ನವದೀಪ್ ಸೈನಿ
ವಯಕ್ತಿಕ ಮಾಹಿತಿ | |
---|---|
ಹುಟ್ಟು | ಕರ್ನಾಲ್, ಹರಿಯಾಣ, ಭಾರತ | ೨೩ ನವೆಂಬರ್ ೧೯೯೨
ಬ್ಯಾಟಿಂಗ್ | ಬಲಗೈ |
ಬೌಲಿಂಗ್ | ಬಲಗೈ ವೇಗಿ |
ಪಾತ್ರ | ಬೌಲರ್ |
ದೇಶೀಯ ತಂಡದ ಮಾಹಿತಿ | |
ವರ್ಷಗಳು | ತಂಡ |
2013–present | ಡೆಲ್ಲಿ ಕ್ರಿಕೆಟ್ ಟೀಮ್ |
2018–present | ರಾಯಲ್ ಚಾಲೆಂಜರ್ಸ್ ಬೆಂಗಳೂರು |
ಮೂಲ: Cricinfo, ೨೧ ಜುಲೈ ೨೦೧೯ |
ನವದೀಪ್ ಸೈನಿ (ಜನನ ೨೩ ನವೆಂಬರ್ ೨೯೯೨). ಇವರು ದೆಹಲಿ ಪರ ಆಡುವ ಭಾರತೀಯ ಕ್ರಿಕೆಟಿಗ.[೧]
ಆರಂಭಿಕ ಜೀವನ
[ಬದಲಾಯಿಸಿ]ನವದೀಪ್ ಸೈನಿ ೨೩ ರ ನವೆಂಬರ್ ೧೯೯೨ ರಲ್ಲಿ ಹರಿಯಾಣದ ಕರ್ನಾಲ್ ನಲ್ಲಿ ಜನಿಸಿದರು.[೨] ಇವರ ತಂದೆ ಚಾಲಕ, ಹರಿಯಾಣ ಸರ್ಕಾರದಲ್ಲಿ ಉದ್ಯೋಗದಲ್ಲಿದ್ದರು. ಇವರ ಅಜ್ಜ ಕರಮ್ ಸಿಂಗ್, ಸ್ವಾತಂತ್ರ್ಯ ಕಾರ್ಯಕರ್ತ, ಸುಭಾಸ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಭಾಗವಾಗಿದ್ದರು.[೩][೪]
ದೇಶೀಯ ವೃತ್ತಿ
[ಬದಲಾಯಿಸಿ]೨೦೧೫-೧೬ ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನವದೀಪ್ ಸೈನಿಯವರು ೨ ಜನವರಿ ೨೦೧೬ ರಂದು ಟ್ವೆಂಟಿ-೨೦ ಗೆ ಪಾದಾರ್ಪಣೆ ಮಾಡಿದರು.[೫] ಫೆಬ್ರವರಿ ೨೦೧೭ ರಲ್ಲಿ, ಇವರನ್ನು ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ೨೦೧೭ ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ 10 ಲಕ್ಷಕ್ಕೆ ಖರೀದಿಸಿತು.[೬] ಜನವರಿ ೨೦೧೮ ರಲ್ಲಿ, ಇವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ೨೦೧೮ ರ ಐಪಿಎಲ್ ಹರಾಜಿನಲ್ಲಿ ೩ ಕೋಟಿಗೆ ಖರೀದಿಸಿತು. ಐಪಿಎಲ್ ೨೦೧೯ ರಲ್ಲಿ ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರು. ಇವರು ೨೦೧೭-೧೮ ರ ರಣಜಿ ಟ್ರೋಫಿಯಲ್ಲಿ ದೆಹಲಿ ಪರ ವಿಕೆಟ್ ಪಡೆದವರಲ್ಲಿ ಪ್ರಮುಖರಾಗಿದ್ದರು, ಎಂಟು ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದರು. ಇವರು ೨೦೧೮-೧೯ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ವಿಕೆಟ್ ಪಡೆದವರಲ್ಲಿ ಪ್ರಮುಖರಾಗಿದ್ದರು, ಎಂಟು ಪಂದ್ಯಗಳಲ್ಲಿ ಹದಿನಾರು ೧೬ ವಿಕೆಟ್ ಪಡೆದಿದ್ದರು.[೭] ಅಕ್ಟೋಬರ್ ೨೦೧೮ ರಲ್ಲಿ ಇವರು ೨೦೧೮-೧೯ ರ ದಿಯೋಧರ್ ಟ್ರೋಫಿಗೆ ಭಾರತ ಸಿ ತಂಡದಲ್ಲಿ ಸ್ಥಾನ ಪಡೆದರು.[೮] ಮುಂದಿನ ತಿಂಗಳು, ೨೦೧೮-೧೯ ರಣಜಿ ಟ್ರೋಫಿಗೆ ಮುಂಚಿತವಾಗಿ ವೀಕ್ಷಿಸಿದ ಎಂಟು ಆಟಗಾರರಲ್ಲಿ ಒಬ್ಬನೆಂದು ಅವರನ್ನು ಹೆಸರಿಸಲಾಯಿತು.[೯]
ಅಂತರರಾಷ್ಟ್ರೀಯ ವೃತ್ತಿಜೀವನ
[ಬದಲಾಯಿಸಿ]ಜೂನ್ ೨೦೧೮ ರಲ್ಲಿ, ಮೊಹಮ್ಮದ್ ಶಮಿಯ ಬದಲಿಯಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯಕ್ಕಾಗಿ ಇವರನ್ನು ಭಾರತದ ಟೆಸ್ಟ್ ತಂಡಕ್ಕೆ ಸೇರಿಸಲಾಯಿತು, ಆದರೆ ಇವರು ಆಡಲಿಲ್ಲ.[೧೦] ೨೦೧೯ ರ ಏಪ್ರಿಲ್‌ನಲ್ಲಿ ಇವರನ್ನು ೨೦೧೯ ಕ್ರಿಕೆಟ್ ವಿಶ್ವಕಪ್‌ಗಾಗಿ ಸ್ಟ್ಯಾಂಡ್‌ಬೈ ಬೌಲರ್ ಎಂದು ಹೆಸರಿಸಲಾಯಿತು.[೧೧] ಜುಲೈ ೨೦೧೯ ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತದ ಏಕದಿನ ಅಂತರಾಷ್ಟ್ರೀಯ (ಒಡಿಐ) ಮತ್ತು ಟ್ವೆಂಟಿ -20 ಅಂತರಾಷ್ಟ್ರೀಯ (ಟಿ 20 ಐ) ತಂಡಗಳಲ್ಲಿ ಇವರನ್ನು ಹೆಸರಿಸಲಾಯಿತು.[೧೨]
ಉಲ್ಲೇಖಗಳು
[ಬದಲಾಯಿಸಿ]- ↑ "Navdeep Saini". ESPN Cricinfo. Retrieved 7 November 2015.
- ↑ Jain, Sahil (11 June 2018). "Navdeep Saini: India's latest pace sensation". Sportskeeda (in ಇಂಗ್ಲಿಷ್). Retrieved 22 July 2019.
- ↑ Venugopal, Arun (19 December 2017). "The making of Navdeep Saini". ESPNcricinfo (in ಇಂಗ್ಲಿಷ್). Retrieved 22 July 2019.
- ↑ "Whenever I speak about Gautam Gambhir, I get emotional, says Navdeep Saini". The Indian Express (in Indian English). Press Trust of India. 11 June 2018. Retrieved 22 July 2019.
- ↑ "Syed Mushtaq Ali Trophy, Group C: Delhi v Railways at Vadodara, Jan 2, 2016". ESPN Cricinfo. Retrieved 10 January 2016.
- ↑ "List of players sold and unsold at IPL auction 2017". ESPN Cricinfo. Retrieved 20 February 2017.
- ↑ "Vijay Hazare Trophy, 2018/19 - Delhi: Batting and bowling averages". ESPN Cricinfo. Retrieved 20 October 2018.
- ↑ "Rahane, Ashwin and Karthik to play Deodhar Trophy". ESPN Cricinfo. Retrieved 19 October 2018.
- ↑ "Eight players to watch out for in Ranji Trophy 2018-19". ESPN Cricinfo. Retrieved 3 November 2018.
- ↑ "Shami out of Afghanistan Test after failing fitness Test". ESPN Cricinfo. Retrieved 11 June 2018.
- ↑ "Navdeep Saini named standbys for World Cup". ESPN Cricinfo. Retrieved 24 April 2019.
- ↑ "MS Dhoni out of West Indies tour, Hardik Pandya rested". ESPN Cricinfo. Retrieved 21 July 2019.