ವಿಷಯಕ್ಕೆ ಹೋಗು

ಸಿ ಎಮ್ ಒ ಎಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(CMOS ಇಂದ ಪುನರ್ನಿರ್ದೇಶಿತ)
ಸಿ ಎಮ್ ಒ ಎಸ್ ಇನ್ವರ್ಟರ್

ಸಿಎಮ್ಓಎಸ್ (CMOS - Complementary Metal Oxide Semiconductor) ಒಂದು ಅರೆವಾಹಕ ಉಪಕರಣ. PMOS (ಪೀಮಾಸ್) ಟ್ರಾನ್ಸಿಸ್ಟರ್ ಮತ್ತು NMOS (ಎನ್ಮಾಸ್) ಟ್ರಾನ್ಸಿಸ್ಟರ್ ಅಂತ ಎರಡು ಮೂಲ ರೀತಿಯ ಟ್ರಾನ್ಸಿಸ್ಟರ್ ಗಳು ಇವೆ. ಇವೆರಡೂ ಸ್ವಿಚ್ಚುಗಳು. ಈ ಸ್ವಿಚ್ಚುಗಳನ್ನು ಬಳಸಿಕೊಂಡೇ ಡಿಜಿಟಲ್ ಲಾಜಿಕ್ (ಮತ್ತು ಅನಲಾಗ್ ಭಾಗ) ಗಳನ್ನು ಅಸ್ತಿತ್ವಕ್ಕೆ ತರುತ್ತೇವೆ. CMOS ಅನ್ನುವುದು ಶೈಲಿ ಮತ್ತು "ತಂತ್ರಜ್ಞಾನ" ಎರಡಕ್ಕೂ ಸಂಬಂಧಿಸಿದ್ದು. ಈ ಬಗೆಗಿನ ತಂತ್ರಜ್ಞಾನ (fabrication - ಒಂದು ಚಿಪ್ ಅನ್ನು ಉತ್ಪಾದನೆ ಮಾಡುವುದು) ಗೆ ಸಂಬಂಧಪಟ್ಟಿದ್ದು. ಯಾವ ತಂತಜ್ಞಾನ / ಟೆಕ್ನಾಲಜಿ ಪೀಮಾಸ್ ಮತ್ತು ಎನ್ಮಾಸ್ ಎರಡೂ ಟ್ರಾನ್ಸಿಸ್ಟರಗಳನ್ನು ತಯಾರಿಸಲು ಅನುವು ಮಾಡಿಕೊಡುತ್ತೋ ಅಂತ ತಂತ್ರಜ್ನಾನಾವನ್ನು CMOS ತಂತ್ರಜ್ಞಾನ ಅನ್ನಬಹುದು. CMOS ತಂತ್ರಜ್ಞಾನದಲ್ಲಿ ಮುಖ್ಯವಾಗಿ ಎರಡು ರೀತಿಯ "ಮೂಲ" ಟ್ರಾನ್ಸಿಸ್ಟರ್ ಗಳನ್ನು ಬಳಸುತ್ತೇವೆ. ಒಂದು ಡಿಜಿಟಲ್ ಲಾಜಿಕ್ ಅನ್ನು ಉದಾಹರಣೆಯಾಗು ತೆಗೆದುಕೊಂದು ನಾವು CMOS –ಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳಬಹುದು. ಈ CMOS ತಂತ್ರಜ್ನಾನದಲ್ಲಿ ಎನ್ಮಾಸ್ ಮತ್ತು ಪೀಮಾಸ್ ಅಂತ ಎರಡು ಟ್ರಾನ್ಸಿಸ್ಟರ್ ಬಳಸುತ್ತೇವೆ. ಎನ್ಮಾಸ್ ಟ್ರಾನ್ಸಿಸ್ಟರ್ ಲಾಜಿಕ್-ಝೀರೋವನ್ನು ಪೂರ್ತಿ ಅಸ್ತಿತ್ವಕ್ಕೆ ತಂದರೂ ಲಾಜಿಕ್ ಒನ್ ಅನ್ನು ಪೂರ್ತಿ ಅಸಿತ್ವಕ್ಕೆ ತರಲ್ಲ. ಇದರ ಅರ್ಥ ಸೊನ್ನೆ ವೋಲ್ಟೇಜ್ ಬರೋ ಜಾಗದಲ್ಲಿ ಸೊನ್ನೆ ವೋಲ್ಟೇಜ್ ಬಂದರೂ ೫ ವೋಲ್ಟೇಜ್ ಬರುವ ಜಾಗದಲ್ಲಿ ೪.೩ ವೋಲ್ಟೇಜ್ ಬರಬಹುದು. ಪೀಮಾಸ್ ಟ್ರಾನ್ಸಿಸ್ಟರ್ ಲಾಜಿಕ್-ಒನ್ಅನ್ನು ಪೂರ್ತಿ ಅಸ್ತಿತ್ವಕ್ಕೆ ತಂದರೂ ಲಾಜಿಕ್ ಝೀರೋವನ್ನು ಪೂರ್ತಿ ಅಸಿತ್ವಕ್ಕೆ ತರಲ್ಲ. ಇದರ ಅರ್ಥ ೫ ವೋಲ್ಟ್ ಬರೋ ಜಾಗದಲ್ಲಿ ಐದು ವೋಲ್ಟ್ ಬಂದರೂ ಸೊನ್ನೆ ವೋಲ್ಟ್ ಬರುವ ಜಾಗದಲ್ಲಿ ೦.೭ ವೋಲ್ಟೇಜ್ ಬರಬಹುದು. ಪೀಮಾಸ್ ಮತ್ತು ಎನ್ಮಾಸ್ ಫೆಟ್ಗಳ ಮೇಲಿನ ಮಿತಿಗಳನ್ನು ಮೀರಿ, ಡಿಜಿಟಲ್ ಲಾಜಿಕ್ ಅಸ್ತಿತ್ವ ಕ್ಕೆ ಬರಲು ( ಅಂದರೆ, ಪೂರ್ತಿ ಸೊನ್ನೆ ಮತ್ತು ಪೂರ್ತಿ ೫ ವೋಲ್ಟಗಳು) ಇವೆರಡನ್ನೂ ಬಳಸಬಹುದು. ಅದೇ ಈ CMOS ಶೈಲಿ ಅತ್ವ CMOS ತಂತ್ರಜ್ಞಾನ! ಇಲ್ಲಿ ಪೀಮಾಸ್ ಮತ್ತು ಎನ್ಮಾಸ್ಗಳು ಒಂದಕ್ಕೊಂದು ಪೂರಕವಾಗಿರುತ್ತವೆ (complementary). ಸೊನ್ನೆ ಲಾಜಿಕ್ಕನ್ನು ಎನ್ಮಾಸ್ ಟ್ರಾನ್ಸಿಸ್ಟರಗಳು ಮತ್ತು ಪೀಮಾಸ್ ಟ್ರಾನ್ಸಿಸ್ಟರಗಳು ಹೈ ಲಾಜಿಕ್ ಅನ್ನು ಅಸ್ತಿತ್ವ ಕ್ಕೆ ಬರಿಸುತ್ತವೆ. ಈ ರೀತಿ ಎರಡು ರೀತಿಯ "ಮಾಸ್ (MOS)" ಟ್ರಾನ್ಸಿಸ್ಟರಗಳು ಅನ್ನು ಒಂದಕ್ಕೊಂದು "ಪೂರಕ"ವಾಗಿ ಬಳಸುವುದರಿಂದ ಈ "ರೀತಿ"ಗೆ CMOS ರೀತಿ ಅತ್ವ CMOS ತಂತ್ರಜ್ಞಾನ ಅನ್ನಬಹುದು.