ವಿಷಯಕ್ಕೆ ಹೋಗು

ಹೋದಿಗೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೋದಿಗೆರೆ - ಭಾರತದ ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಒಂದು ಗ್ರಾಮ. ಚನ್ನಗಿರಿಯ ಪೂರ್ವಕ್ಕೆ ೯ ಕಿಮೀ ದೂರದಲ್ಲಿರುವ ಇದನ್ನು ಹೊದಿಗೆರೆ ಎಂದೂ ಕರೆಯುವುದಿದೆ. ಇಲ್ಲಿ ಸು. ೧೭ ನೆಯ ಶತಮಾನಕ್ಕೆ ಸೇರಿದ ಭವಾನಿ ದೇವಾಲಯ, ರಾಚಿರಂ ಬಾವಿ ಇವೆ. ಮರಾಠಿ ಇತಿಹಾಸದ ಪ್ರಕಾರ ೧೬೬೪ ಜನವರಿ ೨೩ ರಂದು ಶಿವಾಜಿಯ ತಂದೆ ಶಹಾಜಿ ಇಲ್ಲಿ ಮರಣಹೊಂದಿದನೆಂದು ತಿಳಿದುಬರುತ್ತದೆ. ಅವನ ಗೋರಿ ಇಲ್ಲಿದೆ. ಈ ಗೋರಿಯ ಮೇಲೆ ಒಂದು ಶಾಸನವಿದ್ದು ಶ್ರೀ ಶಹಾಜಿ ರಾಜನ ಸಮಾಧಿ ಎಂದು ಕನ್ನಡದಲ್ಲಿ ಬರೆಯಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: