ವಿಷಯಕ್ಕೆ ಹೋಗು

ಕೆಸುವಿನ ಎಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಕನ್ನಡದ ಕನ್ನಡದ ಜನರಿಗೆ ಕೆಸು ಎಲೆಗಳ ಬಗ್ಗೆ ಹೊಸದಾಗಿ ಹೇಳಬೇಕೆಂದೇನೂ ಇಲ್ಲ. ಯಾಕಂದ್ರೆ ಈ ಕಡೆಯ ಜನ ಹೆಚ್ಚಾಗಿ ಕೆಸುವಿನ ಎಲೆ [] ವಿವಿಧ ಅಡುಗೆ ಮಾಡುತ್ತಲೇ ಇರುತ್ತಾರೆ. ಮಳೆಗಾಲದಲ್ಲಂತೂ ಈ ಎಲೆಯ ಅಡುಗೆ ಹೆಚ್ಚಾಗಿರುತ್ತೆ. ಈ ಎಲೆ ತಿನ್ನೋದರಿಂದ ತುಂಬಾನೆ ಪ್ರಯೋಜನಗಳಿವೆ ಗೊತ್ತಾ?

ಕೆಸುವಿನ ಎಲೆಯ ಆರೋಗ್ಯದ ಮಹತ್ವ

[ಬದಲಾಯಿಸಿ]

ನನಗೆ ತಿಳಿದಂತೆ , ಎಲ್ಲಾ ಹಸಿರು ಸೊಪ್ಪು ಗಳಂತೆ ಇದು ಕೂಡಾ ಉತ್ತಮವಾದ ಪೋಷಕಾಂಶಗಳನ್ನು ಹೊಂದಿದೆ. ಎಲ್ಲಾ ಹಸಿರು ಸೊಪ್ಪುಗಳಲ್ಲಿ ಇರುವ ಜೀವಸತ್ವಗಳು ಇದರಲ್ಲೂ ಇವೆಯಾದರೂ ಕೆಸುವಿನ ಸೊಪ್ಪಿನಲ್ಲಿರುವ ಒಂದು ರೀತಿಯ ಪ್ರೋಟೀನ್ ರೋಗ ನಿರೋಧಕಕೆಸು ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ದೊಡ್ಡ ಕರುಳಿನ‌ ಕ್ಯಾನ್ಸರ್ ಬರದಂತೆ ತಡೆಯುತ್ತದೆ‌ ಅನ್ನುವುದು ಸಂಶೋಧನೆಯಿಂದ‌ ದೃಢಪಟ್ಟಿದೆ.

ಇದರಲ್ಲಿ ಇರುವ ಪೋಷಕಾಂಶಗಳು

[ಬದಲಾಯಿಸಿ]

ವಿಟಮಿನ್ A , B ಮತ್ತು C, ಮ್ಯಾಂಗನೀಸ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್‌, ರಂಜಕ ಮತ್ತು ಫೈಬರ್ ಇದರಲ್ಲಿ ಹೇರಳವಾಗಿ ಇರುತ್ತವೆ. ಜೊತೆಗೆ ಅತಿ ಕಡಿಮೆ ಪ್ರಮಾಣದ ಕ್ಯಾಲೊರಿ‌ ಇರುತ್ತದೆ . ಇದರ ಸೇವನೆಯು ಹೃದಯವನ್ನು ಬಲಗೊಳಿಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕರುಳು ಸಂಬಂಧಿ ಕಾಯಿಲೆಗಳನ್ನ‌ ಗುಣಪಡಿಸುತ್ತದೆ. ರಕ್ತ ಹೀನತೆ ಇರುವವರಿಗೆ ಇದು ತುಂಬಾ ಒಳ್ಳೆಯದು. ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂತ್ರ ಕೋಶದ ಕಲ್ಲುಗಳನ್ನು ಇದು ನಿವಾರಿಸುತ್ತದೆ ಅನ್ನುವುದು‌ ನಂಬಿಕೆ ಅಥವಾ ಅನುಭವ. ಆದರೆ ಬಹುತೇಕ ಸೊಪ್ಪುಗಳಲ್ಲಿ ಇರುವಂತೆ ಇದರಲ್ಲಿ ಕೂಡಾ ಆಕ್ಸಾಲಿಕ್ ಆಸಿಡ್ (oxalic acid) ಇರುತ್ತದೆ. ವೈಜ್ಞಾನಿಕ ಸಂಶೋಧನೆಯ ಪ್ರಕಾರ oxalic acid ಅಥವಾ oxalate ಗಳು ಕಿಡ್ನಿ ಕಲ್ಲು ಗಳನ್ನು ಉಂಟು ಮಾಡಬಹುದು. ಮೂತ್ರಕೋಶದ ಸೋಂಕಿಗೂ ಕಾರಣವಾಗಬಹುದು. oxalate ಗಳು ಕ್ಯಾಲ್ಸಿಯಂ ಜೊತೆ ಸೇರಿಕೊಂಡು ಸಮಸ್ಯೆಗೆ ಕಾರಣವಾಗಬಹುದು. (ಇದರ ಬಗ್ಗೆ ಇನ್ನೂ ಸಾಕಷ್ಟು ಸಂಶೋಧನೆಗಳು ನಡೆಯಬೇಕಿದೆ )

ಇದನ್ನು ಉಪಯೋಗಿಸುವುದು ವಿಧಾನ

[ಬದಲಾಯಿಸಿ]

ಕೆಸುವಿನ‌ ಸೊಪ್ಪಿನ ರುಚಿಯು ಇತರೆ ಸೊಪ್ಪು ಗಳಿಗಿಂತ ಭಿನ್ನ. ಹಸಿ ಸೊಪ್ಪು ತಿನ್ನಲಾಗದು. ಒಂದು ವೇಳೆ ತಿಂದರೆ ಗಂಟಲು ಕೆರತ ಶುರುವಾಗುತ್ತದೆ. ಜೊತೆಗೆ ಇದರಿಂದ ಬರುವ ರಸವು ಕೂಡಾ ಮೈ ಕೆರೆತಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಕೆಸುವಿನ ಗಿಡ ಅಥವಾ ಸೊಪ್ಪನ್ನು ತರುವಾಗ ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದು ಒಳ್ಳೆಯದು. ಕೆಸುವಿನ ಸೊಪ್ಪು ,‌ ಅದರ ದಂಟು, ಗಡ್ಡೆ ಮತ್ತು ಬಿಳಲುಗಳು ( ಕೆಸುವಿನ‌ ಚೀಪು) ಹೀಗೆ ಗಿಡದ ಎಲ್ಲ ಭಾಗಗಳೂ ಕೂಡಾ ತಿನ್ನಬಹುದಾದದ್ದೆ. ಏನೇ ಮಾಡುವುದಾದರೂ ಮೊದಲು ಚೆನ್ನಾಗಿ ಬೇಯಿಸಬೇಕು , ಜೊತೆಗೆ ಬೇಯಿಸುವಾಗು ಉಪ್ಪು ಮತ್ತು ಹುಳಿಯನ್ನು ಸಾಕಷ್ಟು ಪ್ರಮಾಣದಲ್ಲಿ ಹಾಕಬೇಕು. ಇಲ್ಲವಾದಲ್ಲಿ ಗಂಟಲು ಕೆರೆತ ಉಂಟಾಗುತ್ತದೆ.

ಕೆಸುವಿನ ಎಲೆಯ ಉಪಯೋಗ

[ಬದಲಾಯಿಸಿ]
Black Taro

ಕೆಸುವಿನ‌ ಗಡ್ಡೆಕೆಸುವಿನ ಗಡ್ಡೆ ,ಕೆಸುವಿನ ದಂಟುಕೆಸುವಿನ ದಂಟಿನ ಪಲ್ಯ ಮತ್ತು ಕೆಸುವಿನ‌ ಬಿಳಲು ಇದರ ಉಪಯೋಗ

[ಬದಲಾಯಿಸಿ]
  • ಪಲ್ಯ
  • ಸಾಂಬಾರ್ ಅಥವಾ ಹುಳಿ ಅಥವಾ ಕಾಯಿರಸ
  • ಹಸಿ ಅಥವಾ ಸಾಸಿವೆ.‌

ಕೆಸುವಿನ ಎಲ್ಲ ಖಾದ್ಯಗಳೂ ಅತ್ಯಂತ ರುಚಿಕರವಾಗಿರುತ್ತವೆ. ಇದಕ್ಕೆ ಉಪ್ಪು, ಹುಳಿ, ಖಾರ ಮತ್ತು ಮಸಾಲೆ ಹೆಚ್ಚಿದ್ದರಷ್ಟೇ ರುಚಿ.

ಬಾಹ್ಯ ಉಲ್ಲೇಖ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]