ಖಾಲ್ಸಿಯ ಶಿಲಾಶಾಸನಗಳು
ಖಾಲ್ಸಿಯ ಶಿಲಾಶಾಸನಗಳು ಭಾರತದ ಚಕ್ರವರ್ತಿ ಅಶೋಕನು ಕ್ರಿ.ಪೂ 250 ರ ಸುಮಾರಿಗೆ ಬರೆಸಿದ ಭಾರತೀಯ ಶಿಲಾಶಾಸನಗಳ ಒಂದು ಗುಂಪು. ಇವುಗಳಲ್ಲಿ ಅಶೋಕನ ಶಾಸನಗಳಲ್ಲಿನ ಅತ್ಯಂತ ಪ್ರಮುಖವಾದವುಗಳಲ್ಲಿ ಕೆಲವಿವೆ. ಖಾಲ್ಸಿಯಲ್ಲಿನ ಶಾಸನವು 1 ರಿಂದ 14 ರವರೆಗಿನ ಎಲ್ಲಾ ಪ್ರಮುಖ ಶಿಲಾ ಶಾಸನಗಳನ್ನು ಹೊಂದಿದೆ. 850 ರ ಸುಮಾರಿಗೆ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಉತ್ತರ ಭಾರತದ ಉತ್ತರಾಖಂಡದ ಖಾಲ್ಸಿ ಎಂಬ ಹಳ್ಳಿಯಲ್ಲಿ ಇವನ್ನು ಪತ್ತೆಮಾಡಿದರು.
ಶಾಸನ
[ಬದಲಾಯಿಸಿ]ಖಾಲ್ಸಿಯ ಶಿಲಾಶಾಸನಗಳನ್ನು ಅಶೋಕನ ಅನೇಕ ಶಾಸನಗಳಂತೆ ಅವನ ಆಳ್ವಿಕೆಯ 10 ನೇ ವರ್ಷದಲ್ಲಿ ಗ್ರೀಕ್ ಮತ್ತು ಅರಾಮಿಕ್ ಭಾಷೆಯಲ್ಲಿ ಬರೆಯಲಾಗಿದೆ.[೧] ಅಶೋಕನ ಇತರ ಶಾಸನಗಳು ಭಾರತೀಯ ಭಾಷೆಯಲ್ಲಿವೆ (ವಿವಿಧ ರೀತಿಯ ಪ್ರಾಕೃತಗಳು).
ಶಾಸನಗಳನ್ನು ಘನ ಸ್ಫಟಿಕ ಶಿಲೆಯ ಮೇಲೆ ಬರೆಯಲಾಗಿದೆ.[೨] ಬಂಡೆಯ ಮುಖ್ಯ ಮುಖವು (ಪೂರ್ವ ಮುಖ) ಶಾಸನ 1 ರಿಂದ 12 ಮತ್ತು ಶಾಸನ 13 ರ ಮೊದಲ ಭಾಗವನ್ನು ಹೊಂದಿದೆ. ಬಲಭಾಗದಲ್ಲಿ (ಉತ್ತರ ಮುಖ) ಅನಿಶ್ಚಿತ ಅರ್ಥವನ್ನು ಹೊಂದಿರುವ ಬ್ರಾಹ್ಮಿ ಭಾಷೆಯ ಗಜಾತಮ ಎಂಬ ಶಬ್ದವಿರುವ ಆನೆಯನ್ನು ಚಿತ್ರಿಸಲಾಗಿದೆ. ಎಡಭಾಗದಲ್ಲಿ (ದಕ್ಷಿಣ ಮುಖ) ಮುಖ್ಯ ಮುಖದ ಮೇಲೆ ಪ್ರಾರಂಭವಾದ ಶಾಸನದ ಮುಂದುವರಿಕೆ, ಶಾಸನ 13 ಮತ್ತು ಶಾಸನ 14 ರ ಎರಡನೇ ಭಾಗವಿದೆ.[೩]
ಈ ಕೊನೆಯ ಶಾಸನ ಸಂ .13, ಆ ಕಾಲದ ಮುಖ್ಯ ಹೆಲೆನಿಸ್ಟಿಕ್ ರಾಜರ ಬಗ್ಗೆ ಮತ್ತು ಅವರ ನಿಖರವಾದ ಭೌಗೋಳಿಕ ಸ್ಥಳವನ್ನು ಉಲ್ಲೇಖಿಸುತ್ತದೆ. ಇದು ಅಶೋಕನಿಗೆ ಆ ಕಾಲದ ಗ್ರೀಕ್ ಪ್ರಪಂಚದ ಬಗ್ಗೆ ಉತ್ತಮ ತಿಳುವಳಿಕೆ ಇತ್ತು ಎಂದು ಸೂಚಿಸುತ್ತದೆ.[೧] ಈ ಶಾಸನವೂ ಅಶೋಕನ ಆಳ್ವಿಕೆಯು ಕ್ರಿ.ಪೂ 260 ಮತ್ತು 230 ರ ನಡುವೆಯಿತ್ತು ಎಂದು ನಿರ್ದಿಷ್ಟ ನಿಖರತೆಯೊಂದಿಗೆ ಹೇಳಲು ಸಾಧ್ಯವಾಗಿಸಿತು.
-
ಇತ್ತೀಚಿನ ದಿನಗಳಲ್ಲಿ ಶಾಸನದ ಆಶ್ರಯತಾಣ.
-
1 ರಿಂದ 12 ರವರೆಗಿನ ಶಾಸನಗಳು, ಮತ್ತು ಶಾಸನ ಸಂ. 13 ರ ಆರಂಭ.
-
ಆನೆ ಅಲಂಕಾರಿಕ ವಿನ್ಯಾಸ, ಮತ್ತು ಶಾಸನ ಸಂ. 13 ರ ಮುಂದುವರಿಕೆ.
-
ಖಾಲ್ಸಿ ಶಾಸನಗಳ ಶಾಸನ ಸಂಖ್ಯೆ 13 ರ ಮುಂದುವರಿಕೆ.
ಉಲ್ಲೇಖಗಳು
[ಬದಲಾಯಿಸಿ]
ಮೂಲಗಳು
[ಬದಲಾಯಿಸಿ]- Valeri P. Yailenko, Aï Khanoum's delphic maxims and the formation of the Asoka dharma doctrine, Dialogues d'histoire ancienne, volume 16, number 1, 1990, 239-256