ಎಣ್ಣೆ ಮರ ಬಿತ್ತನೆಎಣ್ಣೆ
ಎಣ್ಣೆ ಮರ ಬಿತ್ತನೆಯಿಂದ ಎಣ್ಣೆಯನ್ನು ತೆಗೆಯುತ್ತಾರೆ. ಆದರೆ ಇದು ಆಹಾರ ಯೋಗ್ಯವಾದ ಎಣ್ಣೆಯಲ್ಲ. ಇದನ್ನು ಕುಷ್ಠರೋಗ, ಚರ್ಮರೋಗಗಳ ನಿವಾರಣೆ ಮದ್ದುಗಳಲ್ಲಿ ಬಳಸುತ್ತಾರೆ. ಎಣ್ಣೆ ಮರವನ್ನು ಇನ್ನೂ ಅಡವಿ ಬಾದಾಮಿ, ಚಾಲ್ ಮೊಗ್ರ (chalmogra), ಸುರಂತಿ(suranti)ಹೆಸರುಗಳಿಂದ ಕರೆಯುತ್ತಾರೆ. ಇದು ಫ್ಲಾಕೊರ್ಟೀಯೆಸಿ (flacourtiacea)ಸಸ್ಯ ಕುಟುಂಬಕ್ಕೆ ಸೇರಿದ ಮರ. ಈ ಮರದ ಸಸ್ಯ ಶಾಸ್ತ್ರ ಹೆಸರು ಹಿಡ್ನೊಕಾರ್ಪಸ್ ಪೆಂಟನ್ಡ್ರುಸ್ (hypnocarpus pentandrus). ಹಿಂದಿಯಲ್ಲಿ ಈ ಮರವನ್ನು ಛೌಲ್ ವೊಗ್ರ (Chaulmoogra)ಅಂತಾ ಕರೆವರು. ಈ ಮರದ ಜನ್ಮ ಸ್ಥಾನ ಏಷಿಯಾಉಷ್ಣ ಮಂಡಲ ಪ್ರಾಂತವು [೧].ಮತ್ತು ಈಸ್ಟ್ ಇಂಡಿಯಾ ಪ್ರಾಂತವು (East india)[೨] , ಈಸ್ಟ್ ಇಂಡಿಯಾ ಅಂದರೆ ಬಂಗಾಲ, ಬೀಹಾರ, ಜಾರ್ಖಂಡ್, ಮತ್ತು ಒರಿಸ್ಸಾಒಳಗೊಂಡ ಪ್ರಾಂತ[೩]. ಈ ಜಾತಿಯಲ್ಲಿ ಇನ್ನೂ ಎರಡು ಇದೇ ತರಹದ ಗಿಡಗಳಿವೆ. ಒಂದು ಹಿಡ್ನೊಪಕಾರ್ಪಸ್ ಪೆನ್ತಂದ್ರ( Hydnocarpus laurifolia pentandra),ಇನ್ನೊಂದು ಹಿಡ್ನೊಕಾರ್ಪಸ್ ( Hydnocarpus laurifolia).
- ಹಿಂದಿ=:ಕಾಲ್ ವೊಗ್ರಾ( कालमोगरा Calmogara, Chalmogra, Chaulmoogra,(Jangli badam )
- ಕನ್ನಡ= ಚಾಲ್ ವೊಗ್ರಾ( Chalmogra),ಎಣ್ಣೆ ಮರ(yenne mara), Mirolhakai, Surti, Suranti,Toratti •
- ಮಲಯಾಳಂ=ಕೊಡಿ(Kodi),ಮರವಟ್ಟಿ( Maravatty), Marotti, Nirvatta, Nirvetti
- ಮರಾಠಿ= ಕಾಡು ಖಾವಾತ್(Kadu Kawath)
- ಸಂಸ್ಕೃತ= ತುವರಕ( Tuvaraka), Turveraka, Tuvrak, (कुष्टवैरी Kushtavairi)
- ತಮಿಳುಮರವೆಟ್ಟಿ(Maravetti), Maravattai, Marotti
- ತೆಲುಗು=ನಿರಡಿ ವಿತ್ತುಲು( Niradi-vittulu)
ಎಣ್ಣೆ ಮರಗಳ ಬೆಳವಣಿಗೆ -ಪ್ರಪಂಚ ದೇಶಗಳು
[ಬದಲಾಯಿಸಿ]ಆಗ್ನೇಯ ಏಷಿಯಾ ದೇಶಗಳಲ್ಲಿ, ಮುಖ್ಯವಾಗಿ ಮಲಯನ್ ಕಂಬಲದಲ್ಲಿ ಮರಗಳು ಹೇರಳವಾಗಿ, ವ್ಯಾಪಕವಾಗಿವೆ. ಇನ್ನೂ ಶ್ರೀಲಂಕ,ನಿಗೆರಿಯ ಮತ್ತು ಉಗಾಂಡದೇಶದಲ್ಲಿಯು ವ್ಯಾಪಕವಾಗಿದೆ.
ಭಾರತ ದೇಶದಲ್ಲಿ ಬೆಳವಣಿಗೆ
[ಬದಲಾಯಿಸಿ]ಪಶ್ಚಿಮ ಕಣಿವೆ ಉಷ್ಣವಲಯ ಅರಣ್ಯ ಪ್ರಾಂತ್ಯಗಳು, ಮಹಾರಾಷ್ಟ್ರದಿಂದ ಕೇರಳ ರಾಜ್ಯದವರೆಗಿರುವ ಕರಾವಳಿಯ ಪ್ರಾಂತ್ಯದಲ್ಲಿ ವ್ಯಾಪಕವಾಗಿವೆ. ಇನ್ನೂ ಅಸ್ಸಾಂ, ತ್ರಿಪುರ ರಾಜ್ಯಗಳಲ್ಲಿ ಪರ್ವತ ರಹದಾರಿ ಪಕ್ಕದಲ್ಲಿ ಬೆಳೆಯುತ್ತವೆ.
ಮರ
[ಬದಲಾಯಿಸಿ]ಎತ್ತರವಾದ, ಕೆಲ ಕಡೆ ಎಲೆ ಬೀಳುವ, ಕೆಳಗಡೆ ನಿತ್ಯ ಹರಿತವಾಗಿರುವ ಮರ. ದೃಢವಾದ ಕಾಂಡ, ಪುಷ್ಕಳವಾಗಿ ವ್ಯಾಪಕವಾದ ಕೊಂಬೆಗಳು ವೃತ್ತಕಾರ ಹೊಂದಿರುತ್ತವೆ. ಸಾಧಾರಣವಾಗಿ ೧೦ ಮೀ. ಎತ್ತರ, ಒಮ್ಮೆಮ್ಮೆ ೧೨-೧೫ ಮೀಟರುಗಳಷ್ಟು ಬೆಳೆಯುತ್ತದೆ. ತೊಗಟೆ ಕಂದು ಬಣ್ಣದಲ್ಲಿ ಬಿರುಸಾಗಿ ಇರುತ್ತದೆ. ಕೊಂಬೆ ಉಪರಿ ತಲೆ ಮೇಲೆ ಸೂಕ್ಮ ಕೇಶಗಳಂತವು ಇರುತ್ತವೆ. ರೆಂಬೆ ಮೇಲೆ ಎಲೆಗಳು ೦.೭-೨.೨ ಸೆಂ,ಮೀ, ಉಳ್ಳ ತೊಡಂಬೆ ಮೇಲೆ ಒಂದಾದ ಮೇಲೊಂದು ಅಮರಿ ಕೊಂಡಿರುತ್ತವೆ. ಎಲೆಗಳ ಪ್ರಮಾಣ ೮-೨೩ X ೩.೫-೧೦ ಸೆಂ,ಮೀ.ದೀರ್ಘವೃತ್ತಾಕಾರ/ನಿಡುನಾಲ್ಮೂಲೆಯವಾಗಿರುತ್ತದೆ. ಎಲೆ ಅಂಚು ಚೂಪಾಗಿರುತ್ತದೆ. ಎಲೆಗಳು ಹಸಿರು ಬಣ್ಣದಲ್ಲಿರುತ್ತದೆ. ಹೂವುಗಳು ಎಲೆಗಳ ಕಾವು/ಕಣಿಕೆ ಮೇಲೆ ಹುಟ್ಟುತ್ತವೆ. ಹೂವು ವೃತ್ತಾಕಾರ ರೂಪದಲ್ಲಿ ೬-೧೦ಸೆಂ,ಮೀ. ಗಳಿದ್ದು, ಬೆಳ್ಳಗಿರುವ ಪುಷ್ಪ ದಳಗಳನು ಹೊಂದಿರುತ್ತವೆ[೫]. ಜನವರಿ -ಏಪ್ರಿಲ್ ತಿಂಗಳುಗಳಲ್ಲಿ ಮರದ ಮುಗುಳು ಅರಳುತ್ತದೆ (ಹೂವನ್ನು ಬಿಡುತ್ತದೆ). ಆಗಸ್ಟ್-ಸೆಪ್ಟೆಂಬರು ತಿಂಗಳುಗಳಲ್ಲಿ ಹಣ್ಣು ಫಕ್ವವಾಗುತ್ತದೆ. ಹಣ್ಣು ಗೋಳಾಕಾರ ಅಥವಾ ಅಂಡಾಕಾರವಾಗಿ ೧೦.೦ಸೆಂ.ಮೀ ಅಡ್ಡಳತೆಯಲ್ಲಿ ಇರುತ್ತದೆ. ಹಣ್ಣು ಮೇಲೆ ತೊಗಟೆ ಇದ್ದು, ಒಳಗೆ ತಿರುಳಿರುತ್ತದೆ. (pulp)ಹಣ್ಣಲ್ಲಿ ತಿರುಳು/ಕಸುರು ೫೦-೫೫% ವರೆಗೆ ಇರುತ್ತದೆ. ಹಣ್ಣೊಳಗೆ ತಿರುಳು ಇರುವುದರಲ್ಲಿ ೧೦-೧೫ ಶಂಕುದ ಆಕಾರ ಕಂದು ಬಣ್ಣದ ಬಿತ್ತನೆಗಳಿರುತ್ತವೆ. ಬಿತ್ತನೆ (seed)ಯಲ್ಲಿ ಬೀಜ (kernel) 60-70%ಇದ್ದು, ಬೀಜದಲ್ಲಿ ೬೩% ವರೆಗೆ ಎಣ್ಣೆ ಇರುತ್ತದೆ. ಒಂದು ಮರಕ್ಕೆ ೧೦೦ ಕಿಲೋಗಳಷ್ಟು ಹಣ್ಣು ಇಳುವರಿಗೆ ಬರುತ್ತದೆ[೪]
ಬಿತ್ತನೆ ಶೇಖರಣೆ-ಎಣ್ಣೆ ಉತ್ಪಾದನೆ
[ಬದಲಾಯಿಸಿ]ಹಣ್ಣು ಮಾಗಿದ ಮೇಲೆ ಮರವನ್ನು ಏರಿ ಹಣ್ಣನ್ನು ಸಂಗ್ರಹಿಸಲಾಗುತ್ತದೆ. ಚೂರಿಯಿಂದ ಹಣ್ಣನ್ನು ಸುಲಿದು ವಿತ್ತನವನ್ನು ತೆಗೆದು ನೀರಿಂದ ಚೆನ್ನಾಗಿ ತೊಳೆದು, ಆಮೇಲೆ ವಿತ್ತನವನ್ನು ಸೂರ್ಯಕಿರಣದ/ಬೆಳಕಿನಲ್ಲಿ ಒಣಗಿಸುವರು. ವಿತ್ತನದ ಮೇಲಿನ ತೊಗಟೆ/ಸಿಪ್ಪೆಯನ್ನು ಕೊಡತೆಯಿಂದ ಒಡೆದು, ಅಲ್ಲವೆ ಡಿಕಾರ್ಟಿಕೇರ್ ಎನ್ನುವ ಯಂತ್ರಗಳಲ್ಲಿ ಬಳಸಿ ವಿಂಗಡಿಸುತ್ತಾ ರೆ. ಸಿಪ್ಪೆ ತೆಗೆದ ತಿರುಳನ್ನು ಗಾಣ (ghani)/ರೋಟರಿ ಗಿರಣಿಯಲ್ಲಿ [೬] ಅಥವಾ ಎಕ್ಸುಪೆಲ್ಲರು [೭],ನಲ್ಲಿ ನಡೆಸಿ ಎಣ್ಣೆಯನ್ನು ತೆಗೆವರು.
ಎಣ್ಣೆ
[ಬದಲಾಯಿಸಿ]ಎಣ್ಣೆ ಕಳೆಗುಂದಿದ ಹಸಿರು ಬಣ್ಣವಾಗಿ ಕಾಣಿಸುತ್ತದೆ. ರಿಫೈಂಡ್ ಮಾಡಿದಾಗ ಎಣ್ಣೆ ಬೆಳ್ಳಗೆ ಕಾಣಿಸುತ್ತದೆ. ಎಣ್ಣೆಯಲ್ಲಿ ಉಳಿದ ಸಸ್ಯ ಬೀಜ ಎಣ್ಣೆಯಲ್ಲಿರುವ ಸಾಧಾರಣ ಕೊಬ್ಬಿನ ಆಮ್ಲಗಳು ತುಂಬ ಕಡಿಮೆ ಪ್ರಮಾಣದಲ್ಲಿರುತ್ತದೆ. ಎಣ್ಣೆಯಲ್ಲಿ ಸಕ್ಲೊಪೆಟೆನ್ ಕೊಬ್ಬಿನ ಆಮ್ಲಗಳಾದ ಹೈಡ್ನೊಕಾರ್ಪಿಕ್, ಛೌಲ್ ಮೋಗ್ರಿಕ್, ಗೊರ್ಲಿಕ್ ಆಮ್ಲಗಳು ೭೦- ೮೦% ತನಕ ಇರುತ್ತವೆ. ಇತರೆ ಸಾಧಾರಣ ಕೊಬ್ಬಿನ ಆಮ್ಲಗಳು ೨೦-೩೦% ಮಾತ್ರವಿರುತ್ತವೆ. ಕೆಳಗಿನ ಪಟ್ಟಿಯಲ್ಲಿ ಮೂರು ಪ್ರಭೇದಗಳ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಣೆಗಳನ್ನು ಕೊಡಲಾಗಿದೆ [೮]
ಕೊಬ್ಬಿನ ಆಮ್ಲ | hy.kurzil | H. wightiana | H. odorata |
ಹೈಡ್ನೊಕಾರ್ಪಿಕ್ ಆಮ್ಲ | ೨೩.೦ | ೩೩.೯ | |
ಛ್ಹೌಲ್ ಮೋಗ್ರಿಕ್ ಆಮ್ಲ | ೨೯.೬ | ೩೫.೦ | |
ಗೊರ್ಲಿಕ್ ಆಮ್ಲ | ೨೫.೧ | ೧೨.೮ | |
ಕಡಿಮೆ ಚಕ್ರಯುತ ಹೊಮೊಲೊಗಸ್ | ೦.೩ | ೪.೬ | |
ಮಿರಿಸ್ಟಿಕ್ | ೦.೬ | ೦.೮ | ೦.೪ |
ಪಾಮಿಟಿಕ್ ಅಮ್ಲ | ೮.೪ | ೫.೬ | ೧೧.೮ |
ಸ್ಟಿಯರಿಕ್ ಆಮ್ಲ | ೦.೬ | ೪.೭ | |
ಪಾಮಿಟೋಲಿಕ್ ಆಮ್ಲ | ೬.೦ | ೦.೫ | |
ಒಲಿಲ್ ಆಮ್ಲ | ೫.೪ | ೩.೬ | ೨೧.೮ |
ಲಿನೊಲಿಕ್ ಆಮ್ಲ | ೧.೬ | ೧.೮ | ೨೯.೩ |
ಲಿನೊಲೆನಿಕ್ ಆಮ್ಲ | ೩೧.೨ |
ಎಣ್ಣೆಯ ಭೌತಿಕ ಧರ್ಮಗಳು[೯]
ಭೌತಿಕ ಧರ್ಮ | ಮಿತಿ |
ವಕ್ರೀಭವನ ಸೂಚಕ 400Cవద్ద | 1.472-1.476 |
ಅಯೋಡಿನ್ ಮೌಲ್ಯ/ಬೆಲೆ | 98-103 |
ಸಪೋನಿಫಿಕೆಸನ್ ಸಂಖ್ಯೆ/ಮೌಲ್ಯ | 198-204 |
ಅಮ್ಲ ಸಂಖ್ಯೆ | ಗರಿಷ್ಠವಾಗಿ 25.0% |
ದ್ರವೀಭವನ ಉಷ್ಣೋಗ್ರತೆ | 20-25 |
ವಿಶಿಷ್ಟ ಗುರುತ್ವ 25/250Cవద్ద | 0.950-.960 |
ಎಣ್ಣೆಯ ಉಪಯುಕ್ತತೆಗಳು
[ಬದಲಾಯಿಸಿ]- ಎಣ್ಣೆಯನ್ನು ಹಿಂದಿನ ಕಾಲದಿಂದ ಆರಂಭ ದಶ/ಸ್ಥಿತಿಯಲ್ಲಿದ್ದ ಕುಷ್ಠರೋಗವನ್ನು ಚಿಕಿತ್ಸೆ ಮಾಡುವುದಕ್ಕೆ ಉಪಯೋಗಿಸುತ್ತಾ ಬಂದಿದ್ದಾರೆ. ಈ ಎಣ್ಣೆಯನ್ನು ಇನ್ನೂ ನೋವು ನಿವಾರಣಾ ಔಷಧವಾಗಿ, ಬಾಕ್ಟಿರಿಯಾ, ಮತ್ತು ಪರೋಪಜೀವಿಗಳ ನಾಶದ ಮದ್ದಾಗಿ ಉಪಯೋಗಿಸುತ್ತಾರೆ. ಚರ್ಮರೋಗ ಚಿಕಿತ್ಸೆಯಲ್ಲಿಯು ಬಳಸುತ್ತಾರೆ. ಆದರೆ ಬಸಿರಾಗಿದ್ದ ಸಮಯದಲ್ಲಿ ಹೆಂಗಸರು ಉಪಯೋಗಿಸಬಹುದಾ ?ಇಲ್ಲವಾ <ಎನ್ನುವುದು ಇನ್ನೂ ನಿರ್ಧಾರಕ್ಕೆ ಬಂದಿಲ್ಲ [೧೦]
- ಸೊರಿಯಸಿಸ್(ಫpsoriasis)ಮತ್ತು ಸಿಡುಬು(eczema)ಚಿಕಿತ್ಸೆ ಯಲ್ಲಿ ಉಪಯೋಗಿಸುತ್ತಾರೆ[೧೧]
- ಕೀಲುನೋವು ನಿವಾರಣೆಗೆ, ಮೂಗೇಟು ನಿವಾರಣೆಯಲ್ಲಿ ,ಉಳುಕು, ಇತ್ಯಾದಿ ನಿವಾರಣೆಯಲ್ಲಿ ಬಳಸುವರು [೧೨]
- ಕಸ್ತೂರಿ ಸುವಾಸನೆ ಬರುವ ಪದಾರ್ಥಗಳ ತಯಾರಿಕೆಯಲ್ಲಿ, ಮತ್ತು ಔಷಧ ಗುಣವುಳ್ಳ ಸಾಬೂನ್ ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ[೪]
ಉಲ್ಲೇಖನಗಳು
[ಬದಲಾಯಿಸಿ]- ↑ http: //www.thefreedictionary. com/chaulmoogra
- ↑ http://www. wordwebonline.com /en/CHAULMOOGRATREE
- ↑ http: //www.indoarch.org/ place. php?placelink=R=2%2BS=0%2BP=0%2BM=0
- ↑ ೪.೦ ೪.೧ ೪.೨ SEA HandBook-2009 By Solvent Extractors' Association of India
- ↑ ೫.೦ ೫.೧ http://www.flowersofindia.net/catalog/slides/Jangli%20Almond.html
- ↑ "ಆರ್ಕೈವ್ ನಕಲು". Archived from the original on 2013-12-14. Retrieved 2013-10-24.
- ↑ http://www.biodieseltechnologiesindia.com/biodiesel.html
- ↑ http://onlinelibrary.wiley.com/doi/10.1002/jsfa.2740240606/abstract
- ↑ pg=PA151&lpg=PA151& dq=physical+characters+of+chaulmoogra+oil&source=bl&ots=vf6Y6Z9j-9&sig=HWXXfPw8848 Hxqm5XfcfX4w2K6k&hl =en&sa=X&ei=Z21oUr6PDsqFrAemvYHwBg&ved=0CCcQ6AEwADgK#v=onepage&q=physical%20characters%20of%20chaulmoogra%20oil&f=falseEncyclopaedic Dictionary of Bio-Medecine,Page No:151 By Rita Singh
- ↑ http: //www.butterflyexpressions. org/Singles/ Chaulmoogra.html
- ↑ http://www.webmd.com/vitamins-supplements/ ingredientmono-621-CHAULMOOGRA.aspx?activeIngredientId=621&activeIngredientName=CHAULMOOGRA
- ↑ http://www. herbs2000.com/ herbs/herbs_ chaulmoogra.htm