ವಿಷಯಕ್ಕೆ ಹೋಗು

ಎತ್ತಿನಹೊಳೆಯ ತಿರುವು ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(ಸತ್ಯ ದರ್ಶನ ಎಂಬ ಅಭಿಪ್ರಾಯದ-ವಿವಾದದ-ಭಾಗವನ್ನು ಚರ್ಚಾಪುಟಕ್ಕೆ ಹಾಕಿದೆ)

ನೇತ್ರಾವತಿ ನದಿ ತಿರುವು ಯೋಜನೆಯ ವಿವರ

[ಬದಲಾಯಿಸಿ]
  • ಎತ್ತಿನ ಹೊಳೆ ತಿರುವು ಯೋಜನೆಗೆ ನಡು ಅರಣ್ಯದಲ್ಲಿರುವ ಹೊಂಗಡ ಹಳ್ಳ, ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದೆ. ಅಲ್ಲಿಂದ ವಿದ್ಯುತ್ ಚಾಲಿತ ಬೃಹದಾಕಾರದ ಮೋಟರ್‌ಗಳನ್ನು ಅಳವಡಿಸಿ ದೊಡ್ಡಗಾತ್ರದ ಪೈಪ್‌ಗಳ ಮೂಲಕ ನೀರೆತ್ತಿ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯಲ್ಲಿ ನಿರ್ಮಿಸುವ ವಿಶಾಲವಾದ ವಿತರಣಾ ತೊಟ್ಟಿಗೆ ಬಿಡಲಾಗುವುದು. ಈ ಕಾರ್ಯಕ್ಕೆ ಬೃಹದಾಕಾರದ ಪೈಪ್ ಅಳವಡಿಸಲು ಹಾಗೂ ವಿದ್ಯುತ್ ಸರಬರಾಜಿಗೆ ಅರಣ್ಯದೊಳಗೆ 120 ಅಡಿ ಅಗಲದ ಜಾಗವನ್ನು ತೆರವುಗೊಳಿಸಲಾಗುವುದು. ಇದಕ್ಕೆ ಕನಿಷ್ಠ 60 ಕಿ. ಮೀ ವ್ಯಾಪ್ತಿಯಷ್ಟು ಅರಣ್ಯ ನಾಶ ಮಾಡಿ ಆ ಪ್ರದೇಶವನ್ನು ಸಮಗೊಳಿಸಿ ಭೂಮಿಯ ಒಳಭಾಗದಲ್ಲಿ ಕೊಳವೆಗಳನ್ನು ಹೂಳಲಾಗುವುದು. ಇದರಿಂದ 400 ಎಕರೆಗೂ ಮೀರಿದ ಅರಣ್ಯ ನಾಶವಾಗುವ ಸಾಧ್ಯತೆ ಇದೆ.
  • ಕರ್ನಾಟಕ ಸರಕಾರ "ನೇತ್ರಾವತಿ /ನೇತ್ರಾವತಿ ನದಿ ತಿರುವು ಯೋಜನೆ"ಗೆ "ಎತ್ತಿನಹೊಳೆ ಯೋಜನೆ" ಎಂಬ ಹೆಸರಿನಲ್ಲಿ ಅಡಿಪಾಯ ಹಾಕಿದೆ. "ಕುಡಿಯುವ ನೀರಿನ ಯೋಜನೆ" ಎಂಬ ಹೆಸರಿನಲ್ಲಿ ಲ್ಲಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾನೂನುಗಳಿಂದ ಪಾರಾಗಿ ಈ ಯೋಜನೆಯನ್ನು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನೀನಿನಿಗೆ (ಕರ್ನಾಟಕ ನೀರಾವರಿ ನಿಗಮ ನಿಯಮಿತ) ವಹಿಸಲಾಗಿದೆ. (ಕರ್ನಾಟಕದಲ್ಲಿ ಸಾಮಾನ್ಯವಾಗಿ ಕುಡಿಯುವ ನೀರಿನ ಯೋಜನೆಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಗತಗೊಳಿಸುತ್ತದೆ). ಕನೀನಿನಿ ಈ ಯೋಜನೆಯ ಸಾಧ್ಯತಾ ವರದಿಯನ್ನು ಇ. ಐ. ಟೆಕ್ನಾಲಜೀಸ್ ಎಂಬ ಖಾಸಗಿ ಸಂಸ್ಥೆಯಿಂದ ಮಾಡಿಸಿದೆ.
ಈಗಾಗಲೇ ಜೆಸಿಬಿ ಯಂತ್ರಗಳಿಂದ ದೊಡ್ಡ ದೊಡ್ಡ ಹೊಂಡಗಳನ್ನೇ ಮಾಡಲಾಗಿದ್ದು, ಈ ಹೊಂಡಕ್ಕೆ ಬಿದ್ದ ಕಾಡಾನೆ ಮೊದಲ ಬಲಿಯಾಗಿದೆ. ಈ ಯೋಜನೆಗೆ ಕಸ್ತೂರಿ ರಂಗನ್ ವರದಿ ಅಡ್ಡಿ ಬರುವುದಿಲ್ಲವೆ? ಎಂಬ ಪ್ರಶ್ನೆ ಇದೆ.

ಎತ್ತಿನ ಹೊಳೆ ಯೋಜನೆಗೆ ಸರ್ಕಾರದ ವಿವರ-ವರದಿ

[ಬದಲಾಯಿಸಿ]
ಈ ಯೋಜನೆ ಆರಂಭಿಸಲು ಸರ್ಕಾರ ನೀಡಿರುವ ಮಾಹಿತಿ ಹೀಗಿದೆ: ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ, ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸುವ ದೃಷ್ಟಿಯಿಂದ ಯಾವುದೇ ಅಂತರರಾಜ್ಯ ವಿವಾದಗಳಿಲ್ಲದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ ಪ್ರವಾಹದ ನೀರನ್ನು ಈ ಭಾಗದ ಪ್ರದೇಶಗಳಿಗೆ (ಹಾಸನ,ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ) ಪೂರೈಸಲು ನಿರ್ಧರಿಸಲಾಗಿದೆ.

ಯೋಜನೆಯ ವಿವರಗಳು

[ಬದಲಾಯಿಸಿ]
ಈ ಯೋಜನೆಯಲ್ಲಿ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆಗೆ 4, ಕಾಡುಮನೆಹೊಳೆಗೆ 2, ಕೇರಿಹೊಳೆಗೆ 1, ಹೊಂಗಡಹಳ್ಳಕ್ಕೆ 1, ಒಟ್ಟು 8 ಬ್ಯಾರೇಜ್‌ಗಳನ್ನು ನಿರ್ಮಿಸಲಾಗುವುದು. ಈ ಬ್ಯಾರೇಜ್‌ಗಳಿಂದ ಎತ್ತುವ ನೀರನ್ನು ಹೆಚ್ಚಿನ ಭೂಸ್ವಾಧೀನವಾಗದಂತೆ ಎಚ್ಚರವಹಿಸಿ ಈಗಾಗಲೇ ಅಸ್ತಿತ್ವದಲ್ಲಿರುವ ಬಹುತೇಕ ರೈಲ್ವೆ ಮತ್ತು ರಸ್ತೆ ಮಾರ್ಗಗಳ ಪಕ್ಕದಲ್ಲಿಯೇ ಸಮನಾಂತರವಾಗಿ ಭೂಮಿಯೊಳಗೆ ಹೂತು ಹಾಕಲಾಗುವ ಪೈಪ್‌ಗಳ ಮುಖಾಂತರ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯ ವಿತರಣಾ ತೊಟ್ಟಿಗೆ ನೀರನ್ನು ಕೊಂಡೊಯ್ಯಲಾಗು:ಈ ಯೋಜನೆಯಲ್ಲಿ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆಗೆ 4, ಕಾಡುಮನೆಹೊಳೆಗೆ 2, ಕೇರಿಹೊಳೆಗೆ 1, ಹೊಂಗಡಹಳ್ಳಕ್ಕೆ 1, ಒಟ್ಟು 8 ಬ್ಯಾರೇಜ್‌ಗಳನ್ನು ನಿರ್ಮಿಸಲಾಗುವುದು. ಈ ಬ್ಯಾರೇಜ್‌ಗಳಿಂದ ಎತ್ತುವ ನೀರನ್ನು ಹೆಚ್ಚಿನ ಭೂಸ್ವಾಧೀನವಾಗದಂತೆ ಎಚ್ಚರವಹಿಸಿ ಈಗಾಗಲೇ ಅಸ್ತಿತ್ವದಲ್ಲಿರುವ ಬಹುತೇಕ ರೈಲ್ವೆ ಮತ್ತು ರಸ್ತೆ ಮಾರ್ಗಗಳ ಪಕ್ಕದಲ್ಲಿಯೇ ಸಮನಾಂತರವಾಗಿ ಭೂಮಿಯೊಳಗೆ ಹೂತು ಹಾಕಲಾಗುವ ಪೈಪ್‌ಗಳ ಮುಖಾಂತರ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯ ವಿತರಣಾ ತೊಟ್ಟಿಗೆ ನೀರನ್ನು ಕೊಂಡೊಯ್ಯಲಾಗುವುದು.
ಸುಮಾರು 274 ಕಿ.ಮೀ. ಉದ್ದದ (ಗುರುತ್ವ) ಕಾಲುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೊರಟಗೆರೆ ತಾಲ್ಲೂಕಿನ ಭೈರಗೊಂಡಲು ಗ್ರಾಮದ ಬಳಿ 5.78 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ವಾರ್ಷಿಕ 24.01 ಟಿ.ಎಂ.ಸಿ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸುವ ಎತ್ತಿನಹೊಳೆ ಯೋಜನೆಗೆ ರೂ 12912.36 ಕೋಟಿ ವೆಚ್ಚವಾ:ಸುಮಾರು 274 ಕಿ.ಮೀ. ಉದ್ದದ (ಗುರುತ್ವ) ಕಾಲುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೊರಟಗೆರೆ ತಾಲ್ಲೂಕಿನ ಭೈರಗೊಂಡಲು ಗ್ರಾಮದ ಬಳಿ 5.78 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ವಾರ್ಷಿಕ 24.01 ಟಿ.ಎಂ.ಸಿ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸುವ ಎತ್ತಿನಹೊಳೆ ಯೋಜನೆಗೆ ರೂ 12912.36 ಕೋಟಿ ವೆಚ್ಚವಾಗಲಿದೆ.
ಈ ಯೋಜನೆಯ ಏತಕಾಮಗಾರಿಗಳಿಗೆ ಮೊದಲನೆ ಹಂತವಾಗಿ ಒಟ್ಟು 235.65 ಹೆಕ್ಟೇರ್ ಭೂಮಿ ಅವಶ್ಯವಿದೆ. ಎರಡನೇ ಹಂತದ ಕಾಮಗಾರಿಗೆ 4900 ಹೆಕ್ಟೇರ್ ಭೂಮಿ ಅವಶ್ಯವಿದೆ. ಯೋಜನೆಯಿಂದ ಸುಮಾರು 68.35ಲಕ್ಷ ಜನ ಪ್ರಯೋಜನ ಪಡೆಯಲಿದ್ದಾರೆ. ಏತ ಕಾಮಗಾರಿಗೆ ಒಟ್ಟು 274.86 ಮೆಗಾ ವ್ಯಾಟ್ ವಿದ್ಯುತ್ತಿನ ಅವಶ್ಯವಿದೆ.

ತಜ್ಞರ ಅಭಿಪ್ರಾಯ

[ಬದಲಾಯಿಸಿ]

ಕೃಷಿ ಹೆಸರಿನಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದು, ಹತ್ತಾರು ನಗರಗಳಿಗೆ ಕುಡಿಯುವ ನೀರಿನ ಜೊತೆಗೆ ಕೃಷಿಗೂ ನೀರು ಒದಗಿಸಲಾಗುವುದೆಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ರಾಜ್ಯದ ಹಾಗೂ ದೇಶದ ಶೇ 65 ಭಾಗ ಒಣ ಭೂಮಿ ಬೇಸಾಯ ಮಾಡಲಾಗುತ್ತಿದೆ. ನೀರಾವರಿ (ನಾಲಾನೀರು) ಆಶ್ರಯಿಸಿ ಬೆಳೆ ಬೆಳೆಯುತ್ತಿರುವುದರಿಂದ ಕೃಷಿಯ ವೈವಿಧ್ಯ ನಾಶವಾಗಿದೆ. ಮಂಡ್ಯ ಭಾಗದಲ್ಲಿ ನಾಲಾನೀರು ಬರುವ ಮೊದಲು ಹತ್ತಾರು ನಮೂನೆಯ ಬೆಳೆ ಬೆಳೆಯಲಾಗುತ್ತಿತ್ತು. ಈಗ ಕೇವಲ ಭತ್ತ, ಕಬ್ಬು ಬೆಳೆಗೆ ಸೀಮಿತವಾಗಿದೆ. ಅಣೆಕಟ್ಟೆಯ ನೀರಿಂದ ಬೆಳೆಯುತ್ತಿರುವ ಬೆಳೆ ಕಬ್ಬು, ಅಲ್ಲಿನ ಸಕ್ಕರೆ ಕಾರ್ಖಾನೆಗಳೆಲ್ಲಾ ಬಂಡವಾಳಶಾಹಿಗಳದ್ದು. ಕಬ್ಬಿನ ಉಳಿದ ಭಾಗದಿಂದ ತಯಾರಾಗುವ ಮದ್ಯವನ್ನು ತಯಾರಿಸುವ ಘಟಕಗಳೂ ರಾಜಕಾರಣಿಗಳ ಮತ್ತು ಬಂಡವಾಳಶಾಹಿಗಳ ಅಧೀನದಲ್ಲಿವೆ. ಅಂತ್ಯದಲ್ಲಿ ಬಂಡವಾಳಶಾಹಿಗಳಿಗೆ ಲಾಭವೆಂದು ಹೇಳುತ್ತಾರೆ.

ಆಹಾರ ತಜ್ಞರಾದ ಕೆ.ಸಿ. ರಘು ಅಭಿಪ್ರಾಯ

[ಬದಲಾಯಿಸಿ]

ದೇಶಕ್ಕೆ ಯಥೇಚ್ಛವಾಗಿ ಬೇಕಿರುವ ಎಣ್ಣೆ ಕಾಳು, ಬೇಳೆ, ಕಿರುಧಾನ್ಯಗಳನ್ನು ಬೆಳೆಯುತ್ತಿರುವುದು ಒಣ ಭೂಮಿಯಲ್ಲಿ. ಎಣ್ಣೆ ಕಾಳುಗಳನ್ನು ವಿದೇಶಗಳಿಂದ ತರಿಸಿಕೊಳ್ಳಲು ಲಕ್ಷಾಂತರ ಕೋಟಿ ಹಣವನ್ನು ಪ್ರತಿ ವರ್ಷ ವ್ಯಯ ಮಾಡಲಾಗುತ್ತಿದೆ. ನದಿ ತಿರುವು, ಅಣೆಕಟ್ಟೆ, ನಾಲಾಗಳಿಂದ ಕೃಷಿಯಲ್ಲಿನ ವಿವಿಧತೆಯನ್ನು ಕೊಲೆ ಮಾಡಿದಂತಾಗುತ್ತದೆ. ಇವುಗಳನ್ನು ನಿರ್ಮಿಸುವ ಬದಲು ಕಿರುಧಾನ್ಯ ಬೆಳೆಗಳಿಗೆ ಉತ್ತೇಜನ ನೀಡಿದರೆ ಸಾಕು. ರಾಜ್ಯದ ರೈತರ ಬದುಕು ಹಸನಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಮಳೆನೀರು ಸಂಗ್ರಹ ಯೋಜನೆಯನ್ನು ಕಡ್ಡಾಯಗೊಳಿಸಿ ಬೋಳು ಗುಡ್ಡಗಳಲ್ಲಿ ಗಿಡ ಮರಗಳನ್ನು ಬೆಳೆಸಿದರೆ ಬರಗಾಲ ಹತ್ತಿರ ಸುಳಿಯದು.

ಪ್ರತಿಕೂಲ ಪರಿಣಾಮಗಳು

[ಬದಲಾಯಿಸಿ]

ಯೋಜನೆಯಿಂದಾಗಿ ನೂರಾರು ಕಾಫಿ ಬೆಳೆಗಾರರು ನಿರಾಶ್ರಿತರಾಗಲಿದ್ದಾರೆ. ಅಲ್ಲದೇ ಇಲ್ಲಿನ ಕೃಷಿಕರ ಜಮೀನಿಗೆ ಉತ್ತಮ ಪರಿಹಾರ ನೀಡಿದರೆ ಊರನ್ನೇ ಬಿಟ್ಟು ಹೋಗಲು ಸಜ್ಜಾಗಿದ್ದಾರೆ. ಮಲೆನಾಡು ಭಾಗದ, ಅದರಲ್ಲೂ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು, ಸರ್ಕಾರಿ ಸೌಲಭ್ಯ ವಂಚಿತ ತಾಲ್ಲೂಕೆಂದರೆ ತಪ್ಪಿಲ್ಲ. ಹಳ್ಳಿಗಳಲ್ಲಿ ಉತ್ತಮ ರಸ್ತೆಗಳಿಲ್ಲ, ನೀರಿನ ಸೌಲಭ್ಯವಿಲ್ಲ, ಸರಿಯಾದ ವಿದ್ಯುತ್ ಸಂಪರ್ಕವಿಲ್ಲ, ಒತ್ತುವರಿ ಸಮಸ್ಯೆ, ಅಧಿಕ ಮಳೆಯಿಂದಾಗಿ ಪ್ರತಿ ವರ್ಷ ಬೆಳೆಹಾನಿ, ಬೆಲೆಕುಸಿತ, ಕಾರ್ಮಿಕರ ಸಮಸ್ಯೆ, ನಕ್ಸಲ್ ಹಾವಳಿ, ಕಾಡಿನಲ್ಲಿ ನಡೆಯುವ ಬೃಹತ್ ಯೋಜನೆಗಳಿಂದ ಪ್ರಾಣಿಗಳು ಕಾಡು ತೊರೆದು ಕೃಷಿ ಭೂಮಿಗೆ ದಾಳಿ, ಸರ್ಕಾರಿ ಅಧಿಕಾರಿಗಳ ದಬ್ಬಾಳಿಕೆ ಹೀಗೆ ಹತ್ತಾರು ಸಮಸ್ಯೆಗಳಲ್ಲಿ ಗ್ರಾಮಸ್ಥರು ದಿನದೂಡುತ್ತಿದ್ದಾರೆ. ತಮ್ಮ ಜಮೀನಿಗೆ ಸೂಕ್ತ ಬೆಲೆ ನೀಡಿದರೆ ಮಲೆನಾಡು ತೊರೆದು ಹೊರ ಹೋಗಲು ತಯಾರಾಗಿರುವ ಒಂದು ವರ್ಗವಿದ್ದರೆ, ನದಿ ತಿರುವು ಯೋಜನೆಯನ್ನು ವಿರೋಧಿಸುವ ಇನ್ನೊಂದು ವರ್ಗವೂ ಪ್ರತಿಭಟನೆಗೆ ಸಜ್ಜಾಗಿದೆ.

ಜಲ ತಜ್ಞರ ಅಭಿಪ್ರಾಯ ಮತ್ತು ಅಸಮ್ಮತಿ

[ಬದಲಾಯಿಸಿ]

ಅರಣ್ಯ ನಾಶಗೊಳಿಸಿ ಎತ್ತಿನಹೊಳೆ ಯೋಜನೆ ರೂಪುಗೊಳಿಸುವುದು ಪಶ್ಚಿಮಘಟ್ಟಕ್ಕೇ ಮಾರಕ ಎನ್ನುತ್ತಾರೆ ಜಲತಜ್ಞರಾದ ಅಯ್ಯಪ್ಪ ಮಸಗಿ. ಈ ಹಿಂದೆ ಕುದುರೆಮುಖ ಅರಣ್ಯದಲ್ಲಿ ಗಣಿಗಾರಿಕೆ ಮಾಡಿದ್ದರಿಂದ ಹತ್ತು ವರ್ಷಗಳ ಕಾಲ ಆ ಭಾಗದಲ್ಲಿ ಸರಿಯಾಗಿ ಮಳೆಯಾಗಲಿಲ್ಲ. ಲಿಂಗನ ಮಕ್ಕಿ ಜಲಾಶಯ ತುಂಬಲಿಲ್ಲ. ನೀರಿನ ಅಭಾವ ನೀಗಿಸುವುದು ಅವಶ್ಯ. ಆದರೆ ಪರಿಸರವನ್ನು ನಾಶಮಾಡಿ ಕಾರ್ಯಸಾಧಿಸುವುದು ನಾಡಿಗೇ ಒಳಿತಲ್ಲ. ಇದರ ಪರಿಣಾಮ ಮುಂದೊಂದು ದಿನ ಮಲೆನಾಡಿಗರಿಗೇ ಮಾರಕವಾಗಲಿದೆ ಎನ್ನುತ್ತಾರೆ ಅವರು.

ಕರ್ನಾಟಕದ ಪೂರ್ವದ ಜಿಲ್ಲೆಗಳ ಬರ ಪರಿಸ್ಥಿತಿ

[ಬದಲಾಯಿಸಿ]
ಪರಿಸರ ಪ್ರಿಯರಾದ ರಂಗನಾಥ ಗೌಡರ ಅಭಿಪ್ರಾಯ:
ಕೋಲಾರ, ಮುಳಬಾಗಿಲು ಪ್ರದೇಶದಲ್ಲಿನ ಕುಡಿಯುವ ನೀರಿನ ಅಭಾವ ಕಂಡರೆ ಯಾವುದೇ ಯೋಜನೆಗಳನ್ನು ವಿರೋಧಿಸಲು ಮನಸ್ಸಾಗುವುದಿಲ್ಲ. ಮಳೆಯ ಅಭಾವದಿಂದಾಗಿ ಕೆರೆ, ಕಟ್ಟೆಗಳು, ಸಾವಿರಾರು ಕೊಳವೆ ಬಾವಿಗಳು ಬತ್ತಿದ್ದರಿಂದ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆದರೆ ಎತ್ತಿನಹೊಳೆ ಯೋಜನೆಯ ವರದಿಯಲ್ಲಿ ಕಾಣಿಸಿರುವಂತೆ ಹರಿಯುವ ಹಳ್ಳಗಳಿಗೆ ಒಡ್ಡುಗಳನ್ನು ನಿರ್ಮಿಸಿ ಮೋಟರ್‌ಗಳ ಸಹಾಯದಿಂದ ಆ ನೀರನ್ನು ಮೇಲೆತ್ತಿ ನೂರಾರು ಮೈಲು ದೂರಕ್ಕೆ ಸಾಗಿಸುವ ಯೋಜನೆ ಫಲ ನೀಡದು. ಕಾಡು ಕಡಿದು ನೀರೆತ್ತುವುದು ಅದೆಷ್ಟು ಸರಿ. ಈ ಯೋಜನೆ ಈಗ ಕಾರ್ಯಗತಗೊಂಡರೂ ಮುಂದಿನ ದಿನಗಳಲ್ಲಿ ಲೋಪದೋಷಗಳೇ ಹೆಚ್ಚಾಗಿ ವಿಫಲವಾಗುವ ಸಾಧ್ಯತೆಗಳಿವೆ
ಈ ಭಾಗಗಳಲ್ಲಿ ಜಲಮಟ್ಟ ಕುಗ್ಗಲು ಮುಖ್ಯ ಕಾರಣ ಸಾವಿರಾರು ಎಕರೆಯಲ್ಲಿ ಬೆಳೆದಿರುವ ನೀಲಗಿರಿ ತೋಪುಗಳು. ಇದಕ್ಕೆ ಸವಾಲೆಂಬಂತೆ ಆದಿಚುಂಚನಗಿರಿ ಸಂಸ್ಥಾನದ ಕೋಲಾರ ಸಮೀಪದ ನಲವತ್ತು ಎಕರೆ ಬರಡು ಭೂಮಿಯಲ್ಲಿ ದೇಶೀಯ ಮರಗಳಾದ ನೇರಳೆ, ಹಲಸು, ನೆಲ್ಲಿ, ಹೊಂಗೆಯಂತಹ ಸಾವಿರಾರು ಮರಗಳನ್ನು ಬೆಳೆಸಲು ಶ್ರಮವಹಿಸಿರುವ ರಂಗನಾಥಗೌಡರ ತಂಡ ಮಳೆನೀರು ಹಿಡಿದಿಟ್ಟುಕೊಳ್ಳುವ ಕೆಲಸವನ್ನೂ ಮಾಡಿ ಅಂತರ್ಜಲಮಟ್ಟ ಕಾಯ್ದುಕೊಳ್ಳುವುದರಲ್ಲಿ ನಿರತರಾಗಿದ್ದಾರೆ.ಅದನ್ನು ಅನುಸರಿಸಬೇಕೆಂಬುದು ಪರಿಸರ ಕಾಳಜಿಯುಳ್ಳವರ ಅಭಿಪ್ರಾಯ.

ಯೋಜನೆಯ ಯಶಸ್ಸಿನ ಬಗೆಗೆ ಸಂಶಯಗಳು

[ಬದಲಾಯಿಸಿ]
ನೀರಿನ ಲಭ್ಯತೆಯ ಬಗೆಗೆ ನಿಖರತೆ ಮತ್ತು ನಿರೀಕ್ಷೆಯ ಮಟ್ಟದಲ್ಲಿ ಇಲ್ಲ.
  • ಕನೀನಿನಿ(ಕರ್ನಾಟಕ ನೀರಾವರಿ ನಿಗಮ ನಿಯಮಿತ) ಎತ್ತಿನಹೊಳೆ ಯೋಜನೆಯ ಕುರಿತಂತೆ ಯೋಜನಾವರದಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಿತು. ಸರಕಾರ ಆ ವರದಿಯನ್ನು ಅಧ್ಯಯನ ಮಾಡಿ ವರದಿಯ ಮೇಲೆ ವರದಿ ಕೊಡುವಂತೆ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರರಿಗೆ ಸೂಚಿಸಿತು. ಅವರು ಅದನ್ನು ಸಂಬಂಧಿಸಿದ ಹಲವು ವಿಭಾಗಗಳಿಗೆ ಕಳಿಸಿ, ಆ ವಿಭಾಗಗಳ ವರದಿ ಕೇಳಿದರು. ಅವುಗಳ ಪೈಕಿ ಒಂದು ವಿಭಾಗವೇ ಜಲವಿಜ್ಞಾನ ಘಟಕ. ಈ ವಿಭಾಗವು ಯೋಜನಾಪ್ರದೇಶದಲ್ಲಿ ದೊರೆಯಬಹುದಾದ ನೀರಿನ ಪ್ರಮಾಣವನ್ನು ತನ್ನದೇ ಮಳೆಯ ಅಂಕಿಅಂಶಗಳ ಮೇಲೆ ತನ್ನದೇ ಕ್ರಮದಲ್ಲಿ ಲೆಕ್ಕ ಮಾಡಿ ಪ್ರತ್ಯೇಕವಾದ ಒಂದು ವರದಿಯನ್ನೇ 21-06-2012 ರಂದು ಮುಖ್ಯ ಎಂಜಿನಿಯರರಿಗೆ ಒಪ್ಪಿಸಿತು.

ಈ ವರದಿಯಲ್ಲಿ ಸರಕಾರವು ಪರಿಗಣಿಸಲೇ ಬೇಕಾದ ಹಲವು ಅಂಶಗಳಿವೆ:

1. ಜಲವಿಜ್ಞಾನ ಘಟಕದ ಅಂಕಿ ಅಂಶಗಳ ಪ್ರಕಾರ ಎತ್ತಿನಹೊಳೆ ಯೋಜನಾಪ್ರದೇಶದಲ್ಲಿ ಬೀಳುವ ಮಳೆಯ ಸರಾಸರಿ ಪ್ರಮಾಣ ಕೇವಲ 3072 ಮಿ.ಮೀ.! ಲಭ್ಯನೀರಿನ ಪ್ರಮಾಣ ಮಳೆಯನ್ನವಲಂಬಿಸಿದರೆ ಕೇವಲ 15.019 ಟಿಎಂಸಿ!ಆದರೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆಯ ಪ್ರಕಾರ ನೀರಿನ ಲಭ್ಯತೆ 24.01 ಟಿಎಂಸಿ. ಇದು ಅಲಭ್ಯ ಆದ್ದರಿಂದ ಈ ಯೋಜನೆ ವಿಫಲವಾಗಬಹುದು ಎಂಬ ಅಭಿಪ್ರಾಯವಿದೆ..
  • ೨.ಮೂರು ಖಾಸಗಿ ಪ್ಲಾಂಟರುಗಳ ಮಾಪನದ ಅಂಕಿಅಂಶಗಳು ವರದಿಯಲ್ಲಿ ಇವೆ.
  • 1. ಶ್ರೀ ಡಿ.ಪಿ. ಕಲ್ಲಪ್ಪನವರ ಕೊಟ್ಟನಹಳ್ಳಿ ಖಾಸಗಿ ಮಳೆಮಾಪನ ಕೇಂದ್ರ - 6030 ಮಿಮೀ
  • 2. ಶ್ರೀ ಸಿದ್ದೇಗೌಡರ ಹೊಂಗಡಹಳ್ಳ ಮಳೆಮಾಪನ ಕೇಂದ್ರ - 6060 ಮಿಮೀ
  • 3.ಕಾಡಮನೆ ಕಾಫಿ ಎಸ್ಟೇಟ್ ಕಂಪೆನಿಯ ಮಳೆಮಾಪನ ಕೇಂದ್ರ. - 6540 ಮಿಮೀ
  • ಆದರೆ ಕೈಬಿಟ್ಟ-
4 ನೇಕೇಂದ್ರ- ಶ್ರೀ ಪಿ.ಬಿ. ಜಾನ್ ಎಂಬುವರ ಹೆಗ್ಗದ್ದೆ ಎಸ್ಟೇಟಿನ ಖಾಸಗಿ ಮಳೆಮಾಪನ ಕೇಂದ್ರ.ಈ ನಾಲ್ಕನೇ ಕೇಂದ್ರದಲ್ಲಿ ದಾಖಲಾಗಿರುವುದು 4150 ಮಿಮೀ ಮಳೆ ಮಾತ್ರ. ಕನೀನಿನಿ ಈ ಕೇಂದ್ರವನ್ನು ಬಿಟ್ಟುಬಿಡಲು ಇದೇ ಕಾರಣ.
2. ಘಟಕವು pro rata ಆಧಾರದಲ್ಲಿಯೂ ಲಭ್ಯನೀರಿನ ಪ್ರಮಾಣವನ್ನು ಲೆಕ್ಕ ಹಾಕಿದೆ. ಕೇಂದ್ರೀಯ ಜಲ ಆಯೋಗದವರು (CWC-Central water commission) ಕಳೆದ 40 ವರ್ಷಗಳಿಂದ ಬಂಟ್ವಾಳದ ಸಮೀಪ ನೇತ್ರಾವತಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಅಳೆಯುತ್ತಿದ್ದಾರೆ. prorata ಆಧಾರದ ಲೆಕ್ಕಾಚಾರ ಇದರ ಅಂಕಿಸಂಖ್ಯೆಗಳನ್ನು ಅವಲಂಬಿಸಿದೆ. ಇದರ ಪ್ರಕಾರ ಲಭ್ಯನೀರಿನ ಪ್ರಮಾಣ: 21.856 ಟಿಎಂಸಿ.
ಈ ಲೆಕ್ಕಾಚಾರವನ್ನು ನೀಡಿದನಂತರ ಜಲವಿಜ್ಞಾನಘಟಕದ ಅಧೀಕ್ಷಕ ಎಂಜಿನಿಯರರು ತನ್ನ ವರದಿಯ ಕೊನೆಯ ಪ್ಯಾರಾವನ್ನು ಹೀಗೆ ಮುಗಿಸುತ್ತಾರೆ: "ಹೀಗೆ ಮೇಲೆ ಲೆಕ್ಕಾಚಾರ ಮಾಡಿದ ಇಳುವರಿಯನ್ನು ಉದ್ದೇಶಿತ ಯೋಜನೆಗೆ ಬಳಸುವ ಮುನ್ನ ಸದರಿ ಯೋಜನೆಗಳ ಮೇಲ್ಭಾಗ ಮತ್ತು ಕೆಳಭಾಗದ ಬಳಕೆ / ಅವಶ್ಯಕತೆಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ."
ಮಳೆಯ ಪ್ರಮಾಣದ ಗೊಂದಲ: ಕೆಲವು ಅಂಕಿಅಂಶಗಳು
  • 1. ಕನೀನಿನಿಯ ಭದ್ರಾ ಮೇಲ್ದಂಡೆ ಯೋಜನಾವಲಯದ ಮುಖ್ಯ ಎಂಜಿನಿಯರ್ ದೆಹಲಿಗೆ ಬರೆದ ಪತ್ರದಲ್ಲಿ: 6500 ಮಿ.ಮೀ.
  • 2. ಕನೀನಿನಿಯ ಯೋಜನಾ ವರದಿಯಲ್ಲಿ: 6280 ಮಿ.ಮೀ
  • 3. ಕನೀನಿನಿಯ ತಪ್ಪು ಲೆಕ್ಕಾಚಾರವನ್ನು ತಿದ್ದಿದಾಗ: 6210 ಮಿ.ಮೀ
  • 4. ನಾಲ್ಕೂ ಖಾಸಗಿ ಮಳೆಮಾಪನ ಕೇಂದ್ರಗಳನ್ನು ಪರಿಗಣಿಸಿದಾಗ : 5695 ಮಿ.ಮೀ
  • 5. ಜಲಸಂಪನ್ಮೂಲ ಇಲಾಖೆಯ 22 ವರ್ಷಗಳ ಅಂಕಿಅಂಶದ ಸರಾಸರಿ: 3072 ಮಿ.ಮೀ.
  • 6. http://www.samsamwater.com/climate/ ಎಂಬ ಜಾಲತಾಣದ ಪ್ರಕಾರ ಸುಮಾರು 3000 ಮಿ.ಮೀ
  • ಆದ್ದರಿಂದ ಈಯೋಜನೆಯ ಸಫಲತೆಯ ಬಗೆಗೆ ಬಲವಾದ ಸಂಶಯ ಉದ್ಭವಿಸಿದೆ.ಇದು ರೂ 12912.36 ಕೋಟಿಯ ಯೋಜನೆ. ವ್ಯರ್ಥವಾದರೆ ದೊಡ್ಡ ನಷ್ಟ. ಬಯಲು ಸೀಮೆಗೆ ನೀರೂ ಇಲ್ಲ.

ಪರಿಸರ ವಾದಿಗಳ ಮತ್ತು ಸ್ಥಳೀಯರ ಆತಂಕ ಮತ್ತು ವಿರೋಧ

[ಬದಲಾಯಿಸಿ]
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಈಗಾ­ಗಲೇ ಶುರುವಾಗಿದೆ. ಸರ್ಕಾರ ಈ ವಿಷಯದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳದೆ, ಜನರ ಹಕ್ಕು ಹಾಗೂ ಕಾನೂನುಗಳನ್ನು ಗಾಳಿಗೆ ತೂರಿ, ಪರಿಸರ ನಾಶ ಮಾಡಿ, ಅನುಕೂಲಸಿಂಧು ರಾಜ­ಕಾರಣ­ಕ್ಕಾಗಿ ಯೋಜನೆಯನ್ನು ಆತುರಾತುರ­ವಾಗಿ ಕೈಗೆತ್ತಿಕೊಂಡಿದೆ ಎಂದು ಈ ಭಾಗದ ತಜ್ಞರು, ಪರಿಸರವಾದಿಗಳು ಹಾಗೂ ಬಹುತೇಕ ರೈತರ ದೂರು.
(ಪಶ್ಚಿಮಾಭಿಮುಖವಾಗಿ ಸುಮಾರು 80 ಕಿ.ಮೀ. ಉದ್ದ, 18 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತೀರ್ಣದ ಕಾಯ್ದಿರಿಸಿದ ದಟ್ಟ ಮಳೆ­ಕಾಡು­­ಗಳ ಗರ್ಭದಲ್ಲಿ ಎತ್ತಿನಹಳ್ಳ, ಮೂರು ಉಪ ಹೊಳೆಗಳು, ಕಾಡುಮನೆ ಹೊಳೆ, ಕೇರಿ­ಹೊಳೆ, ಹೊಂಗಡಹಳ್ಳ ಹರಿಯು­ತ್ತವೆ. ಇವುಗಳ ನೀರನ್ನು ಕೋಲಾರ, ತುಮಕೂರು, ಚಿಕ್ಕ­ಬಳ್ಳಾ­ಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸು­ವುದು ಈ ಯೋಜನೆಯ ಮುಖ್ಯ ಉದ್ದೇಶ.)
ಮಳೆ ಭರಿಸುವ ಮಳೆಕಾಡುಗಳೆಂದೇ ಗುರುತಿಸ­ಲಾ­ಗುವ ಪಶ್ಚಿಮಘಟ್ಟ ನಾಶ­ವಾದರೆ, ಮಳೆ ಕಡಿಮೆ­ಯಾಗಿ ಎತ್ತಿನಹಳ್ಳ ಹಾಗೂ ಇತರ ಎಲ್ಲ ಹಳ್ಳ­ಗಳಲ್ಲಿ ನೀರು ಇಲ್ಲವಾಗುತ್ತದೆ. ಆಗ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜು ಮಾಡುವುದಿರಲಿ, ಮಲೆನಾಡಿನಲ್ಲಿಯೇ ಕುಡಿ­ಯುವ ನೀರಿಗೆ ತತ್ವಾರ ಉಂಟಾಗುತ್ತದೆ ಎಂದು ಪ್ರತಿಪಾ­ದಿಸಿರುವ ರೈತರು ಮತ್ತು ಪರಿಸರವಾದಿಗಳು, ಈ ಯೋಜನೆ ಅವೈಜ್ಞಾನಿಕವಾಗಿದ್ದು ಪಶ್ಚಿಮಘಟ್ಟ­ವನ್ನು ಸರ್ವನಾಶ ಮಾಡುವುದರಿಂದ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಅನುಮತಿ ಇಲ್ಲ

[ಬದಲಾಯಿಸಿ]
  • ಪಶ್ಚಿಮಘಟ್ಟ ನಾಶ ಮಾಡುವ ಇಂತಹ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂಬುದನ್ನು ಮನಗಂಡ ರಾಜ್ಯ ಸರ್ಕಾರ ಈ ಯೋಜನೆಯ ಹೆಸರನ್ನೇ ಬದಲಾ­ಯಿಸಿದೆ. ಆರಂಭ­­ದಲ್ಲಿ ಸ್ಕೀಂ ಫಾರ್‌ ಡೈವರ್ಷನ್‌ ಆಫ್‌ ಫ್ಲಡ್‌ ವಾಟರ್‌ ಫ್ರಮ್‌ ಸಕಲೇಶಪುರ (ವೆಸ್ಟ್‌) ಟು ಕೋಲಾರ್‌/ಚಿಕ್ಕಬಳ್ಳಾಪುರ (ಇಸ್ಟ್‌) ಎಂಬ ಹೆಸರನ್ನು ಯೋಜನೆಗೆ ಇಡಲಾಗಿತ್ತು.
  • ನಂತರ ಎತ್ತಿನಹೊಳೆ ಯೋಜನೆ ಎಂದು ಎರಡನೆ ಬಾರಿ ಹೆಸರು ಬದಲಾವಣೆ ಮಾಡ­ಲಾಯಿತು. ಕೇಂದ್ರದಿಂದ ಪರಿಸರ ಮತ್ತು ಸಾಮಾಜಿಕ ವರದಿ ಅನುಮತಿ ತಪ್ಪಿಸಿಕೊಳ್ಳುವುದಕ್ಕಾಗಿ, ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ’ ಎಂದು ಹೆಸರು ಬದಲಾವಣೆ ಮಾಡಿ­ಕೊಂಡಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌­ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
  • 10 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಭೂಮಿಗೆ ನೀರು ಒದಗಿಸುವ ಯಾವುದೇ ನೀರಾವರಿ ಯೋಜನೆಗೆ ಕೇಂದ್ರದ ಅನುಮತಿ ಬೇಕು. ಆದರೆ, ಈ ಯೋಜನೆಯಲ್ಲಿ ಸುಮಾರು 28 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶ ಇದೆ ಎಂದು ಕರ್ನಾಟಕ ನೀರಾವರಿ ನಿಗಮ ಯೋಜನಾ ವರದಿಯಲ್ಲಿ ಹೇಳಿದೆ. ಕಾಲುವೆಯಲ್ಲಿ ನೀರು ಸರಬರಾಜು ಮಾಡುವಾಗ ಸುಮಾರು 100 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತೇವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. 50 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡಬೇಕಾ­ದರೂ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಅನುಮತಿ ಅಗತ್ಯ.

ನ್ಯಾಯಾಲಯಕ್ಕೆ

[ಬದಲಾಯಿಸಿ]

‘ಎನ್ವಿರಾನ್‌ಮೆಂಟಲ್‌ ಇಂಪ್ಯಾಕ್ಟ್‌ ಅಸೆಸ್‌­ಮೆಂಟ್‌ ನೋಟಿಫಿಕೇಷನ್– 2006’ ಪ್ರಕಾರ, ಮೇಲೆ ಉಲ್ಲೇಖಿಸಿದ ಎಲ್ಲ ಅನುಮತಿ ಪಡೆಯ­ಬೇಕು. ಯೋಜನೆಯನ್ನು ಅರಣ್ಯ ಪ್ರದೇಶ­ದೊಳಗೆ ಅನು­ಷ್ಠಾನ ಮಾಡುವುದರಿಂದ ಅರಣ್ಯ ಇಲಾಖೆಯ ಅನುಮತಿಯೂ ಬೇಕು. 2009ರ ತಿದ್ದು­ಪಡಿಯಂತೆ ಕುಡಿಯುವ ನೀರಿನ ಯೋಜನೆ­ಯಾದರೆ ಅನುಮತಿ ಬೇಡ ಎಂಬುದನ್ನೇ ಮುಂದಿ­ಟ್ಟು­­ಕೊಂಡು, ವನ್ಯಜೀವಿ ಸಂರಕ್ಷಣಾ ಕಾಯಿದೆ, ಅರಣ್ಯ ಕಾಯ್ದೆ, ಜೀವ ವೈವಿಧ್ಯ ಕಾಯ್ದೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಾಮಗಾರಿ ಆರಂಭಿಸಿರುವುದನ್ನು ಪ್ರಶ್ನಿಸಿ ನ್ಯಾಯಾ­­­ಲಯ ಮೆಟ್ಟಿಲು ಹತ್ತಲು ಪರಿಸರವಾದಿ­ಗಳು ಹಾಗೂ ವಿವಿಧ ಸಂಘಟನೆಗಳು ಮುಂದಾ­ಗಿವೆ.

2014 ರಲ್ಲಿ ಬೆಳವಣಿಗೆ ನೇತ್ರಾವತಿ ತಿರುವು–ಮುಳುವು

[ಬದಲಾಯಿಸಿ]
ದಕ್ಷಿಣ ಕನ್ನಡ ಜಿಲ್ಲೆಯ ಜನರ ಮಟ್ಟಿಗೆ ದೊಡ್ಡ ಆತಂಕ ಇದ್ದುದು ನೇತ್ರಾವತಿಯ ಉಪನದಿ ಎತ್ತಿನಹೊಳೆ ಯೋಜನೆ. ಈ ಯೋಜನೆ ವಿರುದ್ಧ ಧ್ವನಿ ಎತ್ತಿದ್ದ ಜಿಲ್ಲೆಯ ಘಟಾನು ಘಟಿ ನಾಯಕರು ರಾಜ್ಯ ಸಂಪುಟದಲ್ಲಿದ್ದ ಕಾರಣ, ಅವರು ಜಿಲ್ಲೆಯ ಜನರ ಹಿತಾಸಕ್ತಿಯನ್ನು ಬಲಿ ಕೊಡಲಾರರು ಎಂದು ಜಿಲ್ಲೆಯ ಜನರು ಭರವಸೆ ಇಟ್ಟಿದ್ದರು. ಜಿಲ್ಲೆಯ ಜನರ ಶಕ್ತಿಯನ್ನು ಪ್ರದರ್ಶಿಸುವ ಸಲುವಾಗಿ ಮಾರ್ಚ್‌ 3ರಂದು ಜಿಲ್ಲೆಯಾದ್ಯಂತ ಬಂದ್‌ ಆಚರಿಸಲಾಯಿತು. ಜಿಲ್ಲೆಯ ಜನತೆ ಸ್ವಯಂಪ್ರೇರಿತವಾಗಿ ಆಚರಿಸಿದ ಯಶಸ್ವಿ ಬಂದ್‌ ಇದು. ಆದರೆ, ಜನರ ಕೂಗಿಗೆ ಸರ್ಕಾರ ಕಿವಿಗೊಡಲೇ ಇಲ್ಲ. ಲೋಕಸಭಾ ಚುನಾವಣೆ ಘೋಷಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ ಎನ್ನುವಾಗ ನಮ್ಮ ಜಿಲ್ಲೆಯವರೇ ಆದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರು ಹಠ ಹಿಡಿದು ಈ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಶಂಕುಸ್ಥಾಪನೆಯನ್ನೂ ಮಾಡಿಸಿದರು.
ಆ ಬಳಿಕವೂ ಜಿಲ್ಲೆಯಲ್ಲಿ ಈ ಯೋಜನೆ ವಿರೋಧಿಸಿ ಅನೇಕ ಪ್ರತಿಭಟನೆಗಳು ನಡೆದಿವೆ. ಈ ಯೋಜನೆ ಅನುಷ್ಠಾನಕ್ಕೆ ಮುನ್ನ ಕರಾವಳಿಯವರನ್ನೂ ವಿಶ್ವಾಸಕ್ಕೆ ಪಡೆಯುತ್ತೇವೆ, ಈ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮನವರಿಕೆ ಮಾಡಿಕೊಡುತ್ತೇವೆ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೂ ಭರವಸೆ ನೀಡಿದ್ದರು. ಆ ಭರವಸೆ ಇನ್ನೂ ಈಡೇರಿಲ್ಲ. ಈ ನಡುವೆ ಕರಾವಳಿಯ ಜನಪ್ರತಿನಿಧಿಗಳ ಸಭೆ ನಡೆಸಿ, ಅವರು ಎತ್ತಿನಹೊಳೆ ಯೋಜನೆ ವಿರುದ್ಧ ಧ್ವನಿ ಎತ್ತದಂತೆ ಮಾಡುವಲ್ಲಿ ಮುಖ್ಯಮಂತ್ರಿ ಯಶಸ್ವಿಯಾದರು.

ಪಶ್ಚಿಮ ಘಟ್ಟ ಸಂರಕ್ಷಣೆ-ಕಸ್ತೂರಿರಂಗನ್ ಕೂಗು

[ಬದಲಾಯಿಸಿ]
ಜಿಲ್ಲೆಯ ಜನರನ್ನು ಕಾಡಿದ ಇನ್ನೊಂದು ವಿವಾದ ಪಶ್ಚಿಮ ಘಟ್ಟ ಸಂರಕ್ಷಣೆ ಸಲುವಾಗಿ ಕಸ್ತೂರಿರಂಗನ್‌ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿದ ವರದಿ. ವರದಿಯ ಪ್ರಕಾರ ಪ್ರತಿ ಗ್ರಾಮದ ಒಟ್ಟು ವಿಸ್ತೀರ್ಣದ ಶೇಕಡ 20 ಕ್ಕಿಂತ ಹೆಚ್ಚು ಪ್ರದೇಶ ಅರಣ್ಯ ಪ್ರದೇಶವಾಗಿದ್ದರೆ ಅಥವಾ ಅರಣ್ಯದಂತಹ ನೈಸರ್ಗಿಕ ಪ್ರದೇಶಗಳಿಂದ ಕೂಡಿದ್ದರೆ ಅಂತಹ ಗ್ರಾಮಮಗಳನ್ನು ಸೂಕ್ಷ್ಮ ಪರಿಸರ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕುಗಳ ಒಟ್ಟು 46 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿವೆ. ಇಷ್ಟೂ ಗ್ರಾಮಗಳು ಈ ವರದಿಯ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿವೆ. ಅಲ್ಲಲ್ಲಿ ಬಂದ್‌ ಆಚರಿಸಲಾಗಿದೆ. ಈ ವರದಿಯಿಂದ ಅನೇಕ ಪ್ರಯೋಜನಗಳಿವೆಯಾದರೂ, ಈ ಬಗ್ಗೆ ಚರ್ಚೆಯೇ ನಡೆದಿಲ್ಲ.

ಲಭ್ಯವಿರುವ ನೀರಿನ ಪ್ರಮಾಣ 9.55 ಟಿಎಂಸಿ

[ಬದಲಾಯಿಸಿ]
  • ವಿವಾದಿತ ಎತ್ತಿನಹೊಳೆ ಯೋಜನೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸೇರಿದಂತೆ ತಜ್ಞರು ರಿಮೋಟ್‌ ಸೆನ್ಸಿಂಗ್‌ (ಸೂಕ್ಷ್ಮ ಸಂವೇದಿ)ನಂತಹ ತಂತ್ರಜ್ಞಾನಗಳನ್ನು ಆಧರಿಸಿ ಪರಿಷ್ಕೃತ ವರದಿ ಪ್ರಕಟಿಸಿದ್ದು, ಅದರಲ್ಲಿ ಕೂಡ ಎತ್ತಿನಹೊಳೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ 9.55 ಟಿಎಂಸಿ ಎಂದು ದೃಢೀಕರಿಸಲಾಗಿದೆ. ಅದರಲ್ಲಿ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ 9.55 ಟಿಎಂಸಿ ಇದ್ದು, ಅದರಲ್ಲಿ 5.84 ಟಿಎಂಸಿ ಸ್ಥಳೀಯ ಅವಶ್ಯಕತೆಗಳನ್ನು ಪೂರೈಸಲಿಕ್ಕಾಗಿಯೇ ಬೇಕಾಗುತ್ತದೆ ಎಂದು ವಿಜ್ಞಾನಿಗಳು ಪುನರುಚ್ಚರಿಸಿದ್ದಾರೆ.
  • ಖುದ್ದು ಸ್ಥಳ ಪರಿಶೀಲನೆ ಅಲ್ಲದೆ, ಭಾರತೀಯ ಹವಾಮಾನ ಇಲಾಖೆ, ರಿಮೋಟ್‌ ಸೆನ್ಸಿಂಗ್‌ ಮತ್ತು ಜಲವಿಜ್ಞಾನದ ದತ್ತಾಂಶಗಳನ್ನು ಆಧರಿಸಿ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿನ ಮಳೆ ಪ್ರಮಾಣ, ತಾಪಮಾನ, ಭೂಮಿಯ ಬಳಕೆ ಮತ್ತಿತರ ಅಂಶಗಳನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಅದರಂತೆ ಎತ್ತಿನಹೊಳೆ ಜಲಾನಯನ ಪ್ರದೇಶದ ಒಟ್ಟಾರೆ ವ್ಯಾಪ್ತಿಯ ಪೈಕಿ ಶೇ. 45.08ರಷ್ಟು ಪರಿಸರ ಅರಣ್ಯ, ಶೇ. 29.05 ಕೃಷಿ, ಶೇ. 24.06 ಹುಲ್ಲುಗಾವಲು ಪ್ರದೇಶವಾಗಿದೆ. ಅಲ್ಲಿ ಬೀಳುವ ವಾರ್ಷಿಕ ಮಳೆ 3000-5000 ಮಿ.ಮೀ. (ರಾಜ್ಯ ಸರ್ಕಾರದ ಸಾಂಖೀÂಕ ಇಲಾಖೆ ಪ್ರಕಾರ) ಆಗಿದ್ದು, 5.84 ಟಿಎಂಸಿ ಕೃಷಿ, ತೋಟಗಾರಿಕೆ, ಜಾನುವಾರು ಮತ್ತಿತರ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. 2 ಟಿಎಂಸಿ ಜಲಚರಗಳಿಗೆ ಮೀಸಲಾಗಿದೆ ಎಂದು 14 ಪುಟಗಳ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. []

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ ಜಿಟಿ) ವಿರೋಧ

[ಬದಲಾಯಿಸಿ]
  • 12 Nov, 2016
  • ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮ ಘಟ್ಟದ ಜೀವವೈವಿಧ್ಯನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ ಜಿಟಿ), ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
  • ‘ಯೋಜನೆಯಿಂದ ಪರಿಸರಕ್ಕೆ ಧಕ್ಕೆ ಎದುರಾಗಲಿದೆ’ ಎಂದು ಕೆ.ಎನ್‌. ಸೋಮಶೇಖರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ಪೀಠವು, ಪಶ್ಚಿಮಘಟ್ಟದ ವಿಚಾರವಾಗಿ ಕೇಂದ್ರ ಸರ್ಕಾರವು ಮೃದುಧೋರಣೆ ತಳೆಯುತ್ತಿರುವುದು ಸರಿಯಲ್ಲ ಎಂದು ತಿಳಿಸಿತಲ್ಲದೆ, ‘ಈ ಕುರಿತು ಸರ್ಕಾರಕ್ಕೆ ಜವಾಬ್ದಾರಿಯೇ ಇದ್ದಂತಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿತು.
  • ಯೋಜನೆಗಾಗಿ ಒಟ್ಟು 13.90 ಹೆಕ್ಟೆರ್‌ ಅರಣ್ಯ ಭೂಮಿ ಉಪಯೋಗಿ ಸುತ್ತಿದ್ದು, 4,995 ಮರಗಳನ್ನು ಕಡಿಯುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ತಿಳಿಸುತ್ತಿದ್ದಂತೆಯೇ, ‘ಯೋಜನೆ ಗಾಗಿ ಈಗಾಗಲೇ ಒಟ್ಟು 2,700 ಮರ ಕಡಿಯಲಾಗಿದೆ. ಅದಕ್ಕೆ ಬದಲಾಗಿ ಸಸಿ ನೆಡುವ ಕುರಿತು ಯೋಚಿಸಲಾಗಿದೆಯೇ’ ಎಂದು ನ್ಯಾಯಮೂರ್ತಿಯವರು ಪ್ರಶ್ನಿಸಿ ದರು. ಅರ್ಜಿದಾರರ ಪರ ವಕೀಲರಾದ ಪ್ರಿನ್ಸ್‌ ಐಸಾಕ್‌ ಮತ್ತು ರಿತ್ವಿಕಾ ದತ್ತಾ, ಪಶ್ಚಿಮಘಟ್ಟದಲ್ಲಿನ ಜೀವ ವೈವಿಧ್ಯಕ್ಕೆ ಸಾಕಷ್ಟು ಧಕ್ಕೆ ಉಂಟಾಗಲಿದೆ. ಈ ಯೋಜನೆ ಸ್ಥಗಿತಗೊಳಿಸಬೇಕು’ ಎಂದು ಮನವಿ ಮಾಡಿದರು.[]

ಇಡೀ ರಾಜ್ಯಕ್ಕೆ ಕುಡಿಯುವ ನೀರು ಯೋಜನೆ

[ಬದಲಾಯಿಸಿ]
  • ನೇತ್ರಾವತಿ ನೀರಿಗೆ ಸಮುದ್ರದಲ್ಲಿ ಜಲಾಶಯ (ಪ್ರಜಾವಾಣಿ)
  • 7 Nov, 2016
  • ನೇತ್ರಾವತಿ ನದಿ ಅರಬ್ಬಿ ಸಮುದ್ರ ಸೇರುವ ಜಾಗದಲ್ಲಿ ಅಥವಾ ಸಮುದ್ರದೊಳಗೇ ಅಣೆಕಟ್ಟು ನಿರ್ಮಿಸಿ, ಅಪಾರ ಪ್ರಮಾಣದಲ್ಲಿ ಸಿಹಿ ನೀರು ಸಂಗ್ರಹಿಸಿ ಬೆಂಗಳೂರು ಮಾತ್ರವಲ್ಲ , ಇಡೀ ರಾಜ್ಯಕ್ಕೆ ಪೂರೈಕೆ ಮಾಡಬಹುದು. ಇಂತಹದೊಂದು ವಿಶಿಷ್ಟ ಯೋಜನೆಯೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿಜ್ಞಾನಿ ಪ್ರೊ. ಟಿ.ಜಿ.ಸೀತಾರಾಮ್‌ ಅವರು ರೂಪಿಸಿದ್ದಾರೆ. ಟಿ.ಜಿ.ಸೀತಾರಾಮ್‌ ಅವರು ಈ ಕುರಿತು ಯೋಜನಾ ವರದಿಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಯೋಜನೆಯ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸೀತಾರಾಮ್‌, ‘ಕಡಿಮೆ ಖರ್ಚಿನಲ್ಲಿ ಅನುಷ್ಠಾನಗೊಳಿಸಬಹುದಾ ವಿಶಿಷ್ಟ ಯೋಜನೆ ಇದು. ವಿಶ್ವದ ಹಲವು ರಾಷ್ಟ್ರಗಳಲ್ಲಿ ಯಶಸ್ವಿ ಆಗಿರುವ ಯೋಜನೆಯೂ ಹೌದು. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅತ್ಯುತ್ತಮವಾದ ಪರ್ಯಾಯ ಯೋಜನೆ ಇದಾಗಿದೆ’. ‘ಕುಡಿಯುವ ನೀರಿಗಾಗಿ ನೆರೆಯ ರಾಜ್ಯಗಳ ಜೊತೆ ಕದನ, ಜಿಲ್ಲೆ–ಜಿಲ್ಲೆಗಳ ನಡುವೆ ಕಿತ್ತಾಟ ನಡೆಯುತ್ತಿರುವಾಗ ಹೊಸ ಯೋಜನೆ ಕರ್ನಾಟಕದ ಪಾಲಿಗೆ ಆಶಾಕಿರಣವಾಗಿದೆ’ ಎಂದರು.

ತಾಂತ್ರಿಕ ವಿವರ

[ಬದಲಾಯಿಸಿ]
ಸಿಂಗಪುರ ಮೆರೀನ್ ಬ್ಯರೇಜ್ - marina barrage
  • ‘ಮಳೆಗಾಲದ ನಾಲ್ಕು ತಿಂಗಳಲ್ಲಿ ನೇತ್ರಾವತಿ ನದಿ ಮತ್ತು ಉಪನದಿಗಳಿಂದ 123 ಟಿಎಂಸಿ ಅಡಿ ನೀರು ಅರಬ್ಬಿ ಸಮುದ್ರ ಸೇರುತ್ತದೆ. ಇದ ಲ್ಲದೇ, ಪಶ್ಚಿಮ ವಾಹಿನಿಯಾಗಿ ಹರಿ ಯುವ 13 ಉಪ ನದಿಗಳಿಂದ ರಾಜ್ಯ ದಲ್ಲಿ ಸಮುದ್ರಕ್ಕೆ ಸೇರುವ ನೀರು 2,200 ಟಿಎಂಸಿ ಅಡಿಗಳು. ಹೀಗಾಗಿ ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಇದೆ ಎಂಬುದನ್ನು ಒಪ್ಪಲಾಗದು. ಇರುವ ನೀರನ್ನೇ ಸಮರ್ಪಕವಾಗಿ ಬಳಸಿಕೊ ಳ್ಳಲು ಯೋಜನೆ ರೂಪಿಸಿಕೊಳ್ಳುವ ಇಚ್ಛಾಶಕ್ತಿ ತೋರಿಸಿದರೆ ಸಾಕು’ ಎಂಬ ಖಚಿತ ನಿಲುವು ಅವರದು.
  • ‘ಕುಡಿಯುವ ನೀರಿನ ಕೊರತೆ ನೀಗಿಸಲು ಅತ್ಯುತ್ತಮ ಪರಿಹಾರ ವೆಂದರೆ, ಸಮುದ್ರಕ್ಕೆ ಹರಿದುಹೋಗುವ ನದಿಯ ಪ್ರವಾಹದ ನೀರನ್ನು ಸಮುದ್ರದ ತಟದಲ್ಲೇ ಅಣೆಕಟ್ಟು ನಿರ್ಮಿಸಿ ಸಂಗ್ರಹಿಸುವುದು. ಇದರ ಉಪಯೋಗ ಹಲವು. ಅಣೆಕಟ್ಟು ನಿರ್ಮಿಸಲು ಭೂಮಿ ಬೇಕಿಲ್ಲ, ಹಿನ್ನೀರಿನ ಸಮಸ್ಯೆಯೂ ಇಲ್ಲ, ಪರಿಸರ ನಾಶವೂ ಆಗುವುದಿಲ್ಲ. ಶುದ್ಧ ನೀರನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮೇಲೆತ್ತಿ ಪೂರೈಸಬಹುದು’ ಎಂದರು.
ಸಿಂಗಪುರ - ಪಂಪ್ ಹೌಸ್ - Main Bldg
  • ‘ಸಮುದ್ರದಲ್ಲೇ ಅಣೆಕಟ್ಟು ನಿರ್ಮಿಸಿ ನದಿ ನೀರು ಸಂಗ್ರಹಿಸುವುದರಿಂದ ಉಪ್ಪು ನೀರು ಸೇರುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಸಿಹಿನೀರಿನಿಂದ ಉಪ್ಪು ನೀರನ್ನು ಪ್ರತ್ಯೇಕಿಸಲು ಬ್ರೇಕ್‌ ವಾಟರ್‌ ಮಾದರಿಯ ಬೃಹತ್‌ ತಡೆಗೋಡೆ ನಿರ್ಮಿಸಬೇಕಾಗುತ್ತದೆ. ಇದರ ಒಳಗೆ ಜಿಯೋಸಿಂಥೆಟಿಕ್‌ ಲೈನರ್‌ ಹಾಕಲಾಗುತ್ತದೆ. ಜೊತೆಗೆ ಜಿಯೋಮೆಂಬ್ರೇನ್‌ ಅಳವಡಿಸುವುದರಿಂದ ಸಿಹಿ ನೀರಿಗೆ ಉಪ್ಪು ನೀರು ಸೇರುವುದಿಲ್ಲ. ಸಮುದ್ರ ನೀರಿನ ಸಾಂದ್ರತೆ ಅಧಿಕವಾಗಿರುವುದರಿಂದ ಮತ್ತು ಸಮುದ್ರದೊಳಗೆ ಇಳಿಜಾರು ಇರುವುದರಿಂದ ಉಪ್ಪುನೀರು ಅಣೆಕಟ್ಟು ಪಾರಾಗಿ ಜಲಾಶಯದೊಳಗೆ ಬರುವ ಸಾಧ್ಯತೆ ತೀರಾ ಕಡಿಮೆ’ ಎಂಬ ಅಭಿಪ್ರಾಯ ಸೀತಾರಾಮ್‌ ಅವರದು.
  • ಜಲಾಶಯದಲ್ಲಿ ವರ್ಷವಿಡೀ ಸಿಹಿ ನೀರನ್ನು ಸಂಗ್ರಹಿಸಿಡಬಹುದು. 85 ಟಿಎಂಸಿ ಅಡಿ ನೀರು ಸಂಗ್ರಹಿಸಿದರೆ ಬೆಂಗಳೂರು ಮಾತ್ರವಲ್ಲದೆ, ಇಡೀ ರಾಜ್ಯಕ್ಕೆ ಕುಡಿಯುವ ಉದ್ದೇಶಕ್ಕೆ ಬಳಸಬಹುದು. ಕುಡಿಯುವ ನೀರಿಗಾಗಿ ತಮಿಳುನಾಡು, ಗೋವಾ ರಾಜ್ಯಗಳ ಮುಂದೆ ಗೋಗರೆಯುವ ಅಗತ್ಯವೇ ಇರುವುದಿಲ್ಲ. ಅಲ್ಲದೆ, ಕರಾವಳಿಯ 1,900 ಹೆಕ್ಟೇರ್‌ಗೆ ಭೂಮಿಗೆ ನೀರಾವರಿ ಉದ್ದೇಶಕ್ಕೂ ಇದೇ ನೀರನ್ನು ಬಳಸಬಹುದಾಗಿದೆ ಎಂದು ವಿವರಿಸಿದರು.
  • ಮಂಗಳೂರು ನಗರದ ಹೊರಗೆ ನೇತ್ರಾವತಿ, ಕುಮಾರಧಾರಾ ಮತ್ತು ಗುರುಪುರ ನದಿಗಳು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಹೀಗೆ ನದಿ ಸೇರುವ ಜಾಗದಲ್ಲಿ ಸಮುದ್ರದ ನೀರು ಪ್ರತ್ಯೇಕಿಸಲು 500 ಮೀಟರ್‌ ಅಗಲದ ಬ್ಯಾರೇಜ್‌ ನಿರ್ಮಿಸಬೇಕಾಗುತ್ತದೆ. ಈ ಬ್ಯಾರೇಜ್‌ ಉಪ್ಪು ನೀರು ಪ್ರವೇಶಿಸುವುದನ್ನು ತಡೆಯುವುದರ ಜೊತೆಗೆ ಸಮುದ್ರದ ಅಲೆಯನ್ನೂ ತಡೆಯುತ್ತದೆ.

ನಾಲ್ಕು ಬಗೆಯ ಯೋಜನೆ

[ಬದಲಾಯಿಸಿ]
  • ನೇತ್ರಾವತಿ, ಕುಮಾರಧಾರಾ ನದಿಗಳು ಸಮುದ್ರ ಸೇರುವ ಜಾಗದಲ್ಲಿ ಸಮುದ್ರ ತಡೆಗೋಡೆ ನಿರ್ಮಿಸಿ ಸಣ್ಣ ಅಣೆಕಟ್ಟು ನಿರ್ಮಿಸಿದರೆ 4 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು.
  • ಅಥವಾ ಸಮುದ್ರದೊಳಗೇ ಸಮಾನಾಂತರವಾಗಿ 15 ಕಿ.ಮೀ ಉದ್ದದ ತಡೆಗೋಡೆಗಳನ್ನು ನಿರ್ಮಿಸಿ ಅದನ್ನು ಕೂಡಿಸುವ ಬ್ಯಾರೇಜ್‌ ನಿರ್ಮಿಸಬೇಕು. 100 ಟಿಎಂಸಿ ಅಡಿ ಪ್ರವಾಹದ ನೀರು ಸಂಗ್ರಹಿಸಲು ಸಾಧ್ಯವಿದೆ. ಮಳೆಗಾಲದಲ್ಲಿ ವಿಪರೀತ ಪ್ರವಾಹ ಉಂಟಾಗಿ ಅಣೆಕಟ್ಟು ತುಂಬಿದರೆ ಹೆಚ್ಚುವರಿ ನೀರನ್ನು ಕ್ರಸ್ಟ್‌ ಗೇಟ್‌ಗಳನ್ನು ತೆರೆದು ಸಮುದ್ರಕ್ಕೆ ಬಿಡಬಹುದು.
  • ಸಮುದ್ರ ಸೇರುವ ಭಾಗದಿಂದ ತುಸು ದೂರದಲ್ಲಿ ಬ್ಯಾರೇಜ್‌ ನಿರ್ಮಿಸಿಯೂ ನದಿ ನೀರನ್ನು ಸಂಗ್ರಹಿಸಬಹುದು.
  • ಸಂಪೂರ್ಣ ಸಮುದ್ರದ ಮಧ್ಯೆಯೇ ನೀರನ್ನು ಸಂಗ್ರಹಿಸಿಡಲು ಜಲಾಶಯ ನಿರ್ಮಿಸುವುದು. ನದಿ ನೀರನ್ನು ಅದರೊಳಗೇ ಸೇರುವಂತೆ ವ್ಯವಸ್ಥೆ ಮಾಡಬಹುದು.
  • ಬೆಂಗಳೂರು ನಗರ ಸಮುದ್ರ ಮಟ್ಟದಿಂದ ಸುಮಾರು 950 ಮೀಟರ್‌ ಎತ್ತರದಲ್ಲಿ ಇದೆ. ಸಮುದ್ರದ ಜಲಾಶಯದಿಂದ ಪಂಪ್‌ ಮಾಡಿದ ನೀರನ್ನು ದೊಡ್ಡ ಕೊಳವೆಗಳ ಮೂಲಕ ಎತ್ತಿನ ಹೊಳೆ ಯೋಜನೆಗಾಗಿ ಸಕಲೇಶಪುರ ಬಳಿ ನಿರ್ಮಿಸುತ್ತಿರುವ ನೀರು ಪೂರೈಕೆ ಜಾಲಕ್ಕೆ ಸೇರಿಸಿದರೆ ಅಲ್ಲಿಂದ, ಹಾಸನ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರದವರೆಗೂ ಪೂರೈಸಬಹುದು. ಎತ್ತಿನ ಹೊಳೆಯಲ್ಲಿ ನೀರಿನ ಇಳುವರಿ ತೀರಾ ಕಡಿಮೆ ಇದೆ ಎಂಬ ಅಭಿಪ್ರಾಯವೂ ಇದೆ. ಈ ಕಾರಣದಿಂದ ಸಮುದ್ರದಲ್ಲಿ ಅಣೆಕಟ್ಟಿನಿಂದ ನೀರನ್ನು ಪಂಪ್‌ ಮಾಡಿ ಪೈಪ್‌ ಮೂಲಕ ಹಾಯಿಸಿ ತರಬಹುದು ಎನ್ನುತ್ತಾರೆ ಸೀತಾರಾಮ್‌.

ಅಣೆಕಟ್ಟು ನಿರ್ಮಾಣ ಬಗೆ

[ಬದಲಾಯಿಸಿ]
  • ಸಮುದ್ರದ ತಟದಿಂದ 10–12 ಕಿ.ಮೀ ವ್ಯಾಪ್ತಿಯಲ್ಲಿ ಸಮುದ್ರದ ಆಳ 20 ಮೀಟರ್‌ ಇದೆ. ನದಿ ಸಮುದ್ರ ಸೇರುವ ಜಾಗದಲ್ಲಿ ಆಳ 5 ರಿಂದ 6 ಮೀಟರ್‌ ಮಾತ್ರ. ಇಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಜಿಯೋ ಸಿಂಥೆಟಿಕ್‌ ಬಳಸಿಕೊಂಡು ಸಮುದ್ರ ತಡೆಗೋಡೆ ಮತ್ತು ಬ್ಯಾರೇಜ್‌ ಅನ್ನು ಅತ್ಯಂತ ತ್ವರಿತಗತಿಯಲ್ಲಿ ನಿರ್ಮಾಣ ಮಾಡುವ ಆಧುನಿಕ ತಂತ್ರಜ್ಞಾನ ಲಭ್ಯವಿದೆ. ಈ ವಿಧಾನವು ಲವಣಮುಕ್ತ ನೀರು ಪಡೆಯುವ ತಂತ್ರಜ್ಞಾನಕ್ಕಿಂತ ಕಡಿಮೆ ವೆಚ್ಚದಲ್ಲಿಯೇ ನಿರ್ಮಿಸಬಹುದು ಎನ್ನುತ್ತಾರೆ.

ವೆಚ್ಚ

[ಬದಲಾಯಿಸಿ]
  • 1 ಬಿಸಿಎಂ (ಬಿಲಿಯನ್‌ ಕ್ಯೂಬಿಕ್‌ ಮೀಟರ್‌) ನೀರು ಸಂಗ್ರಹಿಸಲು ರೂ.1,500 ರಿಂದ ರೂ.2,000 ಕೋಟಿ ವೆಚ್ಚವಾಗುತ್ತದೆ. ತಲಾ 30 ಕಿಲೊ ಲೀಟರ್‌ ನೀರು ಪಂಪ್‌ ಮಾಡಲು ರೂ.20 ವೆಚ್ಚವಾಗುತ್ತದೆ. ಚೀನಾ, ದಕ್ಷಿಣ ಕೊರಿಯಾ ಹಲವು ದೇಶಗಳಲ್ಲಿ ಇಂತಹ ಯೋಜನೆ ಯಶಸ್ವಿಯಾಗಿದೆ. ಭಾರತದಲ್ಲಿ ಅನುಷ್ಠಾನವಾದರೆ ರಾಜ್ಯಗಳ ಮಧ್ಯದ ಜಲವ್ಯಾಜ್ಯ ತಪ್ಪಿಸಬಹುದು. ಇದು ಪ್ರೊ.ಟಿ.ಜಿ. ಸೀತಾರಾಮ್‌ ಅವರ ಯೋಜನೆ ಮತ್ತು ಅಭಿಪ್ರಾಯ.[]

ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಪರವಾನಗಿ ನೀಡಿಲ್ಲ

[ಬದಲಾಯಿಸಿ]
  • ಮಂಗಳೂರಿನಲ್ಲಿ ಎತ್ತಿನಹೊಳೆ ತಿರುವು ಯೋಜನೆಗೆ ಸಂಬಂಧಿಸಿ ಮರ ಕಡಿಯಲು ಅಥವಾ ಇತರ ಯಾವುದೇ ಕಾಮಗಾರಿಗಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಪರವಾನಗಿ ನೀಡಿಲ್ಲ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಅನಿಲ್‌ ಮಾಧವ ಧವೆ ಹೇಳಿದರು. ರಾಜ್ಯ ಸರ್ಕಾರದ ವತಿಯಿಂದ ಕಾಮಗಾರಿ ನಡೆಯುತ್ತಿರಬಹುದು. ಈ ಯೋಜನೆಯ ವಿಚಾರ ರಾಷ್ಟ್ರೀಯ ಹಸಿರು ಪೀಠದ ಮುಂದಿರುವುದರಿಂದ ಮಧ್ಯಪ್ರವೇಶಿಸಿ ಯಾವುದೇ ಆದೇಶ ನೀಡುವುದು ಸಾಧುವಲ್ಲ. ಆದ್ದರಿಂದ ಹಸಿರು ಪೀಠದ ಆದೇಶಕ್ಕೆ ಕಾಯುತ್ತಿರುವುದಾಗಿ ಹೇಳಿದರು.[]

ಅನುಮತಿಯನ್ನು ಪಡೆದಿದೆ

[ಬದಲಾಯಿಸಿ]

ಅರಣ್ಯ ಸಚಿವ ಬಿ.ರಮಾನಾಥ ರೈ:ಎತ್ತಿನಹೊಳೆ ಯೋಜನೆಯ ಕಾಮಗಾರಿಗಾಗಿ ಮರಗಳನ್ನು ಕಡಿಯಲು ಅನುಮತಿ ನೀಡಿಲ್ಲ ಎಂಬ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವ ಅನಿಲ್‌ ಮಾಧವ್‌ ದವೆ ಅವರ ಹೇಳಿಕೆಯನ್ನು ಅಲ್ಲಗಳೆದರು. ‘ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿಯನ್ನು ಪಡೆದ ಬಳಿಕವೇ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಿದೆ. ಬೃಹತ್‌ ಯೋಜನೆಗಳ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ಆರಂಭಿಸಲು ಸಾಧ್ಯವಿಲ್ಲ. ಅದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಜ್ಞಾನ. ಎತ್ತಿನಹೊಳೆ ಯೋಜನೆ ಕುಡಿಯುವ ನೀರು ಪೂರೈಕೆ ಯೋಜನೆ ಎಂಬ ಕಾರಣಕ್ಕಾಗಿ ಅನುಮತಿ ಲಭಿಸಿದೆ. 13.79 ಹೆಕ್ಟೇರ್‌ ಅರಣ್ಯ ಜಮೀನನ್ನು ಯೋಜನೆಗಾಗಿ ಬಳಸಿಕೊಳ್ಳಲು 2016ರ ಸೆಪ್ಟೆಂಬರ್‌ 15ರಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಅದಕ್ಕೆ ಸಂಬಂಧಿಸಿದ ಪತ್ರವನ್ನು ಪ್ರದರ್ಶಿಸಿದರು.[]

ಪರ - ವಿರೋಧ

[ಬದಲಾಯಿಸಿ]
  • 1 Jan, 2017
  • ಎತ್ತಿನಹೊಳೆ ಯೋಜನೆ ಆರಂಭದಿಂದಲೂ ಗೊಂದಲದ ಗೂಡಾಗಿಯೇ ಇದೆ. ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಸಿಗುವ ಸಾಧ್ಯತೆ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಯೋಜನೆ ಅನುಷ್ಠಾನವಾದರೆ ನೇತ್ರಾವತಿ ನದಿ ಮತ್ತು ಪಶ್ಚಿಮಘಟ್ಟಕ್ಕೆ ಆಗುವ ಧಕ್ಕೆ ತಪ್ಪಿದ್ದಲ್ಲ ಎಂಬುದು ಪರಿಸರವಾದಿಗಳ ವಾದ. ಪರಿಸರಕ್ಕೆ ಮತ್ತು ಕರಾವಳಿ ಜನರಿಗೆ ತೊಂದರೆ ಆಗದಂತೆ ನೀರನ್ನು ಶಾಶ್ವತ ಬರಪೀಡಿತ ಜಿಲ್ಲೆಗಳಿಗೆ ಹರಿಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬದ್ಧ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.
  • ಎತ್ತಿನಹೊಳೆ ಯೋಜನೆ ಜಾರಿಯೇ ಅಸಹಜ;ವಿಜಯಕುಮಾರ್‌ ಸಿಗರನಹಳ್ಳಿ;1 Jan, 2017 Archived 2017-01-01 ವೇಬ್ಯಾಕ್ ಮೆಷಿನ್ ನಲ್ಲಿ.
  • ಪೂರ್ವಕ್ಕೆ ಹರಿಯುವ ಕಾವೇರಿ, ಕೃಷ್ಣಾ, ಪಾಲಾರ್‌, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ಮುಂತಾದ ನದಿಗಳಲ್ಲಿ ಹರಿಯುವ ನೀರೆಲ್ಲ ಬಳಕೆಯಾಗಿದೆ ಅಥವಾ ಎಲ್ಲೆಲ್ಲಿ ಬಳಕೆಯಾಗಬೇಕು ಎಂಬುದು ನಿಷ್ಕರ್ಷೆಯಾಗಿದೆ. ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಲ್ಲಿ ಮೇಲ್ಮೈ ನೀರು ಮತ್ತು ಅಂತರ್ಜಲದ ತೀವ್ರ ಅಭಾವವಿದೆ. ಪಶ್ಚಿಮಕ್ಕೆ ಹರಿಯುವ ನದಿಗಳ ನೀರು ಅತಿ ಸ್ವಲ್ಪವಷ್ಟೇ ಬಳಕೆಯಾಗಿದೆ. ಭವಿಷ್ಯದಲ್ಲಿಯೂ ಸ್ವಲ್ಪ ಮಾತ್ರ ಬಳಕೆಯಾಗುವ ಸಂಭವವಿದೆ. ಹೀಗಾಗಿ ಅದನ್ನು ಪೂರ್ವಕ್ಕೆ ಹರಿಸುವ ಕಲ್ಪನೆ ಸಹಜವಾಗಿಯೇ ತಲೆದೋರುತ್ತದೆ.
  • ಎತ್ತಿನಹೊಳೆ ಯೋಜನೆ;ನೀರಿನ ಹರಿವಿಗೆ ಅಡ್ಡಿ ಸಹಜ;ಮಂಜುನಾಥ ಹೆಬ್ಬಾರ್‌;1 Jan, 2017 Archived 2017-01-01 ವೇಬ್ಯಾಕ್ ಮೆಷಿನ್ ನಲ್ಲಿ.

ಎತ್ತಿನ ಹೊಳೆ ಯೋಜನೆ ಅನುಮಾನ ಬಗೆಹರಿಸಿ

[ಬದಲಾಯಿಸಿ]
  • 7 Jan, 2017
  • ಎತ್ತಿನ ಹೊಳೆ ಯೋಜನೆಯಲ್ಲಿ ಹೊಂಗಡ ಹಳ್ಳ, ಎತ್ತಿನ ಹೊಳೆ, ಕಾಡು ಮನೆ ಹೊಳೆ, ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ನೀರು ಸಂಗ್ರ ಹಾಗಾರಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ ಆರು ಸಂಗ್ರಹಾಗಾರಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕೋಲಾರ, ಚಿಕ್ಕಬಳ್ಳಾಪುರ, ರಾಮ ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ 64 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಈ ಯೋಜನೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದು. ಎತ್ತಿನ ಹೊಳೆ ಯೋಜನೆಯಲ್ಲಿ 24 ಟಿಎಂಸಿ ಅಡಿ ನೀರು ಲಭ್ಯತೆ ಬಗ್ಗೆ ಇರುವ ಅನುಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.[]

ಯೋಜನೆಯ ಮೂಲ ಉದ್ದೇಶ

[ಬದಲಾಯಿಸಿ]
  • ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ನೀರೊದಗಿಸುವ ಐದು ಹಳ್ಳಗಳ ನೀರನ್ನು ಬಯಲುನಾಡಿನ ಕಡೆಗೆ ಹರಿಯಿಸುವ ಯೋಜನೆ ಇದು. ನೇತ್ರಾವತಿ, ಕುಮಾರಧಾರಾ ತಿರುವು ಯೋಜನೆ ಇದಲ್ಲ. ಏಕೆಂದರೆ ವಾರ್ಷಿಕ ಸರಾಸರಿ ನೇತ್ರಾವತಿಯಲ್ಲಿ 548 ಟಿಎಂಸಿ ಅಡಿ ಹಾಗೂ ಕುಮಾರಧಾರಾದಲ್ಲಿ 220 ಟಿಎಂಸಿ ಅಡಿ ನೀರಿನ ಹರಿವು ಇದೆ. ಈ ಪೈಕಿ ಎತ್ತಿನ ಹೊಳೆಗೆ ಬಳಕೆಯಾಗುತ್ತಿರುವುದು 24.01 ಟಿಎಂಸಿ ಅಡಿ ಮಾತ್ರ. ಅಂದರೆ 768 ಟಿಎಂಸಿ ಅಡಿಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಎತ್ತಿನಹೊಳೆ ಯೋಜನೆಗೆ ಕೆಂಪುಹೊಳೆ, ಹೊಂಗದ ಹಳ್ಳ, ಕೇರಿಹೊಳೆ, ಕಾಡುಮನೆ ಹೊಳೆ–1,2 ಹಾಗೂ ಎತ್ತಿನ ಹೊಳೆಯ ಎರಡು ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುತ್ತದೆ. ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ 34.26 ಟಿಎಂಸಿ ಅಡಿ ನೀರಿನ ಪೈಕಿ 24.01 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ.
  • ಹೊಳೆಗಳ ಹರಿವಿನ ಮಧ್ಯೆ ಕಿರು ಕಟ್ಟೆ ಕಟ್ಟಿ ಸುಮಾರು 940 ಅಡಿ ಎತ್ತರಕ್ಕೆ ಪಂಪ್‌ ಮಾಡಿ ನೀರು ಹರಿಸಲಾಗು ತ್ತದೆ. ಸಕಲೇಶಪುರ ತಾಲ್ಲೂಕಿನಿಂದ ಕೋಲಾರದ ಶ್ರೀನಿವಾಸಪುರದವರೆಗೆ ನಾನಾ ಹಂತಗಳಲ್ಲಿ ಯೋಜನೆ ಅನುಷ್ಠಾನ ವಾಗಬೇಕು. 260 ಕಿ.ಮೀ ಉದ್ದ ತೆರೆದ ಕಾಲುವೆ ಹಾಗೂ ಪೈಪ್‌ಲೈನ್ ಮೂಲಕ ನೀರು ಹರಿಯುತ್ತದೆ. ಕಾಲುವೆಯ ಮಾರ್ಗದುದ್ದಕ್ಕೂ ಬರುವ ತಾಲ್ಲೂಕುಗಳ ಕೆರೆ ತುಂಬಿಸುವುದು ಯೋಜನೆಯ ರೂಪುರೇಷೆ.
  • ಒಮ್ಮೆ ಏತನೀರಾವರಿ ಮೂಲಕ ನೀರೆತ್ತಿ ನಾಲೆಗೆ ಹರಿಸಿದರೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ಮಾಣವಾಗಲಿರುವ ಬೈರಗೊಂಡ್ಲು ಜಲಾಶಯದವರೆಗೆ ನೀರು ಗುರುತ್ವಾಕರ್ಷಣೆ ಬಲದ ಮೇಲೆ ಹರಿಯಲಿದೆ. ಕುಂದಣ ಎಂಬಲ್ಲಿ 70–80 ಮೀಟರ್ ನೀರನ್ನು ಮತ್ತೆ ಪಂಪ್‌ ಮೂಲಕ ಮೇಲೆತ್ತಿ ಚಿಕ್ಕಬಳ್ಳಾಪುರ–ಕೋಲಾರ ಜಿಲ್ಲೆಗೆ ಹರಿಸಲಾಗುತ್ತದೆ. ಬೈರಗೊಂಡ್ಲುವಿನವರೆಗೆ ಕಾಮಗಾರಿ ಅಂತಿಮಗೊಂಡಿದ್ದು, ಜಲಾಶಯ ಕಾಮಗಾರಿ ಗುತ್ತಿಗೆ ನೀಡಬೇಕಿದೆ. ಕೋಲಾರ–ಚಿಕ್ಕಬಳ್ಳಾಪುರ ನಾಲೆ ಮತ್ತು ಫೀಡರ್ ಕಾಲುವೆಗಳ ಅಂದಾಜು ಪ್ರಕ್ರಿಯೆ ಸದ್ಯ ನಡೆಯುತ್ತಿದೆ.

ಯೋಜನೆಯ ರೂಪುರೇಷೆ

[ಬದಲಾಯಿಸಿ]
  • ಬರದ ಬೇಗೆಯಿಂದ ಬಳಲುತ್ತಾ, ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಿರುವ ಬಯಲುನಾಡಿನ ಜಿಲ್ಲೆಗಳಿಗೆ ನೀರೊದಗಿಸುವ ಆಶಯದಿಂದ ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಈ ಯೋಜನೆ ರೂಪಿಸಿದರು.
  • ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ನೀರೊದಗಿಸುವ ಐದು ಹಳ್ಳಗಳ ನೀರನ್ನು ಬಯಲುನಾಡಿನ ಕಡೆಗೆ ಹರಿಯಿಸುವ ಯೋಜನೆ ಇದು. ಹಾಗಂತ ನೇತ್ರಾವತಿ, ಕುಮಾರಧಾರಾ ತಿರುವು ಯೋಜನೆ ಇದಲ್ಲ. ಏಕೆಂದರೆ ವಾರ್ಷಿಕ ಸರಾಸರಿ ನೇತ್ರಾವತಿಯಲ್ಲಿ 548 ಟಿಎಂಸಿ ಅಡಿ ಹಾಗೂ ಕುಮಾರಧಾರಾದಲ್ಲಿ 220 ಟಿಎಂಸಿ ಅಡಿ ನೀರಿನ ಹರಿವು ಇದೆ. ಈ ಪೈಕಿ ಎತ್ತಿನ ಹೊಳೆಗೆ ಬಳಕೆಯಾಗುತ್ತಿರುವುದು 24.01 ಟಿಎಂಸಿ ಅಡಿ ಮಾತ್ರ. ಅಂದರೆ 768 ಟಿಎಂಸಿ ಅಡಿಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಪೂರ್ವದ ಕಡೆಗೆ ಹರಿಸಲಾಗುತ್ತದೆ.
  • ಎತ್ತಿನಹೊಳೆ ಯೋಜನೆಗೆ ಕೆಂಪುಹೊಳೆ, ಹೊಂಗದ ಹಳ್ಳ, ಕೇರಿಹೊಳೆ, ಕಾಡುಮನೆ ಹೊಳೆ–1,2 ಹಾಗೂ ಎತ್ತಿನ ಹೊಳೆಯ ಎರಡು ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುತ್ತದೆ. ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ 34.26 ಟಿಎಂಸಿ ಅಡಿ ನೀರಿನ ಪೈಕಿ 24.01 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ.
  • ಹೊಳೆಗಳ ಹರಿವಿನ ಮಧ್ಯೆ ಕಿರು ಕಟ್ಟೆ ಕಟ್ಟಿ ಸುಮಾರು 940 ಅಡಿ ಎತ್ತರಕ್ಕೆ ಪಂಪ್‌ ಮಾಡಿ ನೀರು ಹರಿಸಲಾಗು ತ್ತದೆ. ಸಕಲೇಶಪುರ ತಾಲ್ಲೂಕಿನಿಂದ ಕೋಲಾರದ ಶ್ರೀನಿ ವಾಸಪುರದವರೆಗೆ ನಾನಾ ಹಂತಗಳಲ್ಲಿ ಯೋಜನೆ ಅನು ಷ್ಠಾನ ವಾಗಬೇಕಿದೆ. 260 ಕಿ.ಮೀ ಉದ್ದ ತೆರೆದ ಕಾಲುವೆ ಹಾಗೂ ಪೈಪ್‌ಲೈನ್ ಮೂಲಕ ನೀರು ಹರಿಯುತ್ತದೆ. ಕಾಲುವೆಯ ಮಾರ್ಗದುದ್ದಕ್ಕೂ ಬರುವ ತಾಲ್ಲೂಕುಗಳ ಕೆರೆ ತುಂಬಿಸುವುದು ಯೋಜನೆಯ ರೂಪುರೇಷೆ.
  • ಒಮ್ಮೆ ಏತನೀರಾವರಿ ಮೂಲಕ ನೀರೆತ್ತಿ ನಾಲೆಗೆ ಹರಿಸಿದರೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ಮಾಣವಾ ಗಲಿರುವ ಬೈರಗೊಂಡ್ಲು ಜಲಾಶಯದವರೆಗೆ ನೀರು ಗುರುತ್ವಾಕರ್ಷಣೆ ಬಲದ ಮೇಲೆ ಹರಿಯಲಿದೆ. ಕುಂದಣ ಎಂಬಲ್ಲಿ 70–80 ಮೀಟರ್ ನೀರನ್ನು ಮತ್ತೆ ಪಂಪ್‌ ಮೂಲಕ ಮೇಲೆತ್ತಿ ಚಿಕ್ಕಬಳ್ಳಾಪುರ–ಕೋಲಾರ ಜಿಲ್ಲೆಗೆ ಹರಿಸಲಾಗುತ್ತದೆ. ಬೈರಗೊಂಡ್ಲುವಿನವರೆಗೆ ಕಾಮಗಾರಿ ಅಂತಿಮಗೊಂಡಿದ್ದು, ಜಲಾಶಯ ಕಾಮಗಾರಿ ಗುತ್ತಿಗೆ ನೀಡಬೇಕಿದೆ. ಕೋಲಾರ–ಚಿಕ್ಕಬಳ್ಳಾಪುರ ನಾಲೆ ಮತ್ತು ಫೀಡರ್ ಕಾಲುವೆಗಳ ಅಂದಾಜು ಪ್ರಕ್ರಿಯೆ ಸದ್ಯ ನಡೆಯುತ್ತಿದೆ.[]

ಹೆಚ್ಚಿನ ಮಾಹಿತಿಗೆ

[ಬದಲಾಯಿಸಿ]

ಹೆಚ್ಚನ ಮಾಹಿತಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "ಎತ್ತಿನಹೊಳೆಯಲ್ಲಿರೋದು 24 ಅಲ್ಲ, 9.5 ಟಿಎಂಸಿ". Archived from the original on 2016-09-26. Retrieved 2016-09-25.
  2. ಎತ್ತಿನಹೊಳೆ: ಕೇಂದ್ರ, ರಾಜ್ಯಕ್ಕೆ ತರಾಟೆ
  3. ನೇತ್ರಾವತಿ ನೀರಿಗೆ ಸಮುದ್ರದಲ್ಲಿ ಜಲಾಶಯ;ಪ್ರಜಾವಾಣಿ ವಾರ್ತೆ;7 Nov, 2016
  4. ಎತ್ತಿನಹೊಳೆಗೆ ಕೇಂದ್ರ ಅನುಮತಿ ಕೊಟ್ಟಿಲ್ಲ: ಧವೆ;ಪ್ರಜಾವಾಣಿ ವಾರ್ತೆ;31 Dec, 2016
  5. ಅನುಮತಿ ಇಲ್ಲದಿದ್ದರೆ ಎತ್ತಿನಹೊಳೆ ಯೋಜನೆ ನಿಲ್ಲಿಸಲಿ;ಪ್ರಜಾವಾಣಿ ವಾರ್ತೆ;1 Jan, 2017
  6. ಎತ್ತಿನಹೊಳೆ ಅನುಮಾನ ಬಗೆಹರಿಸಿ’;ಪ್ರಜಾವಾಣಿ ವಾರ್ತೆ;7 Jan, 2017
  7. [https://www.prajavani.net/op-ed/olanota/information-about-yettinahole-water-project-karnataka-government-710782.html ಒಳನೋಟ: ಭೂ ಪರಿಹಾರದಲ್ಲಿ ನುಸುಳಿದ ರಾಜಕಾರಣ ಬೈರಗೊಂಡ್ಲು ಜಲಾಶಯಕ್ಕೆ ನಾನಾ ಅಡ್ಡಿ;ಮಂಜುನಾಥ್‌ ಹೆಬ್ಬಾರ್‌ ;d: 08 ಮಾರ್ಚ್ 2020,]