ಗೋಣುಕುರು
ಗೋಚರ

ಗೋಣುಕುರು ಎನ್ನುವುದು ಗಲಗ್ರಂಥಿಯ (ಟಾನ್ಸಿಲ್) ಹೊರವಲಯದಲ್ಲಿ ಆಗುವ ಹುಣ್ಣು (ಕ್ವಿನ್ಸಿ). ಇದರಲ್ಲಿ ಗಲಗ್ರಂಥಿಯ ಹಿಂಭಾಗದಲ್ಲಿ ಸೋಂಕಿನ ಕಾರಣದಿಂದಾಗಿ ಕೀವು ಶೇಖರಣೆಯಾಗುತ್ತದೆ.[೧] ಇದು 12 ವರ್ಷಗಳಿಂದ ಹಿಡಿದು 35 ವರ್ಷಗಳವರೆಗಿನವರಲ್ಲಿ ಗಂಡಸರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆ ಮತ್ತು ಚಳಿಗಾಲಗಳಲ್ಲಿ ಇದರ ಏರಿಕೆ ಹೆಚ್ಚು. ಈ ಕಾಯಿಲೆಯಿದ್ದ ರೋಗಿಗೆ ಬಾಯಿ ತೆರೆಯುವುದು ಕಷ್ಟ. ಏನನ್ನೂ ನುಂಗಲಾಗುವುದಿಲ್ಲ. ದೇಹದಲ್ಲಿ ಜ್ವರವೂ, ನೋವೂ ಇರುತ್ತವೆ. ಹುಣ್ಣಿರುವ ಸ್ಥಳದಲ್ಲಿ ಗಂಟಲಿನ ಒಳಭಾಗವೂ, ಕತ್ತಿನ ಹೊರಭಾಗವೂ ಊದಿಕೊಂಡಿರುತ್ತವೆ.[೨] ಕಿರುನಾಲಿಗೆ ಊದಿ ಅದರ ತುದಿ ಹುಣ್ಣಿನ ಕಡೆಗೆ ಬಾಗಿರುತ್ತದೆ. ಗಲಗ್ರಂಥಿಯ ಹೊರಮುಖದ ಪೊರೆಯಲ್ಲಿ ಕೀವು ತುಂಬಿರುವುದು. ಯುಕ್ತ ವೇಳೆಯಲ್ಲಿ ಔಷಧಿ ಹಾಗೂ ಶಸ್ತ್ರಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದಾದರೂ ಅವಜ್ಞೆ ಮಾಡಿದಲ್ಲಿ ಇದೊಂದು ಪ್ರಾಣಾಂತಿಕ ಬೇನೆಯಾಗಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ "Tonsillar Cellulitis and Tonsillar Abscess - Ear, Nose, and Throat Disorders - Merck Manuals Consumer Version". Merck Manuals Consumer Version. Archived from the original on 25 October 2017. Retrieved 24 October 2017.
- ↑ Galioto NJ (April 2017). "Peritonsillar Abscess". American Family Physician. 95 (8): 501–506. PMID 28409615.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: