ಕುಬ್ಲರ್ ರಾಸ್ ಸಾವಿನ ಹಂತಗಳು
ಸಾವು
[ಬದಲಾಯಿಸಿ]ಎಲಿಸಬೆತ್ ಕುಬ್ಲರ್ ರಾಸ್ ಒಬ್ಬ ಸ್ವಿಸ್-ಅಮೇರಿಕನ್ ಮನೋವೈಧ್ಯ. ಸಾವಿನ ಸಮೀಪದ ಅಧ್ಯಯನದಲ್ಲಿ ಅಗ್ರಗಣ್ಯ ಸ್ಥಾನವನ್ನು ಹೊಂದಿದ್ದರು.ಕುಬ್ಲರ್ ರಾಸ್ ಅವರು "ಸಾವಿನ ೫ ಹಂತಗಳ ಮಾದರಿ"ಯಿಂದ ಪ್ರಸಿದ್ಧರಾಗಿದ್ದರು.ಇವರು ಪ್ರಪಂಚದ ವಿವಿಧ ಭಾಗಗಳಲ್ಲಿ ಏಡ್ಸ್ ಅಥವ ಹೆಚ್ಐವಿಯ ಕುರಿತು ಅನೇಕ ಕಾರ್ಯಗಾರಗಳನ್ನು ಆಯೋಜಿಸಿದ್ದಾರೆ.[೧]
ಕುಬ್ಲರ್ ರಾಸ್ ಅವರು ಮನುಷ್ಯ ಸಾವಿಗೆ ಮುನ್ನ ರೋಗಿ ತಾನು ಅನುಭವಿಸುವ ಸರಣಿ ಮಾರಕ ಭಾವನೆಗಳನ್ನು ಸಮರ್ಥಿಸಿದ್ದಾರೆ. ಈ ಮಾದರಿಯನ್ನು ಮೊದಲು ಸ್ವಿಸ್ ಮನೋವೈದ್ಯರಾದ ಎಲಿಸಬೆತ್ ಕುಬ್ಲರ್ ರಾಸ್ ಅವರು, " ಡೆತ್ ಅಂಡ್ ಡೈಯಿಂಗ್ " ಎಂಬ ತಮ್ಮ ಪುಸ್ತಕದಲ್ಲಿ ೧೯೬೯ರಲ್ಲಿ ಪರಿಚಯ ಮಾಡಿಕೊಟ್ಟರು. ಈ ಪುಸ್ತಕದಲ್ಲಿ ತಾವು ಮಾರಕ ರೋಗಿಗಳೊಡನೆ ಕೆಲಸ ಮಾಡಿದ ಅನುಭವಗಳಿಂದ ಪ್ರೇರಿತರಾಗಿದ್ದರು ಎಂಬುದು ವಿಷೇಶ ಸಂಗತಿ. ತಮ್ಮ ಪುಸ್ತಕ ಪ್ರಕಟಣೆಯಾದ ದಿನದಿಂದ ಕುಬ್ಲರ್ ರಾಸ್ ಅವರ ಮಾದರಿಯನ್ನು ಸಾರ್ವಜನಿಕರು ಸಮಾಜದಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಅದರ ಸಿಂಧುತ್ವಕ್ಕೆ ಬಹುತೇಕ ಸಂಶೋಧನೆ ಬೆಂಬಲಿಸುವುದಿಲ್ಲ. ಕುಬ್ಲರ್ ರಾಸ್ ಗೂ ಕೂಡ ನಂತರ ಜೀವನದಲ್ಲಿ ತಾವು ಕಂಡುಹಿಡಿದ ಹಂತಗಳ ಬಗ್ಗೆ ವಿಷಾಧ ಮೂಡಿತ್ತು.
ಕುಬ್ಲರ್ ರಾಸ್ ಅವರ ಮಾದರಿಯಲ್ಲಿ ಒಟ್ಟು ೫ ಪ್ರಮುಖ ಹಂತಗಳಿವೆ[೨]:-
ನಿರಾಕರಣೆ ದುಃಖದ ಹಂತಗಳಲ್ಲಿ ಮೊದಲನೆಯದಾಗಿದೆ. ಇದು ಸಾಯುತ್ತಿರುವ ಮನುಷ್ಯನಿಗೆ ನಷ್ಟವನ್ನು ಅನುಭವಿಸುವುದರಲ್ಲಿ ಸಹಾಯ ಮಾಡುತ್ತದೆ. ಈ ಹಂತದಲ್ಲಿ ವಿಶ್ವ ಅರ್ಥಹೀನವಾಗಿ, ಅಗಾಧವಾಗಿ ಕಾಣಿಸಲು ಪ್ರಾರಂಭವಾಗುತ್ತದೆ. ತಮ್ಮ ಜೀವನಕ್ಕೆ ಯಾವುದೇ ಅರ್ಥವಿಲ್ಲ ಎಂದು ಭಾವಿಸುತ್ತಾರೆ. ನಾವು ಸದಾ ಆಘಾತದಲ್ಲಿ ಮುಳುಗಿದ್ದು, ಅದರಿಂದ ನಿಶ್ಚೇಷ್ಟಿತ ವಾಗಿ ಹೋಗಿರುತ್ತೇವೆ. ಒಂದೊಂದು ದಿನವನ್ನೂ ಮುಗಿಸುವುದು ಒಂದು ಸವಾಲಾಗಿ ಹೋಗಿರುತ್ತದೆ. ಒಂದೊಂದು ದಿನವನ್ನು ಮುಗಿಸಲು ಯಾವುದಾದರು ಸುಗಮ ದಾರಿಯನ್ನು ಹುಡುಕುತ್ತಿರುತ್ತಾರೆ. ಸಂದರ್ಭದ ವಾಸ್ತವವನ್ನು ಅರಿತು, ತಮಗೆ ತಾವೇ ಪ್ರಶ್ನೆಗಳನ್ನು ಕೇಳಿ ಕೇಳಿ, ತಮಗೆ ಅರಿವಿಲ್ಲದೆ ಚಿಕಿತ್ಸೆ ಪ್ರಕ್ರಿಯೆಯನ್ನು ಪ್ರಾರಂಭಿಸಿಕೊಂಡಿರುತ್ತಾರೆ. ನಾವು ಮಾನಸಿಕವಾಗಿ ಬಲವಾಗಿ, ನಿರಾಕರಣೆ ನಿಧಾನವಾಗಿ ಮುಸುಕಲು ಶುರುವಾಗುತ್ತದೆ.
ಇದು ರಾಸ್ ಮಾದರಿಯ ಎರಡನೆ ಹಂತ. ವೈಯಕ್ತಿಕ ನಿರಾತರಣೆ ಮುಂದುವರೆಯಲು ಸಾಧ್ಯವಿಲ್ಲ ಎಂದು ಗುರುತಿಸಿದಾಗ, ಅವರು ಹತಾಶೆಗೊಳ್ಳುತ್ತಾರೆ, ಅದರಲ್ಲೂ ತಮಗೆ ಅತೀ ಹತ್ತಿರವಾದ ವ್ಯಕ್ತಿಗಳೊಡನೆ ಕೋಪಗೊಳ್ಳಲಾರಂಭಿಸಿತ್ತಾರೆ. ಸಾವು ತಮಗೆ ಯಾಕೆ ಆವರಿಸುತ್ತಿದೆ ಎಂದು ಚಿಂತೆಗೊಂಡು, ತಮ್ಮನ್ನು ತಾವು ಪ್ರಶ್ನಿಸಲಾರಂಭಿಸುತ್ತಾರೆ; " ತನಗೆ ಯಾಕೆ ? ಸಾವು ತನಗೆ ಏಕೆ ಸಂಭವಿಸಬಹುದು ? ಇದಕ್ಕೆ ಯಾರು ಹೊಣೆ ? " ಹೀಗೆ ಹಲವಾರು ಪ್ರಶ್ನೆಗಳು ಅವರನ್ನು ಕಾಡುತ್ತದೆ. ಚಿಕ್ಕ ಚಿಕ್ಕ ಕ್ಷುಲ್ಲಕ ಕಾರಣಗಳಿಗೆ ಅವರು ಕೋಪಗೊಳ್ಳುತ್ತಾರೆ.
ರಾಸ್ ಮಾದರಿಯ ೩ನೇ ಹಂತವಾಗಿದ್ದು, ಈ ಹಂತದಲ್ಲಿ ಮನುಷ್ಯ ಕೊಂಚ ಮಟ್ಟಿಗೆ ತನ್ನ ಕೋಪವನ್ನು ಕಡಿಮೆ ಮಾಡಿಕೊಳ್ಳುತ್ತಾನೆ; ದೇವರ ಬಳಿ ತನ್ನ ಜೇವಕ್ಕಾಗಿ ಚೌಕಾಸಿ ಮಾಡುತ್ತಾನೆ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡ ನಂತರ ಚೌಕಾಸಿಯನ್ನು ತಾತ್ಕಾಲಿಕ ಒಪ್ಪಂದದ ರೂಪದಲ್ಲಿ ಪಡೆಯಬಹುದು. " ನನ್ನ ಉಳಿದ ಜೀವನವನ್ನು ಇತರರಿಗೆ ಸಹಾಯ ಮಾಡಲು ಅರ್ಪಿಸಿದರೆ ? ಬಹುಶಃ ನಾನು ಈ ಸಾವು ಒಂದು ಕೆಟ್ಟ ಕನಸೆಂದು ಭಾವಿಸಿ ಮರೆಯಬಹುದೆ? " ಹಲವಾರು ಪ್ರಶ್ನೆಗಳು "ಒಂದು ವೇಳೆ", "ಅಥವ" "ಆದರೆ" ಇಂತಹ ಸಂದೇಹಾತ್ಮಕ ಪದಗಳಿಂದಲೇ ಆರಂಭವಾಗುತ್ತದೆ. ಮನುಷ್ಯ ಸದಾ ತನ್ನ ಭೂತ ಕಾಲದಲ್ಲಿ ಮುಳುಗಿಹೋಗಿರುತ್ತಾನೆ. ನೋವಿನೊಂದ ಹೇಗೆ ಹೊರಬರುವುದೆಂದು ಚೌಕಾಸಿ ಮಾಡುತ್ತಾನೆ. ಈ "ಒಂದು ವೇಳೆ" "ಅಥವ" ಪ್ರಶ್ನೆಗಳು ಮನುಷ್ಯನಿಗೆ ತನ್ನಲ್ಲಿ ತಪ್ಪುಗಳನ್ನು ಕಂಡುಕೊಳ್ಳುವಂತೆ ಮಾಡುತ್ತದೆ.
ಚೌಕಾಸಿಯ ನಂತರ ಮನುಷ್ಯ ತನ್ನ ಗಮನವನ್ನು ಪ್ರಸ್ತುತಕ್ಕೆ ಹರಿಸುತ್ತಾನೆ. ಅರ್ಥವಿಲ್ಲದ ಖಾಲಿ ಭಾವನೆಗಳು ಅವನನ್ನು ಆವರಿಸುತ್ತದೆ. ದುಃಖ ಅವನನ್ನು ಅತೀ ಆಳವಾದ, ತಾನು ಕಲ್ಪಿಸಿಕೊಳ್ಳಲಾಗದ ಮಟ್ಟದಲ್ಲಿ ಮನಸ್ಸನ್ನು ಪ್ರವೇಶಿಸುತ್ತದೆ. ಈ ಖಿನ್ನತೆ ಶಾಶ್ವತವಾಗಿ ಇರುವುದು ಎಂದೆನಿಸುತ್ತದೆ. ಆದರೆ ಈ ಖಿನ್ನತೆ ಮಾನಸಿಕ ಅಸ್ವಸ್ಥದ ಸೂಚನೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದು ಜೀವನದ ಒಂದ್ಯ್ ದೊಡ್ಡ ನಷ್ಟಕ್ಕೆ ಸೂಕ್ತ ಪ್ರಕ್ರಿಯೆಯಾಗಿದೆ. ಢಾಂಬಿಕ ಜೀವನದಿಂದ ನಾವು ಹೊರಬಂದಿರುತ್ತೇವೆ. ತೀವ್ರವಾದ ನೋವಿನ ಮಂಜಿನಲ್ಲಿ ನಾವು ಸಿಲುಕಿರುತ್ತೇವೆ. ನಾವು ನಮ್ಮನ್ನು ಕೇಳಬೇಕಿರುವ ಮೊದಲ ಪ್ರಶ್ನೆ ನಾವು ಖಿನ್ನತೆ ಹೊಂದಿರುವ ಸಂಗತಿ ವಾಸ್ತವವಾಗಿ ಖಿನ್ನತೆ ಹೌದೋ ಅಲ್ಲವೋ ಎಂಬುದು.
ರಾಸ್ ಮಾದರಿಯ ಕೊನೆಯ ಹಂತ "ಅಂಗೀಕಾರ". ಇದು ಅತೀ ತಪ್ಪು ಗ್ರಹಿಕೆ ಹೊಂದಿರುವ ಪದ. ಈ ಹಂತಕ್ಕೆ ಬರುವಷ್ಟರಲ್ಲಿ ಅಗಾಧ ಮಟ್ಟದಲ್ಲಿ ನೋವು, ಯಾರೊಂದಿಗೂ ಹಂಚಿಕೊಳ್ಳಲಾಗದ ಹಿಂಸೆ ಎಲ್ಲವನ್ನು ಒಂದು ಮಟ್ಟಗೆ ಅನುಸರಿಸಿಕೊಂಡು ಹೋಗುವಷ್ಟು ಮಾನಸಿಕ ಸ್ತೈರ್ಯವನ್ನು ಮೈಗೂಡಿಸಿಕೊಂಡಿರುತ್ತೇವೆ. ಆದರೆ ಇದರ ಅರ್ಥ ನಮಗೆ ಈ ಬದಲಾವಣೆ ಮನಸ್ಪೂರ್ವಕವಾಗಿ ಇಷ್ಟಪಡುತ್ತೇವೆ ಎಂದರ್ಥ ಅಲ್ಲ. ಬದಲಿಗೆ ನಾವು ಈ ಬದಲಾವಣೆಯನ್ನು ಇಷ್ಟವಿಲ್ಲದಿದ್ದರೂ ವಾಸ್ತವವನ್ನು ಒಪ್ಪಿಕೊಂಡಿದ್ದೇವೆ ಎಂದರ್ಥ. ಈ ಬದಲಾವಣೆಯೊಂದಿಗೇ ಜೀವನವನ್ನು ಸಾಗಿಸುವುದನ್ನು ಕಲಿತುಕೊಳ್ಳುತ್ತಾರೆ. ಈ ಹಂತದಲ್ಲಿ ನಮಗೆ ವಾಸ್ತವವ್ವನ್ನು ಒಪ್ಪಿಕೊಳ್ಳದೆ ಬೇರೆ ಯಾವುದೇ ದಾರಿ ಇಲ್ಲ ಎಂಬುದು ಅರಿವಾಗುತ್ತದೆ. ಅರಿವಾದರೂ ನಾವು ಆಗಾಗ ಬದಲಾವಣೆ ಆಗದಿದ್ದರೆ ಹೇಗಿರಬಹುದಿತ್ತು ಎಂಬುದನ್ನು ಕಲ್ಪಿಸಿಕೊಳ್ಳುತ್ತಿರುತ್ತಾರೆ.
ನಂತರ ರಾಸ್ ಈ ಮಾದರಿಯನ್ನು ಕೇವಲ ಸಾವಿನ ನೋವಕ್ಕೆ ಸೀಮಿತ ಮಾಡದೆ, ಪ್ರೀತಿ-ಪಾತ್ರರನ್ನು ಕಳೆದುಕೊಂಡ ವೇದನೆ, ಕೆಲಸ ಅಥವ ಆದಾಯ ನಷ್ಟ, ಸಂಬಂಧಗಳ ಮುಕ್ತಾಯ ಅಥವ ವಿಚ್ಛೇದನ, ಮಾದಕ ವ್ಯಸನ, ಕಾರಾಗೃಹವಾಸ, ಹೀಗೆ ಹಲವಾರು ವೈಯಕ್ತಿಕ ನಷ್ಟಗಳಿಗೆ ಹೋಲಿಸಿದರು.ಬಳಲುವವರಿಗೂ ಹಾಗು ಚಿಕಿತ್ಸಕರಿಬ್ಬರಿಗೂ ರಾಸ್ ಅವರ ಈ ಮಾದರಿಯಿಂದ ಉಪಯೋಗವಾಗಿದೆ ಎಂಬ ವರದಿಗಳು ಮಾಡಿದ್ದಾರೆ.[೩]
ಉಲ್ಲೇಖಗಳು
[ಬದಲಾಯಿಸಿ]