ವಿಷಯಕ್ಕೆ ಹೋಗು

ಚರ್ಚೆಪುಟ:ಎತ್ತಿನಹೊಳೆಯ ತಿರುವು ಯೋಜನೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸತ್ಯದರ್ಶನ ಲೇಖನದ ಭಾಗ

[ಬದಲಾಯಿಸಿ]

ಎತ್ತಿನಹೊಳೆ ಯೋಜನೆ ಮತ್ತು ಪಶ್ಚಿಮ ಘಟ್ಟ

[ಬದಲಾಯಿಸಿ]
ನೇತ್ರಾವತಿಯ ಉಪನದಿಗಳೊಲ್ಲಿ ಒಂದಾದ ಎತ್ತಿನಹೊಳೆ ಯೋಜನೆಗೆ ಸ್ಥಳೀಯರಿಂದ ವ್ಯಾಪಕ ವಿರೋಧವಿದೆ.

ನೇತ್ರಾವತಿ ನದಿಯು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ನದಿ. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿರುವ ಸಂಸೆಯಲ್ಲಿ ಉಗಮವಾಗುವ ಈ ನದಿಯು ಮುಂದೆ ಉಪ್ಪಿನಂಗಡಿಯಲ್ಲಿ ಕುಮಾರಧಾರೆ ನದಿಯೊಂದಿಗೆ ಸಂಗಮವಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಕರ್ನಾಟಕ ರಾಜ್ಯದ ಪ್ರಮುಖ ತೀರ್ಥಸ್ಥಳಗಳಲ್ಲಿ ಒಂದಾದ ಧರ್ಮಸ್ಥಳದ ಮೂಲಕ ಈ ನದಿಯು ಹಾದು ಹೋಗುತ್ತದೆ.

ಎತ್ತಿನ ಹೊಳೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಯಾಗಿದೆ. ಮತ್ತೊಂದೆಡೆ ಕೇಂದ್ರ ಪರಿಸರಖಾತೆ ಸಚಿವ ವೀರಪ್ಪಮೊಯಿಲಿಯವರಿಂದ ಬೆಂಬಲದ ನುಡಿ. ಚಿಕ್ಕಬಳ್ಳಾಪುರದ ಜನರಿಗೆ ನೀರು ಕುಡಿಯುವ ನೀರು ಕೊಡುವ ಪಣ. ಆದರೆ ಎತ್ತಿನ ಹೊಳೆ ಯೋಜನೆಗೆ ಜಲಾನಯನ ಪ್ರದೇಶದವರ ಭಾರೀ ವಿರೋಧ.

ಯೋಜನೆಗೆ ವಿರೋಧದ ಕಾರಣ

[ಬದಲಾಯಿಸಿ]

ಎತ್ತಿನ ಹೊಳೆ ಯೋಜನೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನರೇ ವಿರೋಧ ಮಾಡುತ್ತಿದ್ದಾರೆ. ಪಶ್ಚಿಮಘಟ್ಟದ ಈ ಯೋಜನೆಯ ಸಾಧ್ಯತೆ ಏನು? ಸರ್ಕಾರ ಈ ಯೋಜನೆ ಬಗ್ಗೆ ಸಮಗ್ರ ಯೋಜನಾ ವರದಿಯಲ್ಲಿ ಹೇಳಿರುವುದೇನು? ಆದ್ರೆ ವಾಸ್ತವಾಂಶ ಏನು? ಎನ್ನುವುದರ ತುಲನಾತ್ಮಕ ಅಧ್ಯಯನ ಮಾಡಿ ಎತ್ತಿನಹೊಳೆ ಯೋಜನೆಯನ್ನು ತಿಳಿಯಲು ಸುವರ್ಣ ಸುದ್ದಿವಾಹಿನಿ ಅಲ್ಲಿಗೆ ಭೇಟಿಕೊಟ್ಟಿದೆ.

ಸತ್ಯದರ್ಶನ 1 - ಮಾರ್ಚಲ್ಲೇ ನೀರಿಲ್ಲ ಸಕಲೇಶಪುರದ ಕಚ್ಚಾ ರಸ್ತೆ ಹಾಗೂ ದಟ್ಟಾರಣ್ಯದೊಳಗಿನ ದಾರಿಯಲ್ಲಿ ಹತ್ತಿಪ್ಪತ್ತು ಕಿ.ಮೀ. ದೂರದಲ್ಲಿದೆ ಎತ್ತಿನ ಹೊಳೆ. ನಾವು ಅಲ್ಲಿಗೆ ಹೋದಾಗ ಈ ನದಿ ಅಚ್ಚರಿ ಎಂಬಂತೆ ಪುಟ್ಟ ತೊರೆಯಾಗಿ ಬಳಿ ಬಂದಾಗ ನಮಗೊಂದು ಅಚ್ಚರಿ ಕಾದಿತ್ತು. ಎತ್ತಿನ ಹೊಳೆ ಪುಟ್ಟ ತೊರೆಯಾಗಿ ಹರೀತ್ತಿತ್ತು. ಹಾಗಾದ್ರೆ ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಹೇಳಿದ 24 ಟಿಎಂಸಿ ನೀರು, ಸರ್ಕಾರ ತನ್ನ ಡಿಪಿಆರ್'ನಲ್ಲಿ ಹೇಳಿದ್ದ 22 ಟಿಎಂಸಿ ನೀರಿನ ಕತೆ ಬರೀ ಓಳಾ?

ನೇತ್ರಾವತಿಯ ಪ್ರಮುಖ ಎಂಟು ಉಪನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ನೀರೆತ್ತುವ ಈ ಯೋಜನೆ ಸರ್ಕಾರದ ಸುಳ್ಳು ಕತೆಯಷ್ಟೇ ಅಂತಾರೆ ಹೋರಾಟಾರರು. ಇಲ್ಲಿ 22 ಬಿಡಿ, ಆರೇಳು ಟಿ.ಎಂ.ಸಿ ನೀರೆತ್ತುವುದೇ ಕಷ್ಟ ಎನ್ನುವ ಅಂಶ ಅನೇಕ ಅಧ್ಯಯನಗಳಿಂದಲೂ ಬಹಿರಂಗಗೊಂಡಿದೆ.

ಸತ್ಯದರ್ಶನ 2 - ಕೃಷಿ, ಕೈಗಾರಿಕೆಗೂ ಬೇಕಂತೆ ನೀರು ಸರ್ಕಾರ ಎತ್ತಿನಹೊಳೆ ಯೋಜನೆ ಬಗ್ಗೆ ತಯಾರಿಸಿರುವ ಸಮಗ್ರ ವರದಿಯನ್ನ ಗಮನಿಸಿದಾಗ ಇದು ಬರೀ ಕುಡಿಯುವ ನೀರಿನ ಯೋಜನೆಯಲ್ಲ. ಇದರಲ್ಲಿ ಕೃಷಿ ಮತ್ತು ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡುವ ಹುನ್ನಾರವೂ ಅಡಗಿದೆ. ಇದು ಹೆಸರಿಗೆ ಮಾತ್ರ ಕೋಲಾರ, ಚಿಕ್ಕಬಳ್ಳಾಪುರ ಮಂದಿಗೆ ಕುಡಿಯುವ ನೀರು. ಆದರೆ, ಈ ಯೋಜನೆಯಲ್ಲಿ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ರಾಮನಗರ, ಕನಕಪುರ, ಬೆಂಗಳೂರಿಗೂ ನೀರು ಹರಿಸುತ್ತಾರಂತೆ.

ಇನ್ನೊಂದು ತಮಾಷೆ ನೋಡಿ ಈ ಡಿಪಿಆರ್ ಪ್ರಕಾರ ಕೋಲಾರ, ಚಿಕ್ಕಬಳ್ಳಾಪುರಕ್ಕೆ 2044 ಇಸವಿ ತನಕ ಸರಾಸರಿ 5 ಟಿಎಂಸಿ ನೀರು ಮಾತ್ರ ಸರಬರಾಜಾಗುತ್ತೆ. ಆದರೆ, ರಾಮನಗರ ಜಿಲ್ಲೆಯೊಂದಕ್ಕೆ 13 ಟಿಎಂಸಿಗೂ ಹೆಚ್ಚು ನೀರು ಹರಿಸುತ್ತಾರಂತೆ. ಅಂದ್ರೆ ಎತ್ತಿನಹೊಳೆ ಯೋಜನೆಯಿಂದ ಕೋಲಾರ ಮಂದಿಗೆ ನೀರು ಸಿಗಲ್ಲ, ಅವರಿಗೆ ಖಾಲಿ ಚೊಂಬೇ ಗತಿ.

ಇಲ್ಲಿರೋ ಅಪಾಯಕಾರಿ ಸೀಕ್ರೆಟ್ ಏನು ಗೊತ್ತಾ? ಈ ಯೋಜನೆ ಬರೀ ಎತ್ತಿನ ಹೊಳೆಗೆ ಸೀಮಿತವಾಗಲ್ಲ. ಇದು ನೇತ್ರಾವತಿ ತಿರುವು ಯೋಜನೆಗೆ ಪೀಠಿಕೆ. ಸರ್ಕಾರ ಜನರನ್ನು ಕತ್ತಲಲ್ಲಿಟ್ಟು ಭಾರೀ ದೊಡ್ಡ ಹುನ್ನಾರ ಮಾಡುತ್ತಿದೆ ಅನ್ನೋದು ಪರಿಸರವಾದಿಗಳ ಆರೋಪ. ಮಳೆ ಪ್ರಮಾಣವನ್ನು ನಿಖರವಾಗಿ ಅಳೆಯದೆ, ನೀರಿನ ಹರಿವಿನ ಅಧ್ಯಯನ ನಡೆಸದೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಎ.ಸಿ. ರೂಮಲ್ಲಿ ಕೂತು ತಪ್ಪು ತಪ್ಪು ಅಂಕಿ ಅಂಶಗಳನ್ನ ಹಾಕಿ ಡಿಪಿಆರ್ ರಚಿಸಲಾಗಿದೆ ಅನ್ನೋದು ಅನೇಕರ ಆರೋಪ.

ಸತ್ಯದರ್ಶನ 3 - ಪಶ್ಚಿಮಘಟ್ಟ ಅಪಾಯದಂಚಿನಲ್ಲಿದೆ!

ನಾವು ನಮ್ಮ ಅಧ್ಯಯನ ಮುಂದುವರಿಸಿದೆವು. ಅರಣ್ಯದೊಳಗೆ ಸಾಗುತ್ತಿದ್ದ ಹಾಗೆ ನಮಗೆ ಮತ್ತೊಂದು ಸತ್ಯ ದರ್ಶನವಾಯ್ತು ಅದೇನಂದ್ರೆ ನಮ್ಮ ಪಶ್ಚಿಮಘಟ್ಟ ಮನುಷ್ಯನ ಲಾಲಸೆಗೆ ಸಾಕಷ್ಟು ನಾಶ ಹೊಂದಿದೆ. ಹೊರನೋಟಕ್ಕೆ ದಟ್ಟಾರಣ್ಯದಂತೆ ಕಾಣೋ ಇದು ಒಳಗೆ ಬರಡಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಈ ಪ್ರದೇಶಗಳಲ್ಲಿ ಅರಣ್ಯ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಇನ್ನು ಎತ್ತಿನ ಹೊಳೆಯಂಥಾ ಬೃಹತ್ ಯೋಜನೆ ಜಾರಿಗೆ ಬಂದ್ರೆ ಇಲ್ಲಿ ಮತ್ತಷ್ಟು ಅರಣ್ಯ ನಾಶವಾಗುತ್ತೆ.

ಎಂಟು ಅಣೆಕಟ್ಟು, ನೂರಾರು ಕಿ.ಲೋ ಮೀಟರ್ ಉದ್ದದ ಪೈಪ್'ಲೈನ್, ಪವರ್'ಹೌಸ್, ವಿದ್ಯುತ್ ಸರಬರಾಜು ವ್ಯವಸ್ಥೆಗಳು, ರಸ್ತೆ ಹೀಗೆ ಹತ್ತಾರು ಕಾಮಗಾರಿಗಳು ನಡೆಯಬೇಕು. ಆಗ ಆಗುವ ಪಶ್ಚಿಮಘಟ್ಟದ ನಾಶ ನೆನೆದರೇ ಭಯ ಆಗುತ್ತೆ. ಈ ಯೋಜನೆಯ ದುರಂತ ಏನಂದ್ರೆ ಒಂದು ನೀರು ಟಿಎಂಸಿ ನೀರು ಹರಿಸಲು ಸರ್ಕಾರ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಸತ್ಯದರ್ಶನ 4 - ಪ್ರಾಣಿಗಳ ಮರಣಮೃದಂಗ ಈಗಾಗ್ಲೇ ಸಕಲೇಶಪುರದ ಕಾಡೊಳಗೆ ಪ್ರಾಣಿ ಮತ್ತು ಮಾನವ ಸಂಘರ್ಷ ತಾರಕಕ್ಕೇರಿದೆ. ಪ್ರತಿ ದಿನ ಆನೆಗಳು ನೀರು, ಆಹಾರ ಹುಡುಕಿಕೊಂಡು ನಾಡಿಗೆ ಧಾವಿಸುತ್ತಿವೆ. ಈ ಯೋಜನೆ ರೂಪಿಸುವಾಗ ನಮ್ಮ ಸರ್ಕಾರ ಈ ಬಗ್ಗೆ ಅರಣ್ಯ ಇಲಾಖೆಯ ಬಳಿ ಮಾಹಿತಿಯೇ ಪಡೆಯಲಿಲ್ಲವಾ? ಈ ಯೋಜನೆಯಲ್ಲಿ ನೇತ್ರಾವತಿಯ ಉಪನದಿಗಳಿಗೆ ಅಣೆಕಟ್ಟು ಕಟ್ಟಿ ಅದರ ಹರಿವನ್ನು ನಿಲ್ಲಿಸಲಾಗುತ್ತೆ. ಹಾಗಾದ್ರೆ ಈ ನದಿಯನ್ನೇ ನಂಬಿ ಬದುಕುತ್ತಿರೋ ಇಳಿಜಾರು ಭಾಗದ ಪ್ರಾಣಿ, ಸಸ್ಯ ಸಂಪತ್ತಿನ ಗತಿ ಏನು?

ಸತ್ಯದರ್ಶನ 5 - ಕರೆಂಟ್ ಎಲ್ಲಿಂದ ಬರುತ್ತೆ? ಈ ಯೋಜನೆ ಮುಂದಿರುವ ಇನ್ನೊಂದು ದೊಡ್ಡ ಸವಾಲೇನು ಗೊತ್ತಾ? ವಿದ್ಯುಚ್ಛಕ್ತಿ. ನಮ್ಮ ರಾಜ್ಯ ಮೊದಲೇ ವಿದ್ಯುಚ್ಛಕ್ತಿ ಕೊರತೆಯಿಂದ ಒದ್ದಾಡುತ್ತಿದೆ. ಸಕಲೇಶ್'ಪುರದ ಅದೆಷ್ಟೋ ಹಳ್ಳಿಗಳಿಗೆ ವಿದ್ಯುತ್ ಸರಬರಾಜೇ ಇಲ್ಲ. ಅಂಥದ್ದರಲ್ಲಿ ಈ ಯೋಜನೆಗೆ ಅಗತ್ಯ ಇರುವ 350ಕ್ಕು ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಎಲ್ಲಿಂದ ಬರುತ್ತೆ? ಅದಕ್ಕಾಗುವ ವೆಚ್ಚ ಎಷ್ಟು? ಈ ಬಗ್ಗೆ ಡಿಪಿಆರ್'ನಲ್ಲಿ ಯಾವ ಮಾಹಿತಿಯೂ ಇಲ್ಲ.

ಸತ್ಯದರ್ಶನ 6 - ಜನರ ವಿಶ್ವಾಸಕ್ಕೆ ಕೊಡಲಿ ಏಟು ನಾವು ಕಾಡೋಳಗೆ ಸುತ್ತಾಡಿ ಅನೇಕರನ್ನ ಮಾತನಾಡಿಸಿದೆವು. ಅಗ ಅವರು ಹೇಳಿದ ಕಟುಸತ್ಯ ಏನು ಗೊತ್ತಾ? ಸರ್ಕಾರದ ಯಾವ ಪ್ರತಿನಿಧಿಯೂ ಇಲ್ಲಿನ ಜನರನ್ನ ಭೇಟಿಯಾಗಿಲ್ಲ. ಈ ಯೋಜನೆ ಬಗ್ಗೆ ಮಾಹಿತಿ ನೀಡಿಲ್ಲ. ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿಲ್ಲ. ಅಲ್ಲದೆ ಈ ಯೋಜನೆಗೆ ಬಲಿಯಾಗುವ ಭೂಮಿ ಎಷ್ಟು? ಸಂತ್ರಸ್ತರಿಗೆ ಪರಿಹಾರ ಹೇಗೆ ನೀಡಲಾಗುತ್ತೆ ಎನ್ನುವುದರ ಬಗ್ಗೆ ಪ್ರಸ್ತಾಪವೇ ಇಲ್ಲ.

ಸತ್ಯದರ್ಶನ 7 - ಮೋಸ ಬರೀ ಮೋಸ ಎತ್ತಿನಹೊಳೆ ಯೋಜನೆ ಒಂದು ಸುಳ್ಳಿನ ಕಂತೆ. ಇದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಆಡಿದ ಬೃಹನ್ನಾಟಕ ಅಂತಾರೆ ಇವರು. ಈ ಯೋಜನೆ ಸಂಪೂರ್ಣವಾಗಿ ದೋಷಪೂರಿತವಾಗಿದೆ. ಓಟು ರಾಜಕೀಯಕ್ಕೆ ರಾಜಕಾರಣಿಗಳು ನೀರಿನ ಆಸೆ ತೋರಿಸಿ ಜನರ ಭಾವನೆಗಳ ಜೊತೆ ಚಲ್ಲಾಟ ಆಡ್ತಿದ್ದಾರೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಮೋಸ ನಡೆದಿದೆ. ಕಾನೂನಿನ ಉಲ್ಲಂಘನೆಯೂ ಆಗಿದೆ. ತಮಾಷೆ ನೋಡಿ... ಸರ್ಕಾರ ಒಂದು ಕಡೆ ಡಿಪಿಆರ್ ರೆಡಿ ಇದೆ ಅನ್ನುತ್ತೆ. ಇನ್ನೊಂದೆಡೆ ತರಾತುರಿಯಲ್ಲಿ ಸರ್ವೇ, ಇನ್ವೆಸ್ಟಿಗೇಷನ್'ಗೆ ಟೆಂಡರ್ ಕರೆಯುತ್ತೆ. ಯಾಕೆ?

ಸತ್ಯದರ್ಶನ 8 - ಗುತ್ತಿಗೆದಾರರ ಲಾಬಿ ವೀರಪ್ಪ ಮೊಯಿಲಿ ಈ ಯೋಜನೆಯನ್ನ ಜನರ ಋಣ ತೀರಿಸಲು ಅಲ್ಲ, ಗುತ್ತಿಗೆದಾರರ ಋಣ ತೀರಿಸಲು ರೂಪಿಸಿದ್ದು ಎಂಬ ಆರೋಪ ಇದೆ. ಪ್ರಮುಖ ವಿಚಾರ ಎಂದರೆ, ಇಂಥಾ ಭಾರೀ ಯೋಜನೆಯ ಟೆಂಡರ್ ಪ್ರಕ್ರಿಯೆಯಿಂದ ಎಲ್ ಆಂಡ್ ಟಿ ಅಂಥಾ ಪ್ರಮುಖ ಕಂಪೆನಿಗಳು ದೂರ ಉಳಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸತ್ಯದರ್ಶನ 9 - ಹಿನ್ನೆಲೆ ಇಲ್ಲದ ಇಐ ಟೆಕ್ನಾಲಜಿ ನಾವು ಕಂಡುಕೊಂಡ ಇನ್ನೊಂದು ಸತ್ಯ, ಈ ಯೋಜನೆಯ ಡಿಪಿಆರ್ ಸೇರಿದಂತೆ ನಾನಾ ವರದಿ ರಚಿಸಿದ್ದು ಇಐ ಟೆಕ್ನಾಲಜೀಸ್ ಅನ್ನೋ ಸಂಸ್ಥೆ. ಈ ಸಂಸ್ಥೆಯ ಹಿನ್ನೆಲೆ, ಅನುಭವ, ಯಶಸ್ಸು, ವಿಶ್ವಾಸಾರ್ಹತೆ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಈ ಮಹಾತ್ವಾಕಾಂಕ್ಷೆಯ, ಅತ್ಯಂತ ಸೂಕ್ಷ್ಮ ಹಾಗೂ 13 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಭಾರೀ ಯೋಜನೆ ರೂಪಿಸಲು ಸರ್ಕಾರ ಹೆಚ್ಚಿನ ಎಚ್ಚರಿಕೆ ವಹಿಸಬೇಕಿತ್ತು ಎಂಬ ಅಭಿಪ್ರಾಯವಿದೆ.

ವೇದ-ವಿಜ್ಞಾನ ಮತ್ತು ಇತಿಹಾಸಾಧಾರಿತ ನೈಜ ಚಿಂತನಾ ರೂಪುರೇಷೆ []

[ಬದಲಾಯಿಸಿ]

“ನೇತ್ರಾವತಿ ತಿರುವು ಯೋಜನೆ ಅಥವಾ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ”. ಇದು ಎಷ್ಟು ಪ್ರಸ್ತುತ? “ಗಂಗಾಸ್ನಾನಂ ತುಂಗಾಪಾನಂ” ಇದರ ಅರ್ಥವೇನು? ಗಂಗೆ, ಸರಸ್ವತಿ, ಋಮಣ್ವತೀ ನದಿ ತಿರುವಿನ ದುಷ್ಪರಿಣಾಮಗಳು. ಶೂರ, ವೀರ, ಧೀರ, ಉದಾರ, ವಾರ, ಮಾರ, ಕ್ಷೀರ, ಸಾರ, ಸಜ್ಜನವೆಂಬ ನವವಿಧ ಸಂಸ್ಕೃತಿ ನಾಶ!! ಹಾಳು ಹಂಪಿ, ಸಹ್ಯಾದ್ರಿ ತೊರೆಗಳ ಸಮಸ್ಯೆ ಏನು? ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗಗಳಿಗೆ ನೀರಿನ ವ್ಯವಸ್ಥೆ ಹೇಗೆ? ಈ ಲೇಖನದಲ್ಲಿ ಚಿಂತಿಸಲಾಗಿದೆ.

ನೇತ್ರಾವತಿ ಕಣಿವೆ, ನದೀ ಉಗಮ ಕಾರಣ, ಮೂಲ ಚಿಂತನೆ, ತತ್ ಬಾಧಿತ ಪರಿಣಾಮ, ಆ ಮೂಲಕ ಹುಟ್ಟಿದ ಸಂಸ್ಕೃತಿ, ಜೈವಿಕ ಸಂಪತ್ತು, ಅವುಗಳ ಉಳಿಕೆ, ಬಾಳಿಕೆ, ತಾಳಿಕೆ, ಉಪಯುಕ್ತತೆ ಅರಿತು ಸಂಶೋಧನೆಯಾಗಬೇಕು ಹಾಗೂ ಹಲವು ನೂರಾರು ಕಿ.ಮೀ. ನೀರು ಹರಿದು ನಂತರ ಜನರಿಗೆ ಬಳಕೆಯಾಗುವುದರಿಂದ. ಸಹಜ ಹರಿವು ಪಾತ್ರಗಳು ಹೇಗಿವೆ? ಕೃತಕ ಪಾತ್ರದಲ್ಲಿ ಹರಿದ ನದಿ ನಂತರ ಕುಡಿಯಲು ಅರ್ಹ ನೀರಾಗಿ ಉಳಿಯುವುದೇ? ಇವೆಲ್ಲಾ ಚಿಂತನೆ ಆಗಬೇಕಿದೆ. ಇವೆಲ್ಲಾ ಚಿಂತನೆ ನದೀಮೂಲ, ಅದರ ಸ್ವಾಭಾವಿಕ ಪಾತ್ರ, ಅದರಲ್ಲಿರುವ ವಿಶೇಷ ಗುಣ ಲಕ್ಷಣ, ಜೈವಿಕ ಉಪಯುಕ್ತತೆ ಅರಿತು ನಂತರ ಈಗಿನ ಯೋಜನಾ ಸ್ಥಳ, ಕೃತಕ ನದಿ ಹರಿವ ಪಾತ್ರ, ಅಲ್ಲಿನ ಭೂಲಕ್ಷಣ, ಮಣ್ಣಿನ ಗುಣಲಕ್ಷಣ, ಪರಿಣಾಮ ಇವುಗಳನ್ನೆಲ್ಲಾ ಆಧರಿಸಿ ಚಿಂತಿಸಬೇಕಿದೆ. ಅಲ್ಲಿಯ ಚಿಂತನೆಯ ರೂಪುರೇಷೆಗಳು ಹಾಗೂ ಇತರೆ ಸಾಧ್ಯತೆ ಬಾಧ್ಯತೆ ಕುರಿತು ಈ ಲೇಖನದಲ್ಲಿ ಮೂರು ವಿಧ ಚಿಂತನೆ ಮಾಡಲಾಗಿದೆ. ಅದನ್ನು ಓದಿ ನಂತರ ಚಿಂತನಾ ಶೀಲರನ್ನು ಸೇರಿಸಿ ಚಿಂತಿಸಿ ಎಂದು ವಿನಂತಿ.

  1. ಪೂರ್ವೋದಾಹರಣೆ
  2. ಮಣ್ಣಿನ ಗುಣಲಕ್ಷಣ
  3. ಹರಿವಿನ ಪಾತ್ರ ಪರಿಣಾಮ
  • ಈ ಲೇಖನದ ಶೈಲಿ ಮತ್ತು ಧ್ವನಿ ಬಗೆಗೆ ನಿರ್ವಾಹಕರು ವಿರೋಧಿಸಿ ತಿದ್ದುವ ಅಗತ್ಯದ ಟೆಂಪಲೇಟ್ ಹಾಕಿದ್ದರಿಂದ, ಅದನ್ನು ಚರ್ಚಾಪುಟಕ್ಕೆ ಹಾಕಿದೆ. ಮೊದಲ ಪ್ಯಾರಾಗಳಲ್ಲಿರುವ ನಿಂದನೆಯ ಪದಗಳನ್ನು ತೆಗೆದಿದೆ. Bschandrasgr (ಚರ್ಚೆ) ೧೫:೫೮, ೨೩ ಜೂನ್ ೨೦೧೬ (UTC)
ಈ ಮೇಲಿನ ಭಾಗವನ್ನು ಅನಾಮಿಕರು ಮುಖ್ಯ ಪುಟಕ್ಕೆ ಹಾಕಿದ್ದು ಅದರ ಔಚತ್ಯದ ಬಗೆಗೆ ಪ್ರಶ್ನೆ ಮಾಡಿದ ಟೆಂಪ್ಲೇಟು ಹಾಕಿದ್ದರಿಂದ ಈ ಚರ್ಚಾಪುಟಕ್ಕೆ ಸ್ಥಳಾಂತರಿಸಿದೆ. ಮೊದಲ ಪ್ಯಾರಾಗಳಲ್ಲಿದ್ದ ದೂಷಣೆಗಳನ್ನು ತೆಗೆದಿದೆ. Bschandrasgr (ಚರ್ಚೆ) ೧೫
೫೨, ೨೩ ಜೂನ್ ೨೦೧೬ (UTC)
  1. .ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು? http://veda-vijnana.blogspot.in/2015/11/blog-post_2.html