ಕುಳಂಬು
ಗೋಚರ
ಕುಳಂಬು (ತಮಿಳು:குழம்பு) ತಮಿಳು ಮತ್ತು ಶ್ರೀಲಂಕಾದ ಪಾಕಶೈಲಿಗಳಲ್ಲಿ ಸಾಮಾನ್ಯ ಖಾದ್ಯವಾಗಿದೆ. ಇದು ಹುಣಸೆ ಆಧಾರಿತ ಖಾದ್ಯವಾಗಿದ್ದು ಮಾಂಸ, ತರಕಾರಿಗಳು ಮತ್ತು ಕೆಲವು ಸಂದರ್ಭಗಳಲ್ಲಿ ಬೇಳೆಗಳ ವೈವಿಧ್ಯವನ್ನು ಒಳಗೊಳ್ಳಬಹುದು.[೧]
ಕುಳಂಬು ಹುಣಸೆ, ಅರೆದ ಕೊತ್ತುಂಬರಿ ಬೀಜಗಳು, ಮೆಂತೆ ಸೇರಿರುವ ಸಂಬಾರ ಪದಾರ್ಥಗಳ ಮಿಶ್ರಣ ಮತ್ತು ತೊಗರಿ ಕಾಳಿನಿಂದ ತಯಾರಿಸಲಾದ ಬ್ರಾತ್‍ನ ಮೇಲೆ ಆಧಾರಿತವಾದ ನೀರುನೀರಾಗಿರುವ ಖಾದ್ಯವಾಗಿದೆ. ಇದು ತಾಜಾ ಅಥವಾ ಒಣಗಿಸಿದ ತರಕಾರಿಗಳು, ಮಿಶ್ರಣಮಾಡಿದ ತಾಜಾ ಕೊಬ್ಬರಿ, ಅಥವಾ ಒಣಗಿಸಿದ ಬೇಳೆಯ ಚೆಂಡುಗಳನ್ನು (ವಡಗಮ್) ಒಳಗೊಂಡಿರಬಹುದು. ಇದನ್ನು ಬ್ರಾತ್‍ನಂತೆ ನೀರುನೀರಾಗಿ ಅಥವಾ ಗ್ರೇವಿಯಂತೆ ಗಟ್ಟಿಯಾಗಿ ತಯಾರಿಸಬಹುದು. ಈ ಖಾದ್ಯವು ಅನ್ನದೊಂದಿಗೆ ಪಕ್ಕಖಾದ್ಯವಾಗಿ ಬಹಳ ಜನಪ್ರಿಯವಾಗಿದೆ. ಇದು ವಿಶೇಷವಾಗಿ ಭಾರತದ ದಕ್ಷಿಣದ ಪ್ರದೇಶಗಳಾದ ತಮಿಳು ನಾಡು, ಕರ್ನಾಟಕ ಮತ್ತು ಕೇರಳಗಳಲ್ಲಿ ಹಾಗೂ ಶ್ರೀಲಂಕಾ ದೇಶದ ಉತ್ತರದ ಪ್ರದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]