ಮೇಘನಾ ರಾಜ್
ಮೇಘನಾ ರಾಜ್ | |
---|---|
Born | ಮೇಘನಾ ಸುಂದರ್ ರಾಜ್ |
Alma mater | ಕ್ರೈಸ್ಟ್ ಯುನಿವರ್ಸಿಟಿ, ಬೆಂಗಳೂರು |
Occupation | ನಟಿ |
Years active | ೨೦೦೯-ಇಂದಿನವರೆಗೆ |
Spouse | ಚಿರಂಜೀವಿ ಸರ್ಜಾ |
Parents |
|
Relatives | ಧ್ರುವ ಸರ್ಜಾ |
ಮೇಘನಾ ರಾಜ್‌ರವರು ಭಾರತೀಯ ಚಿತ್ರರಂಗದ ನಟಿ. ಇವರು ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.[೧] ಬೆಂಡು ಅಪ್ಪರಾವ್ ಆರ್.ಎಂ.ಪಿ ಇವರ ಮೊದಲ ಚಲನಚಿತ್ರ. ಇದು ತೆಲುಗು ಭಾಷೆಯ ಚಿತ್ರವಾಗಿದ್ದು, ೨೦೦೯ರಲ್ಲಿ ತೆರೆಕಂಡಿತ್ತು.
ಆರಂಭಿಕ ಜೀವನ
[ಬದಲಾಯಿಸಿ]ಮೇಘನಾ ರಾಜ್‌ರವರು ೧೯೯೦ರ ಮೇ ೦೩ರಂದು ಕರ್ನಾಟಕದ, ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಜೋಶಾಯ್.[೨] ಇವರ ತಂದೆ ಸುಂದರ್ ರಾಜ್‌ರವರು ೧೮೦ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ತಾಯಿ ಪ್ರಮೀಳಾ ಜೋಶಾಯ್‌ರವರು ಕನ್ನಡ ಚಿತ್ರರಂಗದ ನಟಿ ಮತ್ತು ನಿರ್ಮಾಪಕಿಯಾಗಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿ, ಬೆಂಗಳೂರಿನ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ವಿಷಯದಲ್ಲಿ ಪದವಿಯ ಪಡೆದಿದ್ದಾರೆ.
ವೃತ್ತಿ
[ಬದಲಾಯಿಸಿ]ಮೇಘನಾರವರು ರಂಗಭೂಮಿ ಕಲಾವಿದೆಯಾಗಿ, ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಜೋಕುಮಾರಸ್ವಾಮಿ ಎಂಬ ನಾಟಕದಲ್ಲಿ ತಂದೆ ಸುಂದರ್ ರಾಜ್‌ರವರೊಂದಿಗೆ ನಟಿಸಿದ್ದರು. ೨೦೦೬ರಲ್ಲಿ ಪೋಯಿ ಎಂಬ ತಮಿಳು ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ತೆರಳಿದ್ದ ಮೇಘನಾರವರಿಗೆ ಅದೇ ಚಿತ್ರದ ನಿರ್ದೇಶಕರಾಗಿದ್ದ ಕೆ. ಬಾಲಚಂದರ್‌ರವರು ಚಿತ್ರರಂಗಕ್ಕೆ ಬರಲು ಆಹ್ವಾನವಿತ್ತರು. ಮುಂದೆ ಕೆ. ಬಾಲಚಂದ್ರರ್‌ರವರ ಹಲವು ಚಿತ್ರಗಳಲ್ಲಿ ಮೇಘನಾರವರು ನಟಿಸಿದರು.
೨೦೦೮ ರಿಂದ ೨೦೦೯
[ಬದಲಾಯಿಸಿ]ಇವರು ನಟಿಸಿದ ಮೊದಲ ಚಲನಚಿತ್ರ ತೆಲುಗು ಭಾಷೆಯ ಬೆಂಡು ಅಪ್ಪರಾವ್ ಆರ್.ಎಂ.ಪಿ. ಆದರೆ ಈ ಚಿತ್ರ ಮೊದಲು ತೆರೆಕಾಣಲಿಲ್ಲ. ನಂತರ ಕಾಮಿಡಿ ಎಂಟರ್‌ಟೈನರ್ ಎಂಬ ಚಿತ್ರದಲ್ಲಿ ಶಾಲಾ ಶಿಕ್ಷಕಿಯಾಗಿ ಪಾತ್ರ ನಿರ್ವಹಿಸಿದರು. ಈ ಚಲನಚಿತ್ರ ೨೦೦೯ರಲ್ಲಿ ತೆರೆಕಂಡಿತ್ತು. ಇವರು ನಟಿಸಿದ ಪ್ರಥಮ ಕನ್ನಡ ಚಲನಚಿತ್ರ ಪುಂಡ. ಇದು ತಮಿಳು ಭಾಷೆಯ ಪೊಲ್ಲಾಧವನ್ ಎಂಬ ಚಲನಚಿತ್ರದ ರಿಮೇಕ್ ಆಗಿದೆ. ಇವರ ಪ್ರಥಮ ತಮಿಳು ಚಲನಚಿತ್ರ ಭೂವಪಾಥೈ ಪಾಂಡಿಯನ್. ಈ ಚಿತ್ರದ ನಿರ್ದೇಶಕರು ಕಾಧಲ್ ಸೊಲ್ಲಾ ವಂಧೆನ್.
೨೦೦೮ರಲ್ಲಿ ಕೃಷ್ಣಲೀಲೈ ಎಂಬ ತಮಿಳು ಚಲನಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಿರ್ಮಾಪಕರು ಕೆ. ಬಾಲಚಂದರ್ ಮತ್ತು ನಿರ್ದೇಶಕರು ಸೆಲ್ವನ್‌ರಾಗಿದ್ದರು. ಕಾರಣಾಂತರದಿಂದ ಚಿತ್ರ ೨೦೦೯ರಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ಪ್ರಮುಖ ಮಹಿಳಾ ಪಾತ್ರದಲ್ಲಿ ನಟಿಸಿದ್ದಾರೆ. ನಂತರ ಇವರು ಮಲಯಾಳಂ ಭಾಷೆಯ ಯಕ್ಷಿಯಮ್ ಎನ್ಜನುಮ್ ಎನ್ನುವ ಚಿತ್ರದಲ್ಲಿ ನಟಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು ವಿನಯನ್‌ರವರು ನಿರ್ದೇಶಿಸಿದ್ದರು ಮತ್ತು ಈ ಚಿತ್ರ ೨೦೧೦ರ ಆಗಸ್ಟ್‌ನಲ್ಲಿ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಇನ್ನೆರಡು ತಮಿಳು ಚಲನಚಿತ್ರಗಳಲ್ಲಿ ಮೇಘನಾರವರು ನಟಿಸಿದ್ದರು. ಅದರಲ್ಲಿ ಒಂದು ನಂದಾ ನಂದಿತ, ಇದು ಕನ್ನಡ ಚಲನಚಿತ್ರ ನಂದಾ ಲವ್ಸ್ ನಂದಿತಾ ಚಿತ್ರದ ರಿಮೇಕ್ ಆಗಿದೆ. ಇವರು ನಟಿಸಿದ ಮತ್ತೊಂದು ಚಿತ್ರ ಕಲ್ಲಾ ಸಿರಿಪಾಜಾಗ.
೨೦೧೧ ರಿಂದ ೨೦೧೩
[ಬದಲಾಯಿಸಿ]೨೦೦೧೧ರ ಡಿಸೆಂಬರ್ ಮೊದಲ ವಾರದಲ್ಲಿ ತೆರೆಕಂಡ ಮಲಯಾಳಂ ಚಲನಚಿತ್ರ ಬ್ಯೂಟಿಪುಲ್‌ನಲ್ಲಿ ಮೇಘನಾರವರು ನಟಿಸಿದ್ದರು. ಈ ಚಿತ್ರ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮನವನ್ನು ಗೆದ್ದಿತು ಜೊತೆಗೆ ೨೦೧೧ರ ಉತ್ತಮ ಮಲಯಾಳಂ ಚಲನಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಚಿತ್ರದಲ್ಲಿ ಮೇಘನಾರವರು ಅಂಜಲಿ ಎಂಬ ಹೆಸರಿನ ಹೋಂ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಪಾತ್ರ ಉತ್ತಮ ವಿಮರ್ಶೆಗೆ ಕೂಡ ಒಳಪಟ್ಟಿತು. ಬ್ಯೂಟಿಪುಲ್ ಚಿತ್ರದ ನಂತರ ಮಲಯಾಳಂನಲ್ಲಿ ಮೇಘನಾರವರು ಬಹುಬೇಡಿಕೆಯ ನಟಿಯಾಗಿದ್ದರು.
ಇದೇ ಸಂದರ್ಭದಲ್ಲಿ ಮೇಘನಾರವರಿಗೆ ಕನ್ನಡ ಚಲನಚಿತ್ರದಲ್ಲಿ ಬೇಡಿಕೆ ಕಡಿಮೆಯಾಗಿತ್ತು. ಈ ಕಾರಣದಿಂದಾಗಿ ಅವರು ಹಲವಾರು ಆಹಾರ ಪದ್ಧತಿಯನ್ನು ಮತ್ತು ವ್ಯಾಯಾಮವನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡರು.
೨೦೧೨ರಲ್ಲಿ ಅವರು ನಟಿಸಿದ್ದ ಮಲಯಾಳಂ ಚಿತ್ರ ನಮುಕು ಪಾರ್ಕ್ಕಾನ್, ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡಿತು.
೨೦೧೩ ರಿಂದ ೨೦೧೫
[ಬದಲಾಯಿಸಿ]೨೧೦೩ರಲ್ಲಿ ಮೇಘನಾರವರು ರಾಜಾಹುಲಿ ಎಂಬ ಕನ್ನಡ ಚಲನಚಿತ್ರದಲ್ಲಿ ನಟಿಸಿದರು. ಈ ಚಲನಚಿತ್ರದಲ್ಲಿ ಯಶ್ ನಾಯಕನಾಗಿ ಕಾಣಿಸಿಕೊಂಡರೆ, ಮೇಘನಾರವರು ನಾಯಕನಟಿಯಾಗಿ ನಟಿಸಿದ್ದರು.[೩] ಇದಾದ ನಂತರ ಕನ್ನಡದ ಬಹುಪರಾಕ್ ಚಿತ್ರದಲ್ಲಿ ನಟಿಸಿದರು. ಈ ಎರಡು ಚಿತ್ರದಲ್ಲಿ ಇವರ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತು.
ನಂತರ ಆಟಗಾರ ಎಂಬ ಕನ್ನಡದ ಚಲನಚಿತ್ರದಲ್ಲಿ ನಟಿಸಿದರು, ಈ ಚಿತ್ರ ೨೦೧೫ರ ಆಗಸ್ಟ್‌ನಲ್ಲಿ ತೆರೆಕಂಡಿತು. ವಿಮರ್ಶಾತ್ಮಕವಾಗಿ ಉತ್ತಮ ಚಿತ್ರಗಳ ಪಟ್ಟಿಗೆ ಸೇರಿತು. ಇದರೊಂದಿಗೆ ವಂಶೋದ್ಧಾರಕ ಎಂಬ ಕನ್ನಡ ಚಲನಚಿತ್ರದಲ್ಲೂ ನಟಿಸಿದ್ದಾರೆ.
೨೦೧೬ರ ನಂತರ
[ಬದಲಾಯಿಸಿ]೨೦೧೬ರ ನಂತರ ಮೇಘನಾರವರು ಭುಜಂಗ, ಅಲ್ಲಮ, ಲಕ್ಷ್ಮಣ ಎಂಬ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದರು. ಜೊತೆಗೆ ಹಲ್ಲೆಲೂಯಾ ಎಂಬ ಮಲಯಾಳಂ ಚಲನಚಿತ್ರದಲ್ಲೂ ನಟಿಸಿದ್ದರು. ೨೦೧೯ರಲ್ಲಿ ತೆರೆಕಂಡ ಕುರುಕ್ಷೇತ್ರ ಎಂಬ ಕನ್ನಡ ಚಲನಚಿತ್ರದಲ್ಲಿ ರಾಜಕುಮಾರಿ ಭಾನುಮತಿಯಾಗಿ ನಟಿಸಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]೨೦೧೭ರ ಅಕ್ಟೋಬರ್ ೨೨ರಂದು ಕನ್ನಡ ಚಲನವಚಿತ್ರ ನಟ ಚಿರಂಜೀವಿ ಸರ್ಜಾರವರೊಡನೆ ನಿಶ್ಚಿತಾರ್ಥವನ್ನು ಮಾಡಿಕೊಂಡರು ಮತ್ತು ೨೦೧೮ ಮೇ ೦೨ ರಂದು ಅವರೊಡನೆ ವಿವಾಹವಾದರು.[೪]
ಚಲನಚಿತ್ರಗಳು
[ಬದಲಾಯಿಸಿ]ಕ್ರಮಸಂಖ್ಯೆ | ವರ್ಷ | ಚಲನಚಿತ್ರ | ಪಾತ್ರ | ಭಾಷೆ |
---|---|---|---|---|
೦೧ | ೨೦೦೯ | ಬೆಂಡು ಅಪ್ಪರಾವ್ ಆರ್.ಎಂ.ಪಿ. | ಗಾಯತ್ರಿ | ತೆಲುಗು |
೦೨ | ೨೦೧೦ | ಪುಂಡಾ | ಮೇಘಾ | ಕನ್ನಡ |
೦೩ | ಕಾಧಾಲ್ ಸೊಲ್ಲಾ ವಂದೇನ್ | ಸಂಧ್ಯಾ ಪಂಚಚರಂ | ತಮಿಳು | |
೦೪ | ಯಕ್ಷಿಯಮ್ ಎನ್ಜನುಮ್ | ಆತಿರಾ | ಮಲಯಾಳಂ | |
೦೫ | ೨೦೧೧ | ಆಗಸ್ಟ್ ೧೫ | ಲಕ್ಷ್ಮಿ | ಮಲಯಾಳಂ |
೦೬ | ರಘುವಿಂಟೆ ಸ್ವಾಂತಂ ರಶಿಯಾ | ರಶಿಯಾ | ಮಲಯಾಳಂ | |
೦೭ | ಉಯರ್ಥಿರು ೪೨೦ | ಇಯಾಲ್ | ತಮಿಳು | |
೦೮ | ಪಚುವಮ್ ಕೋವಲನಮ್ | ಇಷ್ಟ | ಮಲಯಾಳಂ | |
೦೯ | ಬ್ಯೂಟಿಫುಲ್ | ಅಂಜಲಿ | ಮಲಯಾಳಂ | |
೧೦ | ಪೊನ್ನು ಕೊಂಡೊರು ಆಲ್ರೂಪಾಮ್ | ಮಲಯಾಳಂ | ||
೧೧ | ೨೦೧೧ | ನಂದಾ ನಂದಿತಾ | ನಂದಿತಾ | ತಮಿಳು |
೧೨ | ಅಚಂತೆ ಆನ್‌ಮಕ್ಕಲ್ | ಮೀರಾ | ಮಲಯಾಳಂ | |
೧೩ | ನಮುಕು ಪಾರ್ಕ್ಕಾನ್ | ರೇಣುಕಾ | ಮಲಯಾಳಂ | |
೧೪ | ಮುಲ್ಲಮೊಟ್ಟಂ ಮುಂತಿರಿಚರಂ | ಸುಚಿತ್ರ | ಮಲಯಾಳಂ | |
೧೫ | ಬ್ಯಾಂಕಿಂಗ್ ಅವರ್ಸ್ ೧೦ ರಿಂದ ೦೪ | ರೇವತಿ | ಮಲಯಾಳಂ | |
೧೬ | ಲಕ್ಕಿ | ಜಾನಕಿ | ತೆಲುಗು | |
೧೭ | ಪಾಪಿನ್ಸ್ | ಮಲಯಾಳಂ | ||
೧೮ | ಮದಿರಾಸಿ | ಮಾಯಾ | ಮಲಯಾಳಂ | |
೧೯ | ೨೦೧೩ | ಮಾಡ್ ಡ್ಯಾಡ್ | ಅಣ್ಣಮ್ಮ | ಮಲಯಾಳಂ |
೨೦ | ರೆಡ್ ವೈನ್ | ಆನ್ ಮೇರಿ | ಮಲಯಾಳಂ | |
೨೧ | ಅಪ್ & ಡೌನ್ - ಮುಕಲಿಲ್ ಒರಲುಂಡು | ನಿಗೂಢ ಮಹಿಳೆ | ಮಲಯಾಳಂ | |
೨೨ | ಮೆಮೋರಿಸ್ | ಟೀನಾ | ಮಲಯಾಳಂ | |
೨೩ | ದಿ ಗುಡ್, ದಿ ಬ್ಯಾಡ್ ಆಂಡ್ ಅಗ್ಲಿ | ಕಾವ್ಯಾ | ಮಲಯಾಳಂ | |
೨೪ | ರಾಜ ಹುಲಿ | ಕಾವೇರಿ | ಕನ್ನಡ | |
೨೫ | ೨೦೧೪ | ಬಹುಪರಾಕ್ | ಸೇಹ್ನ/ಪ್ರೀತಿ | ಕನ್ನಡ |
೨೬ | ೧೦೦ ಡಿಗ್ರಿ ಸೆಲ್ಸಿಯಸ್ | ರೇವತಿ | ಮಲಯಾಳಂ | |
೨೭ | ಡಾಲ್ಫಿನ್ಸ್ | ಮೃದುಲಾ | ಮಲಯಾಳಂ | |
೨೮ | ೨೦೧೫ | ಆಟಗಾರ | ಸಾಕ್ಷಿ | ಕನ್ನಡ |
೨೯ | ವಂಶೋದ್ಧಾರಕ | ಕನ್ನಡ | ||
೩೦ | ೨೦೧೬ | ಹಲ್ಲೆಲೂಯಾ | ಡಾ. ಮೀರಾ ಮೆನನ್ | ಮಲಯಾಳಂ |
೩೧ | ಲಕ್ಷ್ಮಣ | ಅಂಜಲಿ | ಕನ್ನಡ | |
೩೨ | ಭುಜಂಗ | ರಚನಾ | ಕನ್ನಡ | |
೩೩ | ೨೦೧೭ | ಅಲ್ಲಮ | ಮಾಯಾ | ಕನ್ನಡ |
೩೪ | ಜೀಬ್ರಾ ವರಕಲ್ | ಹೆನ್ನಾ | ಮಲಯಾಳಂ | |
೩೫ | ನೂರೊಂದು ನೆನಪು | ಶ್ರುತಿ ಅರಸ್ | ಕನ್ನಡ | |
೩೬ | ಜಿಂದಾ | ಕನ್ನಡ | ||
೩೭ | ೨೦೧೮ | ಎಂಎಂಸಿಎಚ್ | ಮೇಘಾ | ಕನ್ನಡ |
೩೮ | ಇರುವುದೆಲ್ಲವ ಬಿಟ್ಟು | ಪೂರ್ವಿ | ಕನ್ನಡ | |
೩೯ | ೨೦೧೯ | ಒಂಟಿ | ಪಾರು | ಕನ್ನಡ |
೪೦ | ಕುರುಕ್ಷೇತ್ರ | ಭಾನುಮತಿ | ಕನ್ನಡ |
ಸಾರ್ವಜನಿಕ ಚಿತ್ರ
[ಬದಲಾಯಿಸಿ]ಮೇಘನಾ ಅವರ ಅಧಿಕೃತ ಫೇಸ್‌ಬುಕ್ ಪುಟವು ೨.೫ ದಶಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.[೫] ಕೊಚ್ಚಿ ಟೈಮ್ಸ್ನ 'ಅತ್ಯಂತ ಅಪೇಕ್ಷಣೀಯ ಮಹಿಳೆ ೨೦೧೫' ಸಮೀಕ್ಷೆಯಲ್ಲಿ ಅವರು ನಂ .೧೯ ಸ್ಥಾನ ಪಡೆದರು.[೬] ಬೆಂಗಳೂರು ಟೈಮ್ಸ್ನ 'ಅತ್ಯಂತ ಅಪೇಕ್ಷಣೀಯ ಮಹಿಳಾ ೨೦೧೫' ಸಮೀಕ್ಷೆಯಲ್ಲಿ ಮೇಘನಾ ರಾಜ್ ೧೦ ನೇ ಸ್ಥಾನದಲ್ಲಿದ್ದಾರೆ.[೭]
ಪ್ರಶಸ್ತಿಗಳು
[ಬದಲಾಯಿಸಿ]- ೨೦೧೧ರಲ್ಲಿ ಬ್ಯೂಟಿಫುಲ್ ಚಲನಚಿತ್ರದ ನಟನೆಗೆ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.[೮]
- ೨೦೧೧ರಲ್ಲಿ ಕನ್ನಡದ ಪುಂಡ ಚಲನಚಿತ್ರದ ನಟನೆಗೆ ಸುವರ್ಣ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ಪಡೆದಿದ್ದಾರೆ.
- ೨೦೧೨ರ ದಕ್ಷಿಣ ಭಾರತ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಬ್ಯೂಟಿಫುಲ್ ಚಲನಚಿತ್ರದ ನಟನೆಗೆ ಅತ್ಯುತಮ ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ https://timesofindia.indiatimes.com/topic/Meghana-Raj
- ↑ https://archive.is/20130217235602/http://entertainment.oneindia.in/kannada/top-stories/2009/meghana-raj-punda-100909.html
- ↑ https://www.ibtimes.co.in/yashs-raja-huli-takes-box-office-by-storm-526302
- ↑ https://www.deccanchronicle.com/entertainment/mollywood/231017/cupid-strikes-again.html
- ↑ "Meghana Raj". www.facebook.com. Retrieved 19 March 2020.
- ↑ "Kochi Times Most Desirable Woman 2015: Deepti Sati - Times of India". The Times of India (in ಇಂಗ್ಲಿಷ್). Retrieved 19 March 2020.
- ↑ "Bangalore Times Most Desirable Women 2015 - Times of India". The Times of India (in ಇಂಗ್ಲಿಷ್). Retrieved 19 March 2020.
- ↑ https://timesofindia.indiatimes.com/entertainment/malayalam/movies/news/The-Kochi-Times-Film-Awards-2011/articleshow/14341029.cms?