ವಿಷಯಕ್ಕೆ ಹೋಗು

ಹೊಸ್ಪೇಟೆ, ಚರ್ಚ್

ನಿರ್ದೇಶಾಂಕಗಳು: 13°4′48″N 74°58′48″E / 13.08000°N 74.98000°E / 13.08000; 74.98000
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

13°4′48″N 74°58′48″E / 13.08000°N 74.98000°E / 13.08000; 74.98000

ಹೊಸ್ಪೇಟೆ, ಚರ್ಚ್
ಪವಿತ್ರ ಶಿಲುಬೆ ಚರ್ಚ್, ಹೊಸ್ಪೇಟೆ
ಇಂಗ್ರೇಜ ಡ ಸಾಂತಾ ಕ್ರೂಝ್ ಹೊಸ್ಪೇಟೆ
ಇಂಗ್ರೇಜ ಡ ಸಾಂತಾ ಕ್ರೂಝ್ ಹೊಸ್ಪೇಟೆ (ಹೊಸ್ಪೇಟೆ ಚರ್ಚ್) ಮತ್ತು ಮೊಂಟೆ ಮರಿಯಾನೊ ಚರ್ಚುಗಳು ೧೭೯೦ ವರ್ಷಾರಂಭದಲ್ಲಿ ಟಿಪ್ಪು ಸುಲ್ತಾನ ಕೆಂಗಣ್ಣಿಗೆ ಗುರಿಯಾಗದೇ ಉಳಿದ ದಕ್ಷಿಣ ಕರಾವಳಿಯ ಕೆಲವೇ ಕೆಲವು ಚರ್ಚುಗಳಲ್ಲಿ ಒಂದಾಗಿದೆ.[]
ಹಳೆಯ ಹೆಸರುಗಳುಬಿದಿರೆ ಚರ್ಚ್
ಇತರೆ ಹೆಸರುಗಳುಹೊಸ್ಪೇಟೆ ಚರ್ಚ್,
ಇಂಗ್ರೇಜ ಡ ಸಾಂತಾ ಕ್ರೂಝ್ ಹೊಸ್ಪೇಟೆ
ಸಾಮಾನ್ಯ ಮಾಹಿತಿ
ನಗರ ಅಥವಾ ಪಟ್ಟಣಹೊಸಬೆಟ್ಟು (ಹೊಸ್ಪೇಟೆ), ಮಂಗಳೂರು, ದಕ್ಷಿಣ ಕರಾವಳಿ
ದೇಶಭಾರತ
ಮುಕ್ತಾಯ೧೭೬೧

"'ಪವಿತ್ರ ಶಿಲುಬೆ ಚರ್ಚ್"' (ಪೋರ್ಚುಗೀಸ್:ಇಂಗ್ರೇಜ ಡ ಸಾಂತಾ ಕ್ರೂಝ್ ಹೊಸ್ಪೇಟೆ) ದಕ್ಷಿಣ ಕನ್ನಡಜಿಲ್ಲೆಯ, ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದ್ದು ಭಾರತ ದೇಶದ ಮಂಗಳೂರು ಧರ್ಮಪ್ರಾಂತ್ಯದಲ್ಲಿದೆ. ಹೊಸಬೆಟ್ಟುವಿನಲ್ಲಿ ಸ್ಥಾಪಿತಗೊಂಡ ಈ ಚರ್ಚು, ಹೊಸ್ಪೇಟೆ ಚರ್ಚ್ ಎಂದು ಪ್ರಖ್ಯಾತಿಗೊಂಡಿದೆ.ಮಂಗಳುರು ಕ್ರೈಸ್ತರ ಶ್ರೀರಂಗಪಟ್ಟಣ ಸೆರೆವಾಸದ ಸಂದರ್ಭದಲ್ಲಿ ಟಿಪ್ಪು ಸುಲ್ತಾನ ಕೆಂಗಣ್ಣಿಗೆ ಗುರಿಯಾಗದೇ ಉಳಿದ ದಕ್ಷಿಣ ಕರಾವಳಿಯ ಕೆಲವೇ ಕೆಲವು ಚರ್ಚುಗಳಲ್ಲಿ ಒಂದಾಗಿದೆ.

ಇತಿಹಾಸ

[ಬದಲಾಯಿಸಿ]

ಇದು ೧೭ನೇ ಶತಮಾನಕ್ಕೂ ಮೊದಲೇ ಸ್ಥಾಪಿತಗೊಂಡಿದೆ. ಮಂಗಳುರು ಧರ್ಮಪ್ರಾಂತ್ಯದ ಅಧಿಕೃತ ದಾಖಲೆಗಳ ಪ್ರಕಾರ ಇದು ೧೭೬೧ರಲ್ಲಿ ಸ್ಥಾಪಣೆಯಾಗಿದೆ. ಹಲವಾರು ದಶಕಗಳಿಂದ ಹೊಸ್ಪೇಟೆಯು ಜೈನ ರಾಜರ ಆಡಳಿತದಲ್ಲಿತ್ತು. ಸುಮಾರು ೧೬೪೮ರ ಮೊದಲೇ ಈ ಚರ್ಚ್ ಅಶ್ತಿತ್ವದಲ್ಲಿತ್ತೆಂದು ಜೈನ ದಾಖಲೆಗಳಿಂದ ತಿಳಿದುಬರುತ್ತದೆ. ಎಲ್ಲಾ ಚರ್ಚುಗಳ ಕೆಡವಿ ಹಾಕುವ ಟಿಪ್ಪುಸುಲ್ತಾನನ ಕೆಂಗಣ್ಣಿನಿಂದ ತಪ್ಪಿಸಿಕೊಂಡ ಕೆಲವೇ ಕೆಲವು ಚರ್ಚ್-ಗಳಲ್ಲಿ ಇದೂ ಒಂದಾಗಿದ್ದು, ಮುಡಬಿದಿರೆಯಲ್ಲಿನ ಚೌಟ ರಾಜನ ನಾಶಕ್ಕೂ ಸಿಗದೇ ಉಳಿದಿದೆ.

ಪವಿತ್ರ ಶಿಲುಬೆ ಚರ್ಚ್ ಮೊದಲು ಬಿದಿರೆ ಚರ್ಚ್ ಎಂದೇ ಪ್ರಖ್ಯಾತಿಯನ್ನು ಹೊಂದಿತ್ತು. ಟಿಪ್ಪು ಸುಲ್ತಾನ(೧೭೯೯)ನ ಮರಣದ ನಂತರ ಈ ಚರ್ಚ್-ಗೆ ಹೊಸ್ಪೇಟೆ ಎಂಬ ಹೆಸರು ಬಂತು. ೧೮೬೫ರಲ್ಲಿ ವಂ.ಜೆರೊಮ್ ಪೌಲ್ ಕಾರವಾಲೊ ಅವರು ಹಳೆಯ ಚರ್ಚ್ ಕಟ್ಟಡವನ್ನು ನವೀಕರಣಗೊಳಿಸದರು. ಗೋವಾ ಅಧಿಪತ್ಯದಲ್ಲಿ, ೧೧ ಧರ್ಮಗುರುಗಳು ಇಲ್ಲಿ ಸೇವೆ ಸಲ್ಲಿಸಿದ್ದಾರೆ. ವಂ ಜೇಕಬ್ ಸಿಕ್ವೇರ(೧೯೦೧-೧೯೦೪) ಇಲ್ಲಿನ ಮೊದಲ ಧರ್ಮಗುರುಗಳಾಗಿದ್ದು, ತದನಂತರ ವಂ ಕಜೇತನ್ ಎಮ್. ಪಿರೇರಾ ಸೇವೆ ಸಲ್ಲಿದರು. ಪ್ರಸ್ತುತ ಚರ್ಚ್ ಕಟ್ಟಡದ ಅಡಿಪಾಯವನ್ನು ವಂ ಎ ದಿಯಾಮಂತಿ ಯೆ ಸ ಅವರು ೧ ಅಕ್ಟೋಬರ್ ೧೯೦೫ರಲ್ಲಿ ಹಾಕಿದ್ದು ಅತಿ. ವಂ. ಫ್ರಾಚೆಟ್ಟಿ ಯೆ ಸ, ವಿಕಾರ್ ಜನರಲ್ ಆಶೀರ್ವದಿಸಿದರು. ವಂ ಕಜೇತನ್ ಎಮ್. ಪಿರೇರಾ (೧೯೦೪–೧೯೦೭) ರವರು ಚರ್ಚ್ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ್ದು, ವಂ ರೊಸಾರಿಯೊ ಪಿ.ಬಿ. ಲುವಿಸ್(೧೯೦೮–೧೯೧೯)ರವರು ಪೂರ್ಣಗೊಳಿಸಿ ಫೆಬ್ರುವರಿ ೭, ೧೯೦೯ರಲ್ಲಿ ಬಿಷಪ್ ಎ. ಕಾವಾದಿನಿ ಯೆ ಸ ಅವರಿಂದ ಆಶೀರ್ವದಿಸಿದರು. ಧರ್ಮಪ್ರಾಂತ್ಯದಲ್ಲಿ ಗಾಥಿಕ್ ವಾಸ್ತುಶಿಲ್ಪಮಾದರಿಯಲ್ಲಿ ರಚಿತಗೊಂಡ ಕೆಲವೇ ಕೆಲವು ಚರ್ಚ್-ಗಳಲ್ಲಿ ಇದೂ ಒಂದಾಗಿದೆ.

ಹಿಂದಿನ ಚರ್ಚ್ ನಿವಾಸವನ್ನು ೧೮೫೪ರಲ್ಲಿ ನಿರ್ಮಿಸಲಾಗಿತ್ತು. ಮೂಡಬಿದಿರೆ, ಶಿರ್ತಾಡಿ, ಫೆರಾರ್, ಪಾಲಡ್ಕ ಮತ್ತು ತಾಕೊಡೆ ಚರ್ಚುಗಳು ಇದರ ವಿಸ್ತೀರ್ಣಕ್ಕೊಳಪಟ್ಟಿದ್ದವು. ಪ್ರಸತುತ ಚರ್ಚ್ ನಿವಾಸವನ್ನು ವಂ ಸಿಪ್ರಿಯನ್ ಕುವೆಲ್ಲೊ ಅವರು ೨೦೦ದಲ್ಲಿ ನಿರ್ಮಿಸಿದ್ದಾರೆ. ಹೊಸ್ಪೇಟೆ ಚರ್ಚ್-ನಲ್ಲಿ ೯ ವಾರ್ಡ್-ಗಳಿವೆ. ಸುಮಾರು ೨೮೫ ಕುಟುಂಬಗಳು ಈ ಚರ್ಚ್-ನಲ್ಲಿ ನೆಲೆಸಿದ್ದು ೧೫೦೦ ಕಥೋಲಿಕ ಜನಸಂಖ್ಯಾ ಸದಸ್ಯರನ್ನು ಒಳಗೊಂಡಿದೆ. ಪ್ರಸ್ತುತ ೪೦% ದಷ್ಟು ಜನರು ನಗರ ಪ್ರದೇಶಕ್ಕೆ ವಲಸೆ ಹೋಗಿದ್ದು ಮುಂಬಯಿ ಮತ್ತು ಮಧ್ಯ ಪೂರ್ವ ದೇಶಗಳಲ್ಲಿ ನೆಲೆಸಿದ್ದಾರೆ.

ವಂ ಆಸ್ಸಿಸಿ ರೆಬೆಲ್ಲೊ ಇಲ್ಲಿನ ೨೧ನೇ ಧರ್ಮಗುರುಗಳಾಗಿದ್ದಾರೆ.

ಹೊಸ್ಪೇಟೆ, ಹೊಸಬೆಟ್ಟು ಎಂದು ಪರಿಚಿತವಾಗಿದ್ದು, ಹಚ್ಚ ಹಸುರಿನ ತೆಂಗು, ಸಾರಾಯಿ ಕಾಯಿ ಹಾಗೂ ಅಡಿಕೆ ಎಲೆ ತೋಟಗಳಿಂದ ಕೂಡಿದ ಪ್ರದೇಶವಾಗಿದ್ದು, ದಟ್ಟ ಅರಣ್ಯ ಪ್ರದೇಶವಾಗಿ ಒಂದಾನೊಂದು ಕಾಲದಲ್ಲಿ ಕಾಡು ಮೃಗಗಳು, ಹಕ್ಕಿಗಳ ಚಿಲಿಪಿಲಿ ನಾದ, ಸಣ್ಣ ಸಣ್ನ ನೀರಿನ ಹೊಳೆಗಳು ಹಾಗೂ ಮಳೆಗಾಲದಲ್ಲಿ ಅಲ್ಲಲ್ಲಿ ನೀರಿನ ಕೊಳಗಳನ್ನು ಹೊಂದಿ ಸುತ್ತ ಬೆಟ್ಟ-ಗುಡ್ಡಗಳು, ಹಾಗೂ ವಿಶಾಲವಾದ ಬಯಲು ಪ್ರದೇಶವನ್ನು ಹೊಂದಿತ್ತು.

ಗಾಥಿಕ್ ವಾಸ್ತುಶಿಲ್ಪದಿಂದ ರಚಿಸಿದ ಈ ರೋಮನ್ ಕಥೋಲಿಕ ಚರ್ಚ್ ಸುಂದರ ಪ್ರಕೃತಿಯ ನಡುವೆ ಪವಿತ್ರ ಶಿಲುಬೆ ಚರ್ಚ್ ಹೊಸಬೆಟ್ಟು ಎಂಬ ಹೆಸರಿನಲ್ಲಿ ರಾರಾಜಿಸುತ್ತಿದೆ. ಇದು ಮಂಗಳೂರಿನಿಂದ ೪೧ಕಿಮೀ ಈಶಾನ್ಯ ದಿಕ್ಕಿನಲ್ಲಿದ್ದು, ಮೂಡಬಿದಿರೆ ಪಟ್ಟಣದಿಂದ ೬ಕಿಮೀ ದೂರದಲ್ಲಿದೆ.ಕುದ್ರೆಪದವು, ತಾಕೊಡೆ ಮತ್ತು ಮೂಡಬಿದಿರೆ ಚರ್ಚುಗಳು ಇದರ ಆಸುಪಾಸಿನಲ್ಲಿವೆ. ಹೊಸ್ಪೇಟೆ ಚರ್ಚ್ ಹೊಸಬೆಟ್ಟು ಹಳ್ಳಿಯಲ್ಲಿದೆ. ಚರ್ಚ್ ಸುತ್ತಲಿನ ಪ್ರದೇಶದಲ್ಲಿ ಅರಣ್ಯ ಆವರಿಸಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಇದು ಕೇವಲ ೪೬ ಕಿಮೀ ಅಂತರದಲ್ಲಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪವಿತ್ರ ಶಿಲುಬೆಗೆ ಸರ್ಮಪಿಸಲ್ಪಟ್ಟ ಮೊತ್ತ ಮೊದಲ ಚರ್ಚ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಹೊಸಬೆಟ್ಟು ಸ್ಥಳ ಹಾಗೂ ಇಲ್ಲಿಯ ಜನರ ಮೂಲದ ಬಗ್ಗೆ ವಿವರಣೆ ನೀಡಲು ಕಷ್ಟವಾದ ಹಾಗೆಯೇ, ಈ ಚರ್ಚಿನ ಆರಂಭದ ದಿನಾಂಕವನ್ನು ಸೂಚಿಸುವುದೂ ಅಷ್ಟೇ ಕಷ್ಟಕರವಾಗಿದೆ. ಆದರೆ ಇದಕ್ಕೆ ಪೋರ್ಚುಗೀಸರ ಮೂಲ ಇದೆ ಎಂದು ನಿಖರವಾಗಿ ಹೇಳಬಹುದು. ಹಾಗಾಗಿ ದಕ್ಷಿಣ ಕರಾವಳಿಯ ರೋಮನ್ ಕಥೋಲಿಕ ಇತಿಹಾಸದಲ್ಲಿ ಈ ಚರ್ಚ್ ತನ್ನದೇ ಆದ ಛಾಪನನ್ಉ ಹೊಂದಿದೆ. ಹಳೆಯ ದಾಖಲೆಗಳ ಪ್ರಕಾರ ಇದನ್ನು "ಬಿದಿರೆ ಚರ್ಚ್" ಎಂದು ಕರೆಯಲಾಗುತ್ತಿತ್ತು. ಆದರೆ ಹಲವರು ಇದನ್ನು ಹೊಸ್ಪೇಟೆ ಚರ್ಚ್ ಎಂದೂ ಕರೆಯುತ್ತಿದ್ದು(Portuguese: ಇಂಗ್ರೇಜ ಡ ಸಾಂತಾ ಕ್ರೂಝ್ ಹೊಸ್ಪೇಟೆ). ಪ್ರಾಚೀನ ಕಾಲದಿಂದಲೂ 'ಬಿದಿರೆ' ಅಥವಾ ಮೂಡಬಿದಿರೆಯು ಪ್ರಖ್ಯಾತಿಯನ್ನು ಪಡೆದುದರಿಂದ ಹೀಗೆ ಕರೆಯಲಾಗುತ್ತಿತ್ತು, ಚೌಟ ರಾಜ ಸುರ್ಪದಿಯಲ್ಲಿ ಹಲವಾರು ಜೈನ ಸಮುದಾಯದ ಧಾರ್ಮಿಕ ಕೇಂದ್ರಗಳಾದ ಹಲವಾರು ಜೈನ ಬಸದಿಗಳು ಇಲ್ಲಿ ಇದ್ದವು.ಹಲವು ದಶಕಗಳಿಂದ ಹೊಸ್ಪೇಟೆಯು ಜೈನ ರಾಜರ ಆಡಳಿತದಲ್ಲಿತ್ತು. ಕಥೋಲಿಕ ಕೇಂದ್ರವಾಗಿ ಬಿದಿರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಸಬೆಟ್ಟು ಚರ್ಚ್ ಏಕಮಾತ್ರವಾಗಿತ್ತು. ಹಾಗಾಗಿ ಇದನ್ನು "ಬಿದಿರೆ ಚರ್ಚ್" ಎಂದು ಕರೆಯುತ್ತಿದ್ದರು.

ಇತಿಹಾಸದ ಪುಟಗಳಲ್ಲಿ ಕ್ರೈಸ್ತ ಕೇಂದ್ರಗಳ ಮೇಲಿನ ಹೈದರ್ ಹಾಗೂ ಟಿಪ್ಪು ಸುಲ್ತಾನರ ಆಕ್ರಮಣವನ್ನು ಉಲ್ಲೇಖವಿದೆ. ದಕ್ಷಿಣ ಕರಾವಳಿಯಲ್ಲಿ ೧೭೮೪ ರಲ್ಲಿ ಟಿಪ್ಪು ಸುಲ್ತಾನನು ನಡೆಸಿದ ಕ್ರೈಸ್ತರ ಮೇಲಿನ ಆಕ್ರಮಣ ಹಾಗೂ ದಬ್ಬಾಳಿಕೆಯನ್ನು ವಿವರಿಸುತ್ತದೆ. ೧೭೮೪ರ ಮಂಗಳೂರು ಒಪ್ಪಂದದ ತರುವಾಯ ಟಿಪ್ಪು ಸುಲ್ತಾನನು ದಕ್ಷಿಣ ಕರವಳಿ ಮೇಲಿನ ಹಿಡಿತವನ್ನು ಸಾಧಿಸಿ ಇಲ್ಲಿ ನೆಲೆಸಿರುವ ಕ್ರಿಶ್ಚಿಯನ್ನರನ್ನು ಬಂಧಿಸಲು ಆದೇಶಿಸುತ್ತಾನೆ ಅಲ್ಲದೇ ಹಲವಾರು ಸಂತರ ಮೂರ್ತಿಗಳನ್ನು ಹೊಂದಿ ಸುಂದರ ವಾಸ್ತುಶೀಲ್ಪಗಳನ್ನೊಳಗೊಂಡ ೨೭ ಕ್ರೈಸ್ತ ಚರ್ಚ್-ಗಳನ್ನು ಕೆಡವಿ ಹಾಕಲು ಆದೇಶಿಸುತ್ತಾನೆ. ಆದರೆ ಪರಂಪರೆಯನ್ನು ಹೊಂದಿದ ಹೊಸಬೆಟ್ಟು ಚರ್ಚನ್ನು ಟಿಪ್ಪು ಸುಲ್ತಾನ ಕಡವಲು ಸಾಧ‍ಯವಾಗಿಲ್ಲ. ಇದಕ್ಕೆ ಮೂಲ ಕಾರಣ ಇಲ್ಲಿಯ ಕ್ರಿಶ್ಚಿಯನ್ನರು ಅಡಿಕೆ ಎಲೆಯ ತೋಟಗಳನ್ನು ಹೊಂದಿ ಅವುಗಳನ್ನು ಬಿದಿರೆಯ ಚೌಟ ರಾಜನಿಗೆ ಹಾಗೂ ಅವರ ಆಸ್ಥಾನಿಕರಿಗೆ ಒದಗಿಸುತ್ತಿದ್ದರು. ಇದು ಚರ್ಚ್ ಅಸ್ಥಿತ್ವವನ್ನು ಟಿಪ್ಪುವಿನ ಆಕ್ರಮಣದಿಂದ ಉಳಿಸಲು ಹಾಗೂ ಕ್ರಿಶ್ಚಿಯನ್ನರನ್ನು ಸ್ವತಂತ್ರವಾಗಿಡಲು ಪ್ರಮುಖ ಕಾರಣವಾಯಿತು. ಹೀಗೆ ೧೭೮೪ ರಿಂದ ೧೭೯೯ರವರೆಗೆ ಟಿಪ್ಪುವಿನ ಆಕ್ರಮಣಕ್ಕೆ ಗುರಿಯಾಗದೇ ಇದ್ದ ಚರ್ಚ್-ಗಳಲ್ಲಿ ಒಂದಾಗಿದೆ.

ಚರ್ಚ್ ದಾಖಲೆಗಳ ಉಲ್ಲೇಖದಂತೆ ೧೭೯೮ರಲ್ಲಿ ವಂ ಬೆನೆಡಿಕ್ಟ್ ದೆ ತ್ರಿವಿದಾದ್ ಇಲ್ಲಿನ ಮೊದಲ ಧರ್ಮಗುರು. ಈ ಸಮಯದಲ್ಲಿ ದಕ್ಷಿಣ ಕನ್ನಡ (ದಕ್ಷಿಣ ಕರಾವಳಿ) ಜಿಲ್ಲೆ ಅತಿ ವಿರ ಚರ್ಚ್-ಗಳನ್ನು ಹೊಂದಿತ್ತು. ಹಾಗಾಗಿ ಹಲವು ವರ್ಷಗಳವರೆಗೆ ಈ ಚರ್ಚ್ ದಕ್ಷಿಣ ಕರಾವಳಿಯ ಅತ್ಯಂತ ವಿಶಾಲವಾದ ಪ್ರದೇಶವನ್ನು ಹೊಂದಿತ್ತು. ಗುರುಪುರ ನದಿ ದಕ್ಷಿಣದಲ್ಲಿ, ಪಶ್ಚಿಮ ಘಟ್ಟಗಳ ಪೂರ್ವದ ಗಡಿಭಾಗವಾಗಿತ್ತು. ಚಿಲಿಂಬಿಯು ಅತ್ತೂರು ಕಾರ್ಕಳ ಮತ್ತು ಹೊಸಬೆಟ್ಟು ಚರ್ಚ್-ಗಳನ್ನು ಬೇರ್ಪಡಿಸುವ ರೇಖೆಯಾಗಿತ್ತು. ಕಿರೆಂ, ಫೆಜಾರ್ ಮತ್ತು ಅಗ್ರಾರ್ ಚರ್ಚಿನ ಇತರ ನೆರೆ ಚರ್ಚ್-ಗಳಾಗಿದ್ದವು. ನೆಹೊರೆಯ ಎಲ್ಲಾ ಚರ್ಚುಗಳು ತದನಂತರದ ಮೂಲಗಳನನ್ಉ ಹೊಂದಿವೆ.

ವಂ.ಬೆನೆಡಿಕ್ಟ್ ರೇಯಿಸ್ ದೆ ತ್ರಿವಿದಾದ್ ಅವರ ಆಗಮನ ೧೭೯೮ರಲ್ಲಿ ಮೊದಲನೆಯದೆಂದ ಗುರುತಿಸಲ್ಪಟ್ಟರೂ, ಇದರ ಅಶ್ತಿತ್ವವು ಇದಕ್ಕೂ ಮೊದಲಿನದು ಎಂದು ಹೇಳಬಹುದು. ಏಕೆಂದರೆ, ಇತ್ತೀಚಿನ 'ಬಿದಿರೆ ಜೈನ ಬಸದಿ'ಗಳ ಅಧ್ಯಯನವು ಇದರ ಅಸ್ಥಿತ್ವವನ್ನು ೧೬೪೮ಕ್ಕೂ ಮೊದಲಿನದು ಎಂದು ಸೂಚಿಸುತ್ತದೆ. ಕೆಲವು ಪ್ರಾಚೀನ ಮೂಡಬಿದಿರೆ ಪಟ್ಟಣಕ್ಕೆ ಸಂಬಂಧಪಟ್ಟ ಜೈನ ಸಾಹಿತ್ಯಗಳು ಹೊಸಬೆಟ್ಟು ಚರ್ಚ್ ೧೬೪೮ಕ್ಕೂ ಮೊದಲೇ ಪ್ರತಿಷ್ಠಾಪಿತಗೊಂಡಿರುವುದನ್ನು ಉಲ್ಲೇಖಿಸಿವೆ. ದ್ವಿತೀಯವಾಗಿ, ಭಾರತೀಯ ದೇವದೂತ ಸಂ. ಥೋಮಸ್ ಅವರು ಕ್ರಿಸ್ತ ಶಕದ ಮೊದಲನೇ ಶತಮಾನದಲ್ಲಿ ದಕ್ಷಿಣದ ಭಾಗಗಳಲ್ಲಿ ಧರ್ಮದ ಮೇಲಿನ ನಂಬಿಕೆಯ ಬೆಳಕನ್ನು ಉರಿಸಿದರು ಎಂಬ ಉಲ್ಲೇಖಗಳೂ ಇವೆ. ಅವರು ಪರಿಚಯಿಸಿದ ಬೈಬಲ್-ಅನ್ನು ಆರಂಭಿಕ ಫ್ರಾನ್ಸಿಸ್ಕನ್ ಮಿಷನರಿಗಳು ೧೫೧೦ರಲ್ಲಿ ಮುಂದುವರೆಸಿಕೊಂಡು ಹೋದರು. ಹೀಗಾಗಿ, ಚರ್ಚ್ ೧೫೧೦ರಲ್ಲಿ ಅಥವಾ ಅದಕ್ಕೂ ಮೊದಲೇ ಅಸ್ಥಿತ್ವದಲ್ಲಿತ್ತು ಎಂದು ನಮ್ಮ ಅನಿಸಿಕೆ. ಆದರೆ ಪ್ರಾಚೀನ ದಾಖಲೆಗಳ ಸಮರ್ಪಕ ನಿಎfವಹಣೆ ಇಲ್ಲದೇ ಇದ್ದುದರಿಂದ ಮತ್ತು ಮೂಲಗಳ ಕೊರತೆಯಿಂದಾಗಿ, ಇದರ ಅಸ್ಥಿತ್ವದ ನಿಖರ ಮಾಹಿತಿ ಮತ್ತು ಅಪರಿಚಿತ ಸತ್ಯಗಳನ್ನು ತಿಳಿಯಲು ಅಸಾಧ್ಯವಾಗಿದೆ. ಆದುದರಿಂದ ಆಲ್ಫಾ ಅಥವಾ ಚರ್ಚ್-ನ ಆದಿಕಾಂಡದ ಪ್ರಕಾರ ಇದರ ಮೂಲ ನಿಗೂಢವಾಗಿದೆ. ಕಳೆದುಹೋದ ಸತ್ಯಗಳನ್ನು ತಿಳಿಯಲು ನಾವು ಲೆಕ್ಕಾಚಾರ ಮತ್ತು ವಿವೇಚನಾಶಿಲರಾಗಬೇಕು.

೧೭೯೮ರಿಂದೀಚೆಗೆ ಪವಿತ್ರ ಶಿಲುಬೆ ಚರ್ಚ್ ಅನೇಕ ಬದಲಾವಣೆಗಳನ್ನು ಕಂಡಿದೆ. ಚರ್ಚಿನ ದೈಹಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಆಂತರಿಕ ಬದಲಾವಣೆಗಳು ನಡೆಯುತ್ತಲೇ ಇವೆ. ಹಲವಾರು ಧರ್ಮಗುರುಗಳು ಇಲಲ್ಇ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದಾರೆ. ಈ ವಿಶಾಲವಾದ ಚರ್ಚಿನಿಂದ ಬೇರ್ಪಟ್ಟು ಅನೇಕ ಅಂಗ ಚರ್ಚ್-ಗಳೂ ನಿರ್ಮಾಣಗೊಂಡಿವೆ. ಪ್ರಸ್ತುತ ಇಲ್ಲಿ ೨೯೪ ಕುಟುಂಬಗಳು ೯ ವಾರ್ಡ್-ಗಳಲ್ಲಿ ವಾಸ್ತವ್ಯವನ್ನು ಹೊಂದಿದ್ದಾರೆ. ಅನೇಕ ವರ್ಷಗಳಿಂದ ಈ ಚರ್ಚ್ ಹಲವಾರು ಧರ್ಮಗುರು, ಧರ್ಮಭಗಿನಿಯರು, ಧಾರ್ಮಿಕರು ಮತ್ತು ದೈವಾಂಶವುಳ್ಳ ಕುಟುಂವಗಳಿಗೆ ಸಾಕ್ಷಿಯಾಗಿದೆ. ಅತ್ಯಂತ ಪ್ರಮುಖ ವಿಚಾರವೆಂದರೆ ಇಲ್ಲಿನ ಪವಿತ್ರ ಶೀಲುಬೆಯು ಭಕ್ತಾದಿಗಳಿಗೆ ಆಶಿರ್ವದಿಸುತ್ತಾ ಬಂದಿದ್ದು ಅನೇಕ ಅದ್ಬುತಗಳನ್ನು ಮಾಡಿದೆ.

ಚರ್ಚ್ ಕಟ್ಟಡ

[ಬದಲಾಯಿಸಿ]

ಬಿದಿರೆ ಚರ್ಚ್ ಕಟ್ಟಡವು ಎಸ್.ಎನ್.೭೫ರಲ್ಲಿ ಸುಮಾರು ೩೦೦ಯಾರ್ಡ್ ಅಂತರದಲ್ಲಿ ಪ್ರಸ್ತುತ ಚರ್ಚ್ ಕಟ್ಟಡದ ದಕ್ಷಿಣ ಭಾಗದ ಸ್ಥಳದಲ್ಲಿದೆ. ಇದು 'ಭಟ್' ಎಂದು ಕರೆಯಲ್ಪಡುವ ನಿವೇಶನದಲ್ಲಿದೆ. ಮೂಲತಃ ಇನ್ನೊಂದು ನಿವೇಶನ ಇರುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. 'ಭಟ್' ನಿವೇಶನವು, ವಂ.ಬೆನೆಡಿಕ್ಟ್ ರೇಯಿಸ್ ದೆ ತ್ರಿವಿದಾದ್ ಅವರ ಸಮಾಧಿ ಮಾಡಲಾದ ಸ್ಥಳದಲ್ಲಿರಬಹುದು ಎಂದು ನಂಬಲಾಗಿದೆ. ಪ್ರಸ್ತುತ ಇಲ್ಲಿ ಶೀಲುಬೆಯನ್ನು ಪ್ರತಿಷ್ಠಾಪಿಸಲಾಗಿದ್ದು ಇದನ್ನು ಹಳೇ ಸ್ಮಶಾನ ಎಂದು ಕರೆಯಲಾಗುತ್ತಿದೆ.

ಚರ್ಚ್ ಕಟ್ಟಡವು ಎಸ್.ಎನ್. ೭೪-೩ಎ ನಿವೇಶನದಲ್ಲಿ ಸ್ಥಾಪಣೆಗೊಂಡಿದೆ. ಇದೊಂದು ಗಿಲೀಟು ಬಲಿಪೀಠವನ್ನು ಹೊಂದಿರುವ ಸುಂದರ ಚರ್ಚ್ ಆಗಿದೆ. ಇದು ಪ್ರಸ್ತತ ಚರ್ಚ್ ಕಟ್ಟಡ (ನಿರ್ಮಾಣ ೧೯೦೯)ದ ಪಶ್ಚಿಮ ಭಾಗದಲ್ಲಿದೆ. ಇದರ ಪರಿಶುದ್ಧತೆಯನ್ನು ೧೯೩೨ರ ತನಕ ಕಾಯ್ದುಕೊಳ್ಳಲಾಗಿದೆ. ಚರ್ಚ್ ನಿವಾಸವನ್ನು ಹಳೆಯ ಚರ್ಚ್ ಕಟ್ಟಡದ ಜೊತೆಗೆ ನಿರ್ಮಿಸಲಾಗಿದ್ದು, ಯಾರು, ಯಾವಾಗ ಮತ್ತು ಯಾವ ಕಾಲಮಾನದಲ್ಲಿ ನಿರ್ಮಿಸಲಾಗಿದೆಎಂಬ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಚರ್ಚ್ ಕಟ್ಟಡವನ್ನು ವಂ ಜೆರೊಮ್ ಕಾರ್ವಾಲೊ ಅವರು ೧೮೬೫ರಲ್ಲಿ ಪುನರುಜ್ಜೀವನಗೊಳಿಸಿ ಸ್ವಲ್ಪ ಜಾಸ್ತಿ ನಿವೇಶನವನ್ನು ಸೇರ್ಪಡೆಗೊಳಿಸದರು.

೧೯೦೪ರಲ್ಲಿ ಚರ್ಚ್ ಕಟ್ಟಡವು ಶಿಥಿಲಗೊಂಡು ಅದರ ದುರಸ್ಥಿ ಕಾರ್ಯವು ಅತ್ಯಂತ ಪ್ರಮುವಾಗತೊಡಗಿತು. ಚರ್ಚಿನ ಎರಡು ಪ್ರಮುಖ ಅಂಶಗಳಾದ "ಚರ್ಚ್ ಛಾವಣಿ" ಮತ್ತು ಕಟ್ಟಡದ ಚರ್ಚ್ ಗೋಡೆ"ಯನ್ನು ಸರಿಪಡಿಸಲು ರು ೪೦,೦೦೦ ನಗದು ಇತ್ತು. ವಂ. ಕಜೇತನ್ ಮ್. ಪಿರೇರಾ ಅವರು ಹೊಸ ಚರ್ಚ್ ಕಟ್ಟಡ ನಿರ್ಮಿಸಲು ನಿರ್ಧರಿಸಿದರು.ವಂ. ದಿಯಾಮಂತಿ ಯೆ.ಸ. ಅವರು ಭವ್ಯ ಗಾಥಿಕ್ ಶೈಲಿಯಲ್ಇ ಮಧ್ಯಭಾಗದಲ್ಲಿ ಗುಮ್ಮಟ ಬರುವಂತೆ ರೂಪುರೇಷೆಗಳನ್ನು ಬಿಡಿಸಿದರು. ಅಂದಿನ ವಿಕಾರ್ ಜನರಲ್, ವಂ. ಡಾ|. ಇ. ಫ್ರಕೆಟ್ಟಿ ಯೆ.ಸ. ಅವರು ಅಡಿಪಾಯ ಕಲ್ಲನ್ನು ೧ ಅಕ್ಟೋಬರ್ ೧೯೦೫ರಲ್ಲಿ ಆಶಿರ್ವದಿಸಿದರು. ಕಟ್ಟಡದ ಕಾಮಗಾರಿಯು ವಂ. ದಿಯಾಮಂತಿ ಯೆ.ಸ. ಅವರ ಮೇಲುಸ್ತುವಾರಿಯಲ್ಲಿ ನಡೆದು ವಂ ಗಿಯೊವಾಣಿ ಯೆ.ಸ. ಅವರ ಕಾಲಕ್ಕೆ ಚರ್ಚ್ ಬೊಕ್ಕಸವು ಬರಿದಾಯ್ತು.

ಹೀಗಾಗಿ ವಂ. ಕಜೇತನ್ ಎಮ್. ಪಿರೇರಾ ಅವರು ಚಿಂತಾಕ್ರಾಂತರಾಗಿ ಕೆಲಸವನ್ನು ಮುಂದುವರೆಸಲು ಆಗಲಿಲ್ಲ. ಮೊನ್ಸಿಂಜ್ಞೊರ್ ಎಮ್. ಪಿ. ಕುಲಾಸೊ ಅವರು ಇವರನ್ನು ಕೊರ್ಡೆಲ್ ಚರ್ಚಿಗೆ ಕರೆತಂದು ಅಲ್ಲಿ ೩ ತಿಂಗಳು ವಾಸ್ತವ್ಯ ಹೂಡಿದರು. ಅವರ ಆರೋಗ್ಯ ಹದೆಗೆಡುತ್ತಾ ಬಂದುದರಿಂದ ಅವರನ್ನು ಫಾ|ಮುಲ್ಲರ್ ಆಸ್ಪತ್ರೆ, ಕಂಕನಾಡಿ, ಮಂಗಳೂರು ಇಲ್ಲಿ ಆರೋಗ್ಯ ಸುಧಾರಣೆಗಾಗಿ ಇರಿಸಲಾಯಿತು. ಇಲ್ಲಿ ಅವರು ತಮ್ಮ ಕೊನೆಯುಸಿರೆಳದರು. ಅವರ ಪ್ರಾರ್ಥಿವ ಶರೀರವನ್ನು ಕಂಕನಾಡಿಯ ಲೆಪರ್ಸ್ ಚಾಪೆಲ್-ನಲ್ಲಿ ಸಮಾಧಿ ಮಾಡಲಾಗಿದೆ. ಈ ಸಮಯದಲ್ಲಿ ವಂ ಕೊರ್ಟಿ ಯೆ.ಸ. ಚರ್ಚ್ ಕಾರ್ಯಗಳಲ್ಲಿ ಸಹಕರಿಸುತ್ತಿದ್ದರು.

ವಂ. ರೊಸಾರಿಯೊ ಪಿ.ಬಿ. ಲುವಿಸ್ ಅವರು ಧರ್ಮಗುರುಗಳಾಗಿ ಬಂದ ನಂತರ ಉಳಿದ ಕಾರ್ಯಗಳನ್ನು ಪೂರ್ತಿಗೊಳಿಸಿದರು. ಅವರು ಖರ್ಚು ಕಡಿಮೆ ಮಾಡಲು ರೂಪುರೇಷೆಗಳನ್ನು ಹಾಕಿದರು.ಗುಮ್ಮಟವನ್ನು ವರ್ಜಿಸಿ ಕಿಟಕಿಗಳನ್ನು ಅರ್ಧ ರೋನ್ ಶೈಲಿಗೆ ಬದಲಾಯಿಸಲಾಯ್ತು. ಅವರು ಕೆಲಸವನ್ನು ಪೂರ್ಣಗೊಳಿಸುವಲ್ಲಿ ಆಸಕ್ತಿಯನ್ನು ಹೊಂದಿದ್ದರಲ್ಲದೇ ಅನಗತ್ಯ ಸಾಲ ಮತ್ತು ಶ್ಯೆಲಿಯಲ್ಲಿ ಅಲ್ಲ. ಹೀಗಿದ್ದರೂ ಅವರು ಕಾರ್ಕಳದ ಶ್ರೀ ಎಸ್.ಎಲ್. ಮಥಾಯಸ್ ಅವರೊಂದಿಗೆ ರು ೮೦೦೦ಗಳನ್ನು ಸಾಲ ಪಡೆಯುವಂತಾಯ್ತು. ಮುಂದೆ ಅವರು ೩ ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ರು ೨,೫೦೦ಗಳ ಸಾಲವನ್ನು ಸ್ಥಳಿಯರಿಂದ ಪಡೆದರು.ಅವರು ವರ್ಗ ಆಗಿ ಹೋಗುವ ಮುಂಚೆಯೇ ಸ್ಥಳೀಯ ಸಾಲವನ್ನು ತೀರಿಸದರು. ಚರ್ಚ್ ಕಟ್ಟಡವನ್ನು ಬಿಷಪ್ ಅತಿ. ವಂ. ಡಾ|. ಎ. ಕವಾದಿನಿ ಯೆ.ಸ. ಅವರು ೭ ಫೆಭ್ರುವರಿ ೧೯೦೯ರಲ್ಲಿ ಆಶೀರ್ವದಿಸಿ ಅದರ ಮರುದಿನವೇ ಚರ್ಚಿನ ಅದ್ಧೂರಿ ಬಲಿಪೂಜೆಯನ್ನು ನೆರವೇರಿಸಲಾಯಿತು.

ಅಭಿವೃದ್ಧಿ

[ಬದಲಾಯಿಸಿ]

ನಮಗೆ ಉಪಲಬ್ದವಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಚರ್ಚ್ ಹಾಗೂ ಈ ಪ್ರದೇಶದ ಅಭಿವೃದ್ಧಿಯ ಉತ್ತಮ ಚಿತ್ರಣ ನೀಡಲು ಸಹಕಾರಿಯಾಗುತ್ತದೆ. ಆದರೂ ಪ್ರತಯೊಂದ ಬೆಳವಣಿಗೆಯ ನಿಖರವಾದ ಕಾಲಾನುಕ್ರಮಣೀಕೆಯನ್ನು ವಿವರಗಳನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಯೊಂದು ಧರ್ಮಗುರುಗಳ ಸೇವೆ ಅವಧಿಯಲ್ಲಿ ನಡೆದ ಪ್ರಮುಖ ಬೆಳವಣಿಗೆಗಳನ್ನು ಇಲ್ಲಿ ನೀಡಲಾಗಿದೆ. ಪ್ರಸ್ತುತ ಚರ್ಚ್-ಗೆ ಭೂಸಂಪತ್ತು ಇಲ್ಲವಾದ್ಧರಿಂದ, ಅನೇಕ ಅಭಿವೃದ್ಧಿ ಕಾರ್ಯಗಳ ವಿವರವನ್ನು ಕೈಬಿಡಲಾಗಿದೆ(ಈ ಬಗ್ಗೆ ನಮಗೂ ಮಾಹಿತಿ ಇಲ್ಲ). ಚರ್ಚ-ಗೆ ನೀರಿನ ಕೊರತೆ ಇದ್ದುದರಿಂದ ವಾಸ್ತವವಾಗಿ, ಇಲ್ಲಿ ಸೇವೆ ಸಲ್ಲಿದ ಎಲ್ಲಾ ಧರ್ಮಗುರುಗಳೂ ಬಾವಿ ಹಾಗೂ ಕೊಳವೆಬಾವಿಗಳ ನಿರ್ಮಾಣಕ್ಕೆ ಪ್ರಯತ್ನಿಸಿದ್ದರಿಂದ ಅದರ ವಿಚಾರವನ್ನು ಇಲ್ಲಿ ಪಟ್ಟಿ ಮಾಡಲಿಲ್ಲ.

ವಂ ಜೆ ಎಮ್ ಎ ವಾಸ್ ಅವರು ೧೯೧೯ ಮತ್ತು ೧೯೩೧ ರಲ್ಲಿ ಚರ್ಚ್ ಸುತ್ತಲೂ ಮುಖಮಂಟಪವನ್ನು ನಿರ್ಮಿಸಿದ್ದರಲ್ಲದೇ, ಅಡುಗೆ ಕೋಣೆ ಮತ್ತು ದಾಸ್ತಾನುಗೃಹವನ್ನು ನಿರ್ಮಿಸಿದರು. ಚರ್ಚಿನ ಪುಗೃಹಗಳನ್ನು ವಂ ಆಲ್ಬರ್ಟ್ ಡೆ'ಸ್ಸಾ ಅವರು ೧೯೩೧-೧೯೩೭ರ ಅವಧಿಯಲ್ಲಿ ನಿರ್ಮಿಸಿದರು. ಚರ್ಚಿನ ಅಂತಸ್ತಿನ ಕೆಲಸವನ್ನೂ ಇದೇ ಸಮಯದಲ್ಲಿ ಅಭಿವೃದ್ಧಿಗೊಳಿಸಲಾಯಿತು. ೧೯೩೭ರಲ್ಲಿ ಆಗಮಿಸಿದ ವಂ ಎ.ಜೆ. ಸಿಲ್ವಾ ಅವರು, ಅಡುಗೆಕೋಣೆ ಹಾಗೂ ದಾಸ್ತಾನುಗೃಹದ ರೂಪುರೇಷೆಯನ್ನು ಬದಲಾಯಿಸಿ ಅದನ್ನು ಪೂರ್ಣಗೊಳಿಸದರು.

ಜೆಪ್ಪುವಿನಲ್ಲಿರುವ ಸಂ ಜೋಸೆಫ್ ಕಾರ್ಯಾಗಾರದಿಂದ ಪ್ರವಚನಪೀಠವನ್ನು ೧೯೫೦ರಲ್ಲಿ ರು.೧೦೦೦ದಲ್ಲಿ ಮಾಡಿಸಿ ತರಲಾಯ್ತು. ಚರ್ಚ್ ನಿವಾಸದಿಂದ ಚರ್ಚ್-ಗೆ ಹೋಗುವ ಹಾದಿಯನ್ನು ೧೯೫೧ರಲ್ಲಿ ದುರಸ್ತಿಗೊಳಿಸಲಾಗಿದ್ದು, ದಾಸ್ತಾನುಗೃಹವು ಬಹುದೂರದಲ್ಲಿದ್ದುದರಿಂದ ಅದನ್ನು ಪುನರ್ನಿರ್ಮಿಸಿ ಕಛೇರಿಯನ್ನಾಗಿ ಮಾರ್ಪಡಿಸಲಾಯಿತು.

೧೯೫೨ ಮತ್ತು ೧೯೫೩ರಲ್ಲಿ ಚರ್ಚ್-ನ ಇಬ್ಬದಿ ಮುಖಮಂಟಪವನ್ನು ರಚಿಸಲಾಯಿತು. ಕಟ್ಟಡದ ಮುಂಭಾಗಕ್ಕೆ ಸೂಕ್ತ ರಚನೆ ಹಾಗೂ ಬದಿಗಳ ಮುಖಮಂಟಪವನ್ನು ಬಾಗಿಲುಗಳ ರಕ್ಷಣೆಗಾಗಿ ೧೯೫೪ರಲ್ಲಿ ನಿರ್ಮಿಸಲಾಯ್ತು. ಅದೇ ವೇಳೆಯಲ್ಲಿ ಒಳಭಾಗದಲ್ಲಿ ಮೂರ್ತಿಗಳ ವರ್ಣರಂಜಿತ ಚಿತ್ರಗಳನ್ನು ೧೯೫೬ರಲ್ಲಿ ಬಿಡಿಸಿ.ಕಟ್ಟಡ ಅಂತಸ್ತು, ಚರ್ಚ್ ನಿವಾಸ (ಕೆಳಸ್ತರ)ದ ಭಾಗ, ಅಡುಗಕೋಣೆ ಹಾಗೂ ಹಾದುಹೋಗುವ ದಾರಿಗಳಿಗೆ ಸಿಮೆಂಟ್ ಅನ್ನು ರು ೪೦೦೦೦ ವೆಚ್ಚದಲ್ಲಿ ಹಾಕಲಾಯಿತು. ಪರಮ ಪವಿತ್ರ ಸ್ಥಳಕ್ಕೆ ಮೂರು ಮಾಳಿಗೆಗಳನ್ನು ಹೊಸದಾದ ರೀಪು ಮತ್ತು ಪಕ್ಕಾಸುಗಳಿಂದ ೨೮ ಸೆಪ್ಟೆಂಬರ್ ೧೯೬೮ರಲ್ಲಿ ಹೊದಿಸಲಾಯಿತು.

೨೬ ನವೆಂಬರ್ ೧೯೬೯ರಂದು ಪರಮ ಪವಿತ್ರ ಸ್ಥಳದ ಬೇಲಿಯನ್ನು ತೆಗೆದು ಬಲಿಪೀಠವನ್ನು ಭಕ್ತಾದಿಗಳ ದರ್ಶನಕ್ಕೆ ಮುಕ್ತಗೊಳಿಸಲಾಯ್ತು. ಫೆಬ್ರುವರಿ ೧೯೭೧ರಂದು ರು.೫೦೦೦ ವೆಚ್ಚದಲ್ಲಿ ಚರ್ಚ್-ಗೆ ಬೆಂಚು ಹಾಗೂ  ಮಂಡಿಯೂರುಗಳನ್ನು ಒದಗಿಸಿಲಾಗಿದ್ದು, ಮಾರ್ಬಲ್ಲಿನ ಬಲಿಪೀಠವನ್ನು ನಿರ್ಮಿಸಿ, ೧೪ ಫೆಬ್ರುವರಿ ೧೯೭೩ರಂದು ಬಿಷಪರು ೨೦ ಪುರೋಹಿತರ ಸಾನಿಧ್ಯದಲ್ಲಿ, ಚರ್ಚ್ ಹಬ್ಬದ ದಿನ ಪವಿತ್ರೀಕರಿಸಿದರು.

೮ ಅಕ್ಟೋಬರ್ ೧೯೭೭ರಲ್ಲಿ, ಗುಡುಗು ಮಿಂಚಿಗೆ ಚರ್ಚ್ ಮುಂಭಾಗವು ಹದೆಗೆಟ್ಟಿತ್ತು. ಇದರಿಂದ ಮುಂದಿನ ಸ್ವಲ್ಪ ಭಾಗ ಹಾಗೂ ಛಾವಣಿಯು ಹಾನಿಗೊಳಪಟ್ಟಿತು. ಇದರ ನಂತರ ಸುರಕ್ಷತೆಯನ್ನು ಮನಗಂಡು ಚರ್ಚ್ ಛಾವಣಿಗೆ ಮಿಂಚು ತಡೆ ಕೋಲನ್ನು ಅಳವಡಿಸಲಾಯಿತು.

೧೯೭೭ ಡಿಸೆಂಬರ್ ೨೫ರಂದು ಚರ್ಚ್ ಕಟ್ಟಡದಲ್ಲಿಧ್ವನಿವರ್ಧಕವನ್ನು ಅಳವಡಿಸಿದರು. ರು.೧೩೦೦೦ ವೆಚ್ಚದಲ್ಲಿ ಚರ್ಚ್ ಹಾಗೂ ಶಾಲೆ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ೧೨೪ ಜೂನ್ ೧೯೭೯ರಲ್ಲಿ ಒದಗಿಸಲಾಯಿತು. ಈ ಮೊತ್ತವು ಸ್ಥಳೀಯರ ಕೊಡುಗೆಯಾಗಿದೆ. ಶ್ರೀ. ಪಿ.ಎಫ್. ರೊಡ್ರಿಗಸ್, ಮಾನ್ಯ ಸಚಿವರು ಇದನ್ನು ಉದ್ಘಾಟಿಸಿದರು.

೧೯೮೮ರಲ್ಲಿ ವರ್ಷಗಳ ಹಿಂದೆ ನಿರ್ಮಿಸಿದ ದಾಸ್ತಾನುಗೃಹಕ್ಕೆ ಸಿಮೆಂಟ್ ಹಾಕಲಾಯಿತು. ಚರ್ಚ್ ಕಟ್ಟಡಕ್ಕೆ ೧೪ ಫ್ಯಾನ್ ಹಾಗೂ ಅಷ್ಟೇ ಸಂಖ್ಯೆಯ ಬೆಳ್ಗೊಳವೆಗಳನ್ನು ೧೯೮೯ರಲ್ಲಿ ಅಳವಡಿಸಲಾಗಿದೆ. ಇದರ ವೆಚ್ಚ ರು ೧೭೧೧೪ನ್ನು ಸ್ಥಳೀಯರಿಂದ ಸಂಗ್ರಹಿಸಲಾಗಿದೆ.

ವಿಶೇಷ ಸತ್ಯಸಂಗತಿ

[ಬದಲಾಯಿಸಿ]
  • ಚರ್ಚಿನ ವೈಮಾನಿಕ ದೃಶ್ಯವು ನಿಖರವಾದ ಶಿಲುಬೆ ಆಕಾರವನ್ನು ಹೊಂದಿದೆ ಯಾಕೆಂದರೆ ಚರ್ಚ್ ಶಿಲುಬೆ ಮಾದರಿಯಲ್ಲಿಯೇ ನಿರ್ಮಾಣಗೊಂಡಿದೆ.
  • ಚರ್ಚ್ ಕ್ರಿಸ್ತನ ಮೂಲ ಶಿಲುಬೆಯ ಕದಿಯನ್ನು ಹೊಂದಿದೆ

ಅಂಗ ಚರ್ಚುಗಳು

[ಬದಲಾಯಿಸಿ]

೧೮೬೩ರಲ್ಲಿ ತಾಕೊಡೆಯಲ್ಲಿನ ಸ್ಥಳೀಯರು ಚರ್ಚ್ ಒಂದನ್ನು ಕಟ್ಟಿ ತಮ್ಮನ್ನು ಅದರ ಸದಸ್ಯರನ್ನಾಗಿ ಗುರುತಿಸಿಕೊಂಡರು. ಇದು ಗೋವಾ-ವೆರಾಪೊಲಿಯ ಮತೀಯತೆಯನ್ನು ಹೊಂದಿದೆ. ಇದು 'ಮತೀಯಪ್ರೊಪಗಾಂಡ'ದ ಮುನ್ನುಡಿಯಾಗಿದ್ದರೂ, ಎರಡೂ ಚರ್ಚಿನ ಕುಟುಂಬಗಳು ಹಲವು ವರ್ಷಗಳವರೆಗೆ ಕಾರ್ಯಕ್ರಮಗಳಲ್ಲಿ ವಿಲೀನಗೊಳ್ಳುತ್ತಿದ್ದವು. ಆದರೂ ಅಲ್ಲಿ ಭೌಗೋಳೀಕವಾಗಿರದ ವೈಯಕ್ತಿಕ ಪರಿಧಿ ನಿರ್ಮಾಣವಾಗಿತ್ತು. ೧೬ ಫೆಬ್ರುವರಿ ೧೮೮೭ರಲ್ಲಿ, ಭಾರತದಲ್ಲಿ ಅಧಿಕಾರ ಶ್ರೇಣಿಯನ್ನು ಪರಿಚಯಿಸಲಾಯಿತು. ಆದುದರಿಂದಹೊಸಬೆಟ್ಟು ಚರ್ಚು ಮಂಗಳೂರು ಬಿಷಪರ ಅಧೀನಕ್ಕೊಳಪಟ್ಟಿತು. ೧೯೧೪ರಲ್ಲಿ ಸ್ಥಳೀಯ ವ್ಯಾಪ್ತಿಗಳನ್ನು ಪರಿಚಯಿಸಲಾಗಿದ್ದು, ಇದಕ್ಕೆ ಶ್ರಮವಹಿಸಿದ ಬಿಷಪ್ ವಂ. ಡಾ| ಪೆರಿನಿ ಯೆ. ಸ.ಅವರಿಗೆ ಧನ್ಯವಾದಗಳು ಸಲ್ಲಿಕೆಯಾಗುತ್ತವೆ.

ಫೆರಾರ್ ಚರ್ಚ್ ೧೯೧೨ರಲ್ಲಿ ಅಲ್ಲಿ ನೆಲೆಸಿರುವ ಜನರನ್ನು ಓಲೈಸಿದ ನಂತರ ಜನ್ಮತಾಳಿತು. ಹೊಸಬೆಟ್ಟು ಚರ್ಚಿನ ೩೦ ಕುಟುಂಬಗಳೊಂದಿ ವಡೂರು ಹಳ್ಳಿಯನ್ನು ಸೇರಿಸಿ ಫೆರಾರ್ ಚರ್ಚ್ ಪ್ರತಿಷ್ಠಾಪಿತಗೊಂಡಿತು.

ಕಿರೆಂ ಚರ್ಚ್-ನಿಂದ ಬೇರ್ಪಟ್ಟು ಸುಮಾರು ೪೦ ಕುಟುಂಬ ಸದಸ್ಯರನ್ನೊಳಗೊಂಡ ಪಾಲಡ್ಕ ಚರ್ಚ್ ಸಂ.ಇಗ್ನೇಷಿಯಸ್ ಲೊಯೊಲಾ ಎಂಬ ನಾಮಧೇಯದೊಂದಿಗೆ ೯೧೩ರಲ್ಲಿ ಜನ್ಮತಾಳಿತು.

ಫೆಂಚಾರಿನಲ್ಲಿರುವ ಜನರ ಧಾರ್ಮಿಕ ಅಗತ್ಯತೆಗಳನ್ನು ಪೂರೈಸಲು ಹೊಸಬೆಟ್ಟು ಚರ್ಚ್ ಚಾಪೆಲ್ ನಿರ್ಮಿಸಿತ್ತು. ಇದನ್ನು ಶಿರ್ತಾಡಿಗೆ ವರ್ಗಾಯಿಸಿ ಅಲಲ್ಇ ೧೯೨೯ರಲ್ಲಿ ಧರ್ಮಪ್ರಾಂತ್ಯದ ಪ್ರಥಮ ಮಂಗಳೂರು ಮೂಲದ ಬಿಷಪ್ ಆದ ವಂ ಡಾ| ವಿ.ಜೆ.ಡಿ'ಸೋಜಾ ಅವರಿಂದ ಡಿಕ್ರಿಯನ್ನು ಪಡೆದು ಚರ್ಚ್ ನಿರ್ಮಿಸಿದರು.

ಮೂಡಬಿದಿರೆ-ಅಲಂಗಾರ್ ಚರ್ಚ್ ಮೊಂನ್ಸಿಂಜ್ಞೊರ್ ಫ್ರಾನ್ಸಿಸ್ ಡಿ'ಸೋಜಾ ಅವರು ಪ್ರಥಮ ಧರ್ಮಗುರುಗಾಳುವದರೊಂದಿಗೆ ಮತ್ತು ಪವಿತ್ರ ಜಪಸರಕ್ಕರ ಸರ್ಮಪಿತಗೊಂಡು ಸ್ವತಂತ್ರವಾಗಿ ೧೯೨೯ರಲ್ಲಿ ಬೆಳೆದು ನಿಂತಿತು. ೧ ಅಕ್ಟೋಬರ್ ೧೯೫೮ರಲ್ಲಿ, ಕುಪ್ಪೆಪದವು ಪ್ರದೇಶದಲ್ಲಿ ಚರ್ಚ್ ನಿರ್ಮಿಸಪು ನಿವೇಶನವನ್ನು ಗುರುತಿಸಿ ಆ ಸ್ಥಳವನ್ನು ಖರೀದಿಸಲಾಯಿತು. ಮಂಗಳೂರಿನ ಶ್ರೀಮತಿ ಮೆಟಿಳ್ಡಾ ಸಿ. ಪಾಯಸ್ ಅವರು ಒಂದು ಎಕರೆ ಜಮೀನನ್ನು ಅವರ ಅಸುನೀಗಿದ ಮಗನ ಸವಿನೆನಪಿಗಾಗಿ ದಾನವಾಗಿ ನೀಡಿದ್ದು, ೪ ಎಕರೆ ಜಮೀನನ್ನು ರು ೧೭೫೦ ವೆಚ್ಚದಲ್ಲಿ ಖರೀದಿಸಲಾಯಿತು. ಆದುದರಿಂದ ಕುಪ್ಪೆಪದವು ಚರ್ಚ್ ಕಟ್ಟಡ ಕಾಮಗಾರಿ ಪ್ರಾರಂಭಗೊಂಡಿತು. ೧೯೫೮ರಲ್ಲೇ ಕಟ್ಟಡದ ಪ್ರಮುಖ ಭಾಗಗಳ ಕಾಮಗಾರಿಯನ್ನು ರು೨೩,೦೦೦ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿತ್ತು. ವಂ. ಆಬೆಲ್ ಕುವೆಲ್ಲೊ ಅವರು ೧೧ ಮಾರ್ಚ್ ೧೯೫೮ರಿಂದ ಹೊಸಬೆಟಟ್ಟುವಿನಲ್ಲಿ ನೆಲೆಸಿದ್ದರಿಂದ ಅವರನ್ನೇ ೨೨ ಆಗಸ್ಟ್ ೧೯೫೮ರಲ್ಲಿ ಈ ಚರ್ಚ್ ಕಾಮಗಾರಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಯಿತು. ಹಾಗಾಗಿ ೭ ಜೂನ್ ೧೯೬೪ರಲ್ಲಿ ಬಿಷಪ್ ವಂ ರೇಮಂಡ್ ಡಿ'ಮೆಲ್ಲೊ ಅವರಿಂದ ಚರ್ಚ್ ಡಿಕ್ರಿಯನ್ನು ಪಡೆದು ಕುಪ್ಪೆಪದವು ಒಂದಿ ಸ್ವತಂತ್ರ ಚರ್ಚ್ ಆಗಿ ನಿರ್ಮಾಣವಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಆಗಿದ್ದ ವಂ ಡಾ|ಬಾಸಿಲ್ ಎಸ್. ಡಿಸೋಜಾ ಅವರು ನೀಡಿದ ಡಿಕ್ರಿಯಿಂದಾಗಿ ೧೯೭೧ರ ಏಪ್ರಿಲ್ ತಿಂಗಳಿನಲ್ಲಿ ಕಾರ್ಪಸ್ ಕ್ರಿಸ್ಟಿ ಚರ್ಚ್ ಮೂಡಬಿದಿರೆಯಲ್ಲಿ ಸ್ವತಂತ್ರವಾಗಿ ಬೆಳೆಯಿತು. ಇದಕ್ಕೆ ಹೊಸಬೆಟ್ಟು ಚರ್ಚ್-ನಿಂದ ಕೆಲವು ಕುಟುಂಬಗಳನ್ನು ಸದಸ್ಯರನ್ನಾಗಿ ಸೇರಿಸಲಾಯಿತು.

ಆಸ್ತಿ

[ಬದಲಾಯಿಸಿ]

ಚರ್ಚಿನ ಮೂಲ ಆಸ್ತಿಯ ಖರೀದಿ ಅಥವಾ ದಾನ ಯಾರಿಂದ ಯಾವಾಗ ಆಗಿದೆ ಎಂಬ ದಾಖಲೆಗಳು ಲಭ್ಯವಿಲ್ಲ. ಆದರೆ ಖಚಿತವಾಗಿಯೂ ಚರ್ಚ್ ವಿಶಾಲವಾದ ಜಮೀನು ಆಸ್ತಿಯನ್ನು ಹೊಂದಿತ್ತು. ನಂ.೨೭ರ ಪಟ್ಟದ ಪ್ರಕಾರ ಹೊಸಬೆಟ್ಟು ಚರ್ಚ್ ಸ್ಥಳ 'ಇಮಾಮ್ ಜಾಗ'(ಒಂದು ರೀತಿಯ ದಾನ)ವಾಗಿತ್ತು. ಹಾಗಾಗಿ ಚರ್ಚ್ ಭೂಕಾಯ್ದೆಯನ್ನು ಸರಕಾರಕ್ಕೆ ನೀಡುವಂತಿರಲಿಲ್ಲ. ಇದರ ಅಂದಾಜು ಮೊತ್ತ ಅಂದಿನ ಕಾಲದ ರು ೩೭.೫೦ ಆಗಿದ್ದು, 'ಅನುಮೋದನೆ'ಗೊಂಡಿತ್ತು. ಸರಕಾರ 'ಅನುಮೋದನೆ'ಯನ್ನು ರದ್ದುಪಡಿಸಲು ಚಿತಿಸುತಿದ್ದು, ಕಲೆಕ್ಟರ್ ಅವರ ಶಿಫಾರಸಿನ ಮೇರೆಗೆ ಅದು ಸಾಧ‍ಯವಾಗಲಿಲ್ಲ. ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಮದ್ರಾಸ್ ರಾಜ್ಯಪಾಲರು ೧೨ ಜನವರಿ ೧೯೧೫ರಲ್ಲಿ ಆದೇಶವನ್ನು ಹೊರಡಿಸಿದರು.

೧೮೪೧ರಿಂದ ಆಸ್ತಿಯನ್ನು ಸ್ವಾಧಿನಪಡಿಸಿಕೊಳ್ಳಲಾಯಿತು. ೧೮೪೧ಕ್ಕೂ ಮೊದಲೇ ಶ್ರೀ. ಸಾವಂತ ಅವರು ಚರ್ಚ್-ನಿಂದ ಹಣವನ್ನು ಸಾಲ ಪಡೆದಿದ್ದರು. ಅವರು ಈ ಮೊತ್ತವನ್ನು ಹಿಂತಿರುಗಿಸದೇ, ಮತ್ತೆ ಮತ್ತೆ ಸಾಲ ಪಡೆದರು. ಇದರಿಂದ ಚರ್ಚ್ ಕೋರ್ಟ್ ಆದೇಶದ ಮೇರೆಗೆ ಸಾವಂತರಿಗೆ ಸೇರಿದ 'ಸಾವಂತ ಬೈಲು' ಮತ್ತು 'ಬಿರಾವು' ಪ್ರದೇಶದ ಕೆಳಭಾಗದ ಸ್ಥಳಗಳನ್ನು ತನ್ನ ಸ್ವಾದೀನಕ್ಕೆ ಒಳಪಡಿಸಿತು.

'ಮುಚ್ಚೂರು ಪಾಲ್ಕೆ ಗದ್ದೆ' ಮತ್ತು 'ಕಲ್ಪನೆ' ಪ್ರದೇಶಗಳನ್ನು ಎಸ್. ಕುಲಾಸೊ ಅವರು ಹೊಂದಿದ್ದರು. ಚರ್ಚ್ ಈ ಸ್ಥಳಗಳನ್ನು ಖರೀದಿಸಿತು. ರೊಸಾರಿಯೊ ಉಪನಾಮಧೆಯದ ಪಾರುಪತ್ಯಗಾರ 'ಮಿನಿ ಹಿತ್ಲು' ಪ್ರದೇಶವನ್ನು ಹೊಂದಿದ್ದು ಇದನ್ನು ಚರ್ಚ್-ನಲ್ಲಿ ಅಡವಿಟ್ಟು ಸಾಲ ತೀರಿಸದೇ ಅಂತಿಮವಾಗಿ ಮಾರಾಟ ಮಾಡಿದನು.

'ಬಾರೆ ಹಿತ್ಲು' ಮತ್ತು 'ಕರಿಂಗಾಣ' ಚರ್ಚಿನಲ್ಲಿ ಅಡವಿಟ್ಟುದ್ದು ಕೊನೆಗೆ ಚರ್ಚಿಗೇ ಮಾರಿದರು. 'ಬಿರಾವು ಮೂಲ್ಗೆನಿ' ಆಸ್ತಿಯನ್ನು ವಂ ಜೆ.ಎಮ್.ಎ. ವಾಸ್ ಅವರು ಶ್ರೀ ನಾಗರಾಜ್ ಅವರಿಂದ ರು.೮೦೦ ವೆಚ್ಚದಲ್ಲಿ ಖರೀದಿಸಿದರು ಮತ್ತು ಇದರಿಂದ ಬಂದ ಆದಾಯ ರು. ೧೨೭ ಯಿಂದ ಅವರು ೩ ಅನುಮೋದಿತ ಸ್ಥಳಗಳಾದ 'ಕೋಣೆ ಪದವು' ಹಾಗೂ 'ಭಟ್'ನ ಭಾಗಗಳನ್ನು ಶ್ರೀ. ಜೋಸೆಫ್ ಮಿರಿಯನ್ ರೊಡ್ರಿಗಸ್ ಅವರಿಂದ ಖರಿದಿಸಿದರು. ವಂ. ಎ. ಜೆ. ಡಿ'ಸಿಲ್ವಾ ಅವರು ಶ್ರೀ ಜೋನ್ ಡಿ. ರೊಡ್ರಿಗಸ್ ಅವರ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡರು. ಶ್ರೀ ಪಿ.ಪಿಎಫ್. ರೆಬೆಲ್ಲೊ ಅವರಿಗೆ ಸೇರಿದ ಪಿತ್ರಾವಾರ್ಜಿತ ಆಸ್ತಿಯ ಒಂದಂಶವನ್ನು ಚರ್ಚ್-ಗೆ ದಾನವಾಗಿ ನೀಡಲಾಗಿದೆ.

ಕರಿಂಗಾಣದ ಉತ್ತರ ಒಂದು ಭಾಗ, ಮಾರೂರಿನ ಸಿಮೊನ್ ಪಾಲ್ಕೆ ಮತ್ತು  ಶ್ರೀ ಮಿರಿಯಂ ರೊಡ್ರಿಗಸ್ ಅವರಿಗೆ ಸೇರಿದ 'ಭಟ್'ನ ಕೆಲವು ಭಾಗಗಳನ್ನು ವಂ ಎ.ಜೆ.ಡಿ'ಸಿಲ್ವಾ ಅವರು ಖರೀದಿಸಿದರು. ಶ್ರೀ ರೊಸಾರಿಯೊ ಪಿಂಟೊ ಅವರಿಗೆ ಸೇರಿದ 'ಭಟ್'ನ ಒಂದು ಭಾಗವನ್ನು ಪಿತ್ರಾರ್ಜಿತ ಆಸ್ತಿಯನ್ನಾಗಿ ಚರ್ಚ್-ಗೆ ವಂ ಎ. ಡೆ'ಸ್ಸಾ ಅವರ ಅವಧಿಯಲ್ಲಿ ದಾನ ಮಾಡಲಾಗಿದೆ. ಅವರು ಅಲಂಗಾರ್ ಆಸ್ತಿಯ ಭಾಗವಾದ 'ಧೊಂಡ್ಸ್' ಅನ್ನು ಖರೀದಿಸಿದರು.

ವಂ. ಮಾನ್ಯವೆಲ್ ಸಾಲ್ವಾದೊರ್ ಕೋಸ್ತಾ, ವಂ ಜೆರೋಮ್ ಪೌಲ್ ಕುವೆಲ್ಲೊ ಮತ್ತು ವಂ ರಾಂಗೆಲ್ ಅವರ ಕಾಲದಲ್ಲಿ ಉಳಿದ ಜಮೀನು ಹಾಗೂ ಆಸ್ತಿಯನ್ನು ಖರೀದಿಸಲಾಯಿತು. ವಂ. ಪಿ.ಬಿ. ಲುವಿಸ್ ಅವರು ಎಸ್.೧೧೦-೧ನಿವೇಶನವನ್ನು ಖರೀದಿಸಿದರು.

ಮಾರೂರ್ ಆಸ್ತಿಯು ಬಹು ಹಿಂದಿನಿಂದಲೂ ವಿವಾದಕ್ಕೊಳಪಟ್ಟಿತ್ತು. ಇದು ನೆರೆಯವರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ ಹೊಸ ಖರೀದುದಾರರು ಯಾವುದೇ ತಕಾರಾರು ಬೇಡ ಎಂಬ ನಿರ್ಣಯ ಕೈಗೊಳ್ಳುವುದರ ಮುಕಾಂರತ ಅಂತ್ಯಗೊಂಡಿತು. ನಿವೇಶನಗಳಾದ ಎಸ್.ಎನ್. ೧೪೦-2, ಎಸ್.ಎನ್.೧೪೧-೫ ಮತ್ತು ಎಸ್.ಎನ್.೧೯೭-೧ಬಿ ಸ್ಥಳಗಳನ್ನು ವಂ ಎಫ್.ಎಮ್. ಪಿಂಟೊ ಅವರ ಕಾಳದಲ್ಲಿ ಸ್ವಾಧೀನಪಡಿಸಲಾಯ್ತು. ವಿಶಾಲವಾದ ಭೂಸಂಪತ್ತನ್ನು ಹೊಂದದ ಕಾರಣಕ್ಕಾಗಿ ಹೊಸಬೆಟ್ಟು ಚರ್ಚ್ ಮಂಗಳೂರು ಧರ್ಮಪ್ರಾಂತ್ಯದಲ್ಲಯೇ ಅತ್ಯಂತ ಶ್ರೀಮಂತ ಚರ್ಚುಗಳಲ್ಲಿ ಒಂದಾಗಿದೆ. ಚರ್ಚ್ ೩೧೪ 'ಮೂಡೆ' (ಒಂದು ಮೂಡೆ ೪೦ ಕೆಜಿಗಳಿಗೆ ಸಮ)ಗಳಷ್ಟು ಅಕ್ಕಿಯನ್ನು ಪಡೆದಿದ್ದು ರು.೧೧೫೦ and Rs. 1150 as Gheni.

ಕುಪ್ಪೆಪದವಿನ ಪರಿಶುದ್ಧ ದೇವಮಾತೆ ಚರ್ಚ್-ಗೆ ಮಾರೂರಿನ ಬೊಳಿಯಾರ್ ಪ್ರದೇಶವನ್ನು ಉಸ್ತುವಾರಿ ವಹಿಸಲು ಕೊಡುಗೆಯಾಗಿ ೩೦ ಅಕ್ಟೋಬರ್ ೧೯೬೨ ನೀಡಲಾಯಿತು. ಈ ಜಮೀನು ವರ್ಷಕ್ಕೆ ೬೫ 'ಮೂಡೆ' (ಒಂದು ಮೂಡೆ ೪೦ ಕೆಜಿಗಳಿಗೆ ಸಮ) ಅಕ್ಕಿಯನ್ನು ಗೇಣಿ ಮುಖಾಂತರ ಉತ್ಪಾದಿಸುತಿತ್ತು.

ಎಸ್.ಎನ್.೧೫೦-೨ ನಂಬರಿನ ೫.೧೦ಎಕರೆ ಮೂಡಬಿದಿರೆಯ ಪ್ರಾಂತ್ಯ ಹಳ್ಳಿ ಪ್ರದೇಶವನ್ನು ಅಫೋಸ್ಟಲಿಕ ಕಾರ್ಮೆಲ್ ಧರ್ಮಭಗಿನಿಯರಿಗೆ ನೀಡಿದ್ದು ಅಲ್ಲಿ ಮೂಡಬಿದಿರೆಯಲ್ಲಿ ಹುಡುಗಿಯರಿಗಾಗಿ ಪ್ರೌಢ ಶಾಲೆಯನ್ನು ನಡೆಸುವಂತಾಯಿತು. ಇದನ್ನು ೧೩ ಜುಲೈ ೧೯೬೪ರಲ್ಲಿ ಹಸ್ತಾಂತರಿಸಲಾಯಿತು.

ಕೊನೆಯದಾಗಿ, ೧೯೭೪ರ ಕರ್ನಾಟಕ ಭೂಸುಧಾರಣೆಗಳ ಕಾಯ್ದೆಯ ಆದೇಶದಂತೆ ಚರ್ಚ್ ತನ್ನ ಎಲ್ಲಾ ಬಾಡಿಗೆದಾರ ಆಸ್ತಿ ಪ್ರದೇಶಗಳನ್ನು ಕಳೆದುಕೊಂಡಿತು. ಆದರೂ ಸ್ವಲ್ಪ ಮಟ್ಟಿನ ಜಮೀನು ಯಾರಿಗೂ ಗೇಣಿ ರೂಪದಲ್ಲಿ ನೀಡದೇ ಇದ್ದುದರಿಂದ ಅದು ಚರ್ಚ್ ಸುರ್ಪದಿಯಲ್ಲಿಯೇ ಉಳಿಯಿತು. ಚರ್ಚ ಕಾನೂನು ಪ್ರಕಾರ ವರ್ಷಾಶನವನನು ಪಡೆಯುತ್ತದೆ.

ವಿವಾದಗಳು

[ಬದಲಾಯಿಸಿ]

ಆಸ್ತಿಯು ಹಲವು ವಿವಾದಗಳಿಗೆ ನಾಂದಿ ಹಾಡಿತು. ಪಾಸ್ಕು ವರ್ಗ್ ಇಲ್ಲಿನ 'ಇಮಾಮ್ ಸ್ಥಳ'ವು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಗೊಂದಲವಿದ್ದುದರಿಂದ ವಿವಾದವನ್ನುಂಟು ಮಾಡಿತು. ಆಲ್ಸ್, ಜುವಾನ್, ರೊಚಿ ಮತ್ತು ಇತರೇ ಪ್ರದೇಶಗಳು ಇದೇ ರೀತಿಯ.

೧೮೮೨ರಲ್ಲಿ ಹೊಸಬೆಟ್ಟುವಿನ ರೊಡ್ರಿಗಸ್ ಕುಟುಂಬವು ಕಾರ್ಕಳದ ಶ್ರೀ ಡಿಯಾಗೊ ನೊರೊನ್ಹಾ (ಅವರ ಪತ್ನಿ ರೊಡ್ರಿಗಸ್ ಕುಟುಂಬಕ್ಕೆ ಸೇರಿದ) ಅವರಿಂದ ಪ್ರಚೋದಿತಗೊಂಡು 'ಇಮಾಮ್ ಸ್ಥಳ'ವು ತಮಗೆ ಸೇರಿದ್ದು ಎಂದು ಹಕ್ಕೋತ್ತಾಯಪಡಿಸಿದರು. ಪಾಸ್ಕು ಅವರ ಕುಟುಂಬ ಪೂರ್ವಜರಾಗಿದ್ದು ಅವರಿಗೆ ಸೇರಿದ ಆಸ್ತಿಯನ್ನು ಚರ್ಚ್ ಆಕ್ರಮಿಸಿದೆ ಎಂದು ಆಪಾದಿಸಿದರು. ಅವರು ಚರ್ಚಿಗೆ ನೀಡುವ ಗೇಣಿಯನ್ನು ನಿಲ್ಲಿಸಿದರು. ಹಾಗಾಗಿ ಚರ್ಚ್ ಅವರ ವಿರುದ್ದ ಮೊಕದ್ದಮೆಯನ್ನು ಹೂಡಿ ಪ್ರಥಮ ವಿಚಾರಣೆಯಲ್ಲಿ ಗೆಲುವು ಸಾಧಿಸಿತು. ವಿಚಾರಣೆ ವೇಳೆಯಲ್ಲಿ ಕೆಲವು ದಾಖಲೆಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದ್ದು, ಅವುಗಳನ್ನು ಮೇಲೆ ತಿಳಿಸಿದ ಕುಟುಂಬ ಸದಸ್ಯರು ಕಳವು ಮಾಡಿದ್ದಾರೆ ಎಂದು ಹೇಳಲಾಗಿದೆ. ಕೊನೆಗೆ ಅವರನ್ನು ಎಲ್ಲಾ ಚರ್ಚ್ ಸೇವೆಗಳಿಂದ ನಿಷೇಧೀಸಲಾಯಿತು. ಹಾಗಾಗಿ ಅವರು ಬಿಷಪ್ ಪಗನಿ ಅವರನ್ನು ಸಂಪರ್ಕಿಸಿದುದರಿಂದ ಸಂಧಾನ ಮಾತುಕತೆ ಉಂಟಾಗಿ ಚರ್ಚ್-ಗೆ ವಾರ್ಷಿಕ ಗೇಣಿ ನೀಡುವಂತೆ ೧೮೮೯ರಲ್ಲಿ ಸೂಚಿಸಲಾಯಿತು.

ಸಾವಂತ ಬೈಲು ಪ್ರದೇಶವನ್ನು ಸ್ವಾಧಿನಪಡಿಸುವ ದಾವೆ ನ್ಯಾಯಮಂಡಳಿಯಲ್ಲಿತ್ತು ಎಂದು ಈ ಮೇಲೆ ಉಲ್ಲೇಖಿಸಲಾಗಿದೆ. ಮಾರೂರು ಜಮೀನನ್ನು ಕೆಲವರು ಅತಿಕ್ರಮಿಸಿದ್ದು ಅಲ್ಲಿ ವಿವಾದ ಏರ್ಪಟ್ಟಿತ್ತು. ಇದಲ್ಲದೇ ಗೇಣಿ ಪ್ರದೇಶದ ಜಮೀನನ್ನು ವಾಪಸ್ಸು ಪಡೆಯಲು ಚರ್ಚ್ ಹಲವಾರು ಬಾರಿ ನ್ಯಾಯ್ಯಾಲಯದ ಮೆಟ್ಟಲೇರಬೇಗಾಗಿ ಬಂತು.

ಆಡಳಿತ

[ಬದಲಾಯಿಸಿ]

'ರಾಜ್ಯ'ವು ಇಲ್ಲಯ ಲೌಕಿಕ ಆಡಳಿತವನ್ನು ನೋಡಿಕೊಳ್ಳುತ್ತಿತ್ತು. ಇದರಿಂದಾಗಿ ಆಡಳಿತ ನಿಯಂತ್ರಣ ಸಾಧ್ಯವಿರಲಿಲ್ಲ. ಹಾಗಾಗಿ ವಂ ಡಾ| ಪೌಲ್ ಪೆರಿನಿ ಯೆ.ಸಿ. ಅವರು ೧೨ ಏಪ್ರಿಲ್ ೧೯೨೨ರಿಂದ 'ಸಮಿತಿ ವ್ಯವಸ್ಥೆ'ಯನ್ನು ಪರಿಚಯಿಸಿದರು.

ವಂ ರೊಸಾರಿಯೊ ಲುವಿಸ್ ಅವರು ಶ್ರೀ ಎಸ್.ಎಲ್. ಮಥಾಯಸ್ ಅವರಿಂದ ರು.೮೦೦೦ಗಳನ್ನು ಸಾಲವನ್ನು ಚರ್ಚಿನ ಮೇಲ್ಛಾವಣಿಯನ್ನು ನಿರ್ಮಿಸಲು ಪಡೆದಿದ್ದರು. ಅದು ಸಾಕಾಗದೇ ಗೋಡೆಯ ಲೇಪನ ಕಾರ್ಯಕ್ಕಾಗಿ ರು ೨,೫೦೦ಗಳನ್ನು ಹೊಂದಿಸಬೇಕಾಯ್ತು. ೧೯೧೯ರಲ್ಲಿ ಉದ್ಯಾವರ ಚರ್ಚ್-ಗೆ ವರ್ಗವಾಗಿ ಹೋದಾಗ ಅವರು ಸ್ಥಳೀಯರಿಂದ ಪಡೆದ ರು.೨,೫೦೦ಗಳನ್ನು ಹಿಂತಿರುಗಿಸಿದ್ದರು.

ವಂ ಜೆ ಎಮ್. ಎಮ್. ಎ. ವಾಸ್ ಅವರು ನಂತರ ಬಂದು ರು.೨೦೦೦ಗಳನ್ನು ಹಿಂತಿರುಗಿಸಿದರು. ಆವರು ೧೯೩೧ರ ಜುಲೈನಲ್ಲಿ ಸಾವನ್ನಪ್ಪಿದಾಗ ಬಿರಾವು ಮೂಲ್ಗೇಣಿ ಸ್ಥಳದಲ್ಲಿ ಮೂರು ಮುಖಮಂಟಪಗಳು, ಅಡುಗೆಕೋಣೆಗಳ ನಿರ್ಮಾಣ ಕಾರ್ಯವು ಚರ್ಚ್-ನ ಮೇಲೆ ಸಾಲವು ರು.೧೧,೫೦೦ಗಳಿಗೆಏರಿಕೆಯಾಯತ್ತು.

೧೯೩೧ರಲ್ಲಿ ವಂ ಜೆ ಎಮ್. ಎಮ್. ಎ. ವಾಸ್ ಅವರ ನಂತರ ಬಂದ ವಂ. ಆಲ್ಬರ್ಟ್ ಡೆ'ಸ್ಸಾ ಅವರು ರು.೫೫೦೦ಗಳನ್ನು ತಾವು ೧೯೩೭ರಲ್ಲಿ ವರ್ಗವಾಗಿ ಹೋಗುವ ಮೊದಲೇ ಸಾಲವನ್ನು ತೀರಿಸಿ. ವಂ. ಎ. ಜೆ. ಸಿಲ್ವಾ ನಂತರ ಬಂದಿದ್ದು, ಎಲ್ಲಾ ಸಾಲವನ್ನು ಬಡ್ಡಿ ಸಮೇತ ತೀರಿಸಿದರು. ಅಲ್ಲದೇ ಅವರು ರು.೨೦೦೦ಗಳನ್ನು ವೆಚ್ಚ ಮಾಡಿ ಮೂರು ಮುಂಭಾಗದ ಗೋಡೆಗಳಿಗೆ ಲೇಪಣ ಹಾಕಿದರು. ರು.೨೦೦೦ಗಳಿಂದ ಅವರು ಜಮೀನು ಅಭಿವೃದ್ದಿ ಹಾಗೂ ಖರೀದಿ ಮಾಡಿದ್ದಾರೆ. ಸ್ವಾಭಾವಿಕ ಹಾನಿಯನ್ನು ಸರಿಪಡಿಸಲು ರು.೬೦೦ಗಳನ್ನು ಅವರು ಕಳೆದುಕೊಂಡರು. ಸಾಲದ ಬಡ್ಡಿಯೇ ಸರು.೧,೧೦೦ ಆಗಿದ್ದು; ಎಲ್ಲಾ ಖರ್ಚುಗಳನ್ನು ಕಳೆದು ಅವರು ರು.೧೧೮೦ಗಳನ್ನು ಚರ್ಚ್ ಬೊಕ್ಕಸದಲ್ಲಿ ಅವರು ೩ ಜೂನ್ ೧೯೪೫ರಲ್ಲಿ ವರ್ಗಗೊಂಡು ಹೋಗಿ ವಂ ಎ.ಎಮ್. ಎಲ್.ಡಿ'ಸೋಜಾ ಅವರಿಗೆ ಹಸ್ತಾಂತರಿಸಿದರು. ವರ್ಷಾಂತಿಕ ದೊಡ್ಡ ಪ್ರಮಾಣದ ಗೇಣಿ ಪಡೆಯುತ್ತಿದ್ದ ಚರ್ಚ್ ಸಾಲದಲ್ಲಿ ಮುಳುಗಿರುವುದನ್ನು ವಿವರಿಸಲು ಹಲವು ಸಂಪುಟಗಳೇ ಆಗುತ್ತದೆ. ಇದೆಲ್ಲವುದಕ್ಕೆ ಕಾರಣವೆಂದರೆ ಚರ್ಚ್ ಕಟ್ಟಡ ಕಾಮಗಾರಿ.

ವಂ ಜಿ.ಇ.ಎಸ್.ರಾಂಗೆಲ್ ಅವರು ೧೮೯೦ರಲ್ಲಿ ಸಂ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು ಎಂದು ಹೇಳಲಾಗುತ್ತಿದೆ. ಇದರ ಕಟ್ಟಡ ಚರ್ಚ್ ಅಂಗಳದ ಉತ್ತರದಲ್ಲಿನ ಪ್ರವೇಶ ದ್ವಾರದ ಬಳಿಯಲ್ಲಿತ್ತು. ೧೮೯೫ರಲ್ಲಿ ಶಾಲೆಗೆ ಶಾಶ್ವತ ಪರವಾನಿಗೆಯನ್ನು ಅಧಿಕೃತವಾಗಿ ಸರಕಾರ ನೀಡಿ ಅಂಗೀಕರಿಸಿತು. ೧೯೦೫-೦೯ರಲ್ಲಿ ಚರ್ಚ್ ಕಟ್ಟಡದ ಕಾಮಾಗಾರಿ ವೇಳೆಯಲ್ಲಿ ಈ ಕಟ್ಟಡವು ಚರ್ಚ್ ತಲುಪುವ ಹಾದಿಯನ್ನು ತಡೆಯುತ್ತಿತ್ತು. ಹಾಗಾಗಿ ಹಳೆಯ ಚರ್ಚ್-ನ ಪರಮ ಪವಿತ್ರ ಜಾಗದಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು. ವಂ ಎ. ಡೆಸ್ಸಾ ಅವರ ಅವಧಿಯಲ್ಲಿ ಶಾಲೆಯ ಮಕ್ಕಳ ಸಂಖ್ಯೆಯು ೪೫ರಿಂದ ೧೨೦ಕ್ಕೆ ಏರಿತು. ಪರಮ ಪವಿತ್ರ ಸ್ಥಳವು ಬಹು ದೂರದಲ್ಲಿ ಇದ್ದುದರಿಂದ ಅದನ್ನು ಹೊಸ ಚರ್ಚ್ ಕಟ್ಟಡಕ್ಕೆ ಸ್ಥಳಾಂತರಿಸಲಯಿತು. ಹಳೆಯ ಚರ್ಚಿನ ಪರಮ ಪವಿತ್ರ ಸ್ಥಳ ಹಾಗೂ ಬಲಿಪೀಋದ ಸ್ಥಳಗಳನ್ನು ಶಾಲಾ ಕೊಠಡಿಗಳನ್ನಾಗಿ ಮಾರ್ಪಡಿಸಲಾಯ್ತು. ಆದರೆ ಈ ಸ್ಥಳವು ಸೂರ್ಯನ ಬೆಳಕು ಮತ್ತು ಗಾಳಿಯನ್ನು ಹೊಂದಿರಲಿಲ್ಲ.

೬ ಸೆಪ್ಟೆಂಬರ್ ೧೯೪೦ರಲ್ಲಿ, ಬಿಷಪ್ ಅತಿ. ವಂ. ಡಾ|. ವಿ.ಆರ್. ಫೆರ್ನಾಡಿಸ್-ರವರು ಹಳೆಯ ಪರಮ ಪವಿತ್ರ ಸ್ಥಳವನ್ನು ಕೆಡವಿ ಅದರ ಸಾಮಾಗ್ರಿಗಳನ್ನು ಉಪಯೋಗಿಸಲು ಹಾಗೂ ಚರ್ಚ್ ಹಣವನ್ನು ಉಪಯೋಗಿಸದೇ ಶಾಲಾ ಕಟ್ಟಡವನ್ನು ನಿರ್ಮಿಸಲು ಪರವಾನಿಗೆಯನ್ನು ವಂ ಎ.ಜೆ.ಸಿಲ್ವಾ ಅವರಿಗೆ ನೀಡಿದರು. ಅವರು ಶಾಲೆಯ ನಿವೇಶನವನ್ನು ಬದಲಾಯಿ ೧೯೪೦ರ ಅಕ್ಟೋಬರ್ ತಿಂಗಳಿನಲ್ಲಿ ಶಾಲಾ ಕಟ್ಟಡ ಕಾಮಗಾರಿಯನ್ನು ಆರಂಭಿಸಿದರು. ಸ್ಥಳೀಯರು ಇದಕ್ಕಾಗಿ ಉಚಿತ ಸೇವೆ ಹಾಗೂ ರು.೩೦ಗಳನ್ನು ಕೊಡುಗೆಯಾಗಿ ನೀಡಿದರು. ವಂ ಎ.ಜೆ.ಸಿಲ್ವಾ ಅವರು ರು.೮೨೦ಗಳನ್ನು ತಮ್ಮ ವೈಯಕ್ತಿಕ ಮೂಲಗಳ ಬೊಕ್ಕಸದಿಂದ ನೀಡಿದರು. And thus the ಶಾಲಾ ಕಟ್ಟಡವನ್ನು ೧೯೪೧ರ ಪಾಸ್ಕ ಹಬ್ಬದ ಮುಂಜಾನೆ ಉದ್ಘಾಟಿಸಲಾಯಿತು.

ಶಾಲೆಯನ್ನಿ ೧ ಜೂನ್ ೧೯೫೦ರಲ್ಲಿ ಹಿರಿಯ ಪ್ರಾಥಮಿಕ ಶಾಲಾ ದರ್ಜೆಗೇರಿಸಲಾಯಿತು. ಶಾಲಾ ಕಟ್ಟಡವು ಆಂಗ್ಲ ಪದದ 'ಎಲ್' ಆಕಾರದಲ್ಲಿ ಕಾಣೂವಂತೆ ಒಂದು ಕಟ್ಟಡವನ್ನು ರು ೪,೦೦೦ಗಳ ವೆಚ್ಚದಲ್ಲಿ ಚರ್ಚ್ ಬೊಕ್ಕಸದಿಂದ ವಂ ಜೋನ್ ಜಿ. ಪಿಂಟೊ ಅವರು ನಿರ್ಮಿಸಿದರು. ಹೊಸ ಕಟ್ಟಡದ ವಿಸ್ತೀರ್ಣವು ೧೦೦ ಅಡಿ ಉದ್ದವನ್ನು ಪಡೆದಿತ್ತು. ೧೯೮೬ ಮತ್ತು ೧೯೮೭ರಲ್ಲಿ ವಂ ಹೆರಾಲ್ಡ್ ಸಿ.ಡಿ'ಸೋಜಾ ಅವರ ಮುಂದಾಳುತನದಲ್ಲಿ, ಶಾಲಾ ಕಟ್ಟಡದ ದುರಸ್ಥಿ ಹಾಗೂ ಹೊಸ ವೇದಿಕೆ ನಿರ್ಮಾಣದ ಕಾರ್ಯವನ್ಉ ಕೈಗೆತ್ತಿಕೊಳ್ಳಲಾಯಿತು. ೨೫ ಅಕ್ಟೋಬರ್ ೧೯೮೭ರಲ್ಲಿ ಕಥೋಲಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ವ.ಲೊರೆನ್ಸ್ ಸಿ. ಡಿ'ಸೋಜಾ ಅವರು ಭಾನುವಾರದ ಬಲಿಪೂಜೆಯ ಬಳಿಕ ಶಾಲಾ ಕಟ್ಟಡ ಹಾಗೂ ವೇದಿಕೆಯನ್ನು ಉದ್ಘಾಟಿಸಲಾಯಿತು.

ಅಂಚೆ ಕಛೇರಿ

[ಬದಲಾಯಿಸಿ]

ಹಲವಾರು ವರ್ಷಗಳಿಗೆ ಚರ್ಚ್ ನಿವಾಸದ ಒಂದು ಮೂಲೆಯ ಕೋಣೆಯನ್ನು ಅಂಚೆ ಕಛೇರಿಯನ್ನಾಗಿ ಬಳಸಲಾಗಿತ್ತು. ಸಾರ್ವಜನಿಕರ ಅನುಕೂಲತೆಯನ್ನು ತಿಳಿದು ಬಸ್ ನಿಲ್ದಾಣ, ವ್ಯಾಪಾರ ಮಳಿಗೆ ಹಾಗೂ ಅಂಚೆ ಕಛೇರಿಯನ್ನೊಳಗೊಂಡ ಒಂದು ಕಟ್ಟಡವನ್ನು ವಂ ಹೆರಾಲ್ಡ್ ಸಿರಿಲ್ ಡಿ'ಸೋಜಾ ಅವರು ೧೯೮೮ರಲ್ಲಿ ಕಟ್ಟಿದರು.

ಚರ್ಚ್ ನಿವಾಸ

[ಬದಲಾಯಿಸಿ]

ಹಳೆಯ ಚರ್ಚ್ ನಿವಾಸವನ್ನು ಯಾವಾಗ ಕಟ್ಟಲಾಗಿತ್ತು ಎಂದು ಹೇಳಲು ದಾಖಲೆಗಳು ಇಲ್ಲವಾದ್ದರಿಂದ ನಿಖರ ಮಾಹಿತಿ ನಿಡಲು ಸಾಧ್ಯವಿಲ್ಲ. ಆದರೆ ಇದನ್ನು ಹಳೇಯ ಚರ್ಚ್ ನಿರ್ಮಾಣದ ಜೊತೆಯಲ್ಲಿಯೇ ಕಟ್ಟಲಾಗಿತ್ತು ಎಂದು ನಂಬಲಾಗಿದೆ. ಹಳೆಯ ಚರ್ಚ್ ನಿವಾಸವು ಶಕ್ತವಾಗಿರದೇ ಇದ್ದುದರಿಂದ ವಂ ಸಿಪ್ರಿಯನ್ ಕುವೆಲ್ಲೊ ಅವರು ಹೊಸ ನಿವಾಸದ ರೂಪರೇಷೆಗಳನ್ನು ನಿರ್ಮಿಸಿ ತಕ್ಷಣದಿಂದಲೇ ಕಾಮಗಾರಿಯನ್ನು ಪ್ರಾರಂಭಿಸಿದರು. ಜನವರಿ ೩೦, ೨೦೦೦ದಲ್ಲಿ ಬಿಷಪ್ ವಂ ಡಾ| ಅಲೋಷಿಯಸ್ ಪೌಲ್ ಡಿ'ಸೋಜಾ ಅವರು ಹೊಸ ಚರ್ಚ್ ನಿವಾಸವನ್ನು ಉದ್ಘಾಟಿಸಿದರು. Since Rev. Fr. Cyprian Coelho was transferred to Rosario Cathedral, ವಂ. ಆಲ್ಬನ್ ಡಿ'ಸೋಜಾ ಅವರು ನಿವಾಸದ ಉಳಿದ ಕಾಂಗಾರಿಗಳನ್ನು ೩೦ ನವೆಂಬರ್ ೨೦೦೨ರಲ್ಲಿ ಪೂರ್ತಿಗೊಳಿಸಿದರು. ಈ ಕಾಮಗಾರಿಯು ಮೊದಲ ಮಹಡಿ ಮತ್ತು ಅಂತಸ್ತುಗಳನ್ನು ಹೊಂದಿದೆ.

ಮಹಾದ್ವಾರ

[ಬದಲಾಯಿಸಿ]

೧೯೯೩ರಲ್ಲಿ ಚರ್ಚಿನಿಂದ ಅಂಚೆ ಕಛೇರಿಗೆ ಹೋಗುವ ಹಾದಿಯನ್ನು ಡಾಂಬರೀಕರಣಗೊಳಿಸಲಾಯಿತು. ೨೦೦೧ರ ಹೊಸಬೆಟ್ಟುವಿನ ಐ.ಸಿ.ವೈ.ಎಮ್. ಘಟಕದ ಬೆಳ್ಳಿ ಹಬ್ಬದ ನೆನಪಿಗಾಗಿ ಮಹಾದ್ವಾರವನ್ನು ಅಂಚೆ ಕಛೇರಿಯ ಬಳಿ ನಿರ್ಮಿಸಿತು. ಈ ಸ್ಮಾರಕ(ಮಹಾದ್ವಾರ)ವನ್ನು ವಂ.ಡಾ| ಅಲೋಷಿಯಸ್ ಪೌಲ್ ಡಿ'ಸೋಜಾ ಅವರು ೨೯ ಏಪ್ರಿಲ್ ೨೦೦೧ ರಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು .

ಕಾನ್ವೆಂಟ್

[ಬದಲಾಯಿಸಿ]

೧೯೮೫ರ ವಂ. ಆಲ್ಬರ್ಟ್ ಮಿನೇಜಸ್ ಅವರ ಅವಧಿಯಲ್ಲಿ, ಶಾಲೆಯ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಲು ಹೊಸಬೆಟ್ಟು ಚರ್ಚ್-ಗೆ ಕೆಲವು ಧರ್ಮಭಗಿನಿಯರನ್ನುಹೊಂದಲು ನಿರ್ಧರಿಸಲಾಯಿತು . ಈ ವಿಚಾರವು ವಂ ಆಲ್ಬರ್ಟ್ ಡಿ'ಸೋಜಾ ಅವರು ಬೇರೆ ಚರ್ಚ್-ಗೆ ವರ್ಗವಾಗಿ ಹೋದುದರಿಂದ ಚರ್ಚ್ ಸಮಿತಿಯಲ್ಲೇ ಉಳಿಯಿತು. ೧೯೯೬ರಲ್ಲಿ ಭಗಿನಿ ಮಲ್ವೀನ ಎಮಿಡಿಯ ಡೆಬೊನಾ ಅವರು ಬ್ರಝೀಲ್ ದೇಶದಿಂದ ಬಂದು ಕಾನ್ವೆಂಟ್ ನಿರ್ಮಾಣಕ್ಕರ ಸೂಕ್ತ ನಿವೇಶನವನ್ನು ಗುರುತಿಸದರು. ಅವರು ತಮಿಳುನಾಡುವಿಗೆ ಬಂದಿಳಿದು ಅಲ್ಲಿ ಒಂದು ವರ್ಷಗಳ ಕಾಲ ಉಳಿದು, ತದನಂತರ ಮಂಗಳೂರಿಗೆ ತೆರಳಿದರು. ೧೯೯೭ರ ನವೆಂಬರ್ ತಿಂಗಳಿನಲ್ಲಿ, ಅವರು ಹೊಸಬೆಟ್ಟುವಿಗೆ ಬಂದು ವಂ. ಸಿಪ್ರಿಯನ್ ಕುವೆಲ್ಲೊ ಅವರನ್ನು ಭೇಟಿ ಮಾಡಿ ಅವರ ಪ್ರಯಾಣದ ಉದ್ದೇಶವನ್ನು ತಿಳಿಸಿದರು. ಚರ್ಚ್ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯನ್ನು ಏರ್ಪಡಿಸಿ, ಚರ್ಚ್ ಸದಸ್ಯರು ಸಂ. ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ನಿವೇಶನದ ಒಂದು ಭಾಗವನ್ನು ದಾನವಾಗಿ ನೀಡುವುದಾಗಿ ಭರವಸೆಯನ್ನಿತ್ತರು. ಆರಂಭದ ಮೂರು ತಿಂಗಳು ಭಗಿನಿ ಮಲ್ವೀನ ಇ ಡೆಬೊನಾ ಅವರು ಶ್ರೀ ಜೆರೊಮ್ ಎಲಿಯಾಸ್ ಗೋವಿಯಸ್ ಅವರು ನೀಡಿದ ಮನೆಯಲ್ಲಿಯೇ ವಾಸವಿದ್ದರು. ೧೯೯೮ರಲ್ಲಿ ಅವರು ಹಳೆಯ ಚರ್ಚ್ ನಿವಾಸದ ಕೋಣೆಗೆ ತಮ್ಮ ನಿವಾಸವನ್ನು ಬದಲಾಯಿಸಿದರು. ಆದುದರಿಂದ ಧರ್ಮಭಗಿನಿಯರೆಲ್ಲರೂ ಕಾನವೆಂಟ್ ಕಟ್ಟಡ ಕಾಂಗಾರಿ ಪೂರ್ಣಗೊಳ್ಳುವವರೆಗೂ ಅಲ್ಲಿ ನೆಲೆಸಿದರು. ಇದರಿಂದಾಗಿ ದೈವಿಕ ಪ್ರಾಂತ್ಯಕ್ಕೊಳಪಟ್ಟ ಬೆನೆಡಿಕ್ಟನ್ ಧರ್ಮಭಗಿನಿಯರು ೧೯ ಮೇ ೧೯೯೯ರಲ್ಲಿ ಇಲ್ಲಿ ಕಾನ್ವೆಂಟ್ ಅನ್ನು ನಿರ್ಮಿಸಿ, ಅದನ್ನು ಬಿಷಷರು ಆಧಿಕೃತವಾಗಿ ಆಶೀರ್ವದಿಸಿ, ಉದ್ಘಾಟಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ For more details kindly log on

ಸಮುದಾಯ ಭವನ

[ಬದಲಾಯಿಸಿ]

ವಂ ಆಲ್ಬನ್ ಡಿ'ಸೋಜಾ ಅವರ ಮುಂದಾಳುತನದಲ್ಲಿ, ಸಮುದಾಯ ಭವನವನ್ನು ಹೊಂದಲು ಯೋಚಿಸಿ ಸದಸ್ಯರನ್ನು ಓಲೈಸಲಾಗಿತ್ತು. ೧೦ ಜೂನ್ ೨೦೦೭ರಲ್ಲಿ ವಿಕಾರ್ ಜನರಲ್ ವಂ ಡೆನ್ನಿಸ್ ಮೊರಾಸ್ ಪ್ರಭು ಅವರು ಚರ್ಚ್ ಭವನದ ಶಂಕುಸ್ಥಾಪನೆಯನ್ನು ಮಾಡಿದರು. ಈ ಭವನವು ಖರೀದಿ ಮಾಡಿ ಸ್ಥಳದಲ್ಲಿದ್ದು ಚರ್ಚಿನ ಮುಂಭಾಗದಲ್ಲಿದೆ. ೧೭ ಅಕ್ಟೋಬರ್ ೨೦೦೯ರಂದು ಅತಿ. ವಂ. ಡಾ| ಅಲೋಷಿಯಸ್ ಪೌಲ್ ಡಿ'ಸೋಜಾ ಅವರು ಹೊಸ ಸಮುದಾಯ ಭವನವನ್ನು ಉದ್ಘಾಟಿಸಿದರು.

ಮುಂದೆ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. John B. Monteiro. "Monti Fest Originated at Farangipet - 240 Years Ago!". Daijiworld Media Pvt Ltd Mangalore. Archived from the original on 2012-02-05. Retrieved 2009-04-28.


ಬಾಹ್ಯ ಆಧಾರಗಳು

[ಬದಲಾಯಿಸಿ]