ಅಪ್ರಿಕಾಟ್ ಎಣ್ಣೆ
ಅಪ್ರಿಕಾಟ್ ಎಣ್ಣೆ | |
---|---|
ಅಪ್ರಿಕಾಟ್ ಹಣ್ಣು | |
Conservation status | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
Subgenus: | |
Section: | Armeniaca
|
ಪ್ರಜಾತಿ: | P. armeniaca
|
Binomial name | |
ಪ್ರುನಸ್ ಅರ್ಮೆನಿಯಕ | |
Synonyms | |
Armeniaca vulgaris Lam.[೧] Amygdalus armeniaca (L.) Dumort.[೧] |
ಅಪ್ರಿಕಾಟ್ ಎಣ್ಣೆಯನ್ನು ಅಪ್ರಿಕಾಟ್ ಬೀಜದಿಂದ ತೆಗೆಯಲಾಗುತ್ತದೆ. ಅಪ್ರಿಕಾಟ್ ಮರ ರೋಜೇಸೆಕುಟುಂಬಕ್ಕೆ ಸೇರಿದ ಮರ. (rosaceae). ಇದರ ಜಾತಿ ಮತ್ತು ಉಪಜಾತಿ ಪ್ರುನಸ್ಆಗಿದೆ. ಈ ಮರದ ಸಸ್ಯಶಾಸ್ತ್ರ ಹೆಸರುಪ್ರುನಸ್ ಅರ್ಮೆನಿಯಕ(prunus armeniaca). ಅಪ್ರಿಕಾಟ್ ಜೊತೆ ಅತಿಪುರಾತನ ಕಾಲದಿಂದ(ಸಾವಿರಾರು ವರ್ಷದಿಂದ) ಮನುಜನಿಗೆ ಪರಿಚಯವಿದೆ. ಇದರ ಮೂಲಸ್ಥಾನ ಏಷಿಯಾದಲ್ಲಿರುವ ಅರ್ಮೆನಿಯ(armenia)ಎಂದು ಭಾವಿಸಲಾಗುತ್ತದೆ[೨]. ಅದರಿಂದನೆ ಇದರ ಸಸ್ಯಶಾಸ್ತ್ರಹೆಸರನ್ನು ಪ್ರುನಸ್ ಅರ್ಮೆನಿಯಕ ಎಂದು ಕರೆಯಲಾಗುತ್ತದೆ. ಕೆಲವರ ಅಭಿಪ್ರಾಯ ಪ್ರಕಾರ ಇದರ ಜನ್ಮಸ್ಥಾನ ರಷ್ಯಾ-ಚೈನಾ ಸರಹದ್ದು ಪ್ರಾಂತ್ಯ, ಅಲ್ಲಿಂದ ಇದುಸಿಲ್ಲ್ಕ್ ರೋಡ್ ದ್ವಾರ ಮಧ್ಯ ತೂರ್ಪು ಯೂರೋಪ್ ದೇಶಗಳಿಗೆ ಕರೆತರಲಾಗಿದೆ. ಕ್ರಿ.ಪೂ ೬೦ ಸಂ. ಪುರಾತನ ಗ್ರೀಸಿನಲ್ಲಿ ಇದರ ಬಗ್ಗೆ ತಿಳಿವಳಿಕೆ ಇದೆ. ಭಾರತ ದೇಶದಲ್ಲಿ ಈ ಮರವನ್ನು ಕ್ರೀ.ಪೂ. ೩೦೦೦ಸಾವಿರ ವರ್ಷಕ್ಕಿಂತ ಮುಂಚಿನಿಂದ ಬೆಳೆಸಲಾಗಿದೆ ಎಂದು ತಿಳಿದು ಬಂದಿದೆ [೩].
ಅಪ್ರಿಕಾಟ್ ಗಿಡ
[ಬದಲಾಯಿಸಿ]ಅಪ್ರಿಕಾಟ್ ಎಂಬುವುದು ಆಂಗ್ಲ ಹೆಸರು. ಭಾರತದಲ್ಲಿ ಈ ಮರವನ್ನು ಹಲವಾರು ಹೆಸರುಗಳಲ್ಲಿ ಕರೆಯಲಾಗುತ್ತದೆ. ಹಿಂದಿ ಭಾಷೆಯಲ್ಲಿ ಛುಲ್ಲು(chullu), ಖುಬಾನಿ(khubani),(ಛೊಲchola)ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಜಲ್ದರು ಎಂದು ಹೇಳುತ್ತಾರೆ. ಕನ್ನಡದಲ್ಲಿ ಕೆಲವು ಕಡೆ ಛುಲ್ಲು ಎಂದು ಕರೆಯುತ್ತಾರೆ. ಈ ಮರ ಉತ್ತರ ಭಾರತದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಉತ್ತರದ ಶೀತಲ ಉಷ್ಣ ಪ್ರಾಂತ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ಬೆಳೆಯುತ್ತಿವೆ. ಈ ಮರ ಸಮುದ್ರ ಮಟ್ಟದಿಂದ ೧೨೦೦-೨೫೦೦ ಮೀಟರುಗಳ ಎತ್ತರವಾದ ಪ್ರಾಂತ್ಯದಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಅಪ್ರಿಕಾಟ್ ತೋಟೆಗಳ ಸಾಗುವಳಿ ನೈನಿತಾಲ್, ಅಲ್ಮೊರ, ಫಿಥರ್ ಘರ್ಜಿಲ್ಲೆಗಳಲ್ಲಿ ಹೆಚ್ಚು ವಿಸ್ತೀರ್ಣದಲ್ಲಿದೆ. ಅಪ್ರಿಕಾಟ್ ತೋಟೆಗಳ ಬೆಳವಣಿಗೆ ಹಿಮಾಚಲ್ ಪ್ರದೇಶ ,ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳು ಅನುಕೂಲ ಪ್ರಾಂತ್ಯಗಳು[೪] . ಮರ ೧೦ ಮೀಟರುಗಳ ಎತ್ತರದವರೆಗೆ ಬೆಳೆಯುತ್ತದೆ. ಕೊಂಬೆಗಳಿರುತ್ತವೆ. ಕಾಂಡದ ಮೇಲೆ ಕೆಂಪು ತೊಗಟೆ ಇರುತ್ತದೆ. ಎಲೆಗಳು ಹಸಿರಾಗಿ ೬ ಸೆಂ.ಮೀ ಉದ್ದ ವಾಗಿರುತ್ತವೆ .ಹೂಗಳುಪಿಂಕು ಬಣ್ಣ ಹೊಂದಿ ಅಂಡಾಕಾರ ರೂಪದಲ್ಲಿ ಇರುತ್ತವೆ. ಏಪ್ರಿಲ್-ಮೇ ತಿಂಗಳಗಳಲ್ಲಿ ಹಣ್ಣಾಗುತ್ತವೆ. ಹಣ್ಣು ಗೋಲಾಕಾರವಾಗಿ ೫ ಸೆಂ.ಮೀ. ಅಡ್ಡಿಳಿತ ಪ್ರಮಾಣದಲ್ಲಿ ಇರುತ್ತದೆ. ಕಾಯಿ/ಹಣ್ಣ ಮೇಲೆ ಬೂದು ತರಹ ಪುಡಿ ಇರುತ್ತದೆ. ಹಣ್ಣು ಹಳದಿ ಇಲ್ಲವೆ ಹಳದಿ, ಕೆಂಪು ವರ್ಣಮಿಶ್ರಣವಾಗಿರುತ್ತದೆ. ರುಚಿ ಹುಳಿ, ಸಿಹಿಗಳ ಸಮ್ಮೇಳನವಾಗಿರುತ್ತದೆ.
ವಿತ್ತನ/ಬೀಜ
[ಬದಲಾಯಿಸಿ]ವಿತ್ತನ/ಬೀಜ ಪರಿಮಾಣವು 1.3-2.5 X 0.8-1.2 ಸೆಂ.ಮೀ. ಇದೊಂದು ಗೊರಟೆ(nut), ಹೊರಗೆ ಮೃದುವಾದ ತಿರುಳು ಇರುತ್ತದೆ. ಮರಕ್ಕೆ ೪-೫ ವರ್ಷ ಬಂದಾಗ ಹೂವನ್ನು ಬಿಡುವುದಕ್ಕೆ ಮೊದಲಾಗುತ್ತದೆ. ೩೦ ಸಂವತ್ಸರ ತನಕ ಇಳುವರಿ ಕೊಡುತ್ತದೆ. ಒಂದು ವರ್ಷಕ್ಕೆ ೮೦-೧೨೦ ಕಿಲೋಗಳ ಹಣ್ಣು ಬರುತ್ತದೆ. ವಿತ್ತನವು ಆದರೆ ೨೫ಕಿಲೋ ತನಕ ಬರುತ್ತದೆ. ಸಿಪ್ಪೆ ತೆಗೆದ ವಿತ್ತನ/ಬೀಜ(kernel)ದಲ್ಲಿದ್ದ ಪದಾರ್ಥಗಳು[೫]
ಪದಾರ್ಥ | ಶೇಕಡ |
ತೇವ | 4.0-5.0 |
ಎಣ್ಣೆ | 52.0% |
ಪ್ರೋಟಿನ್ | 20.6% |
ನಾರು/ಕೆತ್ತ | 4.0-5.0 |
ಸಕ್ಕರೆ | 8.10(ನೇರವಾಗಿ) |
ಡೆಕ್ಷ್ಟ್ರೊಸ್(dextrose) | 11.60(after conversion) |
ಎಣ್ಣೆ -ಉತ್ಪಾದನೆ
[ಬದಲಾಯಿಸಿ]ಸಿಪ್ಪೆಕೂಡಿದ ವಿತ್ತನ /ಗೊರಟೆಯಲ್ಲಿ ಎಣ್ಣೆ ೧೬-೧೮% ವರೆಗೆ ಇರುತ್ತದೆ. ಗೊರಟೆಯಲ್ಲಿದ್ದ ಸಿಪ್ಪೆಯನ್ನು ತೆಗೆದ ಮೇಲೆ ಬೀಜ ೩೦% ತನಕ ಇರುತ್ತದೆ. ಸಿಪ್ಪೆ ತೆಗೆದ ಬೀಜದಲ್ಲಿ ಎಣ್ಣೆ ಪ್ರತಿಶತ ೫೦-೫೨% ವರೆಗೆ ಇರುತ್ತದೆ. ಸಿಪ್ಪೆ/ಹೊಟ್ಟು ತೆಗೆದ ಬೀಜದಿಂದ ಎಕ್ಸುಪೆಲ್ಲರು ಯಂತ್ರಗಳನ್ನು ಬಳಸಿ ಎಣ್ಣೆಯನ್ನು ತೆಗೆಯುತ್ತಾರೆ. ಹಿಂಡಿಯಲ್ಲಿ ಉಳಿದಿರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ನಲ್ಲಿ ತೆಗೆಯಲಾಗುತ್ತದೆ. ಕಚ್ಚಾಎಣ್ಣೆ ಮಸುಕಾದ ಅರಿಶಿನ ಬಣ್ಣದಲ್ಲಿ ಇರುತ್ತದೆ. ರಿಫೈಂಡ್ ಮಾಡಿದ ಮೇಲೆ ವರ್ಣರಹಿತವಾಗಿರುತ್ತದೆ. ಕಚ್ಚಾ ಎಣ್ಣೆಯಲ್ಲಿ ಸೈಯನೊ ಜನೆಟಿಕ್ ಗ್ಲುಕೊಸೈಡ್(cyyanogenetic glucoside)ಇರುತ್ತದೆ . ಎಣ್ಣೆಯನ್ನು ರಿರ್ಫೈಂಡ್ ಮಾಡಿದ್ದಾಗ ಇದು ಕಳಚಿ ಹೊಗುತ್ತದೆ. ಎಣ್ಣೆಯಲ್ಲಿ ಒಲಿಕ್ ಕೊಬ್ಬಿನ ಆಮ್ಲ ೫೩. ೦-೭೧.೦% ವರೆಗೆ, ಲಿನೊಲಿಕ್ ಆಮ್ಲ ೨೧.೩-೩೫.೬% ತನಕ ಇರುತ್ತವೆ. ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೧೦% ವರೆಗೆ ಇರುತ್ತವೆ[೬] ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಣ ಪಟ್ಟಿ[೬][೪]
ಕೊಬ್ಬಿನ ಆಮ್ಲ | ಪರಿವಿಡಿ | ಸರಾಸರಿ |
ಮಿರಿಸ್ಟಿಕ್ ಆಮ್ಲ(C14:0) | 1.1 | |
ಪಾಮಿಟಿಕ್ ಆಮ್ಲ(C16:0) | 3.5 | |
ಸ್ಟಿಯರಿಕ್ ಆಮ್ಲ(C18:0) | 2.0 | |
ಒಲಿಕ್ ಆಮ್ಲ(C18:1) | 53.0-71.0 | 73.4 |
ಲಿನೊಲಿಕ್ ಆಮ್ಲ((C18:2) | 21.4-35.6 | 20.0 |
ಭೌತಿಕ ಗುಣ | ಮಿತಿ |
ವಕ್ರಿಭವನ ಸೂಚಿಕೆ ೪೦0Cవద్ద | 1.4726 |
ಅಯೋಡಿಮ್ ಮೌಲ್ಯ | 100.3 |
ಸಪೋನಿಫಿಕೆಶನ್ ಸಂಖ್ಯೆ/ಮೌಲ್ಯ | 190.6 |
ಅನ್ ಸಪೋನಿಫಿಯಬುಲ್ ಪದಾರ್ಥ | 1.3% |
ಆಮ್ಲ ಮೌಲ್ಯ | 2-3% |
ವಿಶಿಷ್ಟಗುರುತ್ವ 250Cవద్ద | 0.914 |
- ಕಾಂತಿವರ್ಧಕ, ಅಂಗರಾಗ, ಸೌಂದರ್ಯವರ್ಧಕ ಲೇಪನ, ದ್ರವ್ಯಪದಾರ್ಥಗಳನು ತಯಾರಿಸುವುದರಲ್ಲಿ ಉಪಯೋಗಿಸುತ್ತಾರೆ.
- ಸಲಾಡ್ ಆಹಾರ ಪದಾರ್ಥಗಳನ್ನು ತಯಾರು ಮಾಡಲಾಗುತ್ತದೆ.
- ಆಸ್ಥ್ಮಾ ನಿವಾರಣಕ್ಕೆ ಉಪಯೋಗಿಸುತ್ತಾರೆ.
- ಸೊರಯಸಿಸ್ ಚಿಕಿತ್ಸೆಯಲ್ಲಿ ಬಳಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ John H. Wiersema. "USDA Germplasm Resources Information Network (GRIN)". Ars-grin.gov. Retrieved 2012-06-22.
- ↑ CultureGrams 2002 – Page 11 by Culture Grams
- ↑ https: //www. tytyga. com/ History-of-the-Apricot-Tree-a/378.htm
- ↑ ೪.೦ ೪.೧ ೪.೨ SEA Hand Book.2009. by The Solvent Extractors' Association of India
- ↑ http://www.tandfonline.com/doi/abs/10.1080/01140671.1990.10428068#.UldjsNJHK-k
- ↑ ೬.೦ ೬.೧ http: //www. scirp. org/journal/PaperInformation. aspx?PaperID=3032
- ↑ http://nopr.niscair.res.in/bitstream/123456789/14818/1/IJNPR%203(3)%20366-370.pdf
- ↑ http://www.essentialoil.in/apricot-oil.html