ಪಿ.ಬಿ.ಕಲ್ಲಾಪುರ
ಪ್ರಹ್ಲಾದ ಭೀಮರಾವ ಕಲ್ಲಾಪುರ ಇವರು ೧೯೪೩ ಫೆಬ್ರುವರಿ ೨೫ರಂದು ಜನಿಸಿದರು. ಇವರು ಧಾರವಾಡದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಾರೆ. ಅನೇಕ ವೈದ್ಯಕೀಯ ಹಾಗು ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರವೃತ್ತಿ
[ಬದಲಾಯಿಸಿ]ವೃತ್ತಿಯಿಂದ ವೈದ್ಯರಾದ ಡಾ|ಕಲ್ಲಾಪುರ ಇವರಿಗೆ ಅನೇಕ ಹವ್ಯಾಸಗಳಿವೆ. ಕನ್ನಡ ಪತ್ರಿಕೆಗಳ ಸಾಹಿತ್ಯವಿಭಾಗಕ್ಕೆ ಇವರು ನೂರಾರು ಹರಟೆಗಳನ್ನು ನೀಡಿದ್ದಾರೆ , ನೀಡುತ್ತಲೆ ಇದ್ದಾರೆ ; ವೈದ್ಯಕೀಯ ಲೇಖನಗಳನ್ನು ರಚಿಸಿದ್ದಾರೆ. ಆದರೆ ಯಾವುದೆ ಸಂಕಲನವನ್ನು ಹೊರತರುವ ಗೋಜಿಗೆ ಹೋಗಿಲ್ಲ!
Burns’ Association of Indiaದ ಧಾರವಾಡ ಶಾಖೆಯ ಸಹಕಾರ್ಯದರ್ಶಿಯಾದ ಇವರ ಸಂದರ್ಶನಗಳು ದೂರದರ್ಶನ ಹಾಗು ಆಕಾಶವಾಣಿ ಮುಖಾಂತರ ಪ್ರಸಾರವಾಗಿವೆ. ಧಾರವಾಡ,ಹುಬ್ಬಳ್ಳಿಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ.
ಧಾರವಾಡದಲ್ಲಿ ಪ್ರತಿ ವರ್ಷದ ಎಪ್ರಿಲ್ ತಿಂಗಳ ಮೊದಲನೆಯ ರವಿವಾರದಂದು ಡಾ| ಕಲ್ಲಾಪುರ ಹಾಗು ಗೆಳೆಯರ ಹಾಸ್ಯಕೂಟವು ನಡೆಯಿಸಿಕೊಡುವ ಹಾಸ್ಯಸಂಜೆ ಉಚಿತ ಕಾರ್ಯಕ್ರಮವು ಧಾರವಾಡದ ಒಂದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ.
೧೯೮೭ರಲ್ಲಿ ಕರ್ನಾಟಕಸರಕಾರವು ಪ್ರಕಟಿಸಿದ ಭಾರತದ ಗೆಸೆಟಿಯರ್ ದಲ್ಲಿ “ವೈದ್ಯಕೀಯ ಹಾಗು ಸಾರ್ವಜನಿಕ ಸೇವೆಗಳು” ವಿಭಾಗವನ್ನು ಅಚ್ಚುಕಟ್ಟಾಗಿ ಕನ್ನಡಕ್ಕೆ ಭಾಷಾಂತರಿಸಿಕೊಟ್ಟಿದ್ದು ಡಾ: ಕಲ್ಲಾಪುರ ಅವರ ಮಹತ್ವದ ಸಾಧನೆಗಳಲ್ಲೊಂದು.