ವಿಷಯಕ್ಕೆ ಹೋಗು

ಆನಂದ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನಂದ್ ಕುಮಾರ್
ಜನನ
ಆನಂದ್ ಕುಮಾರ್

೧ ಜನವರಿ ೧೯೭೩
ಪಾಟ್ನಾ, ಬಿಹಾರ್, ಭಾರತ
ರಾಷ್ಟ್ರೀಯತೆಭಾರತ ಭಾರತೀಯ
ವೃತ್ತಿ(ಗಳು)ಶಿಕ್ಷಣ ತಜ್ಙ, ಗಣಿತಜ್ಞ
ಸಕ್ರಿಯ ವರ್ಷಗಳು೨೦೦೨ - ಪ್ರಸ್ತುತ
ಗಮನಾರ್ಹ ಕೆಲಸಗಳುಸೂಪರ್ ೩೦ ಕಾರ್ಯಕ್ರಮ
ಹೆಸರಾಂತ ಕೆಲಸಗಳುಭಾರತದ ಜೆಇಇ ಪರೀಕ್ಷೆಯನ್ನು ಎದುರಿಸಲು ಆರ್ಥಿಕವಾಗಿ ದುರ್ಬಲವಾದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವುದು
ಸಂಗಾತಿರಿತು ರಶ್ಮಿ
ಮಕ್ಕಳುಜಗತ್ ಕುಮಾರ್ (ಮಗ)
ಪೋಷಕಜಯಂತಿ ದೇವಿ (ತಾಯಿ)
ಪ್ರಶಸ್ತಿಗಳುಎಸ್.ರಾಮಾನುಜನ್ ಅವಾರ್ಡ್ (೨೦೧೦)
ಜಾಲತಾಣSuper 30

ಆನಂದ್ ಕುಮಾರ್ (ಜನನ ೧ ಜನವರಿ ೧೯೭೩) ಒಬ್ಬ ಭಾರತೀಯ ಶಿಕ್ಷಣತಜ್ಙ ಮತ್ತು ಗಣಿತಜ್ಞ.[] ೨೦೦೨ ರಲ್ಲಿ ಪಾಟ್ನಾ, ಬಿಹಾರ್ ನಲ್ಲಿ ಪ್ರಾರಂಭವಾದ ಸೂಪರ್ ೩೦ ಎಂಬ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಕಾರ್ಯಕ್ರಮವು ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗೆ ಸೇರ್ಪಡೆಯಾಗಲು ಅಗತ್ಯವಾದ ಐಐಟಿ - ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿಯನ್ನು ನೀಡುತ್ತದೆ.[] ಕುಮಾರ್ ರವರ ಜೀವನ ಹಾಗೂ ಕೆಲಸವನ್ನು ೨೦೧೯ರ ಚಲನಚಿತ್ರವಾದ ಸೂಪರ್ ೩೦ ನಲ್ಲಿ ಚಿತ್ರಿಸಲಾಗಿದೆ. ಈ ಚಲನಚಿತ್ರದಲ್ಲಿ ಕುಮಾರ್ ರವರ ಪಾತ್ರವನ್ನು ಹೃತಿಕ್ ರೋಶನ್ ರವರು ನಿರ್ವಹಿಸಿದ್ದಾರೆ.[] ಕುಮಾರ್ ರವರು ಭಾರತೀಯ ಸಮಾಜದ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸೂಪರ್ ೩೦ ಕಾರ್ಯಕ್ರಮದ ಬಗ್ಗೆ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ್ದಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ಕುಮಾರ್ ರವರು ಪಾಟ್ನಾ, ಬಿಹಾರ್ ನಲ್ಲಿ ಜನಿಸಿದರು. ತಮ್ಮ ಆರಂಭಿಕ ಶಿಕ್ಷಣವನ್ನು ಹಿಂದಿ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಮಾಡಿದರು ಮತ್ತು ಗಣಿತಶಾಸ್ತ್ರದಲ್ಲಿ ಆಳವಾದ ಆಸಕ್ತಿಯನ್ನು ಬೆಳೆಸಿದ್ದರು. ಪದವಿಯ ಸಮಯದಲ್ಲಿ ಕುಮಾರ್ ರವರು ಸಂಖ್ಯೆ ಸಿದ್ದಾಂತದ ಮೇಲೆ ಪೇಪರ್ ಸಲ್ಲಿಸಿದ್ದರು. ಕುಮಾರ್ ರವರು ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶವನ್ನು ಪಡೆದಿದ್ದರು, ಆದರೆ ತಂದೆಯ ಮರಣ ಹಾಗೂ ಆರ್ಥಿಕ ಸ್ಥಿತಿಯಿಂದಾಗಿ ಹೋಗಲು ಸಾಧ್ಯವಾಗಲಿಲ್ಲ.[] ಕುಮಾರ್, ಹಗಲಿನಲ್ಲಿ ಗಣಿತ ಓದುತ್ತಿದ್ದರು. ಸಂಜೆಯ ವೇಳೆಗೆ ತನ್ನ ತಾಯಿಯೊಂದಿಗೆ ಪಾಪಡ್ ಮಾರುತ್ತಿದ್ದರು. ಹೆಚ್ಚು ಹಣ ಸಂಪಾದಿಸಲು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಪಾಟ್ನಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ವಿದೇಶಿ ಜರ್ನಲ್ ಗಳು ಇಲ್ಲದಿದ್ದ ಕಾರಣ ವಾರದ ಅಂತ್ಯದಲ್ಲಿ ವಾರಣಾಸಿಗೆ ಆರು ಗಂಟೆಗಳ ಕಾಲ ಪ್ರಯಾಣ ಮಾಡುತ್ತಿದ್ದರು.

ಬೋಧನಾ ವೃತ್ತಿ ಮತ್ತು ಸೂಪರ್ 30

[ಬದಲಾಯಿಸಿ]

೧೯೯೨ ರಲ್ಲಿ ಕುಮಾರ್ ರವರು ಗಣಿತಶಾಸ್ತ್ರವನ್ನು ಕಲಿಸಲು ಪ್ರಾರಂಭಿಸಿದರು.[] ೫೦೦ ರೂಪಾಯಿಗೆ ಒಂದು ತರಗತಿಯನ್ನು ಬಾಡಿಗೆಗೆ ಪಡೆದು ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ (ಆರ್ ಎಸ್ ಎಮ್) ಎಂಬ ಸ್ವಂತ ಇನ್ಸ್ಟಿಟ್ಯೂಟ್ ಅನ್ನು ಆರಂಭಿಸಿದರು. ಒಂದು ವರ್ಷದೊಳಗೆ ಎರಡು ವಿದ್ಯಾರ್ಥಿಯಿಂದ ಮೂವತ್ತಾರು ವಿದ್ಯಾರ್ಥಿವರೆಗೆ ಸಂಸ್ಥೆಯು ಬೆಳೆಯಿತು ಮತ್ತು ಮೂರು ವರ್ಷದ ನಂತರ ಸುಮಾರು ೫೦೦ ವಿದ್ಯಾರ್ಥಿಗಳು ಈ ಸಂಸ್ಥೆಯನ್ನು ಸೇರಿದರು. ನಂತರ ೨೦೦೦ರದ ಆರಂಭದಲ್ಲಿ ಐಐಟಿ - ಜೆಇಇ ತರಬೇತಿಯನ್ನು ಪಡೆಯಲು ಬಂದ ಬಡ ವಿದ್ಯಾರ್ಥಿಯು ತನ್ನ ಪ್ರವೇಶ ಶುಲ್ಕವನ್ನು ಕಟ್ಟಲು ಸಾ‍ಧ್ಯವಾಗದ ಸಂದರ್ಭದಲ್ಲಿ ಕುಮಾರ್ ರವರು ಈ ಸನ್ನಿವೇಶದಿಂದ ಪ್ರೇರಣೆಗೊಂಡು ಸೂಪರ್ ೩೦ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದರು.[] ೨೦೦೨ ರಿಂದ ಪ್ರತೀ ವರ್ಷವು ಮೇ ತಿಂಗಳಲ್ಲಿ ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ೩೦ ಮಕ್ಕಳನ್ನು ಸೂಪರ್ ೩೦ ಪ್ರೋಗ್ರಾಮ್ ಗೆ ಆಯ್ಕೆಯನ್ನು ಮಾಡುತ್ತದೆ.[][] 2003-2017ರ ಅವಧಿಯಲ್ಲಿ 450 ರಲ್ಲಿ 391 ವಿದ್ಯಾರ್ಥಿಗಳು ಐಐಟಿಗಳಲ್ಲಿ ಉತ್ತೀರ್ಣರಾದರು. 2010ರಲ್ಲಿ ಎಲ್ಲಾ ವಿದ್ಯಾರ್ಥಿಗಳು ಐಐಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಪ್ರಶಸ್ತಿ

[ಬದಲಾಯಿಸಿ]

೨೦೧೦ ರಲ್ಲಿ ಇನ್ಸ್ಟಿಟ್ಯೂಟ್ ಫಾರ್ ರಿಸರ್ಚ್ ಆಂಡ್ ಡಾಕ್ಯುಮೆಂಟೇಶನ್ ಇನ್ ಸೋಶಿಯಲ್ ಸೈನ್ಸಸ್ ಅವರಿಂದ ಎಸ್. ರಾಮನುಜನ್ ಪ್ರಶಸ್ತಿಯನ್ನು ಕುಮಾರ್ ಅವರಿಗೆ ನೀಡಲಾಯಿತು.[೧೦]
ನವಂಬರ್ ೨೦೧೦ ರಲ್ಲಿ ಬಿಹಾರ್ ಸರ್ಕಾರದ ಉನ್ನತ ಪ್ರಶಸ್ತಿಯಾದ 'ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಿಕ್ಷಾ ಪುರಸ್ಕಾರ'ವನ್ನು ಕುಮಾರ್ ಅವರಿಗೆ ನೀಡಲಾಯಿತು.[೧೧]
೨೦೧೦ ರಲ್ಲಿ ಬೆಂಗಳೂರಿನ 'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್' ಪ್ರೊ. ಯಶವಂತ್ರಾವ್ ಕೇಲ್ಕರ್ ಯುವ ಪುರಸ್ಕಾರ ಪ್ರಶಸ್ತಿಯನ್ನು ಅವರಿಗೆ ನೀಡಿದೆ.[೧೨]
ಆನಂದ್ ಕುಮಾರ್ ರವರು ಭಾರತದ ಅಧ್ಯಕ್ಷರಾದ ರಾಮ್ ನಾಥ್ ಕೋವಿಂದರಿಂದ 'ರಾಷ್ಟ್ರೀಯ ಬಾಲ ಕಲ್ಯಾಣ ಪ್ರಶಸ್ತಿ'ಯನ್ನು ಪಡೆದಿದ್ದಾರೆ.[೧೩]
೮ ನವಂಬರ್ ೨೦೧೮ ರಂದು ದುಬೈನಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನವರು ಗ್ಲೋಬಲ್ ಎಜುಕೇಶನ್ ಅವಾರ್ಡ್ ನೀಡಿದ್ದಾರೆ.[೧೪]

ಸೂಪರ್ ೩೦ ಚಲನಚಿತ್ರ

[ಬದಲಾಯಿಸಿ]

ಬಾಲಿವುಡ್ ನಿರ್ದೇಶಕ ವಿಕಾಸ್ ಬಹ್ಲ್ ರವರು ಆನಂದ್ ಕುಮಾರ್ ರವರ ಜೀವನ ಮತ್ತು ಕೆಲಸದ ಬಗ್ಗೆ ೨೦೧೯ರ ಸೂಪರ್ ೩೦ ಚಲನಚಿತ್ರದಲ್ಲಿ ಚಿತ್ರಿಸಿದ್ದಾರೆ.[೧೫]

ಉಲ್ಲೇಖಗಳು

[ಬದಲಾಯಿಸಿ]
  1. "The Sunday Tribune - Spectrum". www.tribuneindia.com. Retrieved 29 December 2019.
  2. "He trains India's poorest students for the IIT". Rediff. Retrieved 29 December 2019. {{cite news}}: Cite has empty unknown parameter: |1= (help)
  3. DelhiJune 4, India Today Web Desk New; June 4, India Today Web Desk New; Ist, India Today Web Desk New. "Super 30 trailer out. Hrithik Roshan stuns as math wizard Anand Kumar in new film". India Today. Retrieved 29 December 2019. {{cite news}}: Cite has empty unknown parameter: |1= (help)CS1 maint: numeric names: authors list (link)
  4. "Super 30 founder Anand Kumar invited to speak at MIT and Harvard". The Economic Times. 29 September 2014. Retrieved 29 December 2019.
  5. "Living the vilayat dream at home - Teacher who failed to study abroad coaches students to do so". www.telegraphindia.com. Retrieved 29 December 2019. {{cite news}}: Cite has empty unknown parameter: |1= (help)
  6. Pisharoty, Sangeeta Barooah (14 November 2009). "Mr. Cent Per Cent". The Hindu. Retrieved 29 December 2019. {{cite news}}: Cite has empty unknown parameter: |1= (help)
  7. "Helping poor Indians crack toughest test". 21 September 2006. Retrieved 29 December 2019.
  8. "JEE (Advanced) result 2017: It is 30/30 for Anand Kumar's Super 30". Hindustan Times. 11 June 2017. Retrieved 29 December 2019. {{cite news}}: Cite has empty unknown parameter: |1= (help)
  9. "Anand focus on teachers for excellence". www.telegraphindia.com. Retrieved 29 December 2019. {{cite news}}: Cite has empty unknown parameter: |1= (help)
  10. "Anand Kumar, the founder of Super30 got Ramanujan Mathematics award". Jagranjosh.com. 30 January 2014. Retrieved 29 December 2019.
  11. "Bihar honours Super 30 founder with top award | Bihar Foundation". web.archive.org. 18 May 2013. Archived from the original on 18 ಮೇ 2013. Retrieved 29 December 2019.{{cite news}}: CS1 maint: bot: original URL status unknown (link)
  12. "Akhil Bharatiya Vidyarthi Parishad (ABVP) has decided to award `Yashwantrao Kelkar Yuva Puraskar' to mathematician Anand Kumar of Super 30 fame for his outstanding work in empowering underprivileged section of the society. - Times of India". The Times of India. Retrieved 29 December 2019.
  13. Tewary, Amarnath (15 November 2017). "Rashtriya Bal Kalyan Award presented to Super-30 founder". The Hindu. Retrieved 29 December 2019. {{cite news}}: Cite has empty unknown parameter: |1= (help)
  14. "Super 30 founder Anand Kumar to be honoured with Global Education Award in Dubai". The Indian Express. 5 November 2018. Retrieved 29 December 2019.
  15. "Super 30: Latest News, Videos and Photos of Super 30 | Times of India". The Times of India. Retrieved 29 December 2019.