ವಿಷಯಕ್ಕೆ ಹೋಗು

ತಡಿಯಾಂಡಮೋಳ್ ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಡಿಯಂಡಮೋಳ್ ಬೆಟ್ಟ
ತಡಿಯಂಡಮೋಳ್ ಬೆಟ್ಟ
Highest point
ಎತ್ತರ1,748 m (5,735 ft)
Geography
ತಡಿಯಂಡಮೋಳ್ ಬೆಟ್ಟ is located in Karnataka
ತಡಿಯಂಡಮೋಳ್ ಬೆಟ್ಟ
ತಡಿಯಂಡಮೋಳ್ ಬೆಟ್ಟ
ತಡಿಯಂಡಮೋಳ್ ಬೆಟ್ಟದ ಸ್ಥಳ, ಕರ್ನಾಟಕ
ಸ್ಥಳಕರ್ನಾಟಕ, ಭಾರತ
Parent rangeಪಶ್ಚಿಮ ಘಟ್ಟ
Climbing
ಸುಲಭವಾದ ಮಾರ್ಗHike

ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದರ ಎತ್ತರ ಸುಮಾರು ೧೭೪೮ ಮೀಟರ್. ಇದು ಚಾರಣಿಗರ ಪಾಲಿಗೆ ಬಹಳ ಪ್ರಿಯವಾದ ಜಾಗ. ಇದು ವಿರಾಜಪೇಟೆಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲೆ ಹುಲ್ಲುಗಾವಲು ಇದ್ದು, ಬೆಟ್ಟದ ಸುತ್ತ ಶೋಲ ಅರಣ್ಯವಿದೆ. ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆ ಇದೆ. ಈ ಅರಮನೆಗೆ ಕೆಲವು ಶತಮಾನಗಳ ಇತಿಹಾಸವಿದೆ. ಸ್ಥಳೀಯ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ.