ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ | |
---|---|
Born | ಚಿರಂಜೀವಿ ಸರ್ಜಾ ೧೭ನೇ ಅಕ್ಟೋಬರ್ ೧೯೮೪ |
Died | ೭ನೇ ಜೂನ್ ೨೦೨೦ |
Other names | ಚಿರು |
Occupation | ನಟ |
Years active | ೨೦೦೬ ರಿಂದ ೨೦೨೦ |
Spouse | ಮೇಘನಾ ರಾಜ್ |
Relatives | ಶಕ್ತಿಪ್ರಸಾದ್ (ಅಜ್ಜ) ಅರ್ಜುನ್ ಸರ್ಜಾ (ಸೋದರ ಮಾವ) ಧ್ರುವ ಸರ್ಜಾ (ತಮ್ಮ) |
ಚಿರಂಜೀವಿ ಸರ್ಜಾ (೧೭ನೇ ಅಕ್ಟೋಬರ್ ೧೯೮೪ - ೭ನೇ ಜೂನ್ ೨೦೨೦) ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ ಭಾರತೀಯ ಚಲನಚಿತ್ರ ನಟ. ಅವರು ನಟ ಧ್ರುವ ಸರ್ಜಾ ಅವರ ಸಹೋದರ, ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಮತ್ತು ಹಿರಿಯ ಕನ್ನಡ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ.
ಜೀವನ
[ಬದಲಾಯಿಸಿ]ಇವರು ಹುಟ್ಟಿದ್ದುಬೆಂಗಳೂರಿನಲ್ಲಿ. ತಮ್ಮ ಬಾಲ್ಯ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕರ ಫ್ರೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು. ೨೦೦೯ ರಲ್ಲಿ ಬಿಡುಗಡೆಯಾದ "ವಾಯುಪುತ್ರ" ಎಂಬ ಕನ್ನಡ ಚಲನಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದಕ್ಕೂ ಮುನ್ನ ಸುಮಾರು ೪ ವರ್ಷಗಳ ಕಾಲ ತನ್ನ ಸೋದರಮಾವ ಅರ್ಜುನ್ ಸರ್ಜಾರವರ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡಿದ್ದರು.
ವೈಯಕ್ತಿಕ ಜೀವನ
[ಬದಲಾಯಿಸಿ]ಇವರು ಅಕ್ಟೋಬರ್ ೨೦೧೭ ರಲ್ಲಿ ನಟಿ ಮೇಘನಾ ರಾಜ್ ಜೊತೆ ನಿಶ್ಚಿತಾರ್ಥ ವನ್ನು ಮಾಡಿಕೊಂಡರು. ಇದಾದ ನಂತರ ಇವರು ೨ ಮೇ ೨೦೧೮ ರಲ್ಲಿ ಮದುವೆ ಮಾಡಿಕೊಂಡರು.[೧]
ಮರಣ
[ಬದಲಾಯಿಸಿ]ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಜೂನ್ ೦೭, ೨೦೨೦ ರಂದು ಹೃದಯಾಘಾತದಿಂದ ಮರಣ ಹೊಂದಿದರು.[೨]. ಅವರಿಗೆ ೩೬ ವರ್ಷ ವಯಸ್ಸಾಗಿತ್ತು.
ಚಲನಚಿತ್ರಗಳು
[ಬದಲಾಯಿಸಿ]ವರ್ಷಗಳು | ಚಿತ್ರಗಳು | ಪಾತ್ರಗಳು | ಟಿಪ್ಪಣಿಗಳು | |
---|---|---|---|---|
೨೦೦೯ | ವಾಯುಪುತ್ರ | ಬಾಲು | ಅತ್ಯುತ್ತಮ ನಟನಾಗಿ ಚಲನಚಿತ್ರ ಪ್ರಶಸ್ತಿ
(ಪುರುಷ) |
[೩] |
೨೦೧೦ | ಗಂಡೆದೆ | ಕೃಷ್ಣ | ||
ಚಿರು | ಚಿರು | |||
೨೦೧೧ | ದಂಡಂ ದಶಗುಣಂ | ಸೂರ್ಯ ಐಪಿಎಸ್ | ||
ಕೆಂಪೇಗೌಡ | ರಾಮ್ | ಅತಿಥಿ ಪಾತ್ರ | ||
೨೦೧೩ | ವರದನಾಯಕ | ಹರಿ | ||
ವಿಜ಼ಲ್ | ರಾಮ್ | |||
೨೦೧೪ | ಚಂದ್ರಲೇಖ | ಚಂದು | ||
ಅಜಿತ್ | ಅಜಿತ್ | |||
೨೦೧೫ | ರುದ್ರತಾಂಡವ | ಶಿವರಾಜ್ | [೪] | |
ಆಟಗಾರ | ಮೃತ್ಯುಂಜಯ | |||
ರಾಮಲೀಲಾ | ರಾಮ್ | |||
೨೦೧೭ | ಆಕೆ | ಅರ್ಜುನ್/ಶಿವ | ||
ಭರ್ಜರಿ | ಸೈನಿಕ | ಅತಿಥಿ ಪಾತ್ರ | ||
೨೦೧೮ | ಸಂಹಾರ | ಶ್ರೀ ಶೈಲ | ||
ಸಿಜ಼ರ್ | ಸಿಜ಼ರ್ | |||
ಅಮ್ಮ ಐ ಲವ್ ಯು | ಸಿದ್ದಾರ್ಥ | [೫] | ||
೨೦೧೯ | ಸಿಂಗ | ಸಿಂಗ | ||
೨೦೨೦ | ಖಾಕಿ | ಚಿರು | ||
ಆದ್ಯಾ | ಆದಿತ್ಯ ಶಂಕರ್ | |||
ಶಿವಾರ್ಜುನ | ಶಿವ | |||
೨೦೨೧ | ರಣಂ | |||
೨೦೨೩ | ರಾಜಮಾರ್ತಾಂಡ | ರಾಜ | ||
ನಿರ್ಧರಿಸಬೇಕಿದೆ | ಏಪ್ರಿಲ್† | |||
ಕ್ಷತ್ರಿಯ† |
ಇನ್ನೂ ಬಿಡುಗಡೆಯಾಗದ ಚಿತ್ರ |
ಉಲ್ಲೇಖ
[ಬದಲಾಯಿಸಿ]- ↑ "ಚಿರಂಜೀವಿ ಮೇಘನಾ ರಾಜ್ ಮದುವೆ". Indian Express.
- ↑ "ನಟ ಚಿರಂಜೀವಿ ಸರ್ಜಾ ಸಾವು". Vijayakarnataka.com.
- ↑ https://www.thehindu.com/todays-paper/tp-features/tp-metroplus/the-bona-fide-actor/article22460333.ece
- ↑ https://www.imdb.com/name/nm5699216/bio?ref_=nm_ov_bio_sm
- ↑ Amma I love you review this Chiranjeevi Sarja movie is decent watch