ವಿಷಯಕ್ಕೆ ಹೋಗು

ಜೈವಿಕ ಡೀಸೆಲ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೈವಿಕ ಡೀಸೆಲ್‌ ಚಾಲಿತ ಬಸ್‌
ಖಾಲಿ ಜಾಗ ತುಂಬಿಸುವ ಮಿತೈಲ್‌ ಲಿನೊಲಿಯೇಟ್‌, ಅಥವಾ ಲಿನೊಲಿಯಿಕ್‌ ಆಸಿಡ್‌ ಮಿತೈಲ್‌ ಎಸ್ಟರ್‌ ಮಾದರಿಯನ್ನು ಸೊಯ್‌ಬೀನ್‌ ಅಥವಾ ಕೆನೊಲಾ ತೈಲ ಮತ್ತು ಮೆಥನಾಲ್‌ನಿಂದ ತಯಾರಿಸಲಾಗುತ್ತದೆ.
ಖಾಲಿ ಜಾಗ ತುಂಬಿಸುವ ಇತೈಲ್‌ ಸ್ಟಿಯರೇಟ್‌, ಅಥವಾ ಸ್ಟಿಯರಿಕ್‌ ಆಸಿಡ್‌ ಇತೈಲ್‌ ಎಸ್ಟರ್‌ ಮಾದರಿಯನ್ನು ಸೊಯ್‌ಬೀನ್‌ ಅಥವಾ ಕೆನೊಲಾ ತೈಲ ಮತ್ತು ಮೆಥನಾಲ್‌ನಿಂದ ತಯಾರಿಸಲಾಗುತ್ತದೆ.


'ಜೈವಿಕ ಡೀಸೆಲ್‌ ' ಎಂಬುದು ಸಸ್ಯಜನ್ಯ-ತೈಲ ಅಥವಾ ಪಶು-ಕೊಬ್ಬು ಆಧಾರಿತ ಡೀಸೆಲ್‌ ರೂಪದ ಇಂಧನ. ಇದು ಆಲ್ಕೈಲ್‌ (ಮಿತೈಲ್‌, ಪ್ರೊಪೈಲ್‌ ಅಥವಾ ಇತೈಲ್‌) ಎಸ್ಟರ್‌ಗಳ ಸರಣಿ ಹೊಂದಿದೆ. ಸಸ್ಯ-ತರಕಾರಿ ತೈಲ, ಪಶುವಿನ ಕೊಬ್ಬು (ಟ್ಯಾಲೊ)ನಂತಹ ಲಿಪಿಡ್‌ಗಳನ್ನು ಆಲ್ಕೊಹಾಲ್‌ನೊಂದಿಗೆ ರಾಸಾಯನಿಕ ಕ್ರಿಯೆಗೊಳಪಡಿಸಿ ಜೈವಿಕ ಡೀಸೆಲ್‌ ತಯಾರಿಸಲಾಗುತ್ತದೆ.

ಜೈವಿಕ ಡೀಸೆಲನ್ನು ಸಾಮಾನ್ಯ ಡೀಸೆಲ್‌ ಎಂಜಿನ್‌ಗಳಲ್ಲಿ ಬಳಸಲೆಂದೇ ಉತ್ಪಾದಿಸಲಾಗಿದೆ. ಹಾಗಾಗಿ, ಪರಿವರ್ತಿತ ಡೀಸೆಲ್‌ ಇಂಜಿನ್‌ಗಳಲ್ಲಿ ಇಂಧನವಾಗಿ ಬಳಸಲಾದ ತರಕಾರಿ ಹಾಗೂ ತ್ಯಾಜ್ಯ ತೈಲಗಳಿಗಿಂತ ಭಿನ್ನವಾಗಿದೆ. ಜೈವಿಕ ಡೀಸೆಲನ್ನು ಪ್ರತ್ಯೇಕ, ಅಥವಾ ಪೆಟ್ರೊಡೀಸೆಲ್‌ನೊಂದಿಗೆ ಸೇರಿಸಿ ಬಳಸಬಹುದು. 'ಜೈವಿಕ ಡೀಸೆಲ್‌' ಎಂಬ ಪದವು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ 'ಮೊನೊ-ಆಲ್ಕೈಲ್‌ ಎಸ್ಟರ್‌' ಎಂದು ಪ್ರಮಾಣೀಕರಿಸಲಾಗಿದೆ.[]


ಹದಮಿಶ್ರಣಗಳು

[ಬದಲಾಯಿಸಿ]

ಜೈವಿಕ ಡೀಸೆಲ್‌ ಮತ್ತು ಸಾಂಪ್ರದಾಯಿಕ ಹೈಡ್ರೊಕಾರ್ಬನ್‌-ಮೂಲದ ಡೀಸೆಲ್‌ಗಳು, ಇಂಧನ ಮಾರುಕಟ್ಟೆಯಲ್ಲಿ ಬಳಸಲೆಂದೇ ದೊರೆಯುವ ಸಾಮಾನ್ಯ ಉತ್ಪನ್ನಗಳಾಗಿವೆ. ಯಾವುದೇ ಇಂಧನದ ಮಿಶ್ರಣದಲ್ಲಿ ಜೈವಿಕ ಡೀಸೆಲ್‌ನ ಪ್ರಮಾಣ ತಿಳಿಯಲು, ಪ್ರಪಂಚದ ಹಲವೆಡೆ 'B' ಫ್ಯಾಕ್ಟರ್‌ ಎಂಬ ವ್ಯವಸ್ಥೆ ಬಳಕೆಯಲ್ಲಿದೆ. 20%ರಷ್ಟು ಜೈವಿಕ ಡೀಸೆಲ್‌ ಹೊಂದಿದ ಇಂಧನವನ್ನು B20 ಎನ್ನಲಾಗುತ್ತದೆ. ಶುದ್ಧ ಜೈವಿಕ ಡೀಸೆಲನ್ನು B100 ಎನ್ನಲಾಗುತ್ತದೆ.[] B99.9 ಬಳಕೆಯು USAದಲ್ಲಿ ಸರ್ವೇಸಾಮಾನ್ಯವಾಗಿದೆ. ಏಕೆಂದರೆ, ಶುದ್ಧ ಜೈವಿಕ ಡೀಸೆಲ್‌ನೊಂದಿಗೆ ಪೆಟ್ರೊಲಿಯಂ ಡೀಸೆಲ್‌ ಮಿಶ್ರಣದ ಮೊದಲ ಉದ್ಯಮಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. 20 ಪರ್ಸೆಂಟ್‌ ಜೈವಿಕ ಡೀಸೆಲ್‌ ಮತ್ತು 80 ಪರ್ಸೆಂಟ್‌ ಪೆಟ್ರೊಲಿಯಂ ಡೀಸೆಲ್‌ನ (B20) ಮಿಶ್ರಣ ಸಾಮಾನ್ಯವಾಗಿ ಅಪರಿವರ್ತಿತ ಡೀಸೆಲ್‌ ಇಂಜಿನ್‌ಗಳಲ್ಲಿ ಬಳಕೆಯಾಗುತ್ತದೆ. ತನ್ನ ಶುದ್ಧ ರೂಪ (B100)ದಲ್ಲಿಯೂ ಸಹ ಜೈವಿಕ ಡೀಸೆಲ ಬಳಸಬಹುದು. ಆದರೆ, ಯಾವುದೇ ದುರಸ್ತಿ ಮತ್ತು ಕಾರ್ಯಕ್ಷಮತೆ ಸಮಸ್ಯೆ ತಡೆಯಲು ಇಂಜಿನ್‌ನಲ್ಲಿ ಕೆಲವು ಮಾರ್ಪಾಡುಗಳ ಅಗತ್ಯವಿದೆ. ಪೆಟ್ರೊಲಿಯಂ ಡೀಸೆಲ್‌ನೊಂದಿಗೆ B100ನ್ನು ಕೆಳಕಂಡ ಕ್ರಮಗಳ ಮೂಲಕ ಮಿಶ್ರಣ ಮಾಡಬಹುದು:

  • ಉತ್ಪಾದನಾ ಘಟಕದಲ್ಲಿನ ಟ್ಯಾಂಕುಗಳಲ್ಲಿ ಮಿಶ್ರಣದ ನಂತರವೇ ಇಂಧನ ಟ್ಯಾಂಕರ್‌ಗಳಿಗೆ ತುಂಬಿಸಲಾಗುವುದು.
  • ಟ್ಯಾಂಕರ್ ಲಾರಿಯಲ್ಲಿ ಸ್ಪ್ಲಾಷ್‌ ಮಿಕ್ಸಿಂಗ್‌ (ಜೈವಿಕ ಡೀಸೆಲ್‌ ಮತ್ತು ಪೆಟ್ರೊಲಿಯಂ ಡೀಸೆಲ್‌ಗಳನ್ನು ನಿರ್ದಿಷ್ಟ ಪ್ರಮಾಣಗಳಲ್ಲಿ ಬೆರೆಸುವುದು)
  • ಇನ್‌-ಲೈನ್‌ ಮಿಕ್ಸಿಂಗ್‌ - ಎರಡು ರಾಸಾಯನಿಕ ಅಂಶಗಳನ್ನು ಏಕಕಾಲಕ್ಕೆ ಟ್ಯಾಂಕರ್‌ಗಳಲ್ಲಿ ತುಂಬಲಾಗುತ್ತದೆ.
  • ಮೀಟರ್ಡ್‌ ಪಂಪ್‌ ಮಿಕ್ಸಿಂಗ್‌ - ಪೆಟ್ರೊಲಿಯಂ ಡೀಸೆಲ್‌ ಮತ್ತು ಜೈವಿಕ ಡೀಸೆಲ್‌ ಮಾಪಕಗಳನ್ನು ಒಟ್ಟು ಘನದ xರಷ್ಟು ಅಳತೆಗೆ ನಿಗದಿಪಡಿಸುತ್ತದೆ. ಎರಡು ಮೂಲಗಳಿಂದ ರಾಸಾಯನಿಕ ಅಂಶಗಳನ್ನು ವರ್ಗಾವಣಾ ಪಂಪ್‌ ಸೆಳೆಯುತ್ತದೆ. ಮಿಶ್ರಣವು ಪೂರ್ಣಗೊಂಡಾಗ ಪಂಪಿನ ಕಾರ್ಯಾಚರಣೆಯನ್ನು ನಿಲ್ಲಿಸಲಾಗುತ್ತದೆ.


ಅಳವಡಿಕೆಗಳು

[ಬದಲಾಯಿಸಿ]

ಬಹುತೇಕ ಆಧುನಿಕ ಡೀಸೆಲ್‌ ಇಂಜಿನ್‌ಗಳಲ್ಲಿ ಶುದ್ಧ ಜೈವಿಕ ಡೀಸೆಲ್‌ ನ್ನು (B100)ರೂಪದಲ್ಲಿ ಬಳಸಬಹುದು, ಅಥವಾ ಪೆಟ್ರೊಲಿಯಂ ಡೀಸೆಲ್‌ನ ಯಾವುದೇ ಮಿಶ್ರಣದೊಂದಿಗೆ ಬಳಸಬಹುದು.[ಸೂಕ್ತ ಉಲ್ಲೇಖನ ಬೇಕು] ಜೈವಿಕ ಡೀಸೆಲ್‌ ಪೆಟ್ರೊಡೀಸೆಲ್‌ಗಿಂತ ಭಿನ್ನವಾದ ದ್ರಾವಕ ಲಕ್ಷಣ ಹೊಂದಿದೆ. 1992ಕ್ಕೆ ಮುಂಚಿನ ವಾಹನಗಳಲ್ಲಿರುವ ನೈಸರ್ಗಿಕ ರಬ್ಬರ್‌ ಗ್ಯಾಸ್ಕೆಟ್‌ಗಳು ಮತ್ತು ನೀರಿನ ರಬ್ಬರ್ ಕೊಳವೆಗಳನ್ನು ಇದು ಸರಳ ಸಂಯುಕ್ತಗಳಾಗಿ ವಿಭಜಿಸುತ್ತದೆ. ಆದರೂ ಇವು ಸ್ವಾಭಾವಿಕ ಸವೆತಕ್ಕೆ ಗುರಿಯಾಗುತ್ತವೆ. ಬಹುಶಃ ಇವುಗಳ ಬದಲಿಗೆ ಜೈವಿಕ ಡೀಸೆಲ್‌ನೊಂದಿಗೆ ಯಾವುದೇ ರಾಸಾಯನಿಕ ಕ್ರಿಯೆಗೊಳಗಾಗದ FKMನ್ನು ಬಳಸಲಾಗಿದೆ. ಪೆಟ್ರೊಡೀಸೆಲ್‌ ಯುಕ್ತ ಇಂಧನಗಳಲ್ಲಿ ಉಳಿದ ಶಕ್ತಿ ಬಿಡುಗಡೆಯ ಅಂಶಗಳನ್ನು ಜೈವಿಕ ಡೀಸೆಲ್‌ ಸರಳ ಸಂಯುಕ್ತಗಳಾಗಿ ಒಡೆಯಬಲ್ಲದು.[] ಒಂದು ವೇಳೆ ಜೈವಿಕ ಡೀಸೆಲ್‌ನಲ್ಲಿ ಶೀಘ್ರ(ಅವಸರದ) ಬದಲಾವಣೆ ಮಾಡಿದಲ್ಲಿ, ಇಂಧನ ಶೋಧಕಗಳಲ್ಲಿನ ಉಳಿದ ಕಣಗಳಿಂದಾಗಿ, ಇಂಜಿನ್ನಿನ ಕಾರ್ಯಕ್ಷಮತೆಗೆ ಅಡ್ಡಿಯಾಗುವುದು. ಆದ್ದರಿಂದ, ಮೊದಲ ಬಾರಿಗೆ ಜೈವಿಕ ಡೀಸೆಲ್‌ ಮಿಶ್ರಣಕ್ಕೆ ವರ್ಗಾಯಿಸಿದ ಕೂಡಲೆ, ಇಂಜಿನ್‌ ಹಾಗೂ ಹೀಟರ್‌ಗಳಲ್ಲಿರುವ ಇಂಧನ ಶೋಧಕಗಳನ್ನು ಬದಲಾಯಿಸಬೇಕೆಂದು ಶಿಫಾರಸು ಮಾಡಲಾಗಿದೆ.[]


ಹಂಚಿಕೆ-ವಿತರಣೆ

[ಬದಲಾಯಿಸಿ]

2005ರಲ್ಲಿ ಇಂಧನ ನೀತಿ ಸಂಹಿತೆಯನ್ನು ಜಾರಿಗೊಳಿಸಿದಾಗಿಂದಲೂ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಜೈವಿಕ ಡೀಸೆಲ್‌ನ ಬಳಕೆ ಹೆಚ್ಚಾಗುತ್ತಿದೆ.[] ಯುರೋಪ್‌ನಲ್ಲಿ 'ನವೀಕೃತ ಸಾರಿಗೆ ಇಂಧನ ಕಾಯಿದೆ'ಯನ್ನು ಜಾರಿಗೊಳಿಸಲಾಯಿತು. ಇದರಡಿ, 2010ರ ಹೊತ್ತಿಗೆ ಪೂರೈಕೆದಾರರು, EU (ಯುರೋಪ್‌ ಒಕ್ಕೂಟ)ದಲ್ಲಿ ಮಾರಾಟ ಮಾಡುವ ಎಲ್ಲಾ ಸಾರಿಗೆ ಇಂಧನಗಳಲ್ಲೂ 5%ರಷ್ಟು ನವೀಕರಿಸಬಲ್ಲ ಇಂಧನ ಮಿಶ್ರಣವಾಗಿರಬೇಕು ಎಂದು ಕಡ್ಡಾಯಗೊಳಿಸಿತು. ಇದರಂತೆ, ರಸ್ತೆ ಸಾರಿಗೆ ವಾಹನಗಳಲ್ಲಿ ಬಳಸುವ ಡೀಸೆಲ್‌ಗೆ 5%ರಷ್ಟು ಜೈವಿಕ ಡೀಸೆಲ್‌ ಮಿಶ್ರಣವುಂಟು.


ವಾಹನಗಳಲ್ಲಿ ಬಳಕೆ ಹಾಗೂ ಉತ್ಪಾದಕರ ಸಮ್ಮತಿ

[ಬದಲಾಯಿಸಿ]

ಪ್ರಮುಖ ವಾಹನ ಉದ್ದಿಮೆ ಕ್ರಿಸ್ಲರ್‌ (ಅಂದಿನ ಡೇಮ್ಲರ್‌-ಕ್ರಿಸ್ಲರ್‌ ವಾಹನ ಉದ್ದಿಮೆಯ ಅಂಗವಾಗಿತ್ತು) ಲಿಬರ್ಟಿ CRD ಡೀಸೆಲ್‌ಗಳನ್ನು 2005ರಲ್ಲಿ ಅಮೆರಿಕನ್‌ ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಇದರಲ್ಲಿ 5%ರಷ್ಟು ಜೈವಿಕ ಡೀಸೆಲ್‌ ಮಿಶ್ರಣವಿತ್ತು. ಅರ್ಥಾತ್‌, ಡೀಸೆಲ್‌ ಇಂಧನ ಸಂಯೋಜನೆ ರೂಪದಲ್ಲಿ ಜೈವಿಕ ಡೀಸೆಲ್‌ ಕನಿಷ್ಠ ಪಕ್ಷ ಆಂಶಿಕ ಸ್ವೀಕಾರಾರ್ಹವಾಗಿತ್ತು.[] ಅಮೆರಿಕಾ ಸಂಯುಕ್ತ ಸಂಸ್ಥಾನದ ಜೈವಿಕ ಇಂಧನದ ಗುಣಮಟ್ಟ ಸುಧಾರಿಸಿದಲ್ಲಿ, ವಾರಂಟಿ(ಸಮರ್ಥನೀಯ) ವ್ಯಾಪ್ತಿ 20%ರಷ್ಟಾದರೆ ಜೈವಿಕ ಡೀಸೆಲ್‌ ಮಿಶ್ರಣಗಳಿಗೂ ರಿಯಾಯತಿ ವಿಸ್ತರಿಸಲಾಗುವುದೆಂದು ಡೇಮ್ಲರ್ ಕ್ರಿಸ್ಲರ್‌ 2007ರಲ್ಲಿ ಹೇಳಿಕೆ ನೀಡಿತು.[]


ಮೊದಲು 2004 ರಲ್ಲಿ, ಕೆನಡಾದ ಹ್ಯಾಲಿಫ್ಯಾಕ್ಸ್‌ ನಗರ ತನ್ನ ಬಸ್‌ ವ್ಯವಸ್ಥೆ ನವೀಕರಿಸಲು ನಿರ್ಧರಿಸಿತು. ಇದರಂತೆ, ಪೂರ್ಣಶಃ ಮೀನು-ತೈಲಾಧಾರಿತ ಜೈವಿಕ ಡೀಸೆಲ್‌ ಬಳಸಿ ನಗರದ ಬಸ್ ಸಂಚಾರಕ್ಕೆ ಅನುಮತಿ ನೀಡಲಾಯಿತು. ಆರಂಭದಲ್ಲಿ ನಗರದ ಬಸ್ಸುಗಳಲ್ಲಿ ಯಾಂತ್ರಿಕ ಸಮಸ್ಯೆಗಳುಂಟಾದವು. ಹಲವು ವರ್ಷಗಳ ಕಾಲ ಶುದ್ಧೀಕರಿಸಿದ ನಂತರ, ಎಲ್ಲಾ ಬಸ್ಸುಗಳು ಈ ಜೈವಿಕ ಇಂಧನವನ್ನೇ ಬಳಸಿ ಓಡಲನುವಾದವು.[][]


ತಮ್ಮದೇ ಹೊಟೇಲುಗಳಿಂದ ಹೊರಬರುವ ತ್ಯಾಜ್ಯ ತೈಲದ ಉಪ-ಉತ್ಪನ್ನಗಳಿಂದ ಜೈವಿಕ ಡೀಸೆಲ್‌ ಉತ್ಪಾದಿಸಲಾಗುವುದೆಂದು UKದ ಮೆಕ್ಡೊನಾಲ್ಡ್ಸ್‌ 2007ರಲ್ಲಿ ಘೋಷಿಸಿತು. ತಮ್ಮದೇ ವಾಹನಪಡೆಯನ್ನು ನಡೆಸಲು ಈ ಇಂಧನ ಬಳಸುವ ಯೋಜನೆ ಅವರದಾಗಿತ್ತು.[೧೦]


ರೈಲು ಸಾರಿಗೆಯಲ್ಲಿ ಬಳಕೆ

[ಬದಲಾಯಿಸಿ]

ಬ್ರಿಟಿಷ್‌ ಉದ್ಯಮಿ ರಿಚರ್ಡ್‌ ಬ್ರ್ಯಾನ್ಸನ್‌ರ 'ಥೇಮ್ಸ್‌ ವೊಯೆಜರ್‌ ' ಎಂಬ ಹೆಸರಿನ ವರ್ಜಿನ್‌ ವೊಯೆಜರ್‌ ರೈಲು ಸಂಖ್ಯೆ 220007, 'ವಿಶ್ವದ ಮೊದಲ ಜೈವಿಕ ಡೀಸೆಲ್‌ ರೈಲು' ಎನ್ನಲಾಗಿತ್ತು. 80% ಪೆಟ್ರೊಡೀಸೆಲ್‌ ಮತ್ತು ಕೇವಲ 20% ಜೈವಿಕ ಡೀಸೆಲ್‌ ಬೆರಸಿ ಓಡುವಂತೆ ಈ ಇಂಜಿನ್ ನ್ನು ಮಾರ್ಪಾಡು ಮಾಡಲಾಯಿತು. ಇದರಲ್ಲಿ ನೇರವಾಗಿ 14%ರಷ್ಟು ವಾಯು ಮಾಲಿನ್ಯ ಕಡಿಮೆಮಾಡಬಹುದಾಗಿದೆ.


ಸೆಪ್ಟೆಂಬರ್‌ 15ರ 2007ರಲ್ಲಿ 100% ಜೈವಿಕ ಡೀಸೆಲ್‌ ಬಳಸಿದ ರಾಯಲ್‌ ಟ್ರೇನ್‌, ತನ್ನ ಮೊಟ್ಟಮೊದಲ ಪ್ರಯಾಣ ಪೂರ್ಣಗೊಳಿಸಿತು.ಗ್ರೀನ್‌ ಫ್ಯುಯೆಲ್ಸ್‌ ಲಿಮಿಟೆಡ್‌ ಕಂಪೆನಿ ಈ ಇಂಧನ ಪೂರೈಸಿತ್ತು. His Royal Highness (ಇಂಗ್ಲೆಂಡಿನ ರಾಜ ಮನೆತನದ ಯುವರಾಜ) ವೇಲ್ಸ್‌ ರಾಜಕುಮಾರ, ಹಾಗೂ ಗ್ರೀನ್‌ ಫ್ಯುಯೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜೇಮ್ಸ್‌ ಹೈಗೇಟ್‌ ಈ ರೈಲಿನ ಮೊದಲ ಪ್ರಯಾಣಿಕರಾಗಿದ್ದರು. ಸಂಪೂರ್ಣವಾಗಿ ಜೈವಿಕ ಇಂಧನ ಬಳಸಿ ಈ ರೈಲನ್ನು ಓಡಿಸಲಾಗಿತ್ತು. 2007ರಿಂದಲೂ, ರಾಯಲ್‌ ಟ್ರೇನ್‌ ಯಶಸ್ವಿಯಾಗಿ B100 ಇಂಧನ (100% ಜೈವಿಕ ಡೀಸೆಲ್‌) ಇಂಧನದೊಂದಿಗೆ ಓಡುತ್ತಿದೆ.[೧೧]


ಇದೇ ರೀತಿ, 2008ರ ಬೇಸಿಗೆಯಲ್ಲಿ, '25% ಜೈವಿಕ ಡೀಸೆಲ್‌ / 75% ಪೆಟ್ರೊಡೀಸೆಲ್‌' ಬೆರಸಿ ರೈಲೊಂದನ್ನು ಪೂರ್ವ ವಾಷಿಂಗ್ಟನ್‌ನಲ್ಲಿರುವ ರಾಜ್ಯ-ಸ್ವಾಮ್ಯದ ಅಲ್ಪದೂರದ ರೈಲುಮಾರ್ಗದಲ್ಲಿ, ಪ್ರಾಯೋಗಿಕವಾಗಿ ಓಡಿಸಲಾಯಿತು. ಈ ರೈಲು ಮಾರ್ಗದುದ್ದಕ್ಕೂ, ಜೈವಿಕ ಡೀಸೆಲ್‌ ತಯಾರಕರಿಂದ ಇಂಧನ ಖರೀದಿಸುತ್ತಿತ್ತು. ಅಲ್ಪ ದೂರ ಕ್ರಮಿಸುವ ಈ ರೈಲಿಗಾಗಿ ಕೃಷಿ ವಲಯಗಳಲ್ಲಿ ಬೆಳೆಸುವ ಕೆನೊಲಾ(ರೇಪ್ಸೀಡ್ ತೈಲ) ಸಸ್ಯದ ಅಲ್ಪಾಂಶ ಬಳಸಿ ಜೈವಿಕ ಡೀಸೆಲ್‌ ತಯಾರಿಸಲಾಗುತ್ತದೆ. ಈ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಇಂತಹ ಇಂಧನ ಬಳಸಲಾಗುತ್ತದೆ.


ಅಲ್ಲದೇ 2007ರಲ್ಲಿ, B98 ಜೈವಿಕ ಡೀಸೆಲ್‌ ಮಿಶ್ರಣ (98% ಜೈವಿಕ ಡೀಸೆಲ್‌) ಬಳಸಿ ಡಿಸ್ನಿಲ್ಯಾಂಡ್‌ ತನ್ನ ಉದ್ಯಾನ ರೈಲುಗಳನ್ನು ಓಡಿಸಲಾರಂಭಿಸಿತು. ಸಂಗ್ರಹಣೆಯ ಸಮಸ್ಯೆಯಿಂದಾಗಿ ಈ ಕಾರ್ಯಯೋಜನೆಯನ್ನು 2008ರಲ್ಲಿ ನಿಲ್ಲಿಸಲಾಯಿತು. ಆದರೆ, ಮನರಂಜನಾ ಉದ್ಯಾನವು ತನ್ನದೇ ಸ್ವಂತ ಅಡುಗೆ ತೈಲದ ತ್ಯಾಜ್ಯದಿಂದ ತಯಾರಿಸಿದ ಜೈವಿಕ ಡೀಸೆಲ್‌ ಬಳಸಿ, ತನ್ನೆಲ್ಲಾ ರೈಲುಗಳನ್ನು ಓಡಿಸುವುದೆಂದು 2009ರ ಜನವರಿಯಲ್ಲಿ ಘೋಷಿಸಿತು. ಸೋಯ್‌-ಆಧಾರಿತ ಜೈವಿಕ ಡೀಸೆಲ್‌ ಬಳಸಿ ರೈಲುಗಳನ್ನು ಓಡಿಸುವುದಕ್ಕೆ ಈ ಬದಲಿ ವ್ಯವಸ್ಥೆ ಭಿನ್ನವಾಗಿದೆ.[೧೨]


ವಿಮಾನಗಳಲ್ಲಿ ಬಳಕೆ

[ಬದಲಾಯಿಸಿ]

ಸಂಪೂರ್ಣ ಜೈವಿಕ ಡೀಸೆಲ್‌ ಚಾಲಿತ ಜೆಕ್‌ ವಿಮಾನವೊಂದರ ಪ್ರಾಯೋಗಿಕ ಉಡ್ಡಯನ ನಡೆಸಲಾಗಿದೆ.[೧೩] ಆದರೂ, ಜೈವಿಕ ಇಂಧನ ಬಳಸಿದ ಇತ್ತೀಚಿಗಿನ ಜೆಟ್‌ ಹಾರಾಟಗಳಲ್ಲಿ, ಇತರೆ ನವೀಕರಿಸಬಲ್ಲ ಇಂಧನಗಳನ್ನೂ ಬಳಸಲಾಗುತ್ತಿವೆ.


ಗೃಹ ಬಳಕೆ ಮತ್ತು ವಾಣಿಜ್ಯ ತೈಲವಾಗಿ ಜೈವಿಕ ಡೀಸೆಲ್‌

[ಬದಲಾಯಿಸಿ]

ದೇಶೀಯ ಮತ್ತು ವಾಣಿಜ್ಯೋದ್ದೇಶದ (ಬಾಯ್ಲರ್‌ಗಳಲ್ಲಿ) ಜೈವಿಕ ಡೀಸೆಲನ್ನು ತಾಪಕ (ಕಾಯಿಸುವ) ಇಂಧನವಾಗಿ ಬಳಸಬಹುದು. ಇದು ಕಾಯಿಸಿದ ತೈಲ ಮತ್ತು ಜೈವಿಕ ಇಂಧನದ ಮಿಶ್ರಣವಾಗಿದೆ. ಇದನ್ನು ಪ್ರಮಾಣಕವಾಗಿಸಿ, ಸಾರಿಗೆಗಾಗಿ ಬಳಸಲಾದ ಡೀಸೆಲ್‌ ಇಂಧನಕ್ಕಿಂತ ಬೇರೆ ರೀತಿಯಲ್ಲಿ ಬಳಸಬಹುದಾಗಿದೆ. ಅಲ್ಲದೇ ತೆರಿಗೆ ಮತ್ತು ಮಾನದಂಡಗಳಲ್ಲಿ ಸ್ವಲ್ಪ ವಿನಾಯತಿಯಂತೆ ಪರಿಗಣಿಸಲಾಗುತ್ತದೆ. ಇದನ್ನು ಕೆಲವೊಮ್ಮೆ 'ಬಯೊಹೀಟ್‌' ಎಂದೂ ಹೆಸರಿಸಲಾಗಿದೆ (ಇದು U.S.ನ ರಾಷ್ಟ್ರೀಯ ಜೈವಿಕ ಡೀಸೆಲ್‌ ಮಂಡಳಿ [NBB] ಮತ್ತು ರಾಷ್ಟ್ರೀಯ ಆಯಿಲ್‌ಹೀಟ್‌ ಸಂಶೋಧನಾ ಒಕ್ಕೂಟ [NORA], ಹಾಗೂ, ಕೆನಡಾದ ಕೊಲಂಬಿಯಾ ಫ್ಯುಯೆಲ್ಸ್‌ ಸಂಸ್ಥೆಗಳ ನೋಂದಾಯಿತ ವ್ಯಾಪಾರೀ ಮುದ್ರೆಯಾಗಿದೆ). ಕಾಯಿಸಲು ಬೇಕಾಗುವ ಜೈವಿಕ ಡೀಸೆಲ್‌ ವಿವಿಧ ಮಿಶ್ರಣಗಳಲ್ಲಿ ಲಭ್ಯವಿದೆ. ಈಗ ಬಳಕೆಯಲ್ಲಿರುವ ಕುಲುಮೆಗಳಲ್ಲಿ ಯಾವುದೇ ಮಾರ್ಪಾಡಿಲ್ಲದೆ 20%ರ ವರೆಗಿನ ಜೈವಿಕ ಇಂಧನ ಮಿಶ್ರಣ ಬಳಸಬಹುದಾಗಿದೆ.


ಹಳೆಯ ಕುಲುಮೆಗಳು ರಬ್ಬರ್‌ ಭಾಗಗಳನ್ನು ಹೊಂದಿದ್ದು, ಜೈವಿಕ ಡೀಸೆಲ್‌ನ ದ್ರಾವಕ ಕಣಗಳಿಂದಾಗಿ ಅವು ಸವೆಯುವ ಸಾಧ್ಯತೆಗಳಿವೆ. ಆದರೂ, ಯಾವುದೇ ಮಾರ್ಪಾಡಿಲ್ಲದೆ ಈ ಕುಲುಮೆಗಳು ಜೈವಿಕ ಡೀಸೆಲ್‌ ಬಳಸಬಹುದು. ಮೊದಲಿಗೆ, ಪೆಟ್ರೊಡೀಸೆಲ್‌ನಿಂದ ಉಳಿದುಕೊಂಡಿರುವ ಕಣಗಳು ಬಿಡುಗಡೆಯಾಗಿ ನಾಳಗಳಲ್ಲಿ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಇಂಧನವನ್ನು ಶೋಧಿಸಿ, ಕೂಡಲೆ ಶೋಧಕ (ಫಿಲ್ಟರ್‌) ಬದಲಿಸುವ ಅಗತ್ಯವಿದೆ. ಇನ್ನೊಂದು ವಿಧಾನವೆಂದರೆ, ಜೈವಿಕ ಡೀಸೆಲ್‌ನ್ನು ಮಿಶ್ರಣ ರೂಪದಲ್ಲಿ ಬಳಸುವುದು. ಕಾಲಾಂತರದಲ್ಲಿ ಪೆಟ್ರೊಲಿಯಂ ಅನುಪಾತವನ್ನು ಕಡಿಮೆಗೊಳಿಸುತ್ತಾ ಹೋದರೆ, ಇಲ್ಲಿನ ಹೊಳಪು ನಿಧಾನವಾಗಿ ಮಾಸುತ್ತದೆ. ಹಾಗಾಗಿ ನಾಳಗಳಲ್ಲಿ ಕಟ್ಟಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಜೈವಿಕ ಡೀಸೆಲ್‌ ಪ್ರಬಲ ದ್ರಾವಕ ಲಕ್ಷಣ ಹೊಂದಿರುವ ಕಾರಣ ಕುಲುಮೆಯ ಒಳಭಾಗಗಳು ಶುದ್ಧಗೊಂಡು, ಕಾರ್ಯಕ್ಷಮತೆ ಹೆಚ್ಚುತ್ತದೆ. ತೈಲ-ಚಾಲಿತಗಳಲ್ಲಿ ಶುದ್ಧ ಜೈವಿಕ ಡೀಸೆಲ್ ಮತ್ತು ಜೈವಿಕ ಡೀಸೆಲ್‌ ಮಿಶ್ರಣವನ್ನು ತಾಪಕ ಇಂಧನವಾಗಿ ಪರೀಕ್ಷಿಸಲಾಗಿದೆ. ಇದರ ಬಗ್ಗೆ ಪ್ರಯೋಗಾಲಯದಲ್ಲಿ ಸಂಶೋಧನೆ ಮತ್ತು ಬಾಹ್ಯ ಪ್ರಯೋಗಗಳ ಬಗ್ಗೆ ತಾಂತ್ರಿಕ ಸಂಶೋಧನಾ ಪತ್ರಿಕೆಯೊಂದು[೧೪] ವಿವರಿಸುತ್ತದೆ. 2006ರಲ್ಲಿ UKನಲ್ಲಿ ನಡೆದ ಜೈವಿಕ ಡೀಸೆಲ್‌ ಎಕ್ಸ್‌ಪೊದಲ್ಲಿ ಆಂಡ್ರೂ ಜೆ. ರಾಬರ್ಟ್ಸನ್‌ ತಮ್ಮ ತಾಂತ್ರಿಕ ಪತ್ರಿಕೆಯಲ್ಲಿ 'ಜೈವಿಕ ಡೀಸೆಲ್‌ ತಾಪಕ ತೈಲ ಸಂಶೋಧನೆ'ಯನ್ನು ಪ್ರಸ್ತುತಪಡಿಸಿದರು. 'B20 ಜೈವಿಕ ಡೀಸೆಲ್‌ UK ದೇಶೀಯ CO2 ಮಾಲಿನ್ಯದ ಹೊಗೆಯನ್ನು ಪ್ರತಿ ವರ್ಷ 1.5 ದಶಲಕ್ಷ ಟನ್‌ಗಳಷ್ಟು ಕಡಿಮೆಗೊಳಿಸಬಹುದು' ಎಂದು ಅವರು ಇದರಲ್ಲಿ ಮಂಡಿಸಿದರು.


ಮ್ಯಾಸಚೂಸೆಟ್ಸ್ ರಾಜ್ಯಪಾಲ ಡೆವಲ್‌ ಪ್ಯಾಟ್ರಿಕ್‌ರಿದ್ದಾಗ ಕಾನೂನೊಂದನ್ನು ಜಾರಿ ಮಾಡಲಾಯಿತು. ಇದರಂತೆ, 2010ರ ಜುಲೈ 1ರೊಳಗೆ ಆ ರಾಜ್ಯದಲ್ಲಿನ ಎಲ್ಲಾ ಗೃಹಬಳಕೆಯ ಡೀಸೆಲ್‌ ಶೇಕಡಾ 2%ರಷ್ಟು,ಹಾಗೂ 2013 ರೊಳಗೆ 5% ಜೈವಿಕ ಇಂಧನವನ್ನು ಹೊಂದತಕ್ಕದ್ದು.[೧೫]


ಐತಿಹಾಸಿಕ ಹಿನ್ನೆಲೆ

[ಬದಲಾಯಿಸಿ]

ವಿಜ್ಞಾನಿಗಳಾದ ಇ. ಡಫಿ ಮತ್ತು ಜೆ. ಪ್ಯಾಟ್ರಿಕ್‌ ತರಕಾರಿ ತೈಲವೊಂದರ ಟ್ರ್ಯಾನ್ಸ್‌-ಎಸ್ಟರಿಫಿಕೇಷನ್‌ (ಇಂಧನ ಕ್ಷಮತಾ ಸಾಮರ್ಥ್ಯ ಪರೀಕ್ಷೆಯ)ನ್ನು 1853ರಲ್ಲಿ ನಡೆಸಿದರು. ಇದಾದ ಹಲವು ವರ್ಷಗಳ ನಂತರ ಮೊದಲ ಡೀಸೆಲ್‌ ಇಂಜಿನ್‌ ಕಾರ್ಯಾರಂಭವಾಯಿತು. ರುಡೊಲ್ಫ್‌ ಡೀಸೆಲ್‌ರ ಪ್ರಾಥಮಿಕ ಮಾದರಿಯಲ್ಲಿ ಫ್ಲೈವೀಲ್‌ (ಅಡಿಯಲ್ಲಿ ನಿಯಂತ್ರಕ ಚಕ್ರ) ಹೊಂದಿರುವ 10 ಅಡಿಯ (3 ಮೀ.) ಉದ್ದದ ಕಬ್ಬಿಣದ ಸಿಲಿಂಡರ್ ವೊಂದಿತ್ತು. 1893ರ ಆಗಸ್ಟ್‌ 10ರಂದು ಜರ್ಮನಿಆಗ್ಸ್‌ಬರ್ಗ್‌ನಲ್ಲಿ ಮೊದಲ ಬಾರಿಗೆ ಸ್ವಸಾಮರ್ಥ್ಯದೊಂದಿಗೆ ಇದು ಓಡಿತು. ಇದರ ಸ್ಮರಣಾರ್ಥ, ಆಗಸ್ಟ್‌ 10ರಂದು 'ಅಂತಾರಾಷ್ಟ್ರೀಯ ಜೈವಿಕ ಡೀಸೆಲ್‌ ದಿನ' ಎನ್ನಲಾಗಿದೆ.[ಸೂಕ್ತ ಉಲ್ಲೇಖನ ಬೇಕು]


ರುಡೊಲ್ಫ್ ಡೀಸೆಲ್‌ ಅವರು, ತಮ್ಮ ಇಂಜಿನ್‌ ಕಡಲೆಕಾಯಿ ತೈಲ ಬಳಸಿ ಚಲಿಸುವಂತೆ ವಿನ್ಯಾಸ ಮಾಡಿದ್ದರೆಂದು ವರದಿಯಾಗಿದೆ. ತಮ್ಮ ಪ್ರಕಟಿತ ಪತ್ರಿಕೆಗಳಲ್ಲಿ ಡೀಸೆಲ್‌ ತಿಳಿಸಿದ್ದು ಹೀಗೆ: '1900ರ ಪೇರ್ಸ್‌ ಪ್ರದರ್ಶನದಲ್ಲಿ (ಎಕ್ಸ್‌ಪೊಸಿಷನ್‌ ಯುನಿವರ್ಸೆಲ್‌ ) ಒಟ್ಟೊ ಕಂಪೆನಿಯು ಒಂದು ಸಣ್ಣ ಡೀಸೆಲ್‌ ಇಂಜಿನನ್ನು ಪ್ರದರ್ಶಿಸಿತು. ಫ್ರೆಂಚ್‌ ಸರ್ಕಾರದ ಕೋರಿಕೆಯ ಮೇರೆಗೆ, ಈ ಇಂಜಿನ್‌ ಅರಕೈಡ್‌ (ಶೇಂಗಾ ಅಥವಾ ಕಡಲೆಕಾಯಿ) ತೈಲದಿಂದ ಚಾಲಿತವಾಗಿತ್ತು. (ಜೈವಿಕ ಡೀಸೆಲ್ ನೋಡಿ). ಈ ಇಂಜಿನ್‌ ಅದೆಷ್ಟು ಸುಗಮವಾಗಿ ಚಲಿಸುತ್ತಿತ್ತು ಎಂದರೆ ಕೆಲವೇ ಜನರಿಗೆ ಇದರ ಅರಿವಿತ್ತು. ಈ ಇಂಜಿನ್‌ ಖನಿಜ ತೈಲ (ಮಿನೆರಲ್‌ ಆಯಿಲ್‌) ಇಂಧನ ಬಳಸಿ ಓಡುವಂತೆ ಸಿದ್ಧಪಡಿಸಲಾಗಿತ್ತು. ಆದರೆ, ಈ ಇಂಜಿನ್‌ ಯಾವುದೇ ಮಾರ್ಪಾಡಿಲ್ಲದೆ ತರಕಾರಿ ತೈಲದಿಂದಲೂ ಓಡಿಸಲ್ಪಟ್ಟಿತು. ಅರಕೈಡ್‌ ಅಥವಾ ನೆಲಗಡಲೆ ತೈಲದ ಶಕ್ತಿ ಉತ್ಪಾದನಾ ಸಾಮರ್ಥ್ಯ ಮತ್ತು ಅಳವಡಿಕೆಯ ಪ್ರಮಾಣ ಅಳೆಯಲು ಫ್ರೆಂಚ್‌ ಸರ್ಕಾರ ಆ ಸಮಯದಲ್ಲಿ ಆಲೋಚಿಸಿತು. ಏಕೆಂದರೆ, ಕಡಲೆಕಾಯಿ, ಫ್ರೆಂಚರ ಆಫ್ರಿಕನ್‌ ವಸಾಹತುಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಅಲ್ಲಿ ಸುಲಭವಾಗಿ ಕೃಷಿ ಮಾಡಬಹುದಾಗಿತ್ತು.' ಇದಕ್ಕೆ ಸಂಬಂಧಿತ ಪ್ರಯೋಗಗಳನ್ನು ಸ್ವತಃ ಡೀಸೆಲ್‌ರೇ ನಡೆಸಿ, ಈ ಕಲ್ಪನೆಗೆ ತಮ್ಮ ಬೆಂಬಲ ಸೂಚಿಸಿದರು.[೧೬] ಡೀಸೆಲ್ ಅವರ 1912ರಲ್ಲಿ ಮಾಡಿದ ಭಾಷಣದ ಪ್ರಕಾರ,'ಇಂಜಿನ್‌ ಇಂಧನಕ್ಕಾಗಿ ತರಕಾರಿ ತೈಲಗಳ ಬಳಕೆಯು ಸದ್ಯಕ್ಕೆ ಗೌಣವಾಗಿರಬಹುದು, ಆದರೆ ಇಂತಹ ತೈಲಗಳು ಕಾಲಾಂತರದಲ್ಲಿ ಇಂದಿನ ಪೆಟ್ರೊಲಿಯಂ ಮತ್ತು ಡಾಂಬರು ಉತ್ಪಾದನೆಗಳಷ್ಟೇ ಪ್ರಾಮುಖ್ಯತೆ ಪಡೆಯಬಹುದು.'


ಪಳೆಯುಳಿಕೆ ಪೆಟ್ರೊಲಿಯಂ-ಆಧಾರಿತ ಡೀಸೆಲ್‌ ಇಂಧನಗಳು ವ್ಯಾಪಕ ಬಳಕೆಯಲ್ಲಿದ್ದವು. ಆದರೂ, 1920, 1930ರಲ್ಲಿ ಹಾಗೂ ಎರಡನೆಯ ಮಹಾಯುದ್ಧದ ಸಮಯದಲ್ಲಿ ಇಂಜಿನ್‌ಗಳಲ್ಲಿ ತರಕಾರಿ ತೈಲಗಳ ಬಳಕೆಗೆ ಹಲವು ದೇಶಗಳು ಆಸಕ್ತಿ ತೋರಿದವು. ಬೆಲ್ಜಿಯಂ, ಫ್ರಾನ್ಸ್‌, ಇಟಲಿ, ಯುನೈಟೆಡ್‌ ಕಿಂಗ್ಡಮ್‌, ಪೊರ್ಚುಗಲ್‌, ಜರ್ಮನಿ, ಬ್ರೆಜಿಲ್‌, ಅರ್ಜೆಂಟೀನಾ, ಜಪಾನ್‌ ಮತ್ತು ಚೀನಾ ದೇಶಗಳು ಈ ಪ್ರಯೋಗ ನಡೆಸಿ, ತರಕಾರಿ ತೈಲಗಳನ್ನು ಡೀಸೆಲ್‌ ಇಂಧನಗಳಾಗಿ ಬಳಸಿದ್ದು ವರದಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಿದವು. ಕಾರಣ, ಪೆಟ್ರೊಲಿಯಂ ಡೀಸೆಲ್‌ ಇಂಧನಗಳಿಗೆ ಹೋಲಿಸಿದರೆ ತರಕಾರಿ ತೈಲಗಳು ಹೆಚ್ಚು ಜಿಗಟು ಗುಣ ಹೊಂದಿರುತ್ತವೆ. ಇದರಿಂದಾಗಿ ಇಂಧನದ ವಿಭಜನೆ (ಅಟಾಮೈಸೆಷನ್‌) ಸಮರ್ಪಕವಾಗದು. ಇಂಜೆಕ್ಟರ್‌ಗಳು ದಹನಾ ಘಟಕ (ಕಂಬುಷನ್‌ ಚೇಂಬರ್‌) ಮತ್ತು ವ್ಯಾಲ್ವ್‌ಗಳಲ್ಲಿ ಇದರ ಅವಶೇಷಗಳು ಸೇರಿಕೊಂಡು ಅಲ್ಲಿಯೇ ಸಂಚಯವಾಗುತ್ತಿತ್ತು. ಈ ಸಮಸ್ಯೆ ಪರಿಹಾರಕ್ಕೆ ತರಕಾರಿ ತೈಲ ಕಾಯಿಸಿ, ಪೆಟ್ರೊಲಿಯಂ-ಆಧಾರಿತ ಡೀಸೆಲ್‌ ಇಂಧನ ಅಥವಾ ಈಥನಾಲ್‌, ಪೈರೊಲಿಸಿಸ್‌ ಮತ್ತು ಉಳಿದ ವಸ್ತುಗಳನ್ನು ಸಣ್ಣ ಸಂಯುಕ್ತಗಳಾಗಿ ಒಡೆಯುವ ಪ್ರಕ್ರಿಯೆ ಕೈಗೊಳ್ಳಲಾಯಿತು.

ಬೆಲ್ಜಿಯಂನ್ ಬ್ರಸೆಲ್ಸ್‌ ವಿಶ್ವವಿದ್ಯಾನಿಲಯದ ಜಿ. ಚವ್ಯಾನೆ 'ಇಂಧನ-ರೂಪದ ಬಳಕೆಗಾಗಿ ತರಕಾರಿ ತೈಲಗಳ ರೂಪಾಂತರಣ ವಿಧಾನ'ವನ್ನು ಕಂಡುಹಿಡಿದರು. ಈ ಸಂಶೋಧನೆಗಾಗಿ ಅವರಿಗೆ 1937ರ ಆಗಸ್ಟ್‌ 31ರಂದು ಹಕ್ಕುಸ್ವಾಮ್ಯ (ಪೇಟೆಂಟ್‌) ದೊರೆಯಿತು. (ಎಫ್‌ಆರ್‌. 'ಪ್ರೊಸೆಡೆ ಡಿ ಟ್ರ್ಯಾನ್ಸ್‌ಫರ್ಮೇಷನ್‌ ಡಿ'ಹ್ಯುಲ್ಸ್‌ ವೆಜೆಟೆಲ್ಸ್‌ ಎನ್‌ ವು ಡಿ ಲೊ ಯುಟಿಲಿಸೆಷನ್‌ ಕೊಮ್‌ ಕಾರ್ಬ್ಯುರೆಂಟ್ಸ್‌ ) ಬೆಲ್ಜಿಯನ್‌‌ ಪೇಟೆಂಟ್‌ 422, 877. ಈ ಪೇಟೆಂಟ್‌ ತರಕಾರಿ ತೈಲಗಳ ಆಲ್ಕೊಕಾಲಿಸಿಸ್‌ (ಟ್ರ್ಯಾನ್ಸ್‌-ಎಸ್ಟರಿಫಿಕೇಷನ್‌ ಎಂದೂ ಹೇಳಲಾದ) ಪ್ರಕ್ರಿಯೆಯನ್ನು ವಿವರಿಸಿತ್ತು. ಈ ಪ್ರಕ್ರಿಯೆಯು ಈಥನಾಲ್‌ (ಹಾಗೂ ಒಮ್ಮೊಮ್ಮೆ ಮೆಥನಾಲ್) ಬಳಸಿ ಇದನ್ನು ಮದ್ಯಸಾರದ ಮಟ್ಟಕ್ಕೆ ತಂದು ಕೊಬ್ಬಿನ ಅಂಶ ಕಂಡು ಹಿಡಿಯಲಾಯಿತು. ಗ್ಲಿಸೆರೊಲ್‌ ಸ್ಥಾನದಲ್ಲಿ ಕಿರುಸರಣಿಯ ಆಲ್ಕೊಹಾಲ್‌ಗಳ ಮೂಲಕ ಗ್ಲಿಸೆರೊಲ್‌ನಿಂದ ಕೊಬ್ಬಿನ ಆಮ್ಲಗಳನ್ನು ಪ್ರತ್ಯೇಕಿಸಲು ಈಥನಾಲ್‌ ಬೆರುಸುವ ಅಗತ್ಯವಿದೆ. ಈ ಪ್ರಯೋಗವನ್ನು ಇಂದು ಜೈವಿಕ ಡೀಸೆಲ್‌ ತಯಾರಿಕೆಯ ಮೊದಲ ಉತ್ಪಾದನಾ ಪ್ರಕ್ರಿಯೆಯೆಂದು ನಂಬಲಾಗಿದೆ.[೧೭]


ಇತ್ತೀಚೆಗೆ, ಬ್ರೆಜಿಲ್‌ ವಿಜ್ಞಾನಿ ಎಕ್ಸ್‌ಪೆಡಿಟೊ ಪೆರೆಂಟೆ, 1977ರಲ್ಲಿ ಜೈವಿಕ ಡೀಸೆಲ್‌ ಉತ್ಪಾದನೆಗೆ ಮೊದಲ ಕೈಗಾರಿಕಾ ಹಂತದ ಪ್ರಕ್ರಿಯೆ ನಡೆಸಿದರು. ಈ ಆವಿಷ್ಕಾರದ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದರು.[೧೮] ಅಂತಾರಾಷ್ಟ್ರೀಯ ನೀತಿ-ನಿಯಮಗಳಡಿ ಈ ಪ್ರಕ್ರಿಯೆಯನ್ನು ಜೈವಿಕ ಡೀಸೆಲ್‌ ಎಂದು ವರ್ಗೀಕರಿಸಲಾಗಿದೆ. ಇದಕ್ಕೆ 'ಸೂಕ್ತ ಮಾನದಂಡ ಮತ್ತು ಗುಣಮಟ್ಟ'ವನ್ನು ನೀಡಿ ವಿಂಗಡಿಸಲಾಗಿದೆ. ಇದುವರೆಗೂ ವಾಹನ ಉದ್ದಿಮೆ ಕ್ಷೇತ್ರವು ಇನ್ಯಾವುದೇ ಜೈವಿಕ ಇಂಧನವನ್ನು ಪ್ರಮಾಣಿಕರಿಸಿ ಒಪ್ಪಿಕೊಂಡಿಲ್ಲ.[೧೯] ಪೆರೆಂಟೆ ಇನ್ನೊಂದು ತೈಲ 'ಬಯೊಕ್ವೆರೊಸೀನ್‌' (ಜೈವಿಕ ಸೀಮೆ ಎಣ್ಣೆ) ಉತ್ಪಾದಿಸಿ ಪೇಟೆಂಟ್‌ ಪಡೆದಿದ್ದರು. ಈ ತೈಲವನ್ನು ಪ್ರಮಾಣೀಕರಿಸಲು, ಪೆರೆಂಟೆ ಅವರ ಸಂಸ್ಥೆ ಟೆಕ್‌ಬಯೊ ಸದ್ಯಕ್ಕೆ ಬೊಯಿಂಗ್‌ ಮತ್ತು ನಾಸಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯ ನಡೆಸುತ್ತಿದೆ.[೨೦]


ಟ್ರ್ಯಾನ್ಸ್‌-ಎಸ್ಟೆರಿಪೈಡ್‌ (ಮರು ಪರಿಷ್ಕರಿಸಿ ಸಾಮರ್ಥ್ಯ ಅಳೆದ) ಸೂರ್ಯಕಾಂತಿ ತೈಲದ ಬಳಕೆ ಮತ್ತು ಅದನ್ನು ಡೀಸೆಲ್‌ ಇಂಧನವಾಗಿ ಶುದ್ಧೀಕರಿಸುವ ಕುರಿತು ಸಂಶೋಧನೆಯನ್ನು 1979ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಲಾಯಿತು. ಇಂಧನ-ಗುಣಮಟ್ಟದ, ಇಂಜಿನ್‌-ಪ್ರಮಾಣಿತ ಜೈವಿಕ ಡೀಸೆಲ್‌ನ ಉತ್ಪಾದನಾ ಪ್ರಕ್ರಿಯೆಯನ್ನು 1983ರೊಳಗೆ ಪೂರ್ಣಗೊಳಿಸಿ ಪ್ರಕಟಿಸಲಾಯಿತು.[೨೧] ಗ್ಯಾಸ್ಕೊಕ್ಸ್‌ ಎಂಬ ಆಸ್ಟ್ರಿಯಾದ ಕಂಪೆನಿ, ದಕ್ಷಿಣ ಆಫ್ರಿಕಾದ ಕೃಷಿ ಅಭಿಯಂತರರಿಂದ ತಂತ್ರಜ್ಞಾನ ಪಡೆದುಕೊಂಡಿತು. ಸಂಸ್ಥೆಯು ಮೊದಲ ಪ್ರಾಯೋಗಿಕ ಜೈವಿಕ ಡೀಸೆಲ್‌ ಸ್ಥಾವರವನ್ನು ನವೆಂಬರ್‌ 1987ರಲ್ಲಿ ಆರಂಭಿಸಿತು. ವರ್ಷಕ್ಕೆ 30,000 ಟನ್‌ ರೇಪ್ಸೀಡ್ ಉತ್ಪಾದಿಸಬಲ್ಲ ಕೈಗಾರಿಕಾ ಉದ್ದಿಮೆಯನ್ನು ಏಪ್ರಿಲ್‌ 1989ರಲ್ಲಿ ಹುಟ್ಟುಹಾಕಿತು.

1990ರ ದಶಕದುದ್ದಕ್ಕೂ, ಝೆಕ್‌ ಗಣರಾಜ್ಯ, ಜರ್ಮನಿ ಮತ್ತು ಸ್ವೀಡೆನ್‌ ಸೇರಿದಂತೆ ಹಲವು ಯೂರೋಪೀಯನ್ ದೇಶಗಳಲ್ಲಿ ಸ್ಥಾವರಗಳನ್ನು ಸ್ಥಾಪಿಸಲಾಯಿತು. ಫ್ರಾನ್ಸ್‌ ಸ್ಥಳೀಯವಾಗಿ ರೇಪ್ಸೀಡ್‌ನಿಂದ ಜೈವಿಕ ಡೀಸೆಲ್ ಇಂಧನ ಉತ್ಪಾದನೆ ಆರಂಭಿಸಿತು. ಇದಕ್ಕೆ ಡಯೆಸ್ಟರ್‌ ಎನ್ನಲಾಗಿದೆ. ಸಾಮಾನ್ಯ ಡೀಸೆಲ್‌ ಇಂಧನದಲ್ಲಿ 5%ರಷ್ಟು ರೇಪ್ಸೀಡ್‌ ತೈಲ ಬೆರೆಸಲಾಗಿದೆ. ಸಾರ್ವಜನಿಕ ಸಾರಿಗೆ ಸಂಸ್ಥೆಗಳ ವಾಹನಗಳು ಬಳಸುವ ಡೀಸೆಲ್‌ ಇಂಧನದಲ್ಲಿ ರೇಪ್ಸೀಡ್‌ನ್ನು 30%ರಷ್ಟು ಬೆರೆಸಲಾಗಿದೆ. ಆಂಶಿಕ ಜೈವಿಕ ಡೀಸೆಲ್‌ನ ಮಿಶ್ರಣವನ್ನು ಟ್ರಕ್ ಇಂಜಿನ್ ಗಳಲ್ಲಿ ಬಳಸಬಹುದೆಂದು ರೆನಾಲ್ಟ್‌, ಪ್ಯೂಜೊಟ್‌ ಮತ್ತು ಇತರರು ತಮ್ಮ ವಾಹನ ಇಂಜಿನ್‌ಗಳ ಮೂಲಕವೂ ಪ್ರಮಾಣೀಕರಿಸಿದ್ದಾರೆ. ಸದ್ಯ 50%ಷ್ಟು ಜೈವಿಕ ಡೀಸೆಲ್‌ ಮಿಶ್ರಣ ಬಳಕೆಗಾಗಿ ಸಂಶೋಧನೆ ನಡೆಯುತ್ತಿವೆ. ಇದೇ ಸಮಯಕ್ಕೆ, ವಿಶ್ವದ ಇತರೆಡೆ ಜೈವಿಕ ಡೀಸೆಲ್‌ನ ಸ್ಥಳೀಯ ಉತ್ಪಾದನೆ ಆರಂಭ ಕಂಡಿತು. ವಾಣಿಜ್ಯ ಉದ್ದೇಶದ ಜೈವಿಕ ಡೀಸೆಲ್‌ ಯೋಜನೆಗಳುಳ್ಳ 21 ದೇಶಗಳನ್ನು, ಆಸ್ಟ್ರಿಯನ್‌ ಜೈವಿಕ ಇಂಧನ ಸಂಸ್ಥೆಯು 1998ರಲ್ಲಿ ಗುರುತಿಸಿತ್ತು. ಯುರೋಪಿನಾದ್ಯಂತ 100% ಜೈವಿಕ ಡೀಸೆಲ್‌ ಇಂದು ಹಲವು ಸಾಮಾನ್ಯ ಇಂಧನ ಕೇಂದ್ರಗಳಲ್ಲಿ ಲಭ್ಯವಿದೆ.


ರಾಜ್ಯದಲ್ಲಿ ಮಾರಾಟವಾಗುವ ಡೀಸೆಲ್‌ ಇಂಧನವು ಕನಿಷ್ಥ 2%ರಷ್ಟು ಜೈವಿಕ ಡೀಸೆಲ್‌ ಹೊಂದಿರತಕ್ಕದ್ದು ಎಂದು ಮಿನೆಸೊಟಾ ರಾಜ್ಯವು ಸೆಪ್ಟೆಂಬರ್‌ 2005ರಲ್ಲಿ ನಿಯಮ ಜಾರಿಗೊಳಿಸಿತು. ಈ ರೀತಿ ನಿಯಮ ಜಾರಿಗೊಳಿಸಿದ ಮಿನೆಸೊಟಾ ಮೊದಲ U.S. ರಾಜ್ಯವಾಯಿತು.[೨೨]


2008ರಲ್ಲಿ ASTM ಹೊಸ ಜೈವಿಕ ಡೀಸೆಲ್‌ ಮಿಶ್ರಣ ನಿರೂಪಣಾ ಮಾನದಂಡಗಳನ್ನು ಪ್ರಕಟಿಸಿತು.[೨೩]


ಗುಣ-ಲಕ್ಷಣಗಳು

[ಬದಲಾಯಿಸಿ]

ಗಂಧಕ ಡೀಸೆಲ್‌ ಇಂಧನಗಳಿಗೆ ಹೋಲಿಸಿದರೆ, ಜೈವಿಕ ಡೀಸೆಲ್‌ ನುಣುಪಿನ, ಹೊಂದಿಕೊಳ್ಳುವ (ಲ್ಯೂಬ್ರಿಕೇಟಿಂಗ್‌) ಉತ್ತಮ ಗುಣಗಳನ್ನು ಹೊಂದಿದೆ. ಜೈವಿಕ ಡೀಸೆಲ್‌ ಹೆಚ್ಚಿನ ಸಿಟೇನ್‌ (ಇಂಧನ ದಹ್ಯ ಗುಣ ಸಾಮರ್ಥ್ಯದ ಅಳತೆ) ರೇಟಿಂಗ್‌ಗಳನ್ನು ಹೊಂದಿದೆ. ಜೈವಿಕ ಡೀಸೆಲ್‌ ಮಿಶ್ರಣದಿಂದ ಸವೆತ ಕಡಿಮೆಯಾಗುತ್ತದೆ.[೨೪] ತೈಲ ಅಳವಡಿಕೆಗೆ ಜೈವಿಕ ಡೀಸೆಲನ್ನು ಅವಲಂಬಿಸುವ ಹೆಚ್ಚು ಒತ್ತಡವುಳ್ಳ ವ್ಯವಸ್ಥೆಗಳಲ್ಲಿ, ಅದು ಇಂಧನ ಪೂರೈಸುವ ಉಪಕರಣದ ಬಾಳಿಕೆಯನ್ನೂ ಹೆಚ್ಚಿಸುತ್ತದೆ. ಇಂಜಿನ್‌ನನ್ನು ಪರಿಗಣಿಸಿದರೆ, ಇದು ಹೆಚ್ಚು ಒತ್ತಡದ ಪಂಪುಗಳು, ಪಂಪ್‌ ಇಂಜೆಕ್ಟರ್‌ಗಳು (ಯುನಿಟ್‌ ಇಂಜೆಕ್ಟರ್‌ ಎಂದೂ ಕರೆಯಲಾಗಿದೆ) ಹಾಗೂ ಇಂಧನ ವಾಹಕಗಳನ್ನು ಒಳಗೊಳ್ಳಬಹುದು.

ಜೈವಿಕ ಡೀಸೆಲ್‌ ಚಾಲಿತ ಮರ್ಸೆಡೆಸ್‌ನ ಹಳೆಯ ಡೀಸೆಲ್‌ ವಾಹಕನಗಳು ಜನಪ್ರಿಯವಾಗಿವೆ.


ಜೈವಿಕ ಡೀಸೆಲ್‌ನ ಕ್ಯಾಲೊರಿಫಿಕ್‌ ಮೌಲ್ಯ(ಶಾಖೋತ್ಪನ್ನದ ಪ್ರಮಾಣ) ಸುಮಾರು 37.27 MJ/L ಇದೆ.[೨೫] ಇದರ ಕ್ಯಾಲೋರಿಫಿಕ್‌ ಮೌಲ್ಯವು ನಂಬರ್‌ 2 ಪೆಟ್ರೊಡೀಸೆಲ್‌ಗಿಂತ 9%ರಷ್ಟು ಕಡಿಮೆಯಿದೆ. ಜೈವಿಕ ಡೀಸೆಲ್‌ನ ಶಕ್ತಿಮೂಲ ಸಾಂದ್ರತೆಯಲ್ಲಿನ ಬದಲಾವಣೆಗಳು, ಉತ್ಪಾದನಾ ಪ್ರಕ್ರಿಯೆಗಿಂತ ಬಳಸಲಾದ ಪೂರಕ ಕಚ್ಚಾ ಸಾಮಗ್ರಿಗಳನ್ನು ಅವಲಂಬಿಸಿದೆ. ಆದರೂ, ಪೆಟ್ರೊಡೀಸೆಲ್‌ಗೆ ಹೋಲಿಸಿದರೆ ಈ ವ್ಯತ್ಯಾಸಗಳು ಕಡಿಮೆ.[೨೬] ಜೈವಿಕ ಡೀಸೆಲ್‌ ಹೆಚ್ಚು ನುಣುಪಿನ, ಸರಾಗತೆಯ ಅನುಕೂಲ ಒದಗಿಸುತ್ತದೆ, ಹಾಗೂ ಸಂಪೂರ್ಣ ದಹನಾ ಕ್ಷಮತೆಯನ್ನು ಹೊಂದಿದೆ. ಇದರಿಂದಾಗಿ ಇಂಜಿನ್‌ನ ಶಕ್ತಿ ಪ್ರಮಾಣ ಹೆಚ್ಚುವುದಲ್ಲದೆ ಪೆಟ್ರೊಡೀಸೆಲ್‌ನ ಹೆಚ್ಚು ಶಕ್ತಿಮೂಲ ಸಾಂದ್ರತೆಯನ್ನು ಆಂಶಿಕವಾಗಿ ಸರಿತೂಗಿಸುತ್ತದೆ.[೨೭]


ಜೈವಿಕ ಡೀಸೆಲ್‌, ಸ್ವರ್ಣ ಮತ್ತು ಕಪ್ಪುಕಂದು ಬಣ್ಣದ ಏರು-ಪೇರು ತೋರುವ ದ್ರವ. ಇದು ಉತ್ಪಾದನೆಗೆ ಬಳಸುವ ಕಚ್ಚಾ ಸಾಮಗ್ರಿಯನ್ನು ಅವಲಂಬಿಸಿದೆ. ನೀರಿನೊಂದಿಗೆ ಜೈವಿಕ ಡೀಸೆಲ್‌ ಮಿಶ್ರಣವಾಗಲಾರದು. ಅತ್ಯಧಿಕ ಕುದಿಯುವ ಉಷ್ಣಾಂಶದಮಟ್ಟ ಹಾಗೂ ಕಡಿಮೆ ಆವಿಯಾಗುವ ಒತ್ತಡವನ್ನು ಹೊಂದಿರುತ್ತದೆ. * ಜೈವಿಕ ಡೀಸೆಲ್‌ ಆವಿಯಾಗಲು ಕನಿಷ್ಠ ತಾಪಮಾನವು (>130 °C, >266 °F)[೨೮] ಪೆಟ್ರೊಲಿಯಂ ಡೀಸೆಲ್‌ (64 °C, 147 °F) ಅಥವಾ ಗ್ಯಾಸೊಲೀನ್‌ (−45 °C, -52 °F) ದಕ್ಕಿಂತಲೂ ಅಧಿಕವಾಗಿದೆ. ಜೈವಿಕ ಡೀಸೆಲ್‌ ~ 0.88 g/cm³ ಸಾಂದ್ರತೆ ಹೊಂದಿದ್ದು, ನೀರಿನ ಸಾಂದ್ರತೆಗಿಂತಲೂ ಕಡಿಮೆ. ಜೈವಿಕ ಡೀಸೆಲ್‌ನಲ್ಲಿ ಗಂಧಕಾಂಶ ಬಹಳ ಕಡಿಮೆ. ಇದರಿಂದಾಗಿ ಆಗಾಗ್ಗೆ ಅದನ್ನು ಅತಿ ಕಡಿಮೆ ಗಂಧಕವುಳ್ಳ ಡೀಸೆಲ್‌ ಇಂಧನಕ್ಕೆ (ULSD) ಬಳಸಲಾಗುತ್ತದೆ.

ಭೌತಿಕ ತಾಳೆ

[ಬದಲಾಯಿಸಿ]
  • ಪ್ಲಾಸ್ಟಿಕ್‌ಗಳು: ಹೆಚ್ಚಿನ ಸಾಂದ್ರತೆಯ ಪಾಲಿ-ಎತಿಲೀನ್‌ ಜೈವಿಕ ಡೀಸೆಲ್‌ನೊಂದಿಗೆ ಹೊಂದಿಕೊಳ್ಳಬಹುದು. ಆದರೆ PVC ನಿಧಾನಗತಿಯಲ್ಲಿ ಸರಳ ಸಂಯುಕ್ತಗಳಾಗಿ ಒಡೆದುಹೋಗುವುದು.[ಸೂಕ್ತ ಉಲ್ಲೇಖನ ಬೇಕು] ಜೈವಿಕ ಡೀಸೆಲ್‌ನೊಂದಿಗೆ ಸಂಪರ್ಕಗೊಂಡ ಪಾಲಿಸ್ಟೈರೀನ್‌ಗಳು ಕರಗಿಹೋಗುತ್ತವೆ.
  • ಲೋಹಗಳು: ಹಿತ್ತಾಳೆಯಂತಹ ತಾಮ್ರ-ಅಂಶ ಬೆರೆತ ವಸ್ತುಗಳ ಮೇಲೆ ಜೈವಿಕ ಡೀಸೆಲ್‌ ಪ್ರಭಾವ ಬೀರುತ್ತದೆ. ಇದಲ್ಲದೆ, ಸತು (ಜಿಂಕ್‌), ತವರ (ಟಿನ್)‌, ಸೀಸೆ (ಲೆಡ್‌) ಮತ್ತು ಬೀಡುಕಬ್ಬಿಣ (ಕ್ಯಾಸ್ಟ್‌ ಐರನ್‌) ಮೇಲೂ ಸಹ ಪ್ರಭಾವ ಬೀರುತ್ತದೆ.[ಸೂಕ್ತ ಉಲ್ಲೇಖನ ಬೇಕು] ಸ್ಟೇನ್ಲೆಸ್‌ ಸ್ಟೀಲ್‌ಗಳು (316 ಮತ್ತು 304) ಹಾಗೂ ಅಲ್ಯೂಮಿನಿಯಂ ಮೇಲೆ ಜೈವಿಕ ಡೀಸೆಲ್‌ ಯಾವುದೇ ಪ್ರಭಾವ ಬೀರದು.
  • ರಬ್ಬರ್‌: ಹಳೆಯ ಇಂಜಿನ್‌ ಭಾಗಗಳಲ್ಲಿರುವ ನೈಸರ್ಗಿಕ ರಬ್ಬರ್‌ ನಮೂನೆಗಳ ಮೇಲೆ ಜೈವಿಕ ಡೀಸೆಲ್ ಪ್ರಭಾವ ಬೀರಬಲ್ಲದು. ಆಕ್ಸಿಡೇಷನ್‌ನ ಕಾರಣ ಜೈವಿಕ ಡೀಸೆಲ್‌ ಸ್ಥಿರತೆ ಕಳೆದುಕೊಂಡಾಗ, ಪೆರಾಕ್ಸೈಡ್‌ಗಳು ಹಾಗೂ ಪ್ರತ್ಯಾಮ್ಲ-ಲೋಹ ಆಕ್ಸೈಡ್‌ಗಳೊಂದಿಗೆ ಕ್ರಿಯೆಗೊಳಗಾಗುವ ಫ್ಲೋರಿನೀಕರಿಸಿದ ಎಲಾಸ್ಟೊಮರ್‌ಗಳು (FKM) ಸಣ್ಣ ಸಂಯುಕ್ತಳಾಗಿ ಒಡೆದುಹೋಗಬಹುದು.[ಸೂಕ್ತ ಉಲ್ಲೇಖನ ಬೇಕು] ಆದರೆ FKM- GBL-S ಮತ್ತು FKM- GF-S ದೊಂದಿಗೆ ಪರೀಕ್ಷಿಸಿಲಾಯಿತು. ಇದರ ಫಲಿತಾಂಶದಂತೆ, ಎಲ್ಲಾ ಸ್ಥಿತಿಗಳಲ್ಲಿಯೂ ಜೈವಿಕ ಡೀಸೆಲನ್ನು ನಡೆಸುವ ಅತಿ ಜಿಗುಟಾದ ಇಲಾಸ್ಟೊಮರ್‌ ಆಗಿದೆ.

ತಾಂತ್ರಿಕ ಗುಣಮಟ್ಟದ ಮಾನದಂಡ

[ಬದಲಾಯಿಸಿ]

ಜೈವಿಕ ಡೀಸೆಲ್‌ ತನ್ನ ಗುಣಮಟ್ಟಕ್ಕಾಗಿ ಹಲವು ಪ್ರಮಾಣಕಗಳನ್ನು ಹೊಂದಿದೆ. ಇವುಗಳಲ್ಲಿ ಯುರೋಪಿಯನ್‌ ಪ್ರಮಾಣಕ EN 14214, ASTM ಇಂಟರ್ನ್ಯಾಷನಲ್‌ D6751, ಇತ್ಯಾದಿ ಸೇರಿವೆ.

ಜೆಲ್‌ ಆಗುವಿಕೆ

[ಬದಲಾಯಿಸಿ]

ಶುದ್ಧ ಜೈವಿಕ ಡೀಸೆಲ್‌ (B100) ಜೆಲ್‌ ಆಗುವ ಉಷ್ಣಾಂಶಕ್ಕೆ ಕ್ಲೌಡ್‌ ಪಾಯಿಂಟ್‌ ಎನ್ನಲಾಗುತ್ತದೆ. ಏಕೆಂದರೆ ಎಸ್ಟರ್‌ಗಳ ಮಿಶ್ರಣವನ್ನು ಇದು ಅವಲಂಬಿಸುವ ಕಾರಣ ಇದರಲ್ಲಿ ವ್ಯತ್ಯಾಸಗಳುಂಟು. ಆದ್ದರಿಂದ, ಜೈವಿಕ ಡೀಸೆಲ್‌ ತಯಾರಿಸಲು ಪೂರಕ ಕಚ್ಚಾ ಸಾಮಗ್ರಿಗಳ ತೈಲ ಬಳಸಲಾಗುತ್ತದೆ. ಉದಾಹರಣೆಗೆ, ಕೆಳಮಟ್ಟದ ಇರುಸಿಕ್‌ ಆಮ್ಲದಂತಹ ಕೆನೊಲಾ (ಕಡಲೆಕಾಯಿ ಎಣ್ಣೆ) ಅಂಶಗಳಿಂದ (RME) ತಯಾರಿಸಲಾದ ಜೈವಿಕ ಡೀಸೆಲ್‌ ಸುಮಾರು −10 °C (14 °F) ತಾಪಮಾನದಲ್ಲಿ ಜೆಲ್‌ ಆಗುತ್ತದೆ.

ಟ್ಯಾಲೊದಿಂದ ಉತ್ಪಾದನೆಯಾಗುವ ಜೈವಿಕ ಡೀಸೆಲ್‌ ಸುಮಾರು +16 °C (61 °F) ತಾಪಮಾನದಲ್ಲಿ ಜೆಲ್‌ ಆಗುವ ಪ್ರವೃತ್ತಿ ಹೊಂದಿದೆ. 2006ರಲ್ಲಿ ಪರಿಶೀಲಿಸಿದಂತೆ, ಶುದ್ಧ ಡೀಸೆಲ್‌ನ ಜೆಲ್‌ ಪಾಯಿಂಟ್‌ (ಜೆಲ್‌ ಆಗುವ ತಾಪಮಾನ) ವನ್ನು ಗಮನಾರ್ಹವಾಗಿ ಕಡಿಮೆಗೊಳಿಸುವ ಉತ್ಪಾದನೆಗಳು ಬಹಳ ಕಡಿಮೆ. #2 ಲೊ ಸಲ್ಫರ್‌ ಡೀಸೆಲ್‌ ಇಂಧನ ಮತ್ತು #1 ಡೀಸೆಲ್‌ / ಕೆರೊಸೀನ್‌ ಸೇರಿದಂತೆ, ಇತರೆ ಇಂಧನ ಎಣ್ಣೆಗಳೊಂದಿಗೆ ಜೈವಿಕ ಡೀಸೆಲ್‌ ಮಿಶ್ರಣ ಮಾಡುವುದರ ಮೂಲಕ ವಿಂಟರ್‌ ಆಪರೇಷನ್‌ ಸಾಧ್ಯವೆಂದು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ನಿಖರ ಮಿಶ್ರಣ ಬಳಕೆಯು ಪರಿಸರವನ್ನು ಅವಲಂಬಿಸಿದೆ. ದಕ್ಷತೆಯ ಬಳಕೆಯ ವಾತಾವರಣವು 65% LS #2, 30% K #1 ಮತ್ತು 5% ಬಯೊಬ್ಲೆಂಡ್‌ ಒಳಗೊಂಡಿದೆ. ಇತರೆ ವಲಯಗಳು 70% ಲೊ ಸಲ್ಫರ್‌ #2, 20% ಕೆರೊಸೀನ್‌ #1 ಹಾಗೂ 10% ಬಯೊಬ್ಲೆಂಡ್‌ ಬಳಸಿವೆ. ರಾಷ್ಟ್ರೀಯ ಜೈವಿಕ ಡೀಸೆಲ್‌ ಮಂಡಳಿ (NBB) ಪ್ರಕಾರ, B20 (20% ಜೈವಿಕ ಡೀಸೆಲ್‌, 80% ಪೆಟ್ರೊಡೀಸೆಲ್‌) ಪೆಟ್ರೊಡೀಸೆಲ್‌ನಲ್ಲಿ ಆಗಲೇ ಬಳಸಲಾದ ಅಂಶಗಳ ಮಿಶ್ರಣಕ್ಕೆ ಯಾವುದೇ ರಾಸಾಯನಿಕ ಕ್ರಿಯೆಯ ಅಗತ್ಯವಿಲ್ಲ.


ಮಿಶ್ರಣವಿಲ್ಲದೆ ಜೈವಿಕ ಡೀಸೆಲ್‌ ಬಳಕೆಗೆ, ಹಾಗೂ ಕಡಿಮೆ ತಾಪಮಾನದಲ್ಲಿ ಜೆಲ್‌ ಆಗುವ ಸಾಧ್ಯತೆಯಿಲ್ಲದ ಪಕ್ಷದಲ್ಲಿ, ಕೆಲವರು ತಮ್ಮ ವಾಹನಗಳಲ್ಲಿ ಸಾಮಾನ್ಯ ಇಂಧನ ಟ್ಯಾಂಕ್ ಜೊತೆಗೆ, ಇನ್ನೊಂದು ತೈಲ ಸಂಗ್ರಹಕವನ್ನೂ ಅಳವಡಿಸುತ್ತಾರೆ. ಇದಕ್ಕೆ ಪರ್ಯಾಯವಾಗಿ, ಎರಡು ತೈಲ ಟ್ಯಾಂಕ್ ಗಳಿರುವ ವಾಹನ ಆಯ್ಕೆ ಮಾಡಲಾಗಿದೆ. ಎರಡನೆಯ ಇಂಧನ ಟ್ಯಾಂಕಿಗೆ ಅವಾಹಕ-ಟೇಪು ಅಳವಡಿಕೆ ಮಾಡಲಾಗುತ್ತದೆ. ಇಂಜಿನ್‌ ಕೂಲೆಂಟ್‌ ಬಳಸಿ ತಯಾರಿಸಲಾದ ಹೀಟಿಂಗ್ ಕಾಯಿಲ್‌ನ್ನು ಈ ಟ್ಯಾಂಕ್ ಮೂಲಕ ಹಾಯಿಸಲಾಗಿದೆ. ಇಂಧನ ದಹಿಸುವ ಮಟ್ಟಕ್ಕೆ ತಲುಪಿದೆಯೆಂದು ಉಷ್ಣಾಂಶ ಸಂವೇದಕವು ಸೂಚಿಸಿದಾಗ, ವಾಹನದ ಚಾಲಕರು ಪೆಟ್ರೊಡೀಸೆಲ್‌ನಿಂದ ಜೈವಿಕ ಡೀಸೆಲ್‌ನ್ನು ಬಳಸಲು ಉದ್ಯುಕ್ತರಾಗುವರು. ನೇರವಾಗಿ ತರಕಾರಿ ತೈಲ ಬಳಸಿ ವಾಹನ ನಡೆಸುವ ರೀತಿಯಂತೆಯೇ ಇದೂ ಸಹ.

ನೀರಿನಿಂದ ಕಲುಷಿತಗೊಳ್ಳುವಿಕೆ

[ಬದಲಾಯಿಸಿ]

ಜೈವಿಕ ಡೀಸೆಲ್‌ ಸಣ್ಣ ಪ್ರಮಾಣದಲ್ಲಿ, ಆದರೂ ಸಮಸ್ಯಾಜನಕ ಪ್ರಮಾಣದ ನೀರನ್ನು ಹೊಂದಿರುತ್ತದೆ. ನೀರಿನೊಂದಿಗೆ ಬೆರೆಯದ ಗುಣವನ್ನು ಹೊಂದಿದ್ದರೂ, ಈಥನಾಲ್‌ ತರಹ ಜೈವಿಕ ಇಂಧನವು (ಆರ್ದ್ರತೆಯನ್ನು ಹೀರಿಕೊಳ್ಳುವಂತಹದ್ದು) ಆರ್ದ್ರಚೋಷಕವಾಗಿದೆ. ([[ಹವಾಮಾನದ{/0)}ಲ್ಲಿನ ತೇವದಿಂದ ನೀರಾಂಶ ಹೀರಿಕೊಳ್ಳುವಂತಹದ್ದು)|ಹವಾಮಾನದ{/0)}ಲ್ಲಿನ ತೇವದಿಂದ ನೀರಾಂಶ ಹೀರಿಕೊಳ್ಳುವಂತಹದ್ದು)[೨೯]]] ಜೈವಿಕ ಡೀಸೆಲ್‌ ನೀರನ್ನು ಹೀರಿಕೊಳ್ಳಲು ಕಾರಣ - ಅಪೂರ್ಣ ರಾಸಾಯನಿಕ ಕ್ರಿಯೆಯಿಂದ ಬಾಕಿ ಉಳಿದ ಮೊನೊ ಮತ್ತು ಡೈಗ್ಲಿಸೆರೈಡ್‌ಗಳು. ಈ ಕಣಗಳು ಎಮಲ್ಸಿಕಾರಕಗಳಾಗಿ (ಎಮಲ್ಸಿಫಯರ್‌ ಆಗಿ) ಕಾರ್ಯ ನಿರ್ವಹಿಸುತ್ತವೆ. ನೀರು ಜೈವಿಕ ಡೀಸೆಲ್‌ನೊಂದಿಗೆ ಬೆರೆಯಲು ಕಾರಣವಾಗುತ್ತವೆ.[ಸೂಕ್ತ ಉಲ್ಲೇಖನ ಬೇಕು] ಇದರ ಜೊತೆಗೆ, ಪ್ರಕ್ರಿಯೆಯಾಗಬೇಕಾದ ಅಥವಾ ಸಂಗ್ರಹಣಾ ಟ್ಯಾಂಕ್‌ನ ಸಾಂದ್ರೀಕರಣದಿಂದ ಉಂಟಾದ ನೀರಿನ ಅವಶೇಷಗಳೂ ಇರಬಹುದು. ಜೈವಿಕ ಡೀಸೆಲ್‌ನಲ್ಲಿ ನೀರಿರುವುದು ಸಮಸ್ಯೆ, ಏಕೆಂದರೆ:

  • ಇಂಧನದ ಹೆಚ್ಚು ಭಾಗದಲ್ಲಿ ಉರಿಯುವಿಕೆಯ ಶಾಖವನ್ನು ನೀರು ಕಡಿಮೆಗೊಳಿಸುತ್ತದೆ. ಹಾಗಾಗಿ, ಹೆಚ್ವು ಹೊಗೆ ಮಾಲಿನ್ಯ, ವಾಹನದ ಇಂಜಿನ್ ಆರಂಭದಲ್ಲಿ ಕ್ಲಿಷ್ಟತೆ, ಹಾಗೂ ಕಡಿಮೆ ಸಾಮರ್ಥ್ಯ - ಇಂತಹ ಸಮಸ್ಯೆಗಳುಂಟಾಗುತ್ತವೆ.
  • ಪ್ರಮುಖ ಇಂಧನ ವ್ಯವಸ್ಥೆಯ ಭಾಗಗಳಾದ ಫ್ಯುಯೆಲ್‌ ಪಂಪ್‌ಗಳು, ಇಂಜೆಕ್ಟರ್‌ ಪಂಪ್‌ಗಳು, ಇಂಧನ ಕೊಂಡಿ ಜೋಡಣೆಗಳು (ಫ್ಯುಯೆಲ್‌ ಲೈನ್ಸ್‌) ಇತ್ಯಾದಿ ತುಕ್ಕು ಹಿಡಿಯಲು ಕಾರಣವಾಗುತ್ತದೆ.
  • ವ್ಯವಸ್ಥೆಯಲ್ಲಿರುವ ಪೇಪರ್‌ ಎಲಿಮೆಂಟ್‌ ಫಿಲ್ಟರ್‌ಗಳು ಕೊಳೆಯಲು ನೀರು ಮತ್ತು ಸೂಕ್ಷ್ಮಜೀವಿಗಳು ಕಾರಣವಾಗುತ್ತವೆ. ಇದರಿಂದಾಗಿ, ದಪ್ಪ ಕಣಗಳನ್ನು ಹೀರಿಕೊಂಡ ಕಾರಣ ಇಂಧನದ ಪಂಪ್‌ ವಿಫಲವಾಗುವ ಸಾಧ್ಯತೆ ಹೆಚ್ಚು.
  • 0 °C (32 °F) ಉಷ್ಣಾಂಶದಲ್ಲಿ ನೀರು ಘನೀಕರಿಸಿ ಇಬ್ಬನಿಯ ಹರಳುಗಳಾಗುತ್ತದೆ. ಈ ಹರಳುಗಳು ನ್ಯೂಕ್ಲೀಕರಣಕ್ಕೆ(ಬೀಜವಾಗಿ ಮಾರ್ಪಡುವ) ಅವಕಾಶ ನೀಡಿ ಇಂಧನದ ಅವಶೇಷವು ಜೆಲ್‌ ಆಗುವುದನ್ನು ತ್ವರಿತಗೊಳಿಸುತ್ತದೆ.
  • ನೀರು ಹಲವು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಇಂಧನ ವ್ಯವಸ್ಥೆಗೆ ಮಾರಕವಾಗಬಲ್ಲದು. ಶಾಖದ ಇಂಧನ ಟ್ಯಾಂಕ್ ಹೊಂದಿರುವ ಜೈವಿಕ ಡೀಸೆಲ್‌ ಬಳಕೆದಾರರು ವರ್ಷಾನುಗಟ್ಟಲೆ ಆರೋಗ್ಯಕ್ಕೆ ಹಾನಿಕಾರಕ ಸೂಕ್ಷ್ಮಾಣುಗಳ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
  • ಇದರ ಜೊತೆಗೆ, ನೀರು ಡೀಸೆಲ್‌ ಇಂಜಿನ್‌ನ (ಚಲಿಸುವ ಕವಾಟಗಳು) ಪಿಸ್ಟನ್‌ ಕಾರ್ಯಕ್ಷಮತೆಗೆ ಅಡ್ಡಿಯಾಗುತ್ತದೆ.


ಹಿಂದೆ, (ಮಾದರಿ) ಸ್ಯಾಂಪಲ್‌ಗಳ ಮೂಲಕ ನೀರು ಜೈವಿಕ ಡೀಸೆಲ್‌ನ್ನು ಕಲುಷಿತಗೊಳಿಸಿದ ಪ್ರಮಾಣವನ್ನು ಅಳೆಯಲು ಕಷ್ಟಕರವಾಗುತ್ತಿತ್ತು; ಏಕೆಂದರೆ ಎಣ್ಣೆ ಮತ್ತು ನೀರು ಬೆರೆಯಲಾರವು. ಆದರೆ, ಇದು ಈಗ ತೈಲದಲ್ಲಿ-ನೀರನ್ನು ಪತ್ತೆಹಚ್ಚುವ ಸಂವೇದಕಗಳ ಮೂಲಕ ಸಾಧ್ಯ.[ಸೂಕ್ತ ಉಲ್ಲೇಖನ ಬೇಕು]


ತಯಾರಿಕೆಯಲ್ಲಿ ಕೆಲವು ರಾಸಾಯನಿಕ ವೇಗವರ್ಧಕ (ಕೆಟಲಿಸ್ಟ್‌) ಬಳಸುವಾಗ ನೀರು ಕಲುಷಿತವಾಗುವುದು ಸಂಭವನೀಯ ಸಮಸ್ಯೆ. ಇದರಿಂದಾಗಿ, ಪೊಟಾಷಿಯಂ ಹೈಡ್ರಾಕ್ಸೈಡ್‌ನಂತಹ ಪ್ರತ್ಯಾಮ್ಲ(ಬೇಸ್‌)ದ ವೇಗವರ್ಧಕದ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದರೂ, ಮೆಥನಾಲ್‌ ತಯಾರಿಕೆಯ ಪ್ರಮುಖ ವಿಧಾನ, ಹೆಚ್ಚಿನ ಉಷ್ಣಾಂಶ ಮತ್ತು ಒತ್ತಡದಲ್ಲಿ ಮೆಥನಾಲ್‌ ಹಾಗೂ ತೈಲದ ಪೂರಕ ಕಚ್ಚಾ ಸಾಮಗ್ರಿಗಳ ಟ್ರ್ಯಾನ್ಸ್-ಎಸ್ಟರಿಫಿಕೆಷನ್‌ ಪ್ರಕ್ರಿಯೆಯು, ನೀರು ಕಲುಷಿತತೆಯಿಂದ ಪ್ರಭಾವಿತವಾಗಿರುವುದಿಲ್ಲ.


ಲಭ್ಯತೆ ಮತ್ತು ದರಗಳು

[ಬದಲಾಯಿಸಿ]
ಕೆಲವು ದೇಶಗಳಲ್ಲಿ ಜೈವಿಕ ಡೀಸೆಲ್‌ ಸಾಂಪ್ರದಾಯಿಕ ಡೀಸೆಲ್‌ಗಿಂತಲೂ ಅಗ್ಗದ ಬೆಲೆಯಲ್ಲಿ ಲಭ್ಯವಾಗಿದೆ.

ಜಾಗತಿಕವಾಗಿ, ಜೈವಿಕ ಡೀಸೆಲ್‌ ಉತ್ಪಾದನೆಯು 2005ರಲ್ಲಿ 3.8 ದಶಲಕ್ಷ ಟನ್‌ಗಳಷ್ಟಿತ್ತು. ಜೈವಿಕ ಇಂಧನ ತಯಾರಿಕೆಯ 85%ರಷ್ಟು ಯುರೋಪ್‌ ಒಕ್ಕೂಟದಿಂದ ಬಂದಿತು. [ಸೂಕ್ತ ಉಲ್ಲೇಖನ ಬೇಕು]


2007ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದಾದ್ಯಂತ ಇಂಧನ ಕೇಂದ್ರಗಳಲ್ಲಿ (ಸಂಯುಕ್ತತೆ ಮತ್ತು ರಾಜ್ಯ ಇಂಧನ ತೆರಿಗೆಗಳೂ ಸೇರಿ) B2/B5 ಸರಾಸರಿ ಮಾರಾಟ ಬೆಲೆಗಳು ಪೆಟ್ರೊಲಿಯಂ ಡೀಸೆಲ್‌ದಕ್ಕಿಂತಲೂ 12 ಸೆಂಟ್‌ಗಳಷ್ಟು ಕಡಿಮೆಯಿದ್ದವು. B20 ಮಿಶ್ರಣದ ಬೆಲೆಯು ಪೆಟ್ರೊಡೀಸೆಲ್‌ನದಷ್ಟೇ ಇದ್ದವು.[೩೦] ಕಳೆದ ವರ್ಷದಲ್ಲಿ ಡೀಸೆಲ್‌ ಬೆಲೆಗಳಲ್ಲಿ ಗಮನಾರ್ಹ ಬದಲಾವಣೆಯಾಗಿತ್ತು. 2009ರ ಜುಲೈ ತಿಂಗಳಲ್ಲಿ, B20ರ ಗ್ಯಾಲನ್‌ ಕಚ್ಚಾ ಬೆಲೆಯು ($2.69) ಪೆಟ್ರೊಲಿಯಂ ಡೀಸೆಲ್‌ದಕ್ಕಿಂತಲೂ ($2.54) 15 ಸೆಂಟ್‌ ಹೆಚ್ಚಿತ್ತು.[೩೧] B99 ಮತ್ತು B100ರ ಬೆಲೆಯು ಸಾಮಾನ್ಯವಾಗಿ ಪೆಟ್ರೊಡೀಸೆಲ್‌ದಕ್ಕಿಂತಲೂ ಹೆಚ್ಚು. ಆದರೆ ಕೆಲವೆಡೆ ಸ್ಥಳೀಯ ಸರ್ಕಾರಗಳು ಸಬ್ಸಿಡಿ ನೀಡುತ್ತವೆ.


ಉತ್ಪಾದನೆ

[ಬದಲಾಯಿಸಿ]

ತರಕಾರಿ ತೈಲ ಅಥವಾ ಪಶು ಕೊಬ್ಬು ಪೂರಕ ಕಚ್ಚಾ ವಸ್ತುಗಳ ಟ್ರ್ಯಾನ್ಸ್‌-ಎಸ್ಟರಿಫಿಕೇಷನ್‌ ಮೂಲಕ ಜೈವಿಕ ಡೀಸೆಲ್‌ ಸಾಮಾನ್ಯವಾಗಿ ತಯಾರಾಗುತ್ತದೆ. ಟ್ರ್ಯಾನ್ಸ್‌-ಎಸ್ಟರಿಫಿಕೇಷನ್‌ ಕ್ರಿಯೆ ನಡೆಸಲು ಹಲವು ರೀತಿ-ವಿಧಾನಗಳಿವೆ. ಇವುಗಳಲ್ಲಿ ಕಾಮನ್‌ ಬ್ಯಾಚ್‌ ಪ್ರಕ್ರಿಯೆ, ಅಧಿಕ್ರಾಂತಿಕ ಪ್ರಕ್ರಿಯೆಗಳು, ಅಲ್ಟ್ರಾಸಾನಿಕ್‌ ರೀತಿಗಳು ಮತ್ತು ಮೈಕ್ರೊವೇವ್‌ ರೀತಿಗಳೂ ಸೇರಿವೆ.

ರಾಸಾಯನಿಕವಾಗಿ ಟ್ರ್ಯಾನ್ಸ್‌-ಎಸ್ಟರೀಕೃತ ಜೈವಿಕ ಡೀಸೆಲ್‌ನಲ್ಲಿ ದೀರ್ಘ ಸರಣಿಯ ಕೊಬ್ಬಿನ ಆಮ್ಲಗಳ ಮೊನೊ-ಆಲ್ಕೈಲ್‌ ಎಸ್ಟರ್‌ಗಳ ಮಿಶ್ರಣವಿರುತ್ತದೆ. ಇದರಲ್ಲಿ ಅತಿ ಸಾಮಾನ್ಯ ರೂಪವು ಮೆಥನಾಲ್‌ನ್ನು ಬಳಸುತ್ತದೆ. (ಸೊಡಿಯಂ ಮೆಥಾಕ್ಸೈಡ್‌ ಆಗಿ ಪರಿವರ್ತಿತ‌) ಇದರಿಂದಾಗಿ ಇಲ್ಲಿ ಮಿತೈಲ್‌ ಎಸ್ಟರ್‌ ಉತ್ಪಾದನೆ ಆಗುತ್ತದೆ. (ಇದನ್ನು ಸಾಮಾನ್ಯವಾಗಿ ಫ್ಯಾಟಿ ಆಸಿಡ್‌ ಮಿತೈಲ್‌ ಎಸ್ಟರ್‌ - FAME ಎನ್ನಲಾಗಿದೆ) ಇದು ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಆಲ್ಕೊಹಾಲ್‌. ಆದರೆ, ಈತೈಲ್‌ ಎಸ್ಟರ್‌ ಉತ್ಪಾದಿಸಲು ಎತನೊಲ್‌ ಬಳಸಬಹುದಾಗಿದೆ. (ಇದನ್ನು ಸಾಮಾನ್ಯವಾಗಿ ಫ್ಯಾಟಿ ಆಸಿಡ್‌ ಈತೈಲ್‌ ಎಸ್ಟರ್‌ - FAEE ಎನ್ನಲಾಗಿದೆ) ಜೈವಿಕ ಡೀಸೆಲ್‌ ಮತ್ತು ಐಸೊಪ್ರೊಪನೊಲ್‌ ಮತ್ತು ಬ್ಯುಟನೊಲ್‌ ಸಹ ಬಳಕೆಯಾಗಿವೆ. ಹೆಚ್ಚಿನ ಅಣುಬಂಧದ ತೂಕಗಳುಳ್ಳ ಆಲ್ಕೊಹಾಲ್‌ ಬಳಕೆಯು ಎಸ್ಟರ್‌ನ ಕೋಲ್ಡ್‌-ಫ್ಲೊ ಗುಣಲಕ್ಷಣಗಳನ್ನು ಸ್ಫುಟಗೊಳಿಸುತ್ತದೆ. ಇದು ಕಡಿಮೆ-ಕ್ಷಮತೆಯುಳ್ಳ ಟ್ರ್ಯಾನ್ಸ್‌-ಎಸ್ಟರಿಫಿಕೇಷನ್‌ ಕ್ರಿಯೆಗಿಂತಲೂ ಸಮರ್ಪಕವಾಗಿ ಕೆಲಸ ಮಾಡುತ್ತದೆ. ಬೇಸ್‌(ಮೂಲ) ತೈಲವನ್ನು ಅವಶ್ಯ ಎಸ್ಟರ್‌ಗಳಾಗಿ ಪರಿವರ್ತಿಸಲು ಕೊಬ್ಬಿಟ್ರ್ಯಾನ್ಸ್‌-ಎಸ್ಟರಿಫಿಕೇಷನ್‌ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಮೂಲ ತೈಲದಲ್ಲಿರುವ ಯಾವುದೇ ಮುಕ್ತ ಕೊಬ್ಬಿನ ಆಮ್ಲಗಳು (FFAಗಳು) ಮಾರ್ಜಕವಾಗಿ ಪರಿವರ್ತನೆ ಅಥವಾ ಪ್ರಕ್ರಿಯೆಯಿಂದ ತೆಗೆಯಲ್ಪಡುವವು. ಅಥವಾ ಆಮ್ಲೀಯ ವೇಗವರ್ಧಕ ಬಳಸಿ ಎಸ್ಟರೀಕೃತವಾಗುವುದು (ಹೆಚ್ಚು ಜೈವಿಕ ಡೀಸೆಲ್‌ ಉತ್ಪನ್ನ). ಪ್ರಕ್ರಿಯೆಯ ನಂತರ, ಜೈವಿಕ ಡೀಸೆಲ್‌ ಕೆಲವು ದಹನದ ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಅವು ಶುದ್ಧ ತರಕಾರಿ ತೈಲಕ್ಕಿಂತಲೂ ಭಿನ್ನವಾಗಿದ್ದು, ಪೆಟ್ರೊಲಿಯಂ ಡೀಸೆಲ್‌ನ ಗುಣಲಕ್ಷಣಗಳನ್ನು ಹೋಲುತ್ತವೆ. ಹಾಗಾಗಿ, ಪೆಟ್ರೊಲಿಯಂ ಡೀಸೆಲ್‌ ಬಳಕೆಯಲ್ಲಿರುವ ಹಲವೆಡೆ ಜೈವಿಕ ಡೀಸೆಲ್‌ ಬಳಸಬಹುದು.


ಗ್ಲಿಸೆರೊಲ್‌, ಟ್ರ್ಯಾನ್ಸ್‌-ಎಸ್ಟರಿಫಿಕೇಷನ್‌ ಪ್ರಕ್ರಿಯೆಯಲ್ಲಿನ ಒಂದು ಉಪ-ಉತ್ಪನ್ನವಾಗಿದೆ. ಉತ್ಪಾದನೆಯಾಗುವ ಪ್ರತಿ ಟನ್ ಜೈವಿಕ ಡೀಸೆಲ್‌ನೊಂದಿಗೆ 100 ಕೆಜಿ ಗ್ಲಿಸೆರೊಲ್‌ ಉತ್ಪನ್ನ ದೊರೆಯುವುದು. ಮೂಲತಃ ಗ್ಲಿಸೆರೊಲ್‌ಗಾಗಿ ಉತ್ತಮ ಮಾರುಕಟ್ಟೆಯಿತ್ತು. ಇದು ಸಂಪೂರ್ಣ ಆರ್ಥಿಕತೆಯನ್ನು ಬೆಂಬಲಿಸುತ್ತಿತ್ತು. ಆದರೆ, ಜಾಗತಿಕ ಮಟ್ಟದಲ್ಲಿ ಜೈವಿಕ ಡೀಸೆಲ್‌ ಉತ್ಪಾದನೆಯು ಹೆಚ್ಚಾದಂತೆ, (20% ನೀರು ಮತ್ತು ವೇಗವರ್ಧಕಗಳ ಅವಶೇಷಗಳನ್ನು ಹೊಂದಿರುವ) ಈ ಕಚ್ಚಾ ಗ್ಲಿಸೆರೊಲ್‌ನ ಮಾರುಕಟ್ಟೆ ಬೆಲೆ ಕುಸಿದಿದೆ. ಈ ಗ್ಲಿಸೆರೊಲ್‌ನ್ನು ರಾಸಾಯನಿಕ ನಿರ್ಮಿತ ಅಂಶವನ್ನಾಗಿ ಬಳಸುವ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ದಿ ಗ್ಲಿಸೆರೊಲ್‌ ಚಾಲೆಂಜ್‌ ಎಂಬುದು UKದಲ್ಲಿ ನಡೆಯುತ್ತಿರುವ ಒಂದು ಯತ್ನ.[೩೨] (ಈ ಸವಾಲಿಗೆ ಉತ್ತರ ಕಂಡುಕೊಳ್ಳುವ ನಿರಂತರ ಶ್ರಮ ಎಂದು ಹೇಳಬಹುದು).


ಸಾಮಾನ್ಯವಾಗಿ, ನಿರ್ವಾತದ ಶೋಧನೆ ಮೂಲಕ (ವ್ಯಾಕ್ಯೂಮ್‌ ಡಿಸ್ಟಿಲೇಷನ್‌) ಈ ಕಚ್ಚಾ ಗ್ಲಿಸೆರೊಲ್‌ನ್ನು ಶುದ್ಧೀಕರಿಸಬೇಕಿದೆ. ಇದು ಶಕ್ತಿಯ ತೀವ್ರತೆಯನ್ನೊಳಗೊಂಡಿದೆ. ನಂತರ, ಶುದ್ಧೀಕರಿಸಿದ ಗ್ಲಿಸೆರೊಲ್‌ (98%+ ಶುದ್ಧತೆ)ನ್ನು ನೇರವಾಗಿ ಬಳಸಬಹುದು, ಅಥವಾ ಇತರೆ ಉತ್ಪಾದನೆಗಳಾಗಿ ಪರಿವರ್ತಿಸಬಹುದು. 2007ರಲ್ಲಿ ಕೆಲವು ಘೋಷಣೆಗಳನ್ನು ಮಾಡಲಾಗಿತ್ತು: ಗ್ಲಿಸೆರೊಲ್‌ ಬಳಸಿ ಪ್ರೊಪಿಲೀನ್‌ ಗ್ಲೈಕಾಲ್‌ ತಯಾರಿಸಲು ಯುರೋಪ್‌ನಲ್ಲಿ ಜಂಟಿ ಘಟಕ ಸ್ಥಾಪಿಸುವುದಾಗಿ ಆಷ್ಲೆಂಡ್‌ ಇಂಕ್‌. ಮತ್ತು ಕಾರ್ಗಿಲ್‌ ಘೋಷಿಸಿದವು. ಉತ್ತರ ಅಮೆರಿಕಾದಲ್ಲಿ ಇದೇ ರೀತಿಯ ಘಟಕ ಆರಂಭಿಸುವ ಇಂಗಿತವನ್ನು ಡೋ ಕೆಮಿಕಲ್ಸ್‌ ಘೋಷಿಸಿತು.[೩೩] ಗ್ಲಿಸೆರೊಲ್‌ನಿಂದ ಎಪಿಕ್ಲೊರ್‌ಹೈಡ್ರಿನ್‌ ತಯಾರಿಸುವ ಸ್ಥಾವರ ಸ್ಥಾಪಿಸುವ ಯೋಜನೆಯನ್ನೂ ಸಹ ಡೋ ಉದ್ಯಮ ತಿಳಿಸಿದೆ.[೩೪] ಎಪಿಕ್ಲೊರ್‌ಹೈಡ್ರಿನ್‌ಯು ಎಪಾಕ್ಸಿ ರಾಳಗಳಿಗಾಗಿ ಒಂದು ಕಚ್ಚಾ ಸಾಮಗ್ರಿ.


ಉತ್ಪಾದನಾ ಮಟ್ಟಗಳು

[ಬದಲಾಯಿಸಿ]

2007ರಲ್ಲಿ ಜೈವಿಕ ಡೀಸೆಲ್‌ ತಯಾರಿಕೆಯ ಕ್ಷಮತೆಯು ತ್ವರಿತ ಅಭಿವೃದ್ಧಿ ಕಂಡಿತು. 2002-06 ಅವಧಿಯ ಅಭಿವೃದ್ಧಿ ದರಕ್ಕೆ ಹೋಲಿಸಿದರೆ ಸುಮಾರು 40%ರಷ್ಟು ಹೆಚ್ಚಿತ್ತು.[೩೫] ಇಸವಿ 2006ರ ಉತ್ಪಾದನಾ ಅಂಕಿ-ಅಂಶಗಳು ವಿಸ್ತೃತ ರೂಪದಲ್ಲಿ ಲಭ್ಯವಾಗಿವೆ. ವಿಶ್ವಾದ್ಯಂತ ಜೈವಿಕ ಡೀಸೆಲ್‌ ಉತ್ಪಾದನೆಯು ಸುಮಾರು 5-6 ದಶಲಕ್ಷ ಟನ್‌ಗಳಷ್ಟಿತ್ತು. ಇದರಲ್ಲಿ 4.9 ದಶಲಕ್ಷ ಟನ್‌‌ ಯುರೋಪ್‌ನಲ್ಲಿ (ಜರ್ಮನಿಯಿಂದ 2.7 ದಶಲಕ್ಷ ಟನ್‌ಗಳು). ಉಳಿದ ಕೊಡುಗೆ USAದಾಗಿತ್ತು. 2009ರ ಜುಲೈನಲ್ಲಿ ಯುರೋಪಿಯನ್‌ ಒಕ್ಕೂಟದಲ್ಲಿ ಆಮದಾದ ಜೈವಿಕ ಡೀಸೆಲ್‌ಗೆ ತೆರಿಗೆ ವಿಧಿಸಲಾಯಿತು. ಯೂರೋಪಿನ ಉತ್ಪಾದಕರು, ಅದರಲ್ಲೂ ಜರ್ಮನ್‌ ನ ಪೈಪೋಟಿ ಎದುರಿಸಲು ಈ ಕ್ರಮ ಕೈಗೊಳ್ಳಲಾಯಿತು.[೩೬]

ಉತ್ಪಾದನೆಯು[೩೭] 2007ರಲ್ಲಿ, ಯುರೋಪ್‌ಒಂದರಲ್ಲೇ 5.7 ದಶಲಕ್ಷ ಟನ್‌ಗಳಿಗೆ ಏರಿತ್ತು.[೩೮] ಯುರೋಪ್‌ನಲ್ಲಿ 2008ರ ಸುಮಾರಿಗೆ ಒಟ್ಟು ಉತ್ಪಾದನಾ ಸಾಮರ್ಥ್ಯ 16 ದಶಲಕ್ಷ ಟನ್‌. US ಮತ್ತು ಯುರೋಪ್‌ಗಳಲ್ಲಿ ಡೀಸೆಲ್‌ಗಾಗಿ ಒಟ್ಟು 490 ದಶಲಕ್ಷ ಟನ್‌ (147 ಶತಕೋಟಿ ಗ್ಯಾಲನ್‌) ಬೇಡಿಕೆಗೆ ಇದನ್ನು ಹೋಲಿಸಬಹುದು.[೩೯] ಜಗದಾದ್ಯಂತ (ಎಲ್ಲಾ ಉದ್ದೇಶಗಳಿಗಾಗಿ ಬೆಳೆದ)ತರಕಾರಿ ತೈಲ ಇಳುವರಿಯು 2005/06 ರಲ್ಲಿ ಸುಮಾರು 110 ದಶಲಕ್ಷ ಟನ್‌ ಇತ್ತು, ಇದರಲ್ಲಿ ತಾಳೆ ಮತ್ತು ಸೋಯ್‌ಬೀನ್‌ ತೈಲಗಳು ತಲಾ 34 ದಶಲಕ್ಷ ಟನ್‌ ಉತ್ಪಾದನೆಯಾಗಿದ್ದವು.[೪೦]

ಜೈವಿಕ ಡೀಸೆಲ್‌ನ ಕಚ್ಚಾ ಸಾಮಗ್ರಿಗಳು

[ಬದಲಾಯಿಸಿ]

ಜೈವಿಕ ಡೀಸೆಲ್‌ ಉತ್ಪಾದನೆಗೆ ವಿವಿಧ ತೈಲಗಳನ್ನು ಬಳಸಬಹುದು. ಅವು ಕೆಳಕಂಡಂತಿವೆ:



  • ಕೊಚ್ಚೆ-ರಾಡಿ ನೀರಿನ [೪೨] ತ್ಯಾಜ್ಯಗಳಿಂದ ಪಾಚಿಗಳನ್ನು ಬೆಳೆಸಬಹುದಾಗಿದೆ. ಈ ರೀತಿಯಿಂದ ಆಹಾರಧಾನ್ಯ ಬೆಳೆಯಲು ಉಪಯೋಗಿಸುವ ಭೂಮಿಯ ದುರುಪಯೋಗ ತಡೆಗಟ್ಟಬಹುದು.
  • ಸ್ಯಾಲಿಕಾರ್ನಿಯಾ ಬಿಗೆಲೊವೀ ಯಂತಹ ಹ್ಯಾಲೊಫೈಟ್‌ಗಳಿಂದ ತೈಲ ಪಡೆಯಬಹುದು. ಈ ಹ್ಯಾಲೊಫೈಟ್‌ಗಳನ್ನು ಕರಾವಳಿ ಪ್ರದೇಶದ ಉಪ್ಪುನೀರಿನಲ್ಲಿ ಬೆಳೆಸಬಹುದು. ಇಂತಹ ಜಾಗದಲ್ಲಿ ಸಾಂಪ್ರದಾಯಿಕ ತಳಿಗಳನ್ನು ಬೆಳೆಸಲಾಗದು. ಹ್ಯಾಲೊಫೈಟ್‌ಗಳಿಂದ ಪಡೆವ ತೈಲ ಇಳುವರಿಯು, ಶುದ್ಧನೀರಿಂದ ಬೆಳೆದ ಸೋಯ್‌ಬೀನ್‌ ಮತ್ತು ಇತರೆ ತೈಲಬೀಜಗಳಷ್ಟೇ ಇರುತ್ತದೆ.[೪೩]


ಜೈವಿಕ ಡೀಸೆಲ್‌ ಉತ್ಪಾದನೆಗೆ ತರಕಾರಿ ತ್ಯಾಜ್ಯಗಳೇ ಅತ್ಯುತ್ತಮ ತೈಲಮೂಲ, ಎಂದು ಹಲವರು ಸಮರ್ಥಿಸುತ್ತಾರೆ. ಆದರೆ, ವಿಶ್ವಾದ್ಯಂತ ಸಾರಿಗೆ ಮತ್ತು ಗೃಹಬಳಕೆಗೆ ಬಳಸುವ ಪೆಟ್ರೊಲಿಯಂ-ಆಧಾರಿತ ಇಂಧನದ ಪ್ರಮಾಣಕ್ಕೆ ಹೋಲಿಸಿದರೆ ಜೈವಿಕ ಡೀಸೆಲ್‌ನ ಪೂರೈಕೆ ಪ್ರಮಾಣ ಏನೇನೂ ಸಾಲದು ಎಂಬಂತಿದೆ.


ಮಾಂಸ ಉತ್ಪಾದನೆಯಿಂದ ಬರುವ ಪಶು ಕೊಬ್ಬು ಒಂದು ಉಪ-ಉತ್ಪನ್ನ. ಕೇವಲ ಕೊಬ್ಬಿಗಾಗಿ ಪಶು- ಪ್ರಾಣಿ ಸಾಕಣೆ ಅಥವಾ ಮೀನುಗಾರಿಕೆ ಸೂಕ್ತವಲ್ಲದಿದ್ದರೂ, ಉಪ-ಉತ್ಪನ್ನಗಳು ದೊರೆಯುವ ಕಾರಣ ಜಾನುವಾರು (ಹಂದಿ, ದನ, ಕೋಳಿ) ಸಾಕು ಪ್ರಾಣಿಗಳ ಪಾಲನೆ-ಪೋಷಣೆ ಕಸಬುದಾರಿಕೆ ಉದ್ಯಮದ ಪ್ರೋತ್ಸಾಹಕ್ಕೆ ಕಾರಣವಾಗುತ್ತದೆ. ಪಶು ಕೊಬ್ಬು ಮೂಲದಿಂದ ತಯಾರಿಸಿದ ಜೈವಿಕ ಡೀಸೆಲ್‌, ಪೆಟ್ರೊಲಿಯಂ ಡೀಸೆಲ್‌ ಬಳಕೆಯ ಅಲ್ಪ ಭಾಗವನ್ನು ತುಂಬುತ್ತಿದೆ ಎಂಬುದು ಸತ್ಯ. ಇಲ್ಲದಿದ್ದಲ್ಲಿ ಪಶುಕೊಬ್ಬು-ಆಧಾರಿತ ಡೀಸೆಲ್‌ ಉತ್ಪಾದನೆಯನ್ನು ಕೈಬಿಡಲಾಗುತ್ತಿತ್ತು. ಬಹುಪಯೋಗಿ-ಕಚ್ಚಾ ಸಾಮಗ್ರಿ ಮೂಲಕ ಜೈವಿಕ ಡೀಸೆಲ್‌ ತಯಾರಿಕೆಯ ಘಟಕಗಳು ಇಂದು ಉತ್ತಮ ಮಟ್ಟದ ಪಶು-ಕೊಬ್ಬು ಆಧಾರಿತ ಜೈವಿಕ ಡೀಸೆಲ್‌ ಉತ್ಪಾದಿಸುತ್ತಿವೆ.[ಸೂಕ್ತ ಉಲ್ಲೇಖನ ಬೇಕು] ಸದ್ಯಕ್ಕೆ 5-ದಶಲಕ್ಷ ಡಾಲರ್‌ ಬಂಡವಾಳದ ಜೈವಿಕ ಡೀಸೆಲ್‌ ಉತ್ಪಾದನಾ ಸ್ಥಾವರವು USAದಲ್ಲಿ ತಲೆ ಎತ್ತುತ್ತಿದೆ. ಇಲ್ಲಿ 11.4 ದಶಲಕ್ಷ ಲೀಟರ್‌ (3 ದಶಲಕ್ಷ ಗ್ಯಾಲನ್‌ಗಳು) ಜೈವಿಕ ಡೀಸೆಲ್‌ ಉತ್ಪಾದನಾ ಗುರಿ ಇದೆ. ಸ್ಥಳೀಯ ಟೈಸನ್‌ ಕೋಳಿ ಸಾಕಾಣಿಕಾ ಕೇಂದ್ರವು ಸುಮಾರು ಒಂದು ದಶಲಕ್ಷ ಕೆಜಿ (2.3 ಶತಕೋಟಿ ಪೌಂಡ್‌ಗಳಷ್ಟು) ಕೋಳಿ ಕೊಬ್ಬನ್ನು[೪೪] ಉದ್ದೇಶಿತ ಯೋಜನೆಗೆ ಸರಬರಾಜು ಮಾಡಲಿದೆ.[೪೧] ಇದೇ ರೀತಿ, ಕೆಲವು ಸಣ್ಣ-ಪ್ರಮಾಣದ ಜೈವಿಕ ಡೀಸೆಲ್‌ ಉದ್ದಿಮೆಗಳು ತ್ಯಾಜ್ಯ ಮೀನುತೈಲವನ್ನು ಪೂರಕ ಕಚ್ಚಾ ಸಾಮಗ್ರಿಯಾಗಿ ಬಳಸುತ್ತವೆ.[೪೫][೪೬] 'ವಿಯೆಟ್ನಾಮ್‌ನ ಒಂದು ಉದ್ದಿಮೆಯು ಕ್ಯಾಟ್ ಫಿಶ್ನಿಂದ (ಬಾಸಾ, ಪಾಂಗಾಸಿಯಸ್‌ ಎಂದೂ ಕರೆಯಲಾಗಿದೆ) ಜೈವಿಕ ಡೀಸೆಲ್‌ ಉತ್ಪಾದಿಸುತ್ತದೆ. ಇಲ್ಲಿ, 130 ಟನ್‌ ಮೀನುಗಳಿಂದ ಸುಮಾರು 81 ಟನ್‌ ಮೀನು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಈ ತ್ಯಾಜ್ಯದಿಂದ ದಿನಕ್ಕೆ 13 ಟನ್‌ ಜೈವಿಕ ಡೀಸೆಲ್‌ ಉತ್ಪಾದಿಸಹುದು.' ಎಂದು EU ಧನಸಹಾಯದ ENERFISH ಎಂಬ ಯೋಜನೆ ಸೂಚಿಸಿದೆ. ಸಂಸ್ಕರಿಸಿದ ಮೀನುಗಳನ್ನು CHP ಶೈತ್ಯಾಗಾರದಲ್ಲಿ ಸಂರಕ್ಷಿಸಲು, ಈ ಘಟಕಕ್ಕೆ ಬೇಕಾಗುವ ಇಂಧನವನ್ನು ಜೈವಿಕ ಅನಿಲದಿಂದ ಸ್ಥಾವರಗಳಿಗೆ [೪೭] ಪಡೆದುಕೊಳ್ಳಲಾಗುತ್ತದೆ.


ಅಗತ್ಯ ಪೂರಕ ಕಚ್ಚಾ ಸಾಮಗ್ರಿಗಳ ಪ್ರಮಾಣ

[ಬದಲಾಯಿಸಿ]

ದ್ರವರೂಪೀ ಪಳೆಯುಳಿಕೆ ಇಂಧನದ ಪರ್ಯಾಯವಾಗಲು, ಸದ್ಯಕ್ಕೆ ವಿಶ್ವಾದ್ಯಂತ ತರಕಾರಿ ತೈಲ ಮತ್ತು ಪಶು ಕೊಬ್ಬು ಉತ್ಪಾದನೆ ಪ್ರಮಾಣ ಸಾಕಾಗುವಷ್ಟು ಇಲ್ಲ. ಇಷ್ಟೇ ಅಲ್ಲದೆ, ಹೆಚ್ಚುವರಿ ತರಕಾರಿ ತೈಲ ಉತ್ಪಾದನೆಗಾಗಿ ಅಗತ್ಯ ಪ್ರಕ್ರಿಯೆಗಳಾದ ಕೃಷಿ, ಫಲವತ್ತತೆ, ಕೀಟನಾಶಕಗಳ ಬಳಕೆ ಮತ್ತು ಜಮೀನಿನ ಪರಿವರ್ತನೆಯನ್ನು ಕೆಲವರು ಆಕ್ಷೇಪಿಸಿದ್ದಾರೆ. US ಇಂಧನ ಇಲಾಖೆಎನರ್ಜಿ ಇನ್ಫರ್ಮೆಷನ್‌ ಅಡ್ಮಿನಿಸ್ಟ್ರೇಷನ್‌ ಪ್ರಕಾರ, , ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಬಳಸಲಾದ ಡೀಸೆಲ್‌ ಇಂಧನ ಮತ್ತು ಕೊಠಡಿಗಳಲ್ಲಿ ನಿರ್ಧಿಷ್ಟ ತಾಪಮಾನದ ಮೂಲಕ ಉತ್ಪಾದಿಸಿದ ತೈಲ ಸಾಗಾಣಿಕೆ ಪ್ರಮಾಣವು (ಹೋಂ ಹೀಟಿಂಗ್‌ ಆಯಿಲ್‌) ಅಂದಾಜು 160 ದಶಲಕ್ಷ ಟನ್‌ಗಳಷ್ಟಾಗಿದೆ. (350 ಶತಕೋಟಿ ಪೌಂಡ್‌ಗಳು).[೪೮] ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಎಲ್ಲಾ ರೀತಿಯ ಬಳಕೆಗಾಗಿ ತರಕಾರಿ ಮೂಲದ ತೈಲದ ಅಂದಾಜು ಉತ್ಪಾದನೆಯು ಸುಮಾರು 11 ದಶಲಕ್ಷ ಟನ್‌ಗಳು (24 ಶತಕೋಟಿ ಪೌಂಡ್‌ಗಳು); ಹಾಗೂ, ಪಶು ಕೊಬ್ಬಿನ ಅಂದಾಜು ಉತ್ಪಾದನೆ 5.3 ದಶಲಕ್ಷ ಟನ್‌ಗಳು (12 ಶತಕೋಟಿ ಪೌಂಡ್‌ಗಳು)[೪೯]


ಸೋಯ್‌ಬೀನ್‌ನಿಂದ ಜೈವಿಕ ಡೀಸೆಲ್‌ ಉತ್ಪಾದನೆಗಾಗಿ USAದ ಕೃಷಿ ಭೂಮಿಯನ್ನು (170 ದಶಲಕ್ಷ ಎಕರೆಗಳು, ಅಥವಾ 1.9 ದಶಲಕ್ಷ ಚದರ ಕಿಲೋಮೀಟರ್‌ಗಳು) ಇಡಿಯಾಗಿ ಬಳಸಿದರೆ, (ಆಶಾದಾಯಕವಾಗಿ ಪ್ರತಿ ಎಕರೆಗೆ 98 US ಗ್ಯಾಲನ್‌ ಲೆಕ್ಕದಲ್ಲಿ) ಅಗತ್ಯ 160 ದಶಲಕ್ಷ ಟನ್‌ ಜೈವಿಕ ಡೀಸೆಲ್‌ ಒದಗಿಸಬಹುದಷ್ಟೆ. ಈ ಸಂದರ್ಭದ ಅಡೆತಡೆಗಳನ್ನು ನಿವಾರಿಸಿದರೆ, ತಾತ್ವಿಕವಾಗಿ ಈ ಪ್ರದೇಶದ ವಿಸ್ತೀರ್ಣವನ್ನು ಪಾಚಿಗಳ ಉಪಯೋಗದ ಮೂಲಕವೇ ಗಮನಾರ್ಹವಾಗಿ ಕಡಿಮೆಗೊಳಿಸಬಹುದು. 'ಅಮೆರಿಕಾ ಸಂಯುಕ್ತ ಸಂಸ್ಥಾನದ ಪಾಚಿ ಮೂಲದ ಇಂಧನ ಇಡಿಯಾಗಿ ಪೆಟ್ರೊಲಿಯಂಗೆ ಪರ್ಯಾಯವಾಗಬೇಕಾದರೆ 15,000 ಚದರ ಮೈಲಿಗಳ (38,849 ಚದರ ಕಿಲೊಮೀಟರ್‌ಗಳ) ಭೂಪ್ರದೇಶದ ಅಗತ್ಯವಿದೆ. ಅರ್ಥಾತ್‌, ಪ್ರತಿ ಹೆಕ್ಟೇರ್‌ಗೆ 140 ಟನ್‌ ಇಳುವರಿ (ಪ್ರತಿ ಏಕರೆಗೆ 15,000 US ಗ್ಯಾಲನ್‌) ಲೆಕ್ಕದಲ್ಲಿ, ಮೇರಿಲೆಂಡ್‌ಗಿಂತಲೂ ಕೆಲ ಸಾವಿರ ಚದರ ಮೈಲಿ ದೊಡ್ಡ, ಅಥವಾ ಬೆಲ್ಜಿಯಮ್‌[೫೦][೫೧] ದೇಶದ 1.3ರಷ್ಟು ಭೂಪ್ರದೇಶದ ಅಗತ್ಯವಿದೆ' ಎಂದು US DOE ಅಂದಾಜು ಮಾಡಿದೆ. ಪ್ರತಿ ಏಕರೆಗೆ 36 ಟನ್‌ (ಪ್ರತಿ ಏಕರೆಗೆ 3834 US ಗ್ಯಾಲನ್‌ಗಳು) ನೈಜ ಉತ್ಪನ್ನವನ್ನು ಲೆಕ್ಕ ಹಾಕಿದರೆ, 152,000 ಚದರ ಕಿಲೊಮೀಟರ್‌ ವಿಸ್ತೀರ್ಣ ಜಾಗೆಯ ಅಗತ್ಯವುಂಟು. ಅರ್ಥಾತ್‌ ಸ್ಥೂಲವಾಗಿ ಜಾರ್ಜಿಯಾ ರಾಜ್ಯ ಅಥವಾ ಇಂಗ್ಲೆಂಡ್ ಮತ್ತು ವೇಲ್ಸ್‌ನ ಒಟ್ಟು ವಿಸ್ತೀರ್ಣಕ್ಕೆ ಸಮನಾಗಿದೆ. ಪಾಚಿಗಳ ಅನುಕೂಲವೇನೆಂದರೆ, ಅವುಗಳನ್ನು ಮರುಭೂಮಿ ಹಾಗೂ ಕಡಲಜೀವಿ ಪರಿಸರಗಳಲ್ಲಿ ಬೆಳೆಸಬಹುದು. ತೈಲ ಉತ್ಪನ್ನಗಳ ಇಳುವರಿ ಪ್ರಮಾಣವೂ ಇಲ್ಲಿ ಸಸ್ಯಗಳಿಗಿಂತಲೂ ಹೆಚ್ಚು.


ಇಳುವರಿ

[ಬದಲಾಯಿಸಿ]

ದೇಶದಲ್ಲಿ ಗಮನಾರ್ಹವಾಗಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಕೈಗಾರಿಕಾ ಉತ್ಪಾದನೆಗನುಗುಣವಾಗಿ ಜೈವಿಕ ಡೀಸೆಲ್ ತಯಾರಿಕೆಗೆ ಸಜ್ಜುಗೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಇದಕ್ಕೆ ಅವಶ್ಯವಿರುವ ಕಚ್ಚಾ ಸಾಮಗ್ರಿಯ ಕ್ಷಮತೆಯು ಒಟ್ಟು ಉತ್ಪಾದನೆಯು ಮೇಲೆ ಪ್ರಭಾವ ಬೀರುತ್ತದೆ.


ಕೆಲವು ಮಾದರಿ ಉತ್ಪನ್ನಗಳು
ಫಸಲು ಉತ್ಪನ್ನ
L/ha US ಗ್ಯಾಲನ್‌/ಎಕರೆ
ಪಾಚಿಗಳು [n ೧] ~3,000 ~300
ಚೀನಾದ ಟ್ಯಾಲೊ [n ೨][n ೩] 907 97
ತಾಳೆ ಎಣ್ಣೆ [n ೪] 4752 508
ತೆಂಗಿನಕಾಯಿ 2151 230
ರೇಪ್ಸೀಡ್‌ [n ೪] 954 102
ಸೋಯ್‌ (ಇಂಡಿಯಾನಾ) [೫೨] 554-922 59.2-98.6
ಕಡಲೇಕಾಯಿ [n ೪] 842 90
ಸೂರ್ಯಕಾಂತಿ [n ೪] 767 82
ಸೆಣಬು [ಸೂಕ್ತ ಉಲ್ಲೇಖನ ಬೇಕು] 242 26
  1. ಇಎಸ್‌ಟಿ.- ಸೋಯ್‌ ಅಂಕಿ-ಅಂಶಗಳು ಮತ್ತು DOE ಉಲ್ಲೇಖವನ್ನು ಕೆಳಗೆ ನೋಡಿ
  2. ಕ್ಲಾಸ್‌, ಡೊನಾಲ್ಡ್‌, "ಬಯೊಮಾಸ್‌ ಫಾರ್‌ ರೆನ್ಯೂಯಬಲ್‌ ಇನರ್ಜಿ, ಫ್ಯುಯೆಲ್ಸ್‌,
    ಅಂಡ್‌ ಕೆಮಿಕಲ್ಸ್‌", ಪುಟ 341. ಅಕಾಡಮಿಕ್‌ ಪ್ರೆಸ್‌, 1998.
  3. ಕಿಟಾನಿ, ಒಸಮು, "ವಾಲ್ಯೂಮ್‌ V: ಇನರ್ಜಿ ಅಂಡ್‌ ಬಯೊಮಾಸ್‌ ಇಂಜಿನಿಯರಿಂಗ್‌,
    CIGR ಹ್ಯಾಂಡ್‌ಬುಕ್‌ ಆಫ್‌ ಅಗ್ರಿಕಲ್ಚರಲ್‌ ಇಂಜಿನಿಯರಿಂಗ್‌", ಅಮೆರ್‌ ಸೊಸೈಟಿ ಆಫ್‌ ಅಗ್ರಿಕಲ್ಚರಲ್‌, 1999.
  4. ೪.೦ ೪.೧ ೪.೨ ೪.೩ ಜೈವಿಕ ಇಂಧನಗಳು: ಕೆಲವು ಅಂಕಿ ಅಂಶಗಳು


ಪಾಚಿಗಳ ಇಂಧನ ಉತ್ಪನ್ನಗಳನ್ನು ಇನ್ನೂ ನಿಖರವಾಗಿ ನಿರ್ಣಯಿಸಲಾಗಿಲ್ಲ. ಆದರೆ, ಸೋಯ್‌ಬೀನ್‌ನಂತಹ ಫಸಲುಗಳಿಗೆ ಹೋಲಿಸಿದರೆ, ಪಾಚಿಗಳು ಪ್ರತಿ ಏಕರೆಗೆ 30 ಪಟ್ಟು ಹೆಚ್ಚು ಶಕ್ತಿಯನ್ನು ನೀಡಬಲ್ಲವು ಎಂದು DOE ಹೇಳಿರುವುದು ವರದಿಯಾಗಿದೆ.[೫೩] ಪ್ರತಿ ಹೆಕ್ಟೇರ್‌ಗೆ 36 ಟನ್‌ಗಳಷ್ಟು ಉತ್ಪನ್ನವು ಕಾರ್ಯಸಾಧ್ಯವೆಂದು ಹೈಫಾದ ಸಾಗರವಿಜ್ಞಾನ ಸಂಸ್ಥೆಯ ಅಮಿ ಬೆನ್‌-ಅಮೊಟ್ಜ್‌ ಹೇಳಿದ್ದಾರೆ. ಇವರು 20 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದಲೂ ವಾಣಿಜ್ಯವಾಗಿ ಪಾಚಿ ಕೃಷಿ ಮಾಡುತ್ತಿದ್ದಾರೆ.[೫೪]


ಜಟ್ರೊಫಾ ಗಿಡವು ಜೈವಿಕ ಡೀಸೆಲ್‌ನ 'ಹೆಚ್ಚು-ಉತ್ಪನ್ನ' ಮೂಲವೆಂದು ಹೇಳಲಾಗಿದೆ. ಆದರೆ ಉತ್ಪನ್ನವು ಹವಾಮಾನ ಮತ್ತು ಮಣ್ಣಿನ ಗುಣಲಕ್ಷಣಗಳನ್ನು ಅವಲಂಬಿಸಿದೆ. ಕನಿಷ್ಠಪಕ್ಷದ ಅಂದಾಜಿನ ಪ್ರಕಾರ, ಪ್ರತಿ ಫಸಲಿಗೆ ಏಕರೆವಾರು 200 US ಗ್ಯಾಲನ್‌ಗಳಷ್ಟು (ಪ್ರತಿ ಹೆಕ್ಟೇರ್‌ಗೆ 1.5-2 ಟನ್‌ಗಳು); ಅನುಕೂಲಕರ ಹವಾಮಾನಗಳಲ್ಲಿ ವರ್ಷಕ್ಕೆ ಎರಡು ಅಥವಾ ಹೆಚ್ಚು ಫಸಲು ಗಳಿಸಬಹುದು.[೫೫] ಫಿಲಿಪೀನ್ಸ್‌, ಮಾಲಿ ಮತ್ತು ಭಾರತ ದೇಶಗಳಲ್ಲಿ ಇದನ್ನು ಬೆಳೆಸಲಾಗಿದೆ. ಇದು ಕ್ಷಾಮಸ್ಥಿತಿಯನ್ನು ನಿಭಾಯಿಸಬಲ್ಲದು, ಹಾಗೂ ಕಾಫಿ, ಸಕ್ಕರೆ, ಹಣ್ಣು-ತರಕಾರಿಗಳಂತಹ ಇತರೆ ಫಸಲುಗಳೊಂದಿಗೆ ಜಮೀನು ಹಂಚಿಕೊಳ್ಳಬಹುದು.[೫೬] ಅಲ್ಪಮಟ್ಟಿಗೆ ಕೃಷಿ ಮಾಡಬಹುದಾದ ಜಮೀನುಗಳಿಗೆ ಸೂಕ್ತವಾಗಿದೆ. ಮರುಭೂಮಿಕರಣಕ್ಕೆ ಪ್ರತಿರೋಧವನ್ನು ಒಡ್ಡಬಹುದು ಎಂದು ಸಮರ್ಥಕರು ವಾದಿಸುತ್ತಾರೆ.[೫೭]


ದಕ್ಷತೆ ಮತ್ತು ಆರ್ಥಿಕ ವಾದಗಳು

[ಬದಲಾಯಿಸಿ]

ಡಾ. ಫ್ಯಾನ್‌ ಡೈನ್‌ ಮತ್ತು ಡಾ. ರೇಮರ್‌ ಟೆನೆಸ್ಸೆ ಕಣಿವೆ ಪ್ರಾಧಿಕಾರಕ್ಕಾಗಿ ಸಂಶೋಧನೆ ನಡೆಸಿದರು. ಇದರ ಪ್ರಕಾರ, ಸರಾಸರಿ US ಗದ್ದೆಯು ಒಂದು ಫಸಲು ಉತ್ಪಾದಿಸಲು ಪ್ರತಿ ಹೆಕ್ಟೇರಿಗೆ 82 ಲೀಟರ್‌ಗಳಷ್ಟು (ಪ್ರತಿ ಏಕರೆಗೆ 8.75 US ಗ್ಯಾಲನ್) ಇಂಧನವನ್ನು ಬಳಸುತ್ತದೆ. ಆದರೂ, ರೇಪ್ಸೀಡ್‌ ಫಸಲು 1,029 L/ha ಸರಾಸರಿ ದರದಲ್ಲಿ (ಪ್ರತಿ ಏಕರೆಗೆ 110 US ಗ್ಯಾಲನ್‌) ತೈಲವನ್ನು ಉತ್ಪಾದಿಸುತ್ತದೆ. ಹೆಚ್ಚು ಉತ್ಪನ್ನದ ರೇಪ್ಸೀಡ್‌ ಗದ್ದೆಗಳು ಸುಮಾರು 1,356 L/ha (ಪ್ರತಿ ಏಕರೆಗೆ 145 US ಗ್ಯಾಲನ್‌) ತೈಲ ಉತ್ಪಾದಿಸುತ್ತದೆ. ಈ ವಿಚಾರದಲ್ಲಿ, ಆದಾನ-ಉತ್ಪನ್ನದ ನಿಷ್ಪತ್ತಿಯು ಸ್ಥೂಲವಾಗಿ 1:12.5 ಮತ್ತು 1:16.5ರಷ್ಟಿದೆ. ದ್ಯುತಿಸಂಸ್ಲೇಷಣೆ (ಫೊಟೊಸಿಂತೆಸಿಸ್‌) ಒಟ್ಟು ಸೌರ ವಿಕಿರಣದ 3-6%ರಷ್ಟು ದಕ್ಷತಾ ಪ್ರಮಾಣವನ್ನು ಹೊಂದಿದೆ.[೫೮]

ಇಂಧನ ತಯಾರಿಕೆಗೆ ಫಸಲಿನ ಇಡೀ ಸಗಟನ್ನು ಬಳಸಿದ್ದಲ್ಲಿ, ಈ ಸರಣಿಯ ಒಟ್ಟು ದಕ್ಷತೆಯು ಸದ್ಯಕ್ಕೆ ಸುಮಾರು 1%ರಷ್ಟಿರುತ್ತದೆ.[೫೯] ವಿದ್ಯುತ್‌ ಚಾಲಿತ ರೈಲು ಮತ್ತು ಸೌರ ವಿದ್ಯುತ್ಕೋಶಗಳಿಗೆ ಹೋಲಿಸಿದರೆ ಅನಾನುಕೂಲಕರವಾಗಿರುತ್ತದೆ. ಆದರೂ ಸಹ, ಸ್ಥಾಪನೆ ಮತ್ತು ಅಳವಡಿಕೆಯ ವಿಚಾರದಲ್ಲಿ ಜೈವಿಕ ಡೀಸೆಲ್‌ ಖರ್ಚು ಕಡಿಮೆ. (ಸೌರ ವಿದ್ಯುತ್ಕೋಶಗಳು ಪ್ರತಿ ಚದರ ಮೀಟರ್‌ಗೆ ಸುಮಾರು US$1,000) ಮತ್ತು ಸಾರಿಗೆ (ದ್ರವರೂಪದ ಇಂಧನಗಳಿಗಿಂತಲೂ ಕಡಿಮೆ ಶಕ್ತಿ ಸಾಂದ್ರತೆಯುಳ್ಳ ವಿದ್ಯುತ್‌ ಕೋಶಗಳ ಅಗತ್ಯ ವಿದ್ಯುತ್‌ ವಾಹನಗಳಿಗಿದೆ).

ಆದರೂ, ಇಂತಹ ಪರಿವರ್ತನೆಯು ಆರ್ಥಿಕವಾಗಿ ಸಮಂಜಸವೇ ಎಂಬುದನ್ನು ಸಾಬೀತುಪಡಿಸಲು ಈ ಅಂಕಿ-ಅಂಶಗಳು ಸಾಕಷ್ಟಾಗದು. ಹೆಚ್ಚುವರಿ ಕಾರಣಗಳನ್ನೂ ಸಹ ಪರಿಗಣಿಸಬೇಕಾಗಿದೆ - ಉದಾಹರಣೆಗೆ: ಸಂಸ್ಕರಣೆಗಾಗಿ ಬೇಕಾದ ಶಕ್ತಿಯ ಸಮಾನ, ಕಚ್ಚಾ ತೈಲದಿಂದ ಇಂಧನದ ಉತ್ಪನ್ನ, ಆಹಾರ ಕೃಷಿಯಿಂದ ಲಾಭಗಳು, ಆಹಾರ ಬೆಲೆಗಳ ಮೇಲೆ ಪ್ರಭಾವ ಬೀರುವ ಜೈವಿಕ ಡೀಸೆಲ್‌, ಹಾಗೂ, ಪೆಟ್ರೊಡೀಸೆಲ್‌ ಬೆಲೆಗೆ ಸಂಬಂಧಿಸಿದಂತೆ ಜೈವಿಕ ಡೀಸೆಲ್‌ನ ಬೆಲೆ.


ಜೈವಿಕ ಡೀಸೆಲ್‌ನ ಶಕ್ತಿ ಸಮತೋಲನದ ಕುರಿತು ಚರ್ಚೆ ಇನ್ನೂ ನಡೆಯುತ್ತಿದೆ. ಸಾಂಪ್ರದಾಯಿಕ ಖಾದ್ಯ ಫಸಲುಗಳನ್ನು ಬಳಸಿದಲ್ಲಿ, (ಖಾದ್ಯವಲ್ಲದ ಫಸಲುಗಳನ್ನು ಬಳಸಬಹುದಾದರೂ) ಜೈವಿಕ ಇಂಧನಗಳತ್ತ ಸಂಪೂರ್ಣ ಸಂಕ್ರಮಣಕ್ಕಾಗಿ ಹೆಚ್ಚುವರಿ ಜಮೀನಿನ ಅಗತ್ಯವಾಗಬಹುದು. ಆರ್ಥಿಕ ಉತ್ಪನ್ನದೊಂದಿಗೆ ಇಂಧನದ ಬಳಕೆಯೂ ಹೆಚ್ಚಾಗುವ ಕಾರಣ, ಈ ಸಮಸ್ಯೆಯು ಭಾರೀ ಅರ್ಥಿಕತೆಯುಳ್ಳ ದೇಶಗಳಿಗೆ ಇದು ತೀವ್ರ ಸಮಸ್ಯೆಯಾಗಬಹುದು.[೬೦]


ಸಾಂಪ್ರದಾಯಿಕ ಖಾದ್ಯ ಫಸಲುಗಳನ್ನು ಮಾತ್ರ ಬಳಸಿದ್ದಲ್ಲಿ, ಇಂತಹ ಹಲವು ರಾಷ್ಟ್ರಗಳು ತಮ್ಮ ವಾಹನಗಳಿಗಾಗಿ ಜೈವಿಕ ಇಂಧನ ತಯಾರಿಸಲು ಸಾಕಷ್ಟು ಬೇಸಾಯಯೋಗ್ಯ ಜಮೀನನ್ನು ಹೊಂದಿಲ್ಲ. ಸಣ್ಣ ಆರ್ಥಿಕತೆಗಳುಳ್ಳ ರಾಷ್ಟ್ರಗಳು (ಹಾಗಾಗಿ ಕಡಿಮೆ ಇಂಧನ ಸಂಪನ್ಮೂಲಗಳ ಖರ್ಚು) ಹಾಗೂ ಹೆಚ್ಚು ಕೃಷಿಯೋಗ್ಯ ಜಮೀನು ಹೊಂದಿರುವುದು ಸುಸ್ಥಿತಿಯಲ್ಲಿರಬಹುದು. ಆದರೂ ಹಲವು ವಲಯಗಳಲ್ಲಿನ ರಾಷ್ಟ್ರಗಳು ಆಹಾರ ಉತ್ಪಾದನೆಯಿಂದ ಜಮೀನನ್ನು ಇನ್ನೊಂದು ಉದ್ದೇಶಕ್ಕಾಗಿ ಬಳಸಲಾಗದು.

ಕಡಿಮೆ ಜಮೀನನ್ನು ಬಳಸುವ ಜೈವಿಕ ಡೀಸೆಲ್‌ ಮೂಲಗಳು ತೃತೀಯ ಜಗತ್ತಿನ ದೇಶಗಳಿಗೆ ಸೂಕ್ತವೆನಿಸಬಹುದು; ಉದಾಹರಣೆಗೆ, ರಸ್ತೆಯ ಬದಿಯಲ್ಲಿ ಬೆಳೆಸುವಂತಹ ಹೊಂಗೆ ತೈಲ ಬೀಜಗಳು, ಅಥವಾ ರೈಲು ಹಳಿಗಳ ಅಕ್ಕ-ಪಕ್ಕ ಬೆಳೆಸಬಹುದಾದ ಜಟ್ರೊಫಾ.[೬೧]

ಮಲೇಷ್ಯಾ ಮತ್ತು ಇಂಡೊನೆಷ್ಯಾದಂತಹ ಉಷ್ಣವಲಯಗಳಲ್ಲಿ, ತೈಲ ತಾಳೆಗಳನ್ನು ತ್ವರಿತ ವೇಗದಲ್ಲಿ ನೆಡಲಾಗುತ್ತಿದೆ. ಏಕೆಂದರೆ ಯುರೋಪ್‌ ಮತ್ತು ಇತರೆ ಮಾರುಕಟ್ಟೆಗಳಲ್ಲಿ ಜೈವಿಕ ಡೀಸೆಲ್‌ಗಾಗಿ ಬೇಡಿಕೆ ಹೆಚ್ಚುತ್ತಿವೆ. ತಾಳೆ ಎಣ್ಣೆಯಿಂದ ಜೈವಿಕ ಡೀಸೆಲ್‌ ಉತ್ಪಾದನಾ ವೆಚ್ಚಗಳು ರೇಪ್ಸೀಡ್‌ ಜೈವಿಕ ಡೀಸೆಲ್‌ದ ಮೂರನೆಯ ಒಂದು ಭಾಗಕ್ಕಿಂತಲೂ ಕಡಿಮೆಯೆಂದು ಜರ್ಮನಿಯಲ್ಲಿ ಅಂದಾಜು ಮಾಡಲಾಗಿದೆ.[೬೨] ಜೈವಿಕ ಡೀಸೆಲ್‌ ಶಕ್ತಿಮೂಲಾಂಶವು ದ್ಯುತಿಸಂಶ್ಲೇಷಣಾ ಕ್ರಿಯೆಯ ಮೂಲಕ ಗಿಡಗಳು ಹೀರಿಕೊಂಡ ಸೌರ ಶಕ್ತಿಯಾಗಿದೆ. ಜೈವಿಕ ಡೀಸೆಲ್‌ನ ಸಕಾರಾತ್ಮಕ ಶಕ್ತಿ ಸಮತೋಲನದ ಬಗ್ಗೆ[ಸೂಕ್ತ ಉಲ್ಲೇಖನ ಬೇಕು]:

ಗದ್ದೆಯಲ್ಲಿ ಒಣಹುಲ್ಲನ್ನು ಕುಯ್ಯದೆ ಹಾಗೇ ಬಿಟ್ಟಾಗ, ಜೈವಿಕ ಡೀಸೆಲ್‌ ಉತ್ಪಾದನೆಯ ಶಕ್ತಿ-ಸಕಾರಾತ್ಮಕವಾಗಿತ್ತು. ಶಕ್ತಿ ಆದಾರದ ಪ್ರತಿ 0.561 GJಗೆ (ಉತ್ಪನ್ನ/ಖರ್ಚು 1.78ರಷ್ಟು ನಿಷ್ಪತ್ತಿ) 1 GJನಷ್ಟು ಜೈವಿಕ ಡೀಸೆಲ್‌ ನೀಡುತ್ತಿತ್ತು.
ಒಣಹುಲ್ಲನ್ನು ಇಂಧನವಾಗಿ ದಹಿಸಿ, ತೈಲಬೀಜ ರೇಪ್ಮೀಲ್‌ನ್ನು ಸಹಕಾರಿಯಾಗಿ ಬಳಸಿದಾಗ, ಜೈವಿಕ ಡೀಸೆಲ್‌ನ ಉತ್ಪಾದನೆಯ ಉತ್ಪನ್ನ/ವೆಚ್ಚದ ಪ್ರಮಾಣ ಇನ್ನಷ್ಟು ಸುಧಾರಿಸಿತು(3.71). ಆರ್ಥಾತ್‌, ಜೈವಿಕ ಡೀಸೆಲ್‌ ಉತ್ಪಾದಿಸಲು ಬೇಕಾಗುವ ಶಕ್ತಿಯ ಪ್ರತಿಯೊಂದು ಯುನಿಟ್‌ಗೂ, ಉತ್ಪಾದನೆ 3.71 ಯುನಿಟ್‌ಗಳಾಗಿತ್ತು (ಉಳಿದ 2.71 ಯುನಿಟ್‌ಗಳು ಸೌರ ಶಕ್ತಿಯ ಮೂಲಕ ಪ್ರಾಪ್ತವಾಗುವುದು)

ಇಂಧನ ಭದ್ರತೆ

[ಬದಲಾಯಿಸಿ]

ಜೈವಿಕ ಡೀಸೆಲ್‌ ಬಳಕೆಯ ಪ್ರಾಮುಖ್ಯತೆಯ ಕಾರಣವು ಇಂಧನ ಭದ್ರತೆಯಾಗಿದೆ. ಇದರ ಅರ್ಥ, ತೈಲದ ಮೇಲೆ ರಾಷ್ಟ್ರದ ಅವಲಂಬನೆ ಕಡಿಮೆಯಾಗುವುದು, ಇದರ ಸ್ಥಾನದಲ್ಲಿ ಇದ್ದಿಲು, ಅನಿಲ ಅಥವಾ ನವೀಕರಿಸಬಲ್ಲ ಮೂಲಗಳಂತಹ ಸ್ಥಳೀಯ ಮೂಲಗಳನ್ನು ಬಳಸಬಹುದು. ಇದರಿಂದಾಗಿ, ಹಸಿರುಮನೆ ಅನಿಲ ಸೂಸುವಿಕೆ ಕಡಿಮೆ ಮಾಡದೆಯೇ, ಜೈವಿಕ ಇಂಧನಗಳಿಂದ ಸಾಕಷ್ಟು ಅನುಕೂಲಗಳಾಗಬಹುದು. ಒಟ್ಟು ಶಕ್ತಿಯ ಸಂತುಲನದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ತೈಲದ ಮೇಲಿನ ಅವಲಂಬನೆಯು ಕಡಿಮೆಯಾಗಿರುವುದು ನಿಜ ಸಂಗತಿ. ಉದಾಹರಣೆಗೆ, ಪೆಟ್ರೊಲಿಯಂ ಹೊರತುಪಡಿಸಿ ಇತರೆ ವಿಭಿನ್ನ ಮೂಲಗಳಿಂದ ಇತರ ಉಪ-ಉತ್ಪಾದನೆಯಲ್ಲಿ ಬಳಸಲಾದ ಇಂಧನ. US ಜೈವಿಕ ಇಂಧನ ಯೋಜನೆಯ[೬೩] ಹಿಂದೆ ಇಂಧನ ಭದ್ರತೆಯು ಪ್ರಮುಖ ಕಾರಣವಾಗಿದೆ ಎಂದು US ರಾಷ್ಟ್ರೀಯ ನವೀಕರಿಸಬಲ್ಲ ಶಕ್ತಿಮೂಲ ಪ್ರಯೋಗಾಲಯ ಹೇಳಿದೆ. ಶ್ವೇತಭವನ ಪ್ರಕಟಿಸಿದ '21ನೆಯ ಶತಮಾನಕ್ಕಾಗಿ ಇಂಧನ ಭದ್ರತೆ' ಎಂಬ ಶ್ವೇತಪತ್ರದಲ್ಲಿಯೂ ಸಹ, ಜೈವಿಕ ಇಂಧನ ಉತ್ತೇಜಿಸಲು ಇಂಧನ ಸುಭದ್ರತೆಯೇ ಪ್ರಮುಖ ಕಾರಣ ಎಂದು ತಿಳಿಸಲಾಗಿದೆ.[೬೪] 'ಸರಿಯಾಗಿ ನಿರ್ವಹಣೆ ಮಾಡಲಾದ ಜೈವಿಕ ಇಂಧನಗಳು, ಇಂಧನ ಮೂಲ ವೈವಿಧ್ಯೀಕರಣದ ಮೂಲಕ ಭದ್ರತೆಯ ಕಲ್ಪನೆಯನ್ನು ಹೊತ್ತಿರುವ EUಗೆ ಸಮರ್ಥನೆಯನ್ನು ನೀಡಬಲ್ಲದು' ಎಂದು EU ನಿಯೋಗದ ಅಧ್ಯಕ್ಷ ಜೋಸ್‌ ಮ್ಯಾನುಯೆಲ್‌ ಬ್ಯಾರೊಸೊ ಹೇಳಿದರು. ಅವರು EU ಜೈವಿಕ ಇಂಧನಗಳ ಸಮ್ಮೇಳನದಲ್ಲಿ ಹೀಗೆ ಹೇಳಿದರು.[೬೫]


ಪರಿಸರದ ಮೇಲಿನ ಪರಿಣಾಮ

[ಬದಲಾಯಿಸಿ]

ಜೈವಿಕ ಇಂಧನಗಳಲ್ಲಿ ಹೆಚ್ಚಿದ ಆಸಕ್ತಿಯು, ಅದರ ಬಳಕೆಯಿಂದಾಗುವ ಪರಿಸರೀಯ ಪ್ರಭಾವಗಳನ್ನು ಎತ್ತಿ ತೋರಿಸಿದೆ. ಇವುಗಳಲ್ಲಿ ಹಸಿರುಮನೆ ಅನಿಲ ಸೂಸುವಿಕೆಗಳು,[೬೬] ಅರಣ್ಯನಾಶ, ಮಾಲಿನ್ಯ ಹಾಗೂ ಜೈವಿಕ ವಿಘಟನೆ ಸೇರಿವೆ.


ಆಹಾರ, ಭೂಮಿ ಹಾಗೂ ನೀರು, ಅದಕ್ಕೆ ತದ್ವಿರುದ್ಧ ಇಂಧನ

[ಬದಲಾಯಿಸಿ]

ಕೆಲವು ಬಡ ದೇಶಗಳಲ್ಲಿ ತರಕಾರಿ ತೈಲಗಳ ಬೆಲೆ ಹೆಚ್ಚಾಗುತ್ತಿರುವುದರಿಂದ ಸಮಸ್ಯೆಗಳುಂಟಾಗುತ್ತಿವೆ.[೬೭][೬೮] ಕ್ಯಾಮೆಲಿನಾ, ಜಟ್ರೊಫಾ ಅಥವಾ ಸೀಷೋರ್‌ ಮ್ಯಾಲೊನಂತಹ [೬೯] ಖಾದ್ಯವಲ್ಲದ ತರಕಾರಿ ತೈಲಗಳಿಂದ ಮಾತ್ರ ಇಂಧನವನ್ನು ತಯಾರಿಸಿರೆಂದು ಕೆಲವರು ಪ್ರಸ್ತಾಪಿಸಿದ್ದಾರೆ. ಮರ-ಗಿಡಗಳು ಹೆಚ್ಚಾಗಿ ಬೆಳೆಯದ, ಅಥವಾ ಕಡಿಮೆ ಉತ್ಪನ್ನಗಳು ಲಭಿಸುವ ಈ ಅಲ್ಪಮಟ್ಟಗಿನ ಕೃಷಿ ಜಮೀನುಗಳಲ್ಲಿ ಇವುಗಳನ್ನು ಬೆಳೆಸಬಹುದಾಗಿದೆ.

ಸಮಸ್ಯೆಯು ಬಹಳ ಮೂಲಭೂತವಾಗಿದೆ ಎಂದು ಇತರೆ ಕೆಲವರು ವಾದಿಸುತ್ತಾರೆ. ರೈತರು ಹೆಚ್ಚು ಹಣ ಗಳಿಸಲು ಖಾದ್ಯ ಫಸಲುಗಳನ್ನು ಬೆಳೆಯುವದರ ಬದಲಾಗಿ ಜೈವಿಕ ಇಂಧನ ಫಸಲುಗಳನ್ನು ಬೆಳೆಯುವರು. ಈ ಹೊಸ ಫಸಲುಗಳು ಖಾದ್ಯಯೋಗ್ಯವಲ್ಲ.[೭೦][೭೧] 'ಖಾದ್ಯ ಬೆಳೆಗಳನ್ನು ಬೆಳೆಯುವ ರೈತರ ಸಂಖ್ಯೆ ಕಡಿಮೆಯಾದಲ್ಲಿ ಖಾದ್ಯಪದಾರ್ಥಗಳ ಬೆಲೆಯೂ ಹೆಚ್ಚುತ್ತದೆ' ಎಂದು ಪೂರೈಕೆ ಮತ್ತು ಬೇಡಿಕೆಯ ನಿಯಮವು ಹೇಳುತ್ತದೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಏಕೆಂದರೆ, ರೈತರು ತಾವು ಬೆಳೆಸುತ್ತಿರುವುದನ್ನು ಬದಲಿಸಲು ಸಮಯದ ಅಗತ್ಯವಿರುತ್ತದೆ. ಆದರೆ, ಮೊದಲ-ಪೀಳಿಗೆಯ ಜೈವಿಕ ಇಂಧನಗಳಿಗಾಗಿ ಬೇಡಿಕೆ ಹೆಚ್ಚುತ್ತಿದೆ. ಇದರಿಂದಾಗಿ ವಿವಿಧ ರೀತಿಯ ಖಾದ್ಯಗಳ ಬೆಲೆಯು ಹೆಚ್ಚಾಗುವ ಸಂಭವವಿದೆ. ಬಡರೈತರಿದ್ದರೂ, ಹೆಚ್ಚಿರುವ ತರಕಾರಿ ತೈಲ ಬೆಲೆ ಹೆಚ್ಚಳದ ಕಾರಣ ಬಡ ದೇಶಗಳ ಸರ್ಕಾರಗಳು ಹೆಚ್ಚು ದುಡ್ಡು ಗಳಿಕೆ ಮಾಡುತ್ತಿವೆ.[೭೨] ಸಮುದ್ರ ಪಾಚಿಗಳಿಂದ ಜೈವಿಕ ಡೀಸೆಲ್‌ ಉತ್ಪಾದನೆಯು, ಆಹಾರ ಉತ್ಪಾದನೆಗಾಗಿ ಬಳಸುವ ಜಮೀನನ್ನು ಬಳಸಲಾರದು. ಹೊಸ ಆಲ್ಗಾಕಲ್ಚರ್‌ ಮೂಲಕ ಉದ್ಯೋಗ ಸೃಷ್ಟಿ ಮಾಡಬಹುದಾಗಿದೆ.


ಪ್ರಸಕ್ತ ಸಂಶೋಧನೆಗಳು

[ಬದಲಾಯಿಸಿ]

ಇನ್ನಷ್ಟು ಸೂಕ್ತ ಫಸಲುಗಳನ್ನು ಕಂಡು ಹಿಡಿದು ತೈಲ ಉತ್ಪನ್ನಗಳ ಇಳುವರಿ ಉತ್ತಮಗೊಳಿಸುವ ಸಂಶೋಧನೆಯು ಪ್ರಗತಿಯಲ್ಲಿದೆ. ಪಳೆಯುಳಿಕೆ ಇಂಧನ ಬಳಕೆ ನಿಲ್ಲಿಸಿ, ಸಾಕಷ್ಟು ಸದ್ಯದ ಉತ್ಪನ್ನಗಳನ್ನು ಬಳಸಿ,ಜೈವಿಕ ತೈಲ ಉತ್ಪಾದನೆಗೆ ಜಮೀನಿನ ವಿಶಾಲ ಭೂಪ್ರದೇಶದ ಮತ್ತು ಶುದ್ಧ ನೀರಿನ ಅಗತ್ಯವಿದೆ. ಸೋಯ್‌ಬೀನ್‌ ಉತ್ಪಾದಿಸಲು USನ ಕ್ವಿಸ್ತೀರ್ಣದ ಎರಡರಷ್ಟು ಭೂಪ್ರದೇಶದ ಅಗತ್ಯವಿರುವುದು, ಅಥವಾ, US ಶಾಖ ಮತ್ತು ಸಾರಿಗೆ ಅಗತ್ಯಗಳಿಗೆ ರೇಪ್ಸೀಡ್‌ ನಿರ್ಮಾಣಕ್ಕಾಗಿ 2/3ರಷ್ಟು ಭೂಪ್ರದೇಶದ ಅಗತ್ಯವಿದೆ. [ಸೂಕ್ತ ಉಲ್ಲೇಖನ ಬೇಕು]

ವಿಶೇಷವಾಗಿ ಕೃಷಿ ಮಾಡಲಾದ ಸಾಸಿವೆಯ ವೈವಿಧ್ಯಗಳು ಹೆಚ್ಚು ತೈಲ ಉತ್ಪನ್ನಗಳನ್ನು ಉತ್ಪಾದಿಸಬಲ್ಲವು. ಇವು ದವಸಗಳೊಂದಿಗೆ ಸರದಿ ಕೃಷಿಯಲ್ಲೂ ಬಹಳ ಉಪಯುಕ್ತವಾಗಿವೆ. ಜೊತೆಗೆ, ತೈಲವನ್ನು ತೆಗೆದ ನಂತರ ಉಳಿದುಕೊಂಡ ಅವಶೇಷಗಳನ್ನು ಜೈವಿಕ ವಿಘಟನೀಯ ಕೀಟನಾಶಕಗಳನ್ನಾಗಿ ಬಳಸಬಹುದು.[೭೩]

ಸ್ಯಾಂಟಾ ಬಾರ್ಬರಾದಲ್ಲಿರುವ ಬಯೊಡೀಸೆಲ್‌ ಇಂಡಸ್ಟ್ರೀಸ್‌ ಇಂಕ್‌ನೊಂದಿಗೆ NFESC ಸಹಯೋಗಿತ್ವ ಬೆಳೆಸಿಕೊಂಡಿದೆ. ಇದರಡಿ, ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್‌ ಇಂಧನ ಬಳಕೆದಾರರಾದ US ನೌಕಾಸೇನೆ ಮತ್ತು ಭೂಸೇನೆಗಾಗಿ ಜೈವಿಕ ಡೀಸೆಲ್‌ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸುತ್ತಿದೆ.[೭೪]

ಇಕೊಫಾಸಾ ಎಂಬ ಸಂಸ್ಥೆಯ ಉದ್ಯೋಗಿಗಳ ಸ್ಪ್ಯಾನಿಷ್‌ ತಂಡ ಕಸದಿಂದ ತಯಾರಾದ ಹೊಸ ಜೈವಿಕ ಇಂಧನ ಪ್ರಕಟಿಸಿತು. ಸಾಮಾನ್ಯ ನಗರವಲಯದ ತ್ಯಾಜ್ಯದಿಂದ ಈ ಇಂಧನ ತಯಾರಿಸಲಾಗಿದೆ. ಬ್ಯಾಕ್ಟೀರಿಯಾವು ಈ ತ್ಯಾಜ್ಯದ ಮೇಲೆ ಕ್ರಿಯೆ ನಡೆಸಿ ಕೊಬ್ಬಿನ ಆಮ್ಲಗಳನ್ನು ಉತ್ಪಾದಿಸುತ್ತದೆ. ಜೈವಿಕ ಡೀಸೆಲ್‌ ತಯಾರಿಕೆಗೆ ಇವುಗಳನ್ನು ಬಳಸಲಾಗುತ್ತದೆ.[೭೫]


ಪಾಚಿಗಳ ಜೈವಿಕ ಡೀಸೆಲ್‌

[ಬದಲಾಯಿಸಿ]

1978ರಿಂದ 1996ರ ತನಕ, U.S. NREL ಪಾಚಿಗಳನ್ನು ಜೈವಿಕ ಡೀಸೆಲ್‌ ಮೂಲಗಳಾಗಿ ಪ್ರಯೋಗಿಸಿತು. 'ಜಲ ಸಸ್ಯ- ಜಾತಿಗಳ ಯೋಜನೆ'ಯಡಿ ಈ ಪ್ರಯೋಗ ಮಾಡಿತು.[೬೩] UNH ಜೈವಿಕ ಡೀಸೆಲ್‌ ಒಕ್ಕೂಟದಲ್ಲಿ ಮೈಕಲ್‌ ಬ್ರಿಗ್ಸ್‌ ತಾವು ಬರೆದ ಲೇಖನವೊಂದನ್ನು ಪ್ರಕಟಿಸಿದರು. ಇದರಂತೆ, ಎಲ್ಲಾ ವಾಹನದ ಇಂಧನದಲ್ಲಿ ಜೈವಿಕ ಡೀಸೆಲ್‌ ಕಾರ್ಯಸಾಧ್ಯ ಬದಲಾವಣೆಯ ಅಂದಾಜುಗಳನ್ನು ಪ್ರಸ್ತಾಪಿಸಿದೆ. 50%ಕ್ಕಿಂತಲೂ ಹೆಚ್ಚು ಸ್ವಾಭಾವಿಕ ತೈಲದ ಅಂಶ ಹೊಂದಿದ ಪಾಚಿಗಳನ್ನು ಬಳಸಬಹುದಾಗಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿರುವ ಪಾಚಿ ಕೆರೆ (ಆಲ್ಗೇ ಪಾಂಡ್‌)ಗಳಲ್ಲಿ ಇಂತಹ ಪಾಚಿಗಳನ್ನು ಬೆಳೆಸಬಹುದಾಗಿದೆ ಎಂದು ಬ್ರಿಗ್ಸ್‌ ಸಲಹೆ ನೀಡಿದ್ದಾರೆ.[೫೧] ತೈಲ ಸಮೃದ್ಧ ಪಾಚಿಗಳನ್ನು ಆನಂತರ ವ್ಯವಸ್ಥೆಯಿಂದ ಹೊರತೆಗೆದು ಜೈವಿಕ ಡೀಸೆಲ್ ಗಾಗಿ ಸಂಸ್ಕರಿಸಲಾಗುತ್ತದೆ. ಅವಶೇಷಗಳನ್ನು ಒಣಗಿಸಿ ಪುನಃ ಸಂಸ್ಕರಿಸಿ ಈಥನೊಲ್‌ನ್ನೂ ಉತ್ಪಾದಿಸಬಹುದು.

ಜೈವಿಕ ಡೀಸೆಲ್‌ಗಾಗಿ ಪಾಚಿಗಳ ಕೃಷಿಯು ಇನ್ನೂ ವಾಣಿಜ್ಯವಾಗಿ ಆರಂಭಗೊಂಡಿಲ್ಲ. ಆದರೆ, ಮೇಲಿನಂತೆ ಉತ್ಪನ್ನ ಅಂದಾಜು ಮಾಡಲು ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲಾಗಿದೆ. ಮುಂಬರುವ ಉತ್ತಮ ಇಳುವರಿ ಜೊತೆಗೆ, ಫಸಲು-ಆಧಾರಿತ ಜೈವಿಕ ಇಂಧನಗಳಿಗಿಂತಲೂ ಭಿನ್ನವಾಗಿರುತ್ತದೆ. ಹೀಗಾಗಿ ಆಲ್ಗಾಕಲ್ಚರ್‌ ಆಹಾರ ಉತ್ಪಾದನೆಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಅದಕ್ಕೆ ಹೊಲಗದ್ದೆಯಾಗಲೀ ಶುದ್ಧಜಲದ ಅಗತ್ಯವಾಗಲೀ ಇರುವುದಿಲ್ಲ. ಹಲವು ಕಂಪೆನಿಗಳು ಪಾಚಿಗಳ ಬಯೊರಿಯಾಕ್ಟರ್‌ಗಳನ್ನು ವಿವಿಧ ಉದ್ದೇಶಗಳಿಗಾಗಿ ಕೊಂಡುಕೊಳ್ಳುತ್ತಿವೆ. ಜೈವಿಕ ಡೀಸೆಲ್‌ ಉತ್ಪಾದನೆಯನ್ನು ವಾಣಿಜ್ಯ ಮಟ್ಟಕ್ಕೆ ತರುವುದು ಇದರ ಉದ್ದೇಶಗಳಲ್ಲೊಂದು.[೭೬][೭೭]

ಶಿಲೀಂಧ್ರ

[ಬದಲಾಯಿಸಿ]

ಮಾಸ್ಕೊದಲ್ಲಿರುವ ರಷ್ಯನ್‌ ಅಕಾಡೆಮಿ ಆಫ್‌ ಸಯನ್ಸ್‌ನ ತಂಡ ಸೆಪ್ಟೆಂಬರ್‌ 2008ರಲ್ಲಿ ಪತ್ರಿಕೆಯೊಂದನ್ನು ಪ್ರಕಟಿಸಿತು. ಏಕಕೋಶೀಯ ಶಿಲೀಂಧ್ರಗಳಿಂದ ಹೆಚ್ಚಿನ ಪ್ರಮಾಣದ ಲಿಪಿಡ್‌ಗಳನ್ನು ಬೇರ್ಪಡಸಿ, ಆರ್ಥಿಕ ಸಮರ್ಥ ರೀತಿಯಲ್ಲಿ ಅದನ್ನು ಜೈವಿಕ ಡೀಸೆಲ್‌ ಆಗಿ ಪರಿವರ್ತಿಸಬಹುದೆಂದು ತಂಡದ ಸದಸ್ಯರು ಹೇಳಿಕೊಂಡರು. ಸಿ. ಜಪೊನಿಕಾ ಹಾಗೂ ಇತರೆ ಶೀಲೀಂಧ್ರ ಜಾತಿಗಳ ಬಗ್ಗೆ ಸಂಶೋಧನೆಯು ಇನ್ನೂ ಮುಂದೆ ನಡೆಯಬಹುದು.[೭೮]


ಇತ್ತೀಚೆಗೆ ಗ್ಲಿಯೊಕ್ಲಾಡಿಯಂ ರೊಸಿಯಂ ಶಿಲೀಂಧ್ರ ರೂಪಾಂತರದ ಸಂಶೋಧನೆಯು, ಸೆಲ್ಯುಲೊಸ್‌ನಿಂದ ಮೈಕೊ-ಡೀಸೆಲ್‌ ಉತ್ಪಾದನೆಗೆ ಸಾಕ್ಷಿಯಾಗಿದೆ. ಉತ್ತರ ಪಟೆಗೊನಿಯಾದ ಮಳೆಕಾಡುಗಳಲ್ಲಿ ಈ ಜೀವಿಯನ್ನು ಇತ್ತೀಚೆಗೆ ಪತ್ತೆಹಚ್ಚಲಾಯಿತು. ಸೆಲುಲೊಸ್‌ನ್ನು ಮಧ್ಯಮ-ಉದ್ದನೆಯ ಹೈಡ್ರೊಕಾರ್ಬನ್‌ಗಳಾಗಿ ಪರಿವರ್ತಿಸುವ ಅನನ್ಯ ಲಕ್ಷಣ ಹೊಂದಿದೆ. ಇಂತಹ ಹೈಡ್ರೊಕಾರ್ಬನ್‌ಗಳು ಸಾಮಾನ್ಯವಾಗಿ ಡೀಸೆಲ್‌ ಇಂಧನದಲ್ಲಿ ಲಭ್ಯ.[೭೯]


ಉಪಯೋಗಿಸಲಾದ ಕಾಫಿ ಹೊಲಗಳಿಂದ ಜೈವಿಕ ಡೀಸೆಲ್‌

[ಬದಲಾಯಿಸಿ]

ಉಪಯೋಗಿಸಲಾದ ಕಾಫಿ ಹೊಲಗಳಲ್ಲಿ ಪಡೆದ ತೈಲಾಂಶದಿಂದ ಜೈವಿಕ ಡೀಸೆಲ್‌ ಉತ್ಪಾದಿಸುವಲ್ಲಿ ರೆನೊದ ನೆವಡಾ ವಿಶ್ವವಿದ್ಯಾನಿಲಯದ ಸಂಶೋಧಕರು ಸಫಲರಾದರು. ಉಪಯೋಗಿಸಲಾದ ಕಾಫಿ ಪ್ರದೇಶದ ವಿಶ್ಲೇಷಣೆ ಪ್ರಕಾರ ತೂಕದಂತೆ 10%ರಿಂದ 15% ತೈಲಾಂಶವಿತ್ತು. ತೈಲವನ್ನು ಹೊರತೆಗೆದ ಬಳಿಕ, ಸಾಂಪ್ರದಾಯಿಕ ಪ್ರಕ್ರಿಯೆ ನಂತರ ಜೈವಿಕ ಡೀಸೆಲ್‌ ಆಯಿತು. ಪೂರ್ಣಗೊಂಡ ಜೈವಿಕ ಡೀಸೆಲ್‌ ಪ್ರತಿ ಗ್ಯಾಲನ್‌ಗೆ ಸುಮಾರು ಒಂದು US ಡಾಲರ್‌ ಮೌಲ್ಯ ಎಂದು ಅಂದಾಜು ಮಾಡಲಾಗಿದೆ. ಇನ್ನೂ ಹೆಚ್ಚಿಗೆ, 'ತಂತ್ರವು ಜಟಿಲವಾಗಿಲ್ಲ' ಮತ್ತು 'ಬಹಳಷ್ಟು ಕಾಫಿಯಿದ್ದು, ಇದರಿಂದ ವಾರ್ಷಿಕ ಹಲವು ನೂರು ದಶಲಕ್ಷ ಗ್ಯಾಲನ್‌ ಜೈವಿಕ ಡೀಸೆಲ್‌ ಉತ್ಪಾದಿಸಬಹುದು.' ಆದರೆ, ವಿಶ್ವದೆಲ್ಲೆಡೆ ಇರುವ ಕಾಫಿ ಹೊಲಗಳನ್ನು ಇಂಧನ ಉತ್ಪಾದನೆಗೆ ಬಳಸಿದಲ್ಲಿ, ವಾರ್ಷಿಕ ತಯಾರಾಗುವ ಡೀಸೆಲ್‌, ಅಮೆರಿಕಾ ಸಂಯುಕ್ತ ಸಂಸ್ಥಾನ ಬಳಸುವ ಡೀಸೆಲ್‌ನ 1%ರಷ್ಟಕ್ಕಿಂತಲೂ ಕಡಿಮೆ. 'ಇದು ವಿಶ್ವದ ಇಂಧನ ಸಮಸ್ಯೆಯನ್ನು ಪರಿಹರಿಸುವುದಿಲ್ಲ' ಎಂದು ತಮ್ಮ ಸಂಶೋಧನೆಯ ಬಗ್ಗೆ ಡಾ. ಮಿಶ್ರಾ ತಿಳಿಸಿದರು.[೮೦]


ಇದನ್ನೂ ನೋಡಿರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Biodiesel 101 - Biodiesel Definitions". National Biodiesel Board. Archived from the original (?) on 2008-02-13. Retrieved 2008-02-16.
  2. "Biodiesel Basics". National Biodiesel Board. Archived from the original on 2010-04-24. Retrieved 2009-01-30.
  3. McCormick, R.L. "2006 Biodiesel Handling and Use Guide Third Edition" (PDF). Retrieved 2006-12-18.
  4. "US EPA Biodiesel Factsheet".
  5. "Twenty In Ten: Strengthening America's Energy Security". Whitehouse.gov. Retrieved 2008-09-10.
  6. ಕೆಂಪ್‌, ವಿಲಿಯಮ್‌. ಬಯೊಡೀಸೆಲ್‌: ಬೇಸಿಕ್ಸ್‌ ಅಂಡ್‌ ಬೆಯಾಂಡ್‌. ಕೆನಡಾ: ಅಜ್ಡೆಕ್ಸ್ಟ್‌ ಪ್ರೆಸ್‌, 2006.
  7. ನ್ಯಾಷನಲ್‌ ಬಯೊಡೀಸೆಲ್‌ ಬೋರ್ಡ್‌, 2007. Archived 2010-03-06 ವೇಬ್ಯಾಕ್ ಮೆಷಿನ್ ನಲ್ಲಿ.ಜೈವಿಕ ಡೀಸೆಲ್‌ ಉದ್ದಿಮೆಗೆ ಬೆಂಬಲ ನೀಡಿದ ಕ್ರಿಸ್ಲರ್‌; ನವೀಕರಿಸಬಲ್ಲ ಇಂಧನ ಚಾಲಿತ ಹೊಸ ಡೀಸೆಲ್‌ಗಳನ್ನು ಬಳಸಲು ರೈತರು, ಸಂಸ್ಕಾರಕರು, ಚಿಲ್ಲರೆ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಪ್ರೋತ್ಸಾಹ. Archived 2010-03-06 ವೇಬ್ಯಾಕ್ ಮೆಷಿನ್ ನಲ್ಲಿ.
  8. "Halifax City Buses to Run on Biodiesel Again | Biodiesel and Ethanol Investing". Biodieselinvesting.com. 2006-08-31. Archived from the original on 2006-10-18. Retrieved 2009-10-17.
  9. "Biodiesel". Halifax.ca. Archived from the original on 2010-12-24. Retrieved 2009-10-17.
  10. "McDonald's bolsters "green" credentials with recycled biodiesel oil". News.mongabay.com. 2007-07-09. Retrieved 2009-10-17.
  11. "EWS Railway - News Room". www.ews-railway.co.uk. Retrieved 2009-06-12.
  12. "Disneyland trains running on biodiesel - UPI.com". www.upi.com. Retrieved 2009-03-16.
  13. "ಜೈವಿಕ ಡೀಸೆಲ್‌ ಬಳಸಿ ಹಾರಿದ ಸೋವಿಯತ್‌ ಕಾಲದ ತರಬೇತಿ ಜೆಟ್‌" (PDF). Archived from the original (PDF) on 2008-04-10. Retrieved 2010-01-04.
  14. Robertson, Andrew. "Biodiesel Heating Oil: Sustainable Heating for the future". Institute of Plumbing and Heating Engineering. Archived from the original on 2007-12-08. Retrieved 2008-01-07.
  15. ಮ್ಯಾಸಚ್ಯುಸೆಟ್ಸ್‌ ಆಯಿಲ್‌ ಹೀಟ್‌ ಕೌಂಸಿಲ್‌ (2/27/2008). MA ಆಯಿಲ್‌ಹೀಟ್‌ ಕೌಂಸಿಲ್‌ ಬಯೊಹೀಟ್‌ ಆದೇಶದ ಅನುಮೋದನೆ Archived 2008-05-11 ವೇಬ್ಯಾಕ್ ಮೆಷಿನ್ ನಲ್ಲಿ.
  16. ದಿ ಬಯೊಡೀಸೆಲ್‌ ಹ್ಯಾಂಡ್‌ಬುಕ್‌, ಚ್ಯಾಪ್ಟರ್‌ 2 - ದಿ ಹಿಸ್ಟರಿ ಆಫ್‌ ವೆಜಿಟೆಬಲ್‌ ಆಯಿಲ್‌ ಬೇಸ್ಡ್‌ ಡೀಸೆಲ್‌ ಫ್ಯುಯೆಲ್ಸ್‌, ಲೇಖಕರು: ಗೆರ್ಹಾರ್ಡ್‌ ನೋತ್‌, ISBN 1-893997-79-0
  17. Knothe, G. "Historical Perspectives on Vegetable Oil-Based Diesel Fuels" (PDF). INFORM, Vol. 12(11), p. 1103-1107 (2001). Archived from the original (PDF) on 2018-10-04. Retrieved 2007-07-11.
  18. "Lipofuels: Biodiesel and Biokerosene" (PDF). www.nist.gov. Retrieved 2009-03-09.
  19. [೧] Archived 2007-10-20 ವೇಬ್ಯಾಕ್ ಮೆಷಿನ್ ನಲ್ಲಿ. ಟೆಕ್ಬಯೊ ಅಂತರಜಾಲತಾಣದಿಂದ ಉಲ್ಲೇಖ
  20. "ಒ ಗ್ಲೊಬೊ ಪತ್ರಿಕೆಯಲ್ಲಿ ಪೋರ್ಚುಗೀಸ್‌ ಭಾಷೆಯಲ್ಲಿ ಸಂದರ್ಶನ". Archived from the original on 2010-10-29. Retrieved 2010-01-04.
  21. SAE ಟೆಕ್ನಿಕಲ್‌ ಪೇಪರ್‌ ಸೀರಿಸ್‌ ನಂ. 831356. SAE ಇಂಟರ್ನ್ಯಾಷನಲ್‌ ಆಫ್‌ ಹೈವೇ ಮೀಟಿಂಗ್‌, ಮಿಲ್ವಾಕೀ, ವಿಸ್ಕಾನ್ಸಿನ್‌, USA, 1983
  22. [೨] Archived 2007-11-28 ವೇಬ್ಯಾಕ್ ಮೆಷಿನ್ ನಲ್ಲಿ. ಜೈವಿಕ ಡೀಸೆಲ್‌ ಅಂಶಗಳ ಕುರಿತು ಮಿನೆಸೊಟಾ ನಿಬಂಧನೆಗಳು
  23. "New Biodiesel Blend Specifications Published by ASTM International". nbb.grassroots.com. Archived from the original on 2008-12-16. Retrieved 2009-04-28.
  24. "ಲ್ಯೂಬ್ರಿಸಿಟಿ ಬೆನಿಫಿಟ್ಸ್‌" (PDF). Archived from the original (PDF) on 2009-12-11. Retrieved 2010-01-04.
  25. "ಜೈವಿಕ ಇಂಧನಗಳ ಅಯ್ಕೆಗಳ ಶ್ರೇಣಿಗಾಗಿ ಇಂಗಾಲ ಮತ್ತು ಶಕ್ತಿ ತೋಲನಗಳು" (PDF). Archived from the original (PDF) on 2009-03-25. Retrieved 2010-01-04.
  26. National Biodiesel Board (2005-10). Energy Content (PDF). Jefferson City, USA. p. 1. Archived from the original (PDF) on 2007-11-28. Retrieved 2007-11-20. {{cite conference}}: Check date values in: |date= (help); Cite has empty unknown parameters: |coauthors= and |booktitle= (help)
  27. "UNH ಜೈವಿಕ ಡೀಸೆಲ್‌ ಗ್ರೂಪ್‌". Archived from the original on 2004-09-06. Retrieved 2010-01-04.
  28. "ಸಾರ್ವತ್ರಿಕ ಜೈವಿಕ ಡೀಸೆಲ್‌ ದ್ರವ್ಯ ಸುರಕ್ಷತೆಯ ದತ್ತಾಂಶ ಪುಟ (MSDS)" (PDF). Archived from the original (PDF) on 2009-12-22. Retrieved 2010-01-04.
  29. UFOP - Union zur Förderung von Oel. "Biodiesel FlowerPower: Facts * Arguments * Tips" (PDF). Archived from the original on 2007-07-14. Retrieved 2007-06-13.{{cite web}}: CS1 maint: bot: original URL status unknown (link)
  30. ಕ್ಲೀನ್‌ ಸಿಟೀಸ್‌ ಆಲ್ಟರ್ನೇಟಿವ್‌ ಫ್ಯುಯೆಲ್‌ ಪ್ರೈಸ್‌ ರಿಪೊರ್ಟ್‌ ಜುಲೈ 2007
  31. U.S. ಡಿಪಾರ್ಟ್‌ಮೆಂಟ್‌ ಆಫ್‌ ಇನರ್ಜಿ ಕ್ಲೀನ್‌ ಸಿಟೀಸ್‌ ಆಲ್ಟರ್ನೇಟಿವ್‌ ಫ್ಯುಯೆಲ್‌ ಪ್ರೈಸ್‌ ರಿಪೊರ್ಟ್‌ ಜುಲೈ 2009. ಪುನರ್ಪಡೆದದ್ದು 9-05-2009.
  32. "Biofuels and Glycerol". theglycerolchallenge.org. Archived from the original on 2008-05-23. Retrieved 2008-07-09.
  33. ಪುನರ್ಪಡೆದದ್ದು ಜೂನ್‌ 25, 2007.
  34. ಪುನರ್ಪಡೆದದ್ದು ಜೂನ್‌ 25, 2007.
  35. Martinot (Lead Author), Eric (2008). "Renewables 2007. Global Status Report" (PDF). REN21 (Renewable Energy Policy Network for the 21stCentury. Retrieved 2008-04-03. {{cite web}}: |last= has generic name (help)
  36. "US Biodiesel Taxed in EU". US Biodiesel Taxed in EU. Hadden Industries. Archived from the original on 2009-10-11. Retrieved 2009-08-28.
  37. "US Biodiesel Demand" (PDF). Biodiesel: The official site of the National Biodiesel Board. NBB. Archived from the original (PDF) on 2008-04-10. Retrieved 2008-04-03.
  38. "Statistics. the EU biodiesel industry". European Biodiesel Board. 2008-03-28. Archived from the original on 2006-11-14. Retrieved 2008-04-03.
  39. "Biodiesel to drive up the price of cooking oil". Biopower London. 2006. Archived from the original on 2008-06-07. Retrieved 2008-04-03.
  40. "Major Commodities". FEDIOL (EU Oil and Proteinmeal Industry). Archived from the original on 2008-04-21. Retrieved 2008-04-08.
  41. ೪೧.೦ ೪೧.೧ Leonard, Christopher (2007-01-03). "Not a Tiger, but Maybe a Chicken in Your Tank". Washington Post. Associated Press. p. D03. Retrieved 2007-12-04.
  42. Errol Kiong (May 12, 2006). "NZ firm makes bio-diesel from sewage in world first". The New Zealand Herald. Retrieved 2007-01-10.
  43. Glenn, Edward P. (1998). "Irrigating Crops with Seawater" (PDF). Scientific American (August 1998). USA: Scientific American, Inc.: 79. Retrieved 2008-11-17. {{cite journal}}: More than one of |pages= and |page= specified (help); Unknown parameter |coauthors= ignored (|author= suggested) (help); Unknown parameter |month= ignored (help)
  44. "Biodiesel from Animal Fat". E85.whipnet.net. Retrieved 2008-01-07.
  45. "Biodiesel produced from "tra", "basa" catfish oil". governemental site. Archived from the original on 2006-10-04. Retrieved 2008-05-25.
  46. "Demonstrating the value of a fishy biodiesel blend in Alaska's Aleutian Islands" (PDF). Biodiesel america. Archived from the original (PDF) on 2007-02-02. Retrieved 2008-05-25.
  47. "Enerfish integrated energy solutions for seafood processing stations". VTT, Finland/Enerfish Consortium. Archived from the original on 2009-10-22. Retrieved 2009-10-20.
  48. http://tonto.eia.doe.gov/dnav/pet/pet_cons_821dst_dcu_nus_a.htm Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ.)
  49. Van Gerpen, John (2004 - 07). "Business Management for Biodiesel Producers, August 2002 - January 2004" (PDF). National Renewable Energy Laboratory. Retrieved 2008-01-07. {{cite web}}: Check date values in: |date= (help)
  50. ಎ ಪ್ರಾಮಿಸಿಂಗ್‌ ಆಯಿಲ್‌ ಆಲ್ಟರ್ನೇಟಿವ್‌: ಪಾಚಿಗಳು ಇನರ್ಜಿ - washingtonpost.com
  51. ೫೧.೦ ೫೧.೧ Michael Briggs (2004). "Widescale Biodiesel Production from Algae". UNH Biodiesel Group (University of New Hampshire). Archived from the original on 2004-09-06. Retrieved 2007-01-02. {{cite web}}: Unknown parameter |month= ignored (help)
  52. "Purdue report ID-337" (PDF). Archived from the original (PDF) on 2012-03-01. Retrieved 2021-07-14.
  53. 'ಭರವಸೆ ಮೂಡಿಸುವ ತೈಲ ಪರ್ಯಾಯವಾಗಿ ಪಾಚಿಗಳು ಇನರ್ಜಿ' ಎಂಬ ವಾಷಿಂಗ್ಟನ್‌ ಪೋಸ್ಟ್‌ ವರದಿಯಲ್ಲಿ DOE ಉಲ್ಲೇಖನ
  54. Strahan, David (13 August 2008). "Green Fuel for the Airline Industry". New Scientist (2669): 34–37. Retrieved 2008-09-23.
  55. ಭಾರತದ ಜಟ್ರೊಫಾ ಗಿಡದಿಂದ ಜೈವಿಕ ಡೀಸೆಲ್‌ ಉತ್ಪನ್ನದ ಪ್ರಮಾಣ ಬಗೆಗಿನ ಹೇಳಿಕೆ ಉತ್ಪ್ರೇಕ್ಷೆಯಿಂದ ಕೂಡಿದೆ
  56. "ಜೈವಿಕ ಡೀಸೆಲ್‌ಗಾಗಿ ಜಟ್ರೊಫಾ‌". Archived from the original on 2009-09-04. Retrieved 2010-01-04.
  57. ಕಳೆಗಳ (ವೀಡ್‌ಗಳ) ಜೈವಿಕ ಇಂಧನ ಸಾಮರ್ಥ್ಯವು ಆಫ್ರಿಕಾ ಖಂಡದಲ್ಲಿ ಭೂಕಬಳಿಕೆಗೆ ಎಡೆಮಾಡಿದೆ, ವಾಷಿಂಗ್ಟನ್‌ ಟೈಮ್ಸ್‌, 21 ಫೆಬ್ರುವರಿ 2007, ಕರೆನ್‌ ಪಾಮರ್‌
  58. Kazuhisa Miyamoto (1997). "Renewable biological systems for alternative sustainable energy production (FAO Agricultural Services Bulletin - 128)". Final. FAO - Food and Agriculture Organization of the United Nations. Retrieved 2007-03-18. {{cite journal}}: Cite journal requires |journal= (help)
  59. Tad Patzek (2006-07-22). "Thermodynamics of the Corn-Ethanol Biofuel Cycle (section 3.11 Solar Energy Input into Corn Production)" (PDF). Berkeley; Critical Reviews in Plant Sciences, 23(6):519-567 (2004). Archived from the original (PDF) on 2005-05-19. Retrieved 2008-03-03.
  60. "Looking Forward: Energy and the Economy" (PDF). Archived from the original (PDF) on 2006-09-23. Retrieved 2006-08-29.
  61. "Hands On: Power Pods - India". Archived from the original on 2012-04-26. Retrieved 2005-10-24.
  62. "Palm Oil Based Biodiesel Has Higher Chances Of Survival". Retrieved 2006-12-20.
  63. ೬೩.೦ ೬೩.೧ John Sheehan, Terri Dunahay, John Benemann, Paul Roessler (July 1998). "A look back at the U.S. Department of Energy's Aquatic Species Program: Biodiesel from Algae" (PDF (3.7 Mb)). Close-out Report. United States Department of Energy. Retrieved 2007-01-02. {{cite journal}}: Cite journal requires |journal= (help)CS1 maint: multiple names: authors list (link)
  64. "Energy Security for the 21st Century". The White House. 2008-03-05. Retrieved 2008-04-15.
  65. "International Biofuels Conference". HGCA. Archived from the original on 2008-12-11. Retrieved 2008-04-15.
  66. "Biodiesel - Just the Basics" (PDF). Final. United States Department of Energy. 2003. Retrieved 2007-08-24. {{cite journal}}: Cite journal requires |journal= (help)
  67. ಜೈವಿಕ ಇಂಧನದ ಬೇಡಿಕೆಯ ಕಾರಣ, ಇಂಡೊನೇಷ್ಯಾದಲ್ಲಿ ದುಬಾರಿಯಾದ ಕರಿದಿರುವ ಆಹಾರ - ABC ವಾರ್ತೆಗಳು (ಆಸ್ಟ್ರೇಲಿಯನ್‌ ಬ್ರಾಡ್ಕ್ಯಾಸ್ಟಿಂಗ್‌ ಕಾರ್ಪೊರೆಷನ್‌)
  68. ತೈಲಾಘಾತ: ಗಗನಕ್ಕೇರಿದ ತರಕಾರಿ ತೈಲಗಳ ಬೆಲೆ - ಇಂಟರ್ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌
  69. "ಆರ್ಕೈವ್ ನಕಲು" (PDF). Archived from the original (PDF) on 2022-10-06. Retrieved 2010-01-04.
  70. ತೀವ್ರಗೊಂಡ 'ಆಹಾರ ವಿರುದ್ಧ ಇಂಧನ' ಚರ್ಚೆ
  71. "'ಹೇಗೆ ಆಹಾರ ಮತ್ತು ಇಂಧನಗಳು ನೆಲಕ್ಕಾಗಿ ಪೈಪೋಟಿ ನಡೆಸುತ್ತವೆ' ಲೇಖಕರು ಲೆಸ್ಟರ್‌ ಬ್ರೌನ್‌ - ದಿ ಗ್ಲೊಬಲಿಸ್ಟ್‌ > > ಗ್ಲೊಬಲ್‌ ಇನರ್ಜಿ". Archived from the original on 2010-01-12. Retrieved 2010-01-04.
  72. "The Economist – The End Of Cheap Food".
  73. ಇಂಧನ ಇಲಾಖೆ
  74. Future Energies (2003-10-30). "PORT HUENEME, Calif: U.S. Navy to Produce its Own Biodiesel :: Future Energies :: The future of energy". Future Energies. Archived from the original on 2011-07-11. Retrieved 2009-10-17.
  75. "Newsvine - Ecofasa turns waste to biodiesel using bacteria". Lele.newsvine.com. 2008-10-18. Retrieved 2009-10-17.
  76. "Valcent Products Inc. Develops "Clean Green" Vertical Bio-Reactor". Valcent Products. Archived from the original on 2008-06-18. Retrieved 2008-07-09.
  77. "Technology: High Yield Carbon Recycling". GreenFuel Technologies Corporation. Archived from the original on 2008-09-21. Retrieved 2008-07-09.
  78. ಸರ್ಗೀವಾ YE, ಗಲಾನೀನಾ LA, ಆಂಡ್ರಿಯಾನೊವಾ DA, ಫಿಯೊಫಿಲೊವಾ EP. ಜೈವಿಕ ಡೀಸೆಲ್‌ ಇಂಧನ ಉತ್ಪಾದಿಸಲು ಮೂಲವಸ್ತುವಾಗಿ ತಂತುಗಳುಳ್ಳ ಶಿಲೀಂಧ್ರ ಕೊಬ್ಬುಗಳ ಬಳಕೆ. ಆನ್ವಯಿಕ ಜೀವ ರಸಾಯನ ವಿಜ್ಞಾನ ಮತ್ತು ಸೂಕ್ಷ್ಮ ಜೀವವಿಜ್ಞಾನ 2008: 44, 523-527
  79. G. Strobel; et al. (September 2, 2008). ""The production of myco-diesel hydrocarbons and their derivatives by the endophytic fungus Gliocladium roseum (NRRL 50072)"" (PDF). Microbiology. Archived from the original (PDF) on 2009-05-21. Retrieved 2008-11-04. {{cite web}}: Explicit use of et al. in: |author= (help)
  80. Henry Fountain (2008-12-15). "Diesel made Simply From Coffee Grounds". New York Times. Retrieved 2008-12-15.



ಇತರೆ ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಲಿಂಕ್‌ಗಳು

[ಬದಲಾಯಿಸಿ]