ವಿಷಯಕ್ಕೆ ಹೋಗು

ಪ್ರಮೋದ್ ಶೆಟ್ಟಿ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಮೋದ್‌ ಶೆಟ್ಟಿ 2019 ರಲ್ಲಿ
2019ರಲ್ಲಿ ಸೆರೆಹಿಡಿಯಲಾದ ನಟ ಪ್ರಮೋದ್‌ ಶೆಟ್ಟಿ ಅವರ ಛಾಯಾಚಿತ್ರ

ಪ್ರಮೋದ್ ಕಿರಾಡಿ ಶೆಟ್ಟಿ( ಚಿತ್ರರಂಗದಲ್ಲಿ ಪ್ರಮೋದ್ ಶೆಟ್ಟಿ ಎಂದು ಪರಿಚಿತರು) ಇವರು ಕನ್ನಡ ನಟ ಮತ್ತು ಚಲನಚಿತ್ರ ನಿರ್ಮಾಪಕರು. ಇವರು ಬಹುಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಉಳಿದವರು ಕಂಡಂತೆ (2014), ಕಿರಿಕ್ ಪಾರ್ಟಿ (2016) ಮತ್ತು ಅವನೇ ಶ್ರೀಮನ್ನಾರಾಯಣ (2019) ಚಿತ್ರಗಳಲ್ಲಿ ನಟಿಸಿದ್ದಾರೆ. [] []

ವೈಯಕ್ತಿಕ ಜೀವನ

[ಬದಲಾಯಿಸಿ]

ಪ್ರಮೋದ್ ಶೆಟ್ಟಿ ಅವರು ನಟಿ ಸುಪ್ರೀತಾ ಶೆಟ್ಟಿ ಅವರನ್ನು 2010 ರಲ್ಲಿ ವಿವಾಹವಾಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ. [] ಪತ್ನಿ ಸುಪ್ರೀತಾ ಶೆಟ್ಟಿ ಅವರು ಕೂಡ ಕನ್ನಡ ಕಿರುತೆರೆಯಲ್ಲಿ ಹೆಸರಾಂತ ನಟಿಯಾಗಿದ್ದಾರೆ. ಪೋಷಕ ಪಾತ್ರಗಳಲ್ಲಿನ ನಟನೆಗೆ ಹೆಸರುವಾಸಿ ಆಗಿರುವ ಇವರು ಸಹಸ್ರಾರು ಎಪಿಸೋಡ್‌ ಗಳಲ್ಲಿ ನಟಿಸಿ ಅಗಣಿತ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ನಮ್ಮಮ್ಮ ಸೂಪರ್ ಸ್ಟಾರ್‌ ರಿಯಾಲಿಟಿ ಶೋನಲ್ಲಿ ಮಗಳೊಂದಿಗೆ ಪಾಲ್ಗೊಂಡಿದ್ದರು.

ಆರಂಭಿಕ ಜೀವನ

[ಬದಲಾಯಿಸಿ]

ಹೋಟೆಲ್‌ ಉದ್ಯಮಿ ರಾಜು ಶೆಟ್ಟಿ ಹಾಗೂ ದೇವಕಿ ದಂಪತಿಯ ಕಿರಿಯ ಪುತ್ರರಾದ ಪ್ರಮೋದ್‌ ಶೆಟ್ಟಿ ಜನಿಸಿದ್ದು ಉಡುಪಿಯಲ್ಲಿ. ಸಹೋದರಿ ಪಲ್ಲವಿ ಶೆಟ್ಟಿ ವೈದ್ಯರಾಗಿದ್ದರೆ, ಸೋದರ ಪ್ರಸನ್ನ ಶೆಟ್ಟಿ ಉದ್ಯಮಿಯಾಗಿದ್ದಾರೆ. ಪ್ರಮೋದ್‌ ಶೆಟ್ಟಿ ಅವರ ಪ್ರಾಥಮಿಕ ಶಿಕ್ಷಣ ನಳಂದ ಹಾಗೂ ಮದರ್‌ ತೆರೆಸಾ ಶಾಲೆಯಲ್ಲಿ ಪಡೆದಿದ್ದಾರೆ. ೫ನೇ ತರಗತಿಯಿಂದ ಪದವಿವರೆಗೂ ಬಿಹೆಚ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದಾರೆ. ಬಿಹೆಚ್‌ಎಸ್‌ ಶಿಕ್ಷಣ ಸಂಸ್ಥೆ ಪ್ರಮೋದ್‌ ಅವರ ವ್ಯಕ್ತಿತ್ವದ ಮೇಲೆ ಬಹಳ ಪರಿಣಾಮ ಬೀರಿದೆ. ಪ್ರಮೋದ್‌ ಅವರ ವೃತ್ತಿ ಜೀವನ ರೂಪಿಸಿದ ರಂಗಸೌರಭ ಅನ್ನುವ ಕಾಲೇಜು ನಾಟಕ ತಂಡ ಇದ್ದದ್ದು ಇದೇ ಬಿಹೆಚ್‌ಎಸ್‌ ಕಾಲೇಜಿನಲ್ಲಿಯೇ.

ಚಲನಚಿತ್ರಗಳು

[ಬದಲಾಯಿಸಿ]
ಸಂಕೇತ
ಇನ್ನೂ ಬಿಡುಗಡೆಯಾಗದ ಚಿತ್ರವನ್ನು ಸೂಚಿಸುತ್ತದೆ.
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿ Ref.
2014 ಉಳಿದವರು ಕಂಡಂತೆ ದಿನೇಶ
2016 ಕಿರಿಕ್ ಪಾರ್ಟಿ ಜ್ಞಾನೇಶ್
ಯು-ಟರ್ನ್ ಸುಂದರ್
ರಿಕ್ಕಿ ನಕ್ಸಲ್ ನಾಯಕ
2018 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ : ರಾಮಣ್ಣ ರೈ ಶಾಂತಾರಾಮ ಉಪಾಧ್ಯಾಯ
ಬೆಲ್ ಬಾಟಮ್ ಇನ್ಸ್ ಪೆಕ್ಟರ್ ಸಹದೇವ
ಹಂಬಲ್ ಪೊಲಿಟಿಷಿಯನ್ ನಾಗರಾಜ್ ಶಂಕರ್
2019 ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಾಬಿನ್ ಹುಡ್
ನನ್ನ ಪ್ರಕಾರ ಕುಮಾರ್
ಕಥಾ ಸಂಗಮ ಜಾಕಬ್ ನಿರ್ಮಾಣ ಕೂಡ []
ಅವನೇ ಶ್ರೀಮನ್ನಾರಾಯಣ ತುಕಾರಾಂ
2020 ಆಕ್ಟ್-1978 ರಾಮ್ ಗೋಪಾಲ್
ಒಂದು ಶಿಕಾರಿಯ ಕಥೆ ಶಂಭು ಶೆಟ್ಟಿ
2021 ಹೀರೋ ಮಾಫಿಯ ಮುಖ್ಯಸ್ಥ
ಕೃಷ್ಣ ಟಾಕೀಸ್ []
2022 ಕಬ್ಜ (ಚಲನಚಿತ್ರ) []
ಚೇಜ್ []
ದೃಶ್ಯ 2 ಐ.ಜಿ. ಪ್ರತಾಪ್ ನಾರಾಯಣ್

ಪ್ರಶಸ್ತಿಗಳು

[ಬದಲಾಯಿಸಿ]
  • ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2017 – ಕಿರಿಕ್ ಪಾರ್ಟಿಗಾಗಿ ಅತ್ಯುತ್ತಮ ಹಾಸ್ಯನಟನಾಗಿ ನಾಮನಿರ್ದೇಶನಗೊಂಡಿದೆ. 
  • ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2019 - ಮುಂದಿನ ನಿಲ್ದಾಣ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟನಾಗಿ ನಾಮನಿರ್ದೇಶನಗೊಂಡಿದೆ
  • ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2021 - ಚೊಚ್ಚಲ ಪಾತ್ರದಲ್ಲಿ ಒಂದು ಶಿಕಾರಿಯ ಕಥೆಯಲ್ಲಿ ಅತ್ಯುತ್ತಮ ನಟನಾಗಿ ನಾಮನಿರ್ದೇಶನಗೊಂಡಿದೆ

ಉಲ್ಲೇಖಗಳು

[ಬದಲಾಯಿಸಿ]
  1. "Pramod Shetty hopes role as Thukaram in ASN will be turning point in career". The New Indian Express. 24 December 2019. Retrieved 24 December 2019.
  2. "Meet Pramod Shetty and Balaji Manohar, the baddies of Avane Srimannarayana". The Times of India. 24 December 2019.
  3. "Pramod Shetty blessed with a baby boy". Times of India. 20 November 2019. Retrieved 24 December 2019.
  4. "'Katha Sangama' review: A perfect ode to Puttanna Kanagal". The New Indian Express. 7 December 2019. Retrieved 24 December 2019.
  5. "Ajay Rao's 'Krishna Talkies' to release on April 16". India Today (in ಇಂಗ್ಲಿಷ್). Retrieved 4 April 2021.
  6. "Pramod Shetty joins the sets of Kabzaa". The Times of India (in ಇಂಗ್ಲಿಷ್). 4 April 2021. Retrieved 4 April 2021.
  7. "Music director Gopi Sundar to release the first single of Vilok Shetty's 'Chase' on April 2nd!". India Today (in ಇಂಗ್ಲಿಷ್). Retrieved 4 April 2021.



ಬಾಹ್ಯ ಕೊಂಡಿಗಳು

[ಬದಲಾಯಿಸಿ]