ದುರ್ವಾಸನೆ ಮರ
ದುರ್ವಾಸನೆ ಮರವು ಸ್ಥಳೀಯವಾಗಿ ನಾರ್ಕ ಅಥವಾ ಅಮೃತ ಎಂದು ಕರೆಯಲಾಗುತ್ತದೆ. ಈ ಸಸ್ಯವು ಭಾರತದಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ಸಸ್ಯಗಳ ಜಾತಿಯಾಗಿದೆ. ಇದು ಸಾಮನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಮಾಫಿಯಾ ಫೋಟಿಡಾ.[೧]
ಇತರೆಹೆಸರುಗಳು
[ಬದಲಾಯಿಸಿ]- ವಿವರಣೆ:
- ಇದು ಸಾಮನ್ಯವಾಗಿ ಪಶ್ಚಿಮಘಟ್ಟಗಳಲ್ಲಿ ಕಂಡುಬರುತ್ತದೆ. ಈ ಸಸ್ಯವು ಕ್ಯಾನ್ಸರ್ ಖಾಯಿಲೆಯನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಸ್ಯವು 4 ರಿಂದ 8 ಅಡಿ ಎತ್ತರ ಬೆಳೆಯುತ್ತದೆ. ಇದನ್ನು ಒಳಾಂಗಣದಲ್ಲಿ ಅಥವಾ ವರ್ಷಪೂರ್ತಿ ಮನೆಯಲ್ಲಿ ಟಬ್ಬುಗಳಲ್ಲಿ ಇವುಗಳನ್ನು ಬೆಳೆಸಬಹುದು. ಸಾಮಾನ್ಯವಾಗಿ ಇವು ಚಿಕ್ಕ ಗಿಡಗಳಿರುವಾಗ ಚಳಿಗಾಲದ ಪೂರ್ತಿ ಅವಧಿಗಳಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಈ ಸಸ್ಯದ ಹೂವಿನ ಬಣ್ಣವು ನೇರಳೆ, ಗುಲಾಬಿ ಅಥವಾ ಬಿಳಿ ಬಣ್ಣದಾಗಿರುತ್ತದೆ. ಈ ಗಿಡಗಳನ್ನು ಸುಲಭವಾಗಿ ಆರೈಕೆ ಮಾಡಬಹುದು.[೨]
- ಆ ಮರದ ತುಂಡನ್ನು ಸುಟ್ಟಾಗ ಕೆಟ್ಟ ವಾನೆ ಬರುತ್ತದೆ.
ಬೆಳೆಯುವ ಪ್ರದೇಶಗಳು
[ಬದಲಾಯಿಸಿ]ಮಹಾರಾಷ್ಟ್ರ,ಕೇರಳ,ಕರ್ನಾಟಕ, ಸತಾರಾ, ಕೋಲ್ಲಾಪುರ್, ಪುಣೆ ಜಿಲ್ಲೆಯ ಪಶ್ಛಿಮಘಟ್ಟಗಳಲ್ಲಿ ವ್ಯಾಪಕವಾಗಿ ವಿತರಿಸಲ್ಪಟ್ಟಿದೆ. ಇದನ್ನು ಸಾಮಾನ್ಯವಾಗಿ ಸಾತಾರದಲ್ಲಿ, ಪಂಚಗಣಿ, ಮಹಾಬಲೇಶ್ವರ ಗಿರಿಧಾಮದ ಅರಣ್ಯದಲ್ಲಿ ಕಾಣಬಹುದು. ಇದು ನಿತ್ಯಹರಿದ್ವರ್ಣ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಸುಮಾರು ೫೦೦ಮೀ ಎತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಮುದ್ರದ ಮೇಲ್ಭಾಗದಲ್ಲಿ ೫೫೦ಮೀ ಎತ್ತರಕ್ಕಿಂತಲೂ ಹೆಚ್ಚು ಬೆಳೆಯುತ್ತದೆ.[೩]
ಸಸ್ಯದ ಗುಣಕರ್ಮಗಳು
[ಬದಲಾಯಿಸಿ]- ಈ ಸಸ್ಯವು 4-8 ಅಡಿ ಎತ್ತರಕ್ಕೆ ಬೆಳೆಯುತ್ತದೆ.
- ಈ ಸಸ್ಯಗಳು ಸಂಪೂರ್ಣ ಸೂರ್ಯನ ಬೆಳಕಿನಲ್ಲಿ ಅಥವಾ ನೆರಳುಗಳಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು.
- ಈ ಸಸ್ಯವು ತಾಪಮಾನದಲ್ಲಿ ೫೦ ಡಿಗ್ರಿ ಸೆಲ್ಸಿಯಸ್‍ವರೆಗೆ ಬದುಕಬಲ್ಲದು.
- ಹೂವುಗಳು ಕೆನ್ನಾಲಿ, ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರುತ್ತದೆ.[೪]
- ಇವುಗಳು ಕಾಂಡದತುದಿಯ ಹತ್ತಿರ ಸಣ್ಣ ಸಮೂಹಗಳಲ್ಲಿ ಕಂಡುಬರುತ್ತದೆ.
ಸಸ್ಯದಆರೈಕೆ
[ಬದಲಾಯಿಸಿ]ಈ ಗಿಡಕ್ಕೆ ಮಧ್ಯಮ ನೀರಿನಅಗತ್ಯವಿದ್ದು, ಮಣ್ಣು ಮಧ್ಯಮ ಫಲವತ್ತಾಗಿರಬೇಕು. ಈ ಸಸ್ಯಕ್ಕೆ ಯಾವುದೇ ರೀತಿಯ ಸಾವಯವ ಗೊಬ್ಬರಗಳು ಸೂಕ್ತವಾಗುತ್ತವೆ. ಹೊಸ ಬೆಳವಣಿಗೆಗಳು ಕಂಡುಬರುವ ಮೊದಲು ವಸಂತಕಾಲದಲ್ಲಿ ಸಸ್ಯವನ್ನು ಫಲವತ್ತಾಗಿಸಬೇಕು. ಸಸ್ಯಆರೈಕೆಗೆ ಜಾಗರೂಕತೆ ಅಗತ್ಯವಿರುತ್ತದೆ.
ಉಪಯೋಗಗಳು
[ಬದಲಾಯಿಸಿ]ಈ ಸಸ್ಯವು ಕ್ಯಾನ್ಸರ್ ಪರಿಣಾಮಕಾರಿ ಪರಿಹಾರವಾಗಿದೆ. ಇವುಗಳನ್ನು ಅಲಂಕಾರಿಕ ಉದ್ದೇಶಗಳಿಗೂ ಸಹ ಬಳಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://nurserylive.com/buy-medicinal-plants-online-in-india/mappia-foetida-kalagaura-narkya-plants-in-india
- ↑ http://poweroflower.com/mappiafoetidakalagauranarkya.php[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2018-09-15. Retrieved 2018-09-30.
- ↑ http://mbox.nurserylive.com/index.php?option=com_virtuemart&view=productdetails&virtuemart_product_id=2293&virtuemart_category_id=31[ಶಾಶ್ವತವಾಗಿ ಮಡಿದ ಕೊಂಡಿ]