ್ತದೆ. ಮ್ಯಾಕ್ರೋನ್ಯೂಟ್ರಿಯಂಟ್ ಗಳಿಗೆ ಸಾಧಾರಣವಾಗಿ ಬಳಸುವ ರಾಸಾಯನಿಕಗಳಲ್ಲಿ ಪೊಟ್ಯಾಷಿಯಂ ನೈಟ್ರೇಟ್, ಕ್ಯಾಲ್ಷಿಯಂ ನೈಟ್ರೇಟ್, ಪೊಟ್ಯಾಷಿಯಂ ಫಾಸ್ಫೇಟ್, ಹಾಗು ಮೆಗ್ನಿಶಿಯಂ ಸಲ್ಫೇಟ್. ಗತ್ಯ ಅಂಶಗಳನ್ನು ಒದಗಿಸಲು ಜಲಕೃಷಿಯ ದ್ರಾವಣಗಳಿಗೆ ಹಲವು ಮೈಕ್ರೋನ್ಯೂಟ್ರಿಯಂಟ್ ಗಳನ್ನು ಮಾದರಿಯಾಗಿ ಸೇರಿಸಲಾಗುತ್ತದೆ; ಇವುಗಳಲ್ಲಿ Fe (ಕಬ್ಬಿಣ), Mn (ಮ್ಯಾಂಗನೀಸ್), Cu (ತಾಮ್ರ), Zn (ಜಿಂಕ್), B (ಬೋರೋನ್), Cl (ಕ್ಲೋರಿನ್), ಹಾಗು Ni (ನಿಕಲ್). Feಯನ್ನು ವಿಲೇಯವಾಗಿ ಉಳಿಸಲು ಕೆಲವೊಂದು ಬಾರಿ ಕೊಂಡಿಗೂಡುವ ಕಾರಕಗಳನ್ನು ಬಳಸಲಾಗುತ್ತದೆ. ಅರ್ನೋನ್ ಹಾಗು ಹೊಗ್ಲ್ಯಾಂಡ್(ಮೇಲಿನ ವಿಭಾಗವನ್ನು ನೋಡಿ) ಬಳಸಿದ ಪೌಷ್ಟಿಕ ದ್ರಾವಣಗಳ ಹಲವು ಮಾರ್ಪಾಡುಗಳನ್ನು 'ಪರಿವರ್ತಿತ ಹೊಗ್ಲ್ಯಾಂಡ್ ದ್ರಾವಣಗಳು' ಎಂದು ಹೆಸರಿಸಲಾಗಿದೆ, ಇದು ಈಗ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಸಸ್ಯದ ಜೀವನಚಕ್ರದುದ್ದಕ್ಕೂ ವಿವಿಧ ಮಿಶ್ರಣಗಳ ಮಾರ್ಪಾಡುಗಳನ್ನು ಬಳಸಲಾಗಿದೆ, ಇದು ಪೌಷ್ಟಿಕಾಂಶದ ಮೌಲ್ಯವನ್ನು ಮತ್ತಷ್ಟು ಪ್ರಶಸ್ತವಾಗಿಸುತ್ತದೆ.[೧೬] ಸಸ್ಯಗಳು, ಸಂಪರ್ಕಕ್ಕೆ ಬಂದಾಗ ಪೌಷ್ಟಿಕ ದ್ರಾವಣಗಳ ಸಂಯೋಜನೆಯನ್ನು ಇತರವುಗಳಿಗಿಂತ ಹೆಚ್ಚು ತ್ವರಿತವಾಗಿ ನಿರ್ದಿಷ್ಟ ಪೌಷ್ಟಿಕಗಳನ್ನು ನಿಷ್ಕಾಸಗೊಳಿಸುವ ಮೂಲಕ ಬದಲಾವಣೆ ಮಾಡುತ್ತವೆ, ಹಾಗು ಆಮ್ಲತೆ ಅಥವಾ ಅಲ್ಕಲಿನ್ ನನ್ನು[೧೭] ಹೊರದೂಡುವ ಮೂಲಕ pH ಮಾರ್ಪಡಿಸುತ್ತವೆ. ಲವಣಯುಕ್ತ ಕೇಂದ್ರೀಕರಣವು ಅಧಿಕವಾಗದಂತೆ ಗಮನವಹಿಸುವ ಅಗತ್ಯವಿರುತ್ತದೆ, ಪೌಷ್ಟಿಕಗಳು ನಿಷ್ಕಾಸಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ, ಅಥವಾ ಅಗತ್ಯ ಪ್ರಮಾಣಕ್ಕಿಂತ pH ಅಧಿಕವಾಗಿದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ.
ವಾಣಿಜ್ಯ ಬಳಕೆ
[ಬದಲಾಯಿಸಿ]ವಿಶ್ವದಲ್ಲೇ ಅತ್ಯಂತ ದೊಡ್ಡ ವಾಣಿಜ್ಯ ಜಲಕೃಷಿ ಸೌಲಭ್ಯವು ವಿಲ್ಕಾಕ್ಸ್, ಅರಿಜೊನ ನ ಯುರೋಫ್ರೆಶ್ ಫಾರ್ಮ್ಸ್ ನಲ್ಲಿದೆ, ಇದು 2005ರಲ್ಲಿ 56 ದಶಲಕ್ಷ ಟೋಮೋಟೋಗಳನ್ನು ಮಾರಾಟ ಮಾಡಿತು.[೧೮] ಯುರೋಫ್ರೆಶ್ 129 ಹೆಕ್ಟೇರ್ ಗಾಜಿನ ಪ್ರದೇಶವನ್ನು ಹೊಂದಿರುವುದರ ಜೊತೆಗೆ U.S.ನ ವಾಣಿಜ್ಯ ಜಲಕೃಷಿ ಹಸಿರುಮನೆ ಪ್ರದೇಶದ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ.[೧೯] ಯುರೋಫ್ರೆಶ್ ತಾನು ಉತ್ಪಾದಿಸಿದ ಟೋಮೋಟೋಗಳನ್ನೂ ಜೈವಿಕವೆಂದು ಪರಿಗಣಿಸುವುದಿಲ್ಲ, ಆದರೆ ಅವುಗಳು ಕೀಟಗಳಿಂದ ಮುಕ್ತವಾಗಿರುತ್ತವೆ. ಇವುಗಳನ್ನು ರನ್ ಟು ವೆಸ್ಟ್ ವಿಧಾನವನ್ನು ಬಳಸಿಕೊಂಡು ಕಲ್ಲುಉಣ್ಣೆಯಲ್ಲಿ ಬೆಳೆಯಲಾಗುತ್ತದೆ.
ಕೆಲವು ವ್ಯಾಪಾರಿ ಪ್ರತಿಷ್ಠಾಪನೆಗಳು ಯಾವುದೇ ಕ್ರಿಮಿನಾಶಕಗಳಾಗಲಿ ಅಥವಾ ಸಸ್ಯನಾಶಕಗಳಾಗಲಿ ಬಳಸುವುದಿಲ್ಲ, ಇವುಗಳು ಸಮಗ್ರ ಕೀಟ ನಿರ್ವಹಣಾ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. "ಜೈವಿಕ" ಎಂದು ಪಟ್ಟಿ ಮಾಡಲಾಗಿರುವ ಉತ್ಪನ್ನಕ್ಕೆ ಸಾಮಾನ್ಯವಾಗಿ ಗ್ರಾಹಕರು ಸ್ವಇಚ್ಛೆಯಿಂದ ಅಧಿಕ ಮೌಲ್ಯವನ್ನು ನೀಡುತ್ತಾರೆ. USAನ ಕೆಲವು ರಾಜ್ಯಗಳಿಗೆ ಜೈವಿಕವೆಂದು ಪ್ರಮಾಣೀಕೃತಗೊಳ್ಳಲು ಮಣ್ಣಿನ ಅಗತ್ಯವಿದೆ. US ಫೆಡರಲ್ ಸರ್ಕಾರವು ಸ್ಥಾಪಿಸಿರುವ ಅತಿಕ್ರಮಿತ ಹಾಗು ಪರಸ್ಪರ ವಿರುದ್ಧವಾದ ನಿಯಮಗಳಿವೆ, ಈ ರೀತಿಯಾಗಿ ಜಲಕೃಷಿ ವಿಧಾನದಲ್ಲಿ ಬೆಳೆಯಲಾದಂತಹ ಕೆಲವು ಆಹಾರಗಳನ್ನು ಜೈವಿಕವೆಂದು ಪ್ರಮಾಣೀಕರಿಸಬಹುದು.
ಜಲಕೃಷಿಯು ನೀರನ್ನೂ ಸಹ ಉಳಿತಾಯ ಮಾಡುತ್ತದೆ; ಇದು 1⁄20ರಷ್ಟು ಕಡಿಮೆ ನೀರನ್ನು ಬಳಸುತ್ತದೆ, ಇದು ಸಾಮಾನ್ಯ ಕೃಷಿ ವಿಧಾನದಲ್ಲಿ ಉತ್ಪಾದಿಸಲಾಗುವ ಅದೇ ಪ್ರಮಾಣದ ಆಹಾರದ ಉತ್ಪಾದನೆ ಬೇಕಾಗುವಷ್ಟೇ ನೀರು ತೆಗೆದುಕೊಳ್ಳುತ್ತದೆ. ನೀರಿನ ಕೋಷ್ಟಕವನ್ನು ನೀರಿನ ಬಳಕೆ ಹಾಗು ಕೃಷಿಭೂಮಿಯಿಂದ ಬಿಡುಗಡೆಯಾಗುವ ಹೆಚ್ಚುವರಿ ರಾಸಾಯನಿಕಗಳಿಂದ ಪ್ರಭಾವಿತವಾಗಿದೆ, ಆದರೆ ಜಲಕೃಷಿಯು ಈ ಪ್ರಭಾವವನ್ನು ತಗ್ಗಿಸುವುದರ ಜೊತೆಗೆ ನೀರಿನ ಬಳಕೆಯ ಪ್ರಯೋಜನ ಹೊಂದಿದೆ. ಜೊತೆಗೆ ನೀರಿನ ವಾಪಸಾತಿಯನ್ನು ಮಾಪನಮಾಡುವುದು ಸುಲಭವಾಗುತ್ತದೆ. ಇದು ಕಡಿಮೆ ಪ್ರಮಾಣದ ನೀರನ್ನು ಬಳಕೆ ಮಾಡಿಕೊಂಡು ರೈತರಿಗೆ ಹಣವನ್ನು ಉಳಿತಾಯ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಕೃಷಿ ಭೂಮಿಯ ಸುತ್ತಲೂ ಭೂಮಿಯ ಫಲಾಫಲಗಳನ್ನು ಅಳೆಯಲು ಸಮರ್ಥವಾಗಿರುತ್ತದೆ.
ಸಸ್ಯದ ಬೆಳವಣಿಗೆಯನ್ನು ಹೆಚ್ಚು ಮಾಡಲು, ಬೆಳಕಿನ ವ್ಯವಸ್ಥೆಗಳಾದ ಲೋಹದ ಹ್ಯಾಲೈಡ್ ಗಳನ್ನು ಬೆಳೆಯುವ ಹಂತದಲ್ಲಿ ಮಾತ್ರ ಬಳಸಲಾಗುತ್ತದೆ, ಅಥವಾ ಅಧಿಕ ಒತ್ತಡವಿರುವ ಸೋಡಿಯಂ ಅನ್ನು ಬೆಳೆಯಲು/ಅರಳುವ/ಮೊಗ್ಗು ಅರಳುವ ಹಂತದಲ್ಲಿ ಬಳಸಲಾಗುತ್ತದೆ, ಇದನ್ನು ಬೆಳಕನ್ನು ವಿಸ್ತರಿಸಲು ಅಥವಾ ಬೆಳಕಿನ ಅಭಾವವಿದ್ದರೆ ನೈಸರ್ಗಿಕವಾಗಿ ಸೂರ್ಯನ ಬೆಳಕಿಗೆ ಪರ್ಯಾಯವಾಗಿ ಬಳಕೆ ಮಾಡಲಾಗುತ್ತದೆ. ನೀಲಿ ಬಣ್ಣದ ರೋಹಿತದಲ್ಲಿ ಲೋಹದ ಹ್ಯಾಲೈಡ್ ಗಳು ಅಧಿಕ ಬೆಳಕನ್ನು ಹೊರಚಿಮ್ಮಿಸುತ್ತವೆ, ಇದು ಸಸ್ಯದ ಬೆಳವಣಿಗೆಗೆ ಸೂಕ್ತವೆನಿಸುತ್ತವೆ. ಆದರೆ ಇದು ಚರ್ಮದ ಸುರಕ್ಷತೆಗೆ ಹಾನಿಕರವಾಗಿರುವುದರ ಜೊತೆಗೆ ಚರ್ಮದ ಕ್ಯಾನ್ಸರ್ ಅನ್ನು ಉಂಟುಮಾಡಬಹುದು. ಕೆಂಪು ಬಣ್ಣದ ರೋಹಿತದಲ್ಲಿ ಅಧಿಕ ಒತ್ತಡದ ಸೋಡಿಯಂ ಹೆಚ್ಚಿನ ಬೆಳಕನ್ನು ಹೊರಚಿಮ್ಮಿಸುತ್ತವೆ, ಅಂದರೆ ಇದು ನೈಸರ್ಗಿಕವಾದ ಸೂರ್ಯನ ಬೆಳಕಿಗೆ ಪೂರಕವಾಗಿದೆ ಜೊತೆಗೆ ಇದನ್ನು ಸಸ್ಯದ ಬೆಳವಣಿಗೆಯ ಹಂತದುದ್ದಕ್ಕೂ ಬಳಸಿಕೊಳ್ಳಬಹುದು. ಆದಾಗ್ಯೂ, ಈ ಬೆಳಕಿನ ವ್ಯವಸ್ಥೆಗಳ ನಿರ್ವಹಣೆಗೆ ಅಧಿಕ ಪ್ರಮಾಣದ ವಿದ್ಯುತ್ತಿನ ಅಗತ್ಯವಿರುತ್ತದೆ, ಇದು ಕಾರ್ಯಕಾರಿತ್ವವನ್ನು ದೂಷಕವನ್ನಾಗಿ ಮಾಡುತ್ತದೆ. ಹೊಸ ವಿಧಾನಗಳಾದ ದಹನ ನಿರ್ವಹಣೆಯು ದೊಡ್ಡ ವಾಣಿಜ್ಯಕ ಶೈಲಿಯ ಮಾದರಿಗಳಲ್ಲಿ ಸುರಕ್ಷತೆಯನ್ನು ಕ್ರಮಪಡಿಸಲು ಸಹಾಯಮಾಡುತ್ತವೆ.[೨೦]
ಹಸಿರುಮನೆ ಜಲಕೃಷಿ ಪರಿಸರವನ್ನು ಗರಿಷ್ಠ ಅನುಕೂಲಕ್ಕಾಗಿ ಭದ್ರವಾಗಿ ನಿಯಂತ್ರಿಸಲಾಗಿರುತ್ತದೆ. ಜೊತೆಗೆ ಈ ಹೊಸ ಮನೋರೂಢಿಯನ್ನು ಮಣ್ಣು-ರಹಿತ/ಕಂಟ್ರೋಲ್ಡ್ ಎನ್ವಿರಾನ್ಮೆಂಟ್ ಅಗ್ರಿಕಲ್ಚರ್(CEA) ಎಂದು ಕರೆಯಲಾಗುತ್ತದೆ. ಇದರೊಂದಿಗೆ ಬೆಳೆಗಾರರು, ವಿಶ್ವದ ಯಾವುದೇ ಭಾಗದಲ್ಲಾದರೂ ಅತ್ಯುಕೃಷ್ಟವಾದ ಬೆಳೆಯನ್ನು ಬೆಳೆಯಬಹುದು, ಇದರಲ್ಲಿ ತಾಪಮಾನ ಹಾಗು ಬೆಳೆಯುವ ಅವಧಿಗಳು ಪರಿಗಣನೆಗೆ ಬರುವುದಿಲ್ಲ. ಬೆಳೆಗಾರರು ತಾಪಮಾನ, ಆರ್ದ್ರತೆ, ಹಾಗು pH ಮಟ್ಟವನ್ನು ನಿರಂತರವಾಗಿ ಗಮನಿಸುತ್ತಿರುತ್ತಾರೆ.
ತರಕಾರಿಗಳು ಅಧಿಕ ಪೌಷ್ಟಿಕಾಂಶದ ಮೌಲ್ಯವನ್ನು ಒದಗಿಸಲು ಜಲಕೃಷಿಯನ್ನು ಬಳಸಲಾಗುತ್ತದೆ. ವರ್ಜೀನಿಯದ ಜಲಕೃಷಿ ವಿಧಾನದ ಒಬ್ಬ ರೈತ, ಕ್ಯಾಲ್ಷಿಯಂ ಹಾಗು ಪೊಟ್ಯಾಷಿಯಂನಿಂದ ಪುಷ್ಟಿಗೊಳಿಸಿದ ಲೆಟಿಸ್ ನ್ನು ಅಭಿವೃದ್ಧಿಪಡಿಸಿದ, ಇದು ಏಪ್ರಿಲ್ 2007ರಲ್ಲಿ ವ್ಯಾಪಕವಾಗಿ ಮಾರುಕಟ್ಟೆಗೆ ಬಿಡುಗಡೆಯಾಯಿತು. ಪರೀಕ್ಷಾ ಮಾರುಕಟ್ಟೆಗಳ ವ್ಯಾಪಾರಿಗಳು, ಲೆಟಿಸ್ ನ ವ್ಯಾಪಾರವು "ಉತ್ತಮವಾಗಿದೆಯೆಂದು" ಹೇಳಿದ್ದಾರೆ, ಜೊತೆಗೆ ರೈತರು ಜಲಕೃಷಿ ವಿಧಾನದಿಂದ ಬೆಳೆಯಲಾದ ಲೆಟಿಸ್ ಸಾಂಪ್ರದಾಯಿಕ ಮಣ್ಣಿನ ಕೃಷಿಗಿಂತ 90%ನಷ್ಟು ಕಡಿಮೆ ನೀರನ್ನು ಬಳಸಿಕೊಳ್ಳುತ್ತದೆಂದು ಸಮರ್ಥಿಸುತ್ತಾರೆ.[೨೧]
ಪ್ರಗತಿ
[ಬದಲಾಯಿಸಿ]ಕ್ರಿಮಿಕೀಟಗಳ ಸಮಸ್ಯೆಗಳು ಕಡಿಮೆಯಾಗುವುದರೊಂದಿಗೆ, ಹಾಗು ಪೌಷ್ಟಿಕಗಳನ್ನು ಸತತವಾಗಿ ಬೇರುಗಳಿಗೆ ಒದಗಿಸಿದಾಗ, ಜಲಕೃಷಿಯಿಂದ ಉತ್ಪನ್ನವು ಅಧಿಕವಾಗುತ್ತದೆ, ಆದಾಗ್ಯೂ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ನ ತಗ್ಗಿದ ಪ್ರಮಾಣ ಅಥವಾ ಸೀಮಿತ ಬೆಳಕಿನ ಒಡ್ಡಿಕೆಯಿಂದಾಗಿ ಸಸ್ಯದ ಬೆಳವಣಿಗೆಯು ಸೀಮಿತಗೊಳ್ಳಬಹುದು. ಇಳುವರಿಯನ್ನು ಮತ್ತಷ್ಟು ಹೆಚ್ಚಿಸಲು, ಕೆಲವು ಪ್ರಮಾಣೀಕೃತ ಹಸಿರುಮನೆಗಳು ತಮ್ಮ ವಾತಾವರಣದಲ್ಲಿ ಸಸ್ಯದ ಬೆಳವಣಿಗೆಗೆ ಇಂಗಾಲದ ಡೈ ಆಕ್ಸೈಡ್ ನ್ನು ಒಳಸೇರಿಕೆ ಮಾಡುತ್ತವೆ (CO
2 ಅಭಿವರ್ಧನೆ), ಹಗಲಿನ ಬೆಳಕನ್ನು ಕಡಿಮೆ ಮಾಡಲು ಕೃತಕ ಬೆಳಕನ್ನು ಒದಗಿಸುತ್ತವೆ, ಅಥವಾ ಸಸ್ಯಕಗಳ ಅಭಿವೃದ್ಧಿಯನ್ನು ನಿಯಂತ್ರಿಸುತ್ತವೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಏರೋಪೋನಿಕ್ಸ್
- ಆಕ್ವಾಪೋನಿಕ್ಸ್
- ಫೋಕೆವಾಲ್
- ಬೆಳೆ ಬೆಳೆಸುವ ಪೆಟ್ಟಿಗೆ
- ಬೆಳೆ ಬೆಳೆಸುವ ಕೊಠಡಿ
- ಆರ್ಗನೋಪೋನಿಕ್ಸ್
- ಜಡ ಜಲಕೃಷಿ
- ಸಮಗ್ರ ಕೃಷಿ
- ಜರಿಸ್ಕೇಪಿಂಗ್
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ಡೌಗ್ಲಾಸ್, ಜೇಮ್ಸ್ S. ಹೈಡ್ರೋಪೋನಿಕ್ಸ್. 5ನೇ ಆವೃತ್ತಿ. ಬಾಂಬೆ: ಆಕ್ಸ್ಫರ್ಡ್ UP, 1975. 1-3.
- ↑ "ಆರ್ಕೈವ್ ನಕಲು" (PDF). Archived from the original (PDF) on 2009-12-29. Retrieved 2010-10-14.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಟರ್ನರ್, ಬಾಂಬಿ. "ಜಲಕೃಷಿ ಹೇಗೆ ಕೆಲಸಮಾಡುತ್ತದೆ." 20 ಅಕ್ಟೋಬರ‍್ 2008. HowStuffWorks.com. <http://home.howstuffworks.com/hydroponics.htm> 17 ಸೆಪ್ಟೆಂಬರ್ 2009.
- ↑ "ದಿ ವಾಟರ್ ಕಲ್ಚರ್ ಮೆಥಡ್ ಫಾರ್ ಗ್ರೋಯಿಂಗ್ ಪ್ಲ್ಯಾಂಟ್ಸ್ ವಿಥೌಟ್ ಸಾಯಿಲ್" (PDF). Archived from the original (PDF) on 2011-04-30. Retrieved 2010-10-14.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ [೧] Archived 2011-12-21 ವೇಬ್ಯಾಕ್ ಮೆಷಿನ್ ನಲ್ಲಿ. ಜಲಕೃಷಿ ಸಮುದಾಯ ಕೈಗಾರಿಕೆ
- ↑ 10:49 a.m. ET (2009-03-04). "Alfalfa Sprouts Source Of Salmonella, Experts Say - Omaha- msnbc.com". MSNBC. Archived from the original on 2009-03-05. Retrieved 2009-03-14.
{{cite web}}
: CS1 maint: numeric names: authors list (link) - ↑ Winterborne, J., "Hydroponics: Indoor Horticulture",Published by Pukka Press, 2005, p113.
- ↑ "Research News, "Commercial Aeroponics: The Grow Anywere Story", In Vitro Report - An Official Publication of the Society In Vitro Biology, Issue 42.2, April-June 2008". Archived from the original on 2015-05-08. Retrieved 2010-10-14.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Stoner, R., "Aeroponics Versus Bed and Hydroponic Propagation", Florist Review, Vol 173 no.4477, September 22, 1983".
- ↑ ಸ್ಟೋನರ್, R.J (1983). ರೂಟಿಂಗ್ ಇನ್ ಏರ್. ಗ್ರೀನ್ ಹೌಸ್ ಗ್ರೋಯರ್ ಸಂಪುಟ I ಸಂಖ್ಯೆ. 11
- ↑ ಏರೋಪೋನಿಕ್ಸ್
- ↑ http://www.grodan.com/solutions/ನೀರು +content+meter
- ↑ "ಆರ್ಕೈವ್ ನಕಲು". Archived from the original on 2010-10-20. Retrieved 2010-10-14.
- ↑ "Deep Water Culture". Growell. Archived from the original on 2010-04-13. Retrieved 2010-10-14.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Growing Cannabis with Bubbleponics". GrowWeedEasy.com. Retrieved 2010-09-27.
- ↑ ಕಾಸ್ಟನ್, D.C., G.W. ಕ್ರೆವೆರ್, R.C. ಒವಿಂಗ್ ಹಾಗು E.G. ಡೆನ್ನಿ (1983). ಏರ್ ರೂಟಿಂಗ್ ಆಫ್ ಪೀಚ್ ಸೆಮಿಹಾರ್ಡ್ ವುಡ್ ಕಟ್ಟಿಂಗ್." ಹೊರ್ಟ್ ಸೈನ್ಸ್ 18(3): 323.
- ↑ ಅಂಡರ್ಸ್ಟ್ಯಾಂಡಿಂಗ್ pH ಡಚ್ ಮಾಸ್ಟರ್ ಜಲಕೃಷಿ
- ↑ ಕೆನ್ನೆಯ್, ಬ್ರಾಡ್ P. "ಸಕ್ಸಸ್ ಅಂಡರ್ ಗ್ಲಾಸ್." ಅಮೆರಿಕನ್ ವೆಗೆತಬ್ಲೆ ಗ್ರೋಯರ್ 1 ಮೇ 2006: 12-13.
- ↑ ಸೊರೆನ್ಸನ್, ಡಾನ್. "ಪ್ಯಾಂಪರ್ಡ್ ಟೋಮೇಟೋಸ್." ಅರಿಜೊನ ಡೈಲಿ ಸ್ಟಾರ್ 23 ಏಪ್ರಿಲ್ 2006.[೨] Archived 2009-02-11 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಆರ್ಕೈವ್ ನಕಲು". Archived from the original on 2010-11-30. Retrieved 2010-10-14.
- ↑ ಮರ್ಫಿ, ಕೇಟಿ. "ಫಾರ್ಮ್ ಗ್ರೋಸ್ ಹೈಡ್ರೋಪೋನಿಕ್ ಲೆಟ್ಯೂಸ್." ದಿ ಅಬ್ಸರ್ವರ್ 1 ಡಿಸೆಂಬರ್ 2006 [೩]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕಂಟ್ರೋಲ್ಡ್ ಎನ್ವಿರಾನ್ಮೆಂಟ್ ಅಗ್ರಿಕಲ್ಚರ್ ಸೆಂಟರ್, ಯೂನಿವರ್ಸಿಟಿ ಆಫ್ ಅರಿಜೊನ Archived 2012-01-23 ವೇಬ್ಯಾಕ್ ಮೆಷಿನ್ ನಲ್ಲಿ.
- ಹೈಡ್ರೋಪೋನಿಕ್ ಲೆಸ್ಸನ್ ಪ್ಲ್ಯಾನ್ಸ್
- ಬರಾಕ್, P. 2002. Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.ಸಸ್ಯದ ಬೆಳವಣಿಗೆಗೆ ಅಗತ್ಯವಿರುವ ಅಂಶಗಳು: ಜಲಕೃಷಿ . Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.
- ಜೆನ್ಸೇನ್, M.H. 1997. Archived 2007-09-22 ವೇಬ್ಯಾಕ್ ಮೆಷಿನ್ ನಲ್ಲಿ.ಹೈಡ್ರೊಪೋನಿಕ್ಸ್ Archived 2007-09-22 ವೇಬ್ಯಾಕ್ ಮೆಷಿನ್ ನಲ್ಲಿ.ಹೊರ್ಟ್ ಸೈನ್ಸ್ 32 Archived 2007-09-22 ವೇಬ್ಯಾಕ್ ಮೆಷಿನ್ ನಲ್ಲಿ.
- ಹವ್ಯಾಸವಾಗಿ ಜಲಕೃಷಿ: ಮಣ್ಣಿಲ್ಲದೆ ಸಸ್ಯಗಳನ್ನು ಬೆಳೆಸುವುದು. Archived 2018-08-20 ವೇಬ್ಯಾಕ್ ಮೆಷಿನ್ ನಲ್ಲಿ.ಯೂನಿವರ್ಸಿಟಿ ಆಫ್ ಇಲ್ಲಿನಾಯಿಸ್, ಸುತ್ತೋಲೆ 844 Archived 2018-08-20 ವೇಬ್ಯಾಕ್ ಮೆಷಿನ್ ನಲ್ಲಿ.
- ಉಟಃ ಸ್ಟೇಟ್ ಯೂನಿವರ್ಸಿಟಿ ಹೈಡ್ರೋಪೋನಿಕ್ಸ್ Archived 2011-07-19 ವೇಬ್ಯಾಕ್ ಮೆಷಿನ್ ನಲ್ಲಿ.
- ಮ್ಯಾಕ್ಮುರ್ಡೋ ಸ್ಟೇಶನ್ ಅಂಟಾರ್ಟಿಕಾದಲ್ಲಿ ಜಲಕೃಷಿ
- ಕಾರ್ನೆಲ್ ಯೂನಿವರ್ಸಿಟಿ ಕಮರ್ಷಿಯಲ್ ಹೈಡ್ರೋಪೋನಿಕ್ ಲೆಟ್ಯೂಸ್, ಸ್ಪಿನಾಚ್ ಅಂಡ್ ಪಾಕ್ ಚೊಇ ಗ್ರೊಯರ್'ಸ್ ಹ್ಯಾಂಡ್ಬುಕ್ಸ್
- ಮೀಥೈಲ್ ಬ್ರೋಮೈಡ್ ಸಾಯಿಲ್ ಫ್ಯೂಮಿಗೆಶನ್ ಗೆ ಪರ್ಯಾಯವಾಗಿ ಕೃತಕ ತಲಾಧಾರದಲ್ಲಿ ಜಲಕೃಷಿ ಹಾಗು ಮಣ್ಣುರಹಿತ ಸಂಸ್ಕೃತಿಗಳು
- ಜಲಕೃಷಿಯ ಆರಂಭಕ್ಕೆ ಅಗತ್ಯವಿರುವ ಅಂಶಗಳು Archived 2010-04-27 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 errors: redundant parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 maint: numeric names: authors list
- Articles with multiple maintenance issues
- Pages using multiple issues with unknown parameters
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- ಜಲಕೃಷಿ
- ಕೃಷಿ