ವಿಷಯಕ್ಕೆ ಹೋಗು

ಗೂಗಲ್,ದೇವದುರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Googal ಗೂಗಲ್
Village
Country India
StateKarnataka
DistrictRaichur district
TalukDevadurga
Languages
 • OfficialKannada
Time zoneUTC+5:30 (IST)
Telephone codeKA 36

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಒಂದು ಹಳ್ಳಿ . ಈ ಊರು ಕೃಷ್ಣ ನದಿಯ ದಂಡೆಯ ಮೇಲಿದೆ, ಅಲ್ಲಮಪ್ರಭು ಅವರ ಒಂದು ಗುಹಾಂತರ ಗುಡಿಯಿದೆ ಇಲ್ಲಿ. ದೊಡ್ಡ ಕಲ್ಲಿನ ಗವಿ ಇದೆ. 'ಗುಹೆಕಲ್ಲು' ಎಂಬ ಪದ ಕಾಲ ಸರಿದಂತೆ 'ಗೂಗಲ್ಲು'ಆಗಿರಬಹುದೆಂಬುದು ಒಂದು ಅನಿಸಿಕೆ. ಹೊಳೆಯ ನೀರು ಕಲ್ಲುಗಳಿಗೆ ಅಪ್ಪಳಿಸಿದಾಗ ಸಂಗೀತದ ಸದ್ದು ಹೊಮ್ಮುತ್ತದೆ. ರಾಯಚೂರಿನಿಂದ ೫೬ ಕಿಮೀ ದೂರದಲ್ಲಿದೆ. ತಾಲೂಕು ಕೇಂದ್ರ ದಿಂದ ೨೫ ಕಿ.ಮೀ . ಇಲ್ಲಿ ಅಲ್ಲಮಪ್ರಭು ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.

ಮುಂಡರಗಿ :

[ಬದಲಾಯಿಸಿ]

ಈ ಗ್ರಾಮ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿ ನಲ್ಲಿ ಕಂಡುಬರುವ ಚಿಕ್ಕ ಗ್ರಾಮವಾಗಿದ್ದು

ಇಲ್ಲಿ ವಿಶೇಷತೆ ಏನೆಂದರೆ ಶ್ರೀ ಮುಂಡರಗಿ ಶಿವರಾಯ ದೇವಸ್ಥಾನ ಜಾತ್ರಾ ಮಹೋತ್ಸವವೇ ಆಕರ್ಷಣೀಯ ರಮಣೀಯ ದೃಶ್ಯವೇ ನೋಡಲು ಎರಡು ಕಣ್ಣು ಸಾಲದು ಇದು ದೇವದುರ್ಗ ತಾಲೂಕಿನಿಂದ 25 ಕಿ.ಮೀ ದೂರದಲ್ಲಿದ್ದು ಹಲವಾರು ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ .

ಐತಿಹಾಸಿಕ ಹಿನ್ನೆಲೆ :

ಶ್ರೀ ಶಿವರಾಯ ದೇವಸ್ಥಾನಕ್ಕೆ ನೂರಾರು ವರ್ಷಗಳ ಐತಿಹಾಸಿಕ ಇತಿಹಾಸವಿದ್ದು ಇದು ಮೂಲತಃ ಹುಲಿ ಗುಡ್ಡ ಗ್ರಾಮದಲ್ಲಿ ನೆಲೆಸಿದ ಶಿವರಾಯ ದೇವರನ್ನು ಶ್ರೀ ನರಸಣ್ಣ ತಾತನವರು 12ನೇ ಶತಮಾನದಲ್ಲಿ ಶ್ರೀ ಶಿವರಾಯ ದೇವರನ್ನು ವರಸಿಕೊಂಡು ಮುಂಡರಿಗೆ ಗ್ರಾಮಕ್ಕೆ ಕರೆ ತಂದರು ಈ ದೇವಸ್ಥಾನವು ಒಂದು ಗುಡ್ಡದ ಮೇಲೆ ನೆಲೆಸಿದ್ದು ಇದು ಪ್ರಸ್ತುತ ಶ್ರೀ ಮುಂಡರಗಿ ಶಿವರಾಯ ದೇವಸ್ಥಾನ ಎಂದು ಹೆಸರು ಪಡೆದಿದೆ

ಜಾತ್ರಾ ಮಹೋತ್ಸವ :

ಈ ಮುಂಡರಗಿ ಗ್ರಾಮದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಐದನೇ ಸೋಮವಾರದಂದು ಶ್ರೀ ಮುಂಡರಗಿ ಶಿವರಾಯ ದೇವಸ್ಥಾನ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ . ಈ ಜಾತ್ರೆಯಲ್ಲಿ ಸುತ್ತಲಿನ ಗ್ರಾಮಗಳಾದ ಸಮುದ್ರ, ಮಂಡಲಗುಡ್ಡ , ಬಿ ಗಣೇಕಲ್, ಗಣಜಲಿ ,ಮೂಕ್ಕನಾಳ , ಹೀಗೆ ಹಲವಾರು ಗ್ರಾಮಗಳಿಂದ ಶಿವನ ಭಕ್ತಾದಿಗಳು ಆಗಮಿಸಿ ಈ ಜಾತ್ರೆಯಲ್ಲೇ ಭಾಗವಹಿಸುತ್ತಾರೆ . ಭಾಗವಹಿಸಿ ಶಿವನಿಗೆ ಪ್ರಿಯವಾದ ಹಣ್ಣು ಕಾಯಿ ಹೂವು ಸಮರ್ಪಿಸಿ ಪ್ರಸಾದ ಸ್ವೀಕರಿಸುತ್ತಾರೆ , ಈ ಜಾತ್ರೆಯಲ್ಲಿ ಸುಮಾರು 20 ಅಲೆಮಾರಿ ಪೂಜಾರಿಗಳು ಹಾಗೂ 15000 ಹೆಚ್ಚು ಜನ ಸುತ್ತಲಿನ ಹಳ್ಳಿಗಳಿಂದ ಬಂದು ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಇಲ್ಲಿ ಪ್ರಸಿದ್ಧವಾದ ಶಿವನ ಮೂರ್ತಿಯು ಕಂಡು ಬರುತ್ತದೆ .

ಶ್ರಾವಣ ಮಾಸದ ನಿಯಮಗಳು:

1) ಈ ದಿನದಂದು ಇಲ್ಲಿಯ ಜನರು ಯಾವುದೇ ರೀತಿಯ ಮಾಂಸ ಸೇವನೆ ಮಾಡುವುದಿಲ್ಲ

2) ಇಲ್ಲಿಯ ಪುರುಷರು ಕ್ಷೌರವನ್ನು ಮಾಡಿಸಿಕೊಳ್ಳುವುದಿಲ್ಲ

3) ಪ್ರತಿ ಸೋಮವಾರದಂದು ಪ್ರತಿಯೊಂದು ಗ್ರಾಮದಲ್ಲಿ ವಿಶೇಷ ಆಚರಣೆಗಳು ಮಾಡಲಾಗುತ್ತದೆ

4) ಶಿವನ ಭಕ್ತಾದಿಗಳು ಸೋಮವಾರ ತಂದು ಭಕ್ತಿ ಮನೋಭಾವದಿಂದ ಪೂಜೆ ಸಲ್ಲಿಸುತ್ತಾರೆ

ಹೀಗೆ ಈ ಜಾತ್ರಾ ಮಹೋತ್ಸವ ನಮ್ಮ ದೇವದುರ್ಗ ತಾಲೂಕಿನಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ .