ವಿಷಯಕ್ಕೆ ಹೋಗು

ಎಸ್ ಎ ಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
SAP AG
ಸಂಸ್ಥೆಯ ಪ್ರಕಾರAktiengesellschaft
(ISIN: DE0007164600, FWB: SAP, NYSESAP)
ಸ್ಥಾಪನೆWeinheim, ಜರ್ಮನಿ (1972)
ಮುಖ್ಯ ಕಾರ್ಯಾಲಯGermany Walldorf, ಜರ್ಮನಿ
ಪ್ರಮುಖ ವ್ಯಕ್ತಿ(ಗಳು)Leo Apotheker, CEO & President.
Members of the Executive Board:
Bill McDermott (Global Field Operations),
Jim Hagemann Snabe (Business Solutions & Technology),
Erwin Gunst (Operations & HR),
Gerhard Oswald (Global Service & Support),
John Schwarz (Business Objects),
Werner Brandt (Finance & Administration).
Hasso Plattner, Chairman of the Supervisory Board
ಉದ್ಯಮComputer software
ಉತ್ಪನ್ನSAP Business Suite, SAP ERP, SAP Customer Relationship Management (SAP CRM), SAP Supply Chain Management (SAP SCM), SAP Supplier Relationship Management (SAP SRM), SAP Product Lifecycle Management (SAP PLM), SAP NetWeaver, SAP Business One, SAP Business ByDesign, SAP Business All-in-One
ಆದಾಯ€10.25 billion (2007)[]
ಉದ್ಯೋಗಿಗಳು51,447 (August 2008)
ಜಾಲತಾಣwww.sap.com

SAP AG (ISIN: DE0007164600, FWB: SAP, NYSESAP) ಜರ್ಮನಿವಾಲ್‌ಡಾರ್ಫ್‌‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅತಿದೊಡ್ಡ ಐರೋಪ್ಯ ತಂತ್ರಾಂಶ ಉದ್ಯಮವಾಗಿದೆ. ತನ್ನ SAP ERP ಉದ್ಯಮ ಸಂಪನ್ಮೂಲ ಯೋಜನೆ (ERP) ತಂತ್ರಾಂಶದಿಂದ ಈ ಉದ್ಯಮ ಪ್ರಸಿದ್ಧವಾಗಿದೆ.

ಇತಿಹಾಸ

[ಬದಲಾಯಿಸಿ]

ಬಾಡೆನ್‌-ವುರ್‌ಟೆಂಬರ್ಗ್‌ಮನ್‌ಹೇಮ್‌ ಎಂಬಲ್ಲಿನ ಐದು ಮಂದಿ ಮಾಜಿ IBM ಅಭಿಯಂತರರಿಂದ (ಡಿಯೆಟ್ಮರ್‌ ಹಾಪ್‌, ಹ್ಯಾನ್ಸ್‌-ವೆರ್ನರ್‌ ಹೆಕ್ಟರ್‌, ಹ್ಯಾಸ್ಸೋ ಪ್ಲಾಟ್‌ನರ್‌, ಕ್ಲಾಸ್‌ E. ಟ್ಸ್ಚಿರಾ, ಮತ್ತು ಕ್ಲಾಸ್‌ ವೆಲ್ಲೆನ್‌ರ್ಯೂಥರ್‌) Systemanalyse und Programmentwicklung ("ವ್ಯವಸ್ಥೆಯ ವಿಶ್ಲೇಷಣೆ ಮತ್ತು ಪ್ರೋಗ್ರಾಂ ಅಭಿವೃದ್ಧಿ") [] ಎಂಬ ಹೆಸರಿನಲ್ಲಿ 1972ರಲ್ಲಿ SAPಅನ್ನು ಸ್ಥಾಪಿಸಲಾಯಿತು.[] Xeroxನ ಗಣಕ ಉದ್ಯಮದಿಂದ ನಿರ್ಗಮನ ಕಾರ್ಯನೀತಿಯ ಭಾಗವಾಗಿ, ತಮ್ಮ ಉದ್ಯಮ ವ್ಯವಸ್ಥೆಯನ್ನು IBM ತಂತ್ರಜ್ಞಾನಕ್ಕೆ ವರ್ಗಾಯಿಸಲು IBM ಸಂಸ್ಥೆಯನ್ನು Xerox ಸಂಸ್ಥೆಯು ನೇಮಿಸಿಕೊಂಡಿತು. ವರದಿಯಾಗಿರುವಂತೆ, ಸ್ಥಳಾಂತರಿಸುವಿಕೆಗೆ ಪರಿಹಾರ ವೆಚ್ಚವಾಗಿ, IBM SDS/SAPE ತಂತ್ರಾಂಶವನ್ನು, $80,000 ಮೌಲ್ಯದ ಜಮಾ ಒಪ್ಪಂದದ ಮೂಲಕ ಸ್ವಾಧೀನಪಡಿಸಿಕೊಂಡಿತು. ವರದಿಯ ಪ್ರಕಾರ ಸ್ಥಾಪಕ ಮಾಜಿ-IBM ನೌಕರರಿಗೆ ಸ್ಥಾಪನಾ ಮೂಲಧನದ 8% ಪಾಲಿನ ವಿನಿಮಯವಾಗಿ SAPE ತಂತ್ರಾಂಶವನ್ನು‌ IBM ಸಂಸ್ಥೆಯು ನೀಡಿತು. 1972ರಲ್ಲಿ ಇಂಪೀರಿಯಲ್‌ ಕೆಮಿಕಲ್‌ ಇಂಡಸ್ಟ್ರೀಸ್‌ (ICI) ಸಂಸ್ಥೆಯು SAPನ ಪ್ರಪ್ರಥಮ ಗ್ರಾಹಕನಾಯಿತು.[] ಸಂಕ್ಷಿಪ್ತರೂಪವನ್ನು ನಂತರ Systeme, Anwendungen und Produkte in der Datenverarbeitung ("ದತ್ತ ಸಂಸ್ಕರಣೆಯ ವ್ಯವಸ್ಥೆ, ಅನ್ವಯಗಳು ಮತ್ತು ಉತ್ಪನ್ನಗಳು") ಎಂಬರ್ಥ ಬರುವಂತೆ ಮಾರ್ಪಡಿಸಲಾಯಿತು. 1976ರಲ್ಲಿ, "SAP GmbH"ನ ಸ್ಥಾಪನೆಯಾಯಿತು ಹಾಗೂ ನಂತರದ ವರ್ಷದಲ್ಲಿ ತನ್ನ ಪ್ರಧಾನ ಕಚೇರಿಯನ್ನು ವಾಲ್‌ಡಾರ್ಫ್‌‌ಗೆ ಸ್ಥಳಾಂತರಿಸಿತು. 2005ರ ವಾರ್ಷಿಕ ಸರ್ವ ಸದಸ್ಯರ ಸಭೆಯ ನಂತರ SAP AG (AG ಎಂಬುದು ಆಕ್ತಿಯೆಂಜೆಸೆಲ್ಲ್ಸ್‌ಚಾಫ್ಟ್‌ ಎಂಬುದರ ಸಂಕ್ಷಿಪ್ತ ರೂಪ) ಎಂಬುದು ಕಂಪೆನಿಯ ಅಧಿಕೃತ ಹೆಸರಾಯಿತು. ಆಗಸ್ಟ್‌ 1988ರಲ್ಲಿ, SAP GmbH ಸಂಸ್ಥೆಯನ್ನು SAP AG ಸಂಸ್ಥೆಗೆ ವರ್ಗಾಯಿಸಿದ (ಜರ್ಮನ್‌ ಕಾನೂನಿನ ಪ್ರಕಾರ ಏಕೀಕೃತ ಸಂಸ್ಥೆ), ನಂತರ ನವೆಂಬರ್‌ 4ರಂದು ಸಾರ್ವಜನಿಕ ವ್ಯವಹಾರವನ್ನು ಆರಂಭಿಸಿತು. ಫ್ರಾಂಕ್‌ಫರ್ಟ್ ಮತ್ತು ಸ್ಟಟ್‌ಗಾರ್ಟ್‌‌‌ ಷೇರು ವಿನಿಮಯ ಕೇಂದ್ರಗಳಲ್ಲಿ ಸಂಸ್ಥೆಯ ಷೇರುಗಳು ದಾಖಲಾಗಿವೆ.[] ಸ್ಥಾಪನಾ ಸದಸ್ಯರಲ್ಲಿ 1234—ಹಾಪ್‌, ಪ್ಲಾಟ್‌ನರ್‌, ಟ್ಸ್ಚಿರಾ ಮತ್ತು ಹೆಕ್ಟರ್‌ -- ಈ ಪ್ರಥಮ ನಾಲ್ಕು ಮಂದಿ ಕಾರ್ಯಕಾರಿ ಮಂಡಳಿಯನ್ನು ಪ್ರತಿನಿಧಿಸುತ್ತಾರೆ. 1995ರಲ್ಲಿ, ಜರ್ಮನ್‌ ಸ್ಟಾಕ್‌ ಸೂಚ್ಯಂಕದಲ್ಲಿ DAX SAPಅನ್ನು ಸೇರಿಸಲಾಯಿತು. 22ನೇ ಸೆಪ್ಟೆಂಬರ್‌ 2003ರಂದು, ಡೌ ಜೋನ್ಸ್‌ STOXX 50 ಪಟ್ಟಿಯಲ್ಲಿ SAPಅನ್ನು ಸೇರಿಸಲಾಯಿತು.[] 1991ರಲ್ಲಿ, Prof. Dr. ಹೆನ್ನಿಂಗ್‌ ಕಗರ್‌ಮನ್‌ ಈ ಮಂಡಳಿಗೆ ಸೇರಿದರು; Dr. ಪೀಟರ್‌ ಝೆಂಕೆ 1993ರಲ್ಲಿ ಮಂಡಳಿಯ ಸದಸ್ಯರಾದರು.[] 1996ರಿಂದ ಕ್ಲಾಸ್‌ ಹೇನ್‌ರಿಚ್‌,[] ಮತ್ತು ಗರ್‌ಹಾರ್ಡ್‌ ಓಸ್ವಾಲ್ಡ್‌ [] SAP ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದಾರೆ. ಎರಡು ವರ್ಷಗಳ ನಂತರ 1998ರಲ್ಲಿ, ಹೆಲ್ಮ್‌ನಲ್ಲಿ ಮೊದಲ ಬದಲಾವಣೆಯಾಯಿತು. ಡಿಯೆಟ್ಮರ್‌ ಹಾಪ್‌ ಮತ್ತು ಕ್ಲಾಸ್‌ ಟ್ಸ್ಚಿರಾ ಮೇಲ್ವಿಚಾರಣಾ ಮಂಡಳಿಗೆ ಸ್ಥಳಾಂತರಗೊಂಡರಲ್ಲದೇ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷರಾಗಿ ಡಿಯೆಟ್ಮರ್‌ ಹಾಪ್‌ ನೇಮಕವಾದರು. ಬಹುತೇಕ ಹ್ಯಾಸ್ಸೋ ಪ್ಲಾಟ್‌ನರ್‌ನ ಸಮನಾಗಿ ಹೆನ್ನಿಂಗ್‌ ಕಗರ್‌ಮನ್‌ ಉಪಾಧ್ಯಕ್ಷ ಹಾಗೂ SAPನ CEO ಆಗಿ ನೇಮಕವಾದರು. ವರ್ನರ್‌ ಬ್ರಾಂಡ್ಟ್‌ SAP ಕಾರ್ಯಕಾರಿ ಮಂಡಳಿಯ ಸದಸ್ಯ ಹಾಗೂ ಪ್ರಧಾನ ವಿತ್ತಾಧಿಕಾರಿಯಾಗಿ SAPಗೆ 2001ರಲ್ಲಿ ಸೇರಿಕೊಂಡರು.[] 2002ರಿಂದ ಲಿಯೊ ಅಪೊಥೆಕರ್‌ SAP ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಮತ್ತು ವಿಶ್ವ ಗ್ರಾಹಕ ವಿಶ್ಲೇಷಣೆ ಮತ್ತು ಕಾರ್ಯಾಚರಣೆ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, 2007ರಲ್ಲಿ ನಿಯುಕ್ತ CEO ಆಗಿ ನೇಮಕವಾಗಿ, ನಂತರ 2008ರಲ್ಲಿ ಕಗರ್‌ಮನ್‌ರೊಂದಿಗೆ ಉಪ-CEO ಆದರು. ಹೆನ್ನಿಂಗ್‌ ಕಗರ್‌ಮನ್‌ 2003ರಲ್ಲಿ SAPನ ಏಕೈಕ CEO ಆದರು.[೧೦] ಫೆಬ್ರವರಿ 2007ರಲ್ಲಿ, ಅವರೊಂದಿಗಿನ ಒಪ್ಪಂದವನ್ನು 2009ರವರೆಗೆ ಮುಂದುವರೆಸಲಾಯಿತು. ಅಭಿವೃದ್ಧಿ ಸಂಸ್ಥೆಯೊಂದಿಗಿನ ಜವಾಬ್ದಾರಿಗಳ ಬಗೆಗಿನ ನಿರಂತರ ವಿವಾದಗಳ ನಂತರ ಕಗರ್‌ಮನ್‌ನ ಸಂಭಾವ್ಯ ಉತ್ತರಾಧಿಕಾರಿಯೆಂಬಂತೆ ಬಿಂಬಿಸಲಾಗಿದ್ದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಷೈ ಅಗಾಸ್ಸಿ ಎಂಬುವವರು ಸಂಸ್ಥೆಯನ್ನು ತ್ಯಜಿಸಿದರು.[೧೧] ಏಪ್ರಿಲ್‌ 2008ರಲ್ಲಿ, ಲಿಯೊ ಅಪೊಥೆಕರ್‌ರನ್ನು ಉಪ-CEO ಆಗಿ ಘೋಷಿಸುವುದರೊಂದಿಗೆ, SAP ಮೇಲ್ವಿಚಾರಣಾ ಮಂಡಳಿಯು SAP ಕಾರ್ಯಕಾರಿ ಮಂಡಳಿಗೆ ಸಂಸ್ಥೆಯ ಅಧಿಕಾರಿಗಳಾಗಿ ಇರ್ವಿನ್‌ ಗನ್ಸ್‌ಟ್‌‌ , ಬಿಲ್‌‌ ಮೆಕ್‌ಡರ್ಮಾಟ್‌ ಮತ್ತು ಜಿಮ್‌ ಹಗರ್‌ಮನ್‌ ಸ್ನೇಬ್‌ ಎಂಬ ಮೂವರು ಹೊಸ ಸದಸ್ಯರನ್ನು, 1ನೇ ಜುಲೈ 2008ರಿಂದ ಜಾರಿಗೆ ಬರುವಂತೆ ನೇಮಿಸಿತು.[೧೨] ಮೇ 2009ರಲ್ಲಿ ಹೆನ್ನಿಂಗ್‌ರ ನಿವೃತ್ತಿಯೊಂದಿಗೆ, ಲಿಯೋ ಏಕೈಕ CEO ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮೈಲುಗಲ್ಲೆನಿಸಿದ ತಾಂತ್ರಿಕ ಪರಿಹಾರಗಳು

[ಬದಲಾಯಿಸಿ]

1973ರಲ್ಲಿ, SAP R/1 ತಂತ್ರಾಂಶವನ್ನು ಬಿಡುಗಡೆ ಮಾಡಲಾಯಿತು.[೧೩] ಆರು ವರ್ಷಗಳ ನಂತರ, 1979ರಲ್ಲಿ, SAP R/2 ಆವೃತ್ತಿಯನ್ನು SAP ಸಂಸ್ಥೆಯು ಬಿಡುಗಡೆ ಮಾಡಿತು.[೧೩] 1981ರಲ್ಲಿ ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಿದ ತಂತ್ರಾಂಶವನ್ನು ಮಾರುಕಟ್ಟೆಗೆ SAP ಹೊರತಂದಿತು. 1992ರಲ್ಲಿ R/2ರಿಂದ R/3ಗೆ ಬದಲಾದಾಗ, SAP ತನ್ನ ಶೈಲಿಯನ್ನು ಮೇನ್‌ಫ್ರೇಂ ಗಣಕೀಕರಣದಿಂದ ಗ್ರಾಹಕ-ನಿರ್ವಾಹಕ/ಮೇಲ್ವಿಚಾರಕ ಸಂರಚನೆಗೆ ಬದಲಾಯಿಸಿತು. SAPನ ಅಂತರಜಾಲ ಕಾರ್ಯನೀತಿಯ ಅಭಿವೃದ್ಧಿಯು mySAP.comನ ಪರಿಚಯದೊಂದಿಗೆ ವ್ಯವಹಾರ ಪ್ರಕ್ರಿಯೆಯ (ಅಂತರಜಾಲದೊಂದಿಗೆ ಸಮಗ್ರತೆಯನ್ನು ಸಾಧಿಸುವ) ಭಾಷ್ಯವನ್ನೇ ಬದಲಾಯಿಸಿತು.[] 1999ರಲ್ಲಿ ಇಂಡಸ್ಟ್ರಿ ವೀಕ್‌ನ ಉತ್ತಮ ನಿರ್ವಹಿತ ಕಂಪೆನಿಗಳ ಪಟ್ಟಿಯಲ್ಲಿ ಸ್ಥಾನವನ್ನು SAP ಗಳಿಸಿತು.[೧೪]

ವ್ಯವಹಾರ ಮತ್ತು ಮಾರುಕಟ್ಟೆಗಳು

[ಬದಲಾಯಿಸಿ]
SAP AG ಪ್ರಧಾನ ಕಚೇರಿ, ವಾಲ್‌ಡಾರ್ಫ್‌‌.

SAP ಸಂಸ್ಥೆಯು ವಿಶ್ವದ ಅತ್ಯಂತ ದೊಡ್ಡ ವ್ಯಾವಹಾರಿಕ ತಂತ್ರಾಂಶ ಕಂಪೆನಿ ಮಾತ್ರವಲ್ಲದೇ ವರಮಾನದ ಪ್ರಕಾರ ಮೂರನೇ-ಅತಿ ದೊಡ್ಡ ಸ್ವಾಯತ್ತ ತಂತ್ರಾಂಶ ಪೂರೈಕೆದಾರನಾಗಿದೆ.[೧೫] ಈ ಸಂಸ್ಥೆಯು ಮೂರು ಭೌಗೋಳಿಕ ವಲಯಗಳಲ್ಲಿ ಕಾರ್ಯಾಚರಿಸುತ್ತದೆ – ಯೂರೋಪ್‌, ಮಧ್ಯ ಪೂರ್ವ ಮತ್ತು ಆಫ್ರಿಕಾಗಳನ್ನು ಪ್ರತಿನಿಧಿಸುವ EMEA; ಉತ್ತರ ಅಮೇರಿಕಾ ಮತ್ತು ಲ್ಯಾಟಿನ್‌ ಅಮೇರಿಕಾಗಳೆರಡನ್ನು ಪ್ರತಿನಿಧಿಸುವ ಅಮೇರಿಕಾಗಳು (ನ್ಯೂಟನ್‌ ಚೌಕ, ಪೆನ್ಸಿಲ್‌ವೇನಿಯಾನಲ್ಲಿ ಪ್ರಧಾನ ಕಚೇರಿ ಹೊಂದಿರುವ SAP ಅಮೇರಿಕಾ); ಮತ್ತು ಜಪಾನ್‌, ಆಸ್ಟ್ರೇಲಿಯಾ, ಭಾರತ ಮತ್ತು ಏಷ್ಯಾದ ಕೆಲ ಭಾಗಗಳನ್ನು ಪ್ರತಿನಿಧಿಸುವ ಏಷ್ಯಾ ಪೆಸಿಫಿಕ್‌ ಜಪಾನ್‌ (APJ). ಇವುಗಳೊಂದಿಗೆ SAP ಸಂಸ್ಥೆಯು 115 ಸಹಾಯಕ ಸಂಸ್ಥೆಗಳ ಜಾಲವನ್ನು ಹೊಂದಿದ್ದು, ವಿಶ್ವದಾದ್ಯಂತ ಜರ್ಮನಿ, ಉತ್ತರ ಅಮೇರಿಕಾ, ಕೆನಡಾ, ಚೀನಾ, ಹಂಗೇರಿ, ಭಾರತ, ಇಸ್ರೇಲ್‌ ಮತ್ತು ಬಲ್ಗೇರಿಯಾ, ಟರ್ಕಿಗಳಲ್ಲಿ R&D ಸೌಲಭ್ಯಗಳನ್ನು ಹೊಂದಿದೆ. ಉದ್ಯಮ ಸಂಸ್ಥಾ ಶ್ರೇಣಿಗಳು ಮತ್ತು ಅವುಗಳ ಬಗೆಗಿನ ವಿವರಗಳ ಪಟ್ಟಿಯನ್ನು SAP ಉದ್ಯೋಗ ಜಾಲತಾಣ ವಾದ Recruit121.comನಲ್ಲಿ ಪಡೆಯಬಹುದು. ಪ್ರಕ್ರಿಯೆ ಉದ್ಯಮಗಳು, ವಿಭಿನ್ನ ಉದ್ಯಮಗಳು, ಗ್ರಾಹಕ ಉದ್ಯಮಗಳು, ಸೇವಾ ಉದ್ಯಮಗಳು, ಆರ್ಥಿಕ ಸೇವೆಗಳು, ಮತ್ತು ಸಾರ್ವಜನಿಕ ಸೇವೆಗಳು ಎಂಬ ಆರು ಉದ್ಯಮ ಕ್ಷೇತ್ರಗಳ ಮೇಲೆ SAP ತನ್ನ ಕಾರ್ಯಾಚರಣೆಯನ್ನು ಕೇಂದ್ರೀಕರಿಸುತ್ತಿದೆ.[೧೬] ಅತಿ ದೊಡ್ಡ ಉದ್ಯಮಗಳಿಗೆಂದು 25ಕ್ಕೂ ಹೆಚ್ಚಿನ ಉದ್ಯಮ ಪರಿಹಾರಗಳ ಕರಸಂಪುಟವನ್ನು ಹಾಗೂ [೧೭] ಮಧ್ಯಮ ಗಾತ್ರದ ಕಂಪೆನಿಗಳು ಮತ್ತು ಸಣ್ಣ ಉದ್ಯಮಗಳಿಗೆಂದು 550ಕ್ಕೂ ಹೆಚ್ಚಿನ ಕಿರು-ಸಂಸ್ಥಾಶ್ರೇಣಿ ಪರಿಹಾರಗಳನ್ನು ಈ ಸಂಸ್ಥೆಯು ನೀಡುತ್ತದೆ.[೧೮]

SAP ಮತ್ತು ಉದ್ಯಮ ಸೇವಾ-ಸಂಬಂಧಿತ ಸಂರಚನೆ

[ಬದಲಾಯಿಸಿ]

ಸೇವಾ-ಸಂಬಂಧಿತ ಸಂರಚನೆಯು ERP (ಉದ್ಯಮ ಸಂಪನ್ಮೂಲ ಯೋಜನೆ)ಯ ಕಾರ್ಯಕ್ಷೇತ್ರವನ್ನು ತಂತ್ರಾಂಶ-ಆಧಾರಿತ ಮತ್ತು ಜಾಲ ಸೇವಾಧಾರಿತ ವ್ಯಾವಹಾರಿಕ ಚಟುವಟಿಕೆಗಳೆಡೆ ಸ್ಥಳಾಂತರಿಸುತ್ತದೆ. ಈ ಬದಲಾವಣೆಯು ಹೊಂದಾಣಿಕೆಯ ಸಾಮರ್ಥ್ಯ, ನಮ್ಯತೆ, ಮುಕ್ತತೆ ಮತ್ತು ದಕ್ಷತೆಗಳನ್ನು ಹೆಚ್ಚಿಸುತ್ತದೆ. E-SOA ಎಡೆಗಿನ ನಡೆಯು ಕಂಪೆನಿಗಳು ತಂತ್ರಾಂಶ ಘಟಕಗಳ ಮರುಬಳಕೆ ಮಾಡಲು ಆಂತರಿಕ/ಸ್ಥಳೀಯ ERP ಯಂತ್ರಾಂಶ ತಂತ್ರಜ್ಞಾನಗಳ ಮೇಲೆ ಹೆಚ್ಚು ಅವಲಂಬಿತರಾಗಿರಬೇಕಿಲ್ಲ, ಸಣ್ಣ- ಅಥವಾ ಮಧ್ಯಮ-ಗಾತ್ರದ ಕಂಪೆನಿಗಳಿಗೆ ERP ಅಳವಡಿಸಲು ಇದೊಂದು ಉತ್ತಮ ಆಕರ್ಷಣೆಯಾಗಬಲ್ಲದು. SAP ಮಾಧ್ಯಮಗಳಿಗೆ ನೀಡಿದ ದಾಖಲೆಯ ಪ್ರಕಾರ, "SAP ಸಂಸ್ಥೆಯು ಸೇವಾ-ಸಂಬಂಧಿತ ತಂತ್ರಜ್ಞಾನವನ್ನು ನೇರವಾಗಿ ತನ್ನ ಉತ್ಪನ್ನಗಳಲ್ಲಿ ಅಳವಡಿಸಿರುವ ಮತ್ತು ತಂತ್ರಜ್ಞಾನ ವೇದಿಕೆಯನ್ನು (SAP ನೆಟ್‌ವೀವರ್‌) ನೀಡುವುದರೊಂದಿಗೆ, ಕಂಪೆನಿಗಳಿಗೆ ತಮ್ಮದೇ ಆದ SAP ಹಾಗೂ SAP-ಅಲ್ಲದ ಪರಿಹಾರಗಳೆರಡಕ್ಕೂ ಅನ್ವಯಿಸುವ ಸೇವಾ-ಸಂಬಂಧಿತ ಸಂರಚನೆಗಳನ್ನು ಅಭಿವೃದ್ಧಿಪಡಿಸಲು ಮಾರ್ಗದರ್ಶನ ನೀಡುವ ಏಕೈಕ ಉದ್ಯಮ ಅನ್ವಯಗಳ ತಂತ್ರಾಂಶ ಉತ್ಪಾದಕ ಸಂಸ್ಥೆಯಾಗಿದೆ." [೧೯]

SAP E-SOA ದೃಢೀಕರಣ

[ಬದಲಾಯಿಸಿ]

SAP E-SOA, ಗ್ರಾಹಕ ಪ್ರಮಾಣಪತ್ರ-ಆಧಾರಿತ ದೃಢೀಕರಣವು ಎಲ್ಲಾ SAP ತಂತ್ರಜ್ಞಾನಗಳಲ್ಲಿ ಬೆಂಬಲಿತವಾಗಿರುವ ಏಕೈಕ ದೃಢೀಕರಣ ವಿಧಾನವಾಗಿದ್ದು (ಬಳಕೆದಾರರ ಹೆಸರು/ಸಂಕೇತ ಪದಗಳ ಜೊತೆಗೆ) ಮತ್ತು ಏಕಮಾತ್ರ ಏಕ ಸೈನ್‌-ಆನ್‌ ವಿಧಾನವಾಗಿದೆ. ಉದಾಹರಣೆಗೆ ಕರ್ಬರೋಸ್‌ ಮತ್ತು ಲಾಗಾನ್‌ ಟಿಕೆಟ್‌ಗಳು ಮುಂತಾದುವು SAP ಸೇವಾ-ಸಂಬಂಧಿತ ಸಂರಚನೆಗಳ ಜೊತೆಗೆ ಸಹವರ್ತನೆ ಹೊಂದಿಲ್ಲ.[೨೦][೨೧]

ಉತ್ಪನ್ನಗಳು

[ಬದಲಾಯಿಸಿ]

SAPನ ಉತ್ಪನ್ನಗಳು ಉದ್ಯಮ ಸಂಪನ್ಮೂಲ ಯೋಜನೆಗಳ (ERP) ಮೇಲೆ ಕೇಂದ್ರೀಕೃತವಾಗಿವೆ. SAP ERPಯು ಕಂಪೆನಿಯ ಪ್ರಮುಖ ಉತ್ಪನ್ನವಾಗಿದೆ. ಪ್ರಸಕ್ತ ಆವೃತ್ತಿಯಾಗಿರುವ SAP ERP 6.0 ತಂತ್ರಾಂಶವು SAP ವ್ಯಾವಹಾರಿಕ ಉತ್ಪಾದನಾ ಶ್ರೇಣಿಯ ಭಾಗವೂ ಆಗಿದೆ. ಈ ಉತ್ಪನ್ನವನ್ನು R/3 ಎಂದು ಈ ಹಿಂದೆ ಕರೆಯಲಾಗುತ್ತಿತ್ತು. SAP R/3 ಪದಪುಂಜದಲ್ಲಿನ "R" ಅಕ್ಷರವು ಈ ತಂತ್ರಾಂಶವು ರಿಯಲ್‌ಟೈಂ‌ ಪರಿಹಾರವಲ್ಲದೇ ಹೋದರೂ ರಿಯಲ್‌ಟೈಂ ಎಂಬುದನ್ನು ಸೂಚಿಸುತ್ತಿತ್ತು. 3 ಎಂಬ ಸಂಖ್ಯೆಯು 3-ಪದರದ ಸಂರಚನೆಗೆ ಸಂಬಂಧಿಸಿದೆ: ದತ್ತಸಂಚಯ, ಅನ್ವಯಿಕ ನಿರ್ವಾಹಕ ಮತ್ತು ಗ್ರಾಹಕ (SAPgui ಅಂತರ್ವರ್ತನ). ಮೇನ್‌ಫ್ರೇಂ ಸಂರಚನೆಯಲ್ಲಿ ಕಾರ್ಯಾಚರಿಸಿದ R/2 ತಂತ್ರಾಂಶವು R/3ಯ ಪೂರ್ವಿಕ ತಂತ್ರಾಂಶವಾಗಿತ್ತು. R/2 ಆವೃತ್ತಿಯ ಮುಂಚಿನ ಉತ್ಪನ್ನವಾದ ಸಿಸ್ಟಂ RFಅನ್ನು ನಂತರ, R/1 ಎಂದು ಕರೆಯಲಾಯಿತು. SAPನ ವ್ಯಾವಹಾರಿಕ ಉತ್ಪಾದನಾ ಶ್ರೇಣಿಯ ಐದು ಉದ್ಯಮ ಅನ್ವಯಿಕೆಗಳಲ್ಲಿ SAP ERP ಸಹಾ ಒಂದು. ಉಳಿದ ನಾಲ್ಕು ಅನ್ವಯಿಕೆಗಳೆಂದರೆ :

  • ಗ್ರಾಹಕ ಸಾಹಚರ್ಯ ನಿರ್ವಹಣೆ (CRM) - ಗ್ರಾಹಕರನ್ನು ಗಳಿಸಲು ಮತ್ತು ಅವರ ವಿಶ್ವಾಸವನ್ನು ಉಳಿಸಿಕೊಳ್ಳಲು, ಮಾರಾಟಗಾರಿಕೆ/ಮಾರುಕಟ್ಟೆ-ಪ್ರಚಾರ ಮತ್ತು ಗ್ರಾಹಕ ಪರಿಜ್ಞಾನವನ್ನು ಹೆಚ್ಚಿಸಿಕೊಳ್ಳಲು ಕಂಪೆನಿಗಳಿಗೆ ಸಹಾಯ ಮಾಡುತ್ತದೆ
  • ಉತ್ಪನ್ನಯ ಜೀವನಚಕ್ರ ನಿರ್ವಹಣೆ (PLM) - ಉತ್ಪಾದಕರಿಗೆ ಉತ್ಪನ್ನ-ಸಂಬಂಧಿ ಮಾಹಿತಿಗಳ ಸಹಾಯದಿಂದ ನೆರವು ನೀಡುತ್ತದೆ
  • ಪೂರೈಕೆ ಸರಣಿ ನಿರ್ವಹಣೆ (SCM) - ತನ್ನ ತಯಾರಿಕಾ ಮತ್ತು ಸೇವಾ ಪ್ರಕ್ರಿಯೆಗಳಿಗೆ ಬೇಕಾದ ಸಂಪನ್ಮೂಲ ಸಾಧನಗಳ ಮೂಲಕ ಕಂಪೆನಿಗಳಿಗೆ ನೆರವು ನೀಡುತ್ತದೆ
  • ಪೂರೈಕೆದಾರ ಸಾಹಚರ್ಯ ನಿರ್ವಹಣೆ (SRM) - ಪೂರೈಕೆದಾರರಿಂದ ಸಮರ್ಥವಾಗಿ ಕಂಪೆನಿಗಳು ಸಾಮಗ್ರಿಗಳನ್ನು ಪಡೆಯಲು ಸಹಾಯ ಮಾಡುತ್ತದೆ

ಉಳಿದ ಪ್ರಮುಖ ಉತ್ಪನ್ನಗಳೆಂದರೆ : ನೆಟ್‌ವೀವರ್‌ ವೇದಿಕೆ, ಆಡಳಿತ, ನಷ್ಟ ಮತ್ತು ಅನುಸರಣೆ (GRC) ಪರಿಹಾರಗಳು, ಡ್ಯೂಯೆಟ್‌ (Microsoftನೊಂದಿಗಿನ ಜಂಟಿ ಉತ್ಪನ್ನ), ಸಾಮರ್ಥ್ಯ ನಿರ್ವಹಣೆ ಉತ್ಪಾದನೆಗಳು ಮತ್ತು RFID. SAP ತನ್ನ ಅನ್ವಯಗಳನ್ನು ಆವರಿಸಿರುವ SOA ಸಾಮರ್ಥ್ಯಗಳನ್ನು (ಉದ್ಯಮ SOA ಎಂಬ ಹೆಸರಿನಿಂದ) ಜಾಲ ಸೇವೆಗಳ ರೂಪದಲ್ಲಿ ನೀಡುತ್ತದೆ. ಇದರ ಮೂಲ ಉತ್ಪನ್ನಗಳನ್ನು ಸಾಧಾರಣವಾಗಿ ಫಾರ್ಚೂನ್‌ 500 ಕಂಪೆನಿಗಳು[ಸಾಕ್ಷ್ಯಾಧಾರ ಬೇಕಾಗಿದೆ] ಬಳಸುತ್ತಿದ್ದರೆ, SAP ತನ್ನ ಪ್ರಸಕ್ತ SAP ಬಿಸಿನೆಸ್‌ ಒನ್‌ ಮತ್ತು SAP ಬಿಸಿನೆಸ್‌ ಆಲ್‌-ಇನ್‌-ಒನ್‌ ಉತ್ಪನ್ನಗಳ ಮೂಲಕ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳನ್ನು (SME) ಗುರಿಯಾಗಿಟ್ಟುಕೊಂಡು ಕ್ರಿಯಾಶೀಲವಾಗಿದೆ.
19ನೇ ಸೆಪ್ಟೆಂಬರ್‌ 2007ರಂದು SAP ಬಿಸಿನೆಸ್‌ ಬೈಡಿಸೈನ್‌ ಎಂಬ ಹೆಸರಿನ ಹೊಸದೊಂದು ಉತ್ಪನ್ನವನ್ನು SAP ಘೋಷಿಸಿತು. SAP ಬಿಸಿನೆಸ್‌ ಬೈಡಿಸೈನ್‌ ಎಂಬುದು ಸೇವೆಯಾಗಿ ತಂತ್ರಾಂಶ (SaaS) ಮಾದರಿಯ ಉತ್ಪನ್ನವಾಗಿದ್ದು, ಪೂರ್ಣವಾಗಿ ಸಂಯೋಜಿಸಿದ ಉದ್ಯಮ ಸಂಪನ್ಮೂಲ ಯೋಜನೆ (ERP) ಪರಿಹಾರವನ್ನು ತ್ವರಿತವಾಗಿ ನೀಡಬಲ್ಲದು. SAP ಬಿಸಿನೆಸ್‌ ಬೈಡಿಸೈನ್‌ ಉತ್ಪನ್ನವನ್ನು ಈ ಮುಂಚೆ "A1S" ಎಂಬ ಸಾಂಕೇತಿಕ ಹೆಸರಿನಿಂದ ಕರೆಯಲಾಗುತ್ತಿತ್ತು.[೨೨] SAP ಉದ್ಯೋಗಸ್ಥರ/ಅಧಿಕಾರಿಗಳ ಪ್ರಕಾರ 120 ದೇಶಗಳಲ್ಲಿನ 25ಕ್ಕೂ ಹೆಚ್ಚಿನ ಉದ್ಯಮಗಳಲ್ಲಿ 41,200ಕ್ಕೂ ಹೆಚ್ಚಿನ ಕಂಪೆನಿಗಳು 100,600ಕ್ಕೂ ಮೀರಿದ ಸ್ಥಾಪನೆಗಳಲ್ಲಿ SAP ಸೇವೆ ನೀಡುತ್ತಲಿವೆ.[೨೩] ಆದರೆ ತಮ್ಮ ಒಂದೇ-ಗಾತ್ರ-ಎಲ್ಲೆಡೆ-ಯುಕ್ತ ಉತ್ಪಾದನಾ ಕಾರ್ಯನೀತಿಯಿಂದಾಗಿ SAP ಟೀಕೆಗೊಳಗಾಗುತ್ತಿರುವುದರಿಂದ ವ್ಯಕ್ತವಾಗುವುದೇನೆಂದರೆ ಅದು ಈಗ ತಾನು ಹೊಂದಿರುವ ಅಪಾರ ವ್ಯಾಪ್ತಿಯಿಂದಾಗಿ ಕಂಪೆನಿಗಳ ವಿಲೀನ ಹಾಗೂ ಸ್ವಾಧೀನ ಪ್ರಕ್ರಿಯೆಗಳಿಗೆ ಅಡಚಣೆಯಾಗುತ್ತಿದೆ.[ಸಾಕ್ಷ್ಯಾಧಾರ ಬೇಕಾಗಿದೆ]

ಸಹಭಾಗಿತ್ವಗಳು

[ಬದಲಾಯಿಸಿ]

SAPನ ಕಾರ್ಯನೀತಿಯ ಮೂಲಭಾಗವೇ ಸಹಭಾಗಿತ್ವವಾಗಿದ್ದು, ಇದರಿಂದಾಗಿ ತನ್ನ 35 ವರ್ಷಗಳ ಇತಿಹಾಸದಲ್ಲಿ ತಂತ್ರಾಂಶ ಪರಿಹಾರ ಪೂರೈಕೆದಾರರು, ಮೌಲ್ಯ ವರ್ಧಿತ ಮರು-ಮಾರಾಟಗಾರರು, ವಿತರಕರು, ತಂತ್ರಜ್ಞಾನ ಮತ್ತು ಸೇವಾಭಾಗೀದಾರರುಗಳ ಜಾಲವನ್ನು ಬೆಳೆಸಿ ಉದ್ಯಮದಲ್ಲೇ ಅತಿ ದೊಡ್ಡದೆನಿಸುವಷ್ಟು ವಿಸ್ತಾರವಾದ ವ್ಯವಹಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಂಡಿದೆ.[೨೪] ಜೂನ್‌ 2007ರಲ್ಲಿ ತೆರೆಯಲಾದ, Calif.ದ ಪಾಲೊ ಆಲ್ಟೊದಲ್ಲಿನ SAP ಕೊ-ಇನ್ನೋವೇಷನ್‌ ಪ್ರಯೋಗಾಲಯವು, ಜಂಟಿ ಯೋಜನೆಗಳ ಮೂಲಕ ಕಾರ್ಯಾಚರಿಸಲು ದಕ್ಷ ಕಾರ್ಯ ಪರಿಸರವನ್ನು Novell, Questra ಮತ್ತು Wonderware ಮುಂತಾದ ಸ್ವಾಯತ್ತ ತಂತ್ರಾಂಶ ಮಾರಾಟಗಾರರು (ISVಗಳು), ವ್ಯವಸ್ಥಾ ಸಂಯೋಜಕರು (SIಗಳು), ಮತ್ತು ತಂತ್ರಜ್ಞಾನ ಭಾಗೀದಾರರುಗಳಿಗೆ SAPನೊಂದಿಗೆ ಪ್ರಸಕ್ತ ಮತ್ತು ಭವಿಷ್ಯದ ತಂತ್ರಜ್ಞಾನಗಳ ಮೇಲೆ ಕಾರ್ಯಪ್ರವೃತ್ತರಾಗಲು ಅನುವು ಮಾಡಿಕೊಡುತ್ತದೆ. Cisco, Hewlett-Packard, Intel ಮತ್ತು NetAppಗಳ ಜೊತೆಗೂಡಿ ಸ್ಥಾಪಿಸಿದ ಈ ಪ್ರಯೋಗಾಲಯವು, ಪ್ರಯೋಗಾತ್ಮಕ ಪರಿಸರ ಮತ್ತು ವಾಸ್ತವಿಕ ದಕ್ಷತೆಯೊಂದಿಗೆ ಉದ್ಯಮ SOAನ ಮೇಲೆ ಆಧಾರಿತವಾದ ಜಾಲ-ಸಶಕ್ತ ಮತ್ತು ಅಂತರಜಾಲ/ಆಂತರಿಕಜಾಲ-ಪ್ರವೇಶಸಾಧ್ಯ ವ್ಯಾವಹಾರಿಕ ಅನ್ವಯಿಕೆಗಳನ್ನು ನೀಡುತ್ತದೆ.[೨೫] ಅಂತರ-ಕೈಗಾರಿಕಾ ಬಹುರಾಷ್ಟ್ರೀಯ ಸಲಹಾ ಸಾಮರ್ಥ್ಯಗಳನ್ನು ಹೊಂದಿರುವ ಜಾಗತಿಕ ಸೇವಾ ಭಾಗೀದಾರರು,[೨೬] ಜಾಗತಿಕ ತಂತ್ರಾಂಶ ಭಾಗೀದಾರರು SAP ವ್ಯಾವಹಾರಿಕ ಉತ್ಪಾದನಾ ಶ್ರೇಣಿ ಪರಿಹಾರಗಳಿಗೆ ಪೂರಕವಾಗಿರುವ ಸಂಯೋಜಕ ತಂತ್ರಾಂಶಗಳು,[೨೭] ಮತ್ತು ಬಳಕೆದಾರರಿಗೆ ಜಾಗತಿಕ ತಂತ್ರಜ್ಞಾನ ಭಾಗೀದಾರರುಗಳಾದ ಯಂತ್ರಾಂಶ, ದತ್ತಸಂಚಯ, ಸಂಗ್ರಹಣಾ ವ್ಯವಸ್ಥೆಗಳು, ಜಾಲಗಳು, ಮತ್ತು ಸಂಚಾರಿ ದೂರವಾಣಿ ಗಣಕೀಕರಣ ತಂತ್ರಜ್ಞಾನಗಳ ಮಾರಾಟಗಾರರೂ ಸೇರಿದಂತೆ SAP ತಂತ್ರಜ್ಞಾನ ಬೆಂಬಲಿಸುವ ಉತ್ಪನ್ನ ಸರಣಿಗಳ ಬಳಕೆದಾರ ಕಂಪೆನಿಗಳು SAPನ ಸಹಭಾಗಿತ್ವ ಹೊಂದಿದ್ದಾರೆ.[೨೮] CSC, Capgemini, Cognizant Technology Solutions, Deloitte, IBM, PricewaterhouseCoopers, Hewlett-Packard, Siemens IT Solutions and Services ಮತ್ತು Accenture ಮುಂತಾದ ಕಂಪೆನಿಗಳೊಂದಿಗೆ R3 ಆವೃತ್ತಿಗೆ ಸಂಬಂಧಿಸಿದಂತೆ ನಿರ್ಧಾರಕ, ಆಡಳಿತ ಮತ್ತು ಸಂರಚನೆಗಳೂ ಸೇರಿದಂತೆ ಸೇವೆಗಳನ್ನು ನೀಡುವುದರಲ್ಲಿ SAP ಸಂಸ್ಥೆಯು ಸಹಭಾಗಿತ್ವವನ್ನು ಹೊಂದಿದೆ.[೨೯]

SAP ಪಾರ್ಟ್‌ನರ್‌ಎಡ್ಜ್‌ ಯೋಜನೆ

[ಬದಲಾಯಿಸಿ]

ಸಣ್ಣ ಉದ್ಯಮಗಳು ಮತ್ತು ಮಧ್ಯಮ ಗಾತ್ರದ ಕಂಪೆನಿಗಳಿಗೆಂದು ಉದ್ದೇಶಿಸಲಾದ SAP ಪರಿಹಾರಗಳನ್ನು ಜಾಗತಿಕ ಭಾಗೀದಾರ ಜಾಲದ ಮುಖಾಂತರ ವಿತರಿಸಲಾಗುತ್ತದೆ. ಭಾರತದಲ್ಲೇ ಪ್ರಧಾನ ಕಚೇರಿಯನ್ನು ಹೊಂದಿರುವ $4.9 b ವಹಿವಾಟಿನ ತಂತ್ರಜ್ಞಾನ ಸೇವೆ ಪೂರೈಕೆದಾರರಾದ HCL Technologiesನೊಂದಿಗೆ SAP ಜಾಗತಿಕ ಸೇವಾ ಸಹಭಾಗಿತ್ವ ಒಪ್ಪಂದಕ್ಕೆ 2008ರಲ್ಲಿ SAP ಸಹಿ ಹಾಕಿತು.[೩೦] SAPನ ಸಹಭಾಗಿತ್ವ ಯೋಜನೆಯಾದ SAP ಪಾರ್ಟ್‌ನರ್‌ಎಡ್ಜ್‌ ಕಾರ್ಯಕ್ರಮವು ಮೌಲ್ಯ ವರ್ಧಿತ ಮರುಮಾರಾಟಗಾರರು (VARಗಳು) ಮತ್ತು ಸ್ವಾಯತ್ತ ತಂತ್ರಾಂಶ ಮಾರಾಟಗಾರರೂ ಸೇರಿದಂತೆ ಭಾಗೀದಾರರುಗಳಿಗೆ (ISVಗಳು) SAP ಪರಿಹಾರಗಳ ಅಳವಡಿಕೆ, ಮಾರಾಟ, ಮಾರುಕಟ್ಟೆ ಪ್ರಚಾರ, ಅಭಿವೃದ್ಧಿ ಮತ್ತು ವ್ಯಾಪಕ ಗ್ರಾಹಕ ಸಮೂಹಕ್ಕೆ ವಿತರಣೆಗಳು ಲಾಭದಾಯಕ ಹಾಗೂ ಯಶಸ್ವಿಯಾಗಿ ನಿರ್ವಹಿಸಲೆಂದು ವ್ಯವಹಾರ ವೃದ್ಧಿ ಸಂಪನ್ಮೂಲಗಳು ಮತ್ತು ಕಾರ್ಯಕ್ರಮ ಸೌಕರ್ಯಗಳ ಸಮೂಹವನ್ನು ನೀಡುತ್ತದೆ.[೩೧] ಗಾರ್ಟ್‌ನರ್‌ ಅವರು ಹೇಳುವ ಪ್ರಕಾರ SAP ಪಾರ್ಟ್‌ನರ್‌ಎಡ್ಜ್‌ ಯೋಜನೆಯು "ಸಣ್ಣ ಮತ್ತು ಮಧ್ಯಮ ವ್ಯಾವಹಾರಿಕ ಅನ್ವಯಗಳ ಮಾರುಕಟ್ಟೆ ವಾಹಿನಿಗಳನ್ನು ಅಭಿವೃದ್ಧಿಪಡಿಸುವಲ್ಲಿ ನವೀನ ಮಾದರಿಯ ಹೊಸ ಮಾನಕವನ್ನೇ ಸೃಷ್ಟಿಸಿದೆ."[ಸಾಕ್ಷ್ಯಾಧಾರ ಬೇಕಾಗಿದೆ]

ಸಮುದಾಯಗಳು

[ಬದಲಾಯಿಸಿ]

SAP ಡೆವಲಪರ್‌ ನೆಟ್‌ವರ್ಕ್‌ (SDN) ಎಂಬುದು ತಂತ್ರಾಂಶ ಅಭಿವೃದ್ಧಿಪಡಿಸುವವರು, ಸಲಹಾ ತಂತ್ರಜ್ಞರು, ಸಂಘಟನಕಾರರು, ಮತ್ತು ವ್ಯವಹಾರ ವಿಶ್ಲೇಷಕರುಗಳ ಸಮುದಾಯವಾಗಿದ್ದು ಪರಿಣತ ಬ್ಲಾಗ್‌ಗಳು, ಚರ್ಚಾ ಫೋರಂಗಳು, ಪ್ರತ್ಯೇಕ ಇಳಿಕೆ‌ಗಳು ಮತ್ತು ಕೋಡ್‌ ಉದಾಹರಣೆಗಳು, ತರಬೇತಿ ವಸ್ತುಗಳು, ಮತ್ತು ತಾಂತ್ರಿಕ ಗ್ರಂಥಾಲಯಗಳ ಮುಖಾಂತರ ABAP, Java, .NET, SOA, ಮತ್ತಿತರ ತಂತ್ರಜ್ಞಾನಗಳ ಬಗ್ಗೆ ಜ್ಞಾನವನ್ನು ಗಳಿಸಿಕೊಳ್ಳುವುದು ಹಾಗೂ ಹಂಚಿಕೊಳ್ಳುವುದಕ್ಕೆಂದು ಉದ್ದೇಶಿಸಲಾಗಿದೆ.[೩೨] ಬಿಜಿನೆಸ್‌ ಪ್ರೋಸೆಸ್‌ ಎಕ್ಸ್‌ಪರ್ಟ್‌ (BPX) ಎಂಬುದು ವ್ಯಾವಹಾರಿಕ ಪ್ರಕ್ರಿಯಾ ತಜ್ಞರುಗಳು ಮಾಹಿತಿ, ಅನುಭವ ಹಾಗೂ ಉತ್ತಮ ಪರಿಪಾಠಗಳನ್ನು ಪರಸ್ಪರ ಹಂಚಿಕೊಂಡು ವ್ಯಾವಹಾರಿಕ ಚಟುವಟಿಕೆ ಮತ್ತು IT ಮೌಲ್ಯವನ್ನು ಹೆಚ್ಚಿಸಿ ಔದ್ಯಮಿಕ SOAವನ್ನು ನೀಡಲು ಅನುವಾಗುವಂತೆ ಸಹಕಾರಿ ವಾತಾವರಣವಿರುವ ಸಮುದಾಯವಾಗಿದೆ.[೩೩] SAP ಉದ್ಯಮ ಸೇವೆಗಳ ಸಮುದಾಯ Archived 2009-10-26 ವೇಬ್ಯಾಕ್ ಮೆಷಿನ್ ನಲ್ಲಿ. ವು ಗ್ರಾಹಕರು, ಉದ್ಯಮದ ಪರಿಣತರು ಮತ್ತು ಭಾಗೀದಾರರುಗಳನ್ನೊಳಗೊಂಡ ಸಮುದಾಯವಾಗಿ ಸದಸ್ಯರ ಸಹಯೋಗದೊಂದಿಗೆ ಔದ್ಯಮಿಕ ಸೇವೆಗಳನ್ನು ನಿರೂಪಿಸಲು ಸಹಾಯಕವಾಗಿದೆ.[೩೪] ಇಂಡಸ್ಟ್ರಿ ವ್ಯಾಲ್ಯೂ ನೆಟ್‌ವರ್ಕ್ಸ್‌ (IVN) ಉದ್ಯಮ-ವಿಶಿಷ್ಟ ಗ್ರಾಹಕ ಸವಾಲುಗಳನ್ನು ಎದುರಿಸಲು ಸಹಾಯವಾಗುವಂತೆ ಗ್ರಾಹಕರು, ಭಾಗೀದಾರರು ಮತ್ತು SAP ಸಂಸ್ಥೆಗಳು ಜೊತೆಗೂಡಿ ನಾವೀನ್ಯತೆಯ ಪರಿಹಾರಗಳನ್ನು ರೂಪಿಸುವಿಕೆ ಹಾಗೂ ಅಭಿವೃದ್ಧಿಪಡಿಸಲು ನೆರವಾಗುತ್ತದೆ. ಪ್ರಸ್ತುತ ಒಟ್ಟು ಹನ್ನೊಂದು ಸಕ್ರಿಯ IVNಗಳಿವೆ (e.g. ಬ್ಯಾಂಕಿಂಗ್‌, ರಾಸಾಯನಿಕ ಉದ್ಯಮ, ಗ್ರಾಹಕ ಉತ್ಪನ್ನಗಳು, ಉನ್ನತ ತಾಂತ್ರಿಕ, ಸಾರ್ವಜನಿಕ ವಲಯ, ಚಿಲ್ಲರೆ ಉದ್ಯಮ).[೩೫] SAP ಭಾಗೀದಾರರು ಮತ್ತು SAP ಸಂಸ್ಥೆಗಳಿಂದ SAP ಗ್ರಾಹಕರಿಗೆ ಪ್ರಮಾಣೀಕೃತ SAP ಪರಿಹಾರಗಳನ್ನು ಪಡೆಯಲೆಂದು ಆನ್‌ಲೈನ್‌ ಮಾರುಕಟ್ಟೆಯಾಗಿ SAP ಇಕೋಹಬ್‌ Archived 2015-02-23 ವೇಬ್ಯಾಕ್ ಮೆಷಿನ್ ನಲ್ಲಿ. ಅನ್ನು 2008ರ ಅಂತ್ಯದಲ್ಲಿ ಸ್ಥಾಪಿಸಲಾಯಿತು. SAP TechEd ಎಂಬುದು SAPನ ಪ್ರತಿಷ್ಠಿತ ತಾಂತ್ರಿಕ ಮತ್ತು ವ್ಯಾವಹಾರಿಕ ಪ್ರಕ್ರಿಯೆ ತರಬೇತಿ ಸಮ್ಮೇಳನ. ಸಾವಿರಾರು ಜಾಲ ಹಾಗೂ ಅನ್ವಯಿಕ ಡೆವಲಪರ್‌ಗಳು, ಮೌಲ್ಯಮಾಪಕ ಮತ್ತು ಅಳವಡಿಕಾ ತಜ್ಞರು, ವ್ಯವಹಾರ ಪ್ರಕ್ರಿಯೆ ತಜ್ಞರು, IT ನಿರ್ವಾಹಕರು, ಗಣಕ ಅಡ್ಮಿನಿಸ್ಟ್ರೇಟರ್‌ಗಳು ಮತ್ತು ವ್ಯಾವಹಾರಿಕ ವರ್ತಮಾನ ತಜ್ಞರುಗಳೆಲ್ಲರೂ ಗಹನ ಉಪನ್ಯಾಸಗಳೊಂದಿಗೆ ಪ್ರಯೋಗಾತ್ಮಕ ತರಬೇತಿ ಮತ್ತು ವ್ಯಕ್ತಿಸಂಪರ್ಕ ಜಾಲಗಳನ್ನು ಬೆಳೆಸುವ ಅವಕಾಶಗಳಿಗೆಂದು ಇಲ್ಲಿ ಪ್ರತಿ ವರ್ಷಾಂತ್ಯದಲ್ಲಿ ಸೇರುತ್ತಾರೆ. ಈ ಸಮ್ಮೇಳನಗಳು SAP ಆನ್‌ಲೈನ್‌ ಸಮುದಾಯಗಳ ಚಟುವಟಿಕೆಗೆ ಪೂರಕವಾಗಿರುತ್ತದೆ.

ಸಂಸ್ಥೆ

[ಬದಲಾಯಿಸಿ]

SAPನ ಕಾಯಾತ್ಮಕ ಘಟಕಗಳನ್ನು R&D ಅಗತ್ಯಗಳು, ಕ್ಷೇತ್ರ ಚಟುವಟಿಕೆಗಳು ಮತ್ತು ಗ್ರಾಹಕ ಸೇವೆ ಮುಂತಾದ ವಿವಿಧ ಸಾಂಸ್ಥಿಕ ಘಟಕಗಳನ್ನಾಗಿ ವಿಭಜಿಸಲಾಗಿದೆ. SAP Labs ಸಂಸ್ಥೆಗಳು ಉತ್ಪಾದನಾ ಅಭಿವೃದ್ಧಿಯ ಜವಾಬ್ದಾರಿ ಹೊಂದಿದ್ದರೆ, ಪ್ರತಿ ರಾಷ್ಟ್ರಗಳಲ್ಲಿನ ಕ್ಷೇತ್ರಾವಾರು ಸಂಸ್ಥೆಗಳು ಮಾರಾಟ, ಮಾರುಕಟ್ಟೆ ಪ್ರಚಾರ, ಸಲಹಾ ಸೇವೆ ಇತ್ಯಾದಿ ಕ್ಷೇತ್ರ ಚಟುವಟಿಕೆಗಳ ಜವಾಬ್ದಾರಿ ಹೊಂದಿವೆ. ಉತ್ಪಾದನಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಧಾನ ಅಭಿಯಂತರ ಚಟುವಟಿಕೆಗಳೊಂದಿಗೆ ಒಟ್ಟಾರೆ ನಿರ್ವಹಣೆಯನ್ನು SAP AGಯ ಭಾಗವಾಗಿರುವ ಪ್ರಧಾನ ಕಚೇರಿಯು ನಿರ್ವಹಿಸುತ್ತದೆ. ಸಕ್ರಿಯ ಗ್ರಾಹಕ ಸೇವೆ (AGS) ಎಂದೂ ಹೆಸರಾದ SAP ಗ್ರಾಹಕ ಸೇವೆಯು ವಿಶ್ವದಾದ್ಯಂತ SAP ಗ್ರಾಹಕರಿಗೆ ಸೇವೆ ನೀಡುವ ಜಾಗತಿಕ ಸಂಸ್ಥೆಯಾಗಿದೆ.

SAP Labs ಮೂಲ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಅಂಗವಾಗಿದೆ. ವಿಶ್ವದಾದ್ಯಂತ SAP ತನ್ನ ಅಭಿವೃದ್ಧಿ ಸಂಸ್ಥೆಗಳನ್ನು ಹೊಂದಿದೆ. ಪ್ರಯೋಗಾಲಯಗಳಲ್ಲಿ ಕೆಲವು ಮಾತ್ರ SAP ಸಂಶೋಧನಾ ಗುಂಪುಗಳಿಗೆ ಬೆಂಬಲ ನೀಡಿವೆ. USAನ ಪಾಲೊ ಆಲ್ಟೊದಲ್ಲಿ ; ಭಾರತದ ಬೆಂಗಳೂರು‌ ಮತ್ತು ಗುಡಗಾಂವ್‌ಗಳಲ್ಲಿ; ಇಸ್ರೇಲ್‌ನ ರಾನನ ಮತ್ತು ಕಾರ್ಮಿಯೆಲ್‌ಗಳಲ್ಲಿ; ಕೆನಡಾದ ಮಾಂಟ್ರಿಯಲ್‌ನಲ್ಲಿ ಮತ್ತು ಚೀನಾದ ಶಾಂಘಾಯ್‌ನಲ್ಲಿ ಇದರ ಪ್ರಖ್ಯಾತ ಪ್ರಯೋಗಾಲಯಗಳಿವೆ. ಜರ್ಮನಿಯ ವಾಲ್‌ಡಾರ್ಫ್‌‌ನಲ್ಲಿರುವ SAP ಪ್ರಧಾನಕಚೇರಿಯನ್ನು ಹೊರತುಪಡಿಸಿ ನೌಕರರ ಸಂಖ್ಯೆಯ ಗಣನೆಯಲ್ಲಿ SAP Labs Indiaವು http://www.sap.com/india/company/saplabs/index.epx Archived 2009-06-22 ವೇಬ್ಯಾಕ್ ಮೆಷಿನ್ ನಲ್ಲಿ. ಅತಿ ದೊಡ್ಡ ಅಭಿವೃದ್ಧಿ ಘಟಕವಾಗಿದೆ. ಇನ್ನಿತರ SAP Labsಗಳು ಫ್ರಾನ್ಸ್‌, ಬಲ್ಗೇರಿಯಾ ಮತ್ತು ಹಂಗೇರಿಗಳಲ್ಲಿವೆ. ಪ್ರತಿ SAP ಪ್ರಯೋಗಾಲಯವು ಪ್ರತ್ಯೇಕ ಕ್ಷೇತ್ರ ಪರಿಣತಿ ಹಾಗೂ ಉದ್ದೇಶವನ್ನು ಹೊಂದಿದೆ. ಉದಾಹರಣೆಗೆ ಬಲ್ಗೇರಿಯಾಸೋಫಿಯಾನಲ್ಲಿರುವ SAP Labs ಘಟಕವು Java ಆಧಾರಿತ SAP ತಂತ್ರಾಂಶ ಉತ್ಪನ್ನಗಳ ಮೇಲೆ ಪರಿಣತಿಯನ್ನು ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, U.Sನಲ್ಲಿರುವ SAP Labs ಘಟಕವು ನಾವೀನ್ಯತೆ ಮತ್ತು ಸಂಶೋಧನೆಗಳಿಗೆ ಹೆಸರುವಾಸಿಯಾಗಿದೆ.

ಬಳಕೆದಾರ ಗುಂಪುಗಳು

[ಬದಲಾಯಿಸಿ]

ಬಳಕೆದಾರ ಗುಂಪುಗಳೆಂದರೆ ಸದಸ್ಯರಿಗೆ ತರಬೇತಿ ಕೊಡುವಿಕೆ, SAP ಉತ್ಪನ್ನ ಬಿಡುಗಡೆಗಳ ಮೇಲೆ ಪ್ರಭಾವ ಬೀರುವ ಮತ್ತು ನಿರ್ದೇಶನ ನೀಡುವ, ಉತ್ತಮ ಪರಿಪಾಠಗಳ ವಿನಿಮಯಕ್ಕೆ ಅನುಕೂಲಿಸುವ, ಮತ್ತು ಮಾರುಕಟ್ಟೆಯ ಅಗತ್ಯಗಳ ಬಗ್ಗೆ ಪರಿಜ್ಞಾನ ನೀಡುವ SAP ವ್ಯಾವಹಾರಿಕ ವ್ಯವಸ್ಥೆಯಲ್ಲಿನ SAP ಗ್ರಾಹಕ ಕಂಪೆನಿಗಳು ಮತ್ತು ಭಾಗೀದಾರ ಸಂಸ್ಥೆಗಳನ್ನೊಳಗೊಂಡ ಲಾಭಾಪೇಕ್ಷೆಯಿಲ್ಲದ ಸ್ವತಂತ್ರ ಸಂಸ್ಥೆಗಳು. ಬಳಕೆದಾರ ಗುಂಪುಗಳಿಗೆ ಉದಾಹರಣೆಯೆಂದರೆ ಅಮೇರಿಕಾಗಳ SAP ಬಳಕೆದಾರರ ಗುಂಪು (ASUG),[೩೬] ಜರ್ಮನ್‌ ಭಾಷಿಕ SAP ಬಳಕೆದಾರ ಗುಂಪು (DSAG),[೩೭] SAP ಆಸ್ಟ್ರೇಲಿಯನ್‌ ಬಳಕೆದಾರ ಗುಂಪು (SAUG) [೩೮] ಮತ್ತು SAP UK ಹಾಗೂ ಐರ್‌ಲೆಂಡ್‌ ಬಳಕೆದಾರ ಗುಂಪುಗಳು.[೩೯][೪೦] ಮತ್ತಷ್ಟು SAP ಬಳಕೆದಾರ ಗುಂಪುಗಳನ್ನು SAP ಬಳಕೆದಾರ ಗುಂಪುಗಳ ಪಟ್ಟಿಯಲ್ಲಿ ನೋಡಬಹುದು. SAP ಯೂಸರ್‌ ಗ್ರೂಪ್‌ ಎಕ್ಸಿಕ್ಯೂಟಿವ್‌ ನೆಟ್‌ವರ್ಕ್‌ ಅನ್ನು (SUGEN) SAP ಬಳಕೆದಾರ ಗುಂಪುಗಳ ನಡುವೆ ಮಾಹಿತಿ ವಿನಿಮಯ ಮತ್ತು ಉತ್ತಮ ಪರಿಪಾಠಗಳ ಪರಸ್ಪರ ಹಂಚಿಕೆಯನ್ನು ಉತ್ತೇಜಿಸಲು SAPನ ಸಹಯೋಗದೊಂದಿಗೆ ವ್ಯೂಹಾತ್ಮಕ ವಿಚಾರಗಳ ಬಗೆಗೆ ಸುಸಂಘಟಿತವಾಗಿ ಕಾರ್ಯನಿರ್ವಹಿಸಲು 2007ರಲ್ಲಿ ಸ್ಥಾಪಿಸಲಾಯಿತು.[೪೧]

ಸ್ಪರ್ಧಾತ್ಮಕ ವ್ಯವಸ್ಥೆ

[ಬದಲಾಯಿಸಿ]

SAPಎದುರಾಳಿಗಳು ಪ್ರಮುಖವಾಗಿ ಉದ್ಯಮ ಸಂಪನ್ಮೂಲ ಯೋಜನಾ ತಂತ್ರಾಂಶ ಉದ್ಯಮದ ಸಂಸ್ಥೆಗಳು. SAP ಗ್ರಾಹಕ ಸಾಹಚರ್ಯ ನಿರ್ವಹಣೆ, ಮಾರಾಟ ಮತ್ತು ಮಾರುಕಟ್ಟೆ ಪ್ರಚಾರ ತಂತ್ರಾಂಶಗಳು, ತಯಾರಿಕೆ, ಶೇಖರಣಾ ಮತ್ತು ಔದ್ಯಮಿಕ ತಂತ್ರಾಂಶ, ಮತ್ತು ಸರಬರಾಜು ಸರಣಿ ನಿರ್ವಹಣೆ & ಸರಬರಾಜು ವ್ಯವಸ್ಥೆ ತಂತ್ರಾಂಶ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ನೀಡುತ್ತಿದೆ.[೪೨] SAPನ ಪ್ರಮುಖ ಪ್ರತಿಸ್ಪರ್ಧಿಯಾದ Oracle Corporation ಸಂಸ್ಥೆಯು 22ನೇ ಮಾರ್ಚ್‌ 2007ರಂದು ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ SAP ವಿರುದ್ಧ ನಕಲು ಹಾಗೂ ಅಪ್ರಾಮಾಣಿಕ ಸ್ಪರ್ಧೆಯ ಆರೋಪದ ಮೇಲೆ ಮೊಕದ್ದಮೆ ಹೂಡಿತ್ತು. ಹಳೆಯ Oracle ಉತ್ಪಾದನಾ ಶ್ರೇಣಿಗಳನ್ನು ಕಡಿಮೆ ಬೆಲೆಗೆ ಮಾರುವ ಸೇವೆ ನೀಡುತ್ತಿದ್ದ ಟೆಕ್ಸಾಸ್‌ನಲ್ಲಿನ SAPನ ಅಂಗಸಂಸ್ಥೆಯಾದ (SAPನಿಂದ ಖರೀದಿಗೊಳ್ಳುವ ಮುನ್ನ ಟುಮಾರೋನೌ ಎಂದು ಕರೆಯಲ್ಪಡುತ್ತಿದ್ದ) SAP TNನಲ್ಲಿ ಹಿಂದಿನ Oracle ಗ್ರಾಹಕರ ಖಾತೆಗಳನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಗಣಕ ಪ್ಯಾಚ್‌ಗಳು ಮತ್ತು ಸೇವಾ ದಾಖಲೆಗಳನ್ನು Oracleನ ಜಾಲತಾಣದಿಂದ ಇಳಿಸಿಕೊಂಡು SAPಗೆಂದು ಬಳಸಲಾಗುತ್ತಿತ್ತು ಎಂದು ಈ ದೂರು ಆಪಾದಿಸುತ್ತದೆ.[೪೩][೪೪] ನಂತರ Oracle ತನ್ನ ಮೊಕದ್ದಮೆಯಲ್ಲಿ ಆರೋಪಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ದುರುಪಯೋಗ ನಡೆಸಿರುವುದನ್ನು SAP ಒಪ್ಪಿಕೊಂಡಿತು. SAP ಅನಧಿಕೃತ ಇಳಿಕೆಯಾಗಿರುವುದನ್ನು ಒಪ್ಪಿಕೊಂಡಿತ್ತು; ಆದರೆ ಯಾವುದೇ ಬೌದ್ಧಿಕ ಸ್ವತ್ತಿನ ಕಳವನ್ನು ಕಂಪೆನಿಯು ನಿರಾಕರಿಸಿತ್ತು.[೪೫] 2004ರಿಂದ 30 ಸಣ್ಣ ಪ್ರತಿಸ್ಪರ್ಧಿಗಳನ್ನು ಸ್ವಾಧೀನಪಡಿಸಿಕೊಳ್ಳಲು US$20 ಬಿಲಿಯನ್‌ ವೆಚ್ಚ ಮಾಡಿರುವ, ತನ್ನ ಪ್ರಮುಖ ಎದುರಾಳಿಯಾದ Oracleಗೆ ತದ್ವಿರುದ್ಧವಾಗಿ SAP ತನ್ನ ಸುಸಂಘಟಿತವಾದ ಬೆಳವಣಿಗೆಯ ವೈಖರಿಯಿಂದ ಹೆಸರುವಾಸಿಯಾಗಿದೆ. SAP ತನ್ನ ವಾರ್ಷಿಕ ಲಾಭವನ್ನು 2002ರಿಂದ 370%ರಷ್ಟು ಹೆಚ್ಚಿಸಿಕೊಳ್ಳಲು ಯಶಸ್ವಿಯಾಗಿದೆ.[೪೬] ರೂಢಿಯ ಸುಸಂಘಟಿತ ಬೆಳವಣಿಗೆಯ ವ್ಯವಸ್ಥೆಯಿಂದ ಹೊರಬರುವ ಯತ್ನವಾಗಿ 7ನೇ ಅಕ್ಟೋಬರ್‌ October 2007ರಂದು ವ್ಯಾವಹಾರಿಕ ಮಾಹಿತಿ ತಂತ್ರಾಂಶದ ಮಾರುಕಟ್ಟೆಯ ಪ್ರಧಾನ ಸಂಸ್ಥೆಯಾದ ಬಿಸಿನೆಸ್‌ ಆಬ್ಜೆಕ್ಟ್ಸ್‌ಅನ್ನು $6.8B[೪೭] ಮೌಲ್ಯಕ್ಕೆ ಸ್ವಾಧೀನಪಡಿಸಿಕೊಳ್ಳುವುದಾಗಿ SAP ಘೋಷಿಸಿತು. SAP 2008ರಲ್ಲಿ ತನ್ನ ಬಳಕೆದಾರರಲ್ಲಿ ವಿವಾದ ಮತ್ತು ಆಕ್ರೋಶಗಳನ್ನು ಪ್ರಚೋದಿಸುವಂತೆ ತನ್ನ ನಿರ್ವಹಣಾ ಕರಾರುಗಳ ಬೆಲೆಯನ್ನು ಏರಿಸಿತು. ಬಳಕೆದಾರರ ಗುಂಪುಗಳಲ್ಲಿ ಈ ವಿಷಯವು ತೀವ್ರ ಸ್ವರೂಪದ ಚರ್ಚೆಗಳ ಕೇಂದ್ರವಾಗಿತ್ತು.[೪೮]

ಇದನ್ನು ನೋಡಿರಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "SAP profit drops 6% in fourth quarter". Computerworld. Retrieved 2008-02-12.
  2. SAP. "Geschichte der SAP - Die ersten zehn Jahre[[Category:Articles containing German-language text]]" (in German). Archived from the original on 2010-09-12. Retrieved 2008-01-29. {{cite web}}: URL–wikilink conflict (help)CS1 maint: unrecognized language (link)
  3. ೩.೦ ೩.೧ ೩.೨ SAP. "SAP History: From Start-Up Software Vendor to Global Market Leader". Archived from the original on 2007-10-11. Retrieved 2007-10-15.
  4. "ಆರ್ಕೈವ್ ನಕಲು". Archived from the original on 2008-09-04. Retrieved 2009-10-26.
  5. "STOXX Limited Announces Changes to its Blue-Chip Index Series" (PDF) (Press release). Stoxx. 2003-09-01. Archived from the original (PDF) on 2012-03-20. Retrieved 2007-10-15.
  6. Hasso Plattner, August-Wilhelm Scheer, Siegfried Wendt and Daniel S. Morrow (2000). Dem Wandel voraus. Hasso Plattner im Gespräch (in German). Bonn: Galileo Press. ISBN 3-934358-55-1.{{cite book}}: CS1 maint: multiple names: authors list (link) CS1 maint: unrecognized language (link)
  7. "Executive Board: Claus E. Heinrich". SAP. Archived from the original on 2007-08-27. Retrieved 2007-10-15.
  8. "Executive Board: Gerhard Oswald". SAP. Archived from the original on 2007-08-06. Retrieved 2007-10-15.
  9. "Executive Board: Werner Brandt". SAP. Archived from the original on 2007-08-18. Retrieved 2007-10-15.
  10. Wharton School (4 October 2006). "Henning Kagermann: Balancing Change and Stability in the Evolution of SAP's Enterprise Software Platform". Knowledge@Wharton. Retrieved 2007-10-15.
  11. Moad, Jeff (March 28, 2007). "Shai Agassi Leaves SAP". MA News. Thomas Publishing Company. Archived from the original on 2009-04-17. Retrieved 2007-10-15.
  12. Mary Hayes Weier (2008-04-02). "SAP Promotes Leo Apotheker To Co-CEO". Information Week. {{cite web}}: Check date values in: |date= (help)
  13. ೧೩.೦ ೧೩.೧ "SAP at a Glance: Press Fact Sheet, April 2007". SAP. Archived from the original on 2007-08-24. Retrieved 2007-10-15.
  14. Verespej, Michael A. (1999-08-16). "Why They're The Best". IndustryWeek. Penton Media, Inc. Archived from the original on 2008-02-04. Retrieved 2007-10-15.
  15. Bailor, Coreen (2006-07-05). "For CRM, ERP, and SCM, SAP Leads the Way". Archived from the original on 2007-03-13. Retrieved 2007-03-29.
  16. "Business in Brief: Markets". SAP. Archived from the original on 2007-09-27. Retrieved 2007-10-15.
  17. "Midmarket Solutions: SAP ALL-IN-ONE – Solutions for mid-size companies". Annual Report 2006. SAP. Archived from the original on 2007-10-11. Retrieved 2007-10-15.
  18. "Industry Solutions: Innovation - One Industry at a Time". Annual Report 2006. SAP. Archived from the original on 2007-10-11. Retrieved 2007-10-15.
  19. "ಉದ್ಯಮ ಸೇವಾ -ಸಂಬಂಧಿತ ಸಂರಚನೆ: ಮಾಧ್ಯಮ ದಾಖಲೆ ಪತ್ರ, ಮಾರ್ಚ್‌ 2007". Archived from the original on 2008-07-24. Retrieved 2009-10-26.
  20. ಕರ್ಬರೋಸ್‌-ಆಧಾರಿತ SSO ಮತ್ತು SAP E-SOA
  21. SAP E-SOAಗೆಂದು ಅಳವಡಿಕೆಯಾಗಬಲ್ಲ SSO
  22. Governor, James (2007-09-19). "BusinessByDesign: iPhone for ERP, Or AS/400 for 21stC?". James Governor’s Monkchips. Retrieved 2007-10-15.
  23. SAP (19 July 2007). "SAP Announces Preliminary 2007 Second Quarter and Six Months Results" (Press release). MarketWatch. Retrieved 2007-10-15.
  24. "SAP - SAP ವ್ಯಾವಹಾರಿಕ ವ್ಯವಸ್ಥೆ: ಮಾಧ್ಯಮ ದಾಖಲೆ ಪತ್ರ, ಫೆಬ್ರವರಿ 2007". Archived from the original on 2008-10-11. Retrieved 2009-10-26.
  25. "ಅಂತರಜಾಲಸುದ್ದಿ ರಿಯಲ್‌ಟೈಂ IT ಸುದ್ದಿ – ಸಿಲಿಕಾನ್‌ ವ್ಯಾಲಿಯ ಉಪಸ್ಥಿತಿಯನ್ನು ಬಲಪಡಿಸಿದ SAP". Archived from the original on 2009-06-25. Retrieved 2009-10-26.
  26. "SAP - ಜಾಗತಿಕ ಮತ್ತು ಸ್ಥಳೀಯ ಭಾಗೀದಾರರ ನಿರ್ದೇಶಿಕೆಗಳು: ಜಾಗತಿಕ ಸೇವಾ ಭಾಗೀದಾರರು". Archived from the original on 2009-11-16. Retrieved 2009-10-26.
  27. "SAP - ಜಾಗತಿಕ ಮತ್ತು ಸ್ಥಳೀಯ ಭಾಗೀದಾರರ ನಿರ್ದೇಶಿಕೆಗಳು: ಜಾಗತಿಕ ತಂತ್ರಾಂಶ ಭಾಗೀದಾರರು". Archived from the original on 2009-11-08. Retrieved 2009-10-26.
  28. "SAP - ಜಾಗತಿಕ ಮತ್ತು ಸ್ಥಳೀಯ ಭಾಗೀದಾರರ ನಿರ್ದೇಶಿಕೆಗಳು: ಜಾಗತಿಕ ತಂತ್ರಜ್ಞಾನ ಭಾಗೀದಾರರು". Archived from the original on 2009-11-21. Retrieved 2009-10-26.
  29. "SAP Partners".
  30. SAP - HCL Technologies ‘ಗ್ರಾಹಕ ಕೇಂದ್ರಿತ ವ್ಯವಸ್ಥೆ’ಯ ಮುಖಾಂತರ ಜಂಟಿ ವ್ಯಾವಹಾರಿಕ ಮೌಲ್ಯಗಳನ್ನು ವಿತರಿಸಲು SAPನೊಂದಿಗಿನ ಜಾಗತಿಕ ಸೇವಾ ಸಹಭಾಗಿತ್ವವನ್ನು ಘೋಷಿಸಿದೆ
  31. "SAP - ಸಣ್ಣ ಉದ್ಯಮಗಳು ಮತ್ತು ಮಧ್ಯಮಗಾತ್ರದ ಕಂಪೆನಿಗಳಿಗೆ SAP ಪರಿಹಾರಗಳು : ಮಾಧ್ಯಮ ದಾಖಲೆ ಪತ್ರ, ಜುಲೈ 2007". Archived from the original on 2007-10-26. Retrieved 2009-10-26.
  32. "SAP - ಸಮುದಾಯಗಳು". Archived from the original on 2009-10-27. Retrieved 2009-10-26.
  33. ಬಿಜಿನೆಸ್‌ ಪ್ರೋಸೆಸ್‌ ಎಕ್ಸ್‌ಪರ್ಟ್‌ ಕಮ್ಯುನಿಟಿ ನೆಲೆ
  34. "SAP - SAP ನಾವೀನ್ಯತೆಯ ಸಮುದಾಯಗಳು: ಉದ್ಯಮ ಸೇವೆಗಳು ಸಮುದಾಯ". Archived from the original on 2008-08-28. Retrieved 2009-10-26.
  35. "SAP - SAP ನಾವೀನ್ಯತೆಯ ಸಮುದಾಯಗಳು: ಉದ್ಯಮ ಮೌಲ್ಯ ಜಾಲ". Archived from the original on 2008-08-30. Retrieved 2009-10-26.
  36. "ASUG".
  37. "DSAG".
  38. "SAUG".
  39. "SAP UK &Ireland User Group".
  40. "SAP User Groups". Archived from the original on 2009-07-27. Retrieved 2009-10-26.
  41. "SAP User Group Executive Network".
  42. Hoover's. "SAP Competitors". Archived from the original on 2009-06-14. Retrieved 2009-10-26.
  43. "Oracle Sues SAP" (Press release). Oracle. 2007-03-22. Archived from the original on 2010-03-11. Retrieved 2007-09-03.
  44. "Oracle Sues SAP". oracle.com. Oracle. Archived from the original on 2018-09-18. Retrieved 2007-09-03.
  45. SAP 'ಅನುಚಿತ' Oracle ಇಳಿಕೆಗಳನ್ನು ಒಪ್ಪಿಕೊಂಡಿತು Archived 2011-06-12 ವೇಬ್ಯಾಕ್ ಮೆಷಿನ್ ನಲ್ಲಿ.- ಟೈಮ್ಸ್‌ ಆನ್‌ಲೈನ್‌
  46. ಗುಂಪುಗಳು: ಜಾಗತಿಕ ಗ್ರಾಮಕ್ಕೆ ಪ್ರವೇಶ - ಆರ್ಥಿಕತೆ - SPIEGEL ONLINE - ಸುದ್ದಿ
  47. "SAP to buy Business Objects for $6.8B". The Associated Press. Retrieved 2007-10-11.
  48. ಬೆಲೆ ಏರಿಕೆಯ ಪರಿಣಾಮವಾಗಿ ಬಳಕೆದಾರರಿಂದ ತೀವ್ರ ಕೋಪ ಎದುರಿಸುತ್ತಿರುವ SAP


ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಎಸ್_ಎ_ಪಿ&oldid=1266790" ಇಂದ ಪಡೆಯಲ್ಪಟ್ಟಿದೆ