ವಿಷಯಕ್ಕೆ ಹೋಗು

ಹೊಸಪೇಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಸಪೇಟೆ
ಹೊಸಪೇಟೆ
Population
 (೨೦೦೧)
 • Total೧೬೪೨೪೦

ಹೊಸಪೇಟೆ ವಿಜಯನಗರ ಜಿಲ್ಲೆಯ ಆಡಳಿತ ಕೇಂದ್ರ. ಹೊಸಪೇಟೆಯು ತುಂಗಭದ್ರ ನದಿ ತೀರದಲ್ಲಿದ್ದು, ಜಗತ್ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯಿಂದ ಕೇವಲ ೧೩ ಕಿ.ಮೀ ದೂರದಲ್ಲಿದೆ. 'ಹಂಪೆ' ಈ ಸ್ಥಳ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ತುಂಗಭದ್ರ ನದಿಯ ಮೇಲೆ ೨೦ ನೇ ಶತಮಾನದಲ್ಲಿ ತುಂಗಭದ್ರಾ ಅಣೆಕಟ್ಟು ಕಟ್ಟಲಾಗಿದೆ. ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ , ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ.

ಪ್ರಯಾಣ

[ಬದಲಾಯಿಸಿ]

ಬಳ್ಳಾರಿಯಿಂದ 60ಕಿ.ಮಿ ಪ್ರಯಾಣ. ಹೊಸಪೇಟೆಯು ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರಿನಿಂದ ೩೩೩ ಕಿ.ಮಿ. ಮತ್ತು ಮೈಸೂರಿನಿಂದ ೪೧೭ ಕಿ.ಮಿ. ದೂರದಲ್ಲಿದೆ ಹೊಸಪೇಟೆಯಲ್ಲಿ ರೈಲುಗಳ ಸಂಚಾರವಿದೆ. ರಾಷ್ಟ್ರೀಯ ಹೆದ್ದಾರಿ ೫೦ ಹೊಸಪೇಟೇಯ ಮೂಲಕ ಹಾದು ಹೋಗುತ್ತೆ.




ಹೊಸಪೇಟೆ ಸಮೀಪದ ಸಂಡೂರು ತಾಲೂಕಿನ ತೊರಣಗಲ್ಲಿನಲ್ಲಿ ಜಿಂದಾಲ್ ಎನ್ನುವ ಉಕ್ಕು ಮತ್ತು ಕಬ್ಬಿಣ ಕೈಗಾರಿಕೆ ಇದೆ.ಇದಕ್ಕೆ ಉಪ ಘಟಕವಾಗಿ ಸಿಮೆಂಟ್ ಕಾರ್ಖಾನೆಯೂ ಇದೆ.ಜನರು ಕೆಲಸಕ್ಕೆ ತೆರಳುತ್ತಾರೆ

ಇತಿಹಾಸ

[ಬದಲಾಯಿಸಿ]

ಈ ಊರನ್ನು ೧೫೨೦ ಕ್ರಿ.ಶ.ದಲ್ಲಿ ಕ್ರಿಷ್ಣದೇವರಾಯ ರಾಜರು ಕಟ್ಟಿದರು. ಕ್ರಿಷ್ಣದೇವರಯರು ಅವರ ತಾಯಿ ನಾಗಲ್ಲಾಂಬಿಕರವರ ನೆನಪಿನಲ್ಲಿ ಈ ಊರ ಜನರ ಬಗ್ಗೆ ಅರಿವು ಮೂಡಿಸಲು ಸ್ವೀಪ್

ಪ್ರವಾಸೀ ತಾಣಗಳು

[ಬದಲಾಯಿಸಿ]

ಹಂಪೆ ತುಂಗಭದ್ರ ಅಣೆಕಟ್ಟು ದರೋಜಿ ಕರಡಿಧಾಮ ಕಿಷ್ಕಿಂಧೆ ಅಂಜನಾದ್ರಿ ಬೆಟ್ಟ (ಹನುಮಂತ ಹುಟ್ಟಿದ ಸ್ತಳ)

ವ್ಯಾಪಾರ

[ಬದಲಾಯಿಸಿ]

ಕೃಷಿ ಇಲ್ಲಿನ ಪ್ರಮುಖ ಉದ್ಯೋಗ. ಕೃಷಿ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಗಣಿಗಾರಿಕೆಯು ಒಂದು ಪ್ರಮುಖ ಉದ್ಯಮವಾಗಿ ಬೆಳೆದಿದೆ. ಬಹಳಷ್ಟು ಉಕ್ಕಿನ ಖಾರ್ಕಾನೆಗಳು ಹೊಸಪೇಟೆ ಸುತ್ತ ಕಾಣಬಹುದು.

ಕಬ್ಬು, ಭತ್ತ, ಶೇಂಗ, ಸೂರ್ಯಕಾಂತಿ ಮತ್ತು ಬಾಳೆ ಇಲ್ಲಿನ ಪ್ರಮುಖ ಬೆಳೆಗಳು.

ತಾಲೂಕುಗಳು

[ಬದಲಾಯಿಸಿ]

1. ಹಗರಿಬೊಮ್ಮನಹಳ್ಳಿ

2. ಹರಪನಹಳ್ಳಿ

3. ಹೊಸಪೇಟೆ

4. ಹೂವಿನಹಡಗಲಿ

5. ಕೊಟ್ಟೂರು

6. ಕೂಡ್ಲಿಗಿ

[]

ಉಲ್ಲೇಖಗಳು

[ಬದಲಾಯಿಸಿ]
  1. "ಹೊಸಪೇಟೆ ತಾಲ್ಲೂಕು". Archived from the original on 2017-12-23. Retrieved 2 ಜನವರಿ 2018.


"https://kn.wikipedia.org/w/index.php?title=ಹೊಸಪೇಟೆ&oldid=1253381" ಇಂದ ಪಡೆಯಲ್ಪಟ್ಟಿದೆ